Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಅನುಭವಗಳ ಮುಟ್ಟಿ ನೋಡುವ ‘ಟಚ್ ಮೀ ನಾಟ್’

ಅನುಭವಗಳ ಮುಟ್ಟಿ ನೋಡುವ ‘ಟಚ್ ಮೀ ನಾಟ್’

ಮುಹಮ್ಮದ್ ಶರೀಫ್ ಕಾಡುಮಠಮುಹಮ್ಮದ್ ಶರೀಫ್ ಕಾಡುಮಠ9 Sept 2025 2:55 PM IST
share
ಅನುಭವಗಳ ಮುಟ್ಟಿ ನೋಡುವ ‘ಟಚ್ ಮೀ ನಾಟ್’

ಅನುಭವಕ್ಕೆ ನೇರವಾಗಿ ದಕ್ಕುವ, ನೋಟಕ್ಕೆ ಸಿಗುವ ಸಂಗತಿಗಳು ಮನಸ್ಸಿನಲ್ಲಿ ಸಂಕಟಗಳಾಗಿ, ಸಂತಸಗಳಾಗಿ ಉಳಿದಾಗ ಅವನ್ನು ಹೇಳಿಕೊಳ್ಳಲು, ಬಿಡುಗಡೆ ಗೊಳಿಸಲು ಸಾಹಿತ್ಯ, ಕಲೆ ಒಂದು ದಾರಿಯ ಹಾಗೆ ಕಾಣಿಸುತ್ತದೆ. ಒಂಭತ್ತು ಭಿನ್ನ ಕತೆಗಳನ್ನು ಒಳಗೊಂಡ ‘ಟಚ್ ಮೀ ನಾಟ್’ ಅಂತಹ ಕಂಡ- ಉಂಡ ಅನುಭವಗಳ ಕಥನ ರೂಪ ಗುಚ್ಛ.

ಕಥೆಗಾರ ಮುನವ್ವರ್ ಜೋಗಿಬೆಟ್ಟು ಅವರ ಎರಡನೇ ಕಥಾಸಂಕಲನವಿದು. ಮುಖ್ಯವಾಹಿನಿಯಿಂದ ಸರಿದು ನಿಂತ ಅಥವಾ ದೂರ ಸರಿಸಲಾದ ಜನರ ಬದುಕು ಇಲ್ಲಿನ ಹೆಚ್ಚಿನ ಕಥೆಗಳ ಕೇಂದ್ರವಸ್ತು. ಶೀರ್ಷಿಕೆ ನೋಡಿ ಅಸ್ಪಶ್ಯತೆಗೆ ಸಂಬಂಧಿಸಿದ ಕಥೆ ಇರಬಹುದು ಎಂದು ಭಾವಿಸುವಂತೆ ಮಾಡುವ ‘ಟಚ್ ಮೀ ನಾಟ್’ ಎನ್ನುವ ಕಥೆ ‘ಗುಡ್ ಟಚ್- ಬ್ಯಾಡ್ ಟಚ್’ ಎನ್ನುವ ಪರಿಕಲ್ಪನೆಗೆ ಸಂಬಂಧಿಸಿದ್ದು. ಹಾಗಂತ ಇದು ಹೆಣ್ಣೊಬ್ಬಳ ನೋವಿನ ಕಥೆ ಇರಬಹುದೆಂದು ಓದಲು ಶುರು ಮಾಡಿದರೆ, ಅದೂ ಅಲ್ಲ. ಮಗಳನ್ನು ಕಳೆದುಕೊಂಡ ಕೂಲಿ ಕಾರ್ಮಿಕನೊಬ್ಬ ತಾನು ಕೆಲಸ ಮಾಡುವ ಮನೆಯ ದಣಿಗಳ ಮಗುವಿನಲ್ಲಿ ತನ್ನ ಮಗಳನ್ನು ಕಾಣುವ ಬಗೆ ಅಪಾರ್ಥಕ್ಕೆ ಈಡಾಗಿ ಆ ಮಗುವೇ ಹೆತ್ತವರಲ್ಲಿ ದೂರು ಹೇಳಿ ಅವನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಸನ್ನಿವೇಶದ ಕಥೆ. ಈ ಆಯಾಮದಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಎನ್ನುವ ಪರಿಕಲ್ಪನೆಯನ್ನು ಸ್ಪರ್ಶಿಸಿದ್ದು ಸಕಾಲಿಕವೇ ಹೌದು.

ಮಲದ ಗುಂಡಿ ಸ್ವಚ್ಛಗೊಳಿಸುವ ಕುಟುಂಬದ ಕಥೆ ‘ಗೆರೆಗೆ ಸಿಗದ ನದಿ’. ಅಪ್ಪ ಮಲದ ಗುಂಡಿಯೊಳಗೆ ಕೆಲಸ ಮಾಡುವಾಗ ಉಸಿರುಗಟ್ಟಿ ಸತ್ತ ಮೇಲೆ, ಆತನ ಮಗ ಶಾಲಾ ಬಾಲಕ ತಾರಾನಾಥ ಆ ಕೆಲಸವನ್ನು ಅನಿವಾರ್ಯವಾಗಿ ಮುಂದುವರಿಸಬೇಕಾಗುತ್ತದೆ. ಕಾನೂನು ಪ್ರಕಾರ ಮಲದ ಗುಂಡಿ ಸ್ವಚ್ಛ ಮಾಡುವ ಕೆಲಸವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಯಂತ್ರಗಳ ಮೂಲಕ ಅಂತಹ ಕೆಲಸ ನಡೆಸಲಾಗುತ್ತದೆ. ಮಲ ಬಾಚುವುದಕ್ಕೆ ಕಾರ್ಮಿಕರನ್ನು ಬಳಸಬಾರದು ಎನ್ನುವ ಕಟ್ಟುನಿಟ್ಟಿನ ಕಾನೂನು ಇರುವುದರಿಂದ ಈ ಕಥೆಯ ಪ್ರಸ್ತುತತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ.

‘ಮುತ್ತಿಗೆ’ ಕಥೆಯಲ್ಲಿ ಒಂದು ಕಡೆ ಅಧಿಕಾರದ ದರ್ಪ, ವಿಕೃತ ಸಂತೋಷದ ಮನಸ್ಥಿತಿಯನ್ನು ಅನಾವರಣಗೊಳಿಸಿದರೆ, ಇನ್ನೊಂದೆಡೆ ಅಧಿಕಾರದಲ್ಲಿರುವವನ, ಆದೇಶ ನೀಡುವವನ ಜಾತಿ, ಧರ್ಮ ಗುರಿ ಮಾಡಿ ಕೊನೆಯ ಅಸ್ತ್ರದಂತೆ ಬಳಕೆ ಮಾಡುವ ಒಬ್ಬ ಸಾಮಾನ್ಯ ಉದ್ಯೋಗಿಯ ಯೋಚನೆ ಓಡುವ ಬಗೆಯನ್ನು ತೆರೆದಿಡುತ್ತದೆ.

ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ಗೀಳು ಅಂಟಿಸಿಕೊಂಡ ಯುವ ಸಮೂಹ, ಒಂದಕ್ಕೊಂದು ನಂಟಿನ ಹಾಗೆ ಗಾಂಜಾದಂತಹ ಅಮಲು ಪದಾರ್ಥಗಳ ಸೇವನೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಕುರಿತ ಕಥೆ ‘ಬಾಜಿ’. ಹೇಳಬೇಕಾದ್ದನ್ನು ಹೇಳಿದೆಯೆಂದಾದರೂ ಈ ಕಥೆಯನ್ನು ಇನ್ನಷ್ಟು ತೀವ್ರಗೊಳಿಸುವ, ಬಿಗಿಯಾಗಿಸುವ ಪ್ರಯತ್ನ ಮಾಡಬಹುದಿತ್ತು.

ಬಾಲ್ಯದಲ್ಲಿ ಧರ್ಮ ಕಾರಣಕ್ಕೆ ಶಾಲೆಯಲ್ಲಿ ಅನುಭವಿಸಿದ ಅವಮಾನ, ಕಹಿ ಘಟನೆಗಳ ಮೆಲುಕು ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’. ಮುಸ್ಲಿಮ್ ಸಮುದಾಯದ ಬಹುತೇಕ ವಿದ್ಯಾರ್ಥಿಗಳು ಹಿಂದೆ ಸಾಮಾನ್ಯವಾಗಿ ಅನುಭವಿಸಿದ ಸಂಕಟಗಳನ್ನು ಇಲ್ಲಿಯೂ ಕಾಣಬಹುದು. ನಿರ್ದಾಕ್ಷಿಣ್ಯವಾಗಿ ಶಿಕ್ಷಕರು ತೋರಿಸುತ್ತಿದ್ದ ಅಸಹನೆ, ದ್ವೇಷ ಸ್ವತಃ ಅವರೇ ಮರೆತರೂ ವಿದ್ಯಾರ್ಥಿಗಳು ಎಂದೂ ಮರೆಯದ ಹಾಗೆ ಅಚ್ಚೊತ್ತಿರುತ್ತದೆ ಎನ್ನುವುದು ಗಮನಾರ್ಹ.

‘ಇಫ್ತಾರ್’ ಎನ್ನುವ ಕಥೆ ಕಡುಬಡತನದ ಬೇಗೆಯಲ್ಲಿ ಬೇಯುವ ಕುಟುಂಬವೊಂದರ ಚಿತ್ರಣ ತೆರೆದಿಡುತ್ತದೆ. ಮಸೀದಿಯಲ್ಲಿ ಇಫ್ತಾರಿನ ವೇಳೆ ಸಿಗುವ ಹಣ್ಣು, ಅನ್ನವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಕೊಂಡು ಮನೆಗೆ ಕೊಂಡುಹೋಗುವ ಹುಡುಗನನ್ನು ಹಿಂಬಾಲಿಸುವ ಒಬ್ಬ ಯೂಟ್ಯೂಬರ್, ಅವನ ಮನೆಯ ಬಡತನ ಕಂಡು ದಂಗಾಗುತ್ತಾನೆ. ಇನ್ನೊಬ್ಬರ ನೋವು ಸಂಕಟಗಳನ್ನು ಕೇವಲ ‘ಕಂಟೆಂಟ್’ ಆಗಿಸಿಕೊಂಡು ‘ವ್ಲಾಗ್’ ಮಾಡುವ ಯೂಟ್ಯೂಬರ್‌ಗಳು ಸಂವೇದನಾರಹಿತವಾಗಿ ನಡೆದುಕೊಳ್ಳಬಾರದು ಎನ್ನುವ ಸಂದೇಶವೂ ಇಲ್ಲಿ ಸೂಕ್ಷ್ಮವಾಗಿ ಅಡಕವಾಗಿದೆ.

ಬೀದಿ ನಾಯಿಯೊಂದು ಕೊಡುವ ಕಾಟ, ಅದನ್ನು ಊರವರು ನಡೆಸಿಕೊಳ್ಳುವ ರೀತಿಯ ಬಗ್ಗೆ ವಿವರಿಸುವ ‘ಕಂತ್ರಿ ನಾಯಿ’ ಎನ್ನುವ ಕಥೆ ಪರಿಣಾಮಕಾರಿಯಾಗಿದೆ. ಮನುಷ್ಯನ ಆಸೆಗಳ ನಡುವೆ ನಾಯಿ ಎನ್ನುವುದು ‘ನಾಯಿಗಿಂತಲೂ ಕಡೆ’ಯೆನಿಸುವುದನ್ನು ಕಾಣಬಹುದು. ಮೂಕಪ್ರಾಣಿಯೊಂದು ಹೇಳದೆ ಉಳಿಯುವ ಕಥೆ ಕೂಡ ಇದರಲ್ಲಿ ಗಮನಾರ್ಹವೆನಿಸುತ್ತದೆ.

ಬ್ರೇಕಿಂಗ್ ನ್ಯೂಸ್‌ನ ಹುಚ್ಚಿನಲ್ಲಿ ತೆಗೆದುಕೊಳ್ಳುವ ವಿವೇಚನಾರಹಿತವಾದ ನಿರ್ಧಾರ ಏನೆಲ್ಲ ಅವಘಡಗಳಿಗೆ ಕಾರಣವಾಗಬಹುದು ಎನ್ನುವುದನ್ನು ವ್ಯಕ್ತಗೊಳಿಸುವ ಕಥೆ ‘ಕೇರೆಹಾವು’. ಅಷ್ಟೇ ಅಲ್ಲ, ತನ್ನ ವೇತನ ಹೆಚ್ಚಿಸುವಂತೆ ಮಾಡಲು ಪರದಾಡುವ ಪತ್ರಕರ್ತನೊಬ್ಬನಿಗೆ ಬ್ರೇಕಿಂಗ್ ನ್ಯೂಸ್ ಆಗಿ ಕಾಣುವ ಸಂಗತಿ, ಪರಿಸ್ಥಿತಿ ಕೈಮೀರಿದ ಮೇಲೆ ಪಶ್ಚಾತ್ತಾಪವಾಗಿ ಕಾಡುವ ರೀತಿ ನಮ್ಮ ಆದ್ಯತೆಗಳ ಬಗ್ಗೆ ಮರುವಿಮರ್ಶೆ ಮಾಡಬೇಕಾದ ಅಗತ್ಯವನ್ನು ತಿಳಿಸುತ್ತದೆ. ಪತ್ರಿಕೋದ್ಯಮದ ಆತುರ, ಬ್ರೇಕಿಂಗ್ ನ್ಯೂಸ್, ನಮ್ಮಲ್ಲೇ ಮೊದಲು ಎನ್ನುವ ಪೈಪೋಟಿ ಸಮಾಜವನ್ನು ಎತ್ತ ಕೊಂಡೊಯ್ಯಬಹುದು ಎನ್ನುವ ಬಗ್ಗೆಯೂ ಈ ಕಥೆ ಮಾತನಾಡುತ್ತದೆ.

ಕಳ್ಳನೊಬ್ಬ ತನ್ನ ‘ವೃತ್ತಿ ಬದುಕಿನ’ ಕೊನೆಯ ಕಳ್ಳತನಕ್ಕೆ ಹೊರಟು, ಆ ಮನೆಯವರ ನಾಟಕವನ್ನು ನಂಬಿ ಮರುಳಾಗಿ ಪೊಲೀಸರ ಅತಿಥಿಯಾಗುವ ಕಥೆ ‘ಮುಖವಾಡ’. ಕಳ್ಳನೊಳಗಿರುವಷ್ಟು ಒಳ್ಳೆಯತನ, ಹೃದಯ ಶ್ರೀಮಂತಿಕೆ, ಬಂಗಲೆಗಳನ್ನು ಕಟ್ಟಿ ಅದರೊಳಗೆ ಕೂರುವವರಿಗೆ ಇರುವುದಿಲ್ಲ ಎನ್ನುವುದನ್ನು, ದೊಡ್ಡವರ ಸಣ್ಣತನವನ್ನು ಈ ಕಥೆ ಚೆನ್ನಾಗಿ ತೋರಿಸುತ್ತದೆ. ಇದು ಸಂಕಲನದ ಕೊನೆಯ ಕಥೆ.

‘ಸೋಲು, ನೋವುಗಳೇ ತಮ್ಮ ಬದುಕು, ಅನುಭವಗಳಿಗೆ ದಕ್ಕಿರುವುದು’ ಎಂದು ಕಥೆಗಾರ ಮುನವ್ವರ್ ಕೃತಿಯ ಆರಂಭದಲ್ಲಿಯೇ ಹೇಳಿರುವಂತೆ, ಇಲ್ಲಿನ ಎಲ್ಲಾ ಕಥೆಗಳೂ ಸಂಕಟ, ವಿಷಾದದ ಚಿತ್ರಣಗಳನ್ನೇ ಒಳಗೊಂಡಿವೆ. ಎರಡು ಕಥೆಗಳಲ್ಲಿ ಕೇರಳ-ಕರ್ನಾಟಕದ ಬಾಂಧವ್ಯ, ಪರಸ್ಪರ ಕಾಲೆಳೆಯುವ ಗುಣವನ್ನೂ ಕಟ್ಟಿಕೊಡಲಾಗಿದೆ. ಗಡಿ ಪ್ರದೇಶದಲ್ಲಿ ಸಮಸ್ಯೆಗಳನ್ನೇ ಮುಖ್ಯವಾಗಿಸದೆ, ಶತ್ರುಗಳಂತೆ ಕಾಣದೆ, ಸಾಮರಸ್ಯದಿಂದ ಬದುಕುವುದು ಹೇಗೆ ಎನ್ನುವುದನ್ನು ಇದು ಹೇಳುತ್ತದೆ.

share
ಮುಹಮ್ಮದ್ ಶರೀಫ್ ಕಾಡುಮಠ
ಮುಹಮ್ಮದ್ ಶರೀಫ್ ಕಾಡುಮಠ
Next Story
X