Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ‘ಹರ್ ಘರ್ ಜಲ್’ ಬದಲು ‘ಹರ್ ಘರ್ ನಲ್’...

‘ಹರ್ ಘರ್ ಜಲ್’ ಬದಲು ‘ಹರ್ ಘರ್ ನಲ್’ ಆಗಿದೆಯೇ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು2 Aug 2025 10:28 AM IST
share
‘ಹರ್ ಘರ್ ಜಲ್’ ಬದಲು ‘ಹರ್ ಘರ್ ನಲ್’ ಆಗಿದೆಯೇ?
ಕೇವಲ ಅಂಕಿ-ಸಂಖ್ಯೆಗಳ ವರದಿ ನೀಡುವುದನ್ನೇ ಸರಕಾರಿ ಯೋಜನೆಗಳ ಗುರಿ ಆಗಿರಿಸಿಕೊಂಡು, ಜನರಿಗೆ ಚಿಕ್ಕಾಸೂ ಪ್ರಯೋಜನ ಇಲ್ಲದ, ಗುತ್ತಿಗೆದಾರ ಸ್ನೇಹಿ ಯೋಜನೆಗಳನ್ನು ಮಾಡುತ್ತಿರುವುದು ರಾಜ್ಯಸರಕಾರವಿರಲೀ ಅಥವಾ ಕೇಂದ್ರಸರಕಾರವಿರಲೀ ಅವರು ಉತ್ತರದಾಯಿ ಆಗದಿದ್ದರೆ ಅಲ್ಲಿ ಹಗರಣ ನಡೆದಿರಬಹುದು ಎಂದೇ ಶಂಕಿಸಬೇಕಾಗುತ್ತದೆ.

2019ರ ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ಬಂದ ಮತ್ತು 2024ರ ಹೊತ್ತಿಗೆ ದೇಶದ ಪ್ರತಿಯೊಂದು ಗ್ರಾಮೀಣ ಮನೆಗೂ ಶುದ್ಧ ನೀರನ್ನು ನಳ್ಳಿಯ ಮೂಲಕ ಒದಗಿಸುವ ಉದ್ದೇಶವಿರುವ ಭಾರತ ಸರಕಾರದ, 2,08,652 ಕೋಟಿ ರೂ.ಗಳ ಮೊತ್ತದ ಮಹತ್ವಾಕಾಂಕ್ಷಿ ಯೋಜನೆ ‘ಜಲ್ ಜೀವನ್ ಮಿಷನ್ (ಜೆಜೆಎಂ)’. ಮೀಸಲಿಟ್ಟ ಆ ಎಲ್ಲ ಹಣವನ್ನು ವ್ಯಯಿಸಿದ ಬಳಿಕ, ಈ ವರ್ಷ ಜುಲೈ ಅಂತ್ಯಕ್ಕೆ ಜೆಜೆಎಂ ಯೋಜನೆ ಶೇ. 80.97 ಗುರಿ ತಲುಪಿದೆ. ಯೋಜನೆಯ ಮೂಲಕ ಶೇ. 100 ಕವರೇಜ್ ಸಾಧಿಸುವುದಕ್ಕಾಗಿ ಭಾರತದ ಹಣಕಾಸು ಸಚಿವರು 2025-26ರ ಬಜೆಟ್‌ನಲ್ಲಿ, ಈ ಯೋಜನೆಯನ್ನು 2028ರ ತನಕ ವಿಸ್ತರಿಸಲು ಇನ್ನಷ್ಟು ಆರ್ಥಿಕ ಅನುದಾನ ಒದಗಿಸುವುದಾಗಿ ಹೇಳಿದ್ದರು.

ಜಲ್ ಜೀವನ್ ಮಿಷನ್ ಕುರಿತು ಅದರ ಡ್ಯಾಷ್‌ಬೋರ್ಡಿನಲ್ಲಿ ಲಭ್ಯ ಇರುವ ಮಾಹಿತಿಗಳ ಪ್ರಕಾರ, ದೇಶದಲ್ಲಿ ಒಟ್ಟು 19,36,44,638 ಗ್ರಾಮೀಣ ಮನೆಗಳಿದ್ದು, 2019ರಲ್ಲಿ ಯೋಜನೆ ಆರಂಭಗೊಳ್ಳುವ ಹೊತ್ತಿಗೆ ಕೇವಲ 3,23,62,838 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಇತ್ತು. ಈ ಯೋಜನೆ ಆರಂಭಗೊಂಡ ಬಳಿಕ 15,67,97,473 ಮನೆಗಳಿಗೆ ‘ನಳ್ಳಿ ಸಂಪರ್ಕ’ (tap water connection) ನೀಡಲಾಗಿದೆ; ಅವುಗಳಲ್ಲಿ ಕರ್ನಾಟಕದ 1,01,30,702 ಮನೆಗಳಿದ್ದು, 86,80,602 ಮನೆಗಳಿಗೆ ಶೇ. (85.69) ನಳ್ಳಿ ಸಂಪರ್ಕ ನೀಡಲಾಗಿದೆ.

ಈ ಅಂಕಿಸಂಖ್ಯೆಗಳು ಹೊರನೋಟಕ್ಕೆ ಆಕರ್ಷಕವಾಗಿ ಕಾಣಿಸುತ್ತಿವೆಯಾದರೂ, ತಳಮಟ್ಟದಲ್ಲಿ ವಾಸ್ತವ ಬೇರೆಯೇ ಇರುವಂತಿದೆ. ‘ನಳ್ಳಿ ಸಂಪರ್ಕ’ ಆಗಿದೆ ಎಂಬುದು, ಒಂದು ಮನೆಯಲ್ಲಿ ನಳ್ಳಿಯ ಮೂಲಕ ಜಲ ಜೀವನ್ ಮಿಷನ್ ಅಡಿಯಲ್ಲಿ ನೀರು ನಿರಂತರವಾಗಿ ತಲುಪುತ್ತಿದೆ ಎಂಬುದರ ಸೂಚಕವೇ? ಎಂಬ ಪ್ರಶ್ನೆ ಏಳತೊಡಗಿದೆ. ಕರ್ನಾಟಕದಲ್ಲಿ, ಕರಾವಳಿ ಜಿಲ್ಲೆಗಳನ್ನೇ ತೆಗೆದುಕೊಳ್ಳಿ. ಇಲ್ಲಿ ಹಲವು ಗ್ರಾಮಗಳಲ್ಲಿ ಈ ಯೋಜನೆಯಡಿ ನಳ್ಳಿ ಸಂಪರ್ಕ ಸಿದ್ಧಗೊಂಡು ವರ್ಷಗಳೇ ಕಳೆದಿವೆ. ಆದರೆ ಹಲವು ಕಡೆಗಳಲ್ಲಿ ಇನ್ನೂ ಆ ನಳ್ಳಿಯಲ್ಲಿ ಬರಬೇಕಾಗಿರುವ ನೀರಿನ ಮೂಲ, ಅದನ್ನು ಸಂಗ್ರಹಿಸುವ-ಶುದ್ಧೀಕರಿಸುವ ವ್ಯವಸ್ಥೆ, ಸಾಗಣೆ ಇತ್ಯಾದಿಗಳೆಲ್ಲ ಇನ್ನೂ ನಡೆದಿಲ್ಲ. ಯೋಜನೆಯ ಪ್ರಗತಿ ತೋರಿಸುವ ಸಲುವಾಗಿ ನಳ್ಳಿ ಸಂಪರ್ಕ ಪೂರ್ಣಗೊಂಡಿದೆ; ನಳ್ಳಿಯಲ್ಲಿ ನೀರು ಬರುವ ಹೊತ್ತಿಗೆ ಪೈಪು, ನಳ್ಳಿ, ಮೀಟರುಗಳೆಲ್ಲ ಕೆಟ್ಟಿರುತ್ತವೆ, ಅದರ ರಿಪೇರಿಗೆ ಅನುದಾನ ಬೇಕಾದೀತು ಎಂಬ ಮಾತುಗಳು ಕೇಳಿಬರುತ್ತಿವೆ. ನೀರಿನ ಮೂಲಗಳಿಗೆ ಅಷ್ಟೇನೂ ಸಮಸ್ಯೆ ಆಗಬಾರದ ಕರಾವಳಿಯಲ್ಲೇ ಈ ಸ್ಥಿತಿ ಆದರೆ, ನೀರಿನ ಕೊರತೆ ಇರುವ (water stressed) ಜಿಲ್ಲೆಗಳ ಕಥೆ ಏನು?

ಭಾರತ ಸರಕಾರ ಒಂದು ಹಂತಕ್ಕೆ ಈ ರೀತಿಯ ಸಮಸ್ಯೆ ಇರುವುದನ್ನು ಅಧಿಕೃತವಾಗಿಯೇ ಒಪ್ಪಿಕೊಳ್ಳುತ್ತದೆ. ಲೋಕಸಭೆಯಲ್ಲಿ ಚುಕ್ಕೆರಹಿತ ಪ್ರಶ್ನೆಗಳಿಗೆ (ಸಂಖ್ಯೆ 731, 752ಕ್ಕೆ) ಕಳೆದ ವಾರ ಉತ್ತರಿಸಿದ ಕೇಂದ್ರ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ, ಕರ್ನಾಟಕದವರೇ ಆದ ವಿ. ಸೋಮಣ್ಣ ಅವರು, ನೀರಿನ ಕೊರತೆ ಇರುವಲ್ಲಿ, ಬರ ಪೀಡಿತ ಸ್ಥಳಗಳಲ್ಲಿ, ಮರುಭೂಮಿ ಪ್ರದೇಶಗಳಲ್ಲಿ, ಭೂ-ಜನ್ಯ ಕಲುಷಿತ ಅಂಶಗಳ ಮಿಶ್ರಣ ಇರುವೆಡೆ, ಗ್ರಾಮೀಣ ಮನೆಗಳು ದೂರದೂರ ಇರುವೆಡೆ.. ಹೀಗೆ ಹಲವೆಡೆ ಅವಲಂಬಿಸಬಲ್ಲ ನೀರಿನ ಮೂಲಗಳಿಲ್ಲ. ಇನ್ನು ಕೆಲವು ರಾಜ್ಯಗಳಲ್ಲಿ ರಾಜ್ಯ ಸರಕಾರಗಳು ಯೋಜನೆಯಲ್ಲಿ ತಮ್ಮ ಪಾಲನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿವೆ, ಯೋಜನೆಯ ಅನುಷ್ಠಾನ ಏಜೆನ್ಸಿಗಳಲ್ಲಿ ತಾಂತ್ರಿಕ ಸಾಮರ್ಥ್ಯ ಕೊರತೆ ಇದೆ, ನೀರಿನ ಸರಬರಾಜು ಯೋಜನೆ, ನಿರ್ವಹಣೆ, ಕಾರ್ಯಾಚರಣೆಗಳೆಲ್ಲ ಪಂಚಾಯತ್‌ಗಳ ಕೈಯಲ್ಲಿವೆ, ಯೋಜನೆಗೆ ಬೇಕಾದ ಕಚ್ಚಾಮಾಲುಗಳ ಬೆಲೆ ಏರಿಕೆ, ಸರಕಾರ ಮತ್ತಿತರ ಅಗತ್ಯ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ... ಇವೆಲ್ಲ ಯೋಜನೆ ವಿಳಂಬ ಆಗುತ್ತಿರುವುದಕ್ಕೆ ಕಾರಣಗಳು ಎಂದು ಪಟ್ಟಿ ಮಾಡಿದ್ದಾರೆ.

ಕುಡಿಯುವ ನೀರು ಸರಬರಾಜು ರಾಜ್ಯ ಪಟ್ಟಿಯ ವಿಷಯವಾಗಿದ್ದು, ಜಲಜೀವನ್ ಮಿಷನ್ ಯೋಜನೆಯಡಿ, ಯೋಜನೆಯ ಜವಾಬ್ದಾರಿ, ಅನುಮೋದನೆ, ಅನುಷ್ಠಾನ, ಕಾರ್ಯಾಚರಣೆ, ನಿರ್ವಹಣೆಗಳೆಲ್ಲ ರಾಜ್ಯಸರಕಾರಗಳ ಜವಾಬ್ದಾರಿ. ಭಾರತ ಸರಕಾರವು ತಾಂತ್ರಿಕ ಮತ್ತು ಆರ್ಥಿಕ ಸಹಾಯ ಒದಗಿಸುವ ಮೂಲಕ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ. ಅತಿಯಾದ ವೆಚ್ಚ ಮತ್ತು ಯೋಜನೆಯ ಗುಣಮಟ್ಟದ ಬಗ್ಗೆ ದೂರುಗಳಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ವ್ಯಾಪಕವಾಗಿ ಜಿಲ್ಲಾವಾರು ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಆ 140 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 15 ಜಿಲ್ಲೆಗಳಿವೆ. ಅವು -ಚಿಕ್ಕಮಗಳೂರು, ಚಿತ್ರದುರ್ಗ, ಯಾದಗೀರ್, ಬಾಗಲಕೋಟೆ, ರಾಯಚೂರು, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಮಂಡ್ಯ, ರಾಮನಗರ, ಹಾಸನ, ತುಮಕೂರು, ವಿಜಯನಗರ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳು ಎಂದು ಸಚಿವರು ವಿವರಿಸಿದ್ದಾರೆ.

ಕರ್ನಾಟಕದಲ್ಲೂ ವಿಧಾನಪರಿಷತ್ತಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟಗಳ ಬಗ್ಗೆ ಕಳೆದ ಅಧಿವೇಶನದಲ್ಲಿ ಚರ್ಚೆ ಆಗಿತ್ತು. ರಾಜ್ಯದ 26,592 ಹಳ್ಳಿಗಳಲ್ಲಿ 4,675 ಹಳ್ಳಿಗಳಿಗೆ ಈ ಯೋಜನೆಯಡಿ ನೀರು ವಿತರಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಸದಸ್ಯ ಸಿ.ಟಿ. ರವಿ ಅವರಿಗೆ ಉತ್ತರಿಸಿದ್ದರು. ರಾಜ್ಯದಲ್ಲಿ ಯೋಜನೆಗೆ 65,000 ರೂ. ತೆಗೆದಿರಿಸಲಾಗಿದ್ದು, 32,377 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, 28,896 ಕೋಟಿ ರೂ. ವ್ಯಯಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದ್ದರು. ಯೋಜನೆ ಅನುಷ್ಠಾನ ಆಗಿರುವ ಜಿಲ್ಲೆಗಳಲ್ಲಿ ಅದರ ಗುಣಮಟ್ಟ ಚೆನ್ನಾಗಿಲ್ಲದಿರುವುದು ಪತ್ತೆ ಆಗಿರುವ ಬಗ್ಗೆಯೂ ಸದನದಲ್ಲಿ ಚರ್ಚೆ ಆಗಿತ್ತು.

ಜಲ ಜೀವನ್ ಮಿಷನ್ ಅಡಿ ಕರ್ನಾಟಕದಲ್ಲಿ ಶೇ. 80.97 ಗುರಿ ತಲುಪಲಾಗಿದೆ ಎಂದು ಜೆಜೆಎಂ ಡ್ಯಾಷ್‌ಬೋರ್ಡ್‌ನಲ್ಲಿ ಹೇಳಲಾಗಿದ್ದರೆ, ರಾಜ್ಯದಲ್ಲಿ ಯೋಜನೆಯ ನೀರು ತಲುಪಿರುವುದೇ ಅಂದಾಜು ಶೇ. 17 ಹಳ್ಳಿಗಳಿಗೆ ಎಂದು ವಿಧಾನಸಭೆಯಲ್ಲಿ ಚರ್ಚೆ ಆಗುತ್ತದೆ. ಅಂದರೆ, ಉಳಿದ ಜಿಲ್ಲೆಗಳಲ್ಲಿ ನಳ್ಳಿ ಸಂಪರ್ಕ ಆಗಿದ್ದು, ನೀರು ತಲುಪಿಲ್ಲವೆಂದು ಅರ್ಥವೇ? ಅಥವಾ ಯೋಜನೆಯೇ ಅನುಷ್ಠಾನ ಆಗಿಲ್ಲ ಎಂದು ಅರ್ಥವೇ? ಯಾವುದೂ ಸ್ಪಷ್ಟವಿಲ್ಲ. ಸರಕಾರದ ಗುರಿ ತಲುಪುವುದಕ್ಕೂ, ಮನೆಯಲ್ಲಿ ನೀರು ತಲುಪುವುದಕ್ಕೂ ನಡುವೆ ಎಲ್ಲಿ ಗ್ಯಾಪ್ ಇದೆ ಎಂಬುದು ವಿಶ್ಲೇಷಣೆ ಆಗಬೇಕಿದೆ. ಜೊತೆಗೆ, ಸರಬರಾಜು ಆಗಿರುವ ಪೈಪ್‌ಲೈನ್, ನಳ್ಳಿ, ನೀರಿನ ಮಾಪಕಗಳಿರುವಲ್ಲಿ ಅವುಗಳ ಗುಣಮಟ್ಟಗಳೂ ತಪಾಸಣೆಗೆ ಒಳಪಡಬೇಕಿದೆ.

ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ, ವಾರಾಹಿ ನೀರು ಉಡುಪಿಗೆ ಬರಲಿದೆ ಎಂಬ ಹೆಸರಿನಲ್ಲಿ, ಆ ನೀರು ಬರುವ ಎಷ್ಟೋ ವರ್ಷಗಳ ಮೊದಲೇ ಪೈಪ್‌ಲೈನ್ ಹುಗಿದು ಹೋಗಿದ್ದರು. ನಗರದಲ್ಲಿ ಇರುವ ಹಳೆಯ ನಗರಸಭೆ ನಳ್ಳಿ ಸಂಪರ್ಕಗಳಿಗೆ ಹೊಸದಾಗಿ ಕಳಪೆ ದರ್ಜೆಯ ನೀರಿನ ಮಾಪಕಗಳನ್ನು ಜೋಡಿಸಿ, ವಾರಾಹಿ ಸಂಪರ್ಕ ಎಂದು ಗುರುತಿಸಲಾಗಿದೆ. ತೀರಾ ಇತ್ತೀಚೆಗಷ್ಟೇ ಪ್ರಾಯೋಗಿಕ ನೆಲೆಯಲ್ಲಿ ವಾರಾಹಿ ನೀರು ಉಡುಪಿ ನಗರಕ್ಕೆ ಬರಲಾರಂಭಿಸಿದೆ, ಆದರೆ 100-200ರೂ. ನೀರಿನ ಬಿಲ್ ಬರುವಲ್ಲಿ, ಹೆಚ್ಚಿನಂಶ ಹೊಸ ಮಾಪಕಗಳ ಕಾರಣಕ್ಕೆ ಸಾವಿರ ರೂ.ಗಳಿಗೂ ಮಿಕ್ಕಿ ಮೊತ್ತದ ಅತಾರ್ಕಿಕ ಬಿಲ್ಲುಗಳು ಹಲವೆಡೆ ಬರಲಾರಂಭಿಸಿವೆ. ಒಂದೆರಡು ಜನರಿರುವ ಮನೆಗೂ ಕಲ್ಯಾಣ ಮಂಟಪಗಳಿಗೆ ಬರುವ ಗಾತ್ರದ, ನೀರಿನ ಬಳಕೆಯ ಬಿಲ್ಲು ಬರತೊಡಗಿದೆ!

ಕೇವಲ ಅಂಕಿ-ಸಂಖ್ಯೆಗಳ ವರದಿ ನೀಡುವುದನ್ನೇ ಸರಕಾರಿ ಯೋಜನೆಗಳ ಗುರಿ ಆಗಿರಿಸಿಕೊಂಡು, ಜನರಿಗೆ ಚಿಕ್ಕಾಸೂ ಪ್ರಯೋಜನ ಇಲ್ಲದ, ಗುತ್ತಿಗೆದಾರ ಸ್ನೇಹಿ ಯೋಜನೆಗಳನ್ನು ಮಾಡುತ್ತಿರುವುದು ರಾಜ್ಯಸರಕಾರವಿರಲೀ ಅಥವಾ ಕೇಂದ್ರಸರಕಾರವಿರಲೀ ಅವರು ಉತ್ತರದಾಯಿ ಆಗದಿದ್ದರೆ ಅಲ್ಲಿ ಹಗರಣ ನಡೆದಿರಬಹುದು ಎಂದೇ ಶಂಕಿಸಬೇಕಾಗುತ್ತದೆ. ಕುಡಿಯುವ ನೀರು ಯೋಜನೆಯಲ್ಲಿ ನಳ್ಳಿ ಸಂಪರ್ಕ ಮನೆಗೆ ತಲುಪುವುದು ಯೋಜನೆಯ ಉದ್ದೇಶ ಅಲ್ಲ; ಕುಡಿಯಬಲ್ಲ ಶುದ್ಧ ನೀರು ಮನೆಬಳಕೆಗೆ ತಲುಪುವುದನ್ನು ಖಚಿತಪಡಿಸುವುದು ಸರಕಾರಗಳ ಜವಾಬ್ದಾರಿ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X