Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಸಾವಿಗೆ ಕಾರಣವಾಗುವ ರಿಪ್ ಪ್ರವಾಹಗಳು

ಸಾವಿಗೆ ಕಾರಣವಾಗುವ ರಿಪ್ ಪ್ರವಾಹಗಳು

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ22 Dec 2024 12:11 PM IST
share
ಸಾವಿಗೆ ಕಾರಣವಾಗುವ ರಿಪ್ ಪ್ರವಾಹಗಳು
ಸಮುದ್ರದ ನೀರು ಸಮುದ್ರದ ಒಳಗೆ ಹೋಗುವ ಬದಲಾಗಿ ಅಡ್ಡಕ್ಕೆ ಚಲಿಸುತ್ತಿದ್ದರೆ ಅದು ನಿಸ್ಸಂಶಯವಾಗಿ ರಿಪ್ ಪ್ರವಾಹ ಆಗಿರುತ್ತದೆ. ಕಸ, ಪ್ಲಾಸ್ಟಿಕ್ ತ್ಯಾಜ್ಯ, ಸಮುದ್ರ ಕಳೆಗಳು ದಡಕ್ಕೆ ಸಮಾಂತರವಾಗಿ ಸಾಗುತ್ತಿದ್ದರೆ ಅದು ಖಂಡಿತವಾಗಿ ರಿಪ್ ಪ್ರವಾಹ ಆಗಿರುತ್ತದೆ. ನೀರು ಚಲನೆಯಲ್ಲಿದ್ದು ಕೆಸರಿನಿಂದ ಕೂಡಿದ್ದರೆ ಅಥವಾ ಕದಡಿದ್ದರೆ ಅದು ಸಹ ರಿಪ್ ಪ್ರವಾಹ ಆಗಿರುತ್ತದೆ. ಇಂತಹ ಲಕ್ಷಣಗಳು ಪ್ರವಾಹದ ನೀರಿನಲ್ಲಿ ಕಾಣಿಸಿಕೊಂಡರೆ ತಕ್ಷಣ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಕಳೆದ ಹದಿನೈದು ದಿನಗಳ ಹಿಂದೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದ ಕೋಲಾರದ ನಾಲ್ಕು ಮಕ್ಕಳು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಘಟನೆ ಎಲ್ಲೆಡೆ ಚರ್ಚೆಗೆ ಕಾರಣವಾಯಿತು. ಎಲ್ಲರೂ ಶಿಕ್ಷಕರದೇ ತಪ್ಪು ಎಂದು ಮಾತಾಡಿಕೊಂಡರು. ಹೌದು, ಮೇಲ್ನೋಟಕ್ಕೆ ಶಿಕ್ಷಕರ ತಪ್ಪು ಎದ್ದು ಕಾಣುತ್ತದೆ. ಮಕ್ಕಳನ್ನು ಸಮುದ್ರಕ್ಕೆ ಇಳಿಸಿದ್ದು ಶಿಕ್ಷಕರ ತಪ್ಪು ನಿಜ. ಆದರೆ ಕೆಲವು ವೇಳೆ ಸತ್ಯಾಂಶ ಬೇರೇನೆ ಇರುತ್ತದೆ. ಅಲ್ಲಿ ಸಂಭವಿಸಿದ ಮಕ್ಕಳ ಸಾವಿಗೆ ಸಂಭಾವ್ಯ ಕಾರಣಗಳನ್ನು ಮಂಗಳೂರು ಡಯಟ್ನ ನಿವೃತ್ತ ಪ್ರಾಚಾರ್ಯರೊಬ್ಬರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದರು. ಈ ಬರಹ ನನ್ನನ್ನು ಬಹುವಾಗಿ ಕಾಡಿತು. ಈ ಕುರಿತು ಇನ್ನಷ್ಟು ಮಾಹಿತಿ ಕಲೆಹಾಕಿದಾಗ ಒಂದಿಷ್ಟು ಒಳನೋಟಗಳು ದೊರೆತವು. ಅವುಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.

ಮುರ್ಡೇಶ್ವರದಲ್ಲಿನ ಮಕ್ಕಳ ಸಾವಿನ ಕುರಿತ ಬಹುತೇಕ ಪತ್ರಿಕಾ ವರದಿಗಳು ಮತ್ತು ದೃಶ್ಯ ಮಾಧ್ಯಮ ವರದಿಗಳು ‘ಮಕ್ಕಳು ಸಮುದ್ರದಲ್ಲಿ ಮುಳುಗಿ ಸತ್ತರು’ ಎಂದು ವರದಿ ಮಾಡಿವೆ. ಆದರೆ ವಾಸ್ತವವಾಗಿ ಮಕ್ಕಳು ಮುಳುಗಿ ಸತ್ತಿದ್ದಲ್ಲ. ನೀರಿನಲ್ಲಿ ತೇಲಿ ಹೋದ್ದದ್ದು. ಇಲ್ಲಿ ಮಕ್ಕಳ ಸಾವಿಗೆ ಕಾರಣವಾದ ವಿದ್ಯಮಾನದ ಹೆಸರು ‘ರಿಪ್ ಪ್ರವಾಹಗಳು’ (Rip currents). ನೀರು ರಭಸವಾಗಿ ಉಕ್ಕಿ ಹರಿಯುವುದನ್ನು ಪ್ರವಾಹ ಎನ್ನಲಾಗುತ್ತದೆ. ಮಳೆಯ ಪ್ರಮಾಣ ಅಧಿಕವಾದಾಗ ಕೆರೆ-ಕಟ್ಟೆ, ನದಿಗಳ ನೀರಿನ ಪ್ರಮಾಣ ಹೆಚ್ಚಾಗಿ ಉಕ್ಕಿ ಹರಿಯುವುದನ್ನು ಗಮನಿಸಿರುತ್ತೇವೆ. ಅದೇ ರೀತಿ ಸಮುದ್ರದಲ್ಲೂ ಅಲೆಗಳ ರೂಪದಲ್ಲಿ ಪ್ರವಾಹಗಳು ಉಂಟಾಗುತ್ತವೆ. ಸಮುದ್ರದಲ್ಲಿ ಉಂಟಾಗುವ ಪ್ರವಾಹಗಳಲ್ಲಿ ರಿಪ್ ಪ್ರವಾಹವೂ ಒಂದು. ನದಿಯಲ್ಲಿನ ಸುಳಿಗಳು ಹೇಗೆ ಅಪಾಯಕಾರಿಯೋ, ಹಾಗೆ ರಿಪ್ ಪ್ರವಾಹಗಳೂ ಸಹ ಅಪಾಯಕಾರಿಯಾಗಿವೆ. ನದಿಯಲ್ಲಿ ಎಲ್ಲೆಲ್ಲಿ ಸುಳಿಗಳಿವೆ ಎಂದು ಗೊತ್ತಾಗುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಅಲ್ಲೆಲ್ಲಾ ಕಡೆ ‘ಸುಳಿಗಳಿವೆ ಅಪಾಯಕಾರಿ’ ಎಂಬ ಬೋರ್ಡ್ ಹಾಕಲಾಗುತ್ತದೆ. ಆದರೆ ಸಮುದ್ರದಲ್ಲಿ ಕಾಣಿಸಿಕೊಳ್ಳುವ ರಿಪ್ ಪ್ರವಾಹಗಳು ಯಾವಾಗ ಎಲ್ಲಿ ಸಂಭವಿಸುತ್ತವೆ ಎಂದು ಹೇಳಲಾಗುವುದಿಲ್ಲ. ರಿಪ್ ಪ್ರವಾಹಗಳು ಏಕಾಏಕಿ ರೂಪಗೊಳ್ಳುತ್ತವೆ. ಹಾಗಾಗಿ ಸುರಕ್ಷತೆಯ ಬೋರ್ಡ್ ಹಾಕಲು ಸಾಧ್ಯವಾಗುವುದಿಲ್ಲ.

ಕರಾವಳಿ ತೀರದ ಪ್ರದೇಶದ ಜನರಿಗೆ ಸಮುದ್ರದ ಒಡನಾಟ ಹೊಸದೇನಲ್ಲ. ಆದರೆ ಬಯಲು ಸೀಮೆಯ ಜನರಿಗೆ ಸಮುದ್ರದ ನಂಟು ತುಂಬಾ ಕಡಿಮೆ. ಅದರ ಮೋಹಕತೆಗೆ ಮರುಳಾಗದವರಿಲ್ಲ. ಅಲೆಗಳ ಮೋಹಕತೆ ನಮ್ಮನ್ನು ಪರವಶರನ್ನಾಗಿಸುತ್ತದೆ. ಅಲೆಗಳು ಮತ್ತೆ ಮತ್ತೆ ದಡ ತಲುಪಿದಾಗ ಅವುಗಳಲ್ಲಿ ಮಿಂದೆದ್ದು ಖುಷಿಪಡುತ್ತೇವೆ. ಅಲೆಗಳಿಗೆ ಎಂದಿಗೂ ದಣಿವಿಲ್ಲ ಮತ್ತು ದಡ ಎಂದಿಗೂ ಸೋಲುವುದಿಲ್ಲ. ಅಲೆಗಳ ಪ್ರಕ್ರಿಯೆಯಲ್ಲಿ ನಾವು ಗಮನಿಸಬೇಕಾದದ್ದು ಎಂದರೆ ಗಾಳಿಯ ರಭಸ. ಗಾಳಿ ಶಕ್ತಿಯು ಅಲೆಗಳು ದಡಕ್ಕೆ ಬಡಿಯುವಂತೆ ಮಾಡುತ್ತದೆ. ಅಂತೆಯೇ ಗಾಳಿಯು ನೀರನ್ನು ಮಡಚಿ ಅಲೆಗಳಂತೆ ಮಾಡಿ ದಡಕ್ಕೆ ತಂದು ಹಾಕುತ್ತದೆ. ಹೀಗೆ ದಡದಲ್ಲಿ ಉಂಟಾಗುವ ನೀರಿನ ಬೆಟ್ಟ ಒಮ್ಮೆಲೇ ಹಿಂದಕ್ಕೆ ಸರಿಯುವಾಗ ಅದಕ್ಕೆ ಅಡ್ಡ ಬರುವ ಸಣ್ಣ ಸಣ್ಣ ವಸ್ತುಗಳನ್ನು ತನ್ನ ಜೊತೆಗೆ ಸಮುದ್ರದೊಳಕ್ಕೆ ಕೊಂಡೊಯ್ಯುತ್ತದೆ. ದಡಕ್ಕೆ ಅಪ್ಪಳಿಸಿ ವಾಪಸ್ ಮರಳುವ ನೀರು ಕಡಿಮೆ ಅಡೆತಡೆ ಇರುವ ಜಾಗವನ್ನು ಹುಡುಕುತ್ತದೆ. ಎಲ್ಲೆಲ್ಲಿ ಅಡೆತಡೆ ಕಡಿಮೆ ಇದೆಯೋ ಅಲ್ಲೆಲ್ಲಾ ಹರಡುತ್ತದೆ.

ದಡದ ಮೇಲೆ ಮರಳು ದಿಬ್ಬಗಳಿರುವಂತೆ ಸಮುದ್ರದ ಒಳಗೂ ಮರಳ ದಿಬ್ಬಗಳು ಇರುತ್ತವೆ. ಈ ಮರಳ ದಿಬ್ಬಗಳು ಅಖಂಡವಾಗಿರಬಹುದು ಅಥವಾ ಮಧ್ಯದಲ್ಲಿ ಖಾಲಿ ಜಾಗಗಳಿರಬಹುದು. ಈ ಖಾಲಿ ಜಾಗವೂ ಆಗಾಗ ಬದಲಾಗುತ್ತಿರುತ್ತದೆ. ದಡಕ್ಕೆ ಅಪ್ಪಳಿಸಿ ವಾಪಸ್ ಮರಳುವ ನೀರು ಸಮುದ್ರದ ತಳದ ದಿಬ್ಬಗಳ ನಡುವೆ ಹರಿಯುವಾಗ ಅಭಿಮುಖ ಮತ್ತು ಪೂರಕ ಪ್ರವಾಹಗಳಿಂದ ಪ್ರವಾಹ ಉಂಟಾಗುತ್ತದೆ. ಈ ಪ್ರವಾಹಗಳು ಸಮುದ್ರದ ಒಳಗೆ ನುಗ್ಗುತ್ತವೆ. ಪೂರಕ ಪ್ರವಾಹಗಳು ಒಂದಾಗಿ ರಭಸವಾಗಿ ಸಮುದ್ರದ ಒಳಗೆ ನುಗ್ಗುವ ಭಾಗವೇ ಪ್ರವಾಹದ ಕತ್ತು. ಇದಕ್ಕೆ ಎದುರಾಗಿ ಈಜುವುದು ಎಂತಹ ಅನುಭವಿ ಈಜುಗಾರನಿಗೂ ಕೂಡಾ ಸಾಹಸದ ಕೆಲಸ. ಹೀಗೆ ಒಳನುಗ್ಗಿದ ಪ್ರವಾಹ ನಂತರ ಚದುರುತ್ತದೆ. ಅದು ಪ್ರವಾಹದ ತಲೆ ಇದ್ದಂತೆ. ತಲೆಯ ಭಾಗದಿಂದ ಆ ಪ್ರವಾಹವು ದುರ್ಬಲವಾಗುವುದರಿಂದ ಅಲ್ಲಿಂದ ಹೊರಗೆ ಈಜಿ ದಡದ ಕಡೆಗೆ ಈಜಬೇಕು. ಆದರೆ ಈಜು ಬಾರದವರಿಗೆ ಇದು ಕಷ್ಟಸಾಧ್ಯ. ಈಜು ಬಾರದ ಅನನುಭವಿಗಳು ಬಲು ಬೇಗನೇ ಮುಳುಗಿ ಸಾಯುತ್ತಾರೆ. ಮುರ್ಡೇಶ್ವರದಲ್ಲಿ ಮಕ್ಕಳ ಸಾವಿಗೆ ಇಂತಹದ್ದೇ ಪ್ರವಾಹ ಕಾರಣವಾಗಿದೆ ಎಂಬುದು ಸಾಗರ ಪ್ರವಾಹ ತಜ್ಞರ ಅಭಿಮತ.

ಹಾಗಾದರೆ ಅಪಾಯಕಾರಿಯಾದ ರಿಪ್ ಪ್ರವಾಹವನ್ನು ಮುಂಚಿತವಾಗಿ ಗುರುತಿಸುವುದು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಬರುತ್ತದೆ. ಸಮುದ್ರದ ನೀರು ಸಮುದ್ರದ ಒಳಗೆ ಹೋಗುವ ಬದಲಾಗಿ ಅಡ್ಡಕ್ಕೆ ಚಲಿಸುತ್ತಿದ್ದರೆ ಅದು ನಿಸ್ಸಂಶಯವಾಗಿ ರಿಪ್ ಪ್ರವಾಹ ಆಗಿರುತ್ತದೆ. ಕಸ, ಪ್ಲಾಸ್ಟಿಕ್ ತ್ಯಾಜ್ಯ, ಸಮುದ್ರ ಕಳೆಗಳು ದಡಕ್ಕೆ ಸಮಾಂತರವಾಗಿ ಸಾಗುತ್ತಿದ್ದರೆ ಅದು ಖಂಡಿತವಾಗಿ ರಿಪ್ ಪ್ರವಾಹ ಆಗಿರುತ್ತದೆ. ನೀರು ಚಲನೆಯಲ್ಲಿದ್ದು ಕೆಸರಿನಿಂದ ಕೂಡಿದ್ದರೆ ಅಥವಾ ಕದಡಿದ್ದರೆ ಅದು ಸಹ ರಿಪ್ ಪ್ರವಾಹ ಆಗಿರುತ್ತದೆ. ಇಂತಹ ಲಕ್ಷಣಗಳು ಪ್ರವಾಹದ ನೀರಿನಲ್ಲಿ ಕಾಣಿಸಿಕೊಂಡರೆ ತಕ್ಷಣ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಇಂತಹ ಸಮಯದಲ್ಲಿ ಧೃತಿಗೆಡದೆ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ದೊಡ್ಡವರೂ ಸೇರಿದಂತೆ ಮಕ್ಕಳು ಕೂಡಾ ಮೊಣಕಾಲವರೆಗಿನ ಸಮುದ್ರದ ನೀರಿಗೆ ಇಳಿಯುವುದು ಅಪಾಯಕಾರಿ. ಗೊತ್ತಿಲ್ಲದೆ ಇರುವ ಸಮುದ್ರ ದಂಡೆಯಲ್ಲಿ ನೀರಿಗೆ ಇಳಿಯುವುದು ಇನ್ನೂ ಅಪಾಯಕಾರಿ. ಒಂದು ವೇಳೆ ರಿಪ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರೆ ಮೊದಲು ದಡದ ಕಡೆಗೆ ಈಜಬಾರದು. ಬದಲಾಗಿ ಪ್ರವಾಹಕ್ಕೆ ಲಂಬವಾಗಿ ಅಂದರೆ ದಂಡೆಗೆ ಸಮಾಂತರವಾಗಿ ಈಜಿ ಪ್ರವಾಹದಿಂದ ಹೊರಬರಬೇಕು. ಪ್ರವಾಹದಿಂದ ಹೊರ ಬಂದಿದ್ದೀರಿ ಎಂದು ಅರಿವಾದಾಗ ದಂಡೆಯ ಕಡೆಗೆ ಈಜಬೇಕು.

ಜಗತ್ತಿನಾದ್ಯಂತ ವಾರ್ಷಿಕವಾಗಿ 100ಕ್ಕೂ ಜನರು ರಿಪ್ ಪ್ರವಾಹದಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಇಂತಹ ಸಂಧರ್ಭದಲ್ಲಿ ಧೈರ್ಯದ ಜೊತೆಗೆ ಈಜು ಕೌಶಲ್ಯಗಳು ಅಗತ್ಯ. ರಿಪ್ ಪ್ರವಾಹದ ವೇಗವು ಸಾಮಾನ್ಯವಾಗಿ ಪ್ರತೀ ಸೆಕೆಂಡಿಗೆ 1-2 ಅಡಿಗಳು ಇರುತ್ತವೆ. ಇದು ಅಪಾಯಕಾರಿ ಅಲ್ಲ. ಆದರೆ ಕೆಲವು ವೇಳೆ ಪ್ರತೀ ಸೆಕೆಂಡಿಗೆ 8 ಅಡಿಗಳಷ್ಟು ವೇಗವುಳ್ಳ ಅಲೆಗಳು ಉಂಟಾಗುತ್ತವೆ. ಇವು ತುಂಬಾ ಅಪಾಯಕಾರಿ. ಕೌಶಲ್ಯಭರಿತ ಈಜುಗಾರರೂ ಇಂತಹ ಪ್ರವಾಹದಲ್ಲಿ ಈಜಲು ಹೆದರುತ್ತಾರೆ. ಇಂತಹ ರಿಪ್ ಪ್ರವಾಹಗಳ ವಿರುದ್ಧ ಈಜಲು ನ್ಯೂಝಿಲ್ಯಾಂಡ್ನ ಮುರಿವಾಲ್ ಬೀಚ್ನಲ್ಲಿ ತರಬೇತಿ ನೀಡುವ ಪದವಿ ಕಾಲೇಜು ಇದೆ. ಅಲ್ಲಿ ಪ್ರವಾಹದ ವಿರುದ್ಧ ಈಜುವ ಕೌಶಲ್ಯಗಳನ್ನು ಮತ್ತು ತಂತ್ರಗಾರಿಕೆಗಳನ್ನು ಕಲಿಸಲಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಇಂತಹ ಸಂಧರ್ಭದಲ್ಲಿ ಧೈರ್ಯ ಮುಖ್ಯ. ಸಮುದ್ರಕ್ಕೆ ಪ್ರವಾಸ ತೆರಳುವ ಮುನ್ನ ಮಕ್ಕಳಿಗೆ ಅಲ್ಲಿನ ವಿದ್ಯಮಾನಗಳು ಹಾಗೂ ಅವುಗಳಿಂದ ದೂರ ಇರಬೇಕಾದ ಮಾಹಿತಿಯನ್ನು ತಿಳಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X