Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಪೀಳಿಗೆಗಳ ಅಂತರಂಗ

ಪೀಳಿಗೆಗಳ ಅಂತರಂಗ

ವಾರ್ತಾಭಾರತಿವಾರ್ತಾಭಾರತಿ10 Aug 2025 10:20 AM IST
share
ಪೀಳಿಗೆಗಳ ಅಂತರಂಗ

ಭಾರತದಲ್ಲಿ ಸುಮಾರು ನಾಲ್ಕು ಐದು ಪೀಳಿಗೆಗಳ ಹಿಂದೆ ಆತ್ಮಹತ್ಯೆ ಎಂಬುದು ದೊಡ್ಡವರ ವಿಷಯ ಮಾತ್ರವಾಗಿತ್ತು. ಸುಮಾರು ಎರಡು ಮೂರು ಪೀಳಿಗೆಗಳ ಹಿಂದಿನಿಂದ ಅದು ಹದಿನೆಂಟು ವಯಸ್ಸಿನ ಕೆಳಗಿನ ಮಕ್ಕಳಿಗೂ ಮುಟ್ಟಿದೆ. ಮನೋವೈಜ್ಞಾನಿಕವಾಗಿ ಸಮಾಜದಲ್ಲಿ ಇದೊಂದು ಎಚ್ಚರಿಕೆಯ ಕರೆಗಂಟೆ. ಮಕ್ಕಳಲ್ಲಿ ಆತ್ಮಹತ್ಯೆ ಎಂಬುದನ್ನು ಕೇವಲ ಆ ಮಗುವಿನ ವೈಯಕ್ತಿಕ ವಿಷಯವಾಗಿ ಮಾತ್ರ ಕಾಣಲಾಗದು. ಸಾಮಾಜಿಕ, ಶೈಕ್ಷಣಿಕ ಮತ್ತು ಭಾವ-ಸಂಸ್ಕೃತಿಯೊಂದಿಗೆ ಪೋಷಕತ್ವ ಮತ್ತು ಪೀಳಿಗೆಗಳ ಅಂತರಗಳ ಬಿಕ್ಕಟ್ಟು ಕೂಡಾ ಪ್ರಮುಖ ಪಾತ್ರವಹಿಸುತ್ತವೆ.

ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿಯೇ ಗಮನಿಸಿದರೆ ಸಾಮಾನ್ಯ ಜನಜೀವನದ ಗತಿ ವೇಗದಿಂದ ಕೂಡಿರಲಿಲ್ಲ. ತಮ್ಮ ತಮ್ಮ ಜೀವನದ ಆಗುಹೋಗುಗಳನ್ನು ನೋಡಿಕೊಂಡು ಹೋಗುವುದರಲ್ಲಿ ಗಮನ ಭಂಗವಾಗುವಂತಹ ವಿಷಯಗಳು ತೀರಾ ಕಡಿಮೆಯಾಗಿದ್ದವು. ಜೊತೆಗೆ ವ್ಯಕ್ತಿ ಮತ್ತು ಅವನ ಕೆಲಸಗಳಿಗೆ ಬೇರೆಯವರ ಜೊತೆಗೆ ಮಾಡುವಂತಹ ಹೋಲಿಕೆಯೂ ತೀರಾ ಕಡಿಮೆಯಾಗಿತ್ತು. ಸಾಮಾನ್ಯವಾಗಿ ಸಮಾಜದ ಕಡೆಯಿಂದ ಹಿರಿಯರಿಗೇ ಹೆಚ್ಚಿನ ಹೊಣೆಯ ಹೊರೆ. ಕುಟುಂಬದ ಮತ್ತು ಸಮಾಜದ ಸಂಘರ್ಷಗಳಲ್ಲಿ ಮಕ್ಕಳ ಪಾತ್ರ ಗೌಣ ಮತ್ತು ಸಾಮಾನ್ಯವಾಗಿ ಮೌನ ಪ್ರೇಕ್ಷಕ.

ಪೀಳಿಗೆಗಳ ಮನಸ್ಥಿತಿಗಳನ್ನು ರೂಪಿಸುವುದು ಬರೀ ಕುಟುಂಬ ಮತ್ತು ನಿಕಟವರ್ತಿಗಳು ಮಾತ್ರವಲ್ಲ. ಆಯಾ ಪೀಳಿಗೆಯ ಮಕ್ಕಳು ಬೌದ್ಧಿಕವಾಗಿ ಗ್ರಹಿಸಲು ಪ್ರಾರಂಭಿಸುವ ಹೊತ್ತಿಗೆ ಪರಿಚಿತವಾಗುವ ಮಾಹಿತಿ ಮತ್ತು ತಂತ್ರಜ್ಞಾನದ ಪಾತ್ರವೂ ಕೂಡಾ ಪ್ರಮುಖವಾಗಿರುತ್ತದೆ.

ತೊಂಭತ್ತರ ದಶಕದಿಂದೀಚೆಗೆ ಭಾರತದಲ್ಲಿ ಮಕ್ಕಳ ಜೈವಿಕ ಮತ್ತು ಮಾನಸಿಕ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಗಳ ಒತ್ತಡಗಳು ಅವರನ್ನು ಬಾಧಿಸಲಾರಂಭಿಸಿತು. ಸಾಲದ್ದಕ್ಕೆ ಅವು ಹೆಚ್ಚಿನ ವೇಗವನ್ನೂ ಪಡೆಯತೊಡಗಿದವು. ಇಪ್ಪತ್ತರ ಶತಮಾನ ದಾಟಿದ ಮೇಲಂತೂ ಮಾಹಿತಿ ಮತ್ತು ತಂತ್ರಜ್ಞಾನದ ಪರಿಚಯ ಮತ್ತು ಪ್ರಭಾವ ಸಂಪೂರ್ಣವಾಗಿ ಕುದಿಬಿಂದು ತಲುಪಿತು.

ಸಮಾಜ ಶೈಕ್ಷಣಿಕ ಮತ್ತು ಔದ್ಯೋಗಿಕ ವಿಷಯದಲ್ಲಿ ಸಮಾಜ ಸ್ಪರ್ಧಾತ್ಮಕವಾಯಿತು. ಶಾಲೆಯಲ್ಲಿ ಮಕ್ಕಳು ಕಲಿಯುವ ವಿಷಯಗಳು ಹೆಚ್ಚಾಗುವುದರ ಜೊತೆಗೆ ಪೋಷಕರ ಪ್ರತಿಷ್ಠೆ ಮತ್ತು ಅಪೇಕ್ಷೆಗಳನ್ನು ಉಳಿಸುವ ಜವಾಬ್ದಾರಿಯೂ ಕೂಡಾ ಅಪರೋಕ್ಷವಾಗಿ ಮಕ್ಕಳ ಮೇಲೆ ಹೇರಲಾಯಿತು. ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಕೊಡುವ ಪೋಷಕರ ಅಪೇಕ್ಷೆ ಮತ್ತು ಪಡೆಯುವ ಶಿಕ್ಷಣ ಸಂಸ್ಥೆಗಳ ನಿರೀಕ್ಷೆಗಳೆರಡರ ಭಾರವೂ ಮಕ್ಕಳ ಮೇಲಾಯಿತು. ದುಬಾರಿ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಉತ್ತರದಾಯಿತ್ವವನ್ನು ಹೊಂದಿರುವುದರಿಂದ ಮಗು ತನ್ನ ಸಾಮರ್ಥ್ಯವನ್ನು ಮೀರಿ ಫಲ ನೀಡುವ ಪ್ರಯತ್ನ ಮಾಡಬೇಕಿದೆ. ತಾವು ವ್ಯಯಿಸುವ ಅಪಾರ ಹಣಕ್ಕೆ ಪ್ರತಿಯಾಗಿ ಮಗುವಿನ ಉತ್ಕೃಷ್ಟ ಮಟ್ಟವನ್ನು ಬಯಸುವ ಪೋಷಕರದ್ದೂ ಮತ್ತೊಂದು ಒತ್ತಡ. ಅದರೊಟ್ಟಿಗೆ ಪೋಷಕರ ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಪ್ರತಿಷ್ಠೆಗಳ ಎತ್ತಿ ಹಿಡಿಯುವಿಕೆಯ ಭರದಲ್ಲಿ ಮಗುವಿನ ಸೂಕ್ಷ್ಮವಾದ ಭಾವನಾತ್ಮಕ ಅಗತ್ಯಗಳನ್ನು ಗಮನಿಸುವುದೇ ಇಲ್ಲ.

ಮಾಹಿತಿ ಮತ್ತು ತಂತ್ರಜ್ಞಾನಗಳ ಪರಿಚಯ ಮತ್ತು ಪ್ರಭಾವಗಳಿಂದ ರೂಪುಗೊಳ್ಳುವ ಮನಸ್ಥಿತಿಗಳು ಹೆಚ್ಚು ಹೆಚ್ಚು ವಿಷಯಗಳ ಜೊತೆಗೆ ಸಂಪರ್ಕ ಪಡೆದುಕೊಂಡಂತೆ ಹೆಚ್ಚು ಹೆಚ್ಚು ಗಮನ ಭಂಗ, ತಮ್ಮ ಬದುಕಿನ ಅಗತ್ಯದ ಆಯ್ಕೆಯ ವಿಷಯಗಳಲ್ಲಿ ಹಾಗೂ ಆದ್ಯತೆಗಳಲ್ಲಿ ಗೊಂದಲಗಳು ಉಂಟಾಗಿ ಅದರ ಫಲವಾಗಿ ಒತ್ತಡಗಳು ಮತ್ತು ಆತಂಕಗಳಿಗೆ ಒಳಗಾಗುತ್ತಾರೆ. ಇದರಿಂದ ಮನಸ್ಸಿನ ಭಾವತಂತುಗಳ ವಿನ್ಯಾಸ, ಅನುಭವ ಮತ್ತು ಅಭಿವ್ಯಕ್ತಿಗಳು ಬದಲಾಗುತ್ತವೆ. ಇದರಿಂದಲೇ ಹಿರಿಯರ ಮತ್ತು ಮಕ್ಕಳ ನಡುವಿನ ಭಾವ ಸಂವಾದದಲ್ಲಿ ಬಹು ದೊಡ್ಡ ಅಂತರವನ್ನು ಕಾಣುತ್ತೇವೆ. ಮಕ್ಕಳಿಗೆ ತಮ್ಮ ಮೇಲಿನ ಒತ್ತಡ ಮತ್ತು ಆತಂಕದ ವಿಷಯಗಳು ಭಾವನಾತ್ಮಕ ನೆಲೆಯಲ್ಲಿ ಬಹಳ ತೀವ್ರವಾಗಿರುತ್ತವೆ. ಆದರೆ ಹಿರಿಯರು ತಾವು ಆ ವಯಸ್ಸಿನಲ್ಲಿ ಹಾದುಹೋಗದ ಭಾವುಕ ತೂಬುಗಳು ಆ ಮಕ್ಕಳದ್ದಾಗಿರದ ಕಾರಣದಿಂದ ಅವರ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ.

ಸಾಮಾನ್ಯವಾಗಿ ಈಗಿನ ಪೋಷಕರು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ತಮ್ಮ ಅಜ್ಞಾನ ಮತ್ತು ರೂಢಿಯ ಕಾರಣದಿಂದ ಮಾಡುವ ತಪ್ಪುಗಳಿಂದಾಗಿ ತಮ್ಮ ಮಕ್ಕಳ ಭಾವನಾತ್ಮಕ ಅಗತ್ಯಗಳನ್ನು ಗಮನಿಸುವುದಿಲ್ಲ. ತಮ್ಮ ಬಾಲ್ಯವನ್ನು ತಮ್ಮ ಮಕ್ಕಳ ಬಾಲ್ಯದೊಂದಿಗೆ ಹೋಲಿಸುವುದು, ಸುಮಾರು ಮೂವತ್ತು ಅಥವಾ ಮೂವತ್ತೈದು ವರ್ಷಗಳ ಹಿಂದಿನ ತಮ್ಮ ಬಾಲ್ಯದ ಭಾವನೆ ಮತ್ತು ಚಿಂತನೆಗಳು ತಮ್ಮ ಮಕ್ಕಳ ಬಾಲ್ಯದಲ್ಲಿ ಪ್ರತಿಫಲಿಸಲೆಂದು ನಿರೀಕ್ಷಿಸುವುದು ಮತ್ತು ತಮ್ಮ ವರ್ತನೆಗಳನ್ನು ಇವರಲ್ಲಿ ಅಪೇಕ್ಷಿಸುವುದು ಪೀಳಿಗೆಗಳ ವಿಷಯದಲ್ಲಿ ಒಂದು ಅವೈಚಾರಿಕ ಮತ್ತು ಅವೈಜ್ಞಾನಿಕ ಧೋರಣೆ. ಈಗಿನ ಮಕ್ಕಳ ಆಂತರಿಕ ಸಂಘರ್ಷಗಳು ಮತ್ತು ಒತ್ತಡಗಳು ಬೇರೆಯೇ ಆಗಿದ್ದು ಹಿರಿಯರ ನಿರೀಕ್ಷೆಯ ಕಾರಣದಿಂದ ಅವರಲ್ಲಿ ಅಪರಾಧ ಪ್ರಜ್ಞೆ ಮೂಡುವ ಸಾಧ್ಯತೆಗಳಿರುತ್ತವೆ.

ತಮ್ಮ ಬಾಲ್ಯದ ಆಟಪಾಟಗಳನ್ನು ಮಧುರ ನೆನಪುಗಳಾಗಿ ಪರಿವರ್ತಿಸಿಕೊಂಡಿರುವ ಪೋಷಕರು ನಿನಗೆ ಓದುವುದು ಬಿಟ್ಟರೆ ಬೇರೆ ಏನಿದೆ? ಎಂದು ಕೇಳುವ ಮೂಲಕ ತಮ್ಮೆಲ್ಲಾ ಕಹಿ ಅನುಭವಗಳನ್ನು ಮರೆತಿರುವ ಜಾಣತನದ ತಂತ್ರವನ್ನು ಅನುಸರಿಸುತ್ತಿರುತ್ತಾರೆ. ಅವರು ತಮ್ಮ ಮಕ್ಕಳ ಭಾವುಕ ಸಂಘರ್ಷಗಳನ್ನು, ಒತ್ತಡ ಮತ್ತು ಆತಂಕಗಳನ್ನು ಗೌರವಿಸುವುದಿರಲಿ, ಗುರುತಿಸುವುದರಲ್ಲಿಯೇ ವಿಫಲರಾಗಿರುತ್ತಾರೆ. ಇದರಿಂದ ಮಕ್ಕಳು ತಮ್ಮ ಗೋಳನ್ನು ಕೇಳುವವರಿಲ್ಲ ಎಂಬ ಆಲೋಚನೆಗೆ ಬರುವುದೇ ಅಲ್ಲದೇ ದೈಹಿಕವಾಗಿ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರದ ಕಾರಣ ತಾವು ನಿರ್ಲಕ್ಷ್ಯಕ್ಕೆ ಒಳಗಾದವರೆಂದು ಭಾವಿಸತೊಡಗುತ್ತಾರೆ. ಇದು ಮುಂದುವರಿದಂತೆ ಅವರ ಭಾವನಾತ್ಮಕ ಸಮಸ್ಯೆಗಳು ಹೆಚ್ಚುತ್ತಾ ಉಸಿರುಗಟ್ಟಿಸತೊಡಗುತ್ತದೆ. ಅದು ಮುಂದುವರಿದಂತೆ ಮಕ್ಕಳಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕಗಳು ಒಡಮೂಡಿ ಅವರು ತಮ್ಮ ವಯೋಸಹಜವಾಗಿ ಹೊಂದಬೇಕಾದ ಅನ್ವೇಷಣಾಗುಣವನ್ನು, ಆಸಕ್ತಿ, ಕುತೂಹಲ ಮತ್ತು ನಲಿಯುತ್ತಾ ಕಲಿಯುವ ಚಟುವಟಿಕೆಗಳಿಂದ ಹೊರತಾಗಿ ಅನಗತ್ಯ ಮತ್ತು ಅನಾರೋಗ್ಯಕರ ಚೌಕಟ್ಟಿನಲ್ಲಿ ನರಳುವ ಪೀಳಿಗೆಯಾಗಿ ಬದಲಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X