ವಿಜಯನಗರ | ಸರಕಾರಿ ಶಾಲೆಯ ಮೇಲ್ಛಾವಣಿ ಪದರ ಕುಸಿತ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಹರೇಗೊಂಡನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಶಾಲಾ ಕೊಠಡಿಯ ಮೇಲ್ಚಾವಣಿಯ ಪದರ ಕುಸಿದು ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಘಟನೆಯ ವೇಳೆ ಕಲ್ಯಾಣ- ಕರ್ನಾಟಕ ಉತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗಡೆಯಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.
ಒಂದರಿಂದ 8 ನೇ ತರಗತಿಯವರೆಗೆ ಇರುವ ಈ ಸರಕಾರಿ ಶಾಲೆಯಲ್ಲಿ 211 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಆರು ಕೊಠಡಿಗಳಿರುವ ಈ ಶಾಲೆಯ 3 ಕೊಠಡಿಗಳ ಛಾವಣಿ ಕಿತ್ತುಬರುವಂತಿದೆ. ಇದರ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Next Story