Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಅರ್ಬನ್ ನಕ್ಸಲರಿಗೆ ‘ಮಹಾ’ ಕಾಯ್ದೆ

ಅರ್ಬನ್ ನಕ್ಸಲರಿಗೆ ‘ಮಹಾ’ ಕಾಯ್ದೆ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು19 July 2025 10:26 AM IST
share
ಅರ್ಬನ್ ನಕ್ಸಲರಿಗೆ ‘ಮಹಾ’ ಕಾಯ್ದೆ

ಕಾನೂನು ವ್ಯವಸ್ಥೆಯ ಪಾಲನೆಯ ಹೆಸರಿನಲ್ಲಿ ಸರಕಾರಗಳ ಚಟುವಟಿಕೆಗಳನ್ನು ವಿಮರ್ಶಿಸುವ, ಟೀಕಿಸುವ ವ್ಯಕ್ತಿಗಳನ್ನು ಅಪರಾಧಿಗಳೆಂದು ಪರಿಗಣಿಸುವ, ಜೈಲಿಗೆ ತಳ್ಳುವ ಉದ್ದೇಶ ಇರುವ ಜನಸುರಕ್ಷಾದಂತಹ ಮಸೂದೆಗಳು ತಮ್ಮನ್ನು ವ್ಯಾಪಕವಾದ ಸಂಸದೀಯ ಚರ್ಚೆಗಳಿಗೆ ಒಡ್ಡಿಕೊಳ್ಳದೆ ಕೇವಲ ಸಂಖ್ಯಾಬಲದ ಆಧಾರದಲ್ಲಿ ಜಾರಿಗೊಂಡು ಕಾಯ್ದೆಗಳಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ.

ಮಹಾರಾಷ್ಟ್ರ ವಿಧಾನಸಭೆಯು ಕಳೆದ ವಾರ ಜನಸುರಕ್ಷಾ ಮಸೂದೆಯನ್ನು ((Maharashtra Special Public Security Bill-2024) ಅಂಗೀಕರಿಸಿದೆ. ಅದು ಅಲ್ಲಿನ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿ, ರಾಜ್ಯಪಾಲರ ಮುದ್ರೆ ಬಿದ್ದೊಡನೆ ಕಾಯ್ದೆ ಆಗಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಕಾಯ್ದೆಯು ‘ಅರ್ಬನ್ ನಕ್ಸಲರ’ ನಿಯಂತ್ರಣಕ್ಕೆ ಸಹಾಯ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.

2024ರ ಮಹಾಚುನಾವಣೆಯ ವೇಳೆ, ಹಾಲಿ ಗೃಹಸಚಿವ ಅಮಿತ್ ಶಾ ಅವರು, ಚುನಾವಣಾ ಪ್ರಚಾರ ಸಭೆಗಳಲ್ಲಿ ತಮ್ಮ ಪಕ್ಷವು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಎರಡೇ ವರ್ಷಗಳಲ್ಲಿ ದೇಶದೊಳಗೆ ನಕ್ಸಲಿಸಂ ಮೂಲೋತ್ಪಾಟನೆ ಮಾಡಲಾಗುವುದು ಎಂದು ಭರವಸೆ ಇತ್ತಿದ್ದರು. ಮಾತ್ರವಲ್ಲದೆ, ಆ ನಿಟ್ಟಿನಲ್ಲಿ ಗಂಭೀರವಾದ ಕ್ರಮಗಳೂ ಈಗ ನಡೆಯುತ್ತಿವೆ. 2026ರ ಮಾರ್ಚ್ ಒಳಗೆ ಈ ಕೆಲಸ ಪೂರೈಸುವುದಾಗಿ ಗೃಹಸಚಿವರು ಹೇಳಿಕೊಂಡಿದ್ದಾರೆ.

ತನ್ನ ಈ ಪ್ರಯತ್ನಗಳಿಗೆ ಪೂರಕವಾಗಿ ಭಾರತ ಸರಕಾರದ ಗೃಹ ಇಲಾಖೆಯು ರಾಜ್ಯಗಳಿಗೆ, ನಗರ ಪ್ರದೇಶಗಳಲ್ಲಿ ನಕ್ಸಲ್ ಪೂರಕ ಚಟುವಟಿಕೆಗಳನ್ನು ತಡೆಯಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿರುವುದಲ್ಲದೆ, ನಕ್ಸಲ್ ಉಗ್ರವಾದಿ ಸಂಘಟನೆಗಳು ಮತ್ತು ಅವರಿಗೆ ಪೂರಕವಾಗಿ ಕಾರ್ಯಾಚರಿಸುವ ಇತರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಕಾನೂನು ಜಾರಿಗೆ ತರುವಂತೆ ಸೂಚಿಸಿದೆ. ಆ ಹಿನ್ನೆಲೆಯಲ್ಲಿ, ಕಳೆದ ವರ್ಷ (2024) ಜುಲೈನಲ್ಲೇ ಮಹಾರಾಷ್ಟ್ರ ಸರಕಾರವು ಈ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಈಗಾಗಲೇ ಛತ್ತೀಸ್‌ಗಡ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳು ಇಂತಹ ಕಾನೂನುಗಳನ್ನು ಜಾರಿಗೆ ತಂದಿವೆ.

ಕಾಯ್ದೆಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಬಳಿಕ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅಲ್ಲಿನ ಗೃಹಖಾತೆಯ ರಾಜ್ಯ ಸಚಿವ ಯೋಗೇಶ್ ಕದಂ ಅವರು, ಕಾನೂನು ಅಪಬಳಕೆ ಆದರೆ, ಅದರಲ್ಲಿ ತಿದ್ದುಪಡಿಗಳನ್ನು ಮಾಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದಿದ್ದಾರೆ. ಕಾನೂನಿನಲ್ಲಿ ನಿರ್ದಿಷ್ಟವಾಗಿ ‘ಅರ್ಬನ್ ನಕ್ಸಲ್’ ಪದ ಬಳಕೆ ಆಗಿಲ್ಲವಾದರೂ, ಸಂದರ್ಶನದಲ್ಲಿ ಮಾತನಾಡುತ್ತಾ ಅವರು ‘‘ಮಾವೋವಾದಿಗಳು ಈಗ ಕೇವಲ ಕಾಡುಗಳಿಗೆ ಸೀಮಿತವಾಗಿಲ್ಲ. ಅರ್ಬನ್ ನಕ್ಸಲರು ವಿದ್ಯಾರ್ಥಿಗಳ, ಶಿಕ್ಷಕರ, ರೈತರ, ಎನ್‌ಜಿಒ ಕಾರ್ಯಕರ್ತರುಗಳ ಸೋಗಿನಲ್ಲೆಲ್ಲ ಕಾರ್ಯಾಚರಿಸುತ್ತಿದ್ದಾರೆ. ಅವರನ್ನು ನಿಖರವಾಗಿ ಗುರುತಿಸುವುದು ಕಷ್ಟ. ಹಾಗಾಗಿ ಈ ಮಸೂದೆಯಲ್ಲಿನ ವ್ಯಾಖ್ಯಾನಗಳನ್ನು (‘ಕಾನೂನು ಬಾಹಿರ ಚಟುವಟಿಕೆ’, ‘ಎಡ ಪಂಥ’, ‘ಉಗ್ರವಾದ’, ‘ಬೆಂಬಲ’ ಇತ್ಯಾದಿ ಪದಗಳು) ಸ್ಥೂಲವಾಗಿ ಇರಿಸಲಾಗಿದೆ; ಈ ಹಿಂದಿನ ಅನುಭವ ಮತ್ತು ಗುಪ್ತಚರ ಸಲಹೆಗಳನ್ನು ಆಧರಿಸಿ ಇದನ್ನು ನಿರ್ಧರಿಸಲಾಗಿದೆ’’ ಎಂದಿದ್ದಾರೆ (ದಿ ಇಂಡಿಯನ್ ಎಕ್ಸ್ ಪ್ರೆಸ್ ಮುಂಬೈ ಆವೃತ್ತಿ, ಜುಲೈ 13).

ಈ ‘ಅರ್ಬನ್ ನಕ್ಸಲ್’ ಎಂಬ ಪದವನ್ನು ಮೊದಲು ಬಳಕೆ ಮಾಡಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ಚಲನ ಚಿತ್ರವನ್ನು ನಿರ್ದೇಶಿಸಿದ ವಿವೇಕ್ ಅಗ್ನಿಹೋತ್ರಿ. ಸಂಘಪರಿವಾರದ ಮುಖವಾಣಿ ‘ಸ್ವರಾಜ್ಯ’ ಮ್ಯಾಗಝಿನ್‌ನಲ್ಲಿ ಪ್ರಕಟಗೊಂಡ ವಿವೇಕ್ ಅವರ ಲೇಖನವೊಂದರಲ್ಲಿ ಈ ಪದ ಬಳಕೆ ಆಗಿತ್ತು. 2017ರ ಡಿಸೆಂಬರ್ 31ರಂದು ಪುಣೆಯ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಕೆಲವು ಸಾಮಾಜಿಕ ಹೋರಾಟಗಾರರು ಮಾಡಿದ ಭಾಷಣಗಳು, ಮರುದಿನ ಭೀಮಾ ಕೋರೆಗಾಂವ್ ಹಿಂಸೆಗೆ ಕಾರಣವಾಯಿತೆನ್ನಲಾದ ಹಿನ್ನೆಲೆಯನ್ನಿಟ್ಟುಕೊಂಡು, ತಾನು ಬರೆದಿದ್ದ ಆ ಲೇಖನದಲ್ಲಿ ವಿವೇಕ್ ಈ ‘ಅರ್ಬನ್ ನಕ್ಸಲ್’ ಪದವನ್ನು ಬಳಸಿದ್ದರು. ಮುಂದೆ, ಇದೇ ಪದವನ್ನು ಪ್ರಧಾನಿ ಮೋದಿ ಅವರು 2022ರಲ್ಲಿ ಗುಜರಾತಿಗೆ AAP ಪಕ್ಷದ ಪ್ರವೇಶವನ್ನು ಟೀಕಿಸುವಾಗಲೂ ಚಲಾಯಿಸಿದ್ದರು. ಅಲ್ಲಿಂದೀಚೆಗೆ, ಭಾರತ ಸರಕಾರದ ಸಮರ್ಥಕ ಟ್ರೋಲ್ ಪಡೆಗಳವರು, ಸರಕಾರವನ್ನು ವಿಮರ್ಶಿಸುವ, ಟೀಕಿಸುವವರೆಲ್ಲರಿಗೂ ಈ ಪದವನ್ನು ಎಗ್ಗಿಲ್ಲದೆ ಬಳಸುತ್ತಿದ್ದಾರೆ. ಹಾಗಾಗಿ ‘ಅರ್ಬನ್ ನಕ್ಸಲ್’ ಎಂದರೆ ನಿಜಕ್ಕೂ ಯಾರೆಂಬ ಗೊಂದಲ ಸಹಜವಾಗಿಯೇ ಉದ್ಭವಿಸಿದ್ದು, ಈಗ ಅವರ ನಿಗ್ರಹಕ್ಕಾಗಿ ಸರಕಾರಗಳು ಕಾಯ್ದೆಯನ್ನೇ ತರಲು ಹೊರಟಾಗ ಆತಂಕ ಮೂಡಿರುವುದು ಸಹಜ. ಈ ಕಾಯ್ದೆಯು ಬಿಜೆಪಿ ಸರಕಾರಗಳು ಇರುವಲ್ಲಿ, ಅವರು ತಮ್ಮ ರಾಜಕೀಯ ಎದುರಾಳಿಗಳನ್ನು ಮಣಿಸಲು ಬಳಕೆ ಆಗಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಾಯ್ದೆಯಲ್ಲಿ ‘ಕಾನೂನು ಬಾಹಿರ ಚಟುವಟಿಕೆ’ಯನ್ನು ‘‘ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಹೇಳಿಕೆಯ ಮೂಲಕ, ಬರೆಹದ ಮೂಲಕ ಅಥವಾ ಸಂಜ್ಞೆಯ ಮೂಲಕ, ಪದಗಳು ಅಥವಾ ದೃಶ್ಯ ಪ್ರಸ್ತುತಿಗಳ ಮೂಲಕ ಅಥವಾ ಬೇರೆ ಯಾವುದೇ ರೀತಿಗಳಲ್ಲಿ ವ್ಯಕ್ತಪಡಿಸಿದ ಯಾವುದೇ ಕ್ರಿಯೆ’’ ಎಂದು ವಿವರಿಸಲಾಗಿದ್ದು, ಗುರುತಿಸಿರುವ ಅಂತಹ ಹಲವು ಕ್ರಿಯೆಗಳಲ್ಲಿ ‘ಕಾನೂನಿಗೆ ಮತ್ತು ಕಾನೂನಾತ್ಮಕ ಸಂಸ್ಥೆಗಳಿಗೆ ಅವಿಧೇಯತೆಯನ್ನು ಪ್ರೋತ್ಸಾಹಿಸುವ ಅಥವಾ ಬೋಧಿಸುವ’ ಕ್ರಿಯೆ ಕೂಡ ಕಾನೂನು ಬಾಹಿರ ಎಂದು ವ್ಯಾಖ್ಯಾನಿಸಲಾಗಿದೆ.

ಈ ಕಾಯ್ದೆಯನ್ನು ವಿರೋಧಿಸುತ್ತಿರುವವರು, ಇದು ವೈಚಾರಿಕ ಎದುರಾಳಿಗಳನ್ನು ರಾಜಕೀಯವಾಗಿ ಹತ್ತಿಕ್ಕುವ ಕಾಯ್ದೆಯಾಗಿದ್ದು, ರಾಷ್ಟ್ರೀಯ ಭದ್ರತೆಯ ಪ್ರಶ್ನೆ ಇಲ್ಲದಿರುವಾಗಲೂ UAPA, NSA, AFSPAದಂತಹ ಕಠೋರ ಕಾಯ್ದೆಗಳ ನಿಲುವುಗಳನ್ನು ಜನಚಳವಳಿಗಳ, ಪ್ರಜಾತಾಂತ್ರಿಕ ಅಭಿವ್ಯಕ್ತಿಗಳ ಮತ್ತು ಜನವಿರೋಧದ ಸಂಘಟನೆಯ ವಿರುದ್ಧ ಬಳಸಲು ಈ ಹೊಸ ಕಾಯ್ದೆ ಹಾದಿ ತೆರೆಯಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ವಿರೋಧವನ್ನು ಉಗ್ರವಾದಕ್ಕೆ ಹೋಲಿಸುವ, ಅಸ್ಪಷ್ಟ ವ್ಯಾಖ್ಯಾನಗಳಿರುವ, ಸುಲಭವಾಗಿ ಅಪಬಳಕೆ ಮಾಡಿಕೊಳ್ಳಬಲ್ಲ, ನಂಬಿಕೆ-ಪಾಲ್ಗೊಳ್ಳುವಿಕೆಗಳನ್ನು ಕ್ರಿಮಿನಲೈಸ್ ಮಾಡಬಲ್ಲ, ಆಸ್ತಿ, ಮನೆಗಳನ್ನು ಕಸಿದುಕೊಳ್ಳಬಲ್ಲ, ಸಹಜ ಕಾನೂನಿನ ಹಾದಿಯನ್ನು ಮುಚ್ಚುವ, ಸಂವಿಧಾನಕ್ಕೇ ಬೆದರಿಕೆಯಾಗಿ ಪರಿಣಮಿಸಬಲ್ಲ ಕಾಯ್ದೆ ಇದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಈ ಮಸೂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡನೆಯಾದಾಗ, ಅದನ್ನು ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಕಂದಾಯ ಸಚಿವ ಚಂದ್ರಶೇಖರ್ ಬಾವಾಂಕುಲೆ ಅವರ ಅಧ್ಯಕ್ಷತೆಯ ಈ ಸಮಿತಿಯ 25 ಸದಸ್ಯರಲ್ಲಿ ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ಹಿರಿಯ ನಾಯಕರಿದ್ದರು. ಸಮಿತಿಯ ಅಂತಿಮ ವರದಿಯಲ್ಲಿ ಯಾರದ್ದೂ ಭಿನ್ನಾಭಿಪ್ರಾಯದ ಟಿಪ್ಪಣಿ ಇರಲಿಲ್ಲ. ಈ ಸಮಿತಿ ಸೂಚಿಸಿದ ಕೆಲವು ಬದಲಾವಣೆಗಳನ್ನು ಸದನ ಒಪ್ಪಿಕೊಂಡು ಮಸೂದೆಯನ್ನು ಅಂಗೀಕರಿಸಿದೆ. ಸದನದಲ್ಲಿ ಮಸೂದೆ ಮಂಡನೆ ಆದಾಗ, ಅದನ್ನು ಸಿಪಿಐ(ಎಂ)ನ ಶಾಸಕ ವಿನೋದ್ ನಿಕೋಲೆ ಏಕಾಂಗಿಯಾಗಿ ವಿರೋಧಿಸಿರದಿದ್ದರೆ, ಅದು ಸರ್ವಾನುಮತದಿಂದ ಅಂಗೀಕಾರ ಆಗುತ್ತಿತ್ತು. ಮಸೂದೆ ಅಂಗೀಕಾರದ ವೇಳೆ ಸದನದಲ್ಲಿ ಮಾತನಾಡಿದ ಗೃಹಸಚಿವರೂ ಆಗಿರುವ ಮುಖ್ಯಮಂತ್ರಿ ಫಡ್ನವೀಸ್, ಈ ಕಾಯ್ದೆ ಅಪಬಳಕೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದಲ್ಲದೆ ‘‘ನಗರ ಪ್ರದೇಶಗಳಲ್ಲಿ ಮಾವೋವಾದಿಗಳು ಎಳೆಯರ ಮನಸ್ಸು ಕೆಡಿಸಿ ವ್ಯವಸ್ಥೆಯ ವಿರುದ್ಧ ಅಶಾಂತಿ ಹಬ್ಬಿಸಲು ಪುಸಲಾಯಿಸುತ್ತಿದ್ದಾರೆ. ಈ ಕಾಯ್ದೆ ಆ ಬೆದರಿಕೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲಿದೆ’’ ಎಂದು ಸದನಕ್ಕೆ ಭರವಸೆ ಇತ್ತಿದ್ದರು.

ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಗೃಹಖಾತೆಯ ರಾಜ್ಯ ಸಚಿವ ಕದಂ, ಮಾವೋವಾದಿಗಳ ಮೊದಲ ಅಸ್ತ್ರ ಚುನಾಯಿತ ಸರಕಾರಗಳನ್ನು ಚಳವಳಿಗಳ ಮೂಲಕ ಅಸ್ಥಿರಗೊಳಿಸುವುದು. ಎಲ್ಲ ಚಳವಳಿಗಳನ್ನೂ ಸಂಶಯ ಪಡಬೇಕಾಗಿಲ್ಲ. ಯಾರಾದರೂ ತಮ್ಮ ಬದುಕು-ಹಕ್ಕುಗಳಿಗಾಗಿ ಚಳವಳಿ ಮಾಡಿದರೆ, ಅದು ಅವರ ಸಾಂವಿಧಾನಿಕ ಹಕ್ಕು. ಆದರೆ ಆ ರೀತಿಯ ಚಳವಳಿಗಳನ್ನು ಮಾವೋವಾದಿ ಚಟುವಟಿಕೆಗಳಿಗೆ ಕದ್ದುಮುಚ್ಚಿ ಬಳಸಿದಾಗ, ಈ ಕಾಯ್ದೆ ಅದರಿಂದ ರಕ್ಷಣೆ ನೀಡಲಿದೆ ಎಂದಿದ್ದಾರೆ.

ನೆಲದ ಕಾನೂನನ್ನು ಮೀರುವ, ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಸಂಘಟನೆ, ವ್ಯಕ್ತಿಗಳನ್ನು ನಿಯಂತ್ರಿಸುವುದು ಒಂದು ಸರಕಾರದ ಕರ್ತವ್ಯ. ದೇಶದ ಭದ್ರತೆ, ಕಾನೂನು-ಸುವ್ಯವಸ್ಥೆಗಳನ್ನು ಪಾಲಿಸುವುದಕ್ಕೆ ಈಗಾಗಲೇ ಹಲವು ಕಾನೂನುಗಳು ಇವೆ. ಇವುಗಳಲ್ಲಿ ಗಂಭೀರ ಸಂದರ್ಭಗಳನ್ನು ನಿಭಾಯಿಸಲು ಹಲವು ಕಠಿಣ ಕಾನೂನುಗಳೂ ಇವೆ. ವಾಸ್ತವ ಹೀಗಿರುವಾಗ, ಕೇವಲ ನಗರ ಪ್ರದೇಶದಲ್ಲಿರುವ ‘ಅರ್ಬನ್ ನಕ್ಸಲರಿಗೆ’ ಎಂದು ವಿಶೇಷವಾದ ಮತ್ತು ಸ್ಥೂಲವಾದ ಅರ್ಥವ್ಯಾಪ್ತಿಯ ವ್ಯಾಖ್ಯೆಗಳನ್ನು ಹೊಂದಿರುವ ಕಾನೂನೊಂದು ರಂಗ ಪ್ರವೇಶ ಮಾಡಿರುವುದು ಹಲವರ ಹುಬ್ಬೇರಿಸಿದೆ. ಇದು ಸಹಜ ಕೂಡ.

ಸ್ವತಃ ಭಾರತ ಸರಕಾರದ ಶಿಫಾರಸಿನ ಮೇರೆಗೆ ರಾಜ್ಯಗಳು ಈ ಕಾನೂನನ್ನು ಜಾರಿಗೆ ತರಲು ಹವಣಿಸುತ್ತಿರುವುದು ಗಮನಾರ್ಹ. ಹಂತ ಹಂತವಾಗಿ ಎಲ್ಲ ರಾಜ್ಯಗಳೂ ಈ ಕಾಯ್ದೆಯನ್ನು ಜಾರಿಗೆ ತಂದರೆ ಅಚ್ಚರಿ ಇಲ್ಲ. ಏಕೆಂದರೆ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲೂ ಇದು ಈಗಾಗಲೇ ಜಾರಿಗೆ ಬಂದಿದೆ.

ಕಾನೂನು ವ್ಯವಸ್ಥೆಯ ಪಾಲನೆಯ ಹೆಸರಿನಲ್ಲಿ ಸರಕಾರಗಳ ಚಟುವಟಿಕೆಗಳನ್ನು ವಿಮರ್ಶಿಸುವ, ಟೀಕಿಸುವ ವ್ಯಕ್ತಿಗಳನ್ನು ಅಪರಾಧಿಗಳೆಂದು ಪರಿಗಣಿಸುವ, ಜೈಲಿಗೆ ತಳ್ಳುವ ಉದ್ದೇಶ ಇರುವ ಈ ರೀತಿಯ ಮಸೂದೆಗಳು ತಮ್ಮನ್ನು ವ್ಯಾಪಕವಾದ ಸಂಸದೀಯ ಚರ್ಚೆಗಳಿಗೆ ಒಡ್ಡಿಕೊಳ್ಳದೆ ಕೇವಲ ಸಂಖ್ಯಾಬಲದ ಆಧಾರದಲ್ಲಿ ಜಾರಿಗೊಂಡು ಕಾಯ್ದೆಗಳಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X