Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಅಧಿಕಾರಿಗಳ ಸೇವಾ ನಿಯೋಜನೆ:...

ಅಧಿಕಾರಿಗಳ ಸೇವಾ ನಿಯೋಜನೆ: ಕೇಂದ್ರ-ರಾಜ್ಯಗಳ ತಕರಾರೇನು?

ಆರ್.ಜೀವಿಆರ್.ಜೀವಿ5 Aug 2025 3:09 PM IST
share
ಅಧಿಕಾರಿಗಳ ಸೇವಾ ನಿಯೋಜನೆ: ಕೇಂದ್ರ-ರಾಜ್ಯಗಳ ತಕರಾರೇನು?

ಕೇಂದ್ರ ಸೇವೆಗೆ ನಿಯೋಜನೆಯಾಗಲು ಅರ್ಹರಾಗಿರುವ ಪಟ್ಟಿಯಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿರುವುದು ದೊಡ್ಡ ಸುದ್ದಿಯಾಗಿದೆ. ಅವರು ಸದ್ಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್‌ಐಟಿ ನೇತೃತ್ವ ವಹಿಸಿರುವುದು ಇದಕ್ಕೆ ಕಾರಣವೆನ್ನಲಾಗುತ್ತಿದೆ. ಆಡಳಿತಕ್ಕೆ ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕಾರಿಗಳನ್ನು ಕೇಂದ್ರ ಸರಕಾರ ರಾಜ್ಯಗಳಿಂದ ಆಯ್ಕೆ ಮಾಡಿಕೊಂಡು ನಿಯೋಜಿಸುತ್ತದೆ. ಆದರೆ, ಇಲ್ಲಿ ಹಲವು ಸಲ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಇಲ್ಲದೇ ಇರುವುದು ವಿವಾದದ ವಿಷಯವಾಗಿಯೇ ಉಳಿದಿದೆ. ಪ್ರತೀ ರಾಜ್ಯ ಒಟ್ಟು ಅಧಿಕೃತ ಬಲ ಮತ್ತು ಕೇಂದ್ರ ನಿಯೋಜನೆಗೆ ಅನುಗುಣವಾದ ಮೀಸಲು ಹೊಂದಿರುತ್ತದೆ. ಮೋದಿ ಪ್ರಧಾನಿಯಾದ ಬಳಿಕವಂತೂ ಗುಜರಾತ್‌ನಲ್ಲಿ ಅವರ ಸುತ್ತ ಇದ್ದ ಅಧಿಕಾರಿಗಳೇ ದಿಲ್ಲಿ ದರ್ಬಾರನ್ನು ಆಕ್ರಮಿಸಿಕೊಂಡದ್ದು ಕೂಡ ದೊಡ್ಡ ಟೀಕೆಗೆ ಗುರಿಯಾದ ಸಂಗತಿ.

ಭಾಗ- 1

ಪರಿಣಾಮಕಾರಿ ಆಡಳಿತಕ್ಕೆ ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ಪಡೆಯುವುದು ಕೇಂದ್ರ ಸರಕಾರದ ಪಾಲಿಗೆ ಬಹಳ ಹಿಂದಿನಿಂದಲೂ ಒಂದು ಸವಾಲಾಗಿಯೇ ಇದೆ. ರಾಜ್ಯಗಳು ಅಗತ್ಯ ಸಂಖ್ಯೆಯ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮೇರೆಗೆ ಕಳುಹಿಸುವುದಿಲ್ಲ ಎಂಬುದು ನಿರಂತರ ತಕರಾರು. ಕೇಂದ್ರ ಸರಕಾರ ತನಗೆ ತೋಚಿದಂತೆ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಲು ಯತ್ನಿಸುವ ಮೂಲಕ ಫೆಡರಲ್ ವ್ಯವಸ್ಥೆಯನ್ನೇ ಹಾಳು ಮಾಡುತ್ತದೆ ಎಂಬುದು ರಾಜ್ಯಗಳ ದೂರು.

ಲಭ್ಯವಿರುವ ಮಾಹಿತಿ ಪ್ರಕಾರ, ಪ್ರತೀ ರಾಜ್ಯ ಒಟ್ಟು ಅಧಿಕೃತ ಬಲ ಮತ್ತು ಕೇಂದ್ರ ನಿಯೋಜನೆಗೆ ಅನುಗುಣವಾದ ಮೀಸಲು ಹೊಂದಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಇತ್ತೀಚಿನ ಮಾಹಿತಿಯಂತೆ 6,709 ಐಎಎಸ್ ಅಧಿಕಾರಿಗಳ ಒಟ್ಟು ಅಧಿಕೃತ ಬಲವಿದ್ದು, ಅವರಲ್ಲಿ 1,451 ಅಧಿಕಾರಿಗಳು ಕೇಂದ್ರ ನಿಯೋಜನೆ ಮೇಲಿರಬೇಕಿತ್ತು. ಆದರೆ, ಕೇವಲ 419, ಅಂದರೆ ಕೇಂದ್ರ ಸರಕಾರದಲ್ಲಿ ಸೇವೆ ಸಲ್ಲಿಸಬೇಕಿದ್ದ ಸಂಖ್ಯೆಯ ಶೇ. 29ರಷ್ಟು ಅಧಿಕಾರಿಗಳು ಮಾತ್ರ ಕೇಂದ್ರ ಸೇವೆಯಲ್ಲಿದ್ದಾರೆ.

ರಾಜ್ಯವಾರು ಅಂಕಿಅಂಶಗಳನ್ನು ನೋಡಿದರೆ, ಪಶ್ಚಿಮ ಬಂಗಾಳ ಕೇಂದ್ರ ನಿಯೋಜನೆಗೆ ಕನಿಷ್ಠ ಸಂಖ್ಯೆಯ ಅಧಿಕಾರಿಗಳನ್ನು ನೀಡುತ್ತದೆ. ಅದರ ಒಟ್ಟು 378 ಕೇಡರ್ ಬಲದಿಂದ ಕೇಂದ್ರ ಸೇವೆಗೆ ಇರುವುದು 6 ಅಧಿಕಾರಿಗಳು ಮಾತ್ರ. ಅಂದರೆ, ಇದು ಕೇವಲ ಶೇ. 7ರಷ್ಟಿದೆ. ಇದಕ್ಕೆ ತದ್ವಿರುದ್ಧವಾಗಿ, ಸಿಕ್ಕಿಂ ತನ್ನ ಶೇ. 70ರಷ್ಟು ಅಧಿಕಾರಿಗಳನ್ನು ಕಳಿಸುವ ಮೂಲಕ ಕೇಂದ್ರ ನಿಯೋಜನೆಯಲ್ಲಿ ಮುಂದಿದೆ. ಅದರ 10 ಅಧಿಕಾರಿಗಳಲ್ಲಿ 7 ಮಂದಿ ದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತ್ರಿಪುರಾ ತನ್ನ 22 ಅಧಿಕಾರಿಗಳಲ್ಲಿ ಶೇ. 54 ರಷ್ಟು ನಿಯೋಜನೆಯೊಂದಿಗೆ ನಂತರದ ಸ್ಥಾನದಲ್ಲಿದೆ. ಮಣಿಪುರ ಜನಾಂಗೀಯ ಕಲಹ ಎದುರಿಸುತ್ತಿದ್ದರೂ, ಅದರ ಶೇ. 48ರಷ್ಟು ಅಧಿಕಾರಿಗಳು ಕೇಂದ್ರ ನಿಯೋಜನೆಯಲ್ಲಿದ್ದಾರೆ. ಅದರ 25 ಅಧಿಕಾರಿಗಳಲ್ಲಿ 12 ಮಂದಿ ದಿಲ್ಲಿಯಲ್ಲಿ ನಿಯೋಜನೆಗೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದ (ಯುಟಿ) ಕೇಡರ್‌ನ ಅಧಿಕಾರಿಗಳು ಸಹ ಕೇಂದ್ರ ಸೇವೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. 117 ಮೀಸಲು ಅಧಿಕಾರಿಗಳಲ್ಲಿ 55 ಮಂದಿ ಕೇಂದ್ರ ಸೇವೆಯಲ್ಲಿದ್ದಾರೆ. ಕೇಂದ್ರ ಸೇವೆಯಲ್ಲಿರುವ ಇತರ ರಾಜ್ಯಗಳ ಅಧಿಕಾರಿಗಳ ಪ್ರಮಾಣ ಹೀಗಿದೆ:

ಆಂಧ್ರಪ್ರದೇಶ ಶೇ. 25, ಅಸ್ಸಾಂ-ಮೇಘಾಲಯ ಶೇ. 24, ಬಿಹಾರ ಶೇ.32, ಛತ್ತೀಸ್‌ಗಡ ಶೇ. 33, ಗುಜರಾತ್ ಶೇ. 28, ಹರ್ಯಾಣ ಶೇ. 26, ಹಿಮಾಚಲ ಪ್ರದೇಶ ಶೇ. 34, ಜಾರ್ಖಂಡ್ ಶೇ. 30, ಕರ್ನಾಟಕ ಶೇ. 39, ಕೇರಳ ಶೇ. 34, ಮಧ್ಯಪ್ರದೇಶ ಶೇ. 25, ಮಹಾರಾಷ್ಟ್ರ ಶೇ. 26, ನಾಗಾಲ್ಯಾಂಡ್ ಶೇ. 30, ಒಡಿಶಾ ಶೇ. 35, ಪಂಜಾಬ್ ಶೇ. 40, ರಾಜಸ್ಥಾನ ಶೇ. 16, ತಮಿಳುನಾಡು ಶೇ. 27, ತೆಲಂಗಾಣ ಶೇ. 22, ಉತ್ತರ ಪ್ರದೇಶ ಶೇ. 20, ಉತ್ತರಾಖಂಡ ಶೇ. 31.

ಮೋದಿ 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಹಲವಾರು ವರ್ಷಗಳಿಂದ ಪರಿಸ್ಥಿತಿ ಸುಧಾರಿಸಿಲ್ಲ ಎನ್ನಲಾಗಿದೆ. ಕೇಂದ್ರದಲ್ಲಿ ಅಗತ್ಯವಿರುವ ಅಧಿಕಾರಿಗಳ ಸಂಖ್ಯೆಯಲ್ಲಿ ಇಳಿಕೆ ಕಾಣಿಸುತ್ತ ಬಂದಿದೆ. ಸಾಂಪ್ರದಾಯಿಕವಾಗಿ ಐಎಎಸ್ ಅಧಿಕಾರಿಗಳು ನಿರ್ವಹಿಸಬೇಕಿದ್ದ ಪ್ರಮುಖ ಹುದ್ದೆಗಳನ್ನು ಐಆರ್‌ಎಸ್, ಐಎಫ್‌ಒಎಸ್ ಮತ್ತು ಇತರ ಸೇವೆಗಳ ಸಿಬ್ಬಂದಿ ಮೂಲಕ ನಿಭಾಯಿಸಬೇಕಾದ ಸ್ಥಿತಿ ಕೇಂದ್ರ ಸರಕಾರದ ಮುಂದಿದೆ. ಈ ಸ್ಥಿತಿ ತಪ್ಪಿಸಲೆಂದೇ 2021ರಲ್ಲಿ ಡಿಒಪಿಟಿ 1954ರ ಐಎಎಸ್ ಕೇಡರ್ ನಿಯಮಗಳಲ್ಲಿನ ಕೇಡರ್ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದ ನಿಯಮ 6ನ್ನು ಬದಲಿಸಲು ಪ್ರಯತ್ನಿಸಿತು. ಹಾಗೆಯೇ, ಇತರ ಎರಡು ಅಖಿಲ ಭಾರತ ಸೇವೆಗಳಾದ ಐಪಿಎಸ್ ಮತ್ತು ಐಎಫ್‌ಒಎಸ್ ಕೇಡರ್ ನಿಯಮಗಳಲ್ಲಿಯೂ ಬದಲಾವಣೆಗೆ ಪ್ರಸ್ತಾವಿಸಲಾಯಿತು. ಕೇಂದ್ರ ಸರಕಾರ ರಾಜ್ಯ ಸರಕಾರದ ಅನುಮತಿ ಪಡೆಯದೆಯೇ ಸರಕಾರದಲ್ಲಿ ಮತ್ತು ಸಚಿವಾಲಯಗಳಿಗೆ ಐಎಎಸ್, ಐಪಿಎಸ್ ಮತ್ತು ಐಎಫ್‌ಒಎಸ್ ಅಧಿಕಾರಿಗಳನ್ನು ನಿಯೋಜಿಸುವ ಅಧಿಕಾರ ಪಡೆಯುವ ಪ್ರಸ್ತಾವ ತಿದ್ದುಪಡಿಯಲ್ಲಿ ಇತ್ತು. 1951 ರ ಅಖಿಲ ಭಾರತ ಸೇವೆಗಳ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ, ಐಎಎಸ್ ಕೇಡರ್ ನಿಯಮಗಳನ್ನು ರೂಪಿಸಲಾಗಿತ್ತು. ಎರಡು ಹೊಸ ಸೇರ್ಪಡೆಗಳನ್ನು ಒಳಗೊಂಡಂತೆ ನಾಲ್ಕು ತಿದ್ದುಪಡಿಗಳನ್ನು ಪ್ರಸ್ತಾವಿಸಲಾಯಿತು.

ಮೊದಲನೆಯದಾಗಿ, ಕೇಂದ್ರಕ್ಕೆ ನಿಯೋಜಿಸಬಹುದಾದ ಅಂಥ ಅಧಿಕಾರಿಗಳು ಲಭ್ಯವಾಗುವಂತೆ ರಾಜ್ಯಗಳು ಮಾಡಬೇಕು. ಕೇಂದ್ರ ಸರಕಾರಕ್ಕೆ ನಿಯೋಜಿಸಬೇಕಾದ ಅಧಿಕಾರಿಗಳ ಸಂಖ್ಯೆಯನ್ನು ಕೇಂದ್ರ ಸರಕಾರ ಸಂಬಂಧಿತ ರಾಜ್ಯ ಸರಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತದೆ ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ. ಕೇಂದ್ರೀಯ ಡೆಪ್ಯುಟೇಶನ್ ರಿಸರ್ವ್ (ಸಿಡಿಆರ್) ಯಾವುದೇ ಹಂತದಲ್ಲಿ ನಿಜವಾದ ಬಲದ ಶೇ. 40ಕ್ಕಿಂತ ಹೆಚ್ಚಿರಬಾರದು. ಎರಡನೇ ಬದಲಾವಣೆ ಎಂದರೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾದರೆ, ಆ ವಿಷಯವನ್ನು ಕೇಂದ್ರ ಸರಕಾರ ನಿರ್ಧರಿಸಬೇಕು ಮತ್ತು ರಾಜ್ಯ ಕೇಂದ್ರದ ನಿರ್ಧಾರವನ್ನು ನಿಗದಿತ ಸಮಯದೊಳಗೆ ಜಾರಿಗೆ ತರಬೇಕು. ಇದರಲ್ಲಿ ನಿಗದಿತ ಸಮಯ ಎಂಬುದು ಷರತ್ತು. ಮೂರನೆಯದು, ರಾಜ್ಯ ಸರಕಾರ ಕೇಂದ್ರಕ್ಕೆ ರಾಜ್ಯ ಕೇಡರ್ ಅಧಿಕಾರಿಯನ್ನು ನಿಯೋಜಿಸಲು ವಿಳಂಬ ಮಾಡಿದರೆ ಮತ್ತು ನಿರ್ದಿಷ್ಟ ಸಮಯದೊಳಗೆ ಕೇಂದ್ರದ ನಿರ್ಧಾರವನ್ನು ಜಾರಿಗೆ ತರದಿದ್ದರೆ, ಕೇಂದ್ರ ಸರಕಾರ ನಿರ್ದಿಷ್ಟಪಡಿಸಿದ ದಿನಾಂಕದಿಂದ ಅಧಿಕಾರಿಯನ್ನು ಕೇಡರ್‌ನಿಂದ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿತ್ತು. ಆದರೆ, ಇದೆಂದೂ ಜಾರಿಗೆ ಬಂದಿಲ್ಲ. ನಿಗದಿತ ದಿನಾಂಕದಂದು ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ಸೇವೆ ಸಲ್ಲಿಸಲು ರಾಜ್ಯ ಸರಕಾರದಿಂದ ಆಕ್ಷೇಪಣೆ ರಹಿತ ಅನುಮತಿ ಪಡೆಯಬೇಕಾಗುತ್ತದೆ. ನಾಲ್ಕನೇ ಬದಲಾವಣೆಯೆಂದರೆ, ನಿರ್ದಿಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ಕೇಡರ್ ಅಧಿಕಾರಿಗಳ ಸೇವೆ ಬಯಸಿದಲ್ಲಿ, ರಾಜ್ಯ ಅದನ್ನು ನಿರ್ದಿಷ್ಟ ಸಮಯದೊಳಗೆ ಜಾರಿಗೆ ತರಬೇಕು.

ಅಸ್ತಿತ್ವದಲ್ಲಿರುವ ನಿಬಂಧನೆಗಳ ಹೊರತಾಗಿಯೂ, ರಾಜ್ಯಗಳು ಕೇಂದ್ರ ನಿಯೋಜನೆಗಾಗಿ ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ಕಳುಹಿಸುತ್ತಿಲ್ಲ ಎಂದು ಡಿಒಪಿಟಿ ಹೇಳುತ್ತಲೇ ಇರುತ್ತದೆ. ಲಭ್ಯವಿರುವ ಅಧಿಕಾರಿಗಳು ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಅದು ತಿದ್ದುಪಡಿ ತರುವ ಸಮಯದಲ್ಲಿ ರಾಜ್ಯಗಳಿಗೆ ಕಳಿಸಿದ್ದ ಪತ್ರದಲ್ಲಿ ಹೇಳಿತ್ತು. 2021ರ ದತ್ತಾಂಶದ ಪ್ರಕಾರ, ದೇಶದಲ್ಲಿ ಮೀಸಲಾದ 1,451 ಐಎಎಸ್ ಅಧಿಕಾರಿಗಳಲ್ಲಿ, 445 ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಅಂದರೆ, ಅದು ಕೇವಲ ಶೇ. 31ರಷ್ಟು. 2014ರಲ್ಲಿ, 1,451 ಅಧಿಕಾರಿಗಳಲ್ಲಿ 651 ಜನರನ್ನು ಕೇಂದ್ರದಲ್ಲಿ ನಿಯೋಜಿಸಲಾಗಿತ್ತು. ಅದು ಶೇ. 44ಕ್ಕಿಂತ ಹೆಚ್ಚು. 2021ರಲ್ಲಿ ಕೇವಲ ಶೇ. 10ರಷ್ಟು ಮಧ್ಯಮ ಮಟ್ಟದ ಐಎಎಸ್ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಇದು 2014ರಲ್ಲಿದ್ದ ಶೇ. 19ರ ಪ್ರಮಾಣ ಗಮನಿಸಿದರೆ, ದೊಡ್ಡ ಕುಸಿತ.

ಕೇಂದ್ರ ಸರಕಾರದ ತಿದ್ದುಪಡಿಗೆ ಪಶ್ಚಿಮ ಬಂಗಾಳ, ಛತ್ತೀಸ್‌ಗಡ ಮತ್ತು ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಜಾರ್ಖಂಡ್ ವಿರೋಧ ವ್ಯಕ್ತಪಡಿಸಿದ್ದವು. ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ಮಧ್ಯಪ್ರದೇಶ, ಬಿಹಾರ ಮತ್ತು ಮೇಘಾಲಯ ಕೂಡ ನಿಯಮ ಬದಲಾವಣೆ ವಿರೋಧಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದವು. ಇದು ಒಕ್ಕೂಟ ಮನೋಭಾವಕ್ಕೆ ವಿರುದ್ಧ ಎಂಬ ತಕರಾರು ತೀವ್ರವಾಗಿ ಎದ್ದಿತ್ತು. ಆದರೆ ಕೇಂದ್ರ ಸರಕಾರ ತಿದ್ದುಪಡಿ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

ಕೇಂದ್ರ ನಿಯೋಜನೆಗೆ ಸಂಬಂಧಿಸಿದಂತೆ ಗಮನಿಸಬೇಕಿರುವ ಮತ್ತೊಂದು ಬಹಳ ಮುಖ್ಯ ಸಂಗತಿಯಿದೆ. ಅಖಿಲ ಭಾರತ ಸೇವೆಗಳ ಎರಡು ಅತಿದೊಡ್ಡ ಕೇಡರ್‌ಗಳಾದ ಮಹಾರಾಷ್ಟ್ರ ಮತ್ತು ಯುಪಿ ಕೇಂದ್ರ ನಿಯೋಜನೆಗೆ ಕಡಿಮೆ ಐಎಎಸ್, ಐಎಫ್‌ಎಸ್ ಅಧಿಕಾರಿಗಳನ್ನು ಕಳುಹಿಸುತ್ತವೆ. ಮೊನ್ನೆ ಮಾರ್ಚ್‌ನಲ್ಲಿ ಕೇಂದ್ರದಲ್ಲಿ ಕಾರ್ಯದರ್ಶಿಗಳಾಗಬೇಕಾದವರ ಪಟ್ಟಿಯಲ್ಲಿ ಸೇರಿಸಲಾದ 37 ಅಧಿಕಾರಿಗಳಲ್ಲಿ ಒಬ್ಬ ಅಧಿಕಾರಿ ಮಾತ್ರ ಮಹಾರಾಷ್ಟ್ರಕ್ಕೆ ಸೇರಿದವರು ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು ಯಾರೂ ಇರಲಿಲ್ಲ. ‘ದಿ ಪ್ರಿಂಟ್’ ಉಲ್ಲೇಖಿಸಿರುವ ಪ್ರಕಾರ, ಅಕ್ಟೋಬರ್ 2024ರವರೆಗೆ ಕೇಂದ್ರದಲ್ಲಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಅಖಿಲ ಭಾರತ ಸೇವೆಗಳ ಅಧಿಕಾರಿಗಳಲ್ಲಿ ಕೇವಲ 7 ಮಂದಿ ಮಹಾರಾಷ್ಟ್ರದವರು ಮತ್ತು 12 ಮಂದಿ ಉತ್ತರ ಪ್ರದೇಶದವರು.

ಉತ್ತರ ಪ್ರದೇಶದ್ದು ಅತ್ಯಧಿಕ ಕೇಡರ್ ಬಲ. ಅದು 652 ಐಎಎಸ್, 541 ಐಪಿಎಸ್, 217 ಐಎಫ್‌ಒಎಸ್ ಅಧಿಕಾರಿಗಳನ್ನು ಹೊಂದಿದೆ. ಮಹಾರಾಷ್ಟ್ರ 435 ಐಎಎಸ್, 317 ಐಪಿಎಸ್, 206 ಐಎಫ್‌ಒಎಸ್ ಅಧಿಕಾರಿಗಳನ್ನು ಹೊಂದಿದೆ. ಆದರೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಈ ಎರಡು ರಾಜ್ಯಗಳ ಅಧಿಕಾರಿಗಳ ಸಂಖ್ಯೆ ಪ್ರಮಾಣಕ್ಕೆ ತಕ್ಕಂತೆ ಇಲ್ಲ. 584 ಅಧಿಕಾರಿಗಳಿರುವ ಒಡಿಶಾ, 417 ಅಧಿಕಾರಿಗಳ ಹರ್ಯಾಣ ಮತ್ತು 510 ಅಧಿಕಾರಿಗಳ ಕೇರಳ ರಾಜ್ಯಗಳು ಯುಪಿ ಮತ್ತು ಮಹಾರಾಷ್ಟ್ರಕ್ಕಿಂತಲೂ ಸಣ್ಣ ಕೇಡರ್‌ಗಳಾಗಿವೆ. ಆದರೆ, ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಲ್ಲಿ ಒಡಿಶಾದ 11 ಅಧಿಕಾರಿಗಳು, ಹರ್ಯಾಣದ 9 ಮತ್ತು ಕೇರಳದ 11 ಅಧಿಕಾರಿಗಳಿದ್ದಾರೆ. 646 ಅಧಿಕಾರಿಗಳ ಮಧ್ಯಮ ಗಾತ್ರದ ಕೇಡರ್ ಹೊಂದಿರುವ ಗುಜರಾತ್‌ನಿಂದ ದಿಲ್ಲಿಯಲ್ಲಿ 12 ಅಧಿಕಾರಿಗಳಿದ್ದಾರೆ. ಹಾಗೆಯೇ, 600 ಅಧಿಕಾರಿಗಳ ಬಲದ ಅಸ್ಸಾಂ ಮತ್ತು ಮೇಘಾಲಯದಿಂದ (ಎಎಂ ಕೇಡರ್ ಎನ್ನಲಾಗುತ್ತದೆ) ಆ ಮೂರೂ ಹುದ್ದೆಗಳಲ್ಲಿ 11 ಅಧಿಕಾರಿಗಳಿದ್ದಾರೆ. 27 ಅಧಿಕಾರಿಗಳನ್ನು ಹೊಂದಿರುವ ಂಉಒUಖಿ, ಅಂದರೆ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಡರ್ ಬಲದಲ್ಲಿ ಉತ್ತರ ಪ್ರದೇಶದ ನಂತರದ ಸ್ಥಾನದಲ್ಲಿರುವುದು ಗಮನಾರ್ಹ. 542 ಐಎಎಸ್, 457 ಐಪಿಎಸ್, 302 ಐಎಫ್‌ಒಎಸ್ ಅಧಿಕಾರಿಗಳಿರುವ AGMUT, ಕೇಂದ್ರದಲ್ಲಿನ ಈ ಮೂರೂ ಕಾರ್ಯದರ್ಶಿಗಳ ಹುದ್ದೆಗಳಲ್ಲಿ ಕೇಂದ್ರದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದೆ. AGMUT ನಂತರ ಬಿಹಾರ ಮತ್ತು ಮಧ್ಯಪ್ರದೇಶಗಳು ಬರುತ್ತವೆ. ಕಳೆದ ವರ್ಷದ ಅಕ್ಟೋಬರ್‌ವರೆಗೆ ಈ ಹುದ್ದೆಗಳಲ್ಲಿ ಬಿಹಾರದ 19 ಅಧಿಕಾರಿಗಳು ಮತ್ತು ಮಧ್ಯಪ್ರದೇಶದ 18 ಅಧಿಕಾರಿಗಳು ಸೇವೆಯಲ್ಲಿದ್ದಾರೆ.

ಒಂದು ನಿರ್ದಿಷ್ಟ ರಾಜ್ಯದಿಂದ ಕೇಂದ್ರಕ್ಕೆ ಎಷ್ಟು ಅಧಿಕಾರಿಗಳು ಬರುತ್ತಾರೆ ಎಂಬುದನ್ನು ನಿರ್ಧರಿಸುವ ಪ್ರಾಥಮಿಕ ಅಂಶವೆಂದರೆ ಅಧಿಕಾರಿಗಳ ಸ್ವಂತ ಒಲವು. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯಗಳ ಅಧಿಕಾರಿಗಳು ಅಥವಾ ರಾಜ್ಯದೊಳಗೇ ಸಾಕಷ್ಟು ಅವಕಾಶಗಳನ್ನು ಹೊಂದಿರುವ ಮಹಾರಾಷ್ಟ್ರದಂತಹ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯಗಳ ಅಧಿಕಾರಿಗಳು ದಿಲ್ಲಿಗೆ ಬರಲು ಹಿಂಜರಿಯುತ್ತಾರೆ. ಅದೇ ವೇಳೆ, ಸಣ್ಣ ರಾಜ್ಯಗಳ ಅಧಿಕಾರಿಗಳು ದಿಲ್ಲಿಯನ್ನು ಬಯಸುತ್ತಾರೆ. ಉದಾಹರಣೆಗೆ,AGMUT ಕೇಡರ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಸೇವೆಯನ್ನು ಆರಿಸಿಕೊಳ್ಳುತ್ತಾರೆ. ದಿಲ್ಲಿಯಲ್ಲಿ ಅವರು ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಉತ್ತಮ ಶಾಲೆಗಳು ಮತ್ತು ಸಾಮಾಜಿಕ ಜೀವನ ಹೊಂದಲು ಸಾಧ್ಯ ಎಂದು ಭಾವಿಸುವುದು ಇದಕ್ಕೆ ಕಾರಣ. ಇದೊಂದು ಕಡೆಯಾದರೆ, ರಾಜ್ಯಗಳಿಂದ ದಿಲ್ಲಿಗೆ ಎಷ್ಟು ಅಧಿಕಾರಿಗಳು ಬರುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ಕೇಂದ್ರ ಮತ್ತು ಆಯಾ ರಾಜ್ಯಗಳ ಸಂಬಂಧ ಬಹಳ ಪ್ರಮುಖ ಎಂಬುದು ಮತ್ತೊಂದು ಕಡೆಗಿದೆ. ಉದಾಹರಣೆಗೆ ಗಮನಿಸುವುದಾದರೆ, ಪಶ್ಚಿಮ ಬಂಗಾಳ ಹಲವಾರು ವರ್ಷಗಳಿಂದ ಕೆಲವೇ ಅಧಿಕಾರಿಗಳನ್ನು ಕೇಂದ್ರ ನಿಯೋಜನೆಯ ಮೇಲೆ ಕಳುಹಿಸುತ್ತಿದೆ. ಅಕ್ಟೋಬರ್ 2024ರ ಹೊತ್ತಿಗೆ ಬಂಗಾಳದಿಂದ ಕೇವಲ 5 ಅಧಿಕಾರಿಗಳನ್ನು ದಿಲ್ಲಿಯಲ್ಲಿ ನಿಯೋಜಿಸಲಾಗಿತ್ತು. ಮೋದಿ ಮತ್ತು ಮಮತಾ ಸರಕಾರಗಳ ನಡುವಿನ ಶೀತಲ ಸಂಘರ್ಷ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಯುಪಿ ಕೇಡರ್ ಅಧಿಕಾರಿಗಳಲ್ಲೂ ಇದು ಹೆಚ್ಚಾಗಿ ಕಾಣಿಸುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ವಿಭಿನ್ನ ಅಧಿಕಾರ ಕೇಂದ್ರಗಳು ಇದ್ದಾಗಲೆಲ್ಲಾ, ಅಧಿಕಾರಿಗಳು ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸುತ್ತಾರೆ.

2014ರಲ್ಲಿ ಮೋದಿ ಪ್ರಧಾನಿಯಾದ ಸಮಯದಿಂದ ಕೇಂದ್ರ ನಿಯೋಜನೆ ವಿಷಯದಲ್ಲಿ ರಾಜಕೀಯವಾಗಿ ಹೆಚ್ಚು ಗಮನ ಸೆಳೆದದ್ದು ಮತ್ತು ಸದಾ ವಿವಾದಗಳ ಕೇಂದ್ರವಾಗಿರುವುದು ಮೋದಿ ಕೇಡರ್, ಅದರಲ್ಲಿಯೂ ಮುಖ್ಯವಾಗಿ ಗುಜರಾತ್ ಕೇಡರ್. ಪಿಎಂಒದಿಂದ ಹಿಡಿದು, ಪ್ರಮುಖ ಸಚಿವಾಲಯಗಳು, ತನಿಖಾ ಸಂಸ್ಥೆಗಳು ಮತ್ತು ಭಾರತದ ಉನ್ನತ ತೆರಿಗೆ ಸಂಗ್ರಹ ಪ್ರಾಧಿಕಾರದವರೆಗೆ, ದಿಲ್ಲಿಯ ಅಧಿಕಾರ ವಲಯದಲ್ಲಿನ ಅನೇಕ ನಿರ್ಣಾಯಕ ಹುದ್ದೆಗಳು ಗುಜರಾತ್ ಕೇಡರ್‌ನ ಅಧಿಕಾರಿಗಳು ಅಥವಾ ಗುಜರಾತ್ ಜೊತೆ ಸಂಬಂಧವಿರುವ ಅಧಿಕಾರಿಗಳ ಹಿಡಿತದಲ್ಲೇ ಇವೆ. 2014ರಿಂದಲೂ ಮೋದಿ, ಸ್ವತಃ ತಾವೇ ಆರಿಸಿಕೊಳ್ಳುವ ತಮ್ಮದೇ ಅಧಿಕಾರಿಗಳ ತಂಡವನ್ನು ಹೊಂದಿದ್ದಾರೆ. ಗುಜರಾತ್ ಸಿಎಂ ಆಗಿದ್ದ ಕಾಲದಿಂದಲೂ, ವಿಶ್ವಾಸಾರ್ಹ ಅಧಿಕಾರಿಗಳ ತಂಡದ ಕೈಯಲ್ಲಿ ಹೆಚ್ಚಿನ ಜವಾಬ್ದಾರಿ ಇಡುವುದು ಅವರ ಕಾರ್ಯವೈಖರಿಯಾಗಿದೆ. ಅವರು ಆರಿಸಿಕೊಳ್ಳುವ ಅಧಿಕಾರಿಗಳಲ್ಲಿ ಕೆಲವರು ನೇರವಾಗಿ ಅವರಿಗೇ ವರದಿ ಮಾಡುತ್ತಾರೆ.

share
ಆರ್.ಜೀವಿ
ಆರ್.ಜೀವಿ
Next Story
X