Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ತ್ಯಾಜ್ಯನೀರಿನಿಂದ ತೈಲದ ಮೇಲಿನ ಅವಲಂಬನೆ...

ತ್ಯಾಜ್ಯನೀರಿನಿಂದ ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಬಹುದೇ?

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ17 Nov 2024 8:54 AM IST
share
photo of  Wastewater ,  Oil

ಕೈಗಾರಿಕಾ ಪ್ರಕ್ರಿಯೆಗಳು, ಗಣಿಗಾರಿಕೆ ಮತ್ತು ಒಳಚರಂಡಿಗಳ ತ್ಯಾಜ್ಯನೀರು ಬಯೋಪಾಲಿಮರ್‌ಗಳನ್ನು ಹೊಂದಿರುತ್ತದೆ. ಈ ಬಯೋಪಾಲಿಮರ್‌ಗಳು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾಗುವ ದೀರ್ಘ ಆಣ್ವಿಕ ಸರಪಳಿಗಳು. ಪ್ರತಿದಿನವೂ ತ್ಯಾಜ್ಯ ನೀರನ್ನು ವ್ಯರ್ಥವಾಗಿ ಹರಿದು ಬಿಡುವ ಬದಲು, ಸಂಸ್ಕರಿಸಿ ಅದರಲ್ಲಿನ ಬಯೋಪಾಲಿಮರ್‌ಗಳನ್ನು ಬೇರ್ಪಡಿಸಿ ಬಳಸುವಂತಾದರೆ ಪಳೆಯುಳಿಕೆ ಶಕ್ತಿಯನ್ನು ಮರುಬಳಕೆ ಮಾಡಬಹುದು ಎಂಬುದನ್ನು ಸಂಶೋಧನಾ ತಂಡವು ಅಭಿಪ್ರಾಯಪಟ್ಟಿದೆ.

ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ವಾಪಸು ಬರುವಾಗ ಸಂಜೆ 7ರ ಬಸ್ಸಿಗೆ ಹತ್ತಿದೆ. ಸಾಮಾನ್ಯವಾಗಿ ಮೆಜೆಸ್ಟಿಕ್‌ನಿಂದ ನೆಲಮಂಗಲ ತಲುಪಲು ಒಂದು ಗಂಟೆ ಕಾಲಾವಧಿ ಬೇಕಾಗುತ್ತಿತ್ತು. ಆದರೆ ಅಂದು ಸುಮಾರು ಎರಡು ಗಂಟೆ ಬೇಕಾಯಿತು. ವಾರಾಂತ್ಯದ ದಿನವಾದ್ದರಿಂದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದಲೇ ಡೀಸೆಲ್-ಪೆಟ್ರೋಲ್ ಬೆಲೆ ಲೀಟರ್‌ಗೆ ನೂರು ರೂಪಾಯಿ ದಾಟಿದೆ ಎಂಬ ವಾದವನ್ನು ಮಂಡಿಸಿದರು. ಅದು ಸರಿ ಎನಿಸಿತು. ಕೇವಲ ವಾಹನಗಳ ಹೆಚ್ಚಿದ್ದರಿಂದಲೇ ಡೀಸೆಲ್-ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದೆ. ‘‘ಅಲ್ರಿ ನಿಮಗೇನು ತಲೆ ಕೆಟ್ಟಿದೆಯಾ? ಪ್ರತಿವರ್ಷ ಲಕ್ಷಾಂತರ ಕಾರುಗಳು, ಕೋಟ್ಯಂತರ ಬೈಕುಗಳು ಮಾರಾಟವಾಗುತ್ತವೆ. ಇವೆಲ್ಲವುಗಳಿಗೆ ಡೀಸೆಲ್-ಪೆಟ್ರೋಲ್ ಹೆಚ್ಚಿಗೆ ಬೇಕಾಗುತ್ತದೆ ಅಲ್ಲವೇ? ಹಾಗಾಗಿ ಡೀಸೆಲ್-ಪೆಟ್ರೋಲ್ ಬೇಡಿಕೆ ಹೆಚ್ಚಾಗಿದೆ’’ ಎಂದು ತಮ್ಮ ವಾದಕ್ಕೆ ಪೂರಕ ಮಾಹಿತಿಯನ್ನು ಪುಷ್ಟೀಕರಿಸಿದರು. ‘‘ಹೌದು! ನಾನದನ್ನು ಒಪ್ಪಿಕೊಳ್ಳುವೆ. ಆದರೆ ವಾಹನಗಳನ್ನು ಹೊರತುಪಡಿಸಿಯೂ ಡೀಸೆಲ್-ಪೆಟ್ರೋಲ್ ಬಳಕೆ ಹೆಚ್ಚಿದೆ’’ ಎಂದು ನನ್ನ ಅನಿಸಿಕೆಯನ್ನು ಹೇಳಿದೆ. ‘‘ಅದು ಹೇಗೆ? ದಯವಿಟ್ಟು ಸ್ವಲ್ಪ ತಿಳಿಸಿ’’ ಎಂದರು.

ಪೆಟ್ರೋಲಿಯಂನ್ನು ಕಾರುಗಳು, ಟ್ರಕ್‌ಗಳು, ವಿಮಾನಗಳು ಮತ್ತು ರೈಲುಗಳು ಸೇರಿದಂತೆ ಇನ್ನಿತರ ವಾಹನಗಳಿಗೆ ಶಕ್ತಿ ನೀಡಲು ಬಳಸಲಾಗುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯವೇ. ಇವುಗಳ ಜೊತೆಗೆ ವಿದ್ಯುತ್ ಉತ್ಪಾದಿಸಲು, ಪ್ಲಾಸ್ಟಿಕ್‌ಗಳು, ದ್ರಾವಕಗಳು, ಪಾಲಿಯುರೆಥೇನ್ ಮತ್ತು ಇತರ ರಾಸಾಯನಿಕಗಳನ್ನು ತಯಾರಿಸಲು ಕಚ್ಚಾ ವಸ್ತುವಾಗಿ ಪೆಟ್ರೋಲಿಯಂನ್ನು ಬಳಸಲಾಗುತ್ತದೆ. ಅಲ್ಲದೇ ಪೆಟ್ರೋಲಿಯಂನ್ನು ನೋವು ನಿವಾರಕಗಳು, ಖಿನ್ನತೆ ಶಮನಕಾರಿಗಳು ಮತ್ತು ಆಂಟಿಹಿಸ್ಟಮೈನ್‌ಗಳನ್ನು ಒಳಗೊಂಡಂತೆ ಕೆಲವು ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಷ್ಟೇ ಅಲ್ಲ ಕಾಂಟ್ಯಾಕ್ಟ್ ಲೆನ್ಸ್‌ಗಳು, ಹೃದಯ ಕವಾಟಗಳು ಮತ್ತು ಬ್ಯಾಂಡೇಜ್‌ಗಳಂತಹ ವಸ್ತುಗಳನ್ನು ತಯಾರಿಸಲು ಪೆಟ್ರೋಲಿಯಂನ್ನು ಬಳಸಲಾಗುತ್ತದೆ. ಹಾಗಾಗಿ ಪೆಟ್ರೋಲಿಯಂ ಇಂದು ಪ್ರಪಂಚದ ಆರ್ಥಿಕ ಸಂಪತ್ತಿನ ಅಡಿಪಾಯವಾಗಿದೆ. ಹೀಗೆ ನಮ್ಮ ದೈನಂದಿನ ಬಹು ಕಾರ್ಯಗಳಿಗೆ ಪರೋಕ್ಷವಾಗಿ ಪೆಟ್ರೋಲಿಯಂ ಬಳಕೆಯಾಗುತ್ತಿದೆ ಎಂಬುದನ್ನು ಅವರಿಗೆ ತಿಳಿಸಿದಾಗ ಒಂದು ಕ್ಷಣ ದಂಗಾದರು.

ಹಾಗೆಯೇ ನಮ್ಮಿಬ್ಬರ ನಡುವಿನ ಮಾತಿನ ವರಸೆ ತ್ಯಾಜ್ಯ ನೀರಿನ ಕಡೆಗೆ ಹರಿಯಿತು. ನಗರಗಳಲ್ಲಿ ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಇದು ಸಮೀಪದ ನದಿಗಳಿಗೆ ಸೇರುತ್ತದೆ. ಜೊತೆಗೆ ಅನೇಕ ಅಪಾಯಗಳನ್ನು ತಂದೊಡ್ಡುತ್ತದೆ ಎಂದು ಪ್ರಯಾಣಿಕರು ತಮ್ಮ ಅನಿಸಿಕೆ ತಿಳಿಸಿದರು. ಅವರ ಮಾತಿಗೆ ಸಮ್ಮತಿ ಸೂಚಿಸಿದೆ. ಜೊತೆಗೆ ನನ್ನ ಅನಿಸಿಕೆಯನ್ನೂ ಅವರ ಮುಂದಿಟ್ಟೆ. ತ್ಯಾಜ್ಯ ನೀರಿನಿಂದ ಅನೇಕ ಉಪಯೋಗಗಳಿವೆ. ಇದುವರೆಗೂ ತ್ಯಾಜ್ಯ ನೀರಿನ ಕೃಷಿ ಬಗ್ಗೆ ಮಾತ್ರ ತಿಳಿದಿದ್ದೇವೆ. ಆದರೆ ಅದನ್ನೂ ಮೀರಿದ ಉಪಯೋಗಗಳಿವೆ ಎಂದು ಹೇಳುತ್ತಿರುವಾಗ ಮಧ್ಯದಲ್ಲೇ ತಡೆದು ನಿಲ್ಲಿಸಿ, ‘‘ಇನ್ನೂ ಏನೇನು ಉಪಯೋಗಗಳಿವೆ?’’ ಎಂದರು.

ಸಾಮಾನ್ಯವಾಗಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕುಡಿಯಲು ಮತ್ತು ಅಡುಗೆಗೆ ಹೊರತುಪಡಿಸಿ ಇನ್ನಿತರ ಚಟುವಟಿಕೆಗಳಿಗೆ ಮರುಬಳಕೆ ಮಾಡಲಾಗುತ್ತದೆ. ಹೀಗೆ ತ್ಯಾಜ್ಯ ನೀರನ್ನು ಸಂಸ್ಕರಿಸುವಾಗ ಅದರಲ್ಲಿ ಅನೇಕ ರಾಸಾಯನಿಕಗಳು ಪತ್ತೆಯಾಗುತ್ತವೆ. ಅವುಗಳನ್ನೂ ಮರುಬಳಕೆ ಮಾಡುವಂತಾದರೆ ಒಳಿತಲ್ಲವೇ? ಈ ಯೋಚನೆ ನಮಗೆ ಬರುವುದಕ್ಕಿಂತಲೂ ಮೊದಲೇ ವಿಜ್ಞಾನಿಗಳಿಗೆ ಬಂದಿದೆ. ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು ಶೀಘ್ರದಲ್ಲೇ ನೀರನ್ನು ಶುದ್ಧೀಕರಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬಹುದು. ಅವು ಕೈಗಾರಿಕಾ ನಾವೀನ್ಯತೆಯ ಕೇಂದ್ರವಾಗಬಹುದು ಎಂಬುದನ್ನು ಸಂಶೋಧನಾ ತಂಡವೊಂದು ಕಂಡುಕೊಂಡಿದೆ.

ಡೆನ್ಮಾರ್ಕ್‌ನ ಆಲ್ಬೋರ್ಗ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಪರ್ ಹಾಲ್ಕ್‌ಜರ್ ನೀಲ್ಸನ್ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯು ತ್ಯಾಜ್ಯ ನೀರಿನಿಂದ ಅಮೂಲ್ಯವಾದ ಬಯೋಪಾಲಿಮರ್‌ಗಳು ಮತ್ತು ಫಾಸ್ಫರಸ್‌ನಂತಹ ಖನಿಜಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಬಹುದೆಂದು ಸಾಬೀತುಪಡಿಸಿದೆ. ತ್ಯಾಜ್ಯನೀರಿನ ಸಂಸ್ಕರಣೆಯು ಕೈಗಾರಿಕಾ ಪ್ರಮಾಣದ ರೂಪಾಂತರಕ್ಕೆ ಸಿದ್ಧವಾಗಿದೆ ಎಂದು ಅಧ್ಯಯನವು ತಿಳಿಸಿದೆ. ತ್ಯಾಜ್ಯ ನೀರಿನಲ್ಲಿರುವ ಬಯೋಪಾಲಿಮರ್‌ಗಳು ಮತ್ತು ಫಾಸ್ಫರಸ್‌ನಂತಹ ಕೆಲವು ಖನಿಜಗಳನ್ನು ಮರುಬಳಕೆ ಮಾಡಬಹುದು. ಈ ಆವಿಷ್ಕಾರವು ಪೆಟ್ರೋಲಿಯಂ ಮೂಲದ ಪಾಲಿಮರ್‌ಗಳ ಮೇಲಿನ ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ನಾವು ಪಳೆಯುಳಿಕೆ ಇಂಧನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕೇವಲ ಶಕ್ತಿಗಾಗಿ ಅಲ್ಲದೆ ದೈನಂದಿನ ಉತ್ಪನ್ನಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್‌ಗಳು ಮತ್ತು ಬಟ್ಟೆಗಳಿಂದ ಹಿಡಿದು ಅಂಟುಗಳು ಮತ್ತು ಬಣ್ಣಗಳವರೆಗೆ ವ್ಯಾಪಕವಾಗಿ ಬಳಸುತ್ತೇವೆ. ಇವುಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಅನೇಕ ಸಿಂಥೆಟಿಕ್ ಪಾಲಿಮರ್‌ಗಳನ್ನು ಪೆಟ್ರೋಕೆಮಿಕಲ್‌ಗಳಿಂದ ಪಡೆಯಲಾಗಿದೆ. ಇದು ಕಚ್ಚಾ ತೈಲದಿಂದ ಬರುತ್ತದೆ. ಪ್ರಸ್ತುತ ಪ್ರೊಫೆಸರ್ ಪರ್ ಹಾಲ್ಕ್‌ಜರ್ ನೀಲ್ಸನ್ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯು ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಿಂದ ಜೈವಿಕ ಪಾಲಿಮರ್‌ಗಳ ಅಭಿವೃದ್ಧಿಯು ಉತ್ತೇಜಕ ಪರಿಹಾರವನ್ನು ಒದಗಿಸುತ್ತದೆ ಎಂಬುದನ್ನು ಸೂಚಿಸಿದೆ. ಇದು ಪೆಟ್ರೋಲಿಯಂ ಆಧಾರಿತ ವಸ್ತುಗಳಿಗೆ ನವೀಕರಿಸಬಹುದಾದ, ಪರಿಸರ ಸ್ನೇಹಿ ಬದಲಿಯನ್ನು ನೀಡುತ್ತದೆ.

ಕೈಗಾರಿಕಾ ಪ್ರಕ್ರಿಯೆಗಳು, ಗಣಿಗಾರಿಕೆ ಮತ್ತು ಒಳಚರಂಡಿಗಳ ತ್ಯಾಜ್ಯನೀರು ಬಯೋಪಾಲಿಮರ್‌ಗಳನ್ನು ಹೊಂದಿರುತ್ತದೆ. ಈ ಬಯೋಪಾಲಿಮರ್‌ಗಳು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾಗುವ ದೀರ್ಘ ಆಣ್ವಿಕ ಸರಪಳಿಗಳು. ಪ್ರತಿದಿನವೂ ತ್ಯಾಜ್ಯ ನೀರನ್ನು ವ್ಯರ್ಥವಾಗಿ ಹರಿದು ಬಿಡುವ ಬದಲು, ಸಂಸ್ಕರಿಸಿ ಅದರಲ್ಲಿನ ಬಯೋಪಾಲಿಮರ್‌ಗಳನ್ನು ಬೇರ್ಪಡಿಸಿ ಬಳಸುವಂತಾದರೆ ಪಳೆಯುಳಿಕೆ ಶಕ್ತಿಯನ್ನು ಮರುಬಳಕೆ ಮಾಡಬಹುದು ಎಂಬುದನ್ನು ಸಂಶೋಧನಾ ತಂಡವು ಅಭಿಪ್ರಾಯಪಟ್ಟಿದೆ. ಬಯೋಪಾಲಿಮರ್‌ಗಳು ತೈಲ ಆಧಾರಿತ ಪಾಲಿಮರ್‌ಗಳಿಗೆ ಪರ್ಯಾಯವಾಗಿ ಸುಸ್ಥಿರ ಉದ್ಯಮದಲ್ಲಿ ಬೇಡಿಕೆಯಲ್ಲಿವೆ ಎನ್ನುತ್ತಾರೆ ನೀಲ್ಸನ್.

ತ್ಯಾಜ್ಯ ನೀರಿನಿಂದ ತೆಗೆದ ಪಾಲಿಮರ್‌ಗಳನ್ನು ಪೆಟ್ರೋಲಿಯಂ ಉತ್ಪನ್ನಗಳನ್ನು ಬದಲಿಸುವ ಜೈವಿಕ ಪಾಲಿಮರ್‌ಗಳಾಗಿ ಪರಿವರ್ತಿಸಬಹುದು. ಇಂದು ವಾಸ್ತವವಾಗಿ ಅಳಿವಿನಂಚಿನಲ್ಲಿರುವ ದೊಡ್ಡ ಕೆಲ್ಪ್ ಕಾಡುಗಳಿಂದ ಹಾಗೂ ಕಡಲಕಳೆಯಿಂದ ಅನೇಕ ಬಯೋಪಾಲಿಮರ್‌ಗಳನ್ನು ಉತ್ಪಾದಿಸಲಾಗುತ್ತದೆ. ಬಯೋಪಾಲಿಮರ್‌ಗಳನ್ನು ಹೊರತೆಗೆಯಲು ನಾವು ಇತರ ಮಾರ್ಗಗಳನ್ನು ಕಂಡುಕೊಂಡರೆ ಅದು ಪರಿಸರಕ್ಕೂ ಮತ್ತು ಜೀವವೈವಿಧ್ಯಕ್ಕೂ ಪ್ರಯೋಜನವಾಗಲಿದೆ. ತ್ಯಾಜ್ಯನೀರು ಬಯೋಪಾಲಿಮರ್‌ಗಳ ಜೊತೆಗೆ ಚಿನ್ನ, ಬೆಳ್ಳಿ, ತಾಮ್ರ ಮತ್ತು ಅಪರೂಪದ ಖನಿಜಗಳನ್ನೂ ಸಹ ಹೊಂದಿರುತ್ತದೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ಇಂತಹ ಅಮೂಲ್ಯ ಖನಿಜಗಳ ಮರುಬಳಕೆ ಮಾಡಬಹುದಲ್ಲವೇ? ಆ ಮೂಲಕ ಪರಿಸರ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದಲ್ಲವೇ?

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X