ವಿಜಯಪುರ | ವಾಹನಗಳ್ಳತನ: ಆರೋಪಿಯ ಬಂಧನ

ವಿಜಯಪುರ: ನಗರದಲ್ಲಿ ವಾಹನಗಳ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಆಂಧ್ರ ಪ್ರದೇಶದ ಚಕ್ರಧಾರ ಸಂಗೇಪು ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 17 ಲಕ್ಷದ 15 ಸಾವಿರ ಮೌಲ್ಯದ ಕಾರು, ಮೊಬೈಲ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಸಂಜೀವ ನೆಮೂಲಾ, ಸುಬ್ಬರಾವ್ ಟಿ. ಎಂಬವರು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಮುಂದುವರಿದಿದೆ.
ಈ ಕುರಿತು ಗೋಲ ಗುಂಬಾಝ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story