Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಅವೈಜ್ಞಾನಿಕ ಮನಸ್ಥಿತಿಗೆ ವೈಜ್ಞಾನಿಕ...

ಅವೈಜ್ಞಾನಿಕ ಮನಸ್ಥಿತಿಗೆ ವೈಜ್ಞಾನಿಕ ಕಾರಣಗಳು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್17 Aug 2025 3:16 PM IST
share
ಅವೈಜ್ಞಾನಿಕ ಮನಸ್ಥಿತಿಗೆ ವೈಜ್ಞಾನಿಕ ಕಾರಣಗಳು

ಮೌಢ್ಯಾಚರಣೆ ಮಾಡುವ ಮತ್ತು ಅವೈಜ್ಞಾನಿಕವಾಗಿ ಚಿಂತಿಸುವ ಹಾಗೂ ವರ್ತಿಸುವ ಜನರ ಬಗ್ಗೆ ವೈಜ್ಞಾನಿಕ ಮತ್ತು ವೈಚಾರಿಕವಾಗಿ ಚಿಂತಿಸುವ ಮತ್ತು ವರ್ತಿಸುವ ಜನರು ಕನಲುತ್ತಾರೆ. ಇವರ್ಯಾಕೆ ಹೀಗೆ ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ರೇಗುತ್ತಾರೆ, ದೂರುತ್ತಾರೆ ಮತ್ತು ದೂಷಿಸುತ್ತಾರೆ. ಆದರೆ ಅವರನ್ನು ಮರುಕದಿಂದ ನೋಡುವುದರಲ್ಲಿ ವಿಫಲರಾಗುತ್ತಾರೆ. ಕಾರಣವನ್ನು ತಿಳಿಯುವುದರಲ್ಲಿ ಹಿಮ್ಮೆಟ್ಟುತ್ತಾರೆ.

ನಿಜ ಹೇಳಬೇಕೆಂದರೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಹೊಂದುವುದು ಆಯಾ ವ್ಯಕ್ತಿಯ ಪರಿಶ್ರಮ, ಆಸಕ್ತಿ, ಆಯ್ಕೆ ಮತ್ತು ಅಭ್ಯಾಸದ ಆಧಾರದಲ್ಲಿರುತ್ತದೆ. ಅವೈಚಾರಿಕ ಮತ್ತು ಅವೈಜ್ಞಾನಿಕ ವರ್ತನೆ ಮತ್ತು ಚಿಂತನೆಗಳು ಅನಾಯಾಸವಾಗಿ ಮತ್ತು ಸ್ವಾಭಾವಿಕವಾಗಿ ಅವರಿಗೆ ಬಂದಿರುತ್ತದೆ.

ಸ್ವಾಭಾವಿಕವಾಗಿ ಎಂದು ನಾನು ಹೇಳುತ್ತಿರುತ್ತಿ ರುವುದು ಪದ ಬಳಕೆಯಲ್ಲಿ ತಪ್ಪಾಗಿ ಅಲ್ಲ. ಪ್ರಜ್ಞಾಪೂರ್ವಕವಾಗಿ ಮತ್ತು ವೈಜ್ಞಾನಿಕವಾಗಿಯೇ ಸ್ವಾಭಾವಿಕ ಎಂಬ ಪದವನ್ನು ಬಳಸುತ್ತಿದ್ದೇನೆ. ಮೌಢ್ಯ ಎನ್ನುವುದು ಬಹಳ ಸುಲಭವಾಗಿ ಮನಸ್ಸನ್ನು ಆವರಿಸುತ್ತದೆ.

ಮೌಢ್ಯ ಎನ್ನುವುದು ಅಥವಾ ಅವೈಜ್ಞಾನಿಕ ಅಥವಾ ಅತಾರ್ಕಿತ ಚಿಂತನೆಗಳು ಎನ್ನುವುದನ್ನು ಅರಿವಾಗ್ರಹ ಅಥವಾ ಕಾಗ್ನಿಟಿವ್ ಬಯಾಸ್‌ಗಳಿಂದ, ಸಮಾಜ ಮತ್ತು ಸಂಸ್ಕೃತಿಗಳು ರೂಪಿಸಿರುವ ಕ್ರಮಗಳಿಂದ, ಭಾವನಾತ್ಮಕ ಅಗತ್ಯಗಳಿಂದ ರೂಪುಗೊಂಡಿರುತ್ತವೆ.

ಸೋಮಾರಿ ಮನಸ್ಸು

ಸ್ವಾಭಾವಿಕವಾಗಿ ನಮ್ಮ ಮೆದುಳು ಶಕ್ತಿ ವ್ಯಯ ಮಾಡುವುದರಲ್ಲಿ ಜಿಪುಣ. ಪರಿಶ್ರಮ ಪಡುವುದಕ್ಕೆ ಅದಕ್ಕೆ ಅಷ್ಟೇನೂ ಒಲವಿಲ್ಲ. ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವುದಕ್ಕೆ ತಾನು ಪ್ರಯತ್ನ ಪಡಬೇಕು. ಯಾವುದೋ ಒಂದು ವಿಷಯವನ್ನು ಅನುಮಾನಿಸುವುದು, ಅದನ್ನು ಭಿನ್ನ ಆಯಾಮಗಳಿಂದ ನೋಡಲು, ಅದನ್ನು ಇರುವುದನ್ನು ಬಿಟ್ಟು ಬೇರೆ ದಿಕ್ಕುಗಳಿಂದ ಅನ್ವೇಷಿಸುವುದೆಲ್ಲವೂ ಪರಿಶ್ರಮವನ್ನು ಬೇಡುತ್ತದೆ. ಅದಕ್ಕೇ ಬಹಳ ಜನಕ್ಕೆ ಅಡ್ಡದಾರಿ ಎಂದರೆ ಪ್ರೀತಿ. ಶಾರ್ಟ್ ಕಟ್ ಎನ್ನುವುದು ಅವರ ಶ್ರಮವನ್ನು ಕಡಿಮೆ ಮಾಡುತ್ತದೆ. ತಕ್ಷಣ ಸಿಗುವ ಸಿದ್ಧ ಉತ್ತರಗಳು ಮತ್ತು ರೂಢಿಗತವಾದ ನಂಬಿಕೆಗಳೆಲ್ಲವೂ ಕೂಡಾ ಮೆದುಳಿಗೆ ಕೆಲಸ ಕೊಡುವುದಿಲ್ಲ.

ಯಾಕೆ, ಹೇಗೆ ಇದೆಲ್ಲಾ ಆಗ್ತಾ ಇದೆ ಎನ್ನುವುದಕ್ಕೆ ಮೆದುಳು ತನ್ನ ಶಕ್ತಿ ವ್ಯಯ ಮಾಡಬೇಕು. ಕಸರತ್ತು ನಡೆಸಬೇಕು. ಅದಿರುವುದೇ ಹಾಗೆ ಎಂದು ಯೋಚಿಸುವುದು ಅದಕ್ಕೆ ಆರಾಮವಾಗಿರುತ್ತದೆ.

ಅನಿಶ್ಚಿತತೆಯ ಭಯ

ವೈಜ್ಞಾನಿಕ ಮತ್ತು ವೈಚಾರಿಕ ಆಲೋಚನೆ ಗಳೆಂದರೇನೇ ಅನಿರೀಕ್ಷಿತ ಮತ್ತು ಅನಿಶ್ಚಿತತೆಗಳಿಗೆ ಎದುರಾಗುವುದು. ಹೊಸ ಪ್ರಯೋಗ ಮಾಡುವುದು ಎಂದರೆ ಅದು ನಿರೀಕ್ಷಿತ ಮತ್ತು ನಿಶ್ಚಿತ ಫಲವನ್ನು ಎದುರು ನೋಡಲಾಗುವುದಿಲ್ಲ. ಫಲಿತಾಂಶದ ಬಗ್ಗೆ ಅನುಮಾನವಿರುತ್ತದೆ. ನಿರಂತರವಾಗಿ ಪ್ರಶ್ನೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತದೆ. ಹಾಗಾಗಿಯೇ ಯಾರಾದರೂ ಧೈರ್ಯವಹಿಸಿ ಮಾಡಿರುವ ಪ್ರಯೋಗ ಯಶಸ್ವಿಯಾದರೆ ಅದೇ ಸೂತ್ರವನ್ನು ಅನುಸರಿಸಿ ತಮ್ಮ ಶ್ರಮ ಮತ್ತು ಸಂಪನ್ಮೂಲವನ್ನು ಹೂಡಲು ಸಿದ್ಧರಾಗುತ್ತಾರೆ. ನಮ್ಮ ಜನ ಪ್ರಯೋಗಾತ್ಮಕ ಸಿನೆಮಾ ಮಾಡಲೂ ಕೂಡಾ ಹೆದರುವುದು ಏಕೆಂದರೆ ಎಲ್ಲಿ ತಮ್ಮ ಶ್ರಮ ಮತ್ತು ಸಂಪನ್ಮೂಲಗಳು ವ್ಯರ್ಥವಾಗಿಬಿಡುವವೋ ಎಂಬ ಭಯ! ನಮ್ಮ ಜನಕ್ಕೆ ನಿರೀಕ್ಷಿತ ಫಲ, ಅಪೇಕ್ಷಿತ ಫಲಿತಾಂಶ, ಎದುರು ನೋಡುವ ಯಶಸ್ಸೇ ಬೇಕು. ಹಾಗೆಯೇ ಪ್ರಶ್ನೆಗಳಿಗೆ ತೃಪ್ತಿದಾಯಕವಾದ ಮತ್ತು ನಿಶ್ಚಿತವಾದ ಉತ್ತರ ಬೇಕು. ಪ್ರಶ್ನೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದರೆ ಗೊಂದಲಕ್ಕೀಡಾಗುತ್ತಾರೆ. ಹಾಗಾಗಿಯೇ ಬಹುಪಾಲು ಜನರು ಒಂದು ನಿರ್ದಿಷ್ಟ ಶ್ರದ್ಧೆ, ನಂಬಿಕೆ ಮತ್ತು ಆಚರಣೆಗಳಿಗೆ ಕಟ್ಟುಬೀಳುವುದು.

ದೃಢೀಕರಣದ ಪೂರ್ವಾಗ್ರಹ

ಸಾಮಾನ್ಯ ಜನರ ಸಂಕಲಿತ ಮನಸ್ಥಿತಿಗಳು ಸದಾ ಹಾತೊರೆಯುವುದು ತಾವು ಈಗಾಗಲೇ ನಂಬಿರುವುದನ್ನು ದೃಢೀಕರಿಸುವಂತಹ ಅಂಶಗಳನ್ನು. ತಾನು ಏನನ್ನು ನಂಬಿದ್ದೇನೋ, ತಾನು ಏನನ್ನು ಸತ್ಯ ಎಂದು ತಿಳಿದಿದ್ದೇನೋ ಅದನ್ನು ದೃಢೀಕರಿಸುವ ವಿಷಯಗಳನ್ನಷ್ಟೇ ನೋಡಲು ಇಷ್ಟಪಡುವುದು.

ಇದು ಸತ್ಯ ಅಥವಾ ಮಿಥ್ಯ, ಇದು ವೈಚಾರಿಕ ಅಥವಾ ಅವೈಚಾರಿಕ, ಇದು ವೈಜ್ಞಾನಿಕ ಅಥವಾ ಅವೈಜ್ಞಾನಿಕ ಎಂದು ವಿಶ್ಲೇಷಣೆ ಮಾಡಿ ವಿವೇಚನೆ ಯಿಂದ ವಿಷಯಗಳನ್ನು ನೋಡುವ ಸಾಮರ್ಥ್ಯ ಬರುವ ಮುನ್ನವೇ ಮಗುತನದಲ್ಲಿಯೇ ಬಿತ್ತಿರುವ ವಿಷಯಗಳನ್ನು ಅವರು ನಂಬುತ್ತಾರೆ ಮತ್ತು ವಿಶ್ವಾಸಿಸುತ್ತಾರೆ. ಅದು ಅವರ ಮನಸ್ಸಿನ ಆಳದಲ್ಲಿ ಬೇರು ಬಿಟ್ಟಿರುವುದರಿಂದ ಅದಕ್ಕೆ ಪೂರಕವಾದ ವಿಷಯಗಳನ್ನು, ಅಥವಾ ದೃಢೀಕರಣಗಳನ್ನು ಕಂಡುಕೊಳ್ಳುವುದರಲ್ಲಿ ಅವರ ಆಸಕ್ತಿ ಇರುವುದೇ ಹೊರತು, ಅದನ್ನು ಅಲುಗಾಡಿಸುವ ಅಥವಾ ಅದನ್ನು ಕಿತ್ತೊಗೆಯುವ ಹೊಸ ಚಿಂತನೆಗಳಿಗೆ ಅವರು ಮಾನಸಿಕವಾಗಿ ಸಿದ್ಧವಾಗುವುದೇ ಇಲ್ಲ. ಏಕೆಂದರೆ ಅದಕ್ಕೆ ಹೊಂದಿಕೊಂಡಿರುವ ಮತ್ತು ಒಪ್ಪಿಕೊಂಡಿರುವ ಮನಸ್ಥಿತಿ ತನ್ನನ್ನು ತಾನೇ ಖಂಡಿಸಿಕೊಳ್ಳಲು ಒಪ್ಪುವುದಿಲ್ಲ.

ವಿಧೇಯತೆ ಎಂಬ ಮೌಲ್ಯ

ಹೇಳಿದ ಮಾತು ಕೇಳುವವನು ಜಾಣ. ಮಾಡು ಎನ್ನುವುದನ್ನೆಲ್ಲಾ ಪ್ರಶ್ನಿಸದೇ ಮಾಡುವವನು ಒಳ್ಳೆಯವನು ಎಂಬ ಕೌಟುಂಬಿಕ ಮತ್ತು ಸಾಂಸ್ಕೃತಿಕ ನಿಯಮ ಮತ್ತು ನಿರ್ಬಂಧ. ಅದೊಂದು ಕ್ಲಾಸಿಕಲ್ ಕಂಡೀಶನಿಂಗ್. ಇಂತಹ ನಿರ್ದೇಶನಕ್ಕೆ ಹೀಗೆಯೇ ನಡೆದುಕೊಳ್ಳುವವನು, ಇಂತಹ ಕ್ರಿಯೆಗೆ ಹೀಗೆಯೇ ಪ್ರತಿಕ್ರಿಯಿಸುವವನು ಉತ್ತಮ ಎನ್ನುವ ಮೌಲ್ಯಮಾಪನದ ಚೌಕಟ್ಟುಗಳಲ್ಲಿ ವ್ಯಕ್ತಿಗಳು ಬೆಳೆದುಬಂದಿರುತ್ತಾರೆ.

ಎಷ್ಟೇ ವಿದ್ಯಾವಂತನಾದರೂ ಕೌಟುಂಬಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ವಿಧೇಯನಾಗಿರುವವನು ಶ್ರೇಷ್ಠ ಎನಿಸಿಕೊಳ್ಳುವ ಸಾಮಾಜಿಕ ಮೌಲ್ಯಮಾಪನವೊಂದು ವೈಜ್ಞಾನಿಕ ಚಿಂತನೆಗೆ ಹಿನ್ನೆಡೆಯಾಗುವಂತಹ ಅಂಶ. ಕುಟುಂಬ ಮತ್ತು ಶಿಕ್ಷಣವೆರಡೂ ಇದನ್ನೇ ಬೋಧಿಸುತ್ತಿರುತ್ತದೆ. ಜಾತಿ, ದೇವರು, ಆಚರಣೆಯೇ ಮೊದಲಾದ ವಿಷಯಗಳಲ್ಲಿ ಹೊಸ ಪೀಳಿಗೆಯವರು ನಿಷ್ಠೆ ತೋರುವ ಬಹು ಮುಖ್ಯ ಕಾರಣವೇ ಹಿರಿಯರ ಮನಸ್ಸನ್ನು ನೋಯಿಸಬಾರದು ಎಂದು. ಹಾಗೆ ನೋಯಿಸದೇ ಇರುವುದರಿಂದ ಅವರಿಗೆ ಭಾವನಾತ್ಮಕವಾಗಿ ಮಾತ್ರವಲ್ಲ, ಲೌಕಿಕವಾಗಿಯೂ ಅನೇಕ ಅನುಕೂಲಗಳು ಇರುತ್ತವೆ. ಇದೇ ವಿಧೇಯತೆಯ ಮೌಲ್ಯವನ್ನು ಪ್ರತಿಪಾದನೆ ಮಾಡುತ್ತಲೇ ತಂದೆ ತಾಯಿಯರನ್ನು, ಗುರು ಹಿರಿಯರನ್ನು, ಪುರೋಹಿತ, ಮೌಲ್ವಿ, ಪಾದ್ರಿ, ಸ್ವಾಮೀಜಿಗಳನ್ನು ಅನುಸರಿಸುವಂತೆ, ಅವರಿಗೆ ವಿಧೇಯವಾಗಿರುವಂತೆ, ಅವರ ವಿರುದ್ಧವಾಗಿ ಹೋಗದಿರುವಂತೆ ನೋಡಿಕೊಳ್ಳಲಾಗುವುದು. ಇದು ವೈಚಾರಿಕ ಮತ್ತು ವೈಜ್ಞಾನಿಕವಾದ ಮನೋಭಾವವನ್ನು ಹಾಗೂ ಪ್ರಶ್ನಿಸುವ ಗುಣವನ್ನು ನೇರವಾಗಿ ಅದುಮಿಡುತ್ತದೆ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X