Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಪತ್ರಿಕೆಗಳು ಮಾಯವಾಗುತ್ತಿರುವ ಈ...

ಪತ್ರಿಕೆಗಳು ಮಾಯವಾಗುತ್ತಿರುವ ಈ ದಿನಗಳಲ್ಲಿ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ21 July 2025 12:00 PM IST
share
ಪತ್ರಿಕೆಗಳು ಮಾಯವಾಗುತ್ತಿರುವ ಈ ದಿನಗಳಲ್ಲಿ
ದೃಶ್ಯ ಮಾಧ್ಯಮಗಳ ಸವಾಲನ್ನು ಎದುರಿಸಿ ಉಳಿಯಬೇಕಾದರೆ ಮುದ್ರಣ ಮಾಧ್ಯಮ ಪ್ರಭುತ್ವವನ್ನು ಮಾತ್ರವಲ್ಲ, ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ತೋರಿಸಬೇಕಾಗಿದೆ.ಹದಗೆಟ್ಟ ದೇಶದ ಆರ್ಥಿಕ ಪರಿಸ್ಥಿತಿ, ಮನುಷ್ಯತ್ವದ ಸಮಾಧಿಯ ಮೇಲೆ ವಿಜೃಂಭಿಸುತ್ತಿರುವ ಕೋಮು ಹಿಂಸಾಚಾರ, ನೋಟು ರದ್ದತಿಯ ದುಷ್ಪರಿಣಾಮ, ಜಿಎಸ್‌ಟಿ ಹಾವಳಿ, ದನ ರಕ್ಷಣೆ ಹೆಸರಿನಲ್ಲಿ ಭಯೋತ್ಪಾದನೆ. ಇವುಗಳನ್ನು ಪ್ರಶ್ನಿಸಬೇಕಾಗಿದೆ.

ಇತ್ತೀಚೆಗೆ ಪತ್ರಿಕಾ ದಿನ ಹಲವಾರು ಕಡೆ ಆಚರಿಸಲಾಯಿತು. ಈಗಲೂ ಅಲ್ಲಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆದಿವೆ. ಎಲ್ಲ ದಿನಾಚರಣೆಗಳಂತೆ ಇದೂ ಕೂಡ ಸಂಪ್ರದಾಯದಂತೆ ಆಚರಿಸಲ್ಪಡುತ್ತಿದೆ. ಅಲ್ಲಲ್ಲಿ ಸಭೆ, ಸಮಾರಂಭಗಳಲ್ಲಿ ಪತ್ರಕರ್ತರನ್ನು ಹೊಗಳುವ, ಅವರಿಗೆ ಉಪದೇಶ ಹೇಳುವ ಮಾತುಗಳು ಧಾರಾಳವಾಗಿ ಬರುತ್ತವೆ. ಆದರೆ, ಈಗ ಮುಂಚಿನಂತಿಲ್ಲ. ಎಲ್ಲವೂ ಸಂಪೂರ್ಣ ಬದಲಾಗಿದೆ. ನಾನು 50 ವರ್ಷಗಳ ಹಿಂದೆ ನನ್ನ 21ನೇ ವಯಸ್ಸಿನಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮೂಲಕ ಈ ವೃತ್ತಿಗೆ ಆಕಸ್ಮಿಕವಾಗಿ ಬಂದಾಗ ಇದ್ದ ಪರಿಸ್ಥಿತಿಯೇ ಬೇರೆ. ಕರ್ನಾಟಕ ರಾಜ್ಯ ನಿರ್ಮಾಣವಾಗುವ ಮುಂಚೆ ಹಾಗೂ ನಂತರದ ಕೆಲವು ವರ್ಷಗಳು ಕರ್ನಾಟಕದಲ್ಲಿ 3 ಅಥವಾ 4 ದಿನಪತ್ರಿಕೆಗಳು ಮಾತ್ರ ಪ್ರಮುಖವಾಗಿ ಇದ್ದವು. ಉತ್ತರ ಕರ್ನಾಟಕದಲ್ಲಿ ‘ಸಂಯುಕ್ತ ಕರ್ನಾಟಕ’, ಹಳೆ ಮೈಸೂರಿನಲ್ಲಿ ‘ಪ್ರಜಾವಾಣಿ’ ಮತ್ತು ‘ಕನ್ನಡ ಪ್ರಭ’ ಮುಖ್ಯ ಪತ್ರಿಕೆಗಳು. ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ನಂ.1 ಪತ್ರಿಕೆ. ಅದಕ್ಕೆ ಜನ ‘ಪೇಪರ್’ ಎಂದು ಕರೆಯುತ್ತಿದ್ದರು. ಜನಸಾಮಾನ್ಯರ ದೃಷ್ಟಿಯಲ್ಲಿ ಪೇಪರ್ ನಲ್ಲಿ ಪ್ರಕಟವಾಗದ ಸುದ್ದಿ ಸುದ್ದಿಯೇ ಅಲ್ಲ. ಉಳಿದ ಒಂದೆರಡು ಪತ್ರಿಕೆಗಳಲ್ಲಿ ಯಾವುದೇ ಘಟನೆಯ ಸುದ್ದಿ ಬಂದರೆ ಉತ್ತರ ಕರ್ನಾಟಕದ ಜನ ನಂಬುತ್ತಿರಲಿಲ್ಲ. ಪೇಪರ್‌ನಲ್ಲಿ ಅಂದರೆ ಸಂಯುಕ್ತ ಕರ್ನಾಟಕದಲ್ಲಿ ಬಂದಿಲ್ಲವಲ್ಲ ಎನ್ನುತ್ತಿದ್ದರು. ಮುಂಜಾನೆಯಾದರೆ ಸಾಕು ಪೇಪರ್‌ಗಾಗಿ ಕಾಯುತ್ತಿದ್ದರು. ಬೆಳಗಿನ ಚಹಾ, ಕಾಫಿ ಜೊತೆಗೆ ಪೇಪರ್ ಇರಲೇಬೇಕು.

ಈಗ ಕ್ರಮೇಣ ಎಲ್ಲವೂ ಬದಲಾಗಿದೆ. ಪತ್ರಿಕೆಗಳನ್ನು ಸೈಕಲ್ ಮೇಲೆ ಹೇರಿಕೊಂಡು ಮನೆ ಮನೆಗೆ ವಿತರಿಸುತ್ತಿದ್ದ ಹುಡುಗರು ಕಾಣುತ್ತಿಲ್ಲ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮೊದಲಾದ ನಗರಗಳಲ್ಲಿ ಕಾಣುತ್ತಿದ್ದ ಪತ್ರಿಕೆಗಳ ಅಂಗಡಿಗಳು ಕೂಡ ಕಾಣುತ್ತಿಲ್ಲ ಒಂದೊಂದಾಗಿ ಮುಚ್ಚುತ್ತಿವೆ. ಕೆಲ ಅಂಗಡಿಗಳು ಇದ್ದರೂ ಅಲ್ಲಿ ಕೆಲವು ದಿನಪತ್ರಿಕೆ ಗಳನ್ನು ಬಿಟ್ಟರೆ ಸುಧಾ, ತರಂಗ, ಮಯೂರ, ತುಷಾರ, ಕಸ್ತೂರಿ, ಇಂಡಿಯಾ ಟುಡೆ, ವೀಕ್, ಔಟ್ ಲುಕ್, ಫ್ರಂಟ್ ಲೈನ್‌ನಂಥ ಸಾಪ್ತಾಹಿಕಗಳು, ಮಾಸಿಕಗಳು ಸಿಗುತ್ತಿಲ್ಲ. ಈ ಬೆಂಗಳೂರಿನಲ್ಲಿ ನಮ್ಮ ಮನೆಯ ಬಳಿ ಇರುವ ಅಂಗಡಿಯಲ್ಲಿ ನಾನು ವಿಚಾರಿಸಿದೆ. ಆಗ ಅಂಗಡಿಯ ಮಾಲಕ ಅವುಗಳನ್ನು ಯಾರೂ ಓದುವುದಿಲ್ಲ ಸರ್ ಎಂದು ಉದ್ಗರಿಸಿದ.

ಈಗ ಮನೆಗೆ ಪತ್ರಿಕೆ ತರಿಸಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗಡಿಗಳಿಗೆ ಹೋಗಿ ಪತ್ರಿಕೆಗಳನ್ನು ಕೊಳ್ಳುವವರು ಕೂಡ 60ರ ನಂತರದ ವಯಸ್ಸಿನವರು. 50ರ ಆಸುಪಾಸಿನ ಕೆಲವರು ಓದುತ್ತಾರೆ. ಆದರೆ 30 ವರ್ಷದ ಒಳಗಿನವರು ಪತ್ರಿಕೆಗಳನ್ನು ಓದುವುದು ತುಂಬಾ ಕಡಿಮೆ. ಈಗಿನ ಯುವಕರಿಗೆ ಸುದ್ದಿಯ ಬಗ್ಗೆ ಅಷ್ಟೊಂದು ಆಸಕ್ತಿ ಕಾಣುತ್ತಿಲ್ಲ. ಅವರಿಗೆ ವ್ಯಕ್ತಿತ್ವ ಬೆಳವಣಿಗೆಗೆ ಮಾಹಿತಿ ಮಾತ್ರ ಬೇಕು. ಅದನ್ನು ಅವರು ಇಂಟರ್ ನೆಟ್‌ನಲ್ಲಿ, ಗೂಗಲ್‌ನಲ್ಲಿ ಹುಡುಕುತ್ತಾರೆ.ಇನ್ನು ರಾಜಕೀಯ ಅಭಿಪ್ರಾಯಗಳು ಬಹುತೇಕ ವಾಟ್ಸ್ ಆ್ಯಪ್ ಯುನಿವರ್ಸಿಟಿಗಳನ್ನು ಅವಲಂಬಿಸಿದ್ದಾರೆ. ಓದಲು ಪುರುಸೊತ್ತು ಕೂಡ ಇಲ್ಲದ ದಿನಗಳಿವು. ಅದೂ ಬೆಂಗಳೂರು, ಮುಂಬೈನಂಥ ಮಹಾನಗರಗಳಲ್ಲಿ ಬೆಳಗಿನ ಜಾವ ಬೇಗನೇ ಎದ್ದು ಸಾಫ್ಟ್‌ವೇರ್ ನಂಥ ಕೆಲಸಕ್ಕೆ ಹೋಗುವವರು ಮತ್ತೆ ಮನೆ ಸೇರುವುದು ರಾತ್ರಿ ತಡವಾಗಿ. ಹೀಗಾಗಿ ಪತ್ರಿಕೆಗಳನ್ನಾಗಲಿ, ಪುಸ್ತಕಗಳನ್ನಾಗಲಿ ಓದುವ ಆಸಕ್ತಿ ತುಂಬಾ ಕಡಿಮೆ. ಕನ್ನಡ ದಿನಪತ್ರಿಕೆಗಳ ಓದುಗರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಇಂಗ್ಲಿಷ್ ದೈನಿಕಗಳ ಪ್ರಸಾರ ಸಂಖ್ಯೆಯೇನು ಹೆಚ್ಚಾಗಿಲ್ಲ. ಇನ್ನೊಂದೆರಡು ದಶಕಗಳು ಕಳೆದ ನಂತರ ಕ್ರಮೇಣ ಪತ್ರಿಕೆಗಳು ಸಂಪೂರ್ಣವಾಗಿ ಮಾಯವಾಗುತ್ತವೆಯಾ? ಹೇಳಲು ಆಗುವುದಿಲ್ಲ. ಹೊಸ ಪೀಳಿಗೆಯ ಯುವಕರ ಆಸಕ್ತಿಯನ್ನು ಗಮನಿಸಿ ಹೊಸ ಆವಿಷ್ಕಾರಗಳೊಂದಿಗೆ ಬಂದರೆ ಉಳಿಯಬಹುದೇನೋ .

ಬರೀ ಸುದ್ದಿಗಳ ಮೇಲೆ ಕಣ್ಣಾಡಿಸುವುದು ಮಾತ್ರವಲ್ಲ, ಸುದ್ದಿಗಳ ಹಿಂದಿನ ನಿಜ ಸುದ್ದಿಗಳನ್ನು, ಅಸಲಿ ಕತೆಗಳನ್ನು , ಲೇಖನಗಳನ್ನು ವಿವರವಾಗಿ ಓದುವ, ತಿಳಿದುಕೊಳ್ಳುವ ಆಸಕ್ತಿ ಮೂಡಿದರೆ, ಪತ್ರಿಕೆಗಳು ಸ್ಪಂದಿಸಿದರೆ ಪತ್ರಿಕೆಗಳು ಸುರಕ್ಷಿತವಾಗಿ ಉಳಿದರೂ ಅಚ್ಚರಿ ಪಡಬೇಕಾಗಿಲ್ಲ.

ಮುಂಚೆ ಸಮೂಹ ಮಾಧ್ಯಮ ಅಂದರೆ ಪತ್ರಿಕೆಗಳು ಮಾತ್ರ ಎಂಬುದು ಸಾಮಾನ್ಯ ಸಂಗತಿ. ನಂತರ ಆಕಾಶವಾಣಿ, ಟಿ.ವಿ.ಗಳು ಸಮೂಹ ಮಾಧ್ಯಮದ ವ್ಯಾಪ್ತಿಗೆ ಬಂದವು. ಈಗಂತೂ ಅದರ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಂಡಿದೆ. ಬ್ಲಾಗ್, ವೆಬ್ ಸೈಟ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಸುದ್ದಿಗಳನ್ನು ಸೃಷ್ಟಿಸುವ,ಹರಡುವ ಕೆಲಸದಲ್ಲಿ ತೊಡಗಿವೆ. ಮೊಬೈಲ್ ಇಟ್ಟುಕೊಂಡವರೆಲ್ಲ ಪತ್ರಕರ್ತರಾಗಿದ್ದಾರೆ. ಈ ಎಲ್ಲಾ ಸವಾಲುಗಳನ್ನು ಮುದ್ರಣ ಮಾಧ್ಯಮ ಎದುರಿಸಬೇಕಾಗಿದೆ.

ಪತ್ರಿಕೆಗಳು ಮಾತ್ರ ಸಮೂಹ ಮಾಧ್ಯಮವಾಗಿದ್ದ ಆ ದಿನಗಳಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಪತ್ರಿಕೆಗಳು ಆರಂಭವಾದವು. ಸ್ವಾತಂತ್ರ್ಯ ಹೋರಾಟ, ನಂತರ ಕರ್ನಾಟಕ ಏಕೀಕರಣ ಚಳವಳಿ ಇಂಥ ಹಲವಾರು ಗುರಿಗಳ ಸಾಧನೆಗಳಿಗಾಗಿ ಬೇರೆ ಭಾಷೆಗಳಂತೆ ಕರ್ನಾಟಕದಲ್ಲೂ ಪತ್ರಿಕೆಗಳು ಪ್ರಕಟವಾಗತೊಡಗಿದವು. ಆದರೆ ಈಗ ಪತ್ರಿಕಾ ವೃತ್ತಿ ಒಂದು ಉದ್ಯಮವಾಗಿ ಬೆಳೆದಿದೆ. ರಾಜಕೀಯ ಅಭಿಪ್ರಾಯವನ್ನು ರೂಪಿಸುವ ಜೊತೆ ಜೊತೆಗೆ ಬಂಡವಾಳ ಹೂಡಿಕೆ ಮಾಡಿದವರ ಹಿತಾಸಕ್ತಿಗಳನ್ನು ರಕ್ಷಿಸುವ ಆಯುಧಗಳಾಗಿವೆ. ಈಗ ಬಹುತೇಕ ಟಿ.ವಿ.ಚಾನೆಲ್‌ಗಳು ಕಾರ್ಪೊರೇಟ್ ಕಂಪೆನಿಗಳ ಪಾಲಾಗಿವೆ. ಅಂಬಾನಿ, ಅದಾನಿಗಳೇ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದಾರೆ.

ಕರ್ನಾಟಕದಲ್ಲಿ ಪತ್ರಿಕೆಗಳು ಪ್ರಕಟವಾಗತೊಡಗಿ ಒಂದೂವರೆ ಶತಮಾನಗಳೇ ಗತಿಸಿದವು. ಪಾಶ್ಚಾತ್ಯರು ಕರ್ನಾಟಕಕ್ಕೆ ಮುದ್ರಣ ಯಂತ್ರಗಳನ್ನು ತಂದರು. ನಂತರದ ಕಾಲಾವಧಿಯಲ್ಲಿ ಅವರೇ ಪತ್ರಿಕೆಗಳನ್ನು ಆರಂಭಿಸಿದರು. ಫಾದ್ರಿಗಳು ತಮ್ಮ ಮತ ಪ್ರಚಾರಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿದರೂ ನಂತರ ಅವುಗಳು ಸುದ್ದಿ ಪತ್ರಿಕೆಗಳಾಗಿ ಬದಲಾದವು. 1843ರ ಜುಲೈ 1ರಂದು ಮಂಗಳೂರಿನಿಂದ ಹೊರಬಂದ ‘ಮಂಗಳೂರು ಸಮಾಚಾರ’ ಎಂಬ ಪತ್ರಿಕೆಯೇ ಕರ್ನಾಟಕದ ಮೊದಲ ಪತ್ರಿಕೆ. ಈ ಪತ್ರಿಕೆಯನ್ನು ಸಿಟ್ಸರ್‌ಲ್ಯಾಂಡ್‌ನ ಇವಾಂಜಲಿಕಲ್ ಸೊಸೈಟಿಯ ರೆವರೆಂಡ್ ಮಾಗ್ ಲಿಂಗ್ ಅವರು ಮುದ್ರಿಸುತ್ತಿದ್ದರು. ಇದನ್ನು ಕ್ರೈಸ್ತ ಮತದ ಪ್ರಚಾರಕ್ಕಾಗಿ ಬಳಸುವುದು ಅವರ ಉದ್ದೇಶವಾಗಿತ್ತು. ಪ್ರತೀ ತಿಂಗಳು 1 ಮತ್ತು 15 ನೇ ತಾರೀಕು ಈ ಪತ್ರಿಕೆ ಪ್ರಕಟವಾಗುತ್ತಿತ್ತು. ನಂತರ ಇದು ಬಳ್ಳಾರಿಗೆ ಸ್ಥಳಾಂತರವಾಯಿತು.

ಅಲ್ಲಿ ‘ಕನ್ನಡ ಸಮಾಚಾರ’ ಎಂಬ ಹೊಸ ಹೆಸರಿನಿಂದ 1844 ಮಾರ್ಚ್ 1ರಿಂದ ಪ್ರಕಟವಾಗತೊಡಗಿತು. ಆಗ ಇದರ ಬೆಲೆ ಎರಡು ದುಡ್ಡು.

ಮೊದಲು ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಆರಂಭವಾದ ಪತ್ರಿಕೆಗಳು ನಂತರದ ದಿನಗಳಲ್ಲಿ ಮೊದಲನೇ ಮಹಾ ಯುದ್ಧ ಹಾಗೂ ಭಾರತದ ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಹೋರಾಟಗಾರರ ಧ್ವನಿಯಾಗಿ ರೂಪಾಂತರ ಗೊಂಡವು. ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯ ಪ್ರಭಾವದಿಂದಾಗಿ ಅನೇಕ ಪತ್ರಿಕೆಗಳು ಬಂದವು. ತಾತಾಚಾರ್ಯ ಶರ್ಮಾ ಅವರ ವಿಶ್ವ ಕರ್ನಾಟಕ’ ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ಪತ್ರಿಕೆಯಾಯಿತು. ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿಯ ಮೊಹರೆ ಹಣಮಂತ ರಾವ್ ಮತ್ತು ರಂಗನಾಥ ದಿವಾಕರರು ಸಂಯುಕ್ತ ಕರ್ನಾಟಕವನ್ನು ಕಟ್ಟಿ ಬೆಳೆಸಿದರು.ಉತ್ತರ ಕರ್ನಾಟಕದ ಜನಸಾಮಾನ್ಯರು ಪೈಸೆಗೆ ಪೈಸೆ ಕೂಡಿಸಿ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ನಂತರ ಇದು ಬೆಳಗಾವಿಯಿಂದ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿತು.

ಕರ್ನಾಟಕದಲ್ಲಿ ಹೀಗೆ ನಡೆದು ಬಂದ ಪತ್ರಿಕೆಗಳು ಈಗ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಹೊಸ ಸವಾಲನ್ನು ಎದುರಿಸುತ್ತಿವೆ.

ಸ್ವಾತಂತ್ರ್ಯ ಪೂರ್ವ ದಿನಗಳ ಪತ್ರಿಕೆಗಳ ಉದ್ದೇಶ ಜನ ಜಾಗೃತಿಯಾಗಿತ್ತು. ಈಗ ಉದ್ಯಮವಾಗಿ ಬೆಳೆದ ನಂತರ ಕೇವಲ ಕೊಂಡು ಓದುವವರಿಂದ ಪತ್ರಿಕೆಗಳನ್ನು ನಡೆಸುವುದು ಸಾಧ್ಯವಿಲ್ಲ. ದೊಡ್ಡ ಮೊತ್ತದ ಹೂಡಿಕೆ ಮಾಡಿದವರು ಲಾಭಕ್ಕಾಗಿ ಹಾತೊರೆಯುವುದು ಸಹಜ. ಹೀಗಾಗಿ ಜಾಹೀರಾತುಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಮಾಧ್ಯಮ ಸ್ವಾಯತ್ತತೆ ಹಾಗೂ ಸಾಮಾಜಿಕ ಬದ್ಧತೆಯನ್ನು ನಿರೀಕ್ಷಿಸಲು ಆಗುವುದಿಲ್ಲ.

ದೃಶ್ಯ ಮಾಧ್ಯಮಗಳು ಈಗ ಹೇಗೆ, ಯಾರ ಅಸ್ತ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಾಹಿನಿಗಳಲ್ಲಿ ಅಪರಾಧ ಸುದ್ದಿಗಳಿಗೆ ಇನ್ನಿಲ್ಲದ ಆದ್ಯತೆ. ರಾಜಕೀಯ ನಾಯಕನೊಬ್ಬನ ಸೆಕ್ಸ್ ಸೀಡಿಯನ್ನು ಟಿ.ವಿ. ಚಾನೆಲ್‌ಗಳು ದಿನವಿಡೀ ಪ್ರಸಾರ ಮಾಡಿದವು. ಈ ಗೊಂದಲದ ದಿನಗಳಲ್ಲಿ ಕಂಗಾಲಾಗಿದ್ದು ಮುದ್ರಣ ಮಾಧ್ಯಮ. ತಮ್ಮಿಂದ ಓದುಗರು ಏನನ್ನು ನಿರೀಕ್ಷಿಸುತ್ತಾರೆ ಎಂಬುದು ಗೊತ್ತಾಗದೇ ಟಿ.ವಿ. ವಾಹಿನಿಗಳ ಹಾದಿಯನ್ನು ಹಿಡಿದಿವೆ. ನಾಡಿನ ಅತ್ಯಂತ ಮುಖ್ಯ ದಿನಪತ್ರಿಕೆಗಳು ಕೂಡ ರೋಚಕ ಸುದ್ದಿಗಳನ್ನು ಪ್ರಕಟಿಸಲು ಹಾತೊರೆಯುತ್ತಿವೆ.

ದೃಶ್ಯ ಮಾಧ್ಯಮಗಳ ಸವಾಲನ್ನು ಎದುರಿಸಿ ಉಳಿಯಬೇಕಾದರೆ ಮುದ್ರಣ ಮಾಧ್ಯಮ ಪ್ರಭುತ್ವವನ್ನು ಮಾತ್ರವಲ್ಲ, ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ತೋರಿಸಬೇಕಾಗಿದೆ.ಹದಗೆಟ್ಟ ದೇಶದ ಆರ್ಥಿಕ ಪರಿಸ್ಥಿತಿ, ಮನುಷ್ಯತ್ವದ ಸಮಾಧಿಯ ಮೇಲೆ ವಿಜೃಂಭಿಸುತ್ತಿರುವ ಕೋಮು ಹಿಂಸಾಚಾರ, ನೋಟು ರದ್ದತಿಯ ದುಷ್ಪರಿಣಾಮ, ಜಿಎಸ್‌ಟಿ ಹಾವಳಿ, ದನ ರಕ್ಷಣೆ ಹೆಸರಿನಲ್ಲಿ ಭಯೋತ್ಪಾದನೆ ಇವುಗಳನ್ನು ಪ್ರಶ್ನಿಸಬೇಕಾಗಿದೆ.

ಮುಂಚೆ ವಿರೋಧ ಪಕ್ಷದ ಪಾತ್ರ ನಿರ್ವಹಿಸುತ್ತಿದ್ದ ಪತ್ರಿಕೆಗಳು ಈಗ ಅಧಿಕಾರದಲ್ಲಿ ಇರುವವರ ಭಜನಾ ಮಂಡಳಿಗಳಾಗಿವೆ.ಆದರೆ ಸದಾ ಒಳ್ಳೆಯದನ್ನು ಬಯಸುವ ಜನ ಸಾಮಾನ್ಯರು ನಿಜ ಸುದ್ದಿಗಳಿಗಾಗಿ ಹಾತೊರೆಯುತ್ತಿದ್ದಾರೆ.ಅಂತಲೇ ‘ವಾರ್ತಾಭಾರತಿ’ ಮತ್ತು ‘ಪ್ರಜಾವಾಣಿ’ ಯಂಥ ಜನಪರ ಪತ್ರಿಕೆಗಳಿಗೆ ಈಗ ಬೇಡಿಕೆ ಜಾಸ್ತಿ. ‘ವಾರ್ತಾಭಾರತಿ’ ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ಆವೃತ್ತಿ ಗಳನ್ನು ಹೊಂದಿದೆ. ರಾಜ್ಯದ ಬಹುತೇಕ ಊರುಗಳಿಗೆ ಅದರ ಮುದ್ರಿತ ಪ್ರತಿ ಬರುವುದಿಲ್ಲ. ಆದರೂ ಜನ ಇದನ್ನು ಇಂಟರ್‌ನೆಟ್ ಗಳಲ್ಲಿ ಓದುತ್ತಾರೆ. ಇದಕ್ಕೆ ಮುಖ್ಯ ಕಾರಣ ಪ್ರಭುತ್ವ ವನ್ನು ಪ್ರಶ್ನಿಸುವ, ಜನ ಹಿಂಸಕ ಕೋಮುವಾದಿ ಶಕ್ತಿಗಳ ಅಪಾಯದ ಬಗ್ಗೆ ಎಚ್ಚರಿಸುವ ಬದ್ಧತೆ.

ಮಾಧ್ಯಮ ಲೋಕದ ಸ್ವರೂಪ ಬದಲಾಗಿರುವುದು ನಿಜ. ಇದರಿಂದ ಮುದ್ರಣ ಮಾಧ್ಯಮಕ್ಕೆ ಪೆಟ್ಟು ಬಿದ್ದಿರುವುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಆದರೆ ಅವಕಾಶಗಳು ಇಲ್ಲವೆಂದಲ್ಲ. ಪತ್ರಿಕೆಗಳು ಬದಲಾಗಿರುವ ಸನ್ನಿವೇಶವನ್ನು ಎದುರಿಸಲು ಹೊಸ ಪ್ರಯೋಗಗಳನ್ನು ಮಾಡಬೇಕಾಗಿದೆ.ಇದು ಬಹುಶಃ ತಾತ್ಕಾಲಿಕ ಬಿಕ್ಕಟ್ಟು. ಈ ಬಿಕ್ಕಟ್ಟಿನಿಂದ ಪಾರಾಗಿ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X