Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 1,17,884 ಸರಕಾರಿ ನೌಕರರಿಗೆ...

1,17,884 ಸರಕಾರಿ ನೌಕರರಿಗೆ ಎಪ್ರಿಲ್‌ನಿಂದ ವೇತನವಾಗಿಲ್ಲ

ಜಿ. ಮಹಾಂತೆೇಶ್ಜಿ. ಮಹಾಂತೆೇಶ್4 Aug 2025 8:30 AM IST
share
1,17,884 ಸರಕಾರಿ ನೌಕರರಿಗೆ ಎಪ್ರಿಲ್‌ನಿಂದ ವೇತನವಾಗಿಲ್ಲ

ಬೆಂಗಳೂರು: ಸರಕಾರಿ ನೌಕರರಿಗೆ ಪ್ರತೀ ತಿಂಗಳೂ ವೇತನ ಒದಗಿಸಲು ಆಯವ್ಯಯದಲ್ಲಿ ಅನುದಾನ ಒದಗಿಸಿದ್ದರೂ ಸಹ 2025ರ ಎಪ್ರಿಲ್‌ನಿಂದ ಜೂನ್ ಅವಧಿವರೆಗೆ 1,17,884 ಸಾವಿರ ಸರಕಾರಿ ನೌಕರರಿಗೆ ವೇತನವನ್ನೇ ನೀಡಿರಲಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಆರಂಭದ ಮೂರು ತಿಂಗಳವರೆಗೆ ಸರಕಾರಿ ನೌಕರರಿಗೆ ವೇತನವನ್ನೇ ನೀಡಿಲ್ಲ. ಹೀಗಾಗಿ ಅವರು ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಅಲ್ಲದೆ, ವೇತನಕ್ಕಾಗಿ ಖಜಾನೆ ಇಲಾಖೆಯ ಮೆಟ್ಟಿಲು ಹತ್ತಿಳಿದು ಬಸವಳಿದಿದ್ದಾರೆ.

ವಿಶೇಷವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 1,686 ನೌಕರರಿಗೆ ಕಳೆದ ಮೂರು ತಿಂಗಳಿನಿಂದ 15.70 ಕೋಟಿ ರೂ.ಯಷ್ಟು ವೇತನ ಬಾಕಿ ಇದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯ ಒಟ್ಟಾರೆ 2,555 ನೌಕರರಿಗೆ 17.17 ಕೋಟಿ ರೂ.ದಷ್ಟು ವೇತನ ಬಾಕಿ ಇದೆ.

1,17,884 ಸರಕಾರಿ ನೌಕರರಿಗೆ 3 ತಿಂಗಳಿನಿಂದಲೂ 834.89 ಕೋಟಿ ರೂ. ಮೊತ್ತದಷ್ಟು ವೇತನ ಪಾವತಿಯಾಗದಿರುವುದು ಮುನ್ನೆಲೆಗೆ ಬಂದಿದೆ.

ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ (ಎಚ್‌ಆರ್‌ಎಂಎಸ್)ಯಲ್ಲಿನ ತಾಂತ್ರಿಕ ತೊಂದರೆ, ನವೀಕರಣಗೊಳ್ಳದ ಸಾಫ್ಟ್‌ವೇರ್, ಎಜಿಯಿಂದ ನಿಗದಿತ ಸಮಯದಲ್ಲಿ ಮಾಹಿತಿ ಬಂದಿಲ್ಲ ಎಂಬ ನೆಪ ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ವೇತನಕ್ಕೂ ಹಣ ಹೊಂದಿಸಲು ಸರಕಾರವು ಪರದಾಡುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

ಆರ್ಥಿಕ ವರ್ಷ ಆರಂಭವಾಗಿ 3 ತಿಂಗಳೂ ಕಳೆದಿದ್ದರೂ ಸಹ ವೇತನ ಬಿಲ್‌ಗಳನ್ನು ಡಿಡಿಒಗಳು ಸೆಳೆದಿರಲಿಲ್ಲ. ಈ ಸಂಗತಿಯು ಆರ್ಥಿಕ ಇಲಾಖೆಗೆ ತಡವಾಗಿ ಗಮನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಖುದ್ದು ಆರ್ಥಿಕ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಇಕ್ರಮುಲ್ಲಾ ಶರೀಫ್ ಅವರು ಸರಕಾರದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಇಕ್ರಮುಲ್ಲಾ ಶರೀಫ್ ಅವರು 2025ರ ಜುಲೈ 23ರಂದು ಬರೆದಿರುವ ಪತ್ರವು ‘the-file.in’ಗೆ ಲಭ್ಯವಾಗಿದೆ.

ಪತ್ರದಲ್ಲೇನಿದೆ?

ರಾಜ್ಯದ ವಿವಿಧ ಇಲಾಖೆಗಳಿಗೆ ಸೇರಿದ 1,17,884 ರಾಜ್ಯ ಸರಕಾರಿ ನೌಕರರ ಒಟ್ಟು 834.89 ಮೊತ್ತದಷ್ಟು ವೇತನ ಬಿಲ್‌ಗಳನ್ನು ಸಂಬಂಧಿಸಿದ ಡಿಡಿಒಗಳು ಸೆಳೆದಿಲ್ಲ. ಇದು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಿದೆ. 2025ರ ಎಪ್ರಿಲ್‌ನಿಂದ ಜೂನ್ ಅವಧಿಯವರೆಗೆ ಎಚ್‌ಆರ್‌ಎಂಎಸ್ ವಿಭಾಗವು ವರದಿ ಸಲ್ಲಿಸಿದೆ ಎಂದು ಪತ್ರದಲ್ಲಿ ಇಕ್ರಮುಲ್ಲಾ ಶರೀಫ್ ಅವರು ತಿಳಿಸಿರುವುದು ಗೊತ್ತಾಗಿದೆ.

ಆಯವ್ಯಯದಲ್ಲಿ ವೇತನಕ್ಕೆ ಒದಗಿಸಿರುವ ಅನುದಾನವನ್ನು ಕಾಲಕಾಲಕ್ಕೆ ಸೆಳೆದು ಅಧಿಕಾರಿ, ಸಿಬ್ಬಂದಿಗೆ ಪಾವತಿ ಮಾಡದೆ ಇದ್ದಲ್ಲಿ ರಾಜ್ಯದ ಒಟ್ಟಾರೆ ಹಣಕಾಸು ಮತ್ತು ಆಯವ್ಯಯ ನಿರ್ವಹಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ.

ವೇತನ ಪಾವತಿಯ ವಿಳಂಬದಿಂದಾಗಿ ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ಅಂದಾಜಿಸುವುದರಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ತಮ್ಮ ನಿಯಂತ್ರಣದಡಿ ಬರುವ ಎಲ್ಲಾ ಡಿಡಿಒಗಳಿಗೆ ಮುಂದಿನ ಮೂರು ದಿನದೊಳಗಾಗಿ ಎಚ್‌ಆರ್‌ಎಂಎಸ್‌ನಲ್ಲಿ ಬಿಲ್‌ಗಳನ್ನು ತಯಾರಿಸಬೇಕು. ವೇತನ ಪಾವತಿಗಾಗಿ ಖಜಾನೆಗೆ ಸಲ್ಲಿಸಲು ಸೂಚನೆ ನೀಡಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

ವೇತನವಾಗದ ನೌಕರರ ಸಂಖ್ಯೆ- ಇಲಾಖೆಗಳ ಪಟ್ಟಿ

2025ರ ಎಪ್ರಿಲ್‌ನಲ್ಲಿ 23,759, ಮೇ ತಿಂಗಳಿನಲ್ಲಿ 19,053, ಜೂನ್ ತಿಂಗಳಿನಲ್ಲಿ 75,072 ಸೇರಿ ಒಟ್ಟಾರೆ 1,17,884 ಸಂಖ್ಯೆಯ ಸರಕಾರಿ ನೌಕರರಿಗೆ ವೇತನವಾಗಿರಲಿಲ್ಲ.

ವೇತನವಾಗದ ಸರಕಾರಿ ನೌಕರರ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅಗ್ರ ಸ್ಥಾನದಲ್ಲಿದೆ. ಎಪ್ರಿಲ್‌ನಲ್ಲಿ 4,294, ಮೇ ನಲ್ಲಿ 3,920, ಜೂನ್‌ನಲ್ಲಿ 14,887 ಸೇರಿ ಒಟ್ಟು 23,101 ಸಂಖ್ಯೆಯ ನೌಕರರಿಗೆ ವೇತನವಾಗಿಲ್ಲ. ಇದರ ಮೊತ್ತವೇ ರೂ. 171.10 ಕೋಟಿಯಷ್ಟಿದೆ.

ಆರೋಗ್ಯ ಇಲಾಖೆಯ ಒಟ್ಟು 13,637 ನೌಕರರಿಗೆ 96.58 ಕೋಟಿ ರೂ., ಕಂದಾಯ ಇಲಾಖೆಯ 12,534 ನೌಕರರಿಗೆ 70.35 ಕೋಟಿ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 8,075 ನೌಕರರಿಗೆ 44.53 ಕೋಟಿ ರೂ., ಹಣಕಾಸು ಇಲಾಖೆಯ 7,636 ನೌಕರರಿಗೆ 58.96 ಕೋಟಿ ರೂ. ವೇತನ ಆಗಿಲ್ಲ.

ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 5,974 ನೌಕರರಿಗೆ 47.64 ಕೋಟಿ ರೂ., ಗೃಹ ಇಲಾಖೆಯ 5,884 ನೌಕರರಿಗೆ 35.93 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ 5,846 ನೌಕರರಿಗೆ 41.16 ಕೋಟಿ ರೂ., ಕಾರ್ಮಿಕ ಇಲಾಖೆಯ 3,800 ನೌಕರರಿಗೆ 33.43 ಕೋಟಿ ರೂ., ಲೋಕೋಪಯೋಗಿ ಇಲಾಖೆಯ 3,292 ನೌಕರರಿಗೆ 24.33 ಕೋಟಿ ರೂ., ಅಲ್ಪಸಂಖ್ಯಾತರ ಇಲಾಖೆಯ 2,566 ನೌಕರರಿಗೆ ಕಳೆದ ಮೂರು ತಿಂಗಳಿನಿಂದ 20.02 ಕೋಟಿ ರೂ. ವೇತನ ಬಾಕಿ ಇರುವುದು ಪತ್ರದಿಂದ ಗೊತ್ತಾಗಿದೆ.

ಪಶು ಸಂಗೋಪನೆಯ 2,071 ನೌಕರರಿಗೆ 14.12 ಕೋಟಿ ರೂ., ಅರಣ್ಯ ಇಲಾಖೆಯ 2,054 ನೌಕರರಿಗೆ 11.87 ಕೋಟಿ ರೂ., ಕೃಷಿ ಇಲಾಖೆಯ 2,040 ನೌಕರರಿಗೆ 16.25 ಕೋಟಿ, ಕಾನೂನು ಸಂಸದೀಯ ಶಾಸನ ರಚನೆ ಇಲಾಖೆಯ 1,766 ನೌಕರರಿಗೆ 9.33 ಕೋಟಿ ರೂ., ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 1,686 ನೌಕರರಿಗೆ 15.70 ಕೋಟಿ ರೂ. ವೇತನ ನೀಡಲು ಬಾಕಿ ಇದೆ.

ಸಹಕಾರ ಇಲಾಖೆಯ 1,600 ನೌಕರರಿಗೆ 12.69 ಕೋಟಿ ರೂ., ಉನ್ನತ ಶಿಕ್ಷಣ ಇಲಾಖೆಯ 1,586 ನೌಕರರಿಗೆ 14.78 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಯ 1,570 ನೌಕರರಿಗೆ 11.90 ಕೋಟಿ ರೂ., ರೇಷ್ಮೆ ಇಲಾಖೆಯ 1,534 ನೌಕರರಿಗೆ 12.14 ಕೋಟಿ ರೂ., ಸಾರಿಗೆ ಇಲಾಖೆಯ 1,437 ನೌಕರರಿಗೆ 10.80 ಕೋಟಿ ರೂ., ಪರಿಶಿಷ್ಟ ಕಲ್ಯಾಣ ಇಲಾಖೆಯ 1,030 ನೌಕರರಿಗೆ 5.36 ಕೋಟಿ ರೂ., ಭಾರೀ ನೀರಾವರಿ ಇಲಾಖೆಯ 985 ನೌಕರರಿಗೆ 5.27 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 822 ನೌಕರರಿಗೆ 6.74 ಕೋಟಿ ರೂ. ವೇತನ ನೀಡಿಲ್ಲ.

ತೋಟಗಾರಿಕೆ ಇಲಾಖೆಯ 714 ನೌಕರರಿಗೆ 5.09 ಕೋಟಿ ರೂ., ಮೀನುಗಾರಿಕೆ ಇಲಾಖೆಯ 663 ನೌಕರರಿಗೆ 5.09 ಕೋಟಿ ರೂ., ಗಣಿಗಾರಿಕೆ ಇಲಾಖೆಯ 583 ನೌಕರರಿಗೆ 5.05 ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ 553 ನೌಕರರಿಗೆ 4.18 ಕೋಟಿ ರೂ., ಸಂಸದೀಯ ವ್ಯವಹಾರಗಳು ಇಲಾಖೆಯ 542 ನೌಕರರಿಗೆ 3.94 ಕೋಟಿ ರೂ., ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ 458 ನೌಕರರಿಗೆ 4.77 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆಯ 449 ನೌಕರರಿಗೆ 4.56 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯ 425 ನೌಕರರಿಗೆ 3.19 ಕೋಟಿ ರೂ. ವೇತನ ಪಾವತಿಯಾಗಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 377 ನೌಕರರಿಗೆ 3.25 ಕೋಟಿ ರೂ., ಯುವಜನ ಸೇವೆ ಇಲಾಖೆಯ 180 ನೌಕರರಿಗೆ 1.34 ಕೋಟಿ ರೂ., ಕೈಮಗ್ಗ ಮತ್ತು ಜವಳಿ ಇಲಾಖೆಯ 168 ನೌಕರರಿಗೆ 1.55 ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯ 114 ನೌಕರರಿಗೆ 0.99 ಕೋಟಿ ರೂ., ಯೋಜನೆ ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 103 ನೌಕರರಿಗೆ 0.61 ಕೋಟಿ ರೂ., ಮಾಹಿತಿ ಇಲಾಖೆಯ 16 ನೌಕರರಿಗೆ 0.20 ಕೋಟಿ ರೂ., ಇ-ಆಡಳಿತ ಇಲಾಖೆಯ 13 ನೌಕರರಿಗೆ 0.10 ಕೋಟಿ ರೂ. ವೇತನ ಬಾಕಿ ಇರುವುದು ಪತ್ರದಿಂದ ಗೊತ್ತಾಗಿದೆ.

ಸರಕಾರಿ ನೌಕರರ ವೇತನದಲ್ಲಿ ವಿಳಂಬ ಅಥವಾ ವ್ಯತ್ಯಯ ಉಂಟಾಗು ವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದಾಗಿ, ನೌಕರರು ತಮ್ಮ ಮನೆ ಬಾಡಿಗೆ, ದಿನಸಿ ಮತ್ತು ಇತರ ಖರ್ಚುಗಳನ್ನು ನಿಭಾಯಿಸಲು ಕಷ್ಟಪಡಬೇಕಾಗುತ್ತದೆ ಎನ್ನುತ್ತಾರೆ ಸರಕಾರಿ ನೌಕರರೊಬ್ಬರು.

2024ರ ಅಕ್ಟೋಬರ್‌ನಿಂದಲೇ ಜಿಲ್ಲಾ ಹಂತದಲ್ಲಿ ವೇತನ ಅಗುತ್ತಿತ್ತು. ಆದರೆ ನಿಗದಿತ ಸಮಯದಲ್ಲಿ ವೇತನ ಆಗದ ಕಾರಣ ಬಾಡಿಗೆ ಕಟ್ಟಲು, ಸಾಲದ ಕಂತು ಪಾವತಿಸಲು, ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಇಕ್ರಮುಲ್ಲಾ ಶರೀಫ್ ಅವರನ್ನು ‘ದಿ ಫೈಲ್’ ಭೇಟಿ ಮಾಡಲು ಪ್ರಯತ್ನಿಸಿತು. ಆದರೆ ಭೇಟಿ ಸಾಧ್ಯವಾಗಲಿಲ್ಲ. ಇಲಾಖೆಯ ಜಂಟಿ ಕಾರ್ಯದರ್ಶಿ ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಿದೆ.

share
ಜಿ. ಮಹಾಂತೆೇಶ್
ಜಿ. ಮಹಾಂತೆೇಶ್
Next Story
X