Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ...

ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅತ್ಯಂತ ಅಪಾಯಕಾರಿ - ರೋಲೊ ರೋಮಿಗ್

ಕಾರ್ತಿಕ್ ವೆಂಕಟೇಶ್ಕಾರ್ತಿಕ್ ವೆಂಕಟೇಶ್6 Sept 2025 12:26 PM IST
share
ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅತ್ಯಂತ ಅಪಾಯಕಾರಿ - ರೋಲೊ ರೋಮಿಗ್

ಬೆಂಗಳೂರಿನಲ್ಲಿ ಈ ಮಾದರಿಯ ಅಪರಾಧವು ಊಹಾತೀತವಾಗಿತ್ತು. ಅದೂ ಅಲ್ಲದೆ, ಹೆಚ್ಚುತ್ತಿರುವ ರಾಜಕೀಯ ಹಿಂಸೆ, ಮಹಿಳೆಯರ ಮೇಲಿನ ಆಕ್ರಮಣಗಳು ಮತ್ತು ಪತ್ರಕರ್ತರ ಮೇಲಿನ ದಾಳಿಗಳ ಪ್ರವೃತ್ತಿಗಳು ಅಂತಿಮವಾಗಿ ಗೌರಿ ಹತ್ಯೆಯಲ್ಲಿ ಪರ್ಯಾವಸಾನಗೊಂಡಂತೆ ಕಾಣುತ್ತಿತ್ತು. ಹಾಗಾಗಿ, ಗೌರಿಯ ಬಗ್ಗೆ ಗೊತ್ತಿಲ್ಲದವರಿಗೂ, ಈ ಕಾರಣಗಳಿಂದಾಗಿ ಅವರ ಹತ್ಯೆಯು ಅಪಾಯಕಾರಿ ಸಂದೇಶವಾಗಿತ್ತು.

ಭಾಗ - 2

ನಿಮ್ಮ ಇತ್ತೀಚಿನ ಪುಸ್ತಕದ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುವುದಾದರೆ, 2017ರ ಸೆಪ್ಟಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಈ ನಿರ್ದಿಷ್ಟ ಘಟನೆ (ಗೌರಿ ಲಂಕೇಶ್ ಹತ್ಯೆ)ಯ ಬಗ್ಗೆ ನಿಮಗೆ ಯಾಕೆ ಆಸಕ್ತಿ ಹುಟ್ಟಿತು? ಅವರು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರಲ್ಲ, ಅವರು ಸ್ಥಳೀಯವಾಗಿ ಮಾತ್ರ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಂದು ಕಾರಣವೆಂದರೆ, ಅವರು ಪಿ. ಲಂಕೇಶ್ರ ಮಗಳು. ನಿಮಗೆ ಇದರಲ್ಲಿ ಯಾಕೆ ಆಸಕ್ತಿ ಬಂತು?

ರೋಲೊ ರೋಮಿಗ್: ಆ ಕೊಲೆಯಿಂದ ನಾನು ನಿಜವಾಗಿಯೂ ಆಘಾತಕ್ಕೊಳಗಾದೆ. ನಾನು ಅವರ ಬಗ್ಗೆ ಕೇಳಿದ್ದೆ, ಆದರೆ, ಅವರನ್ನು ಭೇಟಿಯಾಗಿರಲಿಲ್ಲ. ಅವರು ಹತ್ಯೆಯಾದ ಮುನ್ನಾ ತಿಂಗಳು (ಆಗಸ್ಟ್ 2017), ಇಡೀ ತಿಂಗಳನ್ನು ನಾನು ಬೆಂಗಳೂರಿನಲ್ಲಿ ಕಳೆದಿದ್ದೆ. ನಾನು ಬೆಂಗಳೂರನ್ನು ಇಷ್ಟಪಡುತ್ತೇನೆ. ಆಗ ನಾನು ಬೆಂಗಳೂರಿನಲ್ಲಿ ಯಾವುದೋ ಪತ್ರಿಕೋದ್ಯಮದ ಕೆಲಸವನ್ನು ಮಾಡುತ್ತಿದ್ದೆ. ಬೆಂಗಳೂರು ಅಮೋಘ ಸಾಹಿತ್ಯಿಕ ತಾಣವಾಗಿದೆ. ಅಲ್ಲಿ ನನಗೆ ತಿಳಿದ ಮಟ್ಟಿಗೆ, ಜಗತ್ತಿನಲ್ಲಿಯೇ ಅತ್ಯುತ್ತಮ ಪುಸ್ತಕ ಮಾರಾಟ ಮಳಿಗೆಗಳಿವೆ. ಈ ಪುಸ್ತಕದಂಗಡಿಗಳ ಸಮೂಹವನ್ನು ನಾನು ಇಷ್ಟಪಡುತ್ತೇನೆ. ಬೆಂಗಳೂರಿನಲ್ಲಿರುವಾಗ ನನಗೆ ಮನೆಯಲ್ಲಿರುವ ಭಾವನೆ ಉಂಟಾಗುತ್ತದೆ. ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸುವ ಬಗ್ಗೆಯೂ ನಾವು ಯೋಚಿಸುತ್ತಿದ್ದೆವು.

ಹಾಗಾಗಿ, ನಾನು ಗೌರಿಯ ಬಗ್ಗೆ ಕೇಳಿದ್ದೆ. ಬೆಂಗಳೂರಿನಲ್ಲಿರುವ ನನ್ನ ಸ್ನೇಹಿತರ ಪೈಕಿ ಎಲ್ಲರಿಗೂ ಗೌರಿಯ ಪರಿಚಯವಿತ್ತು. ಹೆಚ್ಚಿನವರಿಗೆ ಒಳ್ಳೆಯ ಪರಿಚಯವಿತ್ತು. ಹಾಗಾಗಿ, ಬೆಂಗಳೂರಿನಲ್ಲಿ ಪಿಸ್ತೂಲಿನಿಂದ ಯಾರನ್ನು ಬೇಕಾದರೂ ಕೊಲ್ಲಬಹುದು ಎನ್ನುವುದು ಆಘಾತಕಾರಿಯಾಗಿತ್ತು. ಅದು ಭಾರತದಲ್ಲಿ ಸಂಭವಿಸಿತ್ತು. ಆದರೆ, ಬೆಂಗಳೂರಿನಲ್ಲಿ ಈ ಮಾದರಿಯ ಅಪರಾಧವು ಊಹಾತೀತವಾಗಿತ್ತು. ಅದೂ ಅಲ್ಲದೆ, ಹೆಚ್ಚುತ್ತಿರುವ ರಾಜಕೀಯ ಹಿಂಸೆ, ಮಹಿಳೆಯರ ಮೇಲಿನ ಆಕ್ರಮಣಗಳು ಮತ್ತು ಪತ್ರಕರ್ತರ ಮೇಲಿನ ದಾಳಿಗಳ ಪ್ರವೃತ್ತಿಗಳು ಅಂತಿಮವಾಗಿ ಗೌರಿ ಹತ್ಯೆಯಲ್ಲಿ ಪರ್ಯಾವಸಾನಗೊಂಡಂತೆ ಕಾಣುತ್ತಿತ್ತು. ಹಾಗಾಗಿ, ಗೌರಿಯ ಬಗ್ಗೆ ಗೊತ್ತಿಲ್ಲದವರಿಗೂ, ಈ ಕಾರಣಗಳಿಂದಾಗಿ ಅವರ ಹತ್ಯೆಯು ಅಪಾಯಕಾರಿ ಸಂದೇಶವಾಗಿತ್ತು.

ಅವರು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ್ದರೂ, ಅವರು ಸ್ಥಳೀಯ ವ್ಯಕ್ತಿಯಾಗಿದ್ದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಮ್ಯಾಗಝಿನ್ಗಳಿಗೆ ಲೇಖನ ಬರೆಯುತ್ತಿದ್ದರು. ದಿಲ್ಲಿಯ ಟೆಲಿವಿಶನ್ ಚಾನೆಲೊಂದಕ್ಕೂ ಅವರು ಕೆಲಸ ಮಾಡುತ್ತಿದ್ದರು. ಆದರೂ, ಅವರು ಮನೆಮಾತಾಗಿರಲಿಲ್ಲ.

ಬೆಂಗಳೂರಿನಲ್ಲಿಯೂ ಅವರ ಖ್ಯಾತಿ ಅಗಾಧವಾಗಿರಲಿಲ್ಲ. ಅವರ ಹೆಸರಿನ ‘ಗೌರಿ ಲಂಕೇಶ್ ಪತ್ರಿಕೆ’ಯ ಪ್ರಸರಣ ಕೆಲವೇ ಸಾವಿರಗಳಾಗಿದ್ದವು. ಅದೇನು ದೊಡ್ಡ ಪ್ರಸರಣ ಸಂಖ್ಯೆಯಾಗಿರಲಿಲ್ಲ. ಅದು ಅವರ ತಂದೆಯ ಪತ್ರಿಕೆಯ ಗಾತ್ರ ಮತ್ತು ಪ್ರಭಾವಕ್ಕೆ ಹೋಲಿಸಿದರೆ ಏನೂ ಆಗಿರಲಿಲ್ಲ. ಅವರ ತಂದೆ ಪಿ. ಲಂಕೇಶ್ ಕರ್ನಾಟಕದ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದರು.

ಆದರೆ ಆಶ್ಚರ್ಯವೆಂಬಂತೆ, ಅವರ ಹತ್ಯೆಗೆ ಇಡೀ ದೇಶವೇ ಮಮ್ಮಲ ಮರುಗಿತು. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಸಾವಿರಾರು ಜನರು ರಸ್ತೆಗಿಳಿದು ಗೌರಿ ಲಂಕೇಶ್ ಹತ್ಯೆಯನ್ನು ಪ್ರತಿಭಟಿಸಿದರು. ಇದು ಅವರ ಅತ್ಯಂತ ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೂ ಅಚ್ಚರಿಯ ಸಂಗತಿಯಾಗಿತ್ತು. ಬೆಂಗಳೂರಿನಲ್ಲಿ ವ್ಯಕ್ತವಾದ ಜನರ ಆಕ್ರೋಶ ಮತ್ತು ದುಃಖದ ಅಗಾಧತೆ ಅವರ ಕಲ್ಪನೆಗೂ ಮೀರಿತ್ತು. ಗೌರಿ ಲಂಕೇಶ್ರೊಂದಿಗೆ ಗುರುತಿಸಿಕೊಂಡಿರುವಂತೆ ಕಂಡುಬಂದ ಹಲವಾರು ವಿಭಿನ್ನ ಗುಂಪುಗಳು ಅಲ್ಲಿದ್ದವು. ಅವು ವಿಭಿನ್ನ ಜನರ ವಿಭಿನ್ನ ಗುಂಪುಗಳಾಗಿದ್ದವು. ಇದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಗೌರಿ ಲಂಕೇಶ್ ಇಷ್ಟೊಂದು ಜನರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವುದು ಅವರಿಗೆ ಗೊತ್ತೇ ಇರಲಿಲ್ಲ. ಗೌರಿ ಲಂಕೇಶ್, ಅವರು ಭಾವಿಸಿರುವುದಕ್ಕಿಂತಲೂ ಹೆಚ್ಚಿನ ಮಹತ್ವದ ವ್ಯಕ್ತಿಯಾಗಿದ್ದರು.

ನಾನು ಪುಸ್ತಕ ಬರೆಯಲು ಆರಂಭಿಸಿದಾಗ, ಅವರನ್ನು ಯಾರು ಮತ್ತು ಯಾಕೆ ಕೊಂದರು ಎನ್ನುವ ರಹಸ್ಯ ಹಾಗೆಯೇ ಉಳಿದಿತ್ತು. ಆದರೆ, ಅದೇ ವೇಳೆ, ಅವರ ಮಹತ್ವವೇನು ಮತ್ತು ಅವರು ಯಾವ ಕಾರಣಕ್ಕಾಗಿ ವಿಶಿಷ್ಟರಾದರು ಎನ್ನುವ ಪ್ರಶ್ನೆಗಳೂ ಇದ್ದವು. ಅವರೋರ್ವ ಅಸಾಧಾರಣ ವ್ಯಕ್ತಿ ಎಂಬುದಾಗಿ ನಾನು ನಂಬಿದ್ದೇನೆ. ಜನರೊಂದಿಗೆ ಸಂಪರ್ಕ ಸಾಧಿಸುವ ವಿಷಯದಲ್ಲಿ ಅವರೊಬ್ಬ ಅಸಾಮಾನ್ಯ ವ್ಯಕ್ತಿ. ತನ್ನ ಪತ್ರಿಕೋದ್ಯಮ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲೂ ಅವರು ತುಂಬಾ ವಾದಿಸುವ ವ್ಯಕ್ತಿಯಾಗಿದ್ದರು. ಆದರೆ, ಅವರು ತೆರೆಯ ಹಿಂದಿನಿಂದ ಜನರೊಂದಿಗೆ ಬೆರೆಯುವ ಮತ್ತು ಜನರನ್ನು ಪರಸ್ಪರ ಸಂಪರ್ಕಿಸುವ ಕೆಲಸವನ್ನೂ ಮೌನವಾಗಿ ಮಾಡುತ್ತಿದ್ದರು. ಸಾಮಾನ್ಯವಾಗಿ ಪರಸ್ಪರರೊಂದಿಗೆ ಕೆಲಸ ಮಾಡಲು ಮುಂದೆ ಬಾರದ ಜನರನ್ನು ಅವರು ಜೊತೆಯಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದರು. ಅವರು ಕಿರಿಯ ಬರಹಗಾರರು ಮತ್ತು ಹೋರಾಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇದನ್ನು ಅವರು ಯಾವುದೇ ಸದ್ದುಗದ್ದಲವಿಲ್ಲದೆ ಮಾಡುತ್ತಿದ್ದರು. ‘ಕೆಲವರು ನಿರ್ಗಮಿಸಿದ ಬಳಿಕವಷ್ಟೇ ಅವರು ವಹಿಸಿದ ಪಾತ್ರದ ಮಹತ್ವದ ಬಗ್ಗೆ ನಮಗೆ ತಿಳಿಯುತ್ತದೆ. ಗೌರಿ ಲಂಕೇಶ್ ಇಂಥ ವ್ಯಕ್ತಿಯಾಗಿದ್ದರು’ ಎಂದು ಅವರ ಸಹವರ್ತಿಯೊಬ್ಬರು ನನಗೆ ಹೇಳಿದರು. ಅವರು ಇಲ್ಲಿ ಬೃಹತ್ ಶೂನ್ಯವನ್ನು ಬಿಟ್ಟು ಹೋಗಿದ್ದು, ಅದನ್ನು ತುಂಬಲು ಸಾಧ್ಯವಿಲ್ಲ.

ಅವರು ಯಾವ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿದ್ದಾರೋ ಅದನ್ನು ‘ಹೆಂಗಸರ ಕೆಲಸ’ ಎಂಬುದಾಗಿ ಕಡೆಗಣಿಸಲಾಗುತ್ತಿದೆ. ಅವರು ಮಾಡುತ್ತಿದ್ದ ಕೆಲಸಗಳು ಯಾವುದೇ ಚಳವಳಿಗೆ ಅತ್ಯಂತ ಮಹತ್ವದ್ದಾಗಿವೆ. ಆದರೆ ಚಳವಳಿಯಲ್ಲಿರುವ ಪುರುಷರು ಈ ಕೆಲಸಗಳನ್ನು- ಅಂದರೆ ಸಂಪರ್ಕಗಳನ್ನು ಸಾಧಿಸುವುದು, ಸ್ನೇಹ ಬೆಳೆಸುವುದು, ನಮ್ಮ ಸುತ್ತ ಇರುವ ಜನರಿಗೆ ಪ್ರಾಮಾಣಿಕ ಕಾಳಜಿ ತೋರಿಸುವುದು ಮುಂತಾದ ಕೆಲಸಗಳನ್ನು ಕಡೆಗಣಿಸುತ್ತಾರೆ ಹಾಗೂ ಅದಕ್ಕೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಗೌರಿ ಲಂಕೇಶ್ ಈ ಎಲ್ಲಾ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು.

ಅವರ ಬದುಕಿನ ಅಧ್ಯಯನ ಮಾಡಿರುವುದು ಮತ್ತು ಬದುಕನ್ನು ಅವರು ನೋಡಿದ ರೀತಿ ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ಇದು ಸ್ನೇಹ ಮತ್ತು ಸಮುದಾಯದ ಬಗ್ಗೆ ನಾನು ಯೋಚಿಸುವಂತೆ ಮಾಡಿದೆ ಹಾಗೂ ಕೆಲವು ಬದಲಾವಣೆಗಳನ್ನು ನಾನು ಬಯಸುವಂತೆ ಮಾಡಿದೆ.

ಅವರ ಬದುಕನ್ನು ನೋಡಿದ ಬಳಿಕ, ನಿಮ್ಮ ಮನಸ್ಸಿಗೆ ಬಂದ ಸಂಗತಿಗಳು ಯಾವುದು? ಅವರನ್ನು ಕೊಲ್ಲಲು ಬಯಸಿದವರನ್ನು ಪ್ರಚೋದಿಸಿದ ಅಂಶ ಯಾವುದು?

ರೋಲೊ ರೋಮಿಗ್: ಹಂತಕರು ಹತ್ಯೆಯನ್ನು ತಾವು ಮಾಡಿದ್ದು ಎನ್ನುವುದನ್ನು ಒಪ್ಪಿಕೊಂಡಿಲ್ಲ. ಅವರು ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲಬುರ್ಗಿ ಹಂತಕರಂತೆ ಮಾಯವಾಗಿ ಬಿಟ್ಟರು. ಅಮೆರಿಕದಲ್ಲೂ, ಪ್ರತೀ ರಾಜಕೀಯ ಕೊಲೆ ನಡೆದ ಬಳಿಕ ಪ್ರಣಾಳಿಕೆಗಳನ್ನು ಬಿಟ್ಟು ಹೋಗಲಾಗುತ್ತದೆಯಾದರೂ, ಹೆಚ್ಚಿನ ಪ್ರಕರಣಗಳಲ್ಲಿ ಹತ್ಯೆಗಳ ಹೊಣೆಯನ್ನು ಯಾರೂ ವಹಿಸಿಕೊಳ್ಳುವುದಿಲ್ಲ. ಇದು ನೀಡುತ್ತಿರುವ ಸಂದೇಶವೇನು ಎಂದು ನಾವು ಯೋಚಿಸಬೇಕಾಗುತ್ತದೆ.

ಮಹಾತ್ಮಾ ಗಾಂಧೀಜಿಯನ್ನು ತಾನು ಯಾಕೆ ಕೊಂದೆ ಎನ್ನುವುದಕ್ಕೆ ನಾಥುರಾಮ್ ಗೋಡ್ಸೆ ಸವಿವರ ವಿವರಣೆಯನ್ನು ನೀಡಿದ್ದಾನೆ. ಅವನು ಕೊಡದಿದ್ದರೂ, ಕಾರಣವನ್ನು ಊಹಿಸುವುದು ಸುಲಭವಾಗಿತ್ತು. ಗಾಂಧಿ ಅಗಾಧ ಪ್ರಭಾವ ಇರುವ ಐತಿಹಾಸಿಕ ವ್ಯಕ್ತಿಯಾಗಿದ್ದರು. ಗೌರಿ ಹಾಗಲ್ಲ. ಅವರೋರ್ವ ಸ್ಥಳೀಯ ವ್ಯಕ್ತಿಯಾಗಿದ್ದರು ಮತ್ತು ಸೀಮಿತ ಪ್ರಭಾವ ಹೊಂದಿದ್ದರು. ಹಾಗಾಗಿ, ಗೌರಿಯನ್ನು ಯಾಕೆ ಕೊಲ್ಲಲಾಯಿತು ಎನ್ನುವುದು ಈಗಲೂ ಸೋಜಿಗದ ವಿಷಯವಾಗಿದೆ.

ಆದರೆ, ಸಂಭಾವ್ಯ ಶಂಕಿತರ ಉದ್ದನೆಯ ಪಟ್ಟಿಯಂತೂ ಇದೆ. ಯಾಕೆಂದರೆ ಅವರು ತಾನು ನಂಬಿದ ಮೌಲ್ಯಗಳ ಬಗ್ಗೆ ಆಳವಾದ ವಾದ ಮಂಡಿಸುತ್ತಿದ್ದರು ಮತ್ತು ನಾವು ಅತ್ಯಂತ ಧ್ರುವೀಕೃತ ಸಮಯದಲ್ಲಿ ಬದುಕುತ್ತಿದ್ದೇವೆ. ಅವರನ್ನು ತುಂಬಾ ಜನರು ದ್ವೇಷಿಸುತ್ತಿದ್ದರು. ಅವರು ಟ್ರೋಲ್ಗಳ ಸುದೀರ್ಘ ಇತಿಹಾಸವನ್ನೇ ಹೊಂದಿದ್ದರು. ಅವರ ವಿರುದ್ಧ ದೊಡ್ಡ ಸಂಖ್ಯೆಯ ಮೊಕದ್ದಮೆಗಳು ದಾಖಲಾಗಿದ್ದವು. ಹಾಗಾಗಿ, ಅವರನ್ನು ಟೀಕಿಸಿದ, ಟ್ರೋಲ್ ಮಾಡಿದ ಮತ್ತು ಅವರ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಿದ ಪ್ರತಿಯೊಬ್ಬರೂ ಸಹಜವಾಗಿಯೇ ಸಂಭಾವ್ಯ ಶಂಕಿತರಾಗುತ್ತಾರೆ.

ತಕ್ಷಣಕ್ಕೆ ಅವರ ಆತ್ಮೀಯ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಕೆಲವು ಕಟ್ಟಾ ಬಲಪಂಥೀಯ ಸಂಘಟನೆಗಳ ಮೇಲೆ ಸಂಶಯ ವ್ಯಕ್ತಪಡಿಸಿದರು. ಯಾಕೆಂದರೆ ಆ ಸಂಘಟನೆಗಳು ಅತ್ಯಂತ ಸ್ಪಷ್ಟ ಮತ್ತು ನೇರ ವಿರೋಧಿಗಳಾಗಿದ್ದವು. ಆಕೆಯ ಸಾವಿಗೆ ಸಂತೋಷಪಟ್ಟಂತೆ ಕಂಡುಬಂದ ಸಂಘಟನೆಗಳು ಅವುಗಳಾಗಿದ್ದವು. ಅದೊಂದು ಸುಳಿವು ಅಷ್ಟೇ, ಪುರಾವೆಯಲ್ಲ. ಅವರ ಹತ್ಯೆಯ ಸಮಯದಲ್ಲಿ ಇತರ ಹಲವಾರು ಸಾಧ್ಯತೆಗಳು ಚಾಲ್ತಿಯಲ್ಲಿದ್ದವು. ಈ ಎಲ್ಲಾ ವಿಭಿನ್ನ ಸಾಧ್ಯತೆಗಳು, ಕರ್ನಾಟಕದ ಜನಜೀವನ ಮತ್ತು ಸಮಾಜಕ್ಕೆ ಕನ್ನಡಿ ಹಿಡಿದವು. ಹಾಗಾಗಿ, ಅವರ ಹತ್ಯೆಗೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಒಂದು ಪ್ರಮುಖ ಕಾರಣವೆಂದರೆ, ಲಿಂಗಾಯತರ ಬಗ್ಗೆ ಅವರು ಹೊಂದಿದ್ದ ನಿಲುವು. ಆಗ, ಲಿಂಗಾಯತರನ್ನು ಹಿಂದೂಗಳಾಗಿ ಪರಿಗಣಿಸಬೇಕೇ, ಬೇಡವೇ ಎಂಬ ಚರ್ಚೆಯೊಂದು ಚಾಲ್ತಿಯಲ್ಲಿತ್ತು. ಸ್ವತಃ ಲಿಂಗಾಯತರೇ ಈ ವಿಷಯದಲ್ಲಿ ಎರಡು ಬಣಗಳಲ್ಲಿ ವಿಭಜನೆಗೊಂಡಿದ್ದರು. ಗೌರಿ ಕೂಡ ಆ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಆ ಚರ್ಚೆಯು ಆ ಸಮಯದಲ್ಲಿ ತಾರಕಕ್ಕೇರಿತ್ತು. ಆದರೆ, ಆ ವಿಷಯಕ್ಕೂ ಗೌರಿ ಹತ್ಯೆಗೂ ಸಂಬಂಧವಿಲ್ಲ ಎನ್ನುವ ನಿರ್ಧಾರಕ್ಕೆ ಬಳಿಕ ಬರಲಾಯಿತು. ಆ ಸಮಯದಲ್ಲಿ ಇತರ ಹಲವಾರು ಸುಳ್ಳು ಸುಳಿವುಗಳೂ ಇದ್ದವು.

ಅಂತಿಮವಾಗಿ, ತನಿಖೆಯು ಪೊಲೀಸರನ್ನು ಯಾರಿಗೂ ಗೊತ್ತಿರದಿದ್ದ ಸನಾತನ ಸಂಸ್ಥೆ ಎಂಬ ಸಂಘಟನೆಯತ್ತ ಒಯ್ಯಿತು. ಈ ಸಂಸ್ಥೆಯ ಬಗ್ಗೆ ನೀವು ಸಂಶೋಧನೆ ಮಾಡಿ ನಿಮ್ಮ ಪುಸ್ತಕದಲ್ಲಿ ಬರೆದಿದ್ದೀರಿ. ಫ್ಯಾಶಿಸ್ಟ್ ಸೇನಾ ಮಾದರಿಯ ಸಂಘಟನೆಯೊಂದು ಹತ್ಯೆಯ ಹಿಂದಿದೆ ಎಂದು ಜನರು ಸಹಜವಾಗಿಯೇ ಭಾವಿಸುತ್ತಾರೆ. ಆದರೆ, ಇಲ್ಲಿ ಕಂಡದ್ದು ಆಧ್ಯಾತ್ಮಿಕ ಸಾಧನೆಗಳು ಮತ್ತು ಹಿಂದೂ ಸಮಾಜದ ಸುಧಾರಣೆಗೆ ಮುಡಿಪಾದಂತೆ ಕಂಡುಬರುವ ಈ ಸಂಘಟನೆ. ಗೌರಿ ಕೊಲೆಯ ಹಿಂದೆ ಈ ಸಂಘಟನೆ ಇದೆ ಎಂಬುದಾಗಿ ಆರೋಪಿಸಲಾಯಿತು. ಈ ವಿಷಯ ಬಹಿರಂಗವಾದಾಗ ನಿಮ್ಮ ಮನಸ್ಸಿನಲ್ಲಿ ಮೊದಲು ಬಂದ ಯೋಚನೆ ಯಾವುದು?

ರೋಲೊ ರೋಮಿಗ್: ದೇಶವೊಂದರ ರಾಜಕೀಯದಲ್ಲಿ ಇಂಥ ಸಂಘಟನೆಯೊಂದರ ಪಾತ್ರವು ನಿಜವಾಗಿಯೂ ಆಸಕ್ತಿದಾಯಕವಾಗಿದೆ. ಇದಕ್ಕೆ ಸಮವಾಗಿರುವ ಸಂಘಟನೆಗಳು ಅಮೆರಿಕದಲ್ಲೂ ಇವೆ. ಇವುಗಳು ನೇಪಥ್ಯದಲ್ಲಿರುವ ಕಟ್ಟಾ ಬಲಪಂಥೀಯ ಗುಂಪುಗಳು. ಅವುಗಳು ರಿಪಬ್ಲಿಕನ್ ಪಕ್ಷದೊಂದಿಗೆ ನೇರ ಸಂಪರ್ಕ ಹೊಂದಿಲ್ಲ. ಆದರೆ ಆ ಪಕ್ಷದ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸನಾತನ ಸಂಸ್ಥೆಯು ಸಂಘ ಪರಿವಾರದ ಭಾಗವಲ್ಲ. ಅದರ ಬಾಹ್ಯ ಉದ್ದೇಶ ಅಧ್ಯಾತ್ಮ ಮತ್ತು ಅದು ಜಗತ್ತಿಗೆ ತೋರಿಸುವುದು ಜನರು ತಪಸ್ಸು, ಪ್ರಾರ್ಥನೆ ಮತ್ತು ಮಂಥನದಲ್ಲಿ ತೊಡಗಿರುವ ಆಶ್ರಮಗಳನ್ನು. ಆದರೆ ಅದು ಆಡಳಿತಾರೂಢ ಬಿಜೆಪಿಯ ಕಾರ್ಯಸೂಚಿಗೆ ಅತ್ಯಂತ ನಿಕಟವಾಗಿರುವ ಬಹಿರಂಗ ರಾಜಕೀಯ ಕಾರ್ಯಸೂಚಿಯನ್ನೂ ಹೊಂದಿದೆ. ಪ್ರತೀ ವರ್ಷ ಸನಾತನ ಸಂಸ್ಥೆಯ ರಾಜಕೀಯ ಘಟಕವು ಗೋವಾದಲ್ಲಿ ಸಮಾವೇಶವೊಂದನ್ನು ನಡೆಸುತ್ತದೆ. ಅದರ ಮುಖ್ಯ ಉದ್ದೇಶ ಹಿಂದೂ ರಾಷ್ಟ್ರ ಸ್ಥಾಪನೆ. ದೇಶಾದ್ಯಂತದ ಬಲಪಂಥೀಯ ಗುಂಪುಗಳು ಗೋವಾದಲ್ಲಿ ನಡೆಯುವ ಆ ಸಮಾವೇಶದಲ್ಲಿ ಪಾಲ್ಗೊಳ್ಳುತ್ತವೆ. ನರೇಂದ್ರ ಮೋದಿ ಪ್ರಧಾನಿಯಾಗುವ ಒಂದು ವರ್ಷ ಮೊದಲು ನಡೆದ ಈ ಸಮಾವೇಶಕ್ಕೆ ಅವರು ಅಭಿನಂದನಾ ಪತ್ರವೊಂದನ್ನು ಕಳುಹಿಸಿದ್ದರು. ಜೊತೆಗೆ, ಸಮಾವೇಶದಲ್ಲಿ ಭಾಗವಹಿಸಲು ಅಸಾಧ್ಯವಾಗಿರುವುದಕ್ಕಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದರು. ಹಾಗಾಗಿ, ವಾಸ್ತವವಾಗಿ ಸನಾತನ ಸಂಸ್ಥೆಯು ರಾಜಕೀಯವಾಗಿ ಏನು ನಂಬುತ್ತದೋ ಮತ್ತು ಆರೆಸ್ಸೆಸ್ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆಯೋ- ಅವುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಇವೆ ಎಂದು ನನಗನಿಸುವುದಿಲ್ಲ.

(ನಾಳಿನ ಸಂಚಿಕೆಗೆ ಮುಂದುವರಿಯುವುದು)

share
ಕಾರ್ತಿಕ್ ವೆಂಕಟೇಶ್
ಕಾರ್ತಿಕ್ ವೆಂಕಟೇಶ್
Next Story
X