Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮಣಿಪುರದ ಸಂತ್ರಸ್ತ ಜನರ ಬಳಿ ಪ್ರಧಾನಿ...

ಮಣಿಪುರದ ಸಂತ್ರಸ್ತ ಜನರ ಬಳಿ ಪ್ರಧಾನಿ ಕ್ಷಮೆಯಾಚಿಸುವರೆ?

ವಾರ್ತಾಭಾರತಿವಾರ್ತಾಭಾರತಿ12 Sept 2025 8:59 AM IST
share
ಮಣಿಪುರದ ಸಂತ್ರಸ್ತ ಜನರ ಬಳಿ ಪ್ರಧಾನಿ ಕ್ಷಮೆಯಾಚಿಸುವರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಣಿಪುರ ಭಾರತದ ಒಂದು ಭಾಗ ಎನ್ನುವುದು ಕೊನೆಗೂ ಪ್ರಧಾನಿ ಮೋದಿಯವರಿಗೆ ಮನವರಿಕೆಯಾದಂತಿದೆ. ಕಳೆದ ಎರಡೂವರೆ ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಗಲಭೆ ಉಲ್ಬಣಿಸಿದ ಸುಮಾರು ಎರಡೂವರೆ ವರ್ಷಗಳ ಬಳಿಕ ಭೇಟಿ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಪ್ರಧಾನಿ ಮೋದಿ. ಶನಿವಾರ ಅವರು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ದೂರದ ಉಕ್ರೇನ್‌ನಲ್ಲಿ, ಗಾಝಾದಲ್ಲಿ ನಡೆಯುತ್ತಿರುವ ಸಾವು ನೋವುಗಳಿಗೆ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದ, ರಶ್ಯ, ಅಮೆರಿಕ ಎಂದು ವಿಶ್ವಾದ್ಯಂತ ಪ್ರವಾಸ ಮಾಡಿದ್ದ ಪ್ರಧಾನಿ ಕೊನೆಗೂ ತನ್ನದೇ ಜನರ ಸಾವು ನೋವುಗಳಿಗೆ ಮಿಡಿಯಲು ಮುಂದಾಗಿರುವುದನ್ನು ಸಂಭ್ರಮಿಸುವ ಸ್ಥಿತಿಯಲ್ಲಂತೂ ಮಣಿಪುರ ಇಲ್ಲ. 2023 ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸೆ ಭುಗಿಲೆದ್ದಿತು. ಕಳೆದ ಎರಡೂವರೆ ವರ್ಷಗಳಲ್ಲಿ ಮಣಿಪುರ ಹಿಂಸಾಚಾರದಿಂದ ಕನಿಷ್ಠ 300 ಜನರು ಮೃತಪಟ್ಟಿದ್ದಾರೆ. 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 60,000 ಮಂದಿ ನಿರಾಶ್ರಿತರಾಗಿದ್ದಾರೆ. 400ಕ್ಕೂ ಅಧಿಕ ಚರ್ಚುಗಳು ಧ್ವಂಸಗೊಂಡಿವೆ. ಅಂತಿಮವಾಗಿ ಮಣಿಪುರದ ಜನರ ನಿಟ್ಟುಸಿರಿಗೆ ಅಲ್ಲಿನ ಸರಕಾರವೇ ಕುಸಿದು ಬಿದ್ದು ರಾಷ್ಟ್ರಪತಿ ಆಡಳಿತ ಸ್ಥಾಪನೆಯಾಗಿದೆ. ಒಬ್ಬ ಪ್ರಧಾನಿ ತನ್ನದೇ ಭೂಭಾಗವೊಂದಕ್ಕೆ ಭೇಟಿ ನೀಡಿ ಅಲ್ಲಿನ ಜನರನ್ನು ಸಂತೈಸಲು, ಅವರಿಗೆ ಧೈರ್ಯ ತುಂಬಲು ಇಷ್ಟು ಕಾರಣಗಳು ಧಾರಾಳ ಸಾಕು. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಲು ಸಾಲು ಅತ್ಯಾಚಾರ, ಕೊಲೆಗಳು ನಡೆಯುತ್ತಿರುವಾಗ ಪ್ರಧಾನಿ ಮೋದಿಯವರು ದೇಶಾದ್ಯಂತ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಲೋಕಸಭಾ ಚುನಾವಣೆಯ ಬಳಿಕವಾದರೂ ಮಣಿಪುರಕ್ಕೆ ಭೇಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆ, ಕೊಲೆಗಳಿಗಾಗಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸುತ್ತಿರುವಾಗ, ಭಾರತ ಸರಕಾರ ‘ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗಿದೆ’ ಎಂದು ಹೇಳಿಕೊಂಡಿತು. ಇದೀಗ ಮಣಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿರುವುದು ತಮ್ಮದೇ ಪಕ್ಷದ ನಾಯಕರನ್ನು ಸಮಾಧಾನ ಪಡಿಸುವುದಕ್ಕೋ ಅಥವಾ ಮಣಿಪುರದ ಜನರನ್ನು ಸಂತೈಸುವುದಕ್ಕೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.

ಮಣಿಪುರ ಭೇಟಿ ಘೋಷಣೆಯಾಗುತ್ತಿದ್ದಂತೆಯೇ ಮಣಿಪುರದಲ್ಲಿ ಕೆಲವು ಸಂಘಟನೆಗಳು ಅವರಿಗೆ ಬಹಿಷ್ಕಾರ ಹಾಕಲು ಮುಂದಾಗಿವೆ. ಇದು ಅನಿರೀಕ್ಷಿತವೇನೂ ಅಲ್ಲ. ಎರಡೂವರೆ ವರ್ಷಗಳ ಹಿಂದೆ ಮಣಿಪುರದಲ್ಲಿ ಹಿಂಸೆ ಭುಗಿಲೆದ್ದಾಗ ಆಡಳಿತ ನಡೆಸುತ್ತಿದ್ದುದು ಬಿಜೆಪಿ ನೇತೃತ್ವದ ಸರಕಾರ. ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದ್ದುದರಿಂದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಿಂಸಾಚಾರಗಳಿಗೆ ನೇರ ಹೊಣೆಗಾರರಾಗಿದ್ದಾರೆ. ಮಣಿಪುರದಲ್ಲಿ ಮಹಿಳೆಯರ ಮೇಲೆ ಭಾರೀ ದೌರ್ಜನ್ಯಗಳು ನಡೆಯುತ್ತಿರುವಾಗ, ಅಲ್ಲಿನ ಇಂಟರ್‌ನೆಟ್‌ಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಸುಮಾರು ಎರಡು ತಿಂಗಳ ಕಾಲ ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನೇ ಹೊರ ಜಗತ್ತಿಗೆ ಮುಚ್ಚಿಡಲಾಯಿತು. ಮಣಿಪುರದಲ್ಲಿ ಬಲಾಢ್ಯ ಮೈತೈ ಸಮುದಾಯ ಮತ್ತು ಕುಕಿ ಬುಡಕಟ್ಟು ಜನರ ನಡುವೆ ಸಂಘರ್ಷ ನಡೆಯುತ್ತಿತ್ತು. ಸಂಘಪರಿವಾರದ ಹಿಂದುತ್ವ ರಾಜಕಾರಣವೇ ಅಂತಿಮವಾಗಿ ಮೈತೈ ಸಮುದಾಯವನ್ನು ಈ ಬುಡಕಟ್ಟು ಜನರ ಮೇಲೆ ಎತ್ತಿ ಕಟ್ಟಿತು ಮಾತ್ರವಲ್ಲ, ಬಳಿಕ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯಶಸ್ವಿಯಾಯಿತು. ಮಣಿಪುರದ ಅಂದಿನ ಮುಖ್ಯಮಂತ್ರಿ ಮೈತೈ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯದಲ್ಲಿ ಹಿಂಸಾಚಾರ ಉಲ್ಬಣಿಸುವಲ್ಲಿ ಇವರ ಪಾತ್ರವೂ ಇದೆ ಎನ್ನುವ ಆರೋಪಗಳಿವೆ. ಪ್ರಧಾನಿಯ ಈ ಭೇಟಿ ಎರಡು ವರ್ಷಗಳ ಹಿಂದೆ ನಡೆದಿದ್ದರೆ, ಮಣಿಪುರದಲ್ಲಿ ಭಾರೀ ಪ್ರಮಾಣದ ಹತ್ಯೆ, ಹಿಂಸೆಗಳನ್ನು ತಡೆಯ ಬಹುದಿತ್ತು. ಮಣಿಪುರದ ಕುರಿತಂತೆ ಪ್ರಧಾನಿ ವಹಿಸಿದ ಮೌನವೇ ಹಿಂಸಾಚಾರಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಿತು. ಇದೀಗ ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಲು ಹೊರಟಿದ್ದಾರೆ.

ಈ ಎರಡು ವರ್ಷಗಳಲ್ಲಿ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿಯವರಿಗೆ ಯಾಕೆ ಸಾಧ್ಯವಾಗಲಿಲ್ಲ? ಎನ್ನುವ ಪ್ರಶ್ನೆಗೆ ಅವರು ಉತ್ತರಿಸಬೇಕಾಗಿದೆ. ಒಂದೋ ಅವರೊಳಗಿನ ಅಪರಾಧಿ ಪ್ರಜ್ಞೆ ಮಣಿಪುರಕ್ಕೆ ಭೇಟಿ ನೀಡದಂತೆ ಅವರನ್ನು ತಡೆದಿರಬೇಕು. ಮಣಿಪುರದ ಸಂತ್ರಸ್ತ ಜನರ ಮುಖಕ್ಕೆ ಮುಖ ಕೊಡುವ ನೈತಿಕ ಧೈರ್ಯ ಅವರಲ್ಲಿ ಇಲ್ಲದೇ ಇರುವುದರಿಂದ ಭೇಟಿಯನ್ನು ಮುಂದೆ ಹಾಕುತ್ತಾ ಬಂದರು ಅಥವಾ ಹಿಂಸೆಗೆ ಪ್ರಚೋದನೆ ನೀಡಿದ ಶಕ್ತಿಗಳು ಪ್ರಧಾನಿ ಮೋದಿಯವರನ್ನು ಮಣಿಪುರಕ್ಕೆ ಭೇಟಿ ನೀಡದಂತೆ ತಡೆದಿರಬೇಕು. ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ಬಿಜೆಪಿಯ ನಾಯಕರೇ ಹಲವು ಬಾರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹಲವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದೀಗ ಪ್ರಧಾನಿ ಮೋದಿಯವರ ಭೇಟಿ ಘೋಷಣೆಯಾದ ಬೆನ್ನಿಗೇ ಮಣಿಪುರದಲ್ಲಿ ಸುಮಾರು 43 ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿಯ ಈ ಭೇಟಿಯನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಸ್ವತಃ ಬಿಜೆಪಿ ನಾಯಕರೇ ಇಲ್ಲ ಎಂದ ಮೇಲೆ ಮಣಿಪುರದ ಹಿಂಸಾಚಾರದ ಸಂತ್ರಸ್ತರ ಸ್ಥಿತಿ ಹೇಗಿರಬೇಕು.

ಹಿಂಸಾಚಾರ ಭುಗಿಲೆದ್ದ ಸುಮಾರು ಎರಡೂವರೆ ವರ್ಷಗಳ ಬಳಿಕ ನೀಡುವ ಈ ಭೇಟಿಯನ್ನಾದರೂ ಪ್ರಧಾನಿ ಮೋದಿಯವರು ಅರ್ಥಪೂರ್ಣಗೊಳಿಸಬೇಕಾಗಿದೆ. ಮುಖ್ಯವಾಗಿ ಶಾಂತಿ ಕಾಪಾಡಲು ಉಭಯ ಸಮುದಾಯಗಳಿಗೂ ಕರೆ ನೀಡುವುದು ಮಾತ್ರವಲ್ಲ, ಯಾವುದೇ ಪಕ್ಷಭೇದವಿಲ್ಲದೆ ಹಿಂಸಾಚಾರ ಬೆಂಬಲಿಗರನ್ನು ಖಂಡಿಸುವ ನೈತಿಕತೆಯನ್ನು ಪ್ರಧಾನಿ ಪ್ರದರ್ಶಿಸಬೇಕು. ನಿರಾಶ್ರಿತರಾಗಿರುವ ಸಹಸ್ರಾರು ಜನರ ಬದುಕನ್ನು ಮರು ನಿರ್ಮಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಘೋಷಿಸಬೇಕು. ಹಾಗೆಯೇ ಧ್ವಂಸಗೊಂಡಿರುವ ಚರ್ಚು, ದೇಗುಲಗಳ ಪುನರ್ ನಿರ್ಮಾಣಕ್ಕೂ ಕಾರ್ಯಕ್ರಮಗಳನ್ನು ರೂಪಿಸಬೇಕು. ಅತ್ಯಾಚಾರ, ಹಿಂಸೆಗಳಿಂದ ತತ್ತತರಿಸಲ್ಪಟ್ಟಿರುವ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ಮರು ನಿರ್ಮಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಬುಡಕಟ್ಟು ಮೀಸಲಾತಿಯನ್ನು ಮುಂದಿಟ್ಟುಕೊಂಡು ಅನಗತ್ಯ ವಿವಾದಗಳನ್ನು ಎಬ್ಬಿಸದಂತೆ ತನ್ನ ಪಕ್ಷದೊಳಗಿರುವ ‘ಉಗ್ರವಾದಿ’ ನಾಯಕರಿಗೆ ಕಠಿಣ ಎಚ್ಚರಿಕೆಯನ್ನು ನೀಡಬೇಕು. ಮಣಿಪುರದ ಜನರ ಕಣ್ಣೀರನ್ನು ತನ್ನ ರಾಜಕೀಯ ದುರುದ್ದೇಶಗಳಿಗೆ ಬಳಸುವ ಪ್ರಯತ್ನವನ್ನು ಪ್ರಧಾನಿ ಮೋದಿಯವರು ಮಾಡಬಾರದು. ಮಣಿಪುರಕ್ಕೆ ಸಂಬಂಧಿಸಿ ತನ್ನ ಈವರೆಗೆ ಮೌನಕ್ಕಾಗಿ ಪ್ರಧಾನಿ ಮೋದಿಯವರು ಅಲ್ಲಿನ ಜನರೊಂದಿಗೆ ಹೃದಯಪೂರ್ವಕ ಕ್ಷಮೆಯಾಚಿಸುವುದರೊಂದಿಗೆ ತನ್ನ ಭೇಟಿ ಪ್ರಾಮಾಣಿಕವಾದುದು ಎನ್ನುವುದನ್ನು ದೇಶಕ್ಕೆ ಮನವರಿಕೆ ಮಾಡಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X