ವಿಜಯಪುರ | ದ್ವಿಚಕ್ರ ವಾಹನ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ವಿಜಯಪುರ : ಇತ್ತೀಚಿಗೆ ನಗರವೂ ಸೇರಿದಂತೆ ಹಲವಡೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದು, ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ವೀರಭದ್ರ ಶಿವಶರಣ ಕುಂಬಾರ (31) , ಶ್ರೀಶೈಲ ಶಂಕ್ರೇಪ್ಪ ಬಿರಾದಾರ (31) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 17 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎನ್.ಬಿ.ಉಪ್ಪಲದಿನ್ನಿ, ಆಸೀಫ್ ಗುಡಗುಂಟಿ, ಎಸ್.ತೆಲಗಾಂವ, ಲಕ್ಷ್ಮಣ ಬಿರಾದಾರ, ರಮೇಶ ಜಾಧವ, ಸಂತೋಷ ಮೇಲಸಕ್ರಿ, ಆನಂದ ಹಿರೇಕುರಬರ, ಎಸ್.ಆರ್.ಪೂಜಾರಿ, ಸುರೇಶ ಕುಂಬಾರ ಭಾಗಿಯಾಗಿದ್ದರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿದ್ದಾರೆ.
Next Story