Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ರೂ. 116,00,00,00,00,000 ಶೀರ್ಷಿಕೆ...

ರೂ. 116,00,00,00,00,000 ಶೀರ್ಷಿಕೆ ಯಾವಾಗ ಡಿಯರ್ ಮೀಡಿಯಾ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು6 Sept 2025 1:11 PM IST
share
ರೂ. 116,00,00,00,00,000 ಶೀರ್ಷಿಕೆ ಯಾವಾಗ ಡಿಯರ್ ಮೀಡಿಯಾ?

ಟೆಲಿಕಾಂ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಭಾರತ ಸರಕಾರದ ನೀತ್ಯಾತ್ಮಕ ನಿಲುವಿನಲ್ಲಿ ಆಗಿರಬಹುದಾದ ಲೋಪದ ಕಾರಣದಿಂದಾಗಿ ಸರಕಾರಕ್ಕೆ ಬರಬೇಕಾಗಿದ್ದ ಆದಾಯದಲ್ಲಿ 11.6 ಲಕ್ಷ ಕೋಟಿ ರೂ.ಗಳ ಖೋತಾ ಸಂಭವಿಸಿದೆ. ಆದರೆ ಇದನ್ನು ಗುರುತಿಸಬೇಕಾದ ಸಂಸತ್ತಾಗಲೀ, ಸಿಎಜಿ ಆಗಲೀ, ಮಾಧ್ಯಮಗಳಾಗಲೀ, ವಿಷಯವನ್ನು ಜನರ ನಡುವೆ ಕೊಂಡೊಯ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಲೀ... ಯಾರೂ ಎಚ್ಚೆತ್ತಿರುವಂತೆ ಕಾಣಿಸುತ್ತಿಲ್ಲ.

ನೀತ್ಯಾತ್ಮಕ ಪ್ರಯೋಗವೊಂದನ್ನು ‘ಹಗರಣಗಳ ಮಹಾತಾಯಿ’ ಎಂದು ಬಿಂಬಿಸಿ, ಅದರ ಅಲೆಯ ಬೆನ್ನೇರಿ ಅಧಿಕಾರ ಹಿಡಿದಿರುವ ಸರಕಾರವೊಂದು ಈಗ ಒಂದು ಸುತ್ತು ಪೂರ್ಣಗೊಳಿಸಿದ್ದು, ಸ್ವತಃ ತಾನು ಅಂತಹದೇ ಒಂದು ಸನ್ನಿವೇಶದಲ್ಲಿ ಬಂದು ನಿಂತಿದೆ. ಟೆಲಿಕಾಂ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಭಾರತ ಸರಕಾರದ ನೀತ್ಯಾತ್ಮಕ ನಿಲುವಿನಲ್ಲಿ ಆಗಿರಬಹುದಾದ ಲೋಪದ ಕಾರಣದಿಂದಾಗಿ ಸರಕಾರಕ್ಕೆ ಬರಬೇಕಾಗಿದ್ದ ಆದಾಯದಲ್ಲಿ 11.6 ಲಕ್ಷ ಕೋಟಿ ರೂ.ಗಳ ಖೋತಾ ಸಂಭವಿಸಿದೆ. ಆದರೆ ಇದನ್ನು ಗುರುತಿಸಬೇಕಾದ ಸಂಸತ್ತಾಗಲೀ, ಸಿಎಜಿ ಆಗಲೀ, ಮಾಧ್ಯಮಗಳಾಗಲೀ, ವಿಷಯವನ್ನು ಜನರ ನಡುವೆ ಕೊಂಡೊಯ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಲೀ... ಯಾರೂ ಎಚ್ಚೆತ್ತಿರುವಂತೆ ಕಾಣಿಸುತ್ತಿಲ್ಲ.

ಹೌದು, ಇದು 2ಜಿ ಹಗರಣದ ವಿಚಾರ. 2011ರಲ್ಲಿ, ಸಿಎಜಿ ನೀಡಿದ ವರದಿಯೊಂದನ್ನು ಆಧರಿಸಿ, ರೂ. 1,76,00,00,00,00,000 ಎಂಬ ಪತ್ರಿಕೆಯೊಂದರ ಲೀಡ್ ತಲೆಬರಹ ಸೆನ್ಸೇಷನ್ ಸೃಷ್ಟಿಸಿ, ಜಗತ್ತಿನ ಗಮನವನ್ನು ಸೆಳೆದಿತ್ತು. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಸಾರುವ ವರದಿ ಅದು. ಈ ಕೋಲಾಹಲದ ಫಲವಾಗಿ ಅಂದಿನ ಟೆಲಿಕಾಂ ಸಚಿವರು ಸೇರಿದಂತೆ ಹಲವರು ಜೈಲಿಗೆ ಹೋದರು, ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಭುಗಿಲೆದ್ದು, 2011ಎಪ್ರಿಲ್‌ನಲ್ಲಿ ಜಂತರ್ ಮಂತರ್‌ನಲ್ಲಿ ಅಣ್ಣಾ ಹಝಾರೆ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭವಾಯಿತು.... ಕಡೆಗೇನಾಯಿತು ಎಂಬುದು ಈಗ ದೇಶಕ್ಕೇ ಗೊತ್ತಿದೆ. ಆದರೆ ಆ 2ಜಿ ಪ್ರಕರಣಕ್ಕೇನಾಯಿತು? ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ವಿಶೇಷ ನ್ಯಾಯಾಲಯವು 2017ರ ಡಿಸೆಂಬರ್ 21ರಂದು ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದ್ದಲ್ಲದೇ ‘‘ಕೆಲವು ಆಯ್ದ ಅಂಶಗಳನ್ನೇ ಎತ್ತಿ ತೋರಿಸಿ ಇದನ್ನು ದೊಡ್ಡ ಹಗರಣ ಎಂದು ಬಿಂಬಿಸಲಾಗಿತ್ತು’’ ಎಂದು ಅರ್ಥ ಬರುವ ಮಾತುಗಳನ್ನು ಹೇಳಿತ್ತು. 2018ರಲ್ಲಿ ಈ.ಡಿ. ಮತ್ತು ಸಿಬಿಐಗಳು ಈ ತೀರ್ಪಿನ ವಿರುದ್ಧ ದಿಲ್ಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಸುಮಾರು ಆರು ವರ್ಷ ಅಲ್ಲಿ ಕೊಳೆದ ಬಳಿಕ, ಕಳೆದ ಮಹಾಚುನಾವಣೆಗೆ ತಿಂಗಳುಗಳಿರುವಾಗ (2024 ಮಾರ್ಚ್ 22) ದಿಲ್ಲಿ ಹೈಕೋರ್ಟ್ ಆ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ವಿಚಾರಣೆ ನಡೆದಿದೆ.

ಈ 2ಜಿ ಪ್ರಕರಣದಲ್ಲಿ ಹೇಗೆ ಸರಕಾರದ ನೀತ್ಯಾತ್ಮಕ ನಿಲುವೊಂದನ್ನು ಸಿಎಜಿಯು ಒಂದು ಹಗರಣವೆಂದು ಬಿಂಬಿಸಿತು ಮತ್ತು ರಾಜಕೀಯ ಆ ಸೊಲ್ಲನ್ನು ಎತ್ತಿಕೊಂಡು ಹೇಗೆ ತನ್ನ ಲಾಭಕ್ಕೆ ಬಳಸಿಕೊಂಡಿತು ಎಂಬ ವಿವರಗಳು ಬಹಳ ಕುತೂಹಲಕರವಾಗಿವೆ. (ಆಸಕ್ತರಿಗೆ, ಅಂದಿನ ಯೋಜನಾ ಆಯೋಗದ ಮುಖ್ಯಸ್ಥರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಬರೆದಿರುವ, ಈ ಅಂಕಣಕಾರ ಅನುವಾದಿಸಿದ ‘M ಡಾಕ್ಯುಮೆಂಟ್’ ಕೃತಿಯಲ್ಲಿ ಆ ಬಗ್ಗೆ ವಿವರಗಳಿವೆ.) ಗಮನಾರ್ಹ ಸಂಗತಿ ಎಂದರೆ, ಖಾಸಗಿ ಟೆಲಿಕಾಂ ಸೇವಾದಾತರ ಕಾರ್ಟೆಲ್‌ಅನ್ನು ಮುರಿದು ಪ್ರತೀ ಜಿಲ್ಲೆಗೂ ಹೊಸಹೊಸ ಟೆಲಿಕಾಂ ಸೇವಾದಾತರನ್ನು ಪರಿಚಯಿಸುವ ಉದ್ದೇಶದಿಂದ ಹೊರಟ ನೀತ್ಯಾತ್ಮಕ ನಿರ್ಣಯ ಅದಾಗಿತ್ತು. ಆದರೆ, ಅದೃಷ್ಟ ಕೈಕೊಟ್ಟದ್ದರಿಂದ ಸ್ಪೆಕ್ಟ್ರಂ ಬೆಲೆಯ ಕುರಿತ ತೀರ್ಮಾನವು ಇಡೀ ಘಟನೆಯನ್ನು ಹಗರಣ ಎಂದು ಬಿಂಬಿಸಿತ್ತು. ಇಂದು ಬಹುತೇಕ ಅಂತಹದೇ ಒಂದು ಸನ್ನಿವೇಶಕ್ಕೆ ಹಾಲಿ ಸರಕಾರ ಬಂದು ತಲುಪಿದೆ.

ಭಾರತ ಸರಕಾರದ ಟೆಲಿಕಾಂ ಇಲಾಖೆಗೆ ಸಲಹೆಗಾರರಾಗಿರುವ ವಿ.ಜೆ. ಕ್ರಿಸ್ಟೋಫರ್ ಅವರು 2010ರಿಂದ ಇಲ್ಲಿಯ ತನಕದ ಎಲ್ಲ ಟೆಲಿಕಾಂ ಸ್ಪೆಕ್ಟ್ರಂ ವಿತರಣೆಗಳ ಅಧ್ಯಯನ ನಡೆಸಿ, ‘‘The diminishing returns of SMRA: A data driven analysis of India’s spectrum sales (2010-2024)’’ ಎಂಬ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ, ಭಾರತ ಸರಕಾರದ ಟೆಲಿಕಾಂ ಇಲಾಖೆಯು 2010-2024ರ ನಡುವೆ ಒಟ್ಟು 17.23 ಲಕ್ಷ ಕೋಟಿ ರೂ.(ಮೀಸಲು ಬೆಲೆ)ಗಳ ಸ್ಪೆಕ್ಟ್ರಂ ಹರಾಜು ಮಾಡಿದೆ. ಆದರೆ ಮಾರಾಟ ಆಗಿರುವುದು ಕೇವಲ 5.64ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಂ. ಸುಮಾರು 11.6 ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಂ ಮಾರಾಟ ಆಗದೇ ಹಾಗೇ ಉಳಿದಿದೆ. ಇದರಿಂದಾಗಿ ಸರಕಾರಕ್ಕೆ 11.6 ಲಕ್ಷ ಕೋಟಿ ರೂ.ಗಳ ಆದಾಯ ಕೊರತೆ ಆಗಿದೆ. ಈ ಮೂಲಕ ಉದ್ದೇಶಿತ ಆದಾಯದಲ್ಲಿ ಕೇವಲ ಶೇ. 32.7ನ್ನು ಗಳಿಸಿದಂತಾಗಿದೆ ಎಂದು ಹೇಳಿದ್ದಾರೆ. (ಆಸಕ್ತರು ವರದಿಯನ್ನು ಇಲ್ಲಿ ಓದಬಹುದು: https://www.scribd.com/document/907544034/smra-analysis)

ಸರಕಾರ ಈ ಸ್ಪೆಕ್ಟ್ರಂ ಹರಾಜು ನಡೆಸುವಾಗ ಮೀಸಲು ಬೆಲೆಯನ್ನು ನಿಗದಿಪಡಿಸುವುದು ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಖಿಖಂI). 2010ರ ಹೊತ್ತಿಗೆ ಸ್ಪೆಕ್ಟ್ರಂ ಲಭ್ಯತೆ ಕಡಿಮೆ ಇತ್ತು, ಸರಕಾರದ ನೀತಿಗೆ ಅನುಗುಣವಾಗಿ ಬಿಡ್ಡ್‌ಗಳ ಸಂಖ್ಯೆ ಹೆಚ್ಚಿತ್ತು. ಪ್ರತೀ ಲೈಸನ್ಸ್ ವ್ಯಾಪ್ತಿಗೂ 9-10 ಸ್ಪರ್ಧಿಗಳಿದ್ದರು, ಹಾಗಾಗಿ ಮೀಸಲು ಬೆಲೆಯ ಐದು ಪಟ್ಟು ಹೆಚ್ಚು ಆದಾಯ ಸರಕಾರಕ್ಕೆ ಬಂದಿತ್ತು. ಆದರೆ, ಈ ಅವಧಿಯನ್ನು ಹಗರಣಗಳ ಮಹಾತಾಯಿ ಎಂದು ಬಿಂಬಿಸಲಾಯಿತು. 2015ರ ತನಕ ಸ್ಪೆಕ್ಟ್ರಂ ವಿತರಣೆಯಲ್ಲಿ ಸ್ವಲ್ಪಮಟ್ಟಿಗೆ ಸ್ಪರ್ಧೆ ಇತ್ತು. ಆದರೆ, 2016ರ ಹೊತ್ತಿಗೆ ಮಾರುಕಟ್ಟೆ ಸ್ಥಿರಗೊಂಡಿತು (ಅಂದರೆ ಕಾರ್ಟೆಲ್‌ಗಳು ಮತ್ತೆ ಸಕ್ರಿಯಗೊಂಡವು ಎಂದು ಓದಿಕೊಳ್ಳಬಹುದು.); 2017ರ ಬಳಿಕವಂತೂ ಬಹುತೇಕ 3 ಬಿಡ್ಡರ್‌ಗಳು (ರಿಲಯನ್ಸ್ ಜಿಯೊ, ಭಾರತಿ ಏರ್‌ಟೆಲ್, ವೊಡಾಫೋನ್ ಐಡಿಯಾ) ಮಾತ್ರ ಸ್ಪೆಕ್ಟ್ರಂ ಸ್ಪರ್ಧೆಯಲ್ಲಿದ್ದಾರೆ. ಇದರ ಫಲಶ್ರುತಿ ಏನೆಂದರೆ, ಸರಕಾರದ ನಿರೀಕ್ಷಿತ ಆದಾಯದಲ್ಲಿ ಕೊರತೆ ಆಗತೊಡಗಿದೆ.

2010-2024ರ ನಡುವೆ 818 ಸ್ಪೆಕ್ಟ್ರಂ ಅವಕಾಶಗಳನ್ನು ಒಂದಕ್ಕಿಂತ ಹೆಚ್ಚು ತರಂಗಾಂತರದ ಬ್ಯಾಂಡ್‌ಗಳಿಗೆ 22 ಸೇವಾವ್ಯಾಪ್ತಿಗಳಲ್ಲಿ 9 ಬಾರಿ ಹರಾಜು ಮಾಡಲಾಗಿದೆ. ಇದರಲ್ಲಿ ಬಹುತೇಕ ಅರ್ಧಕ್ಕರ್ಧಕ್ಕೆ (ಶೇ. 48.8) ಖರೀದಿದಾರರೇ ಇರಲಿಲ್ಲ. 15ರಷ್ಟು ಮಾತ್ರ ಮೀಸಲು ದರಕ್ಕಿಂತ ಹೆಚ್ಚಿನ ಪ್ರೀಮಿಯಂ ದರದಲ್ಲಿ ಮಾರಾಟ ಆಗಿದ್ದರೆ, ಶೇ. 35.8 ಮೀಸಲು ಮೂಲ ಬೆಲೆಯಲ್ಲೇ ಹರಾಜಾಗಿವೆ. ಮೀಸಲು ಬೆಲೆಗಳನ್ನು ಮಾರು ಕಟ್ಟೆಯ ಅಳತೆ ಮೀರಿ ಹೆಚ್ಚಿನ ಮೊತ್ತದಲ್ಲಿ ನಿಗದಿಪಡಿಸಿದ್ದು ಈ ನಷ್ಟಕ್ಕೆ ಕಾರಣ. ಹೊಸದಾಗಿ ರಂಗಕ್ಕಿಳಿಯ ಬಯಸುವವರಿಗೆ ಈ ಅತಿದರ ಆಕರ್ಷಕವಾಗಿಲ್ಲ. ಹಾಗಾಗಿ ಸ್ಪರ್ಧೆ ತನ್ನಿಂತಾನೇ ತಪ್ಪಿಹೋಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಇದರ ಅರ್ಥ, ಟೆಲಿಕಾಂ ಕಾರ್ಟೆಲ್ ತನ್ನ ಪ್ರಭಾವ ಬೀರಿ, ಬೇರೆ ಯಾರೂ ಈ ರಂಗ ಪ್ರವೇಶಿಸದಂತೆ ತಡೆದಿದೆ ಎಂದೇ ಅಲ್ಲವೇ?

ಈಗ ಹಳೆಯ 2ಜಿ ಹಗರಣವನ್ನು ನೆನಪಿಸಿಕೊಳ್ಳಿ.

2007ರಲ್ಲಿ ಸಿಡಿಎಂಎ ತಂತ್ರಜ್ಞಾನ ಬಳಸುವವರು ಜಿಎಸ್‌ಎಂಎ ತಂತ್ರಜ್ಞಾನ ಬಳಸಲು ಬದಲಾಗುವ ಹಂತದಲ್ಲಿ ಬಂದ 2ಜಿ ಸ್ಪೆಕ್ಟ್ರಂ ಅನ್ನು ಎಲ್ಲರಿಗೆ ಸಮಾನ ಅವಕಾಶ ಒದಗಿಸಬೇಕೆಂಬ ದೃಷ್ಟಿಯಿಂದ 2001ರ ದರದಲ್ಲಿ ಒದಗಿಸಬೇಕು ಎಂಬ ಅಂದಿನ TRAI ತೆಗೆದುಕೊಂಡ ನಿರ್ಧಾರ ಈ ಇಡೀ ಗದ್ದಲದ ಮೂಲ. ಹಾಗಂತ, ಸ್ಪೆಕ್ಟ್ರಂ ಲೈಸನ್ಸ್ ಹಂಚಿಕೆಯ ವೇಳೆ ಪಕ್ಷಪಾತ, ಸಣ್ಣಪುಟ್ಟ ಅಕ್ರಮಗಳು ನಡೆದೇ ಇಲ್ಲ ಎಂದು ಹೇಳಲಾಗುವುದಿಲ್ಲವಾದರೂ, ಈ ಬಗ್ಗೆ ಸಿವಿಸಿ, ಸಿಬಿಐ ತನಿಖೆ ನಡೆಯಿತು; ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಗಂಭೀರ ಸ್ವರೂಪ ತಳೆಯಿತು; ಸಚಿವ ಎ. ರಾಜಾ ತಲೆದಂಡವಾಯಿತು. ಪ್ರಕರಣದ ಪರ್ಫಾರ್ಮೆನ್ಸ್ ಆಡಿಟ್ ಮಾಡಿದ ಸಿಎಜಿ ವರದಿ, 2010ರ ನವೆಂಬರ್ 16ಕ್ಕೆ ಸಂಸತ್ತಿನಲ್ಲಿ ಮಂಡಿತವಾಯಿತು. ಆಗಷ್ಟೇ (2010) ನಡೆದಿದ್ದ 3ಜಿ ಸ್ಪೆಕ್ಟ್ರಂ ಹರಾಜಿನ ದರವನ್ನು ಆಧರಿಸಿ, ಹಳೆಯ 2001ರ ದರದಲ್ಲಿ 2ಜಿ ಸ್ಪೆಕ್ಟ್ರಂ ಹಂಚಿದ್ದನ್ನು ಊಹಾತ್ಮಕವಾಗಿ ಲೆಕ್ಕಾಚಾರ ಮಾಡಿಕೊಂಡ ಸಿಎಜಿಯು ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ. ನಷ್ಟದ ಚಿತ್ರ ಮುಂದಿಟ್ಟಿತು. ಇದು ಆಗ ಅನೂಹ್ಯ ಗಾತ್ರದ್ದಾದ ಕಾರಣಕ್ಕೆ ಸಾರ್ವಜನಿಕ ಗಮನ ಸೆಳೆಯಿತು. ರಾಜಕಾರಣದ ವರಸೆಗಳ ಕಾರಣದಿಂದಾಗಿ ಅಷ್ಟೊಂದು ಗಾತ್ರದ ಹಣವನ್ನು ಡಾ. ಮನಮೋಹನ್ ಸಿಂಗ್ ಸರಕಾರ ಹೇರಾಫೇರಿ ಮಾಡಿದೆ ಎಂದು ಬಿಂಬಿಸಲಾಯಿತು. ಇದು ‘‘ಹಗರಣಗಳ ಮಹಾತಾಯಿ’’ ಎಂದು ಪ್ರಚಾರ ಪಡೆಯಿತು. ಇನ್ನೂ ಈ ಸಂಬಂಧ ಕಾನೂನು ಕಲಾಪ ಮುಗಿದಿಲ್ಲ.

ಈಗ ಇದೇ ನಿಯಮವನ್ನು ಹಾಲಿ ಆಡಳಿತ ಮಾಡಿಕೊಂಡಿರುವ ನಷ್ಟಕ್ಕೆ ಅಳವಡಿಸಿದರೆ, ಸರಕಾರ ತಾನೇ ಪರಿಶೀಲಿಸಿ ನಿಗದಿಪಡಿಸಿದ ಮೀಸಲು ಬೆಲೆಯ ನಿರೀಕ್ಷಿತ ಮೊತ್ತವನ್ನು ಹರಾಜಿನಲ್ಲಿ ತಲುಪಲು ಸಾಧ್ಯವಾಗದೇ ಇರುವುದರಿಂದ 11.6ಲಕ್ಷ ಕೋಟಿ ರೂ. ನಷ್ಟ ಬೊಕ್ಕಸಕ್ಕೆ ಸಂಭವಿಸಿದಂತಾಯಿತು! ಮೇಲಾಗಿ, ಟೆಲಿಕಾಂ ಬಲಾಢ್ಯರ ಕಾರ್ಟೆಲ್ ಮತ್ತೆ ಸ್ಥಾಪನೆಗೊಂಡು ಇಂದಿನ ಮಾರುಕಟ್ಟೆಯನ್ನು ನಿಯಂತ್ರಿಸತೊಡಗಿದೆ.

ಇದು ‘‘ಅವರು ಮಾಡಿದರೆ ಬಲಾತ್ಕಾರ, ನಾವು ಮಾಡಿದರೆ ಚಮತ್ಕಾರ’’ ಎಂಬ ಸಿನೆಮಾ ಸಂಭಾಷಣೆಯಂತಾಗಿದೆ ಎಂದು ಅನ್ನಿಸುತ್ತಿಲ್ಲವೆ?!!

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X