Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗಣೇಶ ಹಬ್ಬದ ಮೌಲ್ಯಗಳಿಗೆ ಕಲ್ಲು ತೂರಿದ...

ಗಣೇಶ ಹಬ್ಬದ ಮೌಲ್ಯಗಳಿಗೆ ಕಲ್ಲು ತೂರಿದ ದುಷ್ಕರ್ಮಿಗಳು

ವಾರ್ತಾಭಾರತಿವಾರ್ತಾಭಾರತಿ10 Sept 2025 9:02 AM IST
share
ಗಣೇಶ ಹಬ್ಬದ ಮೌಲ್ಯಗಳಿಗೆ ಕಲ್ಲು ತೂರಿದ ದುಷ್ಕರ್ಮಿಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಭಾರತೀಯರನ್ನು ಸಂಘಟಿಸಲು ಕೆಲವು ನಾಯಕರು ಸಾರ್ವಜನಿಕ ಗಣೇಶೋತ್ಸವಗಳನ್ನು ಬಳಸಿಕೊಂಡಿದ್ದರು. ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ನೆಪದಲ್ಲಿ ಜನರನ್ನು ಒಟ್ಟುಗೂಡಿಸಿ ಅವರಲ್ಲಿ ದೇಶಭಕ್ತಿಯನ್ನು, ರಾಷ್ಟ್ರೀಯತೆಯ ಭಾವವನ್ನು ಬಿತ್ತುವ ಪ್ರಯತ್ನವನ್ನು ನಡೆಸಿದ್ದರು. ಹೀಗೆ ಗಣೇಶೋತ್ಸವವನ್ನು ರಾಜಕೀಯ ಕಾರಣಕ್ಕೆ ಬಳಸಿದವರಲ್ಲಿ ಬಾಲಗಂಗಾಧರ ತಿಲಕ್ ಮೊದಲಿಗರು. ಆದರೆ ಇದರ ಹಿಂದೆ ಕೆಲವು ಸದುದ್ದೇಶಗಳು ಇದ್ದವು. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಕೆಲವು ರಾಜಕೀಯ ನಾಯಕರು ದೇಶದ ಜನರನ್ನು ಒಡೆಯಲು ಬಳಸುತ್ತಿರುವುದು ದುರದೃಷ್ಟಕರ. ವಿಘ್ನ ನಿವಾರಕ ಎಂದು ಹೆಸರು ಪಡೆದಿರುವ, ಆ ಕಾರಣಕ್ಕಾಗಿಯೇ ಭಕ್ತಾದಿಗಳಿಂದ ಆರಾಧಿಸಲ್ಪಡುತ್ತಿರುವ ಗಣೇಶನ ಹಬ್ಬವನ್ನು ಕೆಲವು ರಾಜಕಾರಣಿಗಳು ತಮ್ಮ ದುರುದ್ದೇಶಕ್ಕಾಗಿ, ವಿಘ್ನಗಳಿಗಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಖೇದಕರ. ಇದು ಗಣೇಶ ಹಬ್ಬದ ಮೌಲ್ಯಗಳಿಗೆ ಮಾಡುವ ಅಪಮಾನವಾಗಿದೆ. ಮಂಡ್ಯದ ಮದ್ದೂರಿನಲ್ಲಿ, ಸೋಮವಾರ ಭಕ್ತರ ವೇಷದಲ್ಲಿದ್ದ ಕೆಲವು ದುಷ್ಕರ್ಮಿಗಳ ಕಾರಣದಿಂದ ವಿಘ್ನ ನಿವಾರಕನೆಂದು ಹೆಸರು ಪಡೆದ ಗಣೇಶ ಹಬ್ಬಕ್ಕೆ ಕಳಂಕ ಬಳಿಯುವ ಪ್ರಯತ್ನ ನಡೆದಿದೆ. ಪರಿಣಾಮವಾಗಿ ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮ ಪೊಲೀಸರ ಲಾಠಿ ಚಾರ್ಜ್‌ನೊಂದಿಗೆ ಮುಕ್ತಾಯ ಕಾಣುವಂತಾಯಿತು. ಇದೀಗ ಮದ್ದೂರು ಪೊಲೀಸರ ಬಿಗಿ ಭದ್ರತೆಯೊಳಗಿದೆ.

ಕೆಲವು ವರ್ಷಗಳಿಂದ ಮಂಡ್ಯ ಆಸುಪಾಸಿನಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ರವಿವಾರ ನಡೆದ ದಾಂಧಲೆ ಆ ಪ್ರಯತ್ನದ ಮುಂದುವರಿದ ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದ್ದೂರು ಪಟ್ಟಣದ ಕಾವೇರಿ ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಪೇಟೆ ಬೀದಿಯ ಮಸೀದಿ ಸಮೀಪ ದಾಂಧಲೆಗಳು ನಡೆದಿವೆ. ದಾಂಧಲೆ ನಡೆಸುವುದಕ್ಕೆ ಮುಖ್ಯ ಕಾರಣ, ಮಸೀದಿಯಿಂದ ನಡೆದ ಕಲ್ಲುತೂರಾಟ ಎಂದು ಸಂಘಪರಿವಾರ ಹೇಳುತ್ತಿದೆ. ಆದರೆ ಮಸೀದಿಯಿಂದ ನಿಜಕ್ಕೂ ಕಲ್ಲುತೂರಾಟ ನಡೆದಿದೆಯೇ ಎನ್ನುವುದು ಈವರೆಗೆ ಸ್ಪಷ್ಟವಿಲ್ಲ. ಮಸೀದಿಯಿಂದ ಕಲ್ಲುತೂರಾಟ ನಡೆದಿದೆ ಎನ್ನುವ ಆರೋಪವನ್ನು ಉನ್ನತ ಪೊಲೀಸ್ ಅಧಿಕಾರಿಗಳು ಈಗಾಗಲೇ ನಿರಾಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದ ಕೆಲವು ದುಷ್ಕರ್ಮಿಗಳು ಮಸೀದಿಯೆಡೆಗೆ ಕಲ್ಲುತೂರಾಟ ನಡೆಸುತ್ತಿರುವ ವೀಡಿಯೊಗಳು ವೈರಲ್ ಆಗಿವೆ. ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಇದಾದ ಬೆನ್ನಿಗೇ ಸಂಘಪರಿವಾರ ನಾಯಕರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಜೆಡಿಎಸ್ ಮುಖಂಡರೂ ಕೇಸರಿ ಶಾಲು ಧರಿಸಿ ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಿರುವುದು ವಿಷಾದನೀಯವಾಗಿದೆ.

ಈ ಕಲ್ಲುತೂರಾಟ ಪೂರ್ವಸಿದ್ಧತೆಯಿಂದ ಕೂಡಿದೆ ಎನ್ನುವುದು ಮೆರವಣಿಗೆಯ ವೈರಲ್ ಆಗಿರುವ ವೀಡಿಯೊಗಳಿಂದ ಗೊತ್ತಾಗಿ ಬಿಡುತ್ತದೆ. ಮೆರವಣಿಗೆಯಲ್ಲಿ ‘ಗಣೇಶ’ನಿಗೆ ಜಯ ಘೋಷಣೆ ಕೂಗುವ ಬದಲು ದುಷ್ಕರ್ಮಿಗಳು ಒಂದು ಸಮುದಾಯವನ್ನು ಹೀನಾಯವಾಗಿ ನಿಂದಿಸುತ್ತಾ ಘೋಷಣೆ ಕೂಗುವುದು ಕೇಳಿಸುತ್ತದೆ. ಒಂದು ಸಮುದಾಯದ ಜನರು ‘ಮುಂ...ಮಕ್ಕಳು’ ಎಂದು ಒಬ್ಬ ಮಹಿಳೆಯ ನೇತೃತ್ವದಲ್ಲಿ ಗುಂಪು ಜೋರಾಗಿ ಕಿರುಚುತ್ತಿತ್ತು. ಅಂದರೆ ಒಂದು ಸಮುದಾಯವನ್ನು ಪ್ರಚೋದಿಸಿ ಗಲಭೆ ಎಬ್ಬಿಸುವುದೇ ಇವರ ಗುರಿಯಾಗಿತ್ತು ಎನ್ನುವುದು ಸ್ಪಷ್ಟ. ಆದರೆ ಈ ಘೋಷಣೆಗಳಿಂದಲೂ ಯಾರೂ ಪ್ರಚೋದನೆಗೊಂಡಿಲ್ಲ. ಬದಲಿಗೆ, ಗಣೇಶ ಮೆರವಣಿಗೆಯಲ್ಲಿ ಅವಾಚ್ಯ ಪದಗಳನ್ನು ಬಳಸುತ್ತಾ ಸಾಗಿದ ಜನರನ್ನು ನೋಡಿ ಹಿಂದೂ ಭಕ್ತಾದಿಗಳೇ ಅವಮಾನದಿಂದ ತಲೆತಗ್ಗಿಸಿದ್ದರು. ತಮ್ಮ ಪ್ರಚೋದನೆಯಿಂದಲೂ ಯಾರೂ ಕೆರಳದೇ ಇದ್ದಾಗ ಹತಾಶರಾಗಿ ದುಷ್ಕರ್ಮಿಗಳು ಎರಡನೇ ಹಂತವಾಗಿ ಮಸೀದಿಯೆಡೆಗೆ ಕಲ್ಲುತೂರಾಟ ನಡೆಸಿದ್ದಾರೆ. ಐಜಿಪಿಯವರ ಪ್ರಕಾರ, ಕಲ್ಲು ಮಸೀದಿಯಿಂದ ತೂರಿಬಂದಿಲ್ಲ. ಬದಲಿಗೆ ಇನ್ನೊಂದು ದಿಕ್ಕಿನಿಂದ ತೂರಿ ಬಂದಿರುವುದು ಸಿಸಿಟಿವಿಯಲ್ಲಿ ಕಾಣುತ್ತಿದೆ. ಆದುದರಿಂದ, ಇದೊಂದು ಪೂರ್ವನಿಯೋಜಿತ ಸಂಚೇ? ಎನ್ನುವುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಐಜಿಪಿ ಬೋರಲಿಂಗಯ್ಯ ಅವರು ಮಾಹಿತಿ ನೀಡಿದ್ದಾರೆ. ವಿಪರ್ಯಾಸವೆಂದರೆ, ಅತ್ಯಂತ ಅವಾಚ್ಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಒಬ್ಬ ಮಹಿಳೆ ಮತ್ತು ಆಕೆಯ ಸಂಗಡಿಗರನ್ನು ‘ಹಿಂದೂ ಕಾರ್ಯಕರ್ತರು’ ಎಂದು ಬಿಂಬಿಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ, ಸ್ವತಃ ಬಿಜೆಪಿ ನಾಯಕರೇ ಗಣೇಶನ ಆಧ್ಯಾತ್ಮಿಕ ಮೌಲ್ಯಗಳಿಗೆ ಬಹಿರಂಗವಾಗಿ ಕಲ್ಲುತೂರಾಟ ನಡೆಸುತ್ತಿದ್ದಾರೆ. ಇವರಿಂದ ಗಣೇಶ ಹಬ್ಬವೇ ವಿರೂಪಗೊಂಡಿದೆ.

ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಪರಿಸ್ಥಿತಿ ಇನ್ನೇನು ಉದ್ವಿಗ್ನ ರೂಪವನ್ನು ಪಡೆಯಬೇಕು ಎನ್ನುವಷ್ಟರಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನೋಡಿದರೆ, ಪ್ರಶಾಂತ್ ಮತ್ತು ಪ್ರವೀಣ್ ಎನ್ನುವ ಯುವಕರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮನೆಯ ಮಾಳಿಗೆಯ ಮೇಲೆ ನಿಂತು ಕಲ್ಲುತೂರಾಟ ನಡೆಸಿದ್ದರು. ದುಷ್ಕರ್ಮಿಗಳನ್ನು ಮೆರವಣಿಗೆಯಲ್ಲಿದ್ದವರು ಗುರುತಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿತು. ಇಲ್ಲವಾದರೆ, ಸಂಘಪರಿವಾರದ ಕೂಗು ಮಾರಿಗಳು ಅಲ್ಲಿಯೂ ಗದ್ದಲ ಎಬ್ಬಿಸುವ ಸಾಧ್ಯತೆಗಳಿದ್ದವು. ಕೃತ್ಯವನ್ನು ಸ್ಥಳೀಯ ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿತ್ತು. ಸಾಗರದಲ್ಲಿ, ಮೆರವಣಿಗೆ ಸಾಗುತ್ತಿದ್ದಾಗ ಕಟ್ಟಡದ ಮೇಲಿದ್ದ ಇಬ್ಬರು ಪುಟಾಣಿ ಮಕ್ಕಳು ಉಗುಳಿದರು ಎಂದು ಹೇಳಿ ದುಷ್ಕರ್ಮಿಗಳು ದಾಂಧಲೆ ನಡೆಸಲು ಮುಂದಾದುದನ್ನು ಇಲ್ಲಿ ಸ್ಮರಿಸಬಹುದು. ಇವರ ಪಾಲಿಗೆ ಗಣೇಶೋತ್ಸವ ಆಧ್ಯಾತ್ಮಿಕ, ಧಾರ್ಮಿಕತೆಯ ಭಾಗವೇ ಆಗಿದ್ದರೆ ಇವರು ಗಣೇಶ ಮೆರವಣಿಗೆಯನ್ನು ಇಂತಹ ದುರುದ್ದೇಶಗಳಿಗೆ ಖಂಡಿತ ಬಳಸುತ್ತಿರಲಿಲ್ಲ. ಗಣೇಶನ ಹಬ್ಬಗಳಿಗೆ ಕಳಂಕ ತರುವ, ಗಣೇಶನ ನಂಬಿಕೆಗೆ ಕಲ್ಲು ತೂರುವ ಈ ಭಕ್ತರ ವೇಷದಲ್ಲಿರುವ ದುಷ್ಕರ್ಮಿಗಳನ್ನು ಗುರುತಿಸಿ ಅವರನ್ನು ಹೊರಗಿಡುವ ಕೆಲಸವನ್ನು ಇಂದು ಹಿಂದೂ ಭಕ್ತಾದಿಗಳೇ ಅಗತ್ಯವಾಗಿ ಮಾಡಬೇಕಾಗಿದೆ.

ಒಂದು ಕಾಲದಲ್ಲಿ ರೈತ ಚಳವಳಿಗೆ ಹೆಸರಾಗಿದ್ದ, ಸಕ್ಕರೆಯ ನಾಡು ಎಂದು ಖ್ಯಾತವಾಗಿದ್ದ ಮಂಡ್ಯವನ್ನು ದುಷ್ಕರ್ಮಿಗಳು ಧರ್ಮ, ಜಾತಿಯ ಹೆಸರಿನಲ್ಲಿ ಉದ್ವಿಗ್ನ ಸೃಷ್ಟಿಸಿ ಹಂತ ಹಂತವಾಗಿ ಬಲಿ ಹಾಕುತ್ತಿರುವುದು ನಿಜಕ್ಕೂ ವಿಷಾದನೀಯ. ಈ ಹಿಂದೆ ಟಿಪ್ಪುಸುಲ್ತಾನನ ಹೆಸರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸಿದರು. ‘ಉರಿಗೌಡ, ನಂಜೇಗೌಡ’ ಎನ್ನುವ ನಕಲಿ ಪಾತ್ರಗಳನ್ನು ಸೃಷ್ಟಿಸಿ ಹಿಂದೂ-ಮುಸ್ಲಿಮರ ನಡುವೆ ಉರಿ, ನಂಜನ್ನು ಹರಡುವ ಪ್ರಯತ್ನ ನಡೆಸಿದರು. ಕೆರೆಗೋಡುನಲ್ಲಿ, ನಾಗಮಂಗಲದಲ್ಲೂ ಎರಡು ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನ ನಡೆಯಿತು. ರಾಜಕೀಯವಾಗಿ ಸಂಪೂರ್ಣ ನೆಲೆ ಕಳೆದುಕೊಂಡಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೋಮುರಾಜಕೀಯಕ್ಕೆ ಇಳಿದ ಪರಿಣಾಮ ಇದು. ಒಂದು ಕಾಲದಲ್ಲಿ ಶಿಕ್ಷಣ, ವೈದ್ಯಕೀಯ, ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ಮೆರೆಯುತ್ತಿದ್ದ ಮಂಗಳೂರು ಕೋಮುರಾಜಕೀಯಕ್ಕೆ ಬಲಿಯಾಗಿ ಹೇಗೆ ನಾಶವಾಗುತ್ತಾ ಬಂತು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಮಂಡ್ಯದ ರೈತ ನಾಯಕರು, ಈ ಕೋಮುಶಕ್ತಿಗಳಿಂದ ಸಕ್ಕರೆ ನಾಡನ್ನು ರಕ್ಷಿಸಿಕೊಳ್ಳುವ ದಾರಿಯನ್ನು ಹುಡುಕುವುದು ಅತ್ಯಗತ್ಯವಾಗಿದೆ. ಕೃಷಿ ಫಲವಸ್ತುಗಳ ಸಂಕೇತವಾಗಿರುವ ಗಣೇಶ ಮಂಡ್ಯದ ರೈತರ ಬದುಕಿಗೆ ಸದಾ ಶುಭವನ್ನು ತರುವಂತಾಗಲಿ. ದುಷ್ಟ ರಾಜಕಾರಣಿಗಳು ಎಸಗಿದ ವಿಘ್ನಗಳು ಶೀಘ್ರ ನಿವಾರಣೆಯಾಗಿ, ಮಂಡ್ಯ ಮತ್ತೆ ಸಕ್ಕರೆಯ ನಾಡಾಗಿ ಸರ್ವರ ಬದುಕಿಗೆ ಸಿಹಿಯನ್ನು ಹಂಚಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X