Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಭಾರತ-ಪಾಕ್ ಕ್ರಿಕೆಟ್ ಪಂದ್ಯ: ಭಾರತೀಯರ...

ಭಾರತ-ಪಾಕ್ ಕ್ರಿಕೆಟ್ ಪಂದ್ಯ: ಭಾರತೀಯರ ಬೆನ್ನಿಗೆ ಇರಿದ ಕೇಂದ್ರ ಸರಕಾರ

ವಾರ್ತಾಭಾರತಿವಾರ್ತಾಭಾರತಿ15 Sept 2025 9:07 AM IST
share
ಭಾರತ-ಪಾಕ್ ಕ್ರಿಕೆಟ್ ಪಂದ್ಯ: ಭಾರತೀಯರ ಬೆನ್ನಿಗೆ ಇರಿದ ಕೇಂದ್ರ ಸರಕಾರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಏಶ್ಯ ಕಪ್ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರೇ ಗೆಲ್ಲಲಿ, ಸೋಲುವುದು ಮಾತ್ರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಈ ದೇಶದ ಸೈನಿಕರು ಮಾಡಿದ ತ್ಯಾಗ ಮತ್ತು ಬಲಿದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಪೆಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಅಮಾಯಕ ಭಾರತೀಯರು ಮತ್ತು ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿ ಪ್ರಾಣ ತೆತ್ತ ನಮ್ಮ ಸೈನಿಕರಿಗೆ ಮಾಡುತ್ತಿರುವ ಸ್ಪಷ್ಟ ಅಪಮಾನವಾಗಿದೆ ಈ ಪಂದ್ಯ. ‘ರಕ್ತ ಮತ್ತು ನೀರು’ ಒಟ್ಟಿಗೆ ಹರಿಯಲಾರದು ಎಂದು ಹೇಳಿದ ಪ್ರಧಾನಿಯೇ ಇದೀಗ ಪಹಲ್ಗಾಮ್ ರಕ್ತದ ಮಡುವಿನಲ್ಲಿ ಕ್ರಿಕೆಟನ್ನು ಹಮ್ಮಿಕೊಳ್ಳಲು ಅವಕಾಶ ನೀಡಿರುವುದು ಈ ದೇಶದ ದೌರ್ಭಾಗ್ಯವಾಗಿದೆ. ನಮ್ಮವರ ರಕ್ತವನ್ನು ಸರಕಾರ ಕೊನೆಗೂ ಕ್ರಿಕೆಟ್ ತಂದುಕೊಡುವ ಹಣಕ್ಕೆ ಮಾರಾಟ ಮಾಡಿದೆ. ಈ ದೇಶದ ಗೃಹ ಸಚಿವ, ಪ್ರಧಾನಿ ಮೋದಿಯ ಆಪ್ತ ಅಮಿತ್ ಶಾ ಅವರ ಪುತ್ರ ಜಯ್ ಶಾ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ, ಇದನ್ನು ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ನಡುವಿನ ನಿಷೇಧಗಳ ನಡುವಿನ ಇನ್ನೊಂದು ‘ಕದನ ವಿರಾಮ’ವೆಂದು ಸ್ವೀಕರಿಸುವುದು ದೇಶಕ್ಕೆ ಅನಿವಾರ್ಯವಾಗಿದೆ.

ಈ ಹಿಂದೆ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾದಾಗಲೆಲ್ಲ, ಕ್ರೀಡಾಳುಗಳು ಮತ್ತು ಸಾಂಸ್ಕೃತಿಕ ವಕ್ತಾರರು ಸೇತುವೆ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದಾರೆ. ರಾಜಕೀಯ ಶಕ್ತಿಗಳು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದಾಗಲೆಲ್ಲ ಕ್ರೀಡೆ ಆ ಸಂಬಂಧವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದೆ. ಇಷ್ಟಾದರೂ ಪಾಕಿಸ್ತಾನ-ಭಾರತದ ನಡುವೆ ಕ್ರಿಕೆಟ್ ನಡೆದಾಗಲೆಲ್ಲ ಭಾರತದೊಳಗಿರುವ ಕೆಲವು ರಾಜಕೀಯ ಸಂಘಟನೆಗಳು ಆ ಆಟಕ್ಕೆ ಧರ್ಮದ ಬಣ್ಣವನ್ನು ಹಚ್ಚಿ ದೇಶ ಒಡೆಯುವ ಕೆಲಸವನ್ನೂ ಯಾವ ನಾಚಿಕೆಯೂ ಇಲ್ಲದೆ ಮಾಡಿಕೊಂಡು ಬಂದಿವೆೆ. ರಾಜಕೀಯ ನಾಯಕರ ಎಲ್ಲ ಹುನ್ನಾರಗಳನ್ನು ಮೀರಿ ಇಂದು ಕ್ರಿಕೆಟ್ ವಿಶ್ವದ ಜನರ ಹೃದಯಗಳನ್ನು ಬೆಸೆಯುತ್ತಾ ಬಂದಿದೆ. ಪಾಕಿಸ್ತಾನದ ಕ್ರಿಕೆಟ್ ತಾರೆಯರನ್ನು ಪ್ರೀತಿಸುವ ದೊಡ್ಡ ಸಂಖ್ಯೆಯ ಜನರು ಭಾರತದಲ್ಲಿದ್ದರೆ, ಸಚಿನ್ ತೆಂಡೂಲ್ಕರ್‌ನಂತಹ ಆಟಗಾರರನ್ನು ಹೃದಯದಲ್ಲಿಟ್ಟು ಮೆರೆಸುವ ಪಾಕಿಸ್ತಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಭಾರೀ ಏಟು ಬಿತ್ತು. ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಭಾರತೀಯರು ಬರ್ಬರವಾಗಿ ಮೃತರಾದರು. ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪ ಅಂತಿಮವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಕಾರಣವಾಯಿತು. ಮೇಲ್ನೋಟಕ್ಕೆ ಪಾಕಿಸ್ತಾನದ ಉಗ್ರಗಾಮಿ ಶಿಬಿರಗಳ ಮೇಲೆ ನಡೆದ ದಾಳಿಯೇ ಆಗಿದ್ದರೂ ಕೊನೆಯಲ್ಲಿ ಅದು ಯುದ್ಧ ರೂಪವನ್ನು ಪಡೆಯಿತು. ಉಭಯ ದೇಶಗಳಿಗೂ ಅಪಾರ ನಷ್ಟಗಳುಂಟಾದವು. ಭಾರತದ ಸೇನಾ ವಿಮಾನಗಳನ್ನು ಹೊಡೆದುರುಳಿಸಿದ್ದೇನೆ ಎಂದು ಪಾಕಿಸ್ತಾನವೂ ಹೇಳಿಕೊಂಡಿತು. ಕೊನೆಯ ಕ್ಷಣದಲ್ಲಿ ಕದನ ವಿರಾಮ ಘೋಷಣೆಯಾಗಿ ಇನ್ನಷ್ಟು ನಾಶ, ನಷ್ಟವುಂಟಾಗುವುದು ತಪ್ಪಿತು.

ಆದರೆ ಈ ಎಲ್ಲ ಬೆಳವಣಿಗೆಗಳು ಉಭಯ ದೇಶಗಳ ಸಂಬಂಧಗಳಿಗೆ ಸರಿಪಡಿಸಲಾಗದಷ್ಟು ಹಾನಿ ಮಾಡಿವೆೆ. ಭಾರತವು ಪಾಕಿಸ್ತಾನದ ಜೊತೆಗೆ ಮಾಡಿಕೊಂಡ ಹಲವು ಒಪ್ಪಂದಗಳಿಂದ ಹಿಂದೆ ಸರಿಯಿತು. ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಘೋಷಣೆಯನ್ನು ಮಾಡಿದ ಪ್ರಧಾನಿ ಮೋದಿಯವರು ‘ಸಿಂಧೂ ನದಿ ನೀರು ಒಪ್ಪಂದ’ವನ್ನು ರದ್ದುಗೊಳಿಸಿದರು. ಪಾಕಿಸ್ತಾನಕ್ಕೆ ನೀರು ಬಿಡುವುದಿಲ್ಲ ಎಂದು ಘೋಷಿಸಿದರು. ಪಾಕಿಸ್ತಾನದ ರೈತರು ಇದರಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದರು. ಇದೇ ಸಂದರ್ಭದಲ್ಲಿ ಭಾರತದ ಮೇಲೆ ಪಾಕಿಸ್ತಾನವೂ ಕೆಲವು ನಿಷೇಧಗಳನ್ನು ಹೇರಿತು. ಈ ಬಿಕ್ಕಟ್ಟು ವಾಣಿಜ್ಯ ಕ್ಷೇತ್ರದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಉಂಟು ಮಾಡಿತು. ಅಂದರೆ ಪಹಲ್ಗಾಮ್ ದಾಳಿಯೆನ್ನುವುದು 26 ಪ್ರವಾಸಿಗರ ಬರ್ಬರ ಹತ್ಯೆಗಷ್ಟೇ ಸೀಮಿತವಾದ ಕೃತ್ಯವಲ್ಲ. ಅದಾದ ಬಳಿಕ ನಡೆದ ಯುದ್ಧ ಕಾರ್ಯಾಚರಣೆ ಮತ್ತು ವ್ಯಾಪಾರ ಒಪ್ಪಂದ ನಿಷೇಧಗಳಿಂದ ಉಭಯ ದೇಶಗಳ ಸಾಮಾನ್ಯ ಜನರು ಇಂದಿಗೂ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಬಿಗಡಾಯಿಸಿದಾಗಲೆಲ್ಲ ಅದು ಆಮದು ರಫ್ತಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಾ ಬಂದಿದೆ. ಪುಲ್ವಾಮ ದಾಳಿಯ ಸಂದರ್ಭದಲ್ಲಿ ಭಾರತವೂ ಪಾಕಿಸ್ತಾನದ ಅತ್ಯಂತ ಆಪ್ತರಾಷ್ಟ್ರ ಸ್ಥಾನಮಾನವನ್ನು ರದ್ದುಗೊಳಿಸಿತು. ಪಾಕಿಸ್ತಾನಿ ಸರಕುಗಳ ಮೇಲೆ ಶೇ. 200 ಸುಂಕವನ್ನೂ ವಿಧಿಸಿತ್ತು. ಅಲ್ಲಿಂದ ಹಂತ ಹಂತವಾಗಿ ರಫ್ತು ಮತ್ತು ಆಮದು ಇಳಿಯುತ್ತಲೇ ಬಂದಿದೆ. ಇದು ಉಭಯ ದೇಶಗಳ ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿಂಧೂನದಿ ನೀರು ಒಪ್ಪಂದ ರದ್ದು ನಿರ್ಧಾರ ಅತ್ಯಂತ ನಿರ್ಣಾಯಕವಾಗಿದೆ. ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಪ್ರಶ್ನಾರ್ಹವಾಯಿತು. ಪಹಲ್ಗಾಮ್ ರಕ್ತಕ್ಕಾಗಿ ನೀರನ್ನೇ ನಿಲ್ಲಿಸಿದ್ದ ಭಾರತ ಇದೀಗ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ನ್ನು ಪುನರಾರಂಭಿಸಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಕೇಂದ್ರ ಸರಕಾರದ ವಿರುದ್ಧ್ದ ಕ್ಷಿಪಣಿಯ ರೂಪದಲ್ಲಿ ಎರಗಿದೆ. ವಿಷಾದನೀಯ ಸಂಗತಿಯೆಂದರೆ, ಕ್ರಿಕೆಟ್ ಪಂದ್ಯ ಮತ್ತು ಆಪರೇಷನ್ ಸಿಂಧೂರ ಎರಡು ಪ್ರತ್ಯೇಕ ವಿಷಯಗಳು ಎಂದು ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆ. ‘‘ಕ್ರಿಕೆಟ್ ಎಂಬುದು ಒಂದು ಭಾವನಾತ್ಮಕತೆಯಾಗಿದೆ. ಆಟಗಾರರು ಈ ಮಟ್ಟಕ್ಕೆ ಏರಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಹೀಗಾಗಿ ಪಂದ್ಯವನ್ನು ವಿರೋಧಿಸುವುದು ನ್ಯಾಯಯುತವಲ್ಲ’’ ಎಂದು ಕೇಂದ್ರ ಸ್ಪಷ್ಟೀಕರಣ ನೀಡಿದೆ. ಕ್ರಿಕೆಟ್ ಆಟಗಾರರ ಪರಿಶ್ರಮದ ಮೇಲೆ ಅನುಕಂಪ ವ್ಯಕ್ತಪಡಿಸುವ ಕೇಂದ್ರ ಸರಕಾರ, ಉಭಯ ದೇಶಗಳ ರೈತರು ಮತ್ತು ಉದ್ಯಮಿಗಳ ಮೇಲೆ ಯಾಕೆ ನಿಷ್ಕರುಣಿಯಾಗಿದೆ. ಇವರ ವಿಷಯದಲ್ಲಿ ಯಾಕೆ ‘ಆಪರೇಷನ್ ಸಿಂಧೂರ-ಪಹಲ್ಗಾಮ್ ದಾಳಿ’ ಅಡ್ಡ ಬರುತ್ತಿದೆ ಎಂದು ಕೇಳಿದರೆ ಕೇಂದ್ರ ಊಸರವಳ್ಳಿಯಂತೆ ಮಿಸುಕಾಡುತ್ತದೆ. ವಿಶ್ವ ಕ್ರಿಕೆಟ್ ಎನ್ನುವ ಬೃಹತ್ ಉದ್ಯಮದ ಚುಕ್ಕಾಣಿ ಗೃಹ ಸಚಿವ ಅಮಿತ್ ಶಾ ಅವರ ಪುತ್ರನ ಕೈಯಲ್ಲಿದೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಕೋಟ್ಯಂತರ ಹಣದ ಸುರಿಮಳೆಯನ್ನೇ ಸುರಿಸುತ್ತದೆ ಎನ್ನುವ ಕಾರಣಕ್ಕಾಗಿ ಈ ಪಂದ್ಯಕ್ಕೆ ಅವಕಾಶ ನೀಡಲಾಗಿದೆ. ಇಷ್ಟಕ್ಕೂ ಈ ಹಣ ಭಾರತದ ಬೊಕ್ಕಸವನ್ನು ಸೇರುವುದಿಲ್ಲ ಎನ್ನುವುದು ಕೂಡ ಗಮನಾರ್ಹ. ಆಪರೇಷನ್ ಸಿಂಧೂರದ ಬಳಿಕ ನಡೆಯುವ ಕ್ರಿಕೆಟ್ ಇದಾಗಿರುವುದರಿಂದ ಉಭಯ ದೇಶಗಳ ನಡುವಿನ ಪಂದ್ಯ ಲಾಭದಾಯಕವಾಗಬಹುದು ಎನ್ನುವುದು ಐಸಿಸಿ ಅಧ್ಯಕ್ಷ ಜಯ್ ಶಾ ಲೆಕ್ಕಾಚಾರ. ಶಾ ಕುಟಂಬಕ್ಕೆ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ, ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಮತ್ತು ಆಪರೇಷನ್ ಸಿಂಧೂರದಲ್ಲಿ ಹುತಾತ್ಮರಾದ ಸೈನಿಕರ ರಕ್ತದ ಮಡುವಿನಲ್ಲೇ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿದೆ. ಪಹಲ್ಗಾಮ್ ದಾಳಿಯ ಮೂಲಕ ಪಾಕಿಸ್ತಾನ ಭಾರತದ ಬೆನ್ನಿಗೆ ಇರಿದರೆ, ಅದೇ ಗಾಯದ ಮೇಲೆ ಮತ್ತೊಮ್ಮೆ ಮೋದಿ ನೇತೃತ್ವದ ಕೇಂದ್ರ ಸರಕಾರ ಇನ್ನಷ್ಟು ಆಳವಾಗಿ ಇರಿದಿದೆ. ಪರಕೀಯ ದೇಶ ಇರಿದ ಗಾಯ ಒಣಗಬಹುದು. ಆದರೆ ನಮ್ಮವರೇ ನಮಗೆ ಇರಿದ ಗಾಯ ಒಣಗುವುದು ಅಷ್ಟು ಸುಲಭವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X