Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಉಮರ್ ಖಾಲಿದ್: ನ್ಯಾಯದ ನಿರೀಕ್ಷೆೆಯಲ್ಲಿ...

ಉಮರ್ ಖಾಲಿದ್: ನ್ಯಾಯದ ನಿರೀಕ್ಷೆೆಯಲ್ಲಿ ಇನ್ನೆಷ್ಟು ದಿನ?

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ8 Sept 2025 12:28 PM IST
share
ಉಮರ್ ಖಾಲಿದ್: ನ್ಯಾಯದ ನಿರೀಕ್ಷೆೆಯಲ್ಲಿ ಇನ್ನೆಷ್ಟು ದಿನ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಸೇರಿ ಎಲ್ಲೂ ನ್ಯಾಯ ಸಿಗದಾಗ ಅಸಹಾಯಕ ವ್ಯಕ್ತಿ ಬೇರೆ ದಾರಿ ಕಾಣದೇ ಅಂತಿಮವಾಗಿ ನ್ಯಾಯಾಂಗದ ಮೊರೆ ಹೋಗುತ್ತಾನೆ.ಅಲ್ಲೂ ನ್ಯಾಯ ಎಂಬುದು ಕನ್ನಡಿಯೊಳಗಿನ ಗಂಟಾದಾಗ ಹತಾಶನಾಗುತ್ತಾನೆ. ಭಾರತ ಕಂಡ ಅಪ್ರತಿಮ ದೇಶ ಭಕ್ತ, ಸಮತೆಯ ಸಮಾಜದ ಕನಸನ್ನು ಕಣ್ಣತುಂಬ ತುಂಬಿಕೊಂಡ ದಿಲ್ಲಿಯ ಉಮರ್ ಖಾಲಿದ್ ಮತ್ತು ಅವರ ಜೊತೆಗೆ ಸೆರೆಮನೆ ಸೇರಿದ ಎಂಟು ಜನರು ಜಾಮೀನು ಮೇಲೆ ಬಿಡುಗಡೆ ಕೋರಿ ಐದನೇ ಬಾರಿ ದಿಲ್ಲಿಯ ಉಚ್ಚ ನ್ಯಾಯಾಲಯದ ಕದ ತಟ್ಟಿದರು. ಈ ಸಲವೂ ಅವರಿಗೆ ದೊರಕಿದ್ದು ನ್ಯಾಯವಲ್ಲ, ದಟ್ಟ ನಿರಾಶೆೆ.

ಕಾನೂನಿನ ಎದುರಿಗೆ ಎಲ್ಲರೂ ಸಮಾನರು ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಇದು ತಾತ್ವಿಕವಾಗಿ ಸರಿ. ಆದರೆ, ಕಣ್ಣ ಮುಂದಿನ ಕಟು ವಾಸ್ತವವೇನೆಂದರೆ ಕಾನೂನಿನ ಎದುರು ಕೆಲವರು ಹೆಚ್ಚು ಸಮಾನರಾಗಿರುತ್ತಾರೆ. ಕಾನೂನು ಎಲ್ಲ ಪ್ರಜೆಗಳಿಗೂ ಒಂದೇ ತೆರನಾಗಿ ಅನ್ವಯಿಸಲ್ಪಡುವುದಿಲ್ಲ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ, ಅದೇ ಉಮರ್ ಖಾಲಿದ್ ಅವರ ಉದಾಹರಣೆ ಕೊಡಬಹುದು. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಅವರ ಎಂಟು ಮಂದಿ ಸ್ನೇಹಿತರನ್ನು ಯಾವುದೇ ವಿಚಾರಣೆಯಿಲ್ಲದೇ, ಯಾವುದೇ ಲಿಖಿತ ಆರೋಪಗಳಿಲ್ಲದೇ ಐದು ವರ್ಷಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಉಮರ್ ಖಾಲಿದ್ , ಶಾರ್ಜೀಲ್ ಮೊದಲಾದ ಎಂಟು ಮಂದಿ ಜಾಮೀನು ಮೇಲೆ ಬಿಡುಗಡೆ ಕೋರಿ ಐದನೇ ಸಲ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಆದರೆ ಇವರ ಮನವಿಯನ್ನು ಹೈಕೋರ್ಟ್ ಮತ್ತೆ ತಿರಸ್ಕರಿಸಿತು. ಜಾಮೀನು ಅರ್ಜಿಯನ್ನು ತಿರಸ್ಕರಿಸಲು ಕಾರಣ ಏನು ಎಂಬ ಪ್ರಶ್ನೆಗೆ ಸಮಾಧಾನಕರ ವಿವರಣೆಯನ್ನೂ ನ್ಯಾಯಾಲಯ ನೀಡಿಲ್ಲ. ನ್ಯಾಯ ಪಾಲನೆಯ ತತ್ವದ ಪ್ರಕಾರ ಯಾವುದೇ ಆರೋಪಿ ಅಪರಾಧಿ ಎಂದು ಸಾಬೀತಾಗುವವರೆಗೆ ಅಮಾಯಕ ಎಂದೇ ಪರಿಗಣಿಸಲ್ಪಡುತ್ತಾನೆ.ಇಂಥವರಿಗೆ ಜಾಮೀನು ನಿರಾಕರಿಸಲು ಕಾರಣವೇನು? ಇದು ಸಂವಿಧಾನದ 21ನೇ ವಿಧಿಯ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಉಲ್ಲಂಘನೆ ಅಲ್ಲವೇ? ಈ ಕುರಿತು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ಸಾಮಾನ್ಯವಾಗಿ ಯುಎಪಿಎ ಅಸ್ತ್ರವನ್ನು ಸರಕಾರ ಬಳಸುವುದು ಸರಕಾರದ ಕಟು ವಿಮರ್ಶಕರ ವಿರುದ್ಧ. ಆರೋಪಿಗಳ ಚಟುವಟಿಕೆ ದೇಶದ ವಿರುದ್ಧ್ದ ಪಿತೂರಿಯಾಗಿತ್ತು ಎಂದು ಪ್ರಾಸಿಕ್ಯೂಶನ್ ಮಾಡಿದ ವಾದವನ್ನು ಮಾತ್ರ ಪರಿಗಣಿಸಿದ ನ್ಯಾಯಾಲಯಕ್ಕೆ ವಿಚಾರಣೆಯಿಲ್ಲದೇ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಲೋಪ ಎಂದು ಅನಿಸಿಲ್ಲ. ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಇದು ಐದನೇ ಬಾರಿ. ಜೈಲಿಗೆ ಹಾಕಿ ಐದು ವರ್ಷಗಳಾಗಿದ್ದರೂ ಅವರ ವಿರುದ್ಧ ಯಾವುದೇ ಆರೋಪವನ್ನು ರೂಪಿಸದೇ ಸರೆಮನೆಯಲ್ಲಿ ಇಟ್ಟಿದ್ದು ಆತಂಕದ ಸಂಗತಿಯಾಗಿದೆ. ಆರೋಪವನ್ನು ಸಾಬೀತು ಪಡಿಸಲಾಗದೇ, ವಿಚಾರಣೆ ಇಲ್ಲದೇ ಜೈಲಿನಲ್ಲಿ ಇಡುವುದು ಅನ್ಯಾಯದ ಪರಮಾವಧಿ ಅಲ್ಲದೆ ಮತ್ತೇನು? ಯಾವುದೇ ಆರೋಪವಿಲ್ಲದೆ ಬಂಧಿಸಿ ಜೈಲಿಗೆ ಹಾಕಿದ ನಂತರ ಸಾಕ್ಷ್ಯಾಧಾರಗಳಿಗಾಗಿ ತಡಕಾಡುವ ಹೊಸ, ಹೊಲಸು ಚಾಳಿ ಆರಂಭವಾಗಿದೆ. ಈ ಯುವಕರ ಮೇಲೆ ಯಾವುದೇ ಆರೋಪವನ್ನು ಸಾಬೀತುಪಡಿಸಲಾಗಿಲ್ಲ. ಯಾವುದಕ್ಕೂ ಪುರಾವೆಗಳಿಲ್ಲ. ಆದರೂ ಅವರನ್ನು ಬಿಡುಗಡೆ ಮಾಡುವ ಮನಸ್ಸಿಲ್ಲ. ಮಧ್ಯ ಪ್ರವೇಶಿಸಿ ನ್ಯಾಯ ನೀಡಬೇಕಾದ ನ್ಯಾಯಾಲಯ ಕೂಡ ಪೊಲೀಸರು ಸಾಕ್ಷ್ಯಾಧಾರಗಳನ್ನು ತರಲಿ ಎಂದು ಅವರ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದೆ.

2020ರ ಫೆಬ್ರವರಿ ತಿಂಗಳಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಗಲಭೆ ಹಿಂದಿನ ‘ಪಿತೂರಿ’ಗೆ ಸಂಬಂಧಿಸಿದಂತೆ ಇವರು ಐದು ವರ್ಷಗಳಿಂದ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಆದರೆ, ದಿಲ್ಲಿ ಕೋಮು ಗಲಭೆಗೆ ಸಂಬಂಧಿಸಿದಂತೆ ಪ್ರಚೋದಕರಾದ ಅನುರಾಗ ಠಾಕೂರ್ ಮತ್ತು ಕಪಿಲ್ ಮಿಶ್ರಾ ಅವರಂಥ ಬಿಜೆಪಿ ನಾಯಕರು ಯಾವುದೇ ಶಿಕ್ಷೆಯಿಲ್ಲದೆ ಮನ ಬಂದಲ್ಲಿ ಓಡಾಡಿಕೊಂಡಿದ್ದಾರೆ. ದಿಲಿ ಗಲಭೆಯ ಸಂದರ್ಭದಲ್ಲಿ ಗೋಲಿ ಮಾರೋ ಸಾಲೊಂಕೋ ಎಂದು ಅತ್ಯಂತ ಪ್ರಚೋದನಕಾರಿ ಭಾಷಣ ಮಾಡಿದ ಅನುರಾಗ ಠಾಕೂರ್ ಮೇಲೆ ಈ ವರೆಗೆ ಯಾವುದೇ ಕ್ರಮವಿಲ್ಲ. ಯಾಕೆಂದರೆ ಈತ ಕೇಂದ್ರ ಮಂತ್ರಿ. ಇದು ಉಮರ್ ವ್ಯಥೆಯಾದರೆ ಮಾಲೆಗಾಂವ್ ಬಾಂಬ್ ಸ್ಪೋಟದ ಖಳ ನಾಯಕರದು ಇನ್ನೊಂದು ಕತೆ, ಮಹಾರಾಷ್ಟ್ರದ ಮಾಲೆಗಾಂವ್ ಬಾಂಬ್ ಸ್ಪೋಟದ ಪ್ರಕರಣದ ಆರೋಪಿಗಳಾದ ಕರ್ನಲ್ ಪುರೋಹಿತ್, ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರರನ್ನು ನ್ಯಾಯಾಲಯ ದೋಷಮುಕ್ತ ಗೊಳಿಸಿತು. ನ್ಯಾಯಾದ ನ್ಯಾಯ ದಾಯದ ತಕ್ಕಡಿ ಒಮ್ಮ್ಮೊಮ್ಮೆ ಒಂದೆಡೆ ವಾಲುವುದು ಈಗಂತೂ ಸಾಮಾನ್ಯ ಸಂಗತಿಯಾಗಿದೆ. ಮತ್ತೊಂದೆಡೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಮತ್ತಿತರರನ್ನು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆ ಹಾಕಲಾಗಿದೆ.ಇದ್ಯಾವ ಸೀಮೆಯ ನ್ಯಾಯ?

ಉಮರ್ ಖಾಲಿದ್ ಪಿಎಚ್.ಡಿ ಸ್ಕಾಲರ್ ವಿದ್ಯಾರ್ಥಿ. ತಾನು ಮಾಡಿದ ತಪ್ಪೇನು ಎಂದು ಪದೇ ಪದೇ ಪ್ರಶ್ನಿಸುತ್ತಲೇ ಇದ್ದಾನೆ.ಉತ್ತರ ನೀಡಬೇಕಾದ ಸರಕಾರ ಸ್ಪಂದಿಸುತ್ತಿಲ್ಲ. ದಾರಿ ಕಾಣದೇ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಅದು ಜಾಣ ಮೌನ ತಾಳಿದೆ.ಐದು ವರ್ಷಗಳ ಕಾಲ ವಿಚಾರಣೆ ಇಲ್ಲ, ಆರೋಪ ಸಾಬೀತಾಗಿಲ್ಲ.ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದರೆ ತಿರಸ್ಕಾರ. ದಿಲ್ಲಿಯ ಗಲಭೆಗೆ ಈತ ಕಾರಣನೆಂದಾದರೆ ಆರೋಪವನ್ನು ಯಾಕೆ ಸಾಬೀತುಪಡಿಸಲು ಆಗುತ್ತಿಲ್ಲ?. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಕಲಬುರ್ಗಿಯವರ ಹತ್ಯೆಯ ಸಂಚುಕೋರರು ಇನ್ನೂ ಸಿಕ್ಕಿಲ್ಲ. ಒಬ್ಬೊಬ್ಬ ರಿಗೆ ಒಂದೊಂದು ರೀತಿ ನ್ಯಾಯ ನೀಡುವುದು ಸರಿಯೇ? ಎಲ್ಲರಿಗೂ ಕಾನೂನು ಒಂದೇ ಎಂದು ಹೇಳುತ್ತೀರಿ, ಆದರೆ ಇದೇನು ಕತೆ?.

ಮುಸ್ಲಿಮ್ ಅಲ್ಪಸಂಖ್ಯಾತರನ್ನು ಉಸಿರೆತ್ತದಂತೆ ಮಾಡಲು ‘ಜಿಹಾದಿ’ ಪದ ಬಳಕೆ. ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡುವವರನ್ನು ಹತ್ತಿಕ್ಕಲು ‘ಅರ್ಬನ್ ನಕ್ಸಲ್’ ಪದ ಪ್ರಯೋಗ. ಇವು ಸರಕಾರದ ಗೃಹ ಇಲಾಖೆಯಲ್ಲಿ ಅನಧಿಕೃತವಾಗಿ ಸೇರ್ಪಡೆಗೊಂಡಿರುವ ಪದಗಳು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲೆಂದೇ ಸೃಷ್ಟಿಸಲಾದ ಪದಗಳು. ಇವು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ಸಿದ್ಧಪಡಿಸಿದ ಪದಗಳು. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಅತ್ಯಂತ ಕ್ರೌರ್ಯದಿಂದ ಹತ್ತಿಕ್ಕಲು ವ್ಯಾಪಕವಾಗಿ ಬಳಸಲಾಗುತ್ತಿರುವ ಇವು ಈಗ ಪ್ರಭುತ್ವದ ಹೊಸ ಅಸ್ತ್ರಗಳು.

ಉಮರ್ ಖಾಲಿದ್ ಮತ್ತು ಇತರರು ಯೌವನದ ಅಮೂಲ್ಯ ವರ್ಷಗಳನ್ನು ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯುತ್ತಿದ್ದಾರೆ.ಉಮರ್ ಖಾಲಿದ್ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ( ಜೆ.ಎನ್.ಯು.) ಬಂದವರು. ಅವರನ್ನು ಅರ್ಬನ್ ನಕ್ಸಲೈಟ್ ಎಂದು ಟಾರ್ಗೆಟ್ ಮಾಡಲಾಗಿದೆ.ಜೊತೆಗೆ ‘ಉಮರ್ ಖಾಲಿದ್’ ಎಂಬ ಹೆಸರು ಕೂಡ ಇದಕ್ಕೆ ಇನ್ನೊಂದು ಕಾರಣ ‘ಪುರೋಹಿತ್’ ದೀಕ್ಷಿತ್, ಪಾಟೀಲ್ ಇತ್ಯಾದಿ ಹೆಸರುಗಳಿದ್ದರೆ, ಜೊತೆಗೆ ಶಾಖೆಗೆ ಹೋಗಿ ನಮಸ್ತೆ ಹಾಡಿದ್ದರೆ ಬಚಾವಾಗುತ್ತಿದ್ದರೇನೋ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕರ್ನಾಟಕ ವಿಧಾನಸಭೆಯ ಬಿಜೆಪಿ ನಾಯಕ ಅಶೋಕ್‌ವರೆಗೆ ಸಂಘ ಪರಿವಾರದ ಛೋಟಾ, ಬಡಾ ನಾಯಕರು ನಗರ ನಕ್ಸಲ್ ಎಂಬ ಪದವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಗರ ನಕ್ಸಲರ ಹಾವಳಿ, ಎಸ್.ಐ.ಟಿ. ತನಿಖೆಗೆ ‘ನಗರ ನಕ್ಸಲ್’ರು ಕಾರಣ.ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸುತ್ತ ಮುತ್ತ ನಗರ ನಕ್ಸಲರಿದ್ದಾರೆ ಎಂದೆಲ್ಲಾ ಇವರು ರೈಲು ಬಿಡುತ್ತಿದ್ದಾರೆ. ಇವರ ವಿಶ್ವಗುರು ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರು ನಡೆಸುತ್ತಿದ್ದಾರೆ ಎಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತಾರೆ. ಗಾಂಧಿವಾದಿ ಮೇಧಾ ಪಾಟ್ಕರ್ ಕೂಡ ಇವರ ದೃಷ್ಟಿಯಲ್ಲಿ ‘ನಗರ್ ನಕ್ಸಲ್’.

ಒಟ್ಟಾರೆ ಕೋಮುವಾದ, ಜಾತಿವಾದ, ಮೂಢನಂಬಿಕೆ , ಕಂದಾಚಾರ ವಿರೋಧಿಸುವವರೆಲ್ಲ ಇವರ ದೃಷ್ಟಿಯಲ್ಲಿ ನಗರ ನಕ್ಸಲರಾಗುತ್ತಿದ್ದಾರೆ.

ನಕ್ಸಲರು ಯಾರೆಂಬುದು ಭಾರತದ ಬಹುತೇಕ ಸುಶಿಕ್ಷಿತ ನಾಗರಿಕರಿಗೆ ಗೊತ್ತಿದೆ. ಕಾಡಿನಲ್ಲಿ ಬಂದೂಕು ಹಿಡಿದುಕೊಂಡು ಓಡಾಡುವವರು ನಕ್ಸಲರೆಂಬುದು ಪತ್ರಿಕೆಗಳನ್ನು ಓದುವ ಎಲ್ಲರಿಗೂ ತಿಳಿದಿದೆ. ಆದರೆ ನಗರ ನಕ್ಸಲರೆಂದರೆ ಯಾರು?

ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಹಲವಾರು ಸಲ ಉತ್ತರಿಸಿದ್ದಾರೆ.ಹರ್ಯಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿಯವರು ಗನ್ನು ಹಿಡಿದವರು ನಕ್ಸಲರು, ಪೆನ್ನು ಹಿಡಿದವರು ನಗರ ನಕ್ಸಲರು ( Urban Naxals) ಎಂದು ಹೇಳಿದರು.ಅಂದರೆ ದೇಶದ ಹೆಸರಾಂತ ಸಾಹಿತಿಗಳು, ಕಲಾವಿದರು, ಕವಿಗಳು, ಚಿಂತಕರು,ಪತ್ರಕರ್ತರು, ಅವರ ದೃಷ್ಟಿಯಲ್ಲಿ ‘ನಗರ ನಕ್ಸಲರು’ ಎಂದು ಕರೆಯಲ್ಪಡುತ್ತಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಚಾರ ಭಾಷಣ ಮಾಡುತ್ತ ಸರ್ದಾರ್ ಸರೋವರ ಯೋಜನೆಯನ್ನು ವಿರೋಧಿಸಿ ಹೋರಾಡುವವರಿಗೆ ನಗರ ನಕ್ಸಲರು ಎಂದು ಹಣೆಪಟ್ಟಿ ಹಚ್ಚಿದರು. ವಾಸ್ತವವಾಗಿ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ಯಾರು ವಿರೋಧಿಸಿದರೆಂದು ಎಲ್ಲರಿಗೂ ಗೊತ್ತಿದೆ. ಹೆಸರಾಂತ ಗಾಂಧಿವಾದಿ ಮೇಧಾ ಪಾಟ್ಕರ್ ಅವರು ಈ ಹೋರಾಟದ ನೇತೃತ್ವ ವಹಿಸಿದ್ದರು ಮತ್ತು ವಹಿಸಿದ್ದಾರೆ.ಈ ಸರ್ದಾರ್ ಸರೋವರ ಅಣೆಕಟ್ಟಿನಿಂದ ನೂರಾರು ವರ್ಷಗಳಿಂದ ಆ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳು ಬೀದಿಗೆ ಬೀಳುತ್ತಾರೆ ಎಂಬ ಮಾನವೀಯ ಕಾಳಜಿಯಿಂದ ಮೇಧಾ ಪಾಟ್ಕರ್ ಅಕ್ಷರ ಗೊತ್ತಿಲ್ಲದ ಆದಿವಾಸಿಗಳನ್ನು ಕಟ್ಟಿಕೊಂಡು ಹೋರಾಡುತ್ತ ಬಂದಿದ್ದಾರೆ. ಮದುವೆಯನ್ನೂ ಆಗದ ದಿಟ್ಟ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರನ್ನು ಅರ್ಬನ್ ನಕ್ಸಲ್ ಎಂದು ಬಹಿರಂಗವಾಗಿ ಟೀಕಿಸುವ ಉದ್ದೇಶವೇನು?

ಹೀಗೆ ಅರ್ಬನ್ ನಕ್ಸಲ್ ಎಂದು ಕರೆದು ಆನಂದ ತೇಲ್ತುಂಬ್ಡೆ ಅವರಂಥ ಅಂತರ್‌ರಾಷ್ಟ್ರೀಯ ಖ್ಯಾತಿಯ ಚಿಂತಕನನ್ನು ಜೈಲಿಗೆ ತಳ್ಳಿ ವರ್ಷಗಟ್ಡಲೇ ಕೊಳೆ ಹಾಕಿದರು. ಅವರು ಮಾತ್ರವಲ್ಲ ಅವರಿಗಿಂತ ಮುಂಚೆ ಮತ್ತು ಅವರ ಜೊತೆಗೆ ಕವಿ ವರವರರಾವ್, ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ, ಅವರಂಥ ಇನ್ನು ಕೆಲವರ ಚಿಂತಕರನ್ನು ಬಂಧಿಸಿ ಹಿಂಸಿಸಲಾಯಿತು. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ಬಂಧಿಸಲ್ಪಟ್ಟಿದ್ದ 84 ವಯಸ್ಸಿನ ಸ್ಟ್ಯಾನ್ ಸ್ವಾಮಿ ಅವರ ಸಾವು ನಮ್ಮ ಕಣ್ಣ ಮುಂದಿದೆ.

ಅರ್ಬನ್ ನಕ್ಸಲ್ ಎಂದು ದಿಲ್ಲಿಯ ವಿಶ್ವವಿದ್ಯಾನಿಲಯದ ಪ್ರೊ.ಜಿ.ಎನ್.ಸಾಯಿಬಾಬಾ ಅವರನ್ನು ಎಂಟು ವರ್ಷಗಳ ಹಿಂದೆ ಬಂಧಿಸಿ ನಾಗಪುರದ ಜೈಲಿನ ಅಂಡಾ ಸೆಲ್ ನಲ್ಲಿ ಇಡಲಾಗಿದ್ದನ್ನು ಮರೆಯಲು ಸಾಧ್ಯವಾಗದು.. ಶೇಕಡಾ ತೊಂಭತ್ತರಷ್ಟು ಅಂಗ ವೈಕಲ್ಯರಾದ ಸಾಯಿಬಾಬಾ ಕವಿ,ಚಿಂತಕ, ಉತ್ತಮ ಪ್ರಾಧ್ಯಾಪಕ. ಎದ್ದು ನಿಲ್ಲಲೂ ಇನ್ನೊಬ್ಬರ ಆಸರೆಯನ್ನು ಅವಲಂಬಿಸಿರುವ ಸಾಯಿಬಾಬಾ ಅವರಿಂದ ರಾಷ್ಟ್ರದ ಭದ್ರತೆಗೆ ಗಂಡಾಂತರ ಎಂದು ಪ್ರಭುತ್ವದ ಆರೋಪವಾಗಿದೆ . ಅಂತಲೇ ಇವರ ಬಿಡುಗಡೆಯನ್ನು ಪ್ರಶ್ನಿಸಿ ಮಹಾರಾಷ್ಟ್ರದ ಬಿಜೆಪಿ ನಿಯಂತ್ರಿತ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.ಕೊನೆಗೆ ಸಾಯಿಬಾಬಾ ಜೈಲಿನಿಂದ ಹೊರಗಡೆ ಬಂದರು ಆದರೆ ಬಹಳ ದಿನ ಬದುಕಲಿಲ್ಲ.

ಮಾನವ ಹಕ್ಕುಗಳ ಪರವಾಗಿ ಅದರಲ್ಲೂ ವಿಶೇಷವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಆದಿವಾಸಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸ್ಟ್ಯಾನ್ ಸ್ವಾಮಿ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು.ಅನಾರೋಗ್ಯದ ಕಾರಣ ತಮಗೆ ಜಾಮೀನು ಕೊಡಬೇಕೆಂದು ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು

ಇದನ್ನು ಅವರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಸ್ವಾಮಿಯವರ ಕೈಗಳು ನಡುಗುತ್ತಿದ್ದವು. ಕೈಯಲ್ಲಿ ಲೋಟ ಹಿಡಿದುಕೊಂಡು ನೀರು ಕುಡಿಯಲೂ ಆಗುತ್ತಿರಲಿಲ್ಲ. ಅದಕ್ಕಾಗಿ ನೀರು ಕುಡಿಯಲು ಹೀರು ಕೊಳವೆ ( ಸ್ಪ್ರಾ) ಬೇಕೆಂದು ಕೋರಿದ್ದರು. ಈ ಮನವಿಗೆ ಪ್ರತಿಕ್ರಿಯೆ ನೀಡಲು ಎನ್‌ಐಎ ಇಪ್ಪತ್ತು ದಿನ ಸಮಯ ತೆಗೆದುಕೊಂಡಿತು. ಆನಂತರ ಕೊಳವೆ ಕೊಡಲಾಯಿತು

ಆದರೆ ಅವರ ಮನವಿಗೆ ಸ್ಪಂದಿಸಲು ಇಪ್ಪತ್ತು ದಿನಗಳು ಬೇಕೆ? ಇದಕ್ಕಿಂತ ಕ್ರೌರ್ಯ ಇನ್ಯಾವುದಿದೆ. ಸ್ಟ್ಯಾನ್ ಸ್ವಾಮಿ ಕತೆ ಇದಾದರೆ ಇನ್ನು ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕ ಡಾ.ಆನಂದ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್ ಮುಂತಾದವರನ್ನು ಸಾಕಷ್ಟು ಗೋಳಾಡಿಸಿ ಬಿಡುಗಡೆ ಮಾಡಲಾಗಿದೆ.

ಈಗ ಅಧಿಕಾರದಲ್ಲಿ ಇರುವವರ ಸೈದ್ಧಾಂತಿಕ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ನಾವೆಷ್ಟೇ ಬರೆದರೂ, ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿದರೂ ಅದು ಅರಣ್ಯ ರೋದನವಾಗುತ್ತದೆ. ಜನ ಚಳವಳಿಯ ಮೂಲಕ ಪ್ರತಿರೋಧ ಒಡ್ಡುವುದು ಸುಲಭವಲ್ಲ. ಭಾರತೀಯರು ಜಾತಿ, ಮತಗಳ ಆಧಾರದಲ್ಲಿ ಮಿತಿ ಮೀರಿ ವಿಭಜನೆಗೊಂಡಿದ್ದಾರೆ. ಜನಸಮೂಹದ ನಡುವೆ ಧರ್ಮದ ಹೆಸರಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಸಕ್ರಿಯವಾಗಿವೆ. ಜನಸಾಮಾನ್ಯರು ಕೂಡ ಮತದಾನ ಮಾಡುವಾಗ ತಮ್ಮ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಆಧಾರದಲ್ಲಿ ಮತದಾನ ಮಾಡುವುದಿಲ್ಲ.ಇದೆಲ್ಲದರ ಜೊತೆಗೆ ರಾಹುಲ್ ಗಾಂಧಿಯವರು ಆರೋಪಿಸಿದಂತೆ ಮತಗಳ್ಳತನ ಇವರ ಗೆಲುವಿನ ಮೂಲವಾಗಿದೆ. ನಿರುದ್ಯೋಗ ತೊಲಗಲಿ, ಬಡತನ ಹೋಗಲಿ, ಸಮಾನತೆ ಬರಲಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿ ಎಂದು ಮತದಾನ ಮಾಡುವ ದಿನಗಳಿದ್ದವು. ಈಗ ಅವೆಲ್ಲ ಯಾರಿಗೂ ಬೇಕಾಗಿಲ್ಲ. ಬದಲಿಗೆ ತನ್ನ ಧರ್ಮ ಅಪಾಯದಲ್ಲಿ ಇದೆ. ನನ್ನ ಜಾತಿಯವನು ಗೆಲ್ಲಬೇಕು ಎಂದು ಮತದಾನ ಮಾಡುತ್ತಾರೆ. ಬಹುಸಂಖ್ಯಾತ ಸಮುದಾಯಗಳಲ್ಲಿ ಇಂಥ ಪ್ರವೃತ್ತಿ ಬೆಳೆದರೆ ಮುಂದೆ ಅದು ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯಾಗಿ ಪರಿಣಮಿಸುತ್ತದೆ. ಬಹುತ್ವ ಭಾರತ ಈಗ ಅಂಥ ಗಂಡಾಂತರಕಾರಿ ಸನ್ನಿವೇಶದಲ್ಲಿ ಇದೆ.

ಆದರೆ ಇಂಥ ಕೆಟ್ಟ ದಿನಗಳಲ್ಲಿ ನಮ್ಮೆಲ್ಲರ ಉತ್ತಮ ಬದುಕಿಗಾಗಿ ಚಿಂತಿಸುವ ಜೀವಗಳು ನರಕ ಯಾತನೆ ಅನುಭವಿಸುತ್ತಿರುವಾಗ ಕೆಲವರನ್ನು ಹೊರತುಪಡಿಸಿ ನಮ್ಮ ಬೌದ್ಧಿಕ ಲೋಕ ಜಾಣ ಮೌನ ತಾಳಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ದಟ್ಟ ನಿರಾಸೆಯ ದಿನಗಳಲ್ಲೂ ಭರವಸೆಯನ್ನು ಕಳೆದು ಕೊಳ್ಳಬಾರದು. ಇಂದಲ್ಲ ನಾಳೆ ಎಲ್ಲಿಂದಲೋ ಬೆಳಕಿನ ಕಿರಣಗಳು ಬಂದು ಈ ಕಾರ್ಗತ್ತಲನ್ನು ತೊಲಗಿಸಿ ಬಹುತ್ವ ಭಾರತವನ್ನು ಕಾಪಾಡಿ ಮುನ್ನಡೆಸಬಹುದು.

_ಭಯೋತ್ಪಾದನೆ ಅಥವಾ ಭಯೋತ್ಪಾದಕತೆ ಯಾವುದೇ ಲೋಕದಿಂದ ಬಂದಿಲ್ಲ. ಎಲ್ಲ ಸಮುದಾ ಯಗಳಲ್ಲೂ ಭಯೋತ್ಪಾದಕರು ಮತ್ತು ಅದನ್ನು ವಿರೋಧಿಸುವವರು ಇದ್ದಾರೆ. ಸ್ವಾತಂತ್ರ್ಯಾನಂತರದ ಮೊದಲ ಭಯೋತ್ಪಾದಕ ಕೃತ್ಯ ವೆಂದರೆ ಗಾಂಧೀಜಿ ಹತ್ಯೆ. ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದವನು ನಾಥೂರಾಮ್ ಗೊಡ್ಸೆ ನಂತರ ಆಗಾಗ ಹಿಂಸಾ ಕೃತ್ಯಗಳು ನಡೆಯುತ್ತಲೇ ಇವೆ. ಒಡೀಶಾದಲ್ಲಿ ಕುಷ್ಟ ರೋಗಿಗಳ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕ್ರೈಸ್ತ ಪಾದ್ರಿ ಗ್ರಹಾಂ ಸ್ಟೇನ್,

ಮತ್ತು ಅವರ ಇಬ್ಬರು ಪುಟ್ಟ ಮಕ್ಕಳನ್ನು ಸುಟ್ಟು ಹಾಕಿದವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಇವರ ಹತ್ಯೆಗೆ ಕಾರಣನಾದ ಧಾರಾಸಿಂಗ್ ಜೈಲಿನಿಂದ ಹೊರಗೆ ಬಂದಾಗ ಹೂ ಮಾಲೆ ಹಾಕಿ ಸ್ವಾಗತಿಸಿದವರು ಯಾರೆಂಬುದನ್ನು ವಿವರಿಸಬೇಕಾಗಿಲ್ಲ. ಗುಜರಾತ್ ಹತ್ಯಾಕಾಂಡ( 1992) ನಡೆದು ಮೂರು ದಶಕಗಳೇ ಗತಿಸಿದವು. ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು.ಗರ್ಭಿಣಿಯ ಹೊಟ್ಟೆಗೆ ತ್ರಿಶೂಲ ಚುಚ್ಚಿ ಭ್ರೂಣವನ್ನು ಹೊರಗೆ ಎಳೆದು ಕೊಂದರು.ಇದಕ್ಕೆ ಯಾರು ಕಾರಣ? ಆಗ ಗುಜರಾತ್ ಮುಖ್ಯಮಂತ್ರಿ ಯಾರಾಗಿದ್ದರೆಂಬುದು ಕೂಡ ಎಲ್ಲರಿಗೂ ತಿಳಿದಿದೆ.ಇಂಥವರು ನಗರ ನಕ್ಸಲರ ಬಗ್ಗೆ ಮಾತಾಡುತ್ತಾರೆ. ಉಮರ್ ಖಾಲಿದ್ ಮತ್ತು ಅವರ ಮಿತ್ರರನ್ನು ಜೈಲಿಗೆ ಹಾಕುತ್ತಾರೆ. ಇದಕ್ಕಿಂತ ಕ್ರೌರ್ಯ ಇನ್ನೆಲ್ಲಿದೆ?

ಮಹಾತ್ಮಾ ಗಾಂಧೀಜಿ,ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸ್ಸಾರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಇವರೆಲ್ಲ ನಮ್ಮ ದೇಶದ, ನಾಡಿನ ಮಹಾ ಚೇತನಗಳು.ಇವರನ್ನು ಗುಂಡಿಕ್ಕಿ ಕೊಂದವರು ಮುಸಲ್ಮಾನರಲ್ಲ. ಇವರನ್ನು ಹತ್ಯೆ ಮಾಡಿದಾಗ,

ಡಾ.ಯು.ಆರ್.ಅನಂತಮೂರ್ತಿ ಅವರು ಕೊನೆಯು ಸಿರೆಳೆದಾಗ ಪಟಾಕಿ ಹಾರಿಸಿದವರು, ಸಂಭ್ರಮಿಸಿದವರು ಯಾರು? ಗೊಡ್ಸೆ ಜಯಂತಿಯನ್ನು ಮಾಡುವವರು ಯಾರು ಎಂಬುದನ್ನು ವಿವರಿಸಬೇಕಾಗಿಲ್ಲ. ಉಮರ್ ಖಾಲಿದ್ ಅವರಾಗಲಿ, ಅವರ ಸ್ನೇಹಿತರಾಗಲಿ ಇಂಥ ಹೇಯ ಕೃತ್ಯ ಮಾಡಿದವರಲ್ಲ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X