ಭಟ್ಕಳ| ಲೋಕ್ ಅದಾಲತ್; 1,464 ಪ್ರಕರಣಗಳು ಇತ್ಯರ್ಥ

ಭಟ್ಕಳ: ಭಟ್ಕಳ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 1,464 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡು 7,11,17,729 ರೂಪಾಯಿಗಳು ಪರಿಹಾರ ಹಾಗೂ ದಂಡದ ರೂಪದಲ್ಲಿ ವಸೂಲಿ ಆಗಿವೆ.
ಈ ಲೋಕ್ ಅದಾಲತ್‌ನಲ್ಲಿ ಜೆ.ಎಂ.ಎಫ್.ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 230, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 550, ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 594 ಪ್ರಕರಣಗಳು ಬಗೆಹರಿದಿವೆ.
ಹಿರಿಯ ಸಿವಿಲ್ ನ್ಯಾಯಾಲಯದ ಪ್ರಕರಣಗಳಿಂದ ಒಟ್ಟು 1,04,16,148 ವಸೂಲಿ ಆಗಿದೆ. ರಸ್ತೆ ಅಪಘಾತದ ಒಂದು ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ದಂಪತಿಗೆ 11.5 ಲಕ್ಷ ಪರಿಹಾರ ನೀಡಲಾಗಿದೆ. ಈ ನ್ಯಾಯಾಲಯ ದಿಂದ ಒಟ್ಟು 68,12,584 ವಸೂಲಿ ನಡೆದಿದೆ.
ಪ್ರಧಾನ ಸಿವಿಲ್ ನ್ಯಾಯಾಲಯದ ಅಮಲ್ ಜಾರಿ ಪ್ರಕರಣಗಳಿಂದ 2,53,89,260, ಚೆಕ್ ಪ್ರಕರಣಗಳಿಂದ 78,59,098, ಹಾಗೂ ಇತರೆ ಪ್ರಕರಣಗಳಿಂದ 1,32,000 ವಸೂಲಿ ಮಾಡಲಾಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಅಮಲ್ ಜಾರಿ ಪ್ರಕರಣಗಳಿಂದ 1,31,56,791, ಚೆಕ್ ಪ್ರಕರಣಗಳಿಂದ 42,77,598, ಹಾಗೂ ಇತರೆ ಪ್ರಕರಣಗಳಿಂದ 1,81,050 ವಸೂಲಿ ಮಾಡಲಾಗಿದೆ.
ಈ ಸಂದರ್ಭ ನ್ಯಾಯಾಧೀಶರಾದ ಕಾಂತ ಕರುಣಿ, ದೀಪಾ ಅರಳಗುಂಡಿ, ಧನವತಿ, ಸಂಧಾನಕಾರರಾದ ಮಂಜುನಾಥ್ ಚಂದ್ರಕಾಂತ್ ಭಟ್, ರವೀಂದ್ರ ನಾಯ್ಕ್, ಸಹನಾ ಮೊಗೇರ್, ವಕೀಲರ ಸಂಘದ ಅಧ್ಯಕ್ಷ ಈಶ್ವರ್ ನಾಯ್ಕ್, ಸರಕಾರಿ ಅಭಿಯೋಜಕರು ಹಾಗೂ ಹಲವಾರು ವಕೀಲರು ಉಪಸ್ಥಿತರಿದ್ದರು.