Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಕೋಪವೆಂಬುದು...

ಕೋಪವೆಂಬುದು...

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,24 Aug 2025 9:51 AM IST
share
ಕೋಪವೆಂಬುದು...

ಕೋಪ ಮಾಡ್ಕೋಬೇಡ ಎನ್ನುವುದು ಸಾಮಾನ್ಯ ಸಲಹೆ. ಕೋಪದಿಂದ ಏನೇನೆಲ್ಲಾ ಅನಾಹುತಗಳು ಆಗಿವೆ, ಆಗುತ್ತಿವೆ ಎಂದೂ ಗೊತ್ತು. ಆಗುತ್ತವೆ ಎಂದು ಕೋಪ ಬಂದಾಗ ತಿಳಿಯುವುದಿಲ್ಲ. ‘‘ಕೋಪ ಬಂದರೆ ನನ್ನಷ್ಟು ಕೆಟ್ಟವನೇ ಇಲ್ಲ’’ ಎನ್ನುವವನಿಗೂ ಗೊತ್ತಿದೆ ಕೋಪದಿಂದ ಆಗುವ ಅನಾಹುತಗಳು.

ನಿಜ ಹೇಳಬೇಕೆಂದರೆ, ಮಾನವನ ಮಾನಸಿಕ ಸ್ಥಿತಿಗತಿಗಳಲ್ಲಿ ಅತ್ಯಂತ ಮುಖ್ಯವಾದದ್ದು, ಆದರೆ ತಪ್ಪಾಗಿ ಅರ್ಥೈಸಿರುವಂತಹ ಭಾವನೆ ಈ ಕೋಪ.

ಕೋಪವೆಂಬುದು ಬಹಳ ಸಹಜ ಮತ್ತು ಸ್ವಾಭಾವಿಕ ಭಾವುಕ ಪ್ರತಿಕ್ರಿಯೆ. ನೋವಾದಾಗ, ಬೆದರಿಕೆಯುಂಟಾದಾಗ, ಹತಾಶೆಯಾದಾಗ, ಅನ್ಯಾಯವಾದಾಗ, ತಿರಸ್ಕಾರಕ್ಕೊಳಗಾದಾಗ, ನಿರೀಕ್ಷೆ ಹುಸಿಯಾದಾಗ, ಬಲಹೀನವೆನಿಸಿದಾಗ, ತನ್ನನ್ನು ಗಮನಿಸುತ್ತಿಲ್ಲ, ತನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ, ಲಕ್ಷಿಸುತ್ತಿಲ್ಲ ಎನಿಸಿದಾಗ ಕೋಪವೆಂಬುದು ಸಹಜವೇ ಸರಿ. ಯಾವಾಗಲೇ ನಮಗೆ ಕೋಪ ಬಂದಾಗ ಈ ಕಾರಣಗಳಲ್ಲಿ ಒಂದಾಗಿರುತ್ತದೆ. ಅದನ್ನು ನಾವು ಗಮನಿಸಬೇಕು ಮತ್ತು ಅದಕ್ಕೆ ಅಗತ್ಯವಿರುವ ಆರೈಕೆ ಮಾಡಬೇಕು.

ಕೋಪ ಎನ್ನುವುದು ಅಸ್ತಿತ್ವವನ್ನು ಉಳಿಸಿಕೊಳ್ಳಲು ಇರುವಂತಹ ಒಂದು ರಕ್ಷಣಾ ತಂತ್ರ. ಆದಿಮಾನವರಾಗಿದ್ದ ನಮ್ಮ ಪೂರ್ವಿಕರು ತಮಗೆ ಕಾಡುಪ್ರಾಣಿಗಳಿಂದ ಅಥವಾ ತಮ್ಮ ಆಹಾರ, ಆಶ್ರಯ ಮತ್ತು ಆವಾಸಸ್ಥಾನಗಳನ್ನು ಕಸಿದುಕೊಳ್ಳಬಹುದಾದ ಇತರ ಗುಂಪುಗಳಿಂದ ತಮ್ಮ ಅಸ್ತಿತ್ವಕ್ಕೆ ಬೆದರಿಕೆಯುಂಟಾದಾಗ ಶಾಂತಚಿತ್ತರಾಗಿ, ಸಮಾಧಾನದಿಂದ ಯಾವುದೋ ಒಡಂಬಡಿಕೆಯನ್ನು ಅನುಸರಿಸಿಕೊಂಡು ಇದ್ದವರಲ್ಲ. ಅವರಲ್ಲಿ ಉಂಟಾಗುತ್ತಿದ್ದ ಭಯ, ಕೋಪ ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿರುವ ಹೋರಾಟ ಅಥವಾ ಪಲಾಯನಗಳನ್ನು ಮಾಡುತ್ತಿದ್ದದ್ದು ಸಹಜ ಮತ್ತು ಜೈವಿಕ ಪ್ರವೃತ್ತಿಯಿಂದಾಗಿ. ಲೈಂಗಿಕತೆ, ಹಸಿವು, ಮುದ್ದು ಮಾಡುವುದರಂತೆಯೇ ಕೋಪವೆಂಬುದು ಕೂಡಾ ನಮ್ಮ ಪ್ರವೃತ್ತಿಯ ಭಾಗವೂ ಹೌದು ಮತ್ತು ಉತ್ಪನ್ನವೂ ಹೌದು. ಆದರೆ ಈಗ ಈ ಕೋಪವೆಂಬುದು ಪ್ರವೃತ್ತಿಗಿಂತ ಹೆಚ್ಚಾಗಿ ಸಾಮಾಜಿಕ, ಭಾವನಾತ್ಮಕ ಮತ್ತು ಮಾನಸಿಕವಾಗಿ ಪ್ರಚೋದನೆಗೊಳ್ಳುತ್ತದೆ.

ಕೋಪದ ಮೂಲವನ್ನು ತಿಳಿಯದೇ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಅರಿಯದೇ ಬರಿದೇ ವರ್ತನೆಗಳನ್ನು ನಿಯಂತ್ರಿಸುವ ಪ್ರಯತ್ನವೇ ನಾವು ನಮ್ಮಲ್ಲಿ ಕಾಣುತ್ತಿರುವುದು. ಆದ್ದರಿಂದಲೇ ಕೋಪವನ್ನು ನಿಯಂತ್ರಿಸುವುದರಲ್ಲಿ ಅಥವಾ ಅದನ್ನು ಸರಿಯಾಗಿ ರೂಪಾಂತರಿಸುವುದರಲ್ಲಿ ನಾವು ಎಡವುತ್ತಿರುವುದು.

ಕೆರಳುವಿಕೆ ಎಂಬುದು ಎಷ್ಟೋ ಜನಕ್ಕೆ ವ್ಯಕ್ತಿತ್ವದ ಭಾಗ. ಹುಟ್ಟುಗುಣ. ಕೆಲವರು ತಕ್ಷಣವೇ ಕನಲುವರು, ಹಠಾತ್ತನೆ ಕೆರಳುವರು, ಅನುವಂಶೀಯದ ಗುಣವಾಗಿಯೇ ಆ ಸೂಕ್ಷ್ಮತೆಯನ್ನು ಪಡೆದಿರುವರು.

ಮತ್ತೆ ಕೆಲವರಿಗೆ ಸಾಮಾಜಿಕ ಪ್ರಭಾವದಿಂದ ಕೆರಳುವಿಕೆ ಉಂಟಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ನಿಂದನೆಗಳು, ಶಿಕ್ಷಣ ಮತ್ತು ಉದ್ಯೋಗವೇ ಮೊದಲಾದ ವಿಷಯಗಳಲ್ಲಿ ಸ್ಪರ್ಧೆ, ಕೆಲಸ ಮಾಡುವ ಕಡೆಯಲ್ಲಿ ಉಂಟಾಗುವ ಒತ್ತಡಗಳಿಂದಾಗಿ ಸ್ಥಿರವಾದ ಅಥವಾ ಹದವಾದ ಭಾವನೆಗಳನ್ನು ಹೊಂದಿರಲು ಆಗದು.

ಮೆದುಳಿಗೆ ಸಂಬಂಧಪಟ್ಟ ಕೆಲವು ವಿಷಯಗಳು ಮತ್ತು ಅನುವಂಶೀಯ ಗುಣಗಳು, ಅದರಲ್ಲೂ ಚುರುಕುಗೇಡಿತನ (ಎ.ಡಿ.ಎಚ್.ಡಿ.), ಅತಿಗೇಡಿತನ (ಬೈಪೋಲಾರ್ ಡಿಸಾರ್ಡರ್), ಭೂತಬಾಧೆ ಅಂದರೆ ಹಳೆಯ ಮಾನಸಿಕ ನೋವುಗಳ ಒತ್ತಡ (ಪಿ.ಟಿ.ಎಸ್.ಡಿ.), ಎಲ್ಲೆಗೇಡಿತನ (ಬಾರ್ಡರ್‌ಲೈನ್ ಪರ್ಸನಾಲಿಟಿ), ಬಾಲ್ಯದ ಅದುಮಿಟ್ಟಲ್ಪಟ್ಟಂತಹ ನೋವು ಮತ್ತು ಒತ್ತಡಗಳ ಹಿನ್ನೆಲೆ; ಹೀಗೆ ಹಲವಾರು ಕಾರಣಗಳಿಂದ ಕೋಪವೆಂಬುದನ್ನು ಅಥವಾ ಕೆರಳುವಿಕೆಯನ್ನು ವ್ಯಕ್ತಿಯಲ್ಲಿ ಕಾಣಬಹುದು.

ಒಟ್ಟಾರೆ ಕೋಪವೆಂಬುದು ಹೊರನೋಟದಲ್ಲಿ ನಿರ್ಧರಿಸುವಂತೆ ನೈತಿಕ ಸಮಸ್ಯೆಯಲ್ಲ. ಬದಲಾಗಿ ಮಾನಸಿಕ, ಭಾವನಾತ್ಮಕ, ಅನುವಂಶೀಯ, ಜೈವಿಕ ಮತ್ತು ಸಾಮಾಜಿಕ ಸಮಸ್ಯೆಯಾಗಿರಬಹುದು.

ಕೋಪಕ್ಕೆ ಅಥವಾ ಕೆರಳುವಿಕೆಗೆ ಕಾರಣ ಯಾವುದೇ ಇರಬಹುದು. ಮನೋವೈಜ್ಞಾನಿಕವಾಗಿ ಅದನ್ನು ಹತೋಟಿಯಲ್ಲಿಡುವ ಅಥವಾ ರೂಪಾಂತರಿಸುವ ಹಲವು ತಂತ್ರಗಳು ಇವೆ.

ಮೊಟ್ಟ ಮೊದಲನೆಯದೇ ತನ್ನರಿವು, ಅರಿವಾಳಿಕೆಯ ತಂತ್ರ ಅಥವಾ ಕಾಗ್ನಿಟಿವ್ ಅಪ್ರೋಚ್. ನಾವು ನಮ್ಮ ಕೋಪಕ್ಕೆ ಪ್ರಚೋದನೆ ಏನು ಎಂಬುದನ್ನು ಅರಿಯಬೇಕು. ನಮ್ಮ ಯಾವ ಭಾವನೆಯಿಂದ ಈ ಕೋಪವುಂಟಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಉದಾಹರಣೆಗೆ, ನಾನು ಬರೀ ಕೋಪಗೊಂಡಿರುವುದಲ್ಲ. ನನ್ನನ್ನು ಅಪಮಾನಿಸಿದ್ದಾರೆ. ಇದೊಂದು ತನ್ನರಿವಿನ ತಿಳುವಳಿಕೆ. ಇಂತಹ ಅರಿವು ನಮ್ಮ ಕೋಪದ ಬಲವನ್ನು ಕಡಿಮೆ ಮಾಡುತ್ತದೆ.

ನಂತರ ಹಠಾತ್ತನೆ ಪ್ರತಿಕ್ರಿಯಿಸುವುದಕ್ಕೆ ಬದಲು ಸಮಯ ತೆಗೆದುಕೊಳ್ಳುವ ಮೂಲಕ ನಮ್ಮ ಭಾವನೆಯನ್ನು ಆ ಹೊತ್ತಿಗೆ ತಡೆ ಹಿಡಿಯುವುದು. ಪ್ರತಿಕ್ರಿಯಿಸುವುದಕ್ಕಿಂತ ಉತ್ತರಿಸುವೆ ಎಂಬ ನಿರ್ಧಾರ. ಪ್ರತಿಸ್ಪಂದಿಸುವುದು ಎಂದರೆ ರೆಸ್ಪಾಂಡಿಂಗ್. ರಿಯಾಕ್ಟಿಂಗ್ ಅಲ್ಲ. ಇದು ನಮಗೆ ಸಾಧ್ಯವಾಗುವುದು ನಮಗೆ ನಾವೇ ಕೊಟ್ಟುಕೊಳ್ಳುವ ತರಬೇತಿಯಿಂದ. ಈ ಆಲೋಚನೆ ಮತ್ತು ನಿರ್ಧಾರದಿಂದ ನಿಧಾನವಾಗಿ ಉಸಿರಾಡುತ್ತಾ ಮನಸ್ಸು ಮತ್ತು ಪ್ರಕ್ಷುಬ್ಧ ಭಾವನೆಗಳು ಹದಕ್ಕೆ ಬರುವಂತೆ ನೋಡಿಕೊಳ್ಳುವುದು.

ಮೂರನೆಯ ಹಂತವೆಂದರೆ ಅರಿವಿನಿಂದ ನೋಡುವುದು. ಇದನ್ನು ಕಾಗ್ನಿಟಿವ್ ರಿಫ್ರೇಮಿಂಗ್ ಎನ್ನಲಾಗುವುದು. ವಿಷಯವನ್ನು ಅರಿವಿನಿಂದ ಮತ್ತು ಸಮಾಧಾನದಿಂದ ಸಾಕ್ಷೀಕರಿಸುತ್ತಾ ಬೇರೊಂದು ಆಯಾಮದಲ್ಲಿ ನೋಡುವುದು. ಉದಾಹರಣೆಗೆ, ಅವರು ನನ್ನನ್ನು ಅಪಮಾನಿಸುತ್ತಿರುವುದಲ್ಲ. ಅವರಿಗೆ ಯಾವುದೋ ಒತ್ತಡವಿದ್ದು, ಅದನ್ನು ಈ ರೀತಿಯಾಗಿ ಹೊರಗೆಡವುತ್ತಿದ್ದಾರೆ ಎಂದು ಗ್ರಹಿಸುವುದು.

ಇಷ್ಟಾದರೆ ಕೋಪದ ತಾಪಮಾನ ಇಳಿಯುವುದು. ಆದರೆ ಇನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದರೆ ಅಕ್ಷರಶಃ ಬರೆಯುವುದು. ನನ್ನನ್ನು ಪ್ರಚೋದಿಸಿದ ವಿಷಯ ಯಾವುದು? ಆಗ ನನಗೆ ಬಂದ ಆಲೋಚನೆಗಳು ಏನು? ಇದಕ್ಕೆ ಪ್ರತಿಕ್ರಿಯಿಸುವ ಬದಲು ಉತ್ತರಿಸುವುದು ಹೇಗೆ? ಇಂತಹ ಆಲೋಚನೆಗಳನ್ನು ಬರೆಯುವುದರಿಂದ ಉಬ್ಬರವಿಳಿತದ ಭಾವನೆಗಳು ಹದಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ಇಂತಹ ರೂಢಿಗಳು ಒಮ್ಮಿಂದೊಮ್ಮೆಲೇ ಬರದು. ಆದರೆ ನಿರಂತರ ಅಭ್ಯಾಸದಿಂದ ಮೆದುಳಿನಲ್ಲಿರುವ ನಮ್ಮ ಕೋಪದ ಕೇಂದ್ರವು ನಿಯಂತ್ರಣಕ್ಕೆ ಬಂದು ನಿರ್ಧಾರ ತೆಗೆದುಕೊಳ್ಳುವ ಕೇಂದ್ರವು ಬಲಗೊಳ್ಳುವುದು.

ಹಾಗಾದರೆ ಯಾರೊಬ್ಬರ ಕ್ರಿಯೆ, ಪ್ರತಿಕ್ರಿಯೆ, ನಡೆ ನುಡಿಗಳಿಂದ ಉಂಟಾದ ನಮ್ಮ ಕೋಪ ಅಥವಾ ನಕಾರಾತ್ಮಕವಾದ ಭಾವನೆಯನ್ನು ವ್ಯಕ್ತಪಡಿಸುವುದೇ ಬೇಡವೇ? ಅವರಿಗೆ ತಿಳಿಯುವುದೇ ಬೇಡವೇ? ಖಂಡಿತ ತಿಳಿಯಬೇಕು. ನೀನು ನನ್ನ ವಲಯವನ್ನು ಅತಿಕ್ರಮ ಪ್ರವೇಶ ಮಾಡುವುದರಿಂದ ಅಥವಾ ನೀನು ನಿನ್ನ ಎಲ್ಲೆಯನ್ನು ಮೀರಿ ವರ್ತಿಸುವುದು ನನಗೆ ಅಪಮಾನಿಸುವಂತೆ ಆಗಿದೆ ಎಂಬುದನ್ನು ಹೇಳಬೇಕು. ಇದು ಹೇಳುವಿಕೆ ಆಗಿರಬೇಕೇ ಹೊರತು ಕೂಗಾಟವೋ ಅಥವಾ ರಣಗರ್ಜನೆಯೋ ಆಗಿರಕೂಡದು. ಈ ಎಚ್ಚರಿಕೆಯನ್ನು ನಾವು ತೆಗೆದುಕೊಳ್ಳಬೇಕು. ನಮಗೆ ಬಂದಿರುವ ಕೋಪವೆಂಬುದನ್ನು ಅದುಮಿಟ್ಟುಕೊಳ್ಳಲೂ ಬಾರದು, ಹಾಗೆಯೇ ಅದು ರಂಪಾಟವೂ ಆಗಕೂಡದು. ಇದೇ ಕೋಪವನ್ನು ರೂಪಾಂತರಿಸುವ ಪ್ರಕ್ರಿಯೆ.

ಗಮನಿಸಿ; ನಮ್ಮ ಕೋಪದ ಬಗೆಗಳು ಸಾಮಾನ್ಯವಾಗಿ ಬಾಲ್ಯದಲ್ಲಿ ವಿನ್ಯಾಸಗೊಂಡಿರುವವಾಗಿರುತ್ತವೆ. ಮಗುವಾಗಿದ್ದಾಗ ನಮ್ಮನ್ನು ಅಲಕ್ಷಿಸಿರುವುದೋ, ನಮ್ಮ ಭಾವನೆಗಳನ್ನು ಪರಿಗಣಿಸದಿರುವುದೋ, ಮನೆಯಲ್ಲಿನ ಗೊಂದಲದ ಅಥವಾ ಸಂಘರ್ಷದ ವಾತಾವರಣವೋ ಆಗಿದ್ದಿರಬಹುದು.

ನಮ್ಮ ಕೆರಳುವಿಕೆಯ ಹಿಂದೆ ನಮ್ಮನ್ನು ಬೆಳೆಸಿರುವ ರೀತಿ ತನ್ನ ಪ್ರಭಾವವನ್ನು ಹೊಂದಿರುತ್ತದೆ.

ಒಟ್ಟಾರೆ ಕೋಪವೆಂಬ ಬೆಂಕಿ ಬೆಚ್ಚಗಿಡುವುದಲ್ಲ, ಸುಡುವುದು. ಜ್ವಾಲೆಯಾಗಿ ಉರಿಯುವ ಬದಲು ದೀಪ ಬೆಳಗುವಂತೆ ಮಾಡುವುದು ಅರಿವಾಳಿಕೆಯ ಮತ್ತು ತನ್ನರಿವಿನ ಕಲೆಗಾರಿಕೆ.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X