ಕುಂದಾಪುರ | ತಂದೆ ಹಾಕಿದ ಕೇಸು ವಾಪಾಸ್ ಪಡೆಯುವಂತೆ ಬಾಲಕನಿಗೆ ಹಲ್ಲೆ; ಪ್ರಕರಣ ದಾಖಲು

ಕುಂದಾಪುರ: ತಂದೆ ಹಾಕಿದ ಕೇಸು ವಾಪಾಸ್ಸು ಪಡೆಯುವಂತೆ ಬಾಲಕನಿಗೆ ಹಲ್ಲೆ ನಡೆಸಿರುವ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲ್ಲೂರು ಗ್ರಾಮ ಪವನ್(13) ಎಂಬವರು ಡಿ.5ರಂದು ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದು, ಈ ವೇಳೆ ಮೈದಾನದ ಹತ್ತಿರ ತಮ್ಮಯ್ಯ ಎಂಬವರು ಬಾಲಕನನ್ನು ಅಡ್ಡಗಟ್ಟಿ, ತಲೆಗೆ ಮತ್ತು ಕೆನ್ನೆಗೆ ಕೈಯಿಂದ ಹೊಡೆದು ನಿನ್ನ ಅಪ್ಪನಿಗೆ ಹೋಗಿ ಹೇಳು ಮೊದಲಿನ ಕೇಸು ವಾಪಾಸ್ಸು ತೆಗೆಯಬೇಕು ಇಲ್ಲದಿದ್ದರೆ ನಿನ್ನ ಅಪ್ಪನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿದ್ದಾನೆ ಎಂದು ದೂರಲಾಗಿದೆ.
Next Story





