Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ದುಡಿಯುವ ಅವಧಿ ಎಷ್ಟಿರಬೇಕು

ದುಡಿಯುವ ಅವಧಿ ಎಷ್ಟಿರಬೇಕು

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ7 July 2025 10:37 AM IST
share
ದುಡಿಯುವ ಅವಧಿ ಎಷ್ಟಿರಬೇಕು
ಈ ರಕ್ತ ಹಿಂಡುವ ಶೋಷಣೆಯ ಯಾತನೆಯಿಂದ ದುಡಿಯುವ ಜನರು ಹೊರಗೆ ಬರಬೇಕೆಂದರೆ, ತಮ್ಮನ್ನು ವಿಭಜಿಸಿದ, ಏಕತೆಯನ್ನು ಹಾಳು ಮಾಡಿದ ಜಾತಿ, ಮತ, ಕೋಮುವಾದಗಳ ಕತ್ತಲ ಲೋಕದಿಂದ ಹೊರಗೆ ಬರಬೇಕು. ಕೋಮುವಾದಿಗಳು ಸೃಷ್ಟಿಸಿದ ಲವ್ ಜಿಹಾದ್, ಮತಾಂತರ, ಮಂದಿರ, ಮಸೀದಿ, ಚರ್ಚ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕರಾಳ ಶಕ್ತಿಗಳ ವಂಚನೆಯ ಜಾಲಕ್ಕೆ ಸಿಲುಕದೇ ತಮ್ಮ ನ್ಯಾಯ ಸಮ್ಮತವಾದ, ಘನತೆಯ ಬದುಕಿಗಾಗಿ, ಸಮಾನತೆಯ ಜಗತ್ತಿಗಾಗಿ ಹೋರಾಡಲು ಮುಂದಾಗಬೇಕು.

ಜಗತ್ತಿನಲ್ಲಿ ಇಷ್ಟೆಲ್ಲ ತಂತ್ರಜ್ಞಾನದ ಬೆಳವಣಿಗೆಯಾದರೂ ಶ್ರಮಜೀವಿಗಳು ಬೆವರ ಹನಿಯನ್ನು ಬಸಿಯದೇ ,ರಕ್ತವನ್ನು ನೀರು ಮಾಡಿಕೊಳ್ಳದೇ ಈ ಜಗತ್ತು ಮುಂದೆ ಸಾಗುವುದಿಲ್ಲ ಎಂಬುದು ಯಾರೂ ನಿರಾಕರಿಸಲಾಗದ ಸತ್ಯ. ಕೋವಿಡ್ ಸಮಯದಲ್ಲಿ ಇಡೀ ಜಗತ್ತಿನ ಜನರು ಮನೆಗೆ ಬೀಗ ಹಾಕಿಕೊಂಡು ಒಳಗಿದ್ದರು.ರಸ್ತೆಗಳು ಜನ ಮತ್ತು ವಾಹನಗಳಿಲ್ಲದೆ ಬಿಕೊ ಎನ್ನುತ್ತಿದ್ದವು. ಆದರೆ ಪೌರ ಕಾರ್ಮಿಕರು ಮಾತ್ರ ಕಸಬರಿಗೆಯೊಂದಿಗೆ ಬೀದಿಗೆ ಬಂದು ಇಡೀ ನಗರವನ್ನು ಸ್ವಚ್ಛ ಮಾಡಿ ಹೋಗುತ್ತಿದ್ದರು.

ದುಡಿಯುವ ಜನರ ದುಡಿಮೆಯ ಅವಧಿ ಸಾಲದು ಎಂದು ಇನ್ನಷ್ಟು ಗಂಟೆ ದುಡಿಯಬೇಕು ಎಂದು ಧಾರಾಳವಾಗಿ ಉಪದೇಶ ನೀಡುವವರಿಗೇನು ಕೊರತೆಯಿಲ್ಲ. ಇಂಥ ಬಿಟ್ಟಿ ಸಲಹೆ ನೀಡುವವರು ಬೇರಾರೂ ಅಲ್ಲ, ಅವರು ಉದ್ಯಮಪತಿಗಳು.

ಇವರ ಹಿತರಕ್ಷಣೆಗೆ ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಈಗಾಗಲೇ 20ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉತ್ಪಾದನಾ ಘಟಕಗಳಲ್ಲಿ ದಿನದ ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ಹೆಚ್ಚಿಸುವ ಬಗ್ಗೆ ಕಾಯ್ದೆಯನ್ನು ರೂಪಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯಗಳು ತಿದ್ದುಪಡಿಯನ್ನು ತರಬೇಕಾಗಿದೆ. ನಮ್ಮ ರಾಜ್ಯದಲ್ಲೂ ಇಂಥ ತಿದ್ದುಪಡಿ ತರುವ ಯತ್ನಗಳು ನಡೆದಿವೆ. ಇದಕ್ಕೆ ವಾಣಿಜ್ಯೋದ್ಯಮ ಸಂಸ್ಥೆಗಳು ಬೆಂಬಲವನ್ನು ವ್ಯಕ್ತಪಡಿಸಿದರೆ, ಕಾರ್ಮಿಕ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಈ ನಡುವೆ ಕೆಲವು ಉದ್ಯಮಪತಿಗಳಲ್ಲಿ ತಲೆಗೊಬ್ಬರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾರ್ಮಿಕರು ವಿಶ್ರಾಂತಿಯನ್ನೇ ಪಡೆಯಬಾರದು ವಾರಕ್ಕೆ 90 ತಾಸು ಕೆಲಸ ಮಾಡಬೇಕು, ವಾರಾಂತ್ಯದಲ್ಲೂ ದುಡಿಯಬೇಕು ಎಂದು ಲಾರ್ಸನ್ ಆ್ಯಂಡ್ ಟೂಬ್ರೊ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸುಬ್ರಹ್ಮಣ್ಯನ್ ಅವರು ನೀಡಿರುವ ಹೇಳಿಕೆ ಸಾಕಷ್ಟು ವಿವಾದವನ್ನು ಉಂಟು ಮಾಡಿತು. ಇನ್ಫೋಸಿಸ್ ನಾರಾಯಣಮೂರ್ತಿ ಅವರು ಕೂಡ ಪ್ರಧಾನಿ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ ನೌಕರರು, ಕಾರ್ಮಿಕರು ವಾರಕ್ಕೆ 70 ಗಂಟೆ ದುಡಿಯಬೇಕೆಂದು ಅಪ್ಪಣೆ ಕೊಡಿಸಿದರು.

ಈ ಉದ್ಯಮಪತಿ ಸುಬ್ರಹ್ಮಣ್ಯನ್ ಎಷ್ಟು ಸಂವೇದನಾರಹಿತ ಹೇಳಿಕೆಯನ್ನು ನೀಡಿದರೆಂದರೆ ಎಷ್ಟು ಹೊತ್ತು ಹೆಂಡತಿಯ ಮುಖವನ್ನು ನೋಡುತ್ತ ಕುಳಿತಿರುತ್ತೀರಿ,ಹೆಂಡತಿ ಎಷ್ಟು ಹೊತ್ತು ನಿಮ್ಮ ಮುಖವನ್ನು ನೋಡುತ್ತ ಕುಳಿತಿರಬೇಕು ಎಂದು ಕೆಲಸದ ಅವಧಿ ಹೆಚ್ಚಳದ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕುಟುಂಬಗಳೊಳಗಿನ ಮಾನವ ಸಂಬಂಧಗಳ ಖಬರಿಲ್ಲದ ಈ ಕೋಟ್ಯಧಿಶರು ದುಡಿಯುವ ಜನರಿಗೆ ದುಡಿಮೆ ಬಿಟ್ಟರೆ ಬೇರಾವುದೂ ಬೇಡ ಎಂಬ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದುಡಿಯುವ ಜನರನ್ನು ಎಂಟು ತಾಸಿಗಿಂತ ಹೆಚ್ಚು ದುಡಿಸಬಾರದು ಎಂಬುದು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಕಾನೂನು. ಇದು ಮಾಲೀಕರು ನೀಡಿದ ಬೀಕ್ಷೆಯಲ್ಲ. ಶ್ರಮಜೀವಿಗಳು ಅಪಾರ ತ್ಯಾಗ, ಬಲಿದಾನಗಳಿಂದ ಹೋರಾಟ ಮಾಡಿ ಪಡೆದ ಹಕ್ಕಿದು.ಕೈಗಾರಿಕಾ ಕ್ರಾಂತಿಯ ಆರಂಭದ ವರ್ಷಗಳಲ್ಲಿ ಕಾರ್ಮಿಕರು ಗಾಣದ ಎತ್ತಿನಂತೆ ದಿನಕ್ಕೆ 18 ರಿಂದ 20 ತಾಸು ಕೆಲಸ ಮಾಡುತ್ತಿದ್ದರು. ಅವರಿಗೆ ವಿಶ್ರಾಂತಿ, ವಾರಕ್ಕೊಂದು ದಿನ ರಜೆ ಎಂಬುದಿರಲಿಲ್ಲ. ಈ ಕ್ರೂರ ಶೋಷಣೆಯನ್ನು ಪ್ರತಿಭಟಿಸಿ 8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ನಿದ್ದೆ ಬೇಕೆಂದು ಜಾಗತಿಕವಾಗಿ ಮುಷ್ಕರ ನಡೆಸಿದರು. 1886 ಮೇ 1ರಂದು ಅಮೆರಿಕದ ಚಿಕಾಗೊ ನಗರದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ತಾಳಿತು. ಪೊಲೀಸರ ಗುಂಡಿನ ದಾಳಿಯಲ್ಲಿ ಅನೇಕರು ಅಸು ನೀಗಿದರು. ಕಾರ್ಮಿಕ ನಾಯಕರನ್ನು ಗಲ್ಲಿಗೇರಿಸಲಾಯಿತು. ಅಲ್ಲಿ ಹರಿಯುತ್ತಿದ್ದ ಕಾರ್ಮಿಕರ ರಕ್ತದಲ್ಲಿ ಅದ್ದಿದ ಬಟ್ಟೆ ಕೆಂಬಾವುಟವಾಯಿತು. ಈ ಬಲಿದಾನದ ನೆನಪಿಗಾಗಿ ಮೇ 1 ಜಾಗತಿಕ ಕಾರ್ಮಿಕ ದಿನವಾಗಿ ಎಲ್ಲೆಡೆ ಆಚರಿಸಲ್ಪಡುತ್ತದೆ.

ಕಾರ್ಮಿಕರ ಈ ತ್ಯಾಗ ಬಲಿದಾನದ ಹೋರಾಟದ ಪರಿಣಾಮವಾಗಿ ಕಾರ್ಮಿಕರು ದಿನಕ್ಕೆ 8 ಗಂಟೆ ಕೆಲಸ, ವಾರಕ್ಕೆ ಒಂದು ರಜೆ ಎಂಬುದು ಜಗತ್ತಿನಾದ್ಯಂತ ಎಲ್ಲ ದೇಶಗಳು ಒಪ್ಪಿಕೊಂಡು ಕಾನೂನಿನ ರೂಪ ತಾಳಿತು. ಸ್ವಾತಂತ್ರ್ಯಾ ನಂತರ ಭಾರತದಲ್ಲೂ ಶಾಸನವಾಗಿ ಜಾರಿಗೆ ಬಂತು.

ಇದು ಶೋಷಕರು ನೀಡಿದ ಭಿಕ್ಷೆಯಲ್ಲ.ದುಡಿಯುವ ಜನರು ತಮ್ಮ ರಕ್ತ ಚೆಲ್ಲಿ ಮಾಡಿದ ಹೋರಾಟದ ಫಲವಾಗಿ ಕೆಲಸದ ನಿರ್ದಿಷ್ಟ ಅವಧಿ ದುಡಿಮೆ ಸೇರಿದಂತೆ ಹಲವಾರು ಸವಲತ್ತುಗಳು ಅವರಿಗೆ ಬಂದವು. ಹಣ ಬಲದ ಎದುರು ಶ್ರಮ ಬಲ ಜಯಶಾಲಿಯಾಯಿತು.ಆ ನಂತರ ಸೋವಿಯತ್ ರಶ್ಯದ ಅಕ್ಟೋಬರ್ ಕ್ರಾಂತಿ, ಪೂರ್ವ ಯುರೋಪ್‌ನ ಸಮಾಜವಾದಿ ದೇಶಗಳ ಮುನ್ನಡೆ ಇವೆಲ್ಲ ಸುಮಾರು ಎಂಟು ದಶಕಗಳ ಕಾಲ ಶ್ರಮಜೀವಿಗಳ ಜಾಗತಿಕ ಶಕ್ತಿಗೆ ಒತ್ತಾಸೆಯಾಗಿ ನಿಂತವು.ಹೀಗಾಗಿ ದುಡಿಯುವ ಜನರ ಹಿತ ರಕ್ಷಣೆ ಮಾಡುವ ಹಲವಾರು ಕಾನೂನು ಗಳು ಬಂದವು. ಕಳಚಿಕೊಳ್ಳಲು ಉಳಿದಿರುವುದು ದಾಸ್ಯದ ಸಂಕೋಲೆಗಳು ಮಾತ್ರ, ಗೆಲ್ಲಲು ಇಡೀ ವಿಶ್ವವೇ ದುಡಿಯುವ ವರ್ಗದ ಮುಂದೆ ಇದೆ ಎಂದು ಕಾರ್ಲ್‌ಮಾರ್ಕ್ಸ್ ಸಂದೇಶ ಸಂಚಲನ ಉಂಟು ಮಾಡಿತು. ಬಂಧನದ ಸಂಕೋಲೆಗಳನ್ನು ಕಳಚಿಕೊಂಡ ಕಾರ್ಮಿಕ ವರ್ಗ ಹೋರಾಟದ ಫಲವಾಗಿ ಅನೇಕ ಸವಲತ್ತುಗಳನ್ನು ಪಡೆಯಿತು. ಸವಲತ್ತುಗಳ ಜೊತೆಗೆ ಅದು ಕ್ರಮೇಣ ನಡು ಮಧ್ಯಮ ವರ್ಗವಾಗಿ ರೂಪಾಂತರಗೊಳ್ಳತೊಡಗಿತು.

ಈ ಬದಲಾವಣೆಯ ಜೊತೆ ಜೊತೆಗೆ ಒಂದೆಡೆ ಬಂಡವಾಳಶಾಹಿ ದೇಶಗಳಲ್ಲಿ ನವ ಉದಾರೀಕರಣದ ಮಾರುಕಟ್ಟೆ ಆರ್ಥಿಕ ನೀತಿ ಆವರಿಸತೊಡಗಿದರೆ ಇನ್ನೊಂದೆಡೆ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿಯತೊಡಗಿತು. ಅದರ ಬೆನ್ನಲ್ಲೇ ಪೂರ್ವ ಯುರೋಪ್‌ನ ಸಮಾಜವಾದಿ ದೇಶಗಳು ಒಂದೊಂದಾಗಿ ಪತನಗೊಂಡವು. _ಈ ಜಾಗತಿಕ ಬೆಳವಣಿಗೆ ಮತ್ತು ಬದಲಾವಣೆಯ ಹಿನ್ನೆಲೆಯಲ್ಲಿ ದುಡಿಯುವ ಜನತೆಯ ಧ್ವನಿ ಉಡುಗತೊಡಗಿತು.ಒಂದು ಕಾಲದಲ್ಲಿ ದುಡ್ಡಿದ್ದವರಿಗೆ ಸವಾಲಾಗಿನಿಂತ ದುಡಿಯುವ ವರ್ಗ ಅಸಹಾಯಕತೆಯ ಮಡಿಲಿಗೆ ತಳ್ಳಲ್ಪಟ್ಟಿತು. ಅಪಾರ ತ್ಯಾಗ ಬಲಿದಾನದಿಂದ ಪಡೆದ ಹಕ್ಕುಗಳನ್ನು ಒಂದೊಂದಾಗಿ ಕಳೆದುಕೊಳ್ಳಬೇಕಾಗಿ ಬಂತು. ಸಂಘಟಿತ ಕಾರ್ಮಿಕ ವರ್ಗದ ಪರಿಸ್ಥಿತಿ ಹೀಗಾದರೆ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಡೋಲಾಯಮಾನವಾಯಿತು.ಒಂದು ಕಾಲದಲ್ಲಿ ಒಂದಾಗಿ ಜಯ ಸಾಧಿಸಿದ ದುಡಿಯುವ ವರ್ಗವನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವ ಮಸಲತ್ತು ಯಶಸ್ವಿಯಾಗತೊಡಗಿದೆ. ಹೀಗಾಗಿ ಶ್ರಮಿಕರಿಗೆ ಉಪದೇಶ ನೀಡುವ ಕಾರ್ಪೊರೇಟ್ ಖದೀಮರ ಆರ್ಭಟ ಹೆಚ್ಚಾಗಿದೆ.

ಕೆಲಸದ ಅವಧಿಯ ಪ್ರಶ್ನೆ ಮಾತ್ರವಲ್ಲ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನು ತಂದಿದೆ. ಇದರ ಪ್ರಕಾರ 300ಕ್ಕೂ ಕಡಿಮೆ ಕಾರ್ಮಿಕರು ಕೆಲಸ ಮಾಡುವ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ಸರಕಾರದ ಅನುಮತಿ ಬೇಕಾಗಿಲ್ಲ. ಇದರಿಂದ ಕಾರ್ಮಿಕರನ್ನು ಬೇಕಾದಾಗ ಕೆಲಸಕ್ಕೆ ಸೇರಿಸಿಕೊಳ್ಳಲು ಮತ್ತು ವಜಾ ಮಾಡಲು ಮಾಲೀಕರಿಗೆ ಸಂಪೂರ್ಣ ಅಧಿಕಾರ ನೀಡಿದಂತಾಗಿದೆ. ಮುಷ್ಕರ ನಿರತ ಕಾರ್ಮಿಕರನ್ನು ಹಾಗೂ ಕಾರ್ಮಿಕ ನಾಯಕರನ್ನು ಸಲೀಸಾಗಿ ಜೈಲಿಗೆ ತಳ್ಳಲು ನೂತನ ಕಾನೂನು ಅವಕಾಶ ನೀಡುತ್ತದೆ. ಹೀಗೆ ಸುಮಾರು ನಲವತ್ತಕ್ಕೂ ಹೆಚ್ಚು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.ಇಂಥ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಯಾಗಬಾರದೆಂದು ಅಮಾಯಕ ಜನರನ್ನು ಮಂದಿರ, ಮಸೀದಿ, ಚರ್ಚ್‌ಗಳ ಕಲಹದ ಕಡಲಲ್ಲಿ ಮುಳುಗಿಸಲಾಗಿದೆ.

ಚೀನಾ, ಯುರೋಪ್ ಮತ್ತು ಅಮೆರಿಕಗಳಂಥ ಹೆಚ್ಚು ಉತ್ಪಾದಕ ದೇಶಗಳಿಗೆ ಹೋಲಿಸಿದರೆ ಭಾರತದ ಖಾಯಂ ಕಾರ್ಮಿಕರು ಕೂಡ ಈಗಾಗಲೇ ಹತ್ತು ತಾಸು ಕೆಲಸವನ್ನು ಮಾಡುತ್ತಿದ್ದಾರೆ. ಇಂಥ ಅವಿಶ್ರಾಂತ ದುಡಿಮೆಯಿಂದ ಕಾರ್ಮಿಕರ ಆರೋಗ್ಯ ಹದಗೆಡತೊಡಗಿದೆ.ಈಗ ಬಿಟ್ಟಿ ಉಪದೇಶ ಮಾಡುವ ಕಾರ್ಪೊರೇಟ್‌ಗಳು ತೊಂಭತ್ತು ತಾಸುಗಳ ದುಡಿಮೆಯ ಕುಚೇಷ್ಟೆಯ ಮಾತುಗಳನ್ನು ಆಡುತ್ತಿದ್ದಾರೆ. ದಕ್ಷತೆ ಮತ್ತು ಉತ್ಪಾದಕತೆ ಹೆಸರಿನಲ್ಲಿ ಹೆಚ್ಚಿನ ಲಾಭವನ್ನು ದೋಚಲು ಕಾರ್ಪೊರೇಟ್ ಲಾಬಿ ಮುಂದಾಗಿದೆ. ಅವರು ಹೇಳಿದಂತೆ ಕುಣಿಯುವ ಸರಕಾರ ಅವರಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನಿಗೆ ತಿದ್ದುಪಡಿಗೆ ಮುಂದಾಗಿದೆ.

ರಾಷ್ಟ್ರೀಯ ಅಪರಾಧ ಬ್ಯುರೊ ದಾಖಲೆಗಳ ಪ್ರಕಾರ ಅವಿಶ್ರಾಂತ ದುಡಿಮೆ ಹಾಗೂ ಅಸಹನೀಯ ಯಾತನೆಯಿಂದಾಗಿ 2022 ರಲ್ಲಿ 11,486 ಆತ್ಮಹತ್ಯೆಗಳು ಸಂಭವಿಸಿವೆ. ಕಾರ್ಮಿಕರನ್ನು ಗಾಣಕ್ಕೆ ಹಾಕಿದ ಕಬ್ಬಿನಂತೆ ಹಿಂಡಿ ಹಿಪ್ಪೆಮಾಡಲಾಗುತ್ತಿದೆ.

ಕೇಂದ್ರದಲ್ಲಿ ತಮ್ಮ ಅಡಿಯಾಳಿನಂತಿರುವ ಸರಕಾರದ ಮೂಲಕ ಕಾರ್ಮಿಕರನ್ನು ಯಾತನೆಯ ಕೂಪಕ್ಕೆ ತಳ್ಳಲಾಗಿದೆ.

ಭಾರತದಲ್ಲಿ ಈಗ ವಾರದಲ್ಲಿ 6 ದಿನ ಕೆಲಸ, 8 ತಾಸುಗಳ ಕೆಲಸದ ಅವಧಿ ಜಾರಿಯಲ್ಲಿದೆ,ಅಂದರೆ ವಾರಕ್ಕೆ 48 ತಾಸುಗಳಷ್ಟಾಗುತ್ತದೆ (ಕೆನಡಾದಲ್ಲಿ ವಾರದ ದುಡಿಮೆಯ ಅವಧಿ 32 ತಾಸು.) ಈ ದುಡಿಮೆಯ ಅವಧಿಯನ್ನು ಹೆಚ್ಚಿಸಬೇಕೆಂದು ಕಾರ್ಪೊರೇಟ್ ಕಂಪೆನಿಗಳಿಂದ ಒತ್ತಡ ಬರುತ್ತಲೇ ಇದೆ. ನಮ್ಮ ಸರಕಾರಗಳು ಅಂದರೆ ನಾವೇ ಚುನಾಯಿಸಿದ ಸರಕಾರಗಳು ಈ ಒತ್ತಡಕ್ಕೆ ಮಣಿಯುತ್ತಲೇ ಇವೆ.ಯಾವುದೇ ಕಾರ್ಮಿಕ ದಿನದ 24 ತಾಸು ಕೆಲಸ ಮಾಡಲು ಸಾಧ್ಯವಿಲ್ಲ.ದೇಹದಲ್ಲಿ ಚೈತನ್ಯವಿದ್ದರೆ ತಾನೇ ದುಡಿಯಲು ಸಾಧ್ಯ. ಕಾರ್ಲಮಾರ್ಕ್ಸ್ಸ್ ತನ್ನ Capital (ಬಂಡವಾಳದಲ್ಲಿ)ದುಡಿಮೆಯ ಅವಧಿಯ ಹೆಚ್ಚಳದಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಾಕಷ್ಟು ವಿವರವಾಗಿ ವಿಶ್ಲೇಷಣೆ ಮಾಡಿದ್ದಾರೆ. ಕಾರ್ಮಿಕನೊಬ್ಬನ ಶ್ರಮ ಶಕ್ತಿಯ ಮರು ಪೂರಣಕ್ಕಾಗಿ ವಿಶ್ರಾಂತಿ ಅಗತ್ಯ. ತನ್ನ ಖಾಸಗಿ ಬದುಕಿಗೆ ಎಳ್ಳು ನೀರು ಬಿಟ್ಟು ದುಡಿದರೆ ಸಂಪತ್ತಿನ ಕ್ರೋಡೀಕರಣವಾಗುತ್ತದೆ. ಇದರಿಂದ ಬಡವರು ಮತ್ತು ಶ್ರೀ ಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ.

ಇನ್ಫೋಸಿಸ್ ನಾರಾಯಣ ಮೂರ್ತಿಯವರ ಒಟ್ಟು ಆಸ್ತಿ 5.1 ಬಿಲಿಯನ್ ಡಾಲರ್, ಅವರೀಗ ಜಗತ್ತಿನ 606ನೇ ಅತಿ ದೊಡ್ಡ ಸಿರಿವಂತರಾಗಿದ್ದಾರೆ. ಕಾರ್ಮಿಕರು ವಾರಕ್ಕೆ 90 ಗಂಟೆ ದುಡಿಯಬೇಕೆನ್ನುವ ಎಸ್.ಎನ್. ಸುಬ್ರಮಣ್ಯನ್ ಭಾರತದ ನಾಲ್ಕನೇ ಅತಿ ದೊಡ್ಡ ಶ್ರೀ ಮಂತ ಸಿಇಓ ಆಗಿದ್ದಾರೆ.ಇವರ ವಾರ್ಷಿಕ ಸಂಬಳ 48. 45 ಕೋಟಿ.ಇದು ಸಾಲದೆಂಬಂತೆ ದಿನಕ್ಕೆ ತೊಂಭತ್ತು ತಾಸು ದುಡಿಯಲು ಒತ್ತಾಯಿಸುತ್ತಿದ್ದಾರೆ.

ಜಗತ್ತು ಹಾಳಾಗಿ ಹೋಗಲಿ, ಉಳಿದವರಿಗೆ ಏನೇ ಆಗಲಿ ಬಂಡವಾಳಶಾಹಿ ವ್ಯವಸ್ಥೆಗೆ ಲಾಭ ಬೇಕು. ಅದಕ್ಕಾಗಿ ಕಡಿಮೆ ಪಗಾರದಲ್ಲಿ ಕಾರ್ಮಿಕರು ಹೆಚ್ಚು ಹೊತ್ತು ಕೆಲಸ ಮಾಡಬೇಕು. ಅವರ ಖಜಾನೆ ತುಂಬಲು ದುಡಿಯುವ ಜನ ತಮ್ಮ ಮನೆ ಮಾರುಗಳನ್ನು ಮರೆತು ಬೆವರು ಹರಿಸಬೇಕು. ಬಡವರಿಗಾಗಿ ಅನ್ನ ಭಾಗ್ಯದಂಥ ಯೋಜನೆಯನ್ನು ಸರಕಾರ ತಂದರೆ ಅದನ್ನೂ ಇವರು ವಿರೋಧಿಸುತ್ತಾರೆ. ಜನರು ಸೋಮಾರಿಗಳಾಗುತ್ತಾರೆ ಎಂಬ ಕತೆ ಕಟ್ಟುತ್ತಾರೆ. ತಮಗೆ ಮಾತ್ರ ಉದ್ದಿಮೆ ಆರಂಭಿಸಲು ಪುಗಸಟ್ಟೆ ಇಲ್ಲವೇ ರಿಯಾಯಿತಿ ದರದಲ್ಲಿ ಸರಕಾರಿ ಭೂಮಿ, ರಿಯಾಯಿತಿ ದರದಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಆಗಬೇಕು. ವಿಮಾನ ನಿಲ್ದಾಣ ಹತ್ತಿರದಲ್ಲಿ ಇರಬೇಕು. ಉಳಿದವರು ಅಂದರೆ ಶ್ರಮಜೀವಿಗಳು ಮಾತ್ರ ಇವರಿಗಾಗಿ ದುಡಿಯುತ್ತಲೇ ಇರಬೇಕು. ಯಾಕೆಂದರೆ ತಾವು ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿಕೊಳ್ಳುತ್ತಾರೆ.ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆಂಬುದು ಅವರಿಗೇ ಗೊತ್ತು.

ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಬಂಡವಾಳಶಾಹಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನೂ ಬಳಸಿಕೊಳ್ಳುತ್ತಾರೆ. ಆ ಮೂಲಕ ಹಳೆಯ ಉತ್ಪಾದನಾ ಸಾಧನಗಳನ್ನು ನಾಶ ಮಾಡಿ ಹೊಸ ಉತ್ಪಾದನಾ ಸಾಧನಗಳನ್ನು ಅಳವಡಿಸಿಕೊಳ್ಳುತ್ತ ಹೋಗುತ್ತಾರೆ.ಇದರಿಂದಾಗಿ ನ್ಯಾನೋ ಟೆಕ್ನಾಲಜಿ ನಂತರ ಕೃತಕ ಬುದ್ಧಿಮತ್ತೆಯತ್ತ ದೃಷ್ಟಿ ಹಾಯಿಸಿದ್ದಾರೆ. ನಮ್ಮ ದೇಶದ ಈಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವಂತೂ ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲ ಮಾಡಿ ಕೊಡುತ್ತಲೇ ಇದೆ.

ಈ ರಕ್ತ ಹಿಂಡುವ ಶೋಷಣೆಯ ಯಾತನೆಯಿಂದ ದುಡಿಯುವ ಜನರು ಹೊರಗೆ ಬರಬೇಕೆಂದರೆ, ತಮ್ಮನ್ನು ವಿಭಜಿಸಿದ, ಏಕತೆಯನ್ನು ಹಾಳು ಮಾಡಿದ ಜಾತಿ, ಮತ, ಕೋಮುವಾದಗಳ ಕತ್ತಲ ಲೋಕದಿಂದ ಹೊರಗೆ ಬರಬೇಕು. ಕೋಮುವಾದಿಗಳು ಸೃಷ್ಟಿಸಿದ ಲವ್ ಜಿಹಾದ್, ಮತಾಂತರ, ಮಂದಿರ, ಮಸೀದಿ, ಚರ್ಚ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕರಾಳ ಶಕ್ತಿಗಳ ವಂಚನೆಯ ಜಾಲಕ್ಕೆ ಸಿಲುಕದೇ ತಮ್ಮ ನ್ಯಾಯ ಸಮ್ಮತವಾದ, ಘನತೆಯ ಬದುಕಿಗಾಗಿ, ಸಮಾನತೆಯ ಜಗತ್ತಿಗಾಗಿ ಹೋರಾಡಲು ಮುಂದಾಗಬೇಕು. ಇದು ಬಹುದೀರ್ಘ ಕಾಲದ ಸಮರ.ಚರಿತ್ರೆಯಲ್ಲಿ ಬುದ್ಧ, ಬಸವಣ್ಣ, ಪೈಗಂಬರ್, ಏಸುಕ್ರಿಸ್ತ, ಮಹಾವೀರ ಮೊದಲಾದ ಮಹಾತ್ಮರು ಕೂಡ ಇಂಥದೇ ಆರೋಗ್ಯಕರ ಬದುಕಿಗಾಗಿ ಶ್ರಮಿಸುತ್ತಲೇ ಬಂದಿದ್ದಾರೆ. ಇದು ಕೊನೆಯಿಲ್ಲದ ಹೋರಾಟ. ಹೋರಾಟದಿಂದ ಮಾತ್ರ ಯಾತನೆಯ ಜಗತ್ತಿಗೆ ವಿದಾಯ ಹೇಳಲು ಸಾಧ್ಯ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X