Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಹಾಸನದ ದುರಂತ: ಯಾರು ಹೊಣೆ?

ಹಾಸನದ ದುರಂತ: ಯಾರು ಹೊಣೆ?

ವಾರ್ತಾಭಾರತಿವಾರ್ತಾಭಾರತಿ17 Sept 2025 7:26 AM IST
share
ಹಾಸನದ ದುರಂತ: ಯಾರು ಹೊಣೆ?

ವಿಘ್ನನಿವಾರಕನ ಹಬ್ಬ ಮನುಷ್ಯನ ಸ್ವಯಂಕೃತಾಪರಾಧದಿಂದ ಹತ್ತು ಹಲವು ವಿಘ್ನಗಳಿಗೆ ಕಾರಣವಾಗಿರುವುದು ನಿಜಕ್ಕೂ ವಿಷಾದನೀಯವಾಗಿದೆ. ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದ ದುರಂತದಿಂದ ರಾಜ್ಯ ಇನ್ನೂ ಚೇತರಿಸಿಲ್ಲ. ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಟ್ರಕ್ಕೊಂದು ಹರಿದ ಈ ಅವಘಡದಲ್ಲಿ 10 ಜನರು ಸಾವಿಗೀಡಾಗಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಬೆನ್ನಿಗೇ ರಾಜಕಾರಣಿಗಳು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸಲು ಪ್ರಯತ್ನಿಸಿದರು. ಆದರೆ ಈ ದುರಂತದಿಂದ ತಮ್ಮ ಮನೆಮಕ್ಕಳನ್ನು ಕಳೆದುಕೊಂಡವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಸರಕಾರವೂ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಪರಿಹಾರವನ್ನು ಘೋಷಿಸಿವೆಯಾದರೂ, ತಾಯಂದಿರ ಹೃದಯಕ್ಕಾದ ಗಾಯಗಳನ್ನು ಶಮನ ಪಡಿಸುವ ಔಷಧೀಯ ಶಕ್ತಿ ಆ ಪರಿಹಾರ ಧನಕ್ಕಿಲ್ಲ. ಆರೋಪಿ ಟ್ರಕ್ ಚಾಲಕನನ್ನು ಬಂಧಿಸಲಾಗಿದೆಯಾದರೂ, ಅಷ್ಟರಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಸಮಾಧಾನ ಪಡುವಂತಿಲ್ಲ.

ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ಮೂವರು ಅಪ್ರಾಪ್ತ ವಯಸ್ಸಿನವರು. ಇದೇ ಸಂದರ್ಭದಲ್ಲಿ ಎಲ್ಲರೂ ಬಡ ಹಿಂದುಳಿದ ಕುಟುಂಬಕ್ಕೆ ಸೇರಿದವರಾಗಿರುವುದು ಕಾಕತಾಳೀಯವಲ್ಲ. ಇಂತಹ ಸಮೂಹಸನ್ನಿ ಮೆರವಣಿಗೆಯಲ್ಲಿ ಮೇಲ್ಜಾತಿಯ, ಶ್ರೀಮಂತ ವರ್ಗಕ್ಕೆ ಸೇರಿದ ಯುವಕರು ಯಾಕೆ ಗುರುತಿಸಲ್ಪಡುವುದಿಲ್ಲ, ಕೇವಲ ಬಡ, ಹಿಂದುಳಿದವರ್ಗಕ್ಕೆ ಸೇರಿದ ಯುವಕರೇ ನೇರ ಬಲಿಪಶುಗಳಾಗುತ್ತಿರುವುದು ಯಾಕೆ ಎನ್ನುವುದು ಅಧ್ಯಯನಕ್ಕೆ ಯೋಗ್ಯವಾಗಿದೆ. ಮದ್ದೂರಿನಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ದಾಂಧಲೆಗಳಲ್ಲಿ ಗುರುತಿಸಿಕೊಂಡವರೂ ಹಿಂದುಳಿದ, ಬಡವರ್ಗಕ್ಕೆ ಸೇರಿದ ಜನರೇ ಆಗಿರುವುದನ್ನು ಇಲ್ಲಿ ಗಮನಿಸಬಹುದು. ಹಾಸನದ ಅವಘಡದಲ್ಲಿ ಮೃತಪಟ್ಟ ಗೋಕುಲ್ ಎಂಬಾತ ಇಂಜಿನಿಯರ್ ಕಲಿಯುವ ಗುರಿಯನ್ನು ಹೊಂದಿದ್ದ. ಈತನ ತಾಯಿ ಕಸಗುಡಿಸುವ ಕೆಲಸವನ್ನು ಮಾಡಿ ಮಗನನ್ನು ಓದಿಸುತ್ತಿದ್ದರು. ಆತನ ಸಾವಿನೊಂದಿಗೆ ಆ ತಾಯಿಯ ಬದುಕೇ ಮುಗಿದಂತಾಗಿದೆ. ಮೃತರಲ್ಲಿ ಇಬ್ಬರು ಬಿಳಿ ಕಲಿಯುತ್ತಿದ್ದ ವಿದ್ಯಾರ್ಥಿಗಳು, ಒಂದೆರಡು ವರ್ಷಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಇಡೀ ಕುಟುಂಬಕ್ಕೆ ಆಸರೆಯಾಗಬೇಕಾದವರು ಈ ದುರಂತದಲ್ಲಿ ಏಕಾಏಕಿ ಇಲ್ಲವಾಗಿದ್ದಾರೆ. ಅವರನ್ನು ಕಳೆದುಕೊಂಡ ಕುಟುಂಬಗಳ ನೋವು, ಸಂಕಟಗಳನ್ನು ಯಾವ ಪರಿಹಾರವೂ ತುಂಬಿಸಿ ಕೊಡಲಾರವು. ಬಲಿಯಾದ ಯುವಕರ ತಾಯಂದಿರು ಮಾಧ್ಯಮಗಳ ಜೊತೆಗೆ ಮಾತನಾಡುವಾಗ, ಇಂತಹ ಮೆರವಣಿಗೆಗಳು ಯಾಕೆ ಬೇಕು? ಎಂದು ಆಕ್ರೋಶ ಭರಿತವಾಗಿ ಕೇಳಿದ್ದಾರೆ. ಅವರ ಈ ಪ್ರಶ್ನೆಯೂ ನಮ್ಮೆಲ್ಲರ ಆತ್ಮವಿಮರ್ಶೆಗೆ ಕಾರಣವಾಗಬೇಕಾಗಿದೆ.

ಮುಖ್ಯವಾಗಿ ಈ ದುರಂತಕ್ಕೆ ಯಾರು ಹೊಣೆ ಎನ್ನುವುದರ ಬಗ್ಗೆ ರಾಜಕೀಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ. "ಸರಕಾರ ಸೂಕ್ತ ಭದ್ರತೆಯನ್ನು ನೀಡದೆ ಇರುವುದೇ ದುರಂತಕ್ಕೆ ಕಾರಣ'' ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರಿಗೂ ಹೊಣೆಗಾರಿಕೆಗಳು ಇರುತ್ತವೆ. ಅವರು ತಮ್ಮ ಹೊಣೆಗಾರಿಕೆಯನ್ನು ಎಷ್ಟರ ಮಟ್ಟಿಗೆ ನಿರ್ವಹಿಸಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಗಲ್ಲಿಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದುದರಿಂದ ಸರಕಾರ ಮಾಡುವ ಬಿಗಿ ಬಂದೋಬಸ್ತಿಗೆ ಮಿತಿಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಸಂಘಟಕರ ಹೊಣೆಗಾರಿಕೆ ಹೆಚ್ಚಿ ರುತ್ತದೆ. ಭಾರೀ ಅನಾಹುತಗಳನ್ನು ತಡೆಯಲು ಈ ಬಾರಿ ಡಿಜೆಯ ಬಳಕೆಯನ್ನು ಸರಕಾರ ತಡೆದಿದೆ. ಆದರೆ ಇದಕ್ಕೆ ಬಿಜೆಪಿ ಮತ್ತು ಸಂಘಪರಿವಾರದ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದುರಂತಗಳನ್ನು ತಡೆಯಲು ಕಾನೂನುಗಳನ್ನು ಬಿಗಿ ಮಾಡಿದಾಗಲೆಲ್ಲ 'ಹಿಂದೂಗಳ ಹಬ್ಬ ಆಚರಣೆಗೆ ಸರಕಾರದಿಂದ ಅಡ್ಡಿ' ಎಂದು ಇದೇ ಬಿಜೆಪಿಯ ನಾಯಕರು ಬೀದಿಯಲ್ಲಿ ಅರಚಾಡತೊಡಗುತ್ತಾರೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಗಳನ್ನು ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಿದರೆ ಅದಕ್ಕೂ ತಕರಾರು ತೆಗೆಯುತ್ತಾರೆ. ಕಂಡಕಂಡ ಕೆರೆ, ನದಿಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸುವುದರ ವಿರುದ್ದ ಕಾನೂನುಗಳನ್ನು ತಂದರೆ ಅದರಲ್ಲೂ ರಾಜಕೀಯ ನಡೆಸುತ್ತಾರೆ. ಹಬ್ಬದ ಹೆಸರಿನಲ್ಲಿ ಪರಿಸರವನ್ನು ಕೆಡಿಸುವುದರ ವಿರುದ್ದ, ಮೆರವಣಿಗೆಯ ನೆಪದಲ್ಲಿ ರಸ್ತೆಗಳಲ್ಲಿ ಇಡೀ ದಿನ ಸಂಚಾರಕ್ಕೆ ಅಡ್ಡಿಯುಂಟು ಮಾಡುವುದರ ವಿರುದ್ದ ಕ್ರಮ ತೆಗೆದುಕೊಳ್ಳಲು ಮುಂದಾದರೆ ಬಿಜೆಪಿ ನಾಯಕರೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಒಂದು ರೀತಿಯಲ್ಲಿ ಹಾಸನದ ದುರಂತಕ್ಕೆ ಇಂತಹ ರಾಜಕೀಯ ನಾಯಕರ ಕೊಡುಗೆಯೂ ಬಹುದೊಡ್ಡದಿದೆ.

ಪಟಾಕಿ ನಿಷೇಧದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಮಾತನಾಡಿದೆ. ದಿಲ್ಲಿಯಲ್ಲಿ ಅನ್ವಯವಾದ ನಿಷೇಧ ಯಾಕೆ ಇಡೀ ದೇಶಕ್ಕೆ ಅನ್ವಯವಾಗಬಾರದು ಎಂದು ಅದು ಕೇಳಿದೆ. ಹಾಗೆಯೇ ಹಬ್ಬದ ಹೆಸರಿನಲ್ಲಿ ತಡ ರಾತ್ರಿಯವರೆಗೆ ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸುವುದರ ಬಗ್ಗೆಯೂ ಸರಕಾರ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯವಿದೆ. ಈ ಕಾನೂನು ಎಲ್ಲ ಧರ್ಮೀಯರಿಗೂ ಅನ್ವಯವಾಗಬೇಕು. ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು ತಮ್ಮ ತಮ್ಮ ಹಬ್ಬಗಳನ್ನು ಸಾರ್ವಜನಿಕ ಮೈದಾನಗಳಲ್ಲಿ, ದೇವಸ್ಥಾನ, ಮಸೀದಿ, ಚರ್ಚುಗಳ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಅವಕಾಶವಿದೆ. ಹಬ್ಬದ ಹೆಸರಿನಲ್ಲಿ ಇಡೀ ದಿನ ರಸ್ತೆ ತಡೆಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದರಿಂದ ಹಬ್ಬಗಳ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ಗಣಪತಿಯನ್ನು ವಿದ್ಯಾಧಿದೇವತೆ, ವಿಘ್ನನಿವಾರಕನೆಂದು ಕರೆಯುತ್ತಾರೆ. ಆದರೆ ಹಾಸನದಲ್ಲಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳೇ ಭೀಕರದುರಂತಕ್ಕೆ ಬಲಿಯಾಗುವಂತಾಯಿತು. ಯಾವ ಹಬ್ಬ ನಮ್ಮ ಬದುಕಿನ ವಿಘ್ನಗಳನ್ನೆಲ್ಲ ದೂರ ಮಾಡಿ ಹೊಸ ಬೆಳಕನ್ನು ನೀಡಬೇಕಾಗಿತ್ತೋ ಅದೇ ಹಬ್ಬದ ಹೆಸರಿನಲ್ಲಿ ವಿಘ್ನಗಳನ್ನು ನಾವಾಗಿಯೇ ಆಹ್ವಾನಿಸಿಕೊಂಡಿದ್ದೇವೆ. ಹಾಸನದ ಅವಘಡದಲ್ಲಿ ಟ್ರಕ್‌ಚಾಲಕನ ತಪ್ಪು ಇದೆ ನಿಜ. ಇದೇ ಸಂದರ್ಭದಲ್ಲಿ ಚಾಲಕ ರಸ್ತೆಯಲ್ಲಿ ಸಾಗುತ್ತಿದ್ದ. ರಸ್ತೆಗಳಿರುವುದು

ವಾಹನ ಚಲಾಯಿಸುವುದಕ್ಕೆ ಮತ್ತು ಜನರು ಸಂಚರಿಸುವುದಕ್ಕೆ, ಅನೇಕ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡಗಳು ಸಂಭವಿಸುವ ಸಾಧ್ಯತೆಗಳನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಇದೇ ಸಂದರ್ಭದಲ್ಲಿ ಚಾಲಕ ಮದ್ಯ ಸೇವಿಸಿ ಚಲಾವನೆ ಮಾಡಿರಬಹುದು. ಹಾಗೆಯೇ ಮೆರವಣಿಗೆಯಲ್ಲಿ ಸೇರಿದವರೂ ಮದ್ಯ ಸೇವನೆ ಮಾಡಿರುವ ಸಾಧ್ಯತೆಗಳಿರುತ್ತವೆ. ಅಂದರೆ ತಪ್ಪಿನಲ್ಲಿ ಎಲ್ಲರೂ ಸಮಭಾಗಿಗಳಾಗಿದ್ದಾರೆ ಎನ್ನುವ ಕಹಿ ವಾಸ್ತವವನ್ನು ನಾವು ಒಪ್ಪಲೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಹಬ್ಬದ ಹೆಸರಿನಲ್ಲಿ ಯಾವುದೇ ಧರ್ಮಗಳು ನಡೆಸುವ ಸಾರ್ವಜನಿಕ ಮೆರವಣಿಗೆಗಳು, ಆಚರಣೆಗಳು ವಾಹನಗಳು ಓಡಾಡುವ ಜನನಿಬಿಡ ರಸ್ತೆಗಳಲ್ಲಿ ನಡೆಯದಂತೆ ಕಠಿಣ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ. ಗಣೇಶ ಹಬ್ಬವನ್ನು ಹಲವೆಡೆ ಕೃಷಿಫಲಗಳ ಸಂಕೇತವಾಗಿ ಆಚರಿಸುತ್ತಾರೆ. ಆತ ವಿದ್ಯಾಧಿದೇವತೆ ಎಂಬ ನಂಬಿಕೆಯೂ ಇದೆ. ಗಣೇಶೋತ್ಸವವನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆಯಾಗಲು ಅವಕಾಶ ನೀಡದೆ, ನಾಡಿನ ಸಕಲ ವಿಘ್ನಗಳನ್ನು ದೂರೀಕರಿಸುವ ಹಬ್ಬವಾಗಿ ಅರ್ಥಪೂರ್ಣವಾಗಿ ಆಚರಿಸಲು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಮಾಜದ ಸಜ್ಜನರು ನೇತೃತ್ವವನ್ನು ನೀಡಬೇಕಾಗಿದೆ. ಹಾಸನದ ದುರಂತ ಇನ್ನೆಂದೂ ಯಾವ ಹಬ್ಬಗಳಲ್ಲೂ ಮರುಕಳಿಸದಂತೆ ನೋಡಿಕೊಳ್ಳುವುದು ನಾಗರಿಕರೆಂದು ಕರೆಸಿಕೊಳ್ಳುವ ಎಲ್ಲರ ಹೊಣೆಗಾರಿಕೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X