ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ನಾಲ್ವರ ವಿರುದ್ಧ ಪ್ರಕರಣ

ಹಿರಿಯಡ್ಕ, ಸೆ.16: ಪೆರ್ಡೂರು ಗ್ರಾಮದ ಪಕ್ಕಾಲು ಎಂಬಲ್ಲಿ ಸೆ.15ರಂದು ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ನಾಲ್ವರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಡೂರು ಕೆನಟ್ಟಿಬೈಲುವಿನ ಕುಶಾಲ್ ನಾಯ್ಕ್(54), ಕಟಪಾಡಿಯ ಮಹಾನ್ ರಾವ್(31), ಪೆರ್ಡೂರು ಪಕ್ಕಾಲಿನ ಯುವರಾಜ್(35), ಪೆರ್ಡೂರು ರಥಬೀದಿಯ ಅಭಿಲಾಷ್(35) ಎಂಬವರು ಸಾರ್ವಜನಿಕ ಸ್ಥಳದಲ್ಲಿ ಕೈ ಕೈ ಮಿಲಾಯಿಸಿ ಅವಾಚ್ಯ ಶಬ್ಧಗಳಿಂದ ಬೈದು ಗಲಾಟೆ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವುದಾಗಿ ದೂರಲಾಗಿದೆ.
Next Story