Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ?...

ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ? ಯಾರಿಗೆ ಬಾಧಕ?

ಶಿವಸುಂದರ್ಶಿವಸುಂದರ್13 Aug 2025 11:04 AM IST
share
ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ? ಯಾರಿಗೆ ಬಾಧಕ?

ನ್ಯಾ. ದಾಸ್ ವರದಿಯ ವಿಧಾನ, ವಿಶ್ಲೇಷಣೆ ಮತ್ತು ಶಿಫಾರಸುಗಳ ಬಗ್ಗೆ ಸುಪ್ರೀಂ ತೀರ್ಪು ಹಾಗೂ ಸಾಮಾಜಿಕ ನ್ಯಾಯದ ಮಾನದಂಡಗಳ ಹಿನ್ನೆಲೆಯಲ್ಲಿ ಚರ್ಚಿಸಿ ಒಂದು ನ್ಯಾಯಸಮ್ಮತ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ ಹಾಗೂ ಹಾಲಿ ಬ್ರಾಹ್ಮಣೀಯ ಹಿಂದುತ್ವ ಹಾಗೂ ಕಾರ್ಪೊರೇಟ್ ಕ್ಯಾಪಿಟಲಿಸಂಗಳ ಜಂಟಿ ದಾಳಿಗಳ ಹಿನ್ನೆಲೆಯಲ್ಲಿ ದಮನಿತ ಪರಿಶಿಷ್ಟ ಜಾತಿಗಳ ಘನತೆಯ ಬದುಕಿನ ಅವಕಾಶಗಳ ರಕ್ಷಣೆಯ ಬಗ್ಗೆ ದೂರಗಾಮಿ ಕ್ರಮಗಳ ಬಗ್ಗೆಯೂ ಮುನ್ನೋಟವನ್ನು ಹೊಂದುವ ಅಗತ್ಯವಿದೆ. ಇಲ್ಲದಿದ್ದರೆ ಈ ಕೆಲವು ಸಹಜ ಹಾಗೂ ಕೆಲವು ಅನಗತ್ಯ ಗೊಂದಲಗಳು ಕೈಗೆ ಬಂದ ತುತ್ತನ್ನೂ ಕೂಡ ಬಾಯಿಗೆ ಇಲ್ಲದಂತೆ ಮಾಡುವ ಅಪಾಯವಿದೆ.

ಭಾಗ - 1

ಕರ್ನಾಟಕದ ವಂಚಿತ ದಲಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆಸುತ್ತಾ ಬಂದಿರುವ ಹೋರಾಟ ಇದೀಗ ಸಫಲ ತಾರ್ಕಿಕ ಅಂತ್ಯ ಕಾಣುವ ಹೊಸ್ತಿಲಲ್ಲಿದೆ. 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ 6:1 ಬಹುಮತದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಒಳವರ್ಗೀಕರಣ ಮಾಡುವುದು ಸಂವಿಧಾನ ಬದ್ಧವೆಂದು ತೀರ್ಪು ನೀಡಿತ್ತು. ಆ ಮೂಲಕ ಒಳಮೀಸಲಾತಿಯನ್ನು ಜಾರಿ ಮಾಡದಿರಲು ಯಾವ ನೆಪಗಳೂ ಸರಕಾರದ ಮುಂದಿಲ್ಲವಾಗಿತ್ತು. ಆದರೂ ಕರ್ನಾಟಕದ ಸಿದ್ದರಾಮಯ್ಯ ಸರಕಾರ ಅನಗತ್ಯ ವಿಳಂಬವನ್ನು ಮಾಡಿತು. ಅದೇನೇ ಇರಲಿ. ಕರ್ನಾಟಕ ಸರಕಾರ ಒಳಮೀಸಲಾತಿಯನ್ನು ಜಾರಿಗೊಳಿಸಲು ಕರ್ನಾಟಕಕ್ಕೆ ನಿರ್ದಿಷ್ಟವಾದ ಸೂತ್ರವನ್ನು ರೂಪಿಸಿಕೊಡಲು ನ್ಯಾ. ನಾಗಮೋಹನ್ ದಾಸ್ ಆಯೋಗವನ್ನು ನೇಮಿಸಿತು. ಸರಕಾರದೊಳಗಿನ ಹಲವಾರು ಪಟ್ಟಭದ್ರರ ಅಸಹಕಾರದ ನಡುವೆಯೂ ನ್ಯಾ. ದಾಸ್ ಆಯೋಗ ತನ್ನ ಸಮಗ್ರ ವರದಿ ಮತ್ತು ಶಿಫಾರಸುಗಳನ್ನು ಕಳೆದ ಆಗಸ್ಟ್ 4ರಂದು ಸರಕಾರಕ್ಕೆ ಸಲ್ಲಿಸಿದೆ. ಇದರ ಬಗ್ಗೆ ಚರ್ಚಿಸಲೆಂದೇ ಮುಖ್ಯಮಂತ್ರಿಗಳು ಆಗಸ್ಟ್ 16ರಂದು ಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆದಿದ್ದಾರೆ.

ಆಗಸ್ಟ್ 4ರಂದು ಸಂಪುಟದಲ್ಲಿ ವರದಿ ಮಂಡನೆಯಾದ ನಂತರ ದಾಸ್ ವರದಿಯ ಪ್ರತಿಗಳು ಎಲ್ಲೆಡೆ ಅನಧಿಕೃತವಾಗಿ ಲಭ್ಯವಾಗುತ್ತಿವೆ. ಪತ್ರಿಕೆಗಳಂತೂ ಸೋರಿಕೆಯಾದ ವರದಿಯನ್ನು ಆಧರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿವೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ವರದಿಯ ಪಠ್ಯ ವಿಸ್ತೃತವಾಗಿ ಹಂಚಿಕೆಯಾಗುತ್ತಿವೆ. ಸರಕಾರ ಈವರೆಗೆ ಪತ್ರಿಕಾ ವರದಿಗಳನ್ನಾಗಲೀ, ಜಾಲತಾಣದ ವಿಶ್ಲೇಷಣೆಗಳನ್ನಾಗಲೀ ತಪ್ಪೆಂದು ನಿರಾಕರಿಸಿಲ್ಲ. ಹೀಗಾಗಿ ಲಭ್ಯವಿರುವುದು ಅನಧಿಕೃತವಾಗಿ ಹಂಚಿಕೆಯಾಗಿರುವ ಅಧಿಕೃತ ವರದಿಯೇ ಎಂಬುದರಲ್ಲಿ ಸಂಶಯವಿಲ್ಲ.

ದಾಸ್ ಅವರ ಆಯೋಗವು ಪರಿಶಿಷ್ಟ ಜಾತಿ ವರ್ಗದಡಿ ಇರುವ 101 ಜಾತಿಗಳನ್ನು 5 ಪ್ರವರ್ಗಗಳಲ್ಲಿ ವಿಂಗಡಿಸಿದೆ. ಈ 101 ಜಾತಿಗಳಲ್ಲಿ AK, AD, AA ನಾಮಾಂಕಿತಗಳು ನಿರ್ದಿಷ್ಟ ಜಾತಿ ಸೂಚಕವಲ್ಲದೇ ಜಾತಿ ಗುಂಪು ಸೂಚಕವಾಗಿದೆ. ಹೀಗಾಗಿ ಆ ಗುಂಪಿನಲ್ಲಿ ನೋಂದಾಯಿಸಿಕೊಂಡಿರುವ ಸದಸ್ಯರ ಮೂಲಜಾತಿಯನ್ನು ಪಟ್ಟಿ ಮಾಡಲು ಮತ್ತು ಒಟ್ಟಾರೆ ಇಂದಿನ ಮಟ್ಟಿಗೆ ಪರಿಶಿಷ್ಟ ಜಾತಿಗಳ ಉಪಜಾತಿವಾರು ಜನಸಂಖ್ಯೆಯನ್ನು ನಿಖರವಾಗಿ ಪಡೆದುಕೊಳ್ಳಲು ದಾಸ್ ಆಯೋಗ ಒಂದು ಪ್ರತ್ಯೇಕ ಹಾಗೂ ಸಾಧ್ಯವಿರುವಷ್ಟು ನಿಖರವಾದ ಸಮೀಕ್ಷೆಯನ್ನೂ ಕೂಡ ನಡೆಸಿತು. ಆದರೂ ಸುಮಾರು 4.74 ಲಕ್ಷ ಜನರು AK, AD, AA ನಾಮಾಂಕಿತಗಳಲ್ಲೇ ಗುರುತಿಸಿಕೊಂಡಿರುವುದರಿಂದ ಆ ಮೂರು ಜಾತಿಗುಂಪು ಸೂಚಕಗಳನ್ನು ಉಳಿಸಿಕೊಂಡು ಅದರಡಿ ನೋಂದಾಯಿತರಾದವರ ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳ ಸಮೀಕ್ಷೆಯನ್ನು ಪ್ರತ್ಯೇಕವಾಗಿ ಮಾಡಿ ಪ್ರತ್ಯೇಕವಾದ ಉಪಮೀಸಲಾತಿಯನ್ನು ನೀಡಿದೆ.

ಒಳಮೀಸಲಾತಿಗೆ ನ್ಯಾ. ದಾಸ್ ಸೂತ್ರಗಳು ಸರಿಯೇ?

ದಾಸ್ ಆಯೋಗವು 101 ಪರಿಶಿಷ್ಟ ಜಾತಿಗಳಿರುವ ಅಂದಾಜು 1.05 ಕೋಟಿ ಜನಸಂಖ್ಯೆಯ (1.77 ಲಕ್ಷ ಬುಡ್ಗ ಜಂಗಮ ಎಂದು ತಪ್ಪಾಗಿ ನಿಂದಾಯಿಸಿಕೊಂಡಿರುವರ ಮತ್ತು 14 ಸಾವಿರ ಅಂತರ್ಜಾತಿ ವಿವಾಹಿತರನ್ನು ತೆಗೆದ್ ನಂತರ ಅಂತಿಮ ಸಂಖ್ಯೆ) ಪರಿಶಿಷ್ಟರನ್ನು:

-ಅತ್ಯಂತ ಹಿಂದುಳಿದ 5.22 ಲಕ್ಷ ಜನರಿರುವ 59 ಉಪ ಜಾತಿಗಳನ್ನು ಪ್ರವರ್ಗ ‘ಎ’ ಎಂದು ಪರಿಗಣಿಸಿ ಶೇ.1ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ.

-ಹೆಚ್ಚು ಹಿಂದುಳಿದಿರುವ ಆದರೆ ಪ್ರವರ್ಗ ‘ಎ’ಗಿಂತ ಸಾಪೇಕ್ಷವಾಗಿ ಮುಂದುವರಿದಿರುವ 36.69 ಲಕ್ಷ ಜನರುಳ್ಳ ಮಾದಿಗ ಮತ್ತು ಮಾದಿಗ ಸಂಬಂಧಿತ 18 ಉಪಜಾತಿಗಳನ್ನು ಪ್ರವರ್ಗ ‘ಬಿ’ ಎಂದು ವರ್ಗೀಕರಿಸಿ ಶೇ. 6ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ.

-ಹಿಂದುಳಿದಿರುವ ಆದರೆ ಪ್ರವರ್ಗ ‘ಬಿ’ಗಿಂತ ಸಾಪೇಕ್ಷವಾಗಿ ಮುಂದುವರಿದಿರುವ 30.08 ಲಕ್ಷ ಜನರಿರುವ ಹೊಲೆಯ ಮತ್ತು ಹೊಲೆಯ ಸಂಬಂಧಿತ 17 ಜಾತಿಗಳನ್ನು ಪ್ರವರ್ಗ ‘ಸಿ’ ಎಂದು ಪರಿಗಣಿಸಿ ಶೇ. 5 ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ.

-ಉಳಿದ ಪರಿಶಿಷ್ಟ ಜಾತಿಗಳಿಂದ ಕಡಿಮೆ ಹಿಂದುಳಿದಿರುವ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಂಬಂಧಿತ ಜಾತಿಗಳಿರುವ 28.34 ಲಕ್ಷ ಜನರನ್ನು ಪ್ರವರ್ಗ ‘ಡಿ’ ಎಂದು ಪರಿಗಣಿಸಿ ಶೇ. 4ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ.

-ಮೂಲ ಜಾತಿಯನ್ನು ಹೇಳದೆ AK, AD, AA ಜಾತಿ ಗುಂಪುಗಳಲ್ಲೇ ಗುರುತಿಸಿಕೊಂಡಿರುವ 4.74 ಜನರನ್ನು ಪ್ರವರ್ಗ ‘ಇ’ ಎಂದು ಪರಿಗಣಿಸಿ ಶೇ. 1ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ.

ಈ ಶಿಫಾರಸುಗಳು ಹೊರಬಿದ್ದಮೇಲೆ ಒಳಮೀಸಲಾತಿಯ ಬಗ್ಗೆ ಈ ಹಿಂದೆ ಯಾರ್ಯಾರಿಗೆ ಯಾವ್ಯಾವ ನಿಲುವುಗಳಿದ್ದವೋ ಅದೇ ಬಗೆಯ ನಿಲುವುಗಳು ನ್ಯಾ. ದಾಸ್ ವರದಿಯ ಬಗ್ಗೆಯೂ ವ್ಯಕ್ತವಾಗುತ್ತಿವೆ.

ಕಳೆದ 35 ವರ್ಷಗಳಿಂದ ಒಳಮೀಸಲಾತಿಗೆ ಹೋರಾಡುತ್ತಾ ಬಂದಿರುವ ವಂಚಿತ ಪರಿಶಿಷ್ಟರಲ್ಲೇ ಸಾಪೇಕ್ಷವಾಗಿ ಇನ್ನೂ ಹೆಚ್ಚು ವಂಚಿತರಾಗಿರುವ ಮಾದಿಗ ಸಮುದಾಯಗಳು ಆಗಸ್ಟ್ 16ರ ಸಂಪುಟ ಸಭೆಯಲ್ಲೇ ವರದಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಕೂಡಲೇ ದಾಸ್ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದೆ. ಈ ಹಿಂದೆ ಒಳಮೀಸಲಾತಿಗೆ ಮೌನ ಸಮ್ಮತಿಯನ್ನು ವ್ಯಕ್ತ ಪಡಿಸುತ್ತಿದ್ದ ಹೊಲೆಯ ಸಮುದಾಯದ ಕೆಲವು ಮುಖಂಡರು ನ್ಯಾ. ದಾಸ್ ವರದಿಯನ್ನು ಸುಟ್ಟು ತೀವ್ರ ತಿರಸ್ಕಾರ ತೋರಿದ್ದಾರೆ. ನ್ಯಾ. ದಾಸ್ ವರದಿಯನ್ನು ವಿರೋಧಿಸುತ್ತಿರುವವರ ಕೆಲವು ಹೊಲೆಯ ಸಂಬಂಧಿತ ಜಾತಿ ಮುಖಂಡರ ಪ್ರಧಾನ ಆರೋಪ ಮಾದಿಗ ಸಂಬಂಧಿ ಜಾತಿಗಳಷ್ಟೇ ಜನಸಂಖ್ಯೆ ತಮ್ಮದೂ ಇರುವುದರಿಂದ ತಮ್ಮ ವೃಂದಕ್ಕೆ ಮಾದಿಗರಷ್ಟೇ ಮೀಸಲಾತಿಯನ್ನು ಕೊಡಬೇಕೆಂಬುದಾಗಿದೆ ಹಾಗೂ ಈ ಹಿಂದೆ ಹೊಲೆಯ ಸಂಬಂಧಿತ ಜಾತಿಗಳಲ್ಲಿ ಸೇರಿಸಲ್ಪಟ್ಟಿದ್ದ ಜಾತಿಗಳನ್ನು ಮಾದಿಗ ವೃಂದಕ್ಕೆ ಸೇರಿಸಿರುವುದು ಅನ್ಯಾಯವೆನ್ನುವುದು ಅವರ ಆಕ್ಷೇಪ. ಲಂಬಾಣಿ ಹಾಗೂ ಆ ಪ್ರವರ್ಗದ ಮುಖಂಡರು ವರದಿಯ ಅಧ್ಯಯನಕ್ಕೆ ಉಪಸಮಿತಿ ಮಾಡಿ ಯಾರಿಗೂ ಅನ್ಯಾಯವಾಗದಂತೆ ಜಾರಿ ಮಾಡಬೇಕೆಂಬ ಮುಸುಕಿನಲ್ಲಿ ಅನುಷ್ಠಾನವನ್ನು ಮುಂದಕ್ಕೆ ದೂಡುವ ಪ್ರಯತ್ನ ನಡೆಸಿದ್ದಾರೆ. ಲಂಬಾಣಿ ಸಂಬಂಧಿ ಜಾತಿಗಳು ಅತ್ಯಂತ ಹಿಂದುಳಿದ ಜಾತಿಗಳೆಂಬುದು ಅವರು ಮಾಡುತ್ತಿರುವ ಪ್ರತಿವಾದ. ಇವೆಲ್ಲದರ ಜೊತೆಗೆ AK, AD, AA ಜಾತಿ ಗುಂಪುಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವೇ ಇಲ್ಲ. ಅದನ್ನು ರದ್ದು ಮಾಡಿ ಆ ಪ್ರಮಾಣವನ್ನು ಉಳಿದವರಿಗೆ ಹಂಚಬೇಕೆಂಬುದು ಮತ್ತೊಂದು ವಾದ.

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅನ್ಯಾಯವನ್ನು ಸರಿಪಡಿಸಬೇಕಿದ್ದ ಸಾಮಾಜಿಕ ನ್ಯಾಯದ ಉಪಕ್ರಮವೊಂದು ಇನ್ನಷ್ಟು ಅನೈಕ್ಯ, ವೈಷಮ್ಯಗಳಿಗೆ ಹಾಗೂ ಆ ಮೂಲಕ ಒಟ್ಟಾರೆ ಪರಿಶಿಷ್ಟ ಸಮುದಾಯದ ಶೋಷಣೆಯ ಮುಂದುವರಿಕೆಗೆ ಕಾರಣವಾಗಬಹುದೆಂಬ ಆತಂಕವೂ ಹೆಚ್ಚಾಗುತ್ತಿದೆ.

ಆದ್ದರಿಂದ ನ್ಯಾ. ದಾಸ್ ವರದಿಯ ವಿಧಾನ, ವಿಶ್ಲೇಷಣೆ ಮತ್ತು ಶಿಫಾರಸುಗಳ ಬಗ್ಗೆ ಸುಪ್ರೀಂ ತೀರ್ಪು ಹಾಗೂ ಸಾಮಾಜಿಕ ನ್ಯಾಯದ ಮಾನದಂಡಗಳ ಹಿನ್ನೆಲೆಯಲ್ಲಿ ಚರ್ಚಿಸಿ ಒಂದು ನ್ಯಾಯಸಮ್ಮತ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ ಹಾಗೂ ಹಾಲಿ ಬ್ರಾಹ್ಮಣೀಯ ಹಿಂದುತ್ವ ಹಾಗೂ ಕಾರ್ಪೊರೇಟ್ ಕ್ಯಾಪಿಟಲಿಸಂಗಳ ಜಂಟಿ ದಾಳಿಗಳ ಹಿನ್ನೆಲೆಯಲ್ಲಿ ದಮನಿತ ಪರಿಶಿಷ್ಟ ಜಾತಿಗಳ ಘನತೆಯ ಬದುಕಿನ ಅವಕಾಶಗಳ ರಕ್ಷಣೆಯ ಬಗ್ಗೆ ದೂರಗಾಮಿ ಕ್ರಮಗಳ ಬಗ್ಗೆಯೂ ಮುನ್ನೋಟವನ್ನು ಹೊಂದುವ ಅಗತ್ಯವಿದೆ. ಇಲ್ಲದಿದ್ದರೆ ಈ ಕೆಲವು ಸಹಜ ಹಾಗೂ ಕೆಲವು ಅನಗತ್ಯ ಗೊಂದಲಗಳು ಕೈಗೆ ಬಂದ ತುತ್ತನ್ನೂ ಕೂಡ ಬಾಯಿಗೆ ಇಲ್ಲದಂತೆ ಮಾಡುವ ಅಪಾಯವಿದೆ.

ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಸಮರ್ಪಕ ವಾಗಿದೆಯೋ ಅಲ್ಲವೋ ಎಂಬ ತೀರ್ಮಾನವನ್ನು ತಮ್ಮ ತಮ್ಮ ಗುಂಪು ಅಥವಾ ಜಾತಿಗಳ ಸೀಮಿತ ಹಿತಾಸಕ್ತಿಯಿಂದ ವಿಶ್ಲೇಷಿಸಿ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ.

ದಾಸ್ ಅವರ ವರದಿಯನ್ನು ಒಪ್ಪಲು ಅಥವಾ ತಿರಸ್ಕರಿಸಲು ಇರುವುದು ಒಂದೇ ಮಾನದಂಡ:

ವರದಿಯು ಒಳಮೀಸಲಾತಿಯ ಸಾಂವಿಧಾನಿಕ ಮಾನ್ಯತೆ ಮತ್ತು ಅದನ್ನು ಒದಗಿಸುವಾಗ ಸರಕಾರಗಳು ಪೂರೈಸಬೇಕಿರುವ ಷರತ್ತುಗಳ ಬಗ್ಗೆ ಸುಪ್ರೀಂ ಕೋರ್ಟ್ ವಿವರಿಸಿರುವ ತಾತ್ವಿಕತೆ ಮತ್ತು ವಿಧಿಸಿರುವ ಷರತ್ತುಗಳನ್ನು ಪಾಲಿಸಿದೆಯೇ ಇಲ್ಲವೇ ಮತ್ತು ಅದರಿಂದ ಒಳಮೀಸಲಾತಿಯ ಸಾಮಾಜಿಕ ನ್ಯಾಯದ ತತ್ವ ಪಾಲಿಸುತ್ತಿದೆಯೇ ಇಲ್ಲವೇ ಎಂಬುದು ಮಾತ್ರ.

ಒಳಮೀಸಲಾತಿ - ಸುಪ್ರೀಂ ಮಾನದಂಡಗಳು

ಒಳಮೀಸಲಾತಿಯು ಸಂವಿಧಾನ ಮಾನ್ಯವೇ ಎಂಬ ಪ್ರಶ್ನೆಯ ಬಗ್ಗೆ ಭಾರತದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಈ ಕೆಲವು ಸಾಂವಿಧಾನಿಕ ಸ್ಪಷ್ಟೀಕರಣಗಳನ್ನು ಕೊಟ್ಟಿದೆ:

-ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣಗೊಳ್ಳುವ ಜಾತಿಗಳು ಸಮಾಜದ ಇತರ ಜಾತಿ ಸಮುದಾಯಗಳಿಗೆ ಹೋಲಿಸಿದಲ್ಲಿ ಏಕರೂಪವಾಗಿದ್ದರೂ, ತಮ್ಮ ನಡುವೆ ಏಕರೂಪತೆಯನ್ನು ಹೊಂದಿರಲೇ ಬೇಕೆಂದಿಲ್ಲ.

-ಅಸ್ಪಶ್ಯತೆಯಲ್ಲೂ ಮತ್ತು ಅಸ್ಪಶ್ಯರ ನಡುವೆಯ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯಲ್ಲೂ ಸಾಪೇಕ್ಷವಾದ ಏರುಪೇರುಗಳೂ ಅಸಮಾನತೆಗಳೂ ಇರಲು ಸಾಧ್ಯ.

-ಆಗ ಅಸಮಾನರನ್ನೂ ಸಮಾನವಾಗಿ ಪರಿಭಾವಿಸಿ ಮೀಸಲಾತಿಯನ್ನು ನೀಡುವುದು ಪ್ರಮಾದವಾಗುತ್ತದೆ. ಮೀಸಲಾತಿ ತತ್ವಕ್ಕೆ ವಿರುದ್ಧವಾಗುತ್ತದೆ.

-ಹಾಗಿದ್ದಾಗ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲೂ ಒಳಮೀಸಲಾತಿಯನ್ನು ಒದಗಿಸುವುದು ಸರಕಾರದ (ಆಯಾ ರಾಜ್ಯ ಸರಕಾರಗಳ)ಕರ್ತವ್ಯವಾಗುತ್ತದೆ.

-ಆದರೆ ಹಾಗೆ ಪರಿಶಿಷ್ಟರೊಳಗಿನ ಒಂದು ಗುಂಪಿಗೆ ಇತರ ಗುಂಪುಗಳಿಗಿಂತ ವಿಶೇಷವಾಗಿ ಪರಿಗಣಿಸುವಾಗ ಆ ಗುಂಪು ಮತ್ತೊಂದು ಗುಂಪಿಗಿಂತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಷ್ಟು ಹಿಂದುಳಿದಿದೆ ಮತ್ತು ಸರಕಾರದ ಉದ್ಯೋಗಗಳ ಪ್ರಾತಿನಿಧ್ಯಗಳಲ್ಲಿ ಉಳಿದವರಿಗಿಂತ ಎಷ್ಟು ಹಿಂದುಳಿದಿದೆ ಎಂದು ತಳಮಟ್ಟದ ಅಧ್ಯಯನದ ಮೂಲಕ ಪ್ರಮಾಣಾತ್ಮಕವಾಗಿ ರುಜುವಾತು ಮಾಡಬೇಕು.

-ಮತ್ತು ಆ ವಿಶ್ಲೇಷಣೆಗೆ ಅನುಗುಣವಾಗಿ ನೀಡುವ ಒಳಮೀಸಲಾತಿ ಈ ಅಂತರವನ್ನು ಕಡಿಮೆ ಮಾಡಲಿದೆ ಎಂಬುದನ್ನು ಖಚಿತಪಡಿಸಬೇಕು

-ಹಾಗೂ ಈವರೆಗೆ ಪರಿಶಿಷ್ಟ ಮೀಸಲಾತಿಯನ್ನು ಪಡೆಯುತ್ತಿದ್ದ ಯಾವ ಜಾತಿಗಳಿಗೂ ಪರಿಶಿಷ್ಟ ಮೀಸಲಾತಿಯನ್ನೇ ನಿರಾಕರಿಸಬಾರದು.

ಇದು ಒಳಮೀಸಲಾತಿಯನ್ನು ಜಾರಿ ಮಾಡುವಾಗ ಸರಕಾರಗಳು ಅಳವಡಿಸಿಕೊಳ್ಳಬೇಕಾದ ವಿಧಾನ. ಹೀಗೆ ಮಾಡಿಲ್ಲದಿದ್ದರೆ ಅದು ಅಸಿಂಧು. ಹೀಗಾಗಿ ಒಳಮೀಸಲಾತಿಯ ಸಲುವಾಗಿ ಒಳಗುಂಪುಗಳನ್ನು ರಚಿಸುವಾಗ ಅನುಸರಿಸಬೇಕಾದ ಮಾನದಂಡಗಳು ಪ್ರಧಾನವಾಗಿ ಆ ಗುಂಪುಗಳ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಗಳೇ ಆಗಿರಬೇಕೇ ವಿನಾ ಕೇವಲ ಜನಸಂಖ್ಯೆಯಲ್ಲ.

ಹೀಗಾಗಿ ನ್ಯಾ. ದಾಸ್ ಆಯೋಗ ಈ ಮಾನದಂಡಗಳನ್ನು ಅನುಸರಿಸಿದೆಯೇ ಇಲ್ಲವೇ? ತಳಮಟ್ಟದ ಪ್ರಮಾಣಾನುಸಾರ ಮಾಹಿತಿ ಸಂಗ್ರಹ ಮಾಡಿದೆಯೇ ಇಲ್ಲವೇ? ಸರಕಾರಿ ಪ್ರಾತಿನಿಧ್ಯದ ನಿಖರ ಪ್ರಮಾಣ ಅನುಸರಿಸಿದೆಯೇ ಇಲ್ಲವೇ? ಒಳಮೀಸಲಾತಿಗಾಗಿ ಗುಂಪುಗಳನ್ನು ರಚಿಸುವಾಗ ಸಾಪೇಕ್ಷ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿ ಪರಿಗಣಿಸಿದೆಯೇ ಇಲ್ಲವೇ ಎಂಬುದರ ಆಧಾರದಲ್ಲಿ ಮಾತ್ರ ನ್ಯಾ. ದಾಸ್ ವರದಿಯ ಬಗ್ಗೆ ಸರಿಯಾದ ನಿಲುವಿಗೆ ಬರಲು ಸಾಧ್ಯ.

ನ್ಯಾ. ದಾಸ್ ಆಯೋಗ ಮತ್ತು ಒಳಮೀಸಲಾತಿಯ ಪ್ರಮಾಣಗಳು

ಮೊದಲನೆಯದಾಗಿ, ಕರ್ನಾಟಕದ ಪರಿಶಿಷ್ಟ ಜಾತಿಗಳೊಳಗೆ ವರ್ಗೀಕರಿಸಲ್ಪಟ್ಟ ಜಾತಿಗಳು ಸಮಾಜದ ಇತರ ಜಾತಿಗಳಿಗೆ ಹೋಲಿಸಿದಲ್ಲಿ ಏಕರೂಪತೆಯನ್ನು ಹೊಂದಿದ್ದರೂ ಅವುಗಳ ನಡುವೆ ಗಮನಾರ್ಹ ಅಸಮಾನತೆ, ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿದೆಯೋ ಇಲ್ಲವೋ ಎಂಬುದು ಮುಖ್ಯ ಪ್ರಶ್ನೆ.

ದಾಸ್ ಆಯೋಗವು ಸಾಮಾಜಿಕ ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮಾನದಂಡಗಳನ್ನು ಅನುಸರಿಸಿದೆ ಮತ್ತು ಸರಕಾರಿ ಪ್ರಾತಿನಿಧ್ಯದ ಜಾತಿವಾರು ಪ್ರಮಾಣವನ್ನು ಅಭ್ಯಸಿಸಿದೆ. ಅದಕ್ಕೆ ಬೇಕಾದ ಎಲ್ಲಾ ಅಂಕಿಅಂಶಗಳು ದಕ್ಕಿಲ್ಲವಾದರೂ ಬಹುಪಾಲು ದಕ್ಕಿರುವ ವರ್ತಮಾನದ ಅಧಿಕೃತ ಅಂಕಿಅಂಶಗಳನ್ನು ಆಧರಿಸಿದೆ.

ಪರಿಶಿಷ್ಟ ಉಪಜಾತಿಗಳಲ್ಲಿ ಶೈಕ್ಷಣಿಕ ಅಸಮಾನತೆ

ಉಳಿದ ಮುಂದುವರಿದ ಸಮಾಜಕ್ಕೆ ಹೋಲಿಸಿದರೆ ಇಡೀ ಪರಿಶಿಷ್ಟ ಜಾತಿಗಳು ಶೈಕ್ಷಣಿಕವಾಗಿ ಹೆಚ್ಚು ಅಸಮಾನತೆ ಪರಿಶಿಷ್ಟರೊಳಗಿನ ಜಾತಿಗಳ ನಡುವೆ ಶೈಕ್ಷಣಿಕ ಅಸಮಾನತೆ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ದಾಸ್ ಆಯೋಗವು ಪರಿಶಿಷ್ಟ ಜಾತಿಗಳೊಳಗೆ ಸಾಕ್ಷರತೆ, ಪಿಯುಸಿ ಮತ್ತು ಪದವಿ ಪಾಸಾದವರ ಪ್ರಮಾಣ ಹಾಗೂ ಉನ್ನತ ತಾಂತ್ರಿಕ ಪದವಿ ಪಡೆದವರ ಪ್ರಮಾಣವನ್ನು ಅಭ್ಯಾಸ ಮಾಡಿದೆ. ಅದಕ್ಕೆ ಸರಕಾರದ ಅಂಕಿ ಅಂಶ ಹಾಗೂ ಅದರ ಇತರ ವರದಿಗಳನ್ನು ಆಧರಿಸಿದೆ.

ಇವೆಲ್ಲದರ ಪ್ರಕಾರ ಪರಿಶಿಷ್ಟರೊಳಗೆ ಅತಿ ಹೆಚ್ಚು ಸಾಕ್ಷರತೆ ಪಡೆದಿರುವ 26 ಜಾತಿಗಳು (ಶೇ. 80ಕ್ಕಿಂತ ಹೆಚ್ಚು), ಮಧ್ಯಮ ಪ್ರಮಾಣದ 67 ಜಾತಿಗಳು (ಶೇ. 60ಕ್ಕಿಂತ ಹೆಚ್ಚು ಸಾಕ್ಷರತೆ), ಕಡಿಮೆ 17 ಜಾತಿಗಳು ಹಾಗೂ 3 ಜಾತಿಗಳು ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿವೆ. ಹಾಗೂ ಪಿಯುಸಿ ಪಾಸಾಗಿರುವ ಶೇ. 72ರಷ್ಟು ಪರಿಶಿಷ್ಟ ಮಕ್ಕಳು ಕೇವಲ ನಾಲ್ಕು ಜಾತಿಗಳಿಗೆ ಸೇರಿವೆ. ಅರ್ಥಾತ್ ಉಳಿದ 97 ಜಾತಿಗಳಲ್ಲಿ ಶೇ. 28 ಮಕ್ಕಳು ಮಾತ್ರ ಪಿಯುಸಿ ಮುಟ್ಟಿವೆ. ಹಾಗೆಯೇ ಪದವಿ ಮುಟ್ಟಿದ ಶೇ. 71 ಮಕ್ಕಳು ಕೂಡ ಕೇವಲ ನಾಲ್ಕು ಪರಿಶಿಷ್ಟ ಉಪಜಾತಿಗಳಿಗೆ ಸೇರಿವೆ. ಅದೇ ರೀತಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 11,365 ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಶೇ. 70ರಷ್ಟು ವಿದ್ಯಾರ್ಥಿಗಳು ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಗಳಿಗೆ ಸೇರಿದವರು. ಇಂಜಿನಿಯರಿಂಗ್ ಓದುತ್ತಿರುವ 45,216 ಪರಿಶಿಷ್ಟ ವಿದ್ಯಾರ್ಥಿಗಳಲ್ಲೂ ಶೇ. 71ರಷ್ಟು ವಿದ್ಯಾರ್ಥಿಗಳು ಈ ನಾಲ್ಕು ಜಾತಿಗಳಿಗೆ ಸೇರಿದವರು. ಸಮಾಜದ ಬಲಿಷ್ಠ ಜಾತಿಗಳಾದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಿಗೆ ಹೋಲಿಸಿದಲ್ಲಿ ಈ ಸಂಖ್ಯೆಗಳು ತೀರಾ ಕಡಿಮೆಯಿದ್ದರೂ ಪರಿಶಿಷ್ಟರೊಳಗಿನ ಉಪಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಮೀಸಲಾತಿಯ ಬಹುಪಾಲು ಈ ನಾಲ್ಕು ಜಾತಿಗಳಿಗೆ ಮಾತ್ರ ಲಭ್ಯವಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ.

ಇದಕ್ಕೆ ತದ್ವಿರುದ್ಧವಾಗಿ ಪರಿಶಿಷ್ಟರೊಳಗಿನ ಉಳಿದ 97 ಜಾತಿಗಳಲ್ಲಿ 25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ. 14 ಜಾತಿಗಳಲ್ಲಿನ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ. 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ. ಇಲ್ಲ.

ಹೀಗಾಗಿ ಪರಿಶಿಷ್ಟರೆಂದು ವರ್ಗೀಕರಿಸಲ್ಪಟ್ಟ 101 ಜಾತಿಗಳಲ್ಲಿ ಅಪಾರವಾದ ಶೈಕ್ಷಣಿಕ ಅಸಮಾನತೆ ಇರುವುದು ಸುಸ್ಪಷ್ಟ. ಹೀಗಾಗಿಯೇ ಅತ್ಯಂತ ಹಿಂದುಳಿದವರನ್ನು ಮುಂದುವರಿದವರಿಂದ ಪ್ರತ್ಯೇಕಿಸಿ ಮತ್ತೊಂದು ಗುಂಪು ಮಾಡುವ ಅಗತ್ಯವಿದೆ.

ಪರಿಶಿಷ್ಟ ಉಪಜಾತಿಗಳಲ್ಲಿ ಪ್ರಾತಿನಿಧ್ಯ ಅಸಮಾನತೆ

ಪರಿಶಿಷ್ಟರೊಳಗಿನ ಅಸಮಾನತೆಯನ್ನು ರುಜುವಾತುಪಡಿಸುವ ಮತ್ತೊಂದು ಪ್ರಮುಖ ಅಂಶ ಸರಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯದ ಪ್ರಮಾಣ. ದಾಸ್ ಆಯೋಗವು ಈ ವಿಷಯದ ಅಧ್ಯಯನ ಮಾಡಲು ಐತಿಹಾಸಿಕವಾಗಿ 2018ರವರೆಗಿನ ಅಂಕಿಅಂಶಗಳನ್ನು ಹೊಂದಿರುವ ರತ್ನಪ್ರಭಾ ಅವರ ವರದಿಯನ್ನು ಮತ್ತು ತಾವೇ ಖುದ್ದಾಗಿ ಹಾಲಿ ಪರಿಸ್ಥಿತಿಯನ್ನು ಪರಿಶೀಲಿಸಲು 45 ಇಲಾಖೆಗಳ ಜಾತಿವಾರು ಸರಕಾರಿ ಅಧಿಕಾರಿಗಳ ಮತ್ತು ನೌಕರರ ಯಾದಿಯನ್ನು ತರಿಸಿಕೊಂಡು ವಿಶ್ಲೇಷಿಸಿದೆ.

ಅದರ ಪ್ರಕಾರ ಒಟ್ಟಾರೆ ಪರಿಶಿಷ್ಟ ಜಾತಿಗಳ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಶೇ. 1.52ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಸರಕಾರಿ ಹುದ್ದೆಗಳಲ್ಲಿದ್ದಾರೆ. ಆದರೆ ಇವರಲ್ಲಿ ಅತ್ಯಂತ ಹಿಂದುಳಿದ ದಲಿತ ಅಲೆಮಾರಿ ಇನ್ನಿತರ (ಪ್ರವರ್ಗ ‘ಎ’ದಲ್ಲಿರುವ) ಜಾತಿಗಳಲ್ಲಿ ಶೇ. 0.81ರಷ್ಟು ಮಾತ್ರ ಸರಕಾರಿ ನೌಕರಿಯಲ್ಲಿದ್ದಾರೆ. ಮಾದಿಗ ಸಂಬಂಧಿತ ಜಾತಿಗಳು ಶೇ. 1.57, ಹೊಲೆಯ ಸಂಬಂಧಿತ ಜಾತಿಗಳು 2.05 ಮತ್ತು ಸ್ಪಶ್ಯ ಜಾತಿಗಳು ಶೇ. 1.25ರಷ್ಟು ಪ್ರಾತಿನಿಧ್ಯವನ್ನು ಪಡೆದಿವೆ. ಇದರಲ್ಲಿ ಸ್ಪಶ್ಯ ಜಾತಿಗಳಲ್ಲಿ ಲಂಬಾಣಿ ಸಂಬಂಧಿತ ಜಾತಿಗಳ ಪಾಲು ಉಳಿದ ಸ್ಪಶ್ಯ ಜಾತಿಗಳಿಗಿಂತ ಹೆಚ್ಚು.

share
ಶಿವಸುಂದರ್
ಶಿವಸುಂದರ್
Next Story
X