ಕರಾಟೆ: ಅಂಜುಮನ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಇಮ್ಷಾ ಏರುಮ್ ರಾಜ್ಯ ಮಟ್ಟಕ್ಕೆ ಆಯ್ಕೆ

ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮಹಿಳಾ ಪದವಿ ಪೂರ್ವ ಪೂರ್ವ ಕಾಲೇಜಿನ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಇಮ್ಷಾ ಏರುಮ್ ಅವರು ಅಂಕೋಲಾ ದಲ್ಲಿ ನಡೆದ ಜಿಲ್ಲಾ ಮಟ್ಟದ ಪಿಯು ಕರಾಟೆ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರಾಟೆ ವಿಭಾಗದಲ್ಲಿ ಅಂಜುಮನ್ ಸಂಸ್ಥೆ ಮತ್ತು ಮುಸ್ಲಿಮ್ ಸಮುದಾಯದ ಭಟ್ಕಳದ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮೊದಲ ವಿದ್ಯಾರ್ಥಿನಿಯಾಗಿದ್ದಾಳೆ. ಇಮ್ಷಾ ಏರುಮ್ ಅವರ ಸಾಧನೆಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಾಂಬದ್ರಿ,ಕಾಲೇಜಿನ ಪ್ರಾಂಶುಪಾಲೆ ಪರ್ಝಾನ ಮೊಹತೆಶಮ್ ಹಾಗೂ ತರಬೇತುದಾರ ಎಕೆಎಫ್‌ಎ ಕರಾಟೆ ಅಕಾಡೆಮಿಯ ಅಮ್ರ್ ಶಾಬಂದ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.
Next Story