Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ‘ದಿಢೀರ್ ರಾಜೀನಾಮೆ’ಗಳ ಸುತ್ತ ಮುತ್ತ...

‘ದಿಢೀರ್ ರಾಜೀನಾಮೆ’ಗಳ ಸುತ್ತ ಮುತ್ತ...

ಆರ್.ಜೀವಿಆರ್.ಜೀವಿ19 Aug 2025 3:26 PM IST
share
‘ದಿಢೀರ್ ರಾಜೀನಾಮೆ’ಗಳ ಸುತ್ತ ಮುತ್ತ...

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯದವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಯಿತು ಎಂಬುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವಿಚಾರ. ಅನೇಕ ಸಲ ಇಂಥ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗುತ್ತವೆ. ಪ್ರಮುಖ ನಾಯಕರೇ ಇದ್ದಕ್ಕಿದ್ದ ಹಾಗೆ ಹೊರಹೋಗುವುದು ನಡೆಯುತ್ತದೆ. ದಿಢೀರ್ ರಾಜೀನಾಮೆಗಳು ಕುತೂಹಲಕ್ಕೆ ಎಡೆ ಮಾಡಿಕೊಡುತ್ತವೆ. ಹಗರಣಗಳಲ್ಲಿ ಸಿಲುಕುವುದು, ವಿವಾದಾತ್ಮಕ ಹೇಳಿಕೆಗಳು, ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಂಥ ಸಂದರ್ಭಗಳಲ್ಲಿ ಹೀಗಾಗುವುದಿದೆ.

ಭಾಗ- 1

ಮತಗಳ್ಳತನದ ಕುರಿತು ರಾಹುಲ್ ಗಾಂಧಿಯವರು ಗಂಭೀರ ಆರೋಪಗಳನ್ನು ಮಾಡಿದಾಗ, ಅವರ ವಿರುದ್ಧವೇ ಮಾತಾಡಿದ್ದಕ್ಕೆ ಕೆ.ಎನ್. ರಾಜಣ್ಣ ತಲೆದಂಡವಾಗಿದೆ. ಸಚಿವ ಸಂಪಟದಿಂದ ಅವರನ್ನು ವಜಾಗೊಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ, ಸಿದ್ದರಾಮಯ್ಯ ಸರಕಾರದ ಇಬ್ಬರು ಬುಡಕಟ್ಟು ಎಸ್‌ಟಿ ಸಚಿವರು ಸ್ಥಾನ ಕಳೆದುಕೊಂಡಂತಾಗಿದೆ. ಈಗಾಗಲೇ ವಾಲ್ಮೀಕಿ ನಿಗಮ ಹಗರಣದಲ್ಲಿ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಈಗ ರಾಜಣ್ಣ ಹೊರಹೋಗಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಈಗ ಎಸ್‌ಟಿ ಸಮುದಾಯದಿಂದ ಸತೀಶ್ ಜಾರಕಿಹೊಳಿ ಒಬ್ಬರೇ ಉಳಿದಂತಾಗಿದೆ ಎಂಬುದು ಕೂಡ ಪ್ರಮುಖವಾಗಿ ಚರ್ಚೆಯಾಗುತ್ತಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಸ್‌ಟಿ ಸಮುದಾಯದಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು. 15 ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ 14 ರಲ್ಲಿ ಕಾಂಗ್ರೆಸ್‌ನವರೇ ಗೆದ್ದಿದ್ದರು. ಹಾಗಾಗಿಯೇ ಸಂಪುಟದಲ್ಲಿ ಆ ಸಮುದಾಯದ ಮೂವರಿಗೆ ಪ್ರಾತಿನಿಧ್ಯ ಕೊಡಲಾಗಿತ್ತು. ಈಗ ಸ್ಥಿತಿ ಬದಲಾಗಿದೆ.

ಅದೇನೇ ಇದ್ದರೂ, ರಾಜಣ್ಣ ಅವರನ್ನು ವಜಾಗೊಳಿಸಿರುವುದು ರಾಜ್ಯ ರಾಜಕೀಯದಲ್ಲಿ, ಕಾಂಗ್ರೆಸ್ ಒಳಗಿನ ಬಣ ರಾಜಕೀಯದ ಹಿನ್ನೆಲೆಯಲ್ಲಿ ಹಲವು ಅರ್ಥಗಳನ್ನು, ಉಹಾಪೋಹಗಳನ್ನು ಹುಟ್ಟುಹಾಕುತ್ತಲೇ ಇದೆ. ಸಿದ್ದರಾಮಯ್ಯನವರು ಅದರ ಬಗ್ಗೆ ಪ್ರತಿಕ್ರಿಯೆಯನ್ನೇ ಕೊಡದಿರುವುದು ಕೂಡ, ಕಾಂಗ್ರೆಸ್ ಒಳಗೆ ಒಂದು ಸ್ಫೋಟಕಾರಕ ಸನ್ನಿವೇಶ ಇದೆ ಎಂಬುದನ್ನು ಸೂಚಿಸುವ ಅಂಶವಾಗಿದೆ.

ಈ ಹೊತ್ತಿನಲ್ಲಿ, ಈ ಹಿಂದೆ ಬಹಳ ಸುದ್ದಿಯಾಗಿದ್ದ ಕೆಲವು ಸಚಿವರ ರಾಜೀನಾಮೆಗಳ ಬಗ್ಗೆ ನೆನಪು ಮಾಡಿಕೊಳ್ಳಬಹುದು.

ಕರ್ನಾಟಕದ ರಾಜಕೀಯ ಇತಿಹಾಸವನ್ನೇ ಕೆದಕಿದರೆ, ವಿವಾದಗಳಿಂದಾಗಿ ಸಚಿವರು ಅಧಿಕಾರ ಕಳೆದುಕೊಂಡ ಇಂತಹ ಹತ್ತಾರು ನಿದರ್ಶನಗಳು ಸಿಗುತ್ತವೆ. ಹಗರಣಗಳ ಆರೋಪ, ಲೈಂಗಿಕ ಆರೋಪಗಳು ಅಥವಾ ಆಡಳಿತಾತ್ಮಕ ವೈಫಲ್ಯಗಳ ಕಾರಣಕ್ಕೆ ಸಚಿವರು ರಾಜೀನಾಮೆ ನೀಡಿದ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ.

ಕೆ.ಎಸ್. ಈಶ್ವರಪ್ಪ ಅವರು ಶೇ. 40 ಕಮಿಷನ್ ಆರೋಪದಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿ, ಸಿ.ಡಿ. ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಎಚ್.ವೈ. ಮೇಟಿ ಅಧಿಕಾರ ಕಳೆದುಕೊಂಡಿದ್ದರು. ಲೋಕಾಯುಕ್ತ ವರದಿಯ ಪರಿಣಾಮವಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದೇ ವರದಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರ ಸಚಿವ ಸ್ಥಾನಕ್ಕೂ ಕುತ್ತು ತಂದಿತ್ತು. ಅತ್ಯಾಚಾರದಂತಹ ಗಂಭೀರ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ಹರತಾಳು ಹಾಲಪ್ಪ ರಾಜೀನಾಮೆ ನೀಡಿದ್ದರು. ನೇಮಕಾತಿ ಹಗರಣದಲ್ಲಿ ರಾಮಚಂದ್ರಗೌಡ ಸಚಿವ ಸ್ಥಾನ ತ್ಯಜಿಸಿದ್ದರು. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಹಾಗೂ ಕೊಲೆ ಪ್ರಕರಣದ ಆರೋಪದಲ್ಲಿ ವಿನಯ್ ಕುಲಕರ್ಣಿ ರಾಜೀನಾಮೆ ನೀಡಿದ್ದರು.

ಇನ್ನು ಕರ್ನಾಟಕದ ಹೊರಗೆ ಪ್ರಮುಖವಾಗಿ, ಇತ್ತೀಚೆಗೆ ತಮಿಳುನಾಡು ಸಚಿವರಿಬ್ಬರ ರಾಜೀನಾಮೆ ವಿಶೇಷವಾಗಿ ಗಮನ ಸೆಳೆದಿತ್ತು. ಮೋದಿ ಸರಕಾರಕ್ಕೆ ಟಿಡಿಪಿ ಇದಕ್ಕೂ ಹಿಂದೆ ಬೆಂಬಲ ವಾಪಸ್ ಪಡೆದಿದ್ದ ಹೊತ್ತಲ್ಲಿನ ರಾಜೀನಾಮೆಗಳು ಸುದ್ದಿಯಾಗಿದ್ದವು. ಗುಡ್ಡಗಾಡು ಪ್ರದೇಶಗಳ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಉತ್ತರಾಖಂಡದ ಸಚಿವರೊಬ್ಬರು ಇದೇ ವರ್ಷ ಮಾರ್ಚ್‌ನಲ್ಲಿ ರಾಜೀನಾಮೆ ನೀಡುವಂತಾಯಿತು. ಸಂವಿಧಾನ ವಿರೋಧಿ ಹೇಳಿಕೆಗಾಗಿ ಕೇರಳ ಸಚಿವರೊಬ್ಬರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಮೋದಿ ಸಂಪುಟದ ಸಚಿವೆಯೊಬ್ಬರು ರಾಜೀನಾಮೆ ನೀಡಿದ್ದು ಒಂದು ಮಹತ್ವದ ಬೆಳವಣಿಗೆಯಾಗಿತ್ತು. 2008ರ ಮುಂಬೈ ದಾಳಿ ನಂತರ ಇಬ್ಬರು ಪ್ರಮುಖ ನಾಯಕರು ನೈತಿಕ ಹೊಣೆ ಹೊತ್ತು ತಲೆದಂಡ ನೀಡುವಂತಾಗಿತ್ತು. ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡು ಯುಪಿಎ ಅವಧಿಯ ಕೆಲವು ಮಂತ್ರಿಗಳು ರಾಜೀನಾಮೆ ನೀಡಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು.

ಬಿ. ನಾಗೇಂದ್ರ -2024

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣದಲ್ಲಿ ನಾಗೇಂದ್ರ ಹೆಸರು ಕೇಳಿಬಂತು. ನಿಗಮದ ಅಧಿಕಾರಿಯೊಬ್ಬರು, ಸಚಿವರ ಮೌಖಿಕ ಸೂಚನೆ ಕಾರಣದಿಂದ ಒತ್ತಡವಿತ್ತು ಎಂದು ಡೆತ್ ನೋಟ್‌ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದರು.

ಕೆ.ಎಸ್. ಈಶ್ವರಪ್ಪ -2022

ಶೇ. 40 ಕಮಿಷನ್ ಕೇಳುತ್ತಿದ್ದಾರೆಂದು ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಸಾವಿಗೆ ಸಚಿವರೇ ಕಾರಣ ಎಂದು ಅವರು ಸಂದೇಶ ಕಳುಹಿಸಿದ್ದರು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ನಂತರ ಈಶ್ವರಪ್ಪ ರಾಜೀನಾಮೆ ಸಲ್ಲಿಸಿದರು.

ರಮೇಶ್ ಜಾರಕಿಹೊಳಿ -2021

ಉದ್ಯೋಗದ ಆಮಿಷವೊಡ್ಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂತು. ಸಿ.ಡಿ.ಯೊಂದು ಬಹಿರಂಗವಾಯಿತು. ಈ ಹಗರಣ ಸರಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತು. ಕಡೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರು.

ಕೆ.ಜೆ. ಜಾರ್ಜ್ -2016

ಡಿವೈಎಸ್‌ಪಿ ಎಂ.ಕೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ, ಸಚಿವರಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಾದ ಕೂಡಲೇ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಎಚ್.ವೈ. ಮೇಟಿ -2016

ಸಹಾಯ ಕೇಳಿ ಬಂದ ಮಹಿಳೆಯೊಂದಿಗೆ ಸಲಿಗೆಯಿಂದಿದ್ದರು ಎನ್ನಲಾದ ವೀಡಿಯೋ ಬಿಡುಗಡೆಯಾಗಿತ್ತು. ಈ ಪ್ರಕರಣದಿಂದಾಗಿ ಸರಕಾರಕ್ಕೆ ಮುಜುಗರ ಉಂಟಾಗಿ, ಮೇಟಿ ರಾಜೀನಾಮೆ ನೀಡಿದರು.

ಬಿ. ಎಸ್. ಯಡಿಯೂರಪ್ಪ - 2011

ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣಗಳ ಕುರಿತು ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಅವರನ್ನು ದೋಷಿ ಎಂದು ಉಲ್ಲೇಖಿಸಲಾಗಿತ್ತು. ಪಕ್ಷದ ಕೇಂದ್ರ ನಾಯಕತ್ವದ ಒತ್ತಡದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ -2011

ಲೋಕಾಯುಕ್ತ ವರದಿ ಬಳ್ಳಾರಿ ಸಹೋದರರ ಅಕ್ರಮ ಗಣಿಗಾರಿಕೆ ಸಾಮ್ರಾಜ್ಯವನ್ನು ಬಯಲು ಮಾಡಿತ್ತು. ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಇವರಿಬ್ಬರೂ ರಾಜೀನಾಮೆ ನೀಡಬೇಕಾಯಿತು.

ಹರತಾಳು ಹಾಲಪ್ಪ -2010

ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ತಕ್ಷಣವೇ ರಾಜೀನಾಮೆ ನೀಡಿದರು. ನಂತರ ನ್ಯಾಯಾಲಯದಿಂದ ಆರೋಪಮುಕ್ತರಾದರು.

ರಾಮಚಂದ್ರಗೌಡ -2010

ವೈದ್ಯಕೀಯ ಕಾಲೇಜುಗಳಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣದಲ್ಲಿ ಹೆಸರು ಕೇಳಿಬಂದಿದ್ದರಿಂದ, ತೀವ್ರ ಒತ್ತಡದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ಸೆಂಥಿಲ್ ಬಾಲಾಜಿ, ಕೆ. ಪೊನ್ಮುಡಿ ರಾಜೀನಾಮೆ - ಎಪ್ರಿಲ್ 27, 2025

ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಸಂಪುಟಕ್ಕೆ ಸೆಂಥಿಲ್ ಬಾಲಾಜಿ ಮತ್ತು ಕೆ. ಪೊನ್ಮುಡಿ ಎಪ್ರಿಲ್ 27ರಂದು ರಾಜೀನಾಮೆ ನೀಡಿದರು. ಅದರಲ್ಲೂ ಸೆಂಥಿಲ್ ರಾಜೀನಾಮೆ ನೀಡಿದ್ದು ಎರಡನೇ ಬಾರಿಯಾಗಿತ್ತು. ಸೆಂಥಿಲ್ ಅವರು ಉದ್ಯೋಗಕ್ಕಾಗಿ ಹಣ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆ ಎದುರಿಸುತ್ತಿದ್ದರು. ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಅವರು ಸಂಪುಟಕ್ಕೆ ಮರು ಸೇರ್ಪಡೆಗೊಂಡಿದ್ದರು. ಆಗ ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂಕೋರ್ಟ್ ಎರಡು ಆಯ್ಕೆಗಳನ್ನು ನೀಡಿತ್ತು. ಒಂದೇ, ತಕ್ಷಣ ಸಚಿವ ಸ್ಥಾನ ತೊರೆದು ಸ್ವತಂತ್ರರಾಗಬೇಕು, ಇಲ್ಲವೇ ಮತ್ತೆ ಸಚಿವರಾಗಿ ಜೈಲು ಸೇರಬೇಕು ಎಂದು ಕಟುವಾಗಿ ಹೇಳಿತ್ತು. ಸೆಂಥಿಲ್ ಬಾಲಾಜಿ ಈ ಮೊದಲು ಜೂನ್ 2023ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈ.ಡಿ. ಬಂಧನದ ಬಳಿಕ ಖಾತೆ ರಹಿತ ಸಚಿವರಾಗಿ ಮುಂದುವರಿದಿದ್ದರು. ನಂತರ 2024ರ ಫೆಬ್ರವರಿ 12ರಂದು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. 2024ರ ಸೆಪ್ಟಂಬರ್ 26ರಂದು ಸುಪ್ರೀಂ ಕೋರ್ಟ್ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ನೀಡಿದ ಕೂಡಲೇ ಮತ್ತೆ ಸಂಪುಟ ಸೇರಿದ್ದರು. ಆದರೆ, ಸುಪ್ರೀಂಕೋರ್ಟ್ ಸೆಂಥಿಲ್ ಬಾಲಾಜಿ ಅವರ ಸಂಪುಟ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಸೆಂಥಿಲ್ ಬಾಲಾಜಿ ಸಚಿವರಾಗಿ ಮುಂದುವರಿಯುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಅವರು ವಿಚಾರಣೆಯ ಹಳಿ ತಪ್ಪಿಸಬಹುದು ಎಂದು 2025ರ ಎಪ್ರಿಲ್ 23ರಂದು ನ್ಯಾಯಪೀಠ ಹೇಳಿತ್ತು. ಸೆಂಥಿಲ್ ಬಾಲಾಜಿ ಸಚಿವರಾಗಿ ಮುಂದುವರಿದಲ್ಲಿ, ಅವರಿಗೆ ಜಾಮೀನು ನೀಡಿದ ಕ್ರಮ ನಮ್ಮ ಪ್ರಮಾದ ಎಂದು ಒಪ್ಪಿಕೊಂಡು, ಜಾಮೀನು ಆದೇಶ ಹಿಂಪಡೆಯುತ್ತೇವೆ ಎಂದಿತ್ತು. ಅವರಿಗೆ ಅರ್ಹತೆಯ ಮೇಲೆ ಜಾಮೀನು ನೀಡಿಲ್ಲ, ಸಂವಿಧಾನದ 21ನೇ ವಿಧಿಯ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಪರವಾಗಿ ನ್ಯಾಯಾಲಯ ನಿಂತಿದ್ದರಿಂದ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಎ.ಎಸ್. ಓಕಾ ಹೇಳಿದ್ದರು. ಇಷ್ಟಾದ ಬಳಿಕ, ಮತ್ತೊಮ್ಮೆ ರಾಜೀನಾಮೆ ನೀಡುವುದು ಸೆಂಥಿಲ್ ಪಾಲಿಗೆ ಅನಿವಾರ್ಯವಾಯಿತು.

ಇನ್ನು ಪೊನ್ಮುಡಿ ಅವರು ಶೈವರು, ವೈಷ್ಣವರು ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ವಿವಾದಕ್ಕೆ ಒಳಗಾಗಿದ್ದರು. ಅವರ ಅವಹೇಳನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತನ್ನ ರಿಜಿಸ್ಟ್ರಿಗೆ ಸ್ವಯಂಪ್ರೇರಿತ ರಿಟ್ ಅರ್ಜಿ ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸ್ವಾತಂತ್ರ್ಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಈ ನಿರ್ದೇಶನ ನೀಡಿದ್ದರು. ಅವಹೇಳನಕಾರಿ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಎಲ್ಲಾ ಸಾಂವಿಧಾನಿಕ ಹುದ್ದೆಗಳಿಂದ ಅನರ್ಹಗೊಳಿಸುವಂತೆ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪ್ರತಿಕ್ರಿಯಿಸಲು ತಮಿಳುನಾಡು ಸರಕಾರ ಮತ್ತು ಪೊನ್ಮುಡಿ ಅವರಿಗೆ ಜೂನ್ 5ರವರೆಗೆ ಕೋರ್ಟ್ ಸಮಯ ನೀಡಿತ್ತು. ಹೆಚ್ಚಿನ ವಿಚಾರಣೆಗಾಗಿ ಜೂನ್ 19ರಂದು ಈ ಪ್ರಕರಣವನ್ನು ಪಟ್ಟಿ ಮಾಡುವಂತೆ ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದ್ದರು. ಆದರೆ, ಅದರ ನಡುವೆಯೇ ಪೊನ್ಮುಡಿ ಎಪ್ರಿಲ್ 27ರಂದು ರಾಜೀನಾಮೆ ನೀಡಿದರು.

2018ರ ಟಿಡಿಪಿ ವರ್ಸಸ್ ಬಿಜೆಪಿ ಕಥೆ ಮತ್ತು ರಾಜೀನಾಮೆ - ಮಾರ್ಚ್ 2018

2018 ರ ಮಾರ್ಚ್‌ನಲ್ಲಿ ಕೇಂದ್ರದ ಎನ್‌ಡಿಎ ಸರಕಾರದಿಂದ ಹೊರಬರಲು ಟಿಡಿಪಿ ನಿರ್ಧರಿಸಿದ ನಂತರ, ಬಿಜೆಪಿ ಸಚಿವರು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಟಿಡಿಪಿ ಸಚಿವರು ಮೋದಿ ಸಂಪುಟದಿಂದ ಹೊರಬಂದಿದ್ದರು. ಆಗ, ಎನ್‌ಡಿಎ ಸರಕಾರದಿಂದ ಹೊರಬರುವ ನಿರ್ಧಾರವನ್ನು ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ ಬಳಿಕ, ಅವರ ಸಂಪುಟದ ಬಿಜೆಪಿ ಸಚಿವರು ಮಾರನೇ ದಿನವೇ ತಮ್ಮ ರಾಜೀನಾಮೆ ನೀಡಿದ್ದರು. ಅದಾದ ಸ್ವಲ್ಪ ಸಮಯದಲ್ಲೇ ಕೇಂದ್ರದಲ್ಲಿ ಮೋದಿ ಸಂಪುಟದ ಭಾಗವಾಗಿದ್ದ ಇಬ್ಬರು ಟಿಡಿಪಿ ನಾಯಕರು ಸಹ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ವಿಮಾನಯಾನ ಸಚಿವರಾಗಿದ್ದ ಅಶೋಕ್ ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾಗಿದ್ದ ವೈ.ಎಸ್. ಚೌಧರಿ ರಾಜೀನಾಮೆ ಘೋಷಿಸಿದ್ದರು. ಆಂಧ್ರ ಪ್ರದೇಶದಲ್ಲಿ ನಾಯ್ಡು ಸಂಪುಟದಲ್ಲಿದ್ದ ಬಿಜೆಪಿಯ ಕಾಮೆನೇನಿ ಶ್ರೀನಿವಾಸ್ ಮತ್ತು ಪಿ. ಮಾಣಿಕ್ಯಲ ರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 14ನೇ ಹಣಕಾಸು ಆಯೋಗದ ಶಿಫಾರಸಿನ ಬಗ್ಗೆ ತಲೆದೋರಿದ್ದ ಭಿನ್ನಾಭಿಪ್ರಾಯ ಈ ಬೆಳವಣಿಗೆಗೆ ಕಾರಣವಾಗಿತ್ತು. ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದಾಗ, ಬಿಜೆಪಿ ಮತ್ತು ಟಿಡಿಪಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದವು. ಮೋದಿ ಸರಕಾರ ರಾಜ್ಯವನ್ನು ನಿರ್ಲಕ್ಷಿಸಿದೆ ಎಂಬ ಚಂದ್ರಬಾಬು ನಾಯ್ಡು ಆರೋಪವನ್ನು ಬಿಜೆಪಿ ನಿರಾಕರಿಸಿತ್ತು.

share
ಆರ್.ಜೀವಿ
ಆರ್.ಜೀವಿ
Next Story
X