Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಅಂತರಾಳದ ಜೀವನದಿಗೆ ವಿಷ ‘ಜನಶತ್ರು’

ಅಂತರಾಳದ ಜೀವನದಿಗೆ ವಿಷ ‘ಜನಶತ್ರು’

ಗಣೇಶ ಅಮೀನಗಡಗಣೇಶ ಅಮೀನಗಡ20 Jun 2025 4:31 PM IST
share
ಅಂತರಾಳದ ಜೀವನದಿಗೆ ವಿಷ ‘ಜನಶತ್ರು’
ನಾಟಕ: ಜನಶತ್ರು ಮೂಲ: ಹೆನ್ರಿಕ್ ಇಬ್ಸೆನ್ ರಚನೆ, ನಿರ್ದೇಶನ: ಎಸ್.ಸುರೇಂದ್ರನಾಥ್ ಕಲಾವಿದರು: ವೆಂಕಟರಾಜು, ಚಿತ್ರಾ ವೆಂಕಟರಾಜು, ಲಿಂಗಪ್ಪ.

ಐವತ್ತು ವರ್ಷಗಳಿಂದ ಸಕ್ರಿಯವಾಗಿರುವ ಚಾಮರಾಜನಗರದ ಶಾಂತಲಾ ಕಲಾವಿದರು ತಂಡದ ಹೊಸ ನಾಟಕ ‘ಜನಶತ್ರು’.

ಮೂರೇ ಕಲಾವಿದರ ಈ ನಾಟಕ ಉಂಟು ಮಾಡುವ ಪರಿಣಾಮ ಗಾಢವಾದುದು.

‘‘ದೇವನಗರಿ ಹೆಸರಿಗೆ ತಕ್ಕ ಹಾಗೆ ದೇವರ ಸನ್ನಿಧಿಯಲ್ಲಿ ಇದೆ. ದೇವನಗರಿ ಮೇಲೆ ಇನ್ನೇನು ಕವಿದು ಬಿದ್ದೇ ಬಿಡ್ತಾವೆ ಅನ್ನೋ ಹಾಗೆ ರಾಕ್ಷಸ ಬೆಟ್ಟಗಳು. ಒಂದೊಂದು ಬೆಟ್ಟಕ್ಕೂ ಒಂದೊಂದು ದೇವರ ಹೆಸರು. ರಾಮಗಿರಿ, ಹನುಮಗಿರಿ, ಅಗಸ್ತ್ಯ ಬೆಟ್ಟ ಹೀಗೆ... ಬೆಟ್ಟಗಳ ಗರ್ಭದಲ್ಲಿ ಬಂಡೆಗಳೋ ಬಂಡೆಗಳು. ಈ ಬಂಡೆಗಳನ್ನು ಕತ್ತರಿಸಿದ ಕಲ್ಲುಗಳೇ ಇವತ್ತು ಬೆಂಗಳೂರು ಮುಂಬೈ, ಆಮ್‌ಸ್ಟರ್ಡಮ್‌ನಲ್ಲಿ ನೆಲಹಾಸುಗಳಾಗಿಯೋ, ಸಮಾಧಿಕಲ್ಲುಗಳಾಗಿಯೋ ಕಂಗೊಳಿಸುತ್ತಾ ಇವೆ. ಈ ಬೆಟ್ಟಗಳು ಈ ಊರಿನ ಕೆಲವರಿಗೆ ವರವಾಗಿ ರುವಂತೆ ಊರಿನ ಜನಕ್ಕೆ ಶಾಪವೂ ಆಗಿವೆ.

ಬೆಟ್ಟಗಳು ಕರಗಿ ಈ ಕೆಲವರ ಜೇಬು ತುಂಬಿಸುತ್ತಿದ್ದರೆ, ಕರಗುವಾಗ ಎದ್ದ ಧೂಳು ಜನರ ಪುಪ್ಪುಸವನ್ನು ತುಂಬಿಸುತ್ತಿದೆ...’’ ಎನ್ನುವ ಮಾತು ಪ್ರೇಕ್ಷಕರನ್ನು ಹಿಡಿದಿಡುತ್ತದೆ.

ಇದು ಹೆನ್ರಿಕ್ ಇಬ್ಸನ್‌ನ ‘An Enemy Of the people’ನ ಕನ್ನಡ ಅವತರಣಿಕೆ.. ಮೂಲ ನಾಟಕದಲ್ಲಿ ಡಾ. ಸ್ಟಾಕ್ಮನ್, ತನ್ನ ಊರಿನ ಬಿಸಿನೀರಿನ ಬುಗ್ಗೆಗಳಲ್ಲಿ ಸ್ನಾನ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಾನೆ. ಬಿಸಿನೀರಿನ ಬುಗ್ಗೆಗಳಿಂದ ಹಣ ಮಾಡಿಕೊಳ್ಳುವ ಅವನ ತಮ್ಮ ತನ್ನ ಅಣ್ಣನ ವಿರುದ್ಧ ನಿಲ್ಲುತ್ತಾನೆ. ಕೊನೆಗೆ ಊರಿನ ಎಲ್ಲರೂ ಡಾ.ಸ್ಟಾಕ್ಮನ್ ವಿರುದ್ಧ ನಿಂತು ಅವನನ್ನು ‘ಜನಶತ್ರು’ ಎನ್ನುತ್ತಾರೆ.

ಪ್ರಸ್ತುತ ಶಾಂತಲಾ ಕಲಾವಿದರು ತಂಡವು ಈ ನಾಟಕದ ಇಡೀ ಕಥೆಯನ್ನು ‘ಕಥಾ ನಿರೂಪಣೆ’ ಯ ಶೈಲಿಯಲ್ಲಿ ಕಟ್ಟಿದೆ. ನಿರ್ದೇಶಕ ಎಸ್.ಸುರೇಂದ್ರನಾಥ್ ಅವರು ಇದನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಇದೇ ವಿನ್ಯಾಸದಲ್ಲಿ ನಿರ್ದೇಶನ ಮಾಡಿದ್ದಾರೆ. ಆದರೆ ಮೂಲ ನಾಟಕದಲ್ಲಿ ಬರುವ ‘ಬಿಸಿನೀರಿನ ಬುಗ್ಗೆ’ಗಳ ಬದಲಾಗಿ ಆಯಾ ಊರಿನ ಸಮಸ್ಯೆಯನ್ನು ಈ ನಾಟಕದ ಕಥೆಗೆ ಅಳವಡಿಸಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಈ ನಾಟಕವನ್ನು ಅವರು ನಿರ್ದೇಶನ ಮಾಡುವಾಗ ಗಣಿಗಾರಿಕೆಯ ಸಮಸ್ಯೆಯನ್ನು ನಾಟಕದಲ್ಲಿ ತಂದಿದ್ದಾರೆ.

ಚಾಮರಾಜನಗರದ ಕ್ವಾರಿಯಿಂದ ತೆಗೆಯುವ ಕರಿಕಲ್ಲನ್ನು ಬೆಂಗಳೂರಿನಿಂದ ಆಮ್‌ಸ್ಟರ್ಡಮ್‌ತನಕ ಸಮಾಧಿಯ ಕಲ್ಲುಗಳಾಗಿ ಮತ್ತು ಬೇರೆ ಬೇರೆ ಕಾರಣಗಳಿಗಾಗಿ ಬಳಸಲಾಗುತ್ತದೆ. ಆದರೆ ಅದು ಪರಿಸರದ ಮೇಲೆ ಉಂಟು ಮಾಡುವ ಕೆಟ್ಟ ಪರಿಣಾಮ ಮತ್ತು ಅಲ್ಲಿ ಕೆಲಸ ಮಾಡುವಾಗ ತೀರಿಕೊಂಡ ಹುಡುಗರ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕರು ಈ ನಾಟಕವನ್ನು ಕಟ್ಟಿದ್ದಾರೆ.

ಮುಖ್ಯವಾಗಿ ಈ ನಾಟಕವನ್ನು ‘ಆಪ್ತ ರಂಗಮಂದಿರ’ ದಲ್ಲಿ ಪ್ರಯೋಗ ಮಾಡುವಂತೆಯೇ ವಿನ್ಯಾಸ ಮಾಡಲಾಗಿದೆ. ಇದರಿಂದ ಮೂವರೇ ಕಲಾವಿದರು ನಿಧಾನವಾಗಿ ಹಾಗೂ ಪರಿಣಾಮಕಾರಿಯಾಗಿ ಮಾತನಾಡುವುದರಿಂದ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ.

ಮೂಲ ನಾಟಕದ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಬಿಟ್ಟು ನಾಟಕದ ಸಾರವನ್ನು ಮಾತ್ರ ಕೇವಲ ಐದು ಪಾತ್ರಗಳನ್ನು ಅಂದರೆ ಡಾಕ್ಟರ್ ದೇವಕಿ, ಪತ್ರಕರ್ತ ಶಿವರಾಜ್, ಮುನಿಸಿಪಾಲಿಟಿ ಅಧ್ಯಕ್ಷ ಹಾಗೂ ಕ್ವಾರಿ ಮಾಲಕ ನಾರಾಯಣಪ್ಪ, ಅವನ ಭಂಟ ಪರ್ವತಪ್ಪ ಮಾತ್ರ ಇಟ್ಟುಕೊಂಡು, ಮೂವರು ನಟರೇ ಈ ಐದು ಪಾತ್ರಗಳನ್ನೂ ಅಭಿನಯಿಸಿದ್ದಾರೆ. ದೇವಕಿಯಾಗಿ ಚಿತ್ರಾ, ಪತ್ರಕರ್ತ, ಮುನಿಸಿಪಾಲಿಟಿ ಅಧ್ಯಕ್ಷ ಹಾಗೂ ಕ್ವಾರಿ ಮಾಲಕನಾಗಿ ವೆಂಕಟರಾಜು ಮತ್ತು ಅವರ ಭಂಟನಾಗಿ ಲಿಂಗಪ್ಪ ಪಾತ್ರ ಪೊರೆದಿದ್ದಾರೆ. 76 ವರ್ಷ ವಯಸ್ಸಿನ ವೆಂಕಟರಾಜು ಅವರು ವಯೋಸಹಜದಿಂದ ಒಂದೆರಡು ಕಡೆ ಸಂಭಾಷಣೆ ಹೇಳುವಾಗ ತಪ್ಪಿದರೂ ತಡವರಿಸದೆ ತಕ್ಷಣ ಸುಧಾರಿಸಿಕೊಂಡು ನಾಟಕ ಮುಂದುವರಿಸಿದರು. ಅವರಿಗೆ ಅವರ ಪುತ್ರಿ ಚಿತ್ರಾ ಬೆಂಬಲಕ್ಕೆ ನಿಂತರು. ಈ ಮೂವರೂ ನಿಧಾನವಾಗಿ ಹಾಗೂ ಪರಿಣಾಮಕಾರಿ ಸಂಭಾಷಣೆ ಹೇಳುವ ಮೂಲಕ ಕ್ವಾರಿ ತಂದಿರುವ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ಇದಕ್ಕೆ ಪೂರಕವಾಗಿ ಡಾಕ್ಟರ್ ದೇವಕಿಯ ಮಾತು ‘‘ಊರಲ್ಲಿ ಜನರು ಕ್ವಾರಿಯ ಧೂಳು ಕುಡಿದು ನಿಧಾನವಾಗಿ ಸಾಯ್ತಾ ಇದ್ದಾರೆ. ಇವತ್ತಲ್ಲ ನಾಳೆ ಇಲ್ಲಿ ಉಳಿದಿರೋರೂ ಸಾಯ್ತಾರೆ. ಜನ ಯಾಕೆ ಸಾಯ್ತಾರೆ ಅಂತ ಎಲ್ಲರಿಗೂ ಗೊತ್ತು. ಅದನ್ನೇನು ಬಿಡಿಸಿ ಹೇಳಬೇಕಾಗಿಲ್ಲ. ಯಾರೋ ಒಬ್ಬರ ಸ್ವಾರ್ಥಕ್ಕೆ ಇಡೀ ಊರು, ಊರಿನ ಜನ ಬಲಿಯಾಗ್ತಾ ಇದ್ದಾರೆ. ಹಾಗಂತ ಮುನಿಸಿಪಾಲಿಟಿ ಪ್ರೆಸಿಡೆಂಟ್ ನಾರಾಣಪ್ನೋರ ಬಗ್ಗೆ ಆಗಲಿ, ಊರನ್ನ ಕೊಲ್ತಾ ಇರೋ ಸಿಲಿಕೋಸಿಸ್ ಅನ್ನೋ ಮಾರಿ ಬಗ್ಗೆಯಾಗಲಿ ಮಾತಾಡಲ್ಲ’’ ಎನ್ನುತ್ತಾರೆ.

ಡಾ. ದೇವಕಿ ಮತ್ತೆ ಹೇಳುವ ಮಾತು ಮುಖ್ಯ.

‘‘ನಾನು ಕಂಡುಕೊಂಡ ಸತ್ಯ ಇದು. ಇವತ್ತು ನಮ್ಮ ಅಂತಃಸತ್ವಕ್ಕೆ, ನಮ್ಮ ನಂಬಿಕೆಗಳಿಗೆ, ನಮ್ಮ ಎದೆಯೊಳಗೆ ಹರೀತಾಯಿರೋ ಜೀವನದಿಗೆ ಹುಳ ಹಿಡಿದಿದೆ, ವಿಷ ಹತ್ತಿದೆ. ನಮ್ಮ ಇಡೀ ಸಮಾಜ ಸುಳ್ಳಿನ, ಅಹಂಕಾರದ ಗೆದ್ದಲು ಹತ್ತಿದ ಬುನಾದಿ ಮೇಲೆ ನಿಂತಿದೆ. ನಮ್ಮ ಸಮಾಜಕ್ಕೆ, ನಮ್ಮ ಅಂತರಾಳದ ಜೀವನದಿಗೆ ವಿಷ ಉಣ್ಣುಸ್ತಾಯಿರೋದು ಆ ನಾರಾಣಪ್ಪ ಅಥವಾ ಆ ಪರ್ವತಪ್ಪ ಅಲ್ಲ, ಖಂಡಿತ ಅಲ್ಲ. ಇವತ್ತು ನಮ್ಮ ಸಮಾಜದ ಶತ್ರು ಬಹುಮತ. ಮೆಜಾರಿಟಿ. ಬಹುಮತದಿಂದ ಅಧಿಕಾರಕ್ಕೆ ಬಂದ ಒಂದು ವ್ಯವಸ್ಥೆ ಒಬ್ಬ ಸಾಮಾನ್ಯ ಪ್ರಜೆಯ, ಒಬ್ಬ ಸಾಮಾನ್ಯ ರೈತನ ಬಾಯಿ ಕಟ್ಟಿ ಹಾಕೋದು ಈ ವ್ಯವಸ್ಥೆಯ ಅಹಂಕಾರ. ಈ ಬಹುಮತ ಈ ವ್ಯವಸ್ಥೆಗೆ ಕೊಟ್ಟಿರೋ ಅಹಂಕಾರ. ಅಧಿಕಾರದ ಅಹಂಕಾರ. ಈ ಬಹುಮತ ಇವತ್ತು ಒಬ್ಬ ಸಾಮಾನ್ಯ ಪ್ರಜೆ ಹೇಳೊ ಸತ್ಯ ಕೇಳೋಕೆ ತಯಾರಿಲ್ಲ. ಬದಲಿಗೆ ಅವನ ಬಾಯಿ ಕಟ್ಟಿ ಹಾಕುತ್ತೆ. ಸಾಯ್ತಾಯಿರೋ ಒಬ್ಬ ಸಾಮಾನ್ಯ ಪ್ರಶ್ನೆ ಕೇಳೋಕೆ ಎದ್ದು ನಿಂತಾಗ ಅವನ ಬಾಯಿ ಕಟ್ಟುತ್ತೆ. ದುಡಿಮೆ ಹೆಸರಲ್ಲಿ ಸಾವು ಹಂಚುತ್ತೆ ಈ ಮೆಜಾರಿಟಿ. ತಾನು ಹೇಳಿದ್ದೇ ಸತ್ಯ. ಒಬ್ಬ ಪ್ರಜೆ ಹೇಳೋದು ಸುಳ್ಳು ಅಂತ ವಾದ ಮಾಡುತ್ತೆ ಈ ಮೆಜಾರಿಟಿ. ಈ ಮೆಜಾರಿಟಿ ಹತ್ರ ಸತ್ಯ ಇದೆ. ಒಪ್ಕೋತೀನಿ. ಆದರೆ ಅದು ಸರ್ವಸತ್ಯ ಅಲ್ಲ. ಎಲ್ಲರಿಗೂ ಬೇಕಾದ ಸತ್ಯ ಅಲ್ಲ. ತಮಗೆ ಮಾತ್ರ ಬೇಕಾದ ಸತ್ಯ. ತಾನು ಹೇಳಿದ್ದೇ ಸತ್ಯ, ತನ್ನ ಮಾತೇ ಸತ್ಯ. ತನ್ನ ಮಾತೇ ಅಂತಿಮ ಅನ್ನೋದು ಈ ಮೆಜಾರಿಟಿ ಹುಟ್ಟು ಹಾಕಿದ ಸುಳ್ಳು. ಅದೇ ಮೆಜಾರಿಟಿಯ ದಬ್ಬಾಳಿಕೆ. ಮೈನಾರಿಟಿಯನ್ನೇ ಧಿಕ್ಕರಿಸುವುದು’’

ಮೈಸೂರಿನ ಹಾಡ್ರ್ವಿಕ್ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಕಳೆದ ವಾರ ಪ್ರಯೋಗಗೊಂಡ ಈ ನಾಟಕದಲ್ಲಿ ಒಂದು ಟೇಬಲ್ಲು, ಮೂರು ಸ್ಟೂಲುಗಳನ್ನು ಮಾತ್ರ ಬಳಸಿದ್ದು ಸರಳ ರಂಗಸಜ್ಜಿಕೆಗೆ ಒತ್ತು ಕೊಟ್ಟಿದ್ದು ಗಮನಾರ್ಹ.

ಕೇವಲ 45 ನಿಮಿಷಗಳ ಅವಧಿಯ ಈ ನಾಟಕದಲ್ಲಿ ಮೂರೂ ಪಾತ್ರಗಳ ಬಿಳಿ ಬಟ್ಟೆ ಕೂಡಾ ಗಮನಾರ್ಹ. ವೆಂಕಟರಾಜು ಅವರು ವೇಸ್ಟ್ ಕೋಟ್ ಹಾಗೂ ಬ್ಯಾಗು ಹಾಕಿಕೊಂಡಾಗ ಪತ್ರಕರ್ತ. ಇವೆರಡನ್ನು ತೆಗೆದಿರಿಸಿದರೆ ರಾಜಕಾರಣಿ ನಾರಾಣಪ್ಪ. ಹೀಗೆಯೇ ಅವರ ಭಂಟನಾದ ಲಿಂಗಪ್ಪ ಕೂಡಾ ಬಿಳಿ ಬಟ್ಟೆಧಾರಿ. ಅಲ್ಲದೆ ಡಾಕ್ಟರ್ ದೇವಕಿ ಪಾತ್ರದ ಚಿತ್ರಾ ಅವರದು ಬಿಳಿಬಟ್ಟೆ ಜೊತೆಗೆ ಏಪ್ರನ್. ಅವರು ಸ್ಟೆತೊಸ್ಕೋಪ್ ಬಳಸಿದ್ದರೆ ಚೆನ್ನಾಗಿರುತ್ತಿತ್ತು. ಇದರಿಂದ ಅವರದು ವೈದ್ಯೆ ಪಾತ್ರವೆಂದು ಪ್ರೇಕ್ಷಕರಿಗೆ ಗೊತ್ತಾಗುತ್ತಿತ್ತು. ಆದರೂ ತಾನು ಡಾಕ್ಟರ್ ದೇವಕಿ ಎಂದೂ ಹೇಳುತ್ತಾರೆ. ಇದೇನೂ ಲೋಪವಲ್ಲ. ಕಡಿಮೆ ಅವಧಿಯ, ಹೆಚ್ಚು ಪರಿಣಾಮದ ನಾಟಕ ಕೊಟ್ಟ ಶಾಂತಲಾ ಕಲಾವಿದರು ತಂಡಕ್ಕೆ ಅಭಿನಂದನೆಗಳು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X