ಭವಿಷ್ಯದಲ್ಲಿ ಮಹತ್ತರ ಸಾಧನೆಯತ್ತ ಹ್ಯೂಮನಾಯ್ಡ್ ರೋಬೊಟಿಕ್ ತಂತ್ರಜ್ಞಾನ!

ಹ್ಯೂಮನಾಯ್ಡ್ ರೋಬೊಟ್‌ನ ಬಳಕೆಗಳು ಮತ್ತು ಮಿತಿಗಳು
ಬಳಕೆಗಳು
1) ಕೈಗಾರಿಕಾ ಕ್ಷೇತ್ರಗಳಲ್ಲಿ
2) ಅರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ
3) ಗ್ರಾಹಕ ಸೇವೆ ಮತ್ತು ಆತಿಥ್ಯ
4) ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ
5) ಬಾಹ್ಯಾಕಾಶ ಸಂಶೋಧನೆ
6) ಮನರಂಜನೆ ಮತ್ತು ಮಾಧ್ಯಮ
7) ಗೃಹ ಸಹಾಯ ಮತ್ತು ವೈಯಕ್ತಿಕ ಬಳಕೆ
8) ವಿಪತ್ತು ಪ್ರತಿಕ್ರಿಯೆ ಮತ್ತು ತುರ್ತು ಸೇವೆಗಳು
ಮಿತಿಗಳು
1) ದುಬಾರಿ ವೆಚ್ಚ
2) ಭದ್ರತಾ ಸಮಸ್ಯೆಗಳು
3) ಭಾವನೆಗಳ ಕೊರತೆ
4) ನೈತಿಕ ಹಾಗೂ ಉದ್ಯೋಗ ಸಮಸ್ಯೆಗಳು
5) ತಾಂತ್ರಿಕ ಸಮಸ್ಯೆಗಳು
ಮಾನವನಂತೆ ಹೋಲುವ(ಹ್ಯೂಮನಾಯ್ಡ್) ರೋಬೊಟಿಕ್‌ಗಳ ವಿಶ್ವದ ಮೊದಲ ಒಲಿಂಪಿಕ್ ಕ್ರೀಡಾಕೂಟವನ್ನು ಚೀನಾ ದೇಶದಲ್ಲಿ ಆಯೋಜನೆ ಮಾಡಲಾಯಿತು. ಅಮೆರಿಕ, ಜಪಾನ್, ಜರ್ಮನಿ ಸೇರಿದಂತೆ ಸುಮಾರು 16 ದೇಶಗಳಿಂದ 500 ರೋಬೊಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದವು, ಓಟದ ಸ್ಪರ್ಧೆ, ಫುಟ್‌ಬಾಲ್, ಬಾಕ್ಸಿಂಗ್ ಹೀಗೆ ಹಲವು ಬಗೆಯ ಕ್ರೀಡೆಗಳಲ್ಲಿ ಭಾಗವಹಿಸಿದವು, ಈ ಮೂಲಕ ವಿಶ್ವದ ಮೊದಲ ಹ್ಯೂಮನಾಯ್ಡ್ ರೋಬೊಟಿಕ್ ಕ್ರೀಡೆಗಳನ್ನು ಆಯೋಜನೆ ಮಾಡುವ ಮುಖಾಂತರ ಚೀನ ದೇಶವು ವಿಶ್ವದ ಗಮನ ಸೆಳೆದಿದೆ. ಹ್ಯೂಮನಾಯ್ಡ್ ರೋಬೊಟಿಕ್ ತಂತ್ರಜ್ಞಾನದ ಬಳಕೆ ಮತ್ತು ನವನವೀನವಾದ ರೋಬೊಟ್‌ಗಳ ಅಭಿವೃದ್ಧಿಯಲ್ಲಿ ಹೊಸ ಛಾಪು ಮೂಡಿಸಿದೆ. ಚೀನಾ ದೇಶವು ಬರುವ 2026ರೊಳಗೆ ಕೃತಕ ಗರ್ಭದಾರಣೆ ಮಾಡುವ ಹ್ಯೂಮನಾಯ್ಡ್ ರೋಬೊಟ್‌ಗಳನ್ನು ಅಭಿವೃದ್ಧಿ ಪಡಿಸಲು ಸಿದ್ಧವಾಗಿವೆ ಎಂದು ಘೋಷಿಸಿದೆ. ಈ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ...
ಅಂದಹಾಗೆ ಹ್ಯೂಮನಾಯ್ಡ್ ರೋಬೊಟ್‌ಗಳು ಎಂದರೇನು? ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ..
ಹ್ಯೂಮನಾಯ್ಡ್ ರೋಬೊಟ್‌ಗಳು ಮನುಷ್ಯರಂತೆ ಚಲಿಸಲು ಮತ್ತು ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಯಂತ್ರಗಳಾಗಿವೆ. ಇವುಗಳು ಮಾನವರಂತೆ ತಲೆ, ದೇಹ, ಎರಡು ತೋಳುಗಳು ಮತ್ತು ಎರಡು ಕಾಲುಗಳನ್ನು ಹೊಂದಿದ್ದು, ಇದರಿಂದ ಇವುಗಳು ಮಾನವನಂತೆ ನಡೆಯಲು, ವಸ್ತುಗಳನ್ನು ಎತ್ತಿಕೊಳ್ಳಲು ಮತ್ತು ಮಾನವನ ರೀತಿ ದೈಹಿಕ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಇವುಗಳ ವಿನ್ಯಾಸವು ಮಾನವನಂತೆ ಹೋಲುವುದರಿಂದ ಮಾನವನ ಬಹುತೇಕ ಕೆಲಸಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಸಾಂಪ್ರದಾಯಿಕ ರೋಬೊಟ್‌ಗಳಿಗಿಂತ ಭಿನ್ನವಾಗಿ, ಇವುಗಳು ವಿವಿಧ ಕಾರ್ಯಗಳನ್ನು ನಿರ್ವಹಿಸಬಲ್ಲವು.
ಸಾಂಪ್ರದಾಯಿಕ ಅಥವಾ ಕೈಗಾರಿಕಾ ರೋಬೊಟ್‌ಗಳಿಗಿಂತ ಅವುಗಳು ಹೇಗೆ ಭಿನ್ನವಾಗಿವೆ?
ಹೆಚ್ಚಿನ ಕೈಗಾರಿಕಾ ರೋಬೊಟ್‌ಗಳನ್ನು ವೆಲ್ಡಿಂಗ್, ಪ್ಯಾಕೇಜಿಂಗ್ ಅಥವಾ ಜೋಡಣೆಯಂತಹ ನಿರ್ದಿಷ್ಟ ಕಾರ್ಯಗಳಿಗಾಗಿ ನಿರ್ಮಿಸಲಾಗಿದೆ. ಅವು ಒಂದೇ ಸ್ಥಳದಲ್ಲಿ ಉಳಿಯುತ್ತವೆ ಮತ್ತು ಪೂರ್ವ ಪ್ರೋಗ್ರಾಮ್ ಮಾಡಲಾದ ಚಲನೆಗಳನ್ನು ಅನುಸರಿಸುತ್ತವೆ. ಮತ್ತೊಂದೆಡೆ, ಹ್ಯೂಮನಾಯ್ಡ್ ರೋಬೊಟ್‌ಗಳು ಮುಕ್ತವಾಗಿ ಚಲಿಸಬಹುದು ಮತ್ತು ಬದಲಾಗುತ್ತಿರುವ ಪರಿಸರದಲ್ಲಿ ಕೆಲಸ ಮಾಡಬಹುದು. ಹೊಂದಿಕೊಳ್ಳುವಿಕೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.
ಹ್ಯೂಮನಾಯ್ಡ್ ರೋಬೊಟ್‌ಗಳು ಸಿಸ್ಟಮ್ ಹೇಗಿರುತ್ತದೆ?
ಹ್ಯೂಮನಾಯ್ಡ್ ರೋಬೊಟ್‌ಗಳು ಚಲಿಸಲು, ಗ್ರಹಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಧಾರಿತ ತಂತ್ರಜ್ಞಾನವನ್ನು ಅವಲಂಬಿಸಿವೆ. ಅವುಗಳಿಗೆ ಶಕ್ತಿ ನೀಡುವ ಅಂಶಗಳು ಇಲ್ಲಿವೆ:
ಯಾಂತ್ರಿಕ ರಚನೆ:
ಹ್ಯೂಮನಾಯ್ಡ್ ರೋಬೊಟ್‌ನ ದೇಹವು ಮಾನವ ಅಂಗರಚನಾಶಾಸ್ತ್ರವನ್ನು ಹೋಲುತ್ತದೆ. ಮಾನವನ ಹಾಗೆ ಇವುಗಳಿಗೆ ತಲೆ, ದೇಹ, ಕೈಗಳು ಮತ್ತು ಕಾಲುಗಳನ್ನು ಜೋಡಿಸಲಾಗಿದ್ದು, ಸಾಂದರ್ಭಿಕವಾಗಿ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇವುಗಳ ದೇಹ ಅಲ್ಯೂಮಿನಿಯಂ ಮತ್ತು ಕಾರ್ಬನ್ ಫೈಬರ್‌ನಂತಹ ಹಗುರವಾದ ವಸ್ತುಗಳಿಂದ ಮಾಡಲ್ಪಟ್ಟಿವೆ.
ಇವುಗಳಲ್ಲಿರುವ ಆಕ್ಟಿವೇಟರ್‌ಗಳು ಮತ್ತು ಮೋಟರ್‌ಗಳು ಸ್ನಾಯುಗಳು ಮತ್ತು ಕೀಲುಗಳಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ರೋಬೊಟ್‌ಗಳು ಚಲಿಸಲು ಸಾಧ್ಯವಾಗುತ್ತದೆ. ವಿದ್ಯುತ್, ಹೈಡ್ರಾಲಿಕ್ ಅಥವಾ ನ್ಯೂಮ್ಯಾಟಿಕ್ ಆಕ್ಟಿವೇಟರ್‌ಗಳು ಕೈಕಾಲುಗಳಿಗೆ ಶಕ್ತಿ ನೀಡುತ್ತವೆ.
ಸೆನ್ಸರ್ಸ್ ಮತ್ತು ಗ್ರಹಿಕೆ ವ್ಯವಸ್ಥೆಗಳು
ರೋಬೊಟ್‌ಗಳು ಮಾನವರಂತೆ ನೋಡಲು, ಕೇಳಿಸಿಕೊಳ್ಳಲು ಮತ್ತು ಗ್ರಹಿಸಲು ವಿಶೇಷವಾದ ಸಾಧನಗಳನ್ನು ಅಳವಡಿಸಲಾಗಿರುತ್ತದೆ.
ಮುಖ್ಯವಾಗಿ ಕ್ಯಾಮರಾಗಳು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತವೆ, ವಸ್ತು ಗುರುತಿಸುವಿಕೆ ಮತ್ತು ನೋಡಲು ಸಹಾಯ ಮಾಡುತ್ತವೆ.
ಮೈಕ್ರೊಫೋನ್‌ಗಳು ಶಬ್ದಗಳನ್ನು ಪತ್ತೆ ಮಾಡುತ್ತವೆ.
ರೋಬೊ ಕೈಗಳಲ್ಲಿ ಅಳವಡಿಸಲಾದ ಸೆನ್ಸರ್‌ಗಳು ಮಾನವನಂತೆ ನಿಖರವಾದ ಹಿಡಿತವನ್ನು ಸಾಧಿಸಲು ಸಹಾಯಮಾಡುತ್ತದೆ.
ಐಎಂಯುಗಳು (ಇನರ್ಶಿಯಲ್ ಮೆಷರ್ಮೆಂಟ್ ಯೂನಿಟ್‌ಗಳು) ರೋಬೊಟ್ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಗೈರೊಸ್ಕೋಪ್‌ಗಳು ಮತ್ತು ಆಕ್ಸಿಲರೊಮೀಟರ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ.
ನಿಯಂತ್ರಣ ವ್ಯವಸ್ಥೆಗಳು
ರೋಬೊಟ್‌ನಲ್ಲಿನ ಸಿಪಿಯು ಮಾನವನ ಮೆದುಳಿನ ಹಾಗೆ ಕಾರ್ಯನಿರ್ವಹಿಸುತ್ತದೆ ಇದು ಸಂವೇದಕಗಳಿಂದ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಚಲನೆಗಳನ್ನು ನಿಯಂತ್ರಿಸುತ್ತದೆ.
ವಿದ್ಯುತ್ ಪೂರೈಕೆ
ಹ್ಯೂಮನಾಯ್ಡ್ ರೋಬೊಟ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ನಾವೋ ರೋಬೊಟ್ 48.6 ವ್ಯಾಟ್ಸ್ ಬ್ಯಾಟರಿಯನ್ನು ಬಳಸುತ್ತದೆ. ಇದು ಪ್ರತೀ ಚಾರ್ಜ್‌ಗೆ 90 ನಿಮಿಷಗಳ ಕಾಲ ಮಾನವನ ಹಾಗೆ ಕೆಲಸ ನಿರ್ವಹಿಸುತ್ತದೆ.
ಹ್ಯೂಮನಾಯ್ಡ್ ರೋಬೊಟ್‌ಗಳು ಹೇಗೆ ಚಲಿಸುತ್ತವೆ?
ಹ್ಯೂಮನಾಯ್ಡ್ ರೋಬೊಟ್ ಬೈಪೆಡಲ್ ಲೊಕೊಮೊಷನ್ ಬಳಸಿ ಮನುಷ್ಯನಂತೆ ನಡೆಯುತ್ತದೆ. ಸಮತೋಲನದಲ್ಲಿರಲು, ಅದು ನಿರಂತರವಾಗಿ ತನ್ನ ದ್ರವ್ಯರಾಶಿ ಕೇಂದ್ರವನ್ನು ಸರಿಹೊಂದಿಸುತ್ತದೆ ಮತ್ತು ಬೀಳುವುದನ್ನು ತಡೆಯಲು ತನ್ನ ಸೊಂಟವನ್ನು ಬದಲಾಯಿಸುತ್ತದೆ.
ಹ್ಯೂಮನಾಯ್ಡ್ ರೋಬೊಟ್‌ನ ಇತಿಹಾಸ
1810ರಲ್ಲಿ ಪ್ರಥಮ ಬಾರಿಗೆ ಮಾನವನ ಹೋಲುವ ರೋಬೊಟ್‌ಗಳನ್ನು ಜರ್ಮನಿಯಲ್ಲಿ ಅಭಿವೃದ್ಧಿ ಪಡಿಸಲಾಯಿತು.
ನಂತರ 1939ರಲ್ಲಿ ಇಲೆಕ್ಟ್ರೊ ಎಂಬ ರೋಬೊಟ್ ಅನ್ನು ಅಮೆರಿಕ ಅಭಿವೃದ್ಧಿ ಪಡಿಸಿದರೂ ಅವುಗಳು ಸಂಪೂರ್ಣ ಮಾನವ ರೋಬೊಟ್ ಎನ್ನುವ ಮಟ್ಟದಲ್ಲಿರಲಿಲ್ಲ. ನಂತರ 1973ರಲ್ಲಿ ಜಪಾನಿನಲ್ಲಿ ಅಭಿವೃದ್ಧಿ ಪಡಿಸಿದ WABOT-1 ವಿಶ್ವದ ಮೊದಲ ಸಂಪೂರ್ಣ ಗಾತ್ರದ ಮಾನವನಾಕಾರದ ರೋಬೊಟ್ ಎಂದು ಪರಿಗಣಿಸಲಾಯಿತು.