ವಿಜಯಪುರ | ಬೈಕ್‌ಗೆ ಕಾರು ಢಿಕ್ಕಿ; ಸವಾರ ಮೃತ್ಯು

ವಿಜಯಪುರ : ಕೂಡಗಿ ಎನ್‌ಟಿಪಿಸಿ ಟೌನ್‌ಶಿಪ್ ಗೇಟ್ ಮುಂದಿನ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಶುಕ್ರವಾರ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಗ್ರಾಪಂ ಸದಸ್ಯ ಕಾಶೀಮ ಮಾರುತಿ ಚಲವಾದಿ (ಕಾಳೆ) (55) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.
ಕೂಡಗಿ ಎನ್ ಟಿಪಿಸಿ ಟೌನ್‌ಶಿಪ್ ಮಾರ್ಗವಾಗಿ ಬಸವನಬಾಗೇವಾಡಿಗೆ ಬೈಕ್‌ನಲ್ಲಿ ಹೊರಟಿದ್ದಾಗ ರಾಷ್ಟ್ರೀಯ ಹೆದ್ದಾರಿ-50ನ್ನು ದಾಟುವಾಗ ವಿಜಯಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಬೆಂಗಳೂರು ಮೂಲದ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾಶೀಮ ಪ್ರಜ್ಞೆತಪ್ಪಿ ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ವಿಜಯಪುರಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೂಡಗಿ ಎನ್‌ಟಿಪಿಸಿ ಠಾಣಾ ಪಿಎಸ್‌ಐ ಯತೀಶ ಕೆ.ಎನ್. ಮತ್ತು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಕೂಡಗಿ ಎನ್‌ಟಿಪಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story