ನಾಲ್ಕು ವಾಹನಗಳಿಗೆ ಕಾರು ಢಿಕ್ಕಿ : ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಆರೋಪ

ಶಿವಮೊಗ್ಗ,ಸೆ.13 : ಕಾರು ಚಾಲಕನೊಬ್ಬ ಯದ್ವಾ ತದ್ವಾ ಡ್ರೈವಿಂಗ್ ಮಾಡಿ ಬೈಕ್, ಆಟೊ, ಕಾರು ಸೇರಿ ನಾಲ್ಕು ವಾಹನಗಳಿಗೆ ಅಪಘಾತ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಮೂಲದ ಕುಮಾರ್ ಎಂಬಾತ ಚಾಲನೆ ಮಾಡುತ್ತಿದ್ದ ಕಾರು ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದು, ಕೊನೆಗೆ ಡಿವೈಡರ್‌ಗೆ ಗುದ್ದಿಗೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಮಹಾವೀರ ವೃತ್ತದಲ್ಲಿ ಘಟನೆ ನಡೆದಿದೆ. ಆರೋಪಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿರುವ ಆರೋಪ ಕೇಳಿಬಂದಿದೆ. ಕಾರು ಚಾಲಕನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.
Next Story