Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ನಮ್ಯತೆಯಲ್ಲಿ ನವ್ಯತೆ

ನಮ್ಯತೆಯಲ್ಲಿ ನವ್ಯತೆ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,29 Jun 2025 10:45 AM IST
share
ನಮ್ಯತೆಯಲ್ಲಿ ನವ್ಯತೆ

ಗಮನಿಸಿ ನೋಡಿ, ಮಕ್ಕಳು ಯಾವುದು ಹೊಸತನ್ನು ಕಾಣುತ್ತಾರೋ ಅದರಲ್ಲಿ ಆಸಕ್ತಿ ತಳೆಯುತ್ತಾರೆ. ಅದನ್ನು ಪಡೆಯ ಬಯಸುತ್ತಾರೆ. ಎಲ್ಲವೂ ಹೊಸತೇ ಇರಬೇಕು. ಹೊಸತು ಸಿಕ್ಕಾಗ ಅವರಿಗೆ ಆಗುವ ಆನಂದವೇ ಅಸದಳ.

ಏಕೆಂದರೆ ಹೊಸತೆನ್ನುವುದು ಕುತೂಹಲವನ್ನು ಹುಟ್ಟಿಸುತ್ತದೆ. ಕೌತುಕವನ್ನು ಹೆಚ್ಚಿಸುತ್ತದೆ. ಅದರಲ್ಲಿ ಹಿಂದಿನ ಆಲೋಚನೆಗಳಿಗೆ ಅವಕಾಶವಿರುವುದಿಲ್ಲ. ಅದರ ಪೂರ್ವಾನುಭವ ಇರುವುದಿಲ್ಲ. ವಿಷಯವಸ್ತುವೇ ಅಪರಿಚಿತ ಮತ್ತು ಹೊಸತಾದ್ದರಿಂದ ಅದರಿಂದ ನಿರೀಕ್ಷೆ ಇರುವುದಿಲ್ಲ. ಅದರ ಬಗ್ಗೆ ನಿರ್ಣಾಯಕವಾದಂತಹ ಮನಸ್ಥಿತಿ ಇರುವುದಿಲ್ಲ. ಅದು ಹೀಗೆ ಇರುತ್ತದೆ ಅಥವಾ ಹೀಗೇ ಇರಬೇಕು ಎಂಬ ಊಹೆಗಳಿರುವುದಿಲ್ಲ. ಅದೊಂದು ಬೆರಗು ಅಷ್ಟೇ.

ಮಕ್ಕಳಿಗೆ ಹೊಸ ಹೊಸ ಹಾಡುಗಳನ್ನು ಹೇಳಿಕೊಟ್ಟರೆ ಆನಂದಿಸುತ್ತಾರೆ, ಹೊಸ ಕತೆಗಳನ್ನು ಮೈ ಮರೆತು ಕೇಳುತ್ತಾರೆ. ಕೇಳುವಾಗ ಆಮೇಲೆ? ಆಮೇಲೆ? ಎಂದು ಮುಂದಿನದು ಏನಾಗುವುದೋ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಹೀಗೆ ಕುತೂಹಲ, ಕೌತುಕ, ಕಾತುರಗಳೆಲ್ಲವೂ ಬೆರಗು ಹುಟ್ಟಿಸುವಂತಹದ್ದು. ಬೆರಗಿನಿಂದಲೇ ಆನಂದ.

ಒಂದು ಮಗು ತಿಂಡಿ ತಿನಿಸಿನ ಅಂಗಡಿಗೆ ಹೋದಾಗ, ನಿನಗೇನು ಬೇಕು ಎಂದಾಗ ಅಲ್ಲಿ ನೋಡಿ, ಯಾವುದು ಆಕರ್ಷಕವಾಗಿ ಆ ಹೊತ್ತಿಗೆ ಕಾಣುವುದೋ ಅದನ್ನು ಬೇಕು ಎನ್ನುತ್ತದೆ. ಅದನ್ನು ಈ ಮೊದಲು ರುಚಿ ನೋಡಿರುವುದಿಲ್ಲ. ಆದರೆ ದೊಡ್ಡವರು ಮಗುವಿಗೆ, ‘‘ಅದೇನೂಂತಾನೇ ಗೊತ್ತಿಲ್ಲ. ಇದನ್ನು ತೆಗೆದುಕೋ, ಇದು ಚೆನ್ನಾಗಿರುತ್ತೆ. ಇದು ಆರೋಗ್ಯಕ್ಕೆ ಒಳ್ಳೆಯದು. ಗೊತ್ತಿಲ್ಲದೇ ಇರುವುದು ಬೇಡ’’ ಎನ್ನುತ್ತಾರೆ. ಹೀಗೆ ದೊಡ್ಡವರು ಇದು ಒಳ್ಳೆಯದು, ಇದು ಕೆಟ್ಟದ್ದು, ಇದು ಬೇಕಾದ್ದು, ಇದು ಬೇಡದ್ದು, ಇದು ಗೊತ್ತಿರುವುದು, ಇದು ಗೊತ್ತಿಲ್ಲದ್ದು; ಎಂದು ಅವಳಿಗಳನ್ನು ಗುರುತಿಸುತ್ತಾ ಹೋಗುತ್ತಾರೆ. ಯಾವಾಗ ಎರಡು ನಿರ್ದಿಷ್ಟ ವಿಷಯಗಳು ಸೃಷ್ಟಿಯಾಗುತ್ತವೆಯೋ, ಅವುಗಳ ಬಗ್ಗೆ ಪರಿಚಿತತೆಯನ್ನು ಬೆಳೆಸುತ್ತಾರೆ. ಪರಿಚಿತತೆ ವಸ್ತುವಿಷಯಗಳ ಬಗ್ಗೆ ಒಂದು ನಿರ್ದಿಷ್ಟ ಕಲ್ಪನೆಯನ್ನು ಹೊಂದಲು ಪ್ರೇರೇಪಿಸುವುದಲ್ಲದೆ ಒಂದು ಸಿದ್ಧ ಚೌಕಟ್ಟಿನಲ್ಲಿಯೇ ಇಟ್ಟು ನೋಡಲಾರಂಭಿಸುತ್ತದೆ. ವಿಷಯವಸ್ತುಗಳನ್ನು ಚೌಕಟ್ಟಿನಲ್ಲಿ ಇಟ್ಟಕೂಡಲೇ ಅದು ನಮಗೆ ‘ತಿಳಿದಿದೆ’ ಎಂಬ ಭಾವ ಉಂಟಾಗಿ ಕೌತುಕ, ಕುತೂಹಲ ಮತ್ತು ಕಾತುರ ನಾಶವಾಗಿ ಅದು ಹಳತರ ಭಾವದಲ್ಲಿ ಅನುಭವಕ್ಕೆ ಬರುತ್ತದೆ. ಯಾವುದು ಹಳತೋ ಅದು ನಮ್ಮಲ್ಲಿ ತಾಜಾತನವನ್ನು ಅಥವಾ ಪ್ರಫುಲ್ಲತೆಯನ್ನು ತರುವುದಿಲ್ಲ. ಯಾವಾಗ ನನಗೆ ಯಾವುದೋ ಒಂದು ಗೊತ್ತಿದೆ ಎಂದು ಗಟ್ಟಿ ಭಾವ ಮೂಡುತ್ತದೆಯೋ ‘ಮೇಲರಿಮೆ’ ಉಂಟಾಗುತ್ತದೆ. ಹಾಗೆ ಉಂಟಾದ ಮೇಲರಿಮೆ ತಿಳಿದಿರುವ ವಿಷಯವಸ್ತುವನ್ನೇ ಕಡೆಗಣಿಸಿ ನೋಡುತ್ತದೆ. ಮೇಲರಿಮೆ ಅಂದರೆ ನಾನು ಮೇಲು ಎಂಬ ಭಾವ ವಿನಯವನ್ನು ಕೊಲ್ಲುತ್ತದೆ. ವಿನಯ ಸತ್ತ ಕೂಡಲೇ ಮನಸ್ಸು ನಮ್ಯತೆ ಅಂದರೆ ಫ್ಲೆಕ್ಸಿಬಿಲಿಟಿಯನ್ನು ಕೂಡಾ ಕಳೆದುಕೊಳ್ಳುತ್ತದೆ. ವಿನಯ ಮತ್ತು ನಮ್ಯತೆಯನ್ನು ಕಳೆದುಕೊಂಡ ಮನಸ್ಸು ಸದಾ ಬೀಗುತ್ತಲೇ ಇರುವುದರಿಂದ ಬಾಗುವುದನ್ನು ಮರೆತೇಬಿಡುತ್ತದೆ ಅಥವಾ ನಾನೇಕೆ ಬಾಗಬೇಕು ಎಂದು ಪ್ರಶ್ನಿಸುತ್ತದೆ. ಅಲ್ಲಿಗೆ ವ್ಯಕ್ತಿಯ ಆಂತರಿಕ ಆನಂದವೆನ್ನುವುದು ಇಲ್ಲವಾಗುತ್ತದೆ.

ಕೆಲವರು ಹೇಳುವುದನ್ನು ಗಮನಿಸಿ ನೋಡಿ ತಾವೇ ಮಾಡುವ ಕೆಲಸವನ್ನು ‘‘ಅದೇನು ಮಹಾ, ಮಾಡಿ ಬಿಸಾಕುತ್ತೇನೆ’’ ಎನ್ನುತ್ತಾರೆ. ‘‘ಅದನ್ನೇನು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಮಾಡುತ್ತೇನೆ.’’ ‘‘ನಾನು ಮಾಡಿದ ಹಾಗೆ ಅವರು ಮಾಡ್ತಾರಾ?’’; ಇವೆಲ್ಲವೂ ತಮ್ಮ ತಿಳುವಳಿಕೆ, ತರಬೇತಿ ತಾನೊಬ್ಬ ತಿಳಿದವನು, ತಾನೊಬ್ಬ ವಿಶೇಷ ವ್ಯಕ್ತಿ, ನಾನು ಅದು, ನಾನು ಇದು, ನಾನು ಹೀಗೇ, ನಾನು ಹೀಗೇ ಇರುವುದು ಎಂಬ ನಾನತ್ವದ ಚೌಕಟ್ಟಿನಲ್ಲಿ ಬಿಗಿಯಾಗುತ್ತಿದ್ದಂತೆ ವಿನಯಶೀಲತೆ ಮತ್ತು ನಮ್ಯತೆ ಎರಡೂ ಇಲ್ಲವಾಗಿ ಬೆಳೆಯುವುದಕ್ಕೆ, ವಿಕಾಸವಾಗುವುದಕ್ಕೆ, ಕಲಿಯುವುದಕ್ಕೆ, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಬೆಸೆಯುವುದಕ್ಕೆ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತದೆ.

ಸಣ್ಣವರಿದ್ದಾಗ ಏನು ಕಲಿಸಿದರೂ ಚೆನ್ನಾಗಿ ಕಲಿಯುವರು, ದೊಡ್ಡವರಾದ ಮೇಲೆ ಕಲಿಯಲಾಗದು ಎನ್ನುತ್ತಾರಲ್ಲಾ, ಅದೇನೂ ಎಳೆಯ ಮೆದುಳು, ಬಲಿತ ಮೆದುಳು ಅಂತೇನೂ ಇರುವುದಿಲ್ಲ. ಎಳೆಯವರಾಗಿದ್ದಾಗ ಪೂರ್ವಾಗ್ರಹಗಳು ಇರುವುದಿಲ್ಲ. ಪೂರ್ವನಿರ್ಧಾರಿತ ಮನಸ್ಥಿತಿ ಇರುವುದಿಲ್ಲ. ಕೌತುಕ, ಕಾತುರ, ಕುತೂಹಲ ಇರುತ್ತದೆ. ದೊಡ್ದವರಾಗಿರುವಾಗ ನಾನು ಹೀಗೆ, ಅದು ಹಾಗೆ ಎನ್ನುವಂತಹ ನಿರ್ದಿಷ್ಟ ಚೌಕಟ್ಟಿಗೆ ಮನಸ್ಥಿತಿ ಬಂಧಿತವಾಗಿರುತ್ತದೆ. ಹಾಗಾಗಿ ಕಲಿಯಲಾಗುವುದಿಲ್ಲ. ಯಾವುದೇ ವಯಸ್ಸಿನ ವ್ಯಕ್ತಿಯಾದರೂ ನಮ್ಯತೆ ಮತ್ತು ವಿನಯಶೀಲತೆ ಇದ್ದು ಹೊಸತನಕ್ಕೆ ತೆರೆದುಕೊಳ್ಳುವ ಗುಣವಿದ್ದರೆ ಕಲಿಯುತ್ತಾರೆ.

ನಾಯಿಯೊಂದಕ್ಕೆ ಸಣ್ಣದರಲ್ಲಿಯೇ ತರಬೇತಿ ಕೊಡಬೇಕು ಎಂದು ಬಹಳಷ್ಟು ಜನ ಭಾವಿಸುತ್ತಾರೆ. ಆದರೆ ಹಾಗೇನೂ ಇಲ್ಲ. ನಾಯಿಗೆ ಎಷ್ಟೇ ವಯಸ್ಸಾದರೂ ಅದಕ್ಕೆ ಎಷ್ಟೇ ಹೊಸ ಹೊಸ ತರಬೇತಿಗಳನ್ನು ಕೊಡಲು ಸಾಧ್ಯ. ಅದಕ್ಕೆ ಎಷ್ಟೇ ಹೊಸ ಹೆಸರುಗಳನ್ನು ಇಡಬಹುದು. ಅದು ಸ್ಪಂದಿಸುತ್ತದೆ ಮತ್ತು ಎಲ್ಲಾ ಹೆಸರುಗಳನ್ನೂ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ. ಏಕೆಂದರೆ ನಾಯಿಯಾಗಲಿ, ಮಗುವಾಗಲಿ ನಿರ್ದಿಷ್ಟ ಚೌಕಟ್ಟಿನಲ್ಲಿ ತಮ್ಮತನವನ್ನು ಬಂಧಿಸಿರುವುದಿಲ್ಲ. ನಮ್ಯತೆಯಿಂದ ಕೂಡಿರುತ್ತಾರೆ. ಪೂರ್ವಾಗ್ರಹಗಳನ್ನು ಹೊಂದಿರುವುದಿಲ್ಲ.

ನಾನು ಹೀಗೆ ಹಾಗೆ ಎಂಬ ಚೌಕಟ್ಟು ಅಹಂಕಾರವಲ್ಲದೆ ಬೇರೇನೂ ಇಲ್ಲ. ಅದನ್ನು ಸಮರ್ಥಿಸಿಕೊಳ್ಳುತ್ತಾ ನಾವು ಕಳೆದುಕೊಳ್ಳುವುದು ಪ್ರೀತಿ, ಕೃತಜ್ಞತಾಭಾವ ಮತ್ತು ಶಾಂತಿ.

ಯಾವುದನ್ನು ಜ್ಞಾನಿಗಳು ಆಧ್ಯಾತ್ಮಿಕವೆಂದು ಕರೆದು ಅಹಂಕಾರವನ್ನು ಕಳೆಯಲು ಆತ್ಮಾನ್ವೇಷಣೆಯ ಸಾಧನಗಳನ್ನು ಅವರ ಪರಿಭಾಷೆಗಳಲ್ಲಿ ಹೇಳಿಕೊಡುತ್ತಿದ್ದರೋ ಅದನ್ನೇ ಇಂದು ಮನಶಾಸ್ತ್ರಜ್ಞರು ಆತ್ಮಾವಲೋಕನ ಅಥವಾ ಇಂಟ್ರಾಸ್ಪೆಕ್ಷನ್ ಎಂದು ಕರೆಯುತ್ತಾರೆ. ವ್ಯಕ್ತಿತ್ವ ವಿಕಸನಕ್ಕೆ ಮೆಂಟಲ್ ಟ್ರೈನಿಂಗ್ ಅಥವಾ ಮನೋವಿಕಾಸಕ್ಕೆ ತರಬೇತಿಗಳನ್ನು ಕೊಡುತ್ತಾರೆ. ಪರಿಭಾಷೆಗಳು ಬೇರೆಯಾದರೂ ಉದ್ದೇಶ ಒಂದೇ. ಅಧ್ಯಾತ್ಮ ಎಂದ ಕೂಡಲೇ ಅತೀಂದ್ರಿಯ ಶಕ್ತಿ, ಪವಾಡ, ದೈವೀಕ ಅನುಗ್ರಹ ಎಂದೆಲ್ಲಾ ಆಲೋಚಿಸುವ ಅಗತ್ಯವಿಲ್ಲ. ಹಾಗೆಯೇ ಆತ್ಮಜ್ಞಾನ ಅಥವಾ ಆತ್ಮಾವಲೋಕನ ಅದಲ್ಲ ಕೂಡ. ಮನೋವಿಜ್ಞಾನ ಮತ್ತು ಅಧ್ಯಾತ್ಮವನ್ನು ಸಮತೋಲದ ಅರಿವಲ್ಲಿ ಗ್ರಹಿಸುವವನು ಭ್ರಮೆಗಳಿಂದ ಮುಕ್ತನಾಗಿ ಆನಂದವಾಗಿರುತ್ತಾನೆ. ಅವರ ಆನಂದ ತೋರಿಕೆ ಮತ್ತು ಪ್ರದರ್ಶನದ್ದಾಗಿರುವುದಿಲ್ಲ. ಆದರೆ ಆಳವಾಗಿಯೂ, ಸರಳವಾಗಿಯೂ, ಪ್ರಫುಲ್ಲವಾಗಿಯೂ ಇರುತ್ತದೆ.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X