ಸೌಜನ್ಯಾ ಮರಣೋತ್ತರ ಪರೀಕ್ಷೆ ಲೋಪ : ಇಲಾಖಾ ವಿಚಾರಣೆ ಎದುರಿಸದ ಡಾ.ರಶ್ಮಿ

ಬೆಂಗಳೂರು, ಸೆ.4: ಉಜಿರೆಯ ಕುಮಾರಿ ಸೌಜನ್ಯಾಳ ಮರಣೋತ್ತರ ಪರೀಕ್ಷೆಯಲ್ಲಿನ ಲೋಪ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದ ವೈದ್ಯರ ಪೈಕಿ ಡಾ.ರಶ್ಮಿ ಅವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂದು ಸಿಬಿಐ ಶಿಫಾರಸು ಅನುಷ್ಠಾನಗೊಳ್ಳುವ ಮೊದಲೇ ಅವರನ್ನು ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ವಜಾಗೊಂಡಿದ್ದರು.ಅನಧಿಕೃತವಾಗಿ ಗೈರು ಹಾಜರಿ ಹಿನ್ನೆಲೆಯಲ್ಲಿ ವಜಾಗೊಂಡಿದ್ದರಿಂದಾಗಿ ಸಿಬಿಐ ಶಿಫಾರಸಿನಂತೆ ರಶ್ಮಿ ಅವರ ವಿರುದ್ಧ ಇಲಾಖೆ ವಿಚಾರಣೆಯೇ ನಡೆದಿಲ್ಲ ಎಂಬ ಸಂಗತಿ ಯು
ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಡಾ.ರಶ್ಮಿ ಮತ್ತು ಡಾ.ಆದಂ ಉಸ್ಮಾನ್ ಅವರಿಬ್ಬರ ವಿರುದ್ಧ ಆರೋಪಗಳನ್ನು ಸಿಬಿಐ ತನಿಖಾ ಸಂಸ್ಥೆಯು ದೃಢಪಡಿಸಿದ್ದರೂ ಇಲಾಖೆ ವಿಚಾರಣೆಯಲ್ಲಿ ಆ ಎಲ್ಲ ದೃಢಪಟ್ಟ ಅಂಶಗಳನ್ನು ತಳ್ಳಿ ಹಾಕಿದ್ದರ ಬೆನ್ನಲ್ಲೇ ಡಾ. ರಶ್ಮಿ ಅವರನ್ನು ಇಲಾಖೆ ವಿಚಾರಣೆಗೆ ಗುರಿಪಡಿಸಿರಲಿಲ್ಲ ಎಂಬ ವಿಚಾರವು ಮುನ್ನೆಲೆಗೆ ಬಂದಿದೆ. ಈ ಕುರಿತು "the-file.in" 432 ಪುಟಗಳ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ವೈದ್ಯರಲ್ಲಿ ಹಿಂದಿನ ವೈದ್ಯಾಧಿಕಾರಿಯಾಗಿರುವ ಡಾ.ರಶ್ಮಿ ಅವರನ್ನು ಸರಕಾರಿ ಸೇವೆಗೆ ಅನಧಿಕೃತ ಗೈರು ಹಾಜರಾಗಿರುವ ಆರೋಪದ ಮೇರೆಗೆ 2017ರ ಮಾರ್ಚ್ 10ರಂದು ಸರಕಾರಿ ಸೇವೆಯಿಂದ (ಆದೇಶ ಸಂಖ್ಯೆ; ಆಕುಕ 243 ಎಂಎಸ್‌ಎ 2016 ) ವಜಾಗೊಳಿಸಲಾಗಿದೆ. ಆದ್ದ ರಿಂದ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ 2017ರಲ್ಲೇ ವಜಾಗೊಂಡಿದ್ದ ಡಾ.ರಶ್ಮಿ ಅವರನ್ನು 2020ರಲ್ಲಿ ಪುನಃ ಸರಕಾರಿ ಸೇವೆಗೆ ಆಯ್ಕೆಯಾಗಿದ್ದರು. ’ಹಿಂದಿನ ವೈದ್ಯಾಧಿಕಾರಿ ಡಾ.ರಶ್ಮಿ ಅವರನ್ನು ಅನಧಿಕೃತ ಗೈರು ಹಾಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿದ್ದರಿಂದ ಆಯುಕ್ತರಿಗೆ ಪ್ರತ್ಯಾಯೋಜಿಸುವ ಅಧಿಕಾರದ ಅಡಿಯಲ್ಲಿ ಡಾ. ಆದಂ ಉಸ್ಮಾನ್ ಇವರಿಗೆ ಆಯುಕ್ತಾಲಯದ ಹಂತ ದಲ್ಲಿ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶವಾಗಿತ್ತು’ ಎಂಬುದು ಟಿಪ್ಪಣಿ ಹಾಳೆ ಯಿಂದ ಗೊತ್ತಾಗಿದೆ.
ಮತ್ತೊಂದು ವಿಶೇಷವಾಗಿ ಗಮನಿಸಬೇಕಾದ ಅಂಶ ವೆಂದರೆ, ಈ ಇಬ್ಬರು ವೈದ್ಯರು 120 ದಿನಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ (ಆದೇಶ ಸಂಖ್ಯೆ; ಆಕುಕ 243 ಎಂಎಸ್‌ಎ 2016) 2017ರ ಮಾರ್ಚ್ 10ರಂದು ಸರಕಾರಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ಇಲಾಖೆ ವಿಚಾರಣೆಯಲ್ಲಿ ಡಾ.ಆದಂ ಉಸ್ಮಾನ್ ಅವರ ವಿರುದ್ಧ ಮಾತ್ರವಷ್ಟೇ ಇಲಾಖೆ ವಿಚಾರಣೆ ನಡೆದಿತ್ತು. ಇವರಿಗಷ್ಟೇ ದೋಷಾರೋಪಣಾ ಪಟ್ಟಿ ಜಾರಿಗೊಳಿಸಿತ್ತೇ ವಿನಃ ರಶ್ಮಿ ಅವರಿಗೆ ಯಾವುದೇ ದೋಷಾರೋಪ ಪಟ್ಟಿ ಜಾರಿಯಾಗಿಲ್ಲ. ಈ ಸಂಬಂಧ ಕಡತದ ಹಾಳೆಯಲ್ಲಿ ಎಲ್ಲಿಯೂ ರಶ್ಮಿ ಅವರ ವಿರುದ್ಧ ದೋಷಾರೋಪ ಪಟ್ಟಿ ಜಾರಿಯಾಗಿರುವ ದಾಖಲೆಗಳು ಕಂಡು ಬಂದಿಲ್ಲ. ಈ ಪ್ರಕರಣದಲ್ಲಿ ಡಾ.ರಶ್ಮಿ ವಿಚಾರಣೆಗೆ ಹಾಜರಾಗಿಲ್ಲವೆಂಬ ಕಾರಣಕ್ಕಾಗಿ ಆರೋಪಗಳು ಸಾಬೀತಾಗಿಲ್ಲ ಎಂಬ ನಿಲುವು ತೆಗೆದುಕೊಂಡಿರುವುದರ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ನಿಲುವನ್ನು ವ್ಯಕ್ತಪಡಿಸಿದೆ.