Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ನೀರಿಗೆ ಬಿದ್ದ ಬಳಿಕ ಈಜು ಕಲಿಕೆಗೆ...

ನೀರಿಗೆ ಬಿದ್ದ ಬಳಿಕ ಈಜು ಕಲಿಕೆಗೆ ಮತ್ತೊಂದು ಸೇರ್ಪಡೆ: ಸಿಜಿಡಿ ಯೋಜನೆ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು30 Aug 2025 10:28 AM IST
share
ನೀರಿಗೆ ಬಿದ್ದ ಬಳಿಕ ಈಜು ಕಲಿಕೆಗೆ ಮತ್ತೊಂದು ಸೇರ್ಪಡೆ: ಸಿಜಿಡಿ ಯೋಜನೆ

ಜನರಿಗೆ ಉಪಯುಕ್ತವೆನ್ನಿಸಬಹುದಾದ ಯೋಜನೆಗಳನ್ನು ಹೀಗೆ ನನೆಗುದಿಗೆ ಹಾಕಿ ಜನರ ಮೊಣಕೈಗೆ ಬೆಲ್ಲ ಅಂಟಿಸುವುದು ಮತ್ತು ಜನ ಯಾವತ್ತೂ ಬೇಕೆಂದು ಕೇಳಿರದಂತಹ, ಕಾರ್ಪೊರೇಟ್‌ಗಳಿಗೆ ಮಾತ್ರ ಲಾಭ ತರಬಲ್ಲ ಬೃಹತ್ ಯೋಜನೆಗಳನ್ನು ಆಕಾಶದಿಂದ ಉದುರಿಸಿ, ಅದರ ಅನುಷ್ಠಾನದಲ್ಲಿ ಯಾವುದೇ ಅಡ್ಡಿ-ಆತಂಕಗಳಿಲ್ಲದಂತೆ ನೋಡಿಕೊಂಡು ಆದ್ಯತೆಯ ಮೇಲೆ ಜಾರಿಗೆ ತರುವುದು ಹಾಲಿ ಭಾರತ ಸರಕಾರದ ಹಾಲ್‌ಮಾರ್ಕ್ ಆಗಿಬಿಟ್ಟಿದೆ.

ಯಾವುದೇ ಯೋಜನೆ ಕೈಗೆತ್ತಿಕೊಂಡರೂ, ಎಲ್ಲಕ್ಕಿಂತ ಮೊದಲು ಅದಕ್ಕೊಂದು ಆಕರ್ಷಕ ಹೆಸರು ಕೊಟ್ಟು, ಬಾಜಾ ಬಜಂತ್ರಿ ಸಹಿತ ಅದನ್ನು ಪ್ರಕಟಿಸಿ, ಅದಕ್ಕೆ ವ್ಯಾಪಕ ಪ್ರಚಾರ ಕೊಟ್ಟುಬಿಟ್ಟರೆ, ಅಲ್ಲಿಗೆ ಸಮುದ್ರಕ್ಕೆ ಧುಮುಕಿದಂತೆ. ಆ ಬಳಿಕ ಈಜಲು ಕಲಿಸಿಕೊಡುವ ಪುಸ್ತಕ ಯಾವ ಅಂಗಡಿಯಲ್ಲಿ ಸಿಗುತ್ತದೆ ಎಂಬುದನ್ನು ಹುಡುಕಲು ತೆರಳುವುದು ಭಾರತ ಸರಕಾರಕ್ಕೆ ಚಟ ಆಗಿಬಿಟ್ಟಿದೆ. 2016ರಲ್ಲಿ ಜಾರಿಗೆ ಬಂದ, ದೇಶದ ನಗರಗಳಿಗೆ ಮುಂದಿನ 10 ವರ್ಷಗಳಲ್ಲಿ, ಪೈಪ್ ಲೈನ್ ಮೂಲಕ ಅಡುಗೆ ಅನಿಲ ವಿತರಿಸುವ ಯೋಜನೆ (ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್- ಸಿಜಿಡಿ) ಕೂಡ ಈ ಚಟಕ್ಕೆ ಹೊರತಾಗಿಲ್ಲ ಎಂಬುದನ್ನು ಮುಂದೆ ಹೇಳುವ ಅಂಕಿ-ಅಂಶಗಳು ತೋರಿಸುತ್ತವೆ.

ಹತ್ತು ವರ್ಷಗಳಲ್ಲಿ ಸುಮಾರು 1.20 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಕ್ಕೆ ಬರಬೇಕಿದ್ದ ಯೋಜನೆ ಇದು. ವಿಳಂಬಗಳ ಕಾರಣದಿಂದಾಗಿ ಈಗ ತನ್ನ ಅವಧಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ನೇತೃತ್ವದಲ್ಲಿ ಪೈಪ್ ಲೈನ್ ಮೂಲಕ ಅಡುಗೆ ಅನಿಲ ವಿತರಿಸುವ ಯೋಜನೆಗೆ 12 ಸುತ್ತುಗಳ ಬಿಡ್ಡಿಂಗ್ ಈಗಾಗಲೇ ನಡೆದಿದ್ದು, ಭಾರತದಾದ್ಯಂತ ಸುಮಾರು 307 ಗುರುತಿಸಲಾಗಿರುವ ಭೂವ್ಯಾಪ್ತಿಗಳಲ್ಲಿ 2034ರ ಒಳಗೆ, 12.6 ಕೋಟಿ ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಒದಗಿಸುವುದು ಮತ್ತು 18,336 ಕಂಪ್ರೆಸ್ ಮಾಡಲಾದ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಸರಕಾರದ ಗುರಿ ಆಗಿತ್ತು. ಆದರೆ ಈಗ, 2025ರ ಮೇ ಕೊನೆಯ ಹೊತ್ತಿಗೆ ದೇಶದಲ್ಲಿ ಕೇವಲ 1.50 ಕೋಟಿ ಪಿಎನ್‌ಜಿ ಸಂಪರ್ಕಗಳು ಹಾಗೂ 8,000 ಸಿಎನ್‌ಜಿ ಪೂರೈಕೆ ಕೇಂದ್ರಗಳು ಪೂರ್ಣಗೊಂಡು ಕಾರ್ಯಾಚರಿಸುತ್ತಿವೆ. ಯೋಜನೆ ಆಮೆಗತಿಯಲ್ಲಿದೆ.

ಈ ಯೋಜನೆಯ ಅಡಿಯಲ್ಲಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳೂ ಆಯ್ಕೆ ಆಗಿವೆ. 2015ರಿಂದ 2022ರ ತನಕವೂ ವಿವಿಧ ಬಿಡ್ ರೌಂಡುಗಳಲ್ಲಿAGP ಸಿಟಿ ಗ್ಯಾಸ್ (11 ಜಿಲ್ಲೆಗಳು), ಮೆಗಾಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (3 ಜಿಲ್ಲೆಗಳು), ಭಾರತ್ ಪೆಟ್ರೋಲಿಯಂ (3 ಜಿಲ್ಲೆಗಳು), GAIL ಗ್ಯಾಸ್ (3 ಜಿಲ್ಲೆಗಳು), ಯುನಿಸನ್ ಎನ್ವಿರೊ (2 ಜಿಲ್ಲೆಗಳು), ಅದಾನಿ ಬಳಗ (2 ಜಿಲ್ಲೆಗಳು), ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ (1 ಜಿಲ್ಲೆ) ಕರ್ನಾಟಕದ ಮನೆಮನೆಗೆ ಗ್ಯಾಸ್ ತಲುಪಿಸುವ ಜವಾಬ್ದಾರಿ ಗಳಿಸಿಕೊಂಡಿವೆ. ಆದರೆ, ಅವರ ಪ್ರಯತ್ನಗಳು ಎಷ್ಟು ಯಶಸ್ವಿ ಎಂಬುದನ್ನು ಅಂಕಿಸಂಖ್ಯೆಗಳೇ ಬಿಚ್ಚಿಡುತ್ತವೆ. ಈ ಸಂಸ್ಥೆಗಳು ರಾಜ್ಯದಲ್ಲಿ ಒಟ್ಟು 49,54,436 ಮನೆಗಳಿಗೆ ಪಿಎನ್‌ಜಿ ಸಂಪರ್ಕವನ್ನೂ, 893 ಸಿಎನ್‌ಜಿ ಕೇಂದ್ರಗಳನ್ನೂ ಒದಗಿಸಬೇಕಾಗಿತ್ತು. ಆದರೆ ಇಲ್ಲಿಯ ತನಕ ಪೂರ್ಣಗೊಂಡಿರುವುದು 5,06,892 ಮನೆಗಳಿಗೆ ಪಿಎನ್‌ಜಿ ಸಂಪರ್ಕ ಮತ್ತು 453 ಸಿಎನ್‌ಜಿ ಕೇಂದ್ರಗಳು. (ಆಧಾರ: ಲೋಕಸಭೆಯ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 408 ದಿನಾಂಕ 21-08-2025)

ಈ ಯೋಜನೆ ಇಷ್ಟೊಂದು ವಿಳಂಬಗತಿಯಲ್ಲಿ ಸಾಗುತ್ತಿರುವುದು ಏಕೆಂದು ಪರಿಶೀಲಿಸಲು ಅತ್ಯುತ್ತಮ ಉದಾಹರಣೆ ಉಡುಪಿ ಜಿಲ್ಲೆ. ಅದಾನಿ ಬಳಗದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್) ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಈ ಬಿಡ್ ಅನ್ನು ಗಳಿಸಿಕೊಂಡದ್ದು 2018ರ ಸೆಪ್ಟಂಬರ್ ತಿಂಗಳಿನಲ್ಲಿ. ಆದರೆ ಇಲ್ಲಿಯ ತನಕ ಉದ್ದೇಶಿತ 1,10,099 ಮನೆಗಳಲ್ಲಿ ಒಂದೇ ಒಂದು ಸಂಪರ್ಕವನ್ನೂ ನೀಡಲಾಗಿಲ್ಲ; ಉದ್ದೇಶಿತ 11 ಸಿಎನ್‌ಜಿ ಪೂರೈಕೆ ಕೇಂದ್ರಗಳಲ್ಲಿ ಎಲ್ಲವನ್ನೂ ಸ್ಥಾಪಿಸಲಾಗಿದೆ. ಹೆಜಮಾಡಿ, ಪಡುಬಿದ್ರಿ, ಕೆದಿಂಜೆ, ಕಾರ್ಕಳ, ಮಲ್ಪೆ, ಉಡುಪಿ, ಬ್ರಹ್ಮಾವರ, ಕೋಟೇಶ್ವರಗಳಲ್ಲಿ ಈ ಸಿಎನ್‌ಜಿ ಪೂರೈಕೆ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಆದರೆ, ಮನೆಗಳಿಗೆ ಪಿಎನ್‌ಜಿ ಸಂಪರ್ಕ ಸಾಧಿಸುವುದು ಸಾಧ್ಯ ಆಗಿಲ್ಲ. ಅದು ಯಾಕೆ ಎಂದು ಹುಡುಕಿಕೊಂಡು ಹೊರಟರೆ, ಸರಕಾರದ ಯೋಜನೆಗಳಲ್ಲಿ ಅಂತರ್ಗತವಾಗಿರುವ ಬಾಲಗ್ರಹ ಪೀಡೆಗಳೆಲ್ಲ ಗೋಚರಕ್ಕೆ ಬರತೊಡಗುತ್ತವೆ.

ಉಕ್ಕಿನ ಪೈಪ್ ಲೈನ್ ಮೂಲಕ ಸುಮಾರು 50 ಕಿ.ಮೀ. ಹಾದು ಬರಬೇಕಾಗಿರುವ ಈ ಗ್ಯಾಸ್ ಪೈಪ್‌ಲೈನ್ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಸಾಗಿಬರಬೇಕಾಗಿದ್ದು, ಹಾದಿಯಲ್ಲಿ ಶಾಂಭವಿ, ಪಾವಂಜೆ ಇತ್ಯಾದಿ ಹೊಳೆಗಳನ್ನು ದಾಟಬೇಕಿದೆ. ನವಮಂಗಳೂರು ಬಂದರು (NMPA) ಬಳಿಯಲ್ಲಿ ಮತ್ತು ಅಲ್ಲೇ ಪಕ್ಕದಲ್ಲಿರುವ ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆಯ (KIOCL) ಜಾಗದಲ್ಲಿ ಹಾದು ಬರಬೇಕಿದೆ, ರೈಲ್ವೇ ಹಳಿಗಳನ್ನು ದಾಟಬೇಕಿದೆ; ಹಲವೆಡೆ ಪರಿಸರ ಅನುಮತಿ ಪಡೆಯಬೇಕಿದೆ, ಈಗಾಗಲೇ ಜಾಗ ಬಳಸಿರುವ GAIL, BPCL, MRPL ಪೈಪ್ ಲೈನ್‌ಗಳ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾಗಿದೆ.

ಇಂತಹ ಗಾತ್ರದ ಯಾವುದೇ ಯೋಜನೆಯನ್ನು ಜಾರಿಗೆ ತರುವ ಮುನ್ನ, ಸ್ವಸ್ಥ ಯೋಚನೆಗಳಿರುವ ಯಾರೇ ಸ್ಟೇಕ್ ಹೋಲ್ಡ್‌ಗಳಿದ್ದರೂ, ಇಂತಹ ಸಂಗತಿಗಳನ್ನೆಲ್ಲ ವಿವರವಾದ ಯೋಜನೆ ರಚನೆಯ ವೇಳೆಯಲ್ಲೇ ಪರಿಶೀಲಿಸಿ, ಅದಕ್ಕೆ ಸೂಕ್ತ ಪರಿಹಾರ ಹಾದಿಗಳನ್ನು ಕಂಡುಕೊಳ್ಳುವುದು ಸಹಜ ಹಾದಿ. ಹಾಗಾಗದಿದ್ದಾಗ, ಇದು ನೀರಿಗೆ ಬಿದ್ದ ಬಳಿಕ ಈಜಲು ಕಲಿಸುವ ಪುಸ್ತಕದಂಗಡಿ ಹುಡುಕಿಕೊಂಡು ಹೊರಟಂತೆಯೇ ಅನ್ನಿಸುತ್ತದೆ. ಕರಾವಳಿಯಲ್ಲಂತೂ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ರೈಲು ಮಾರ್ಗ, ಬಂದರು ಸೇರಿದಂತೆ ಬಹುತೇಕ ಎಲ್ಲ ಮೂಲಸೌಕರ್ಯ ಯೋಜನೆಗಳ ಹಣೆಬರೆಹ ಇಷ್ಟೇ ಆಗಿದೆ.

ಪಿಎನ್‌ಜಿಗೆ ಸಂಬಂಧಿಸಿದಂತೆ, ಯೋಜನೆ ವಿಳಂಬಕ್ಕೆ ಕಾರಣವಾಗಿರುವ ಬಹುತೇಕ ಎಲ್ಲ ಸಂಸ್ಥೆಗಳೂ ಸರಕಾರಿ ಅಥವಾ ಅರೆಸರಕಾರಿ ಸಂಸ್ಥೆಗಳೇ ಆಗಿವೆ. ಸರಕಾರದ ವಿವಿಧ ಅಂಗಗಳ ನಡುವೆ ಸಮನ್ವಯ ಇಲ್ಲದಿರುವುದು, ಒಬ್ಬರು ಏರಿಗೆ ಎಳೆದರೆ ಇನ್ನೊಬ್ಬರು ನೀರಿಗೆ ಎಳೆಯುವುದೇ ವಿಳಂಬಕ್ಕೆ ಮೂಲ ಕಾರಣ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಬಂದರು ಮಂಡಳಿಗಳ ಜತೆ ವಿವರವಾದ ಮಾತುಕತೆ, KIOCL ಜಾಗದಲ್ಲಿ ಹಾದುಬರಲು ಭಾರತ ಸರಕಾರದ ಉಕ್ಕು ಸಚಿವಾಲಯದ ಅನುಮತಿ, ರೈಲು ಹಾದಿಗಳನ್ನು ದಾಟಲು ದಕ್ಷಿಣ ರೈಲ್ವೆ ಮತ್ತು ಪಾಲ್ಘಾಟ್ ರೈಲ್ವೆ ವಿಭಾಗದ ಅನುಮತಿ ಪಡೆಯುವುದಕ್ಕೆ ವಿಳಂಬ, ರೈಲ್ವೆ ಸರ್ವೇಗಳಲ್ಲಿ ವಿಳಂಬ-ಸುರಕ್ಷತಾ ನಿಯಮಗಳ ಪಾಲನೆಯ ಜಿಡುಕು, GAIL ಜೊತೆ ಅವರ ಜಾಲದಲ್ಲಿ ಪಾಲುದಾರಿಕೆಗೆ ಇನ್ನೂ ನಡೆದಿರುವ ಮಾತುಕತೆ, ಗ್ರಾಮೀಣ ಪ್ರದೇಶಗಳಲ್ಲಿ ಪೈಪ್‌ಲೈನ್ ಹಾಕಲು ರಾಜ್ಯ ಸರಕಾರದ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ, ನದಿ ದಾಟಲು ರಾಜ್ಯ PWD ಇಲಾಖೆಯ ಅನುಮತಿ, ಹೀಗೆ ಪ್ರತಿಯೊಂದೂ ಸರಕಾರಿ-ಅರೆಸರಕಾರಿ ಸಂಸ್ಥೆಗಳ ಅನುಮತಿ ಪಡೆಯಲು ಒದ್ದಾಡುವುದರಲ್ಲೇ ಯೋಜನೆ ಇನ್ನೂ ದಿನದೂಡುತ್ತಿದೆ.

ದಕ್ಷಿಣ ಕನ್ನಡದಲ್ಲೂ ಈ ಯೋಜನೆಯ ವಿಳಂಬ ಹೀಗೇ ವಿಳಂಬಿತ ಲಯದಲ್ಲಿಯೇ ಸಾಗುತ್ತಿದೆ. ಅದಕ್ಕಾಗಿ ಅಲ್ಲಿರುವ ಜಿಲ್ಲಾಧಿಕಾರಿ ನೇತೃತ್ವದ ಸಮನ್ವಯ ಸಮಿತಿ, ಜನಪ್ರತಿನಿಧಿಗಳು ಒದ್ದಾಟದಲ್ಲಿದ್ದಾರೆ. GAIL ದಕ್ಷಿಣ ಕನ್ನಡ ಜಿಲ್ಲೆಯ ಬಿಡ್ ಗೆದ್ದಿದ್ದು, ಉದ್ದೇಶಿತ 3.5 ಲಕ್ಷ ಪಿಎನ್‌ಜಿ ಸಂಪರ್ಕಗಳಲ್ಲಿ ಈ ತನಕ 45,529 ಸಂಪರ್ಕಗಳನ್ನಷ್ಟೇ ನೀಡಲಾಗಿದೆ; 100 ಉದ್ದೇಶಿತ ಸಿಎನ್‌ಜಿ ಸರಬರಾಜು ಕೇಂದ್ರಗಳಲ್ಲಿ 39 ಕಾರ್ಯಾಚರಣೆ ಆರಂಭಿವೆ.

ಸರಕಾರದ್ದೇ ವಿವಿಧ ಅಂಗಗಳ ನಡುವಿನ ಸಮನ್ವಯದ ಕೊರತೆಯ ಮತ್ತು ಯೋಜನಾ ವೈಫಲ್ಯದ ಕಾರಣಕ್ಕಾಗಿ ಈ ರೀತಿಯ ವಿಳಂಬ ಸಂಭವಿಸುತ್ತಿರುವುದಕ್ಕೆ ಹೊಣೆಯನ್ನು ಸಹಜವಾಗಿ ಸರಕಾರವೇ ಹೊರಬೇಕಾಗುತ್ತದೆ. ಜನರಿಗೆ ಉಪಯುಕ್ತವೆನ್ನಿಸಬಹುದಾದ ಯೋಜನೆಗಳನ್ನು ಹೀಗೆ ನನೆಗುದಿಗೆ ಹಾಕಿ ಜನರ ಮೊಣಕೈಗೆ ಬೆಲ್ಲ ಅಂಟಿಸುವುದು ಮತ್ತು ಜನ ಯಾವತ್ತೂ ಬೇಕೆಂದು ಕೇಳಿರದಂತಹ, ಕಾರ್ಪೊರೇಟ್‌ಗಳಿಗೆ ಮಾತ್ರ ಲಾಭ ತರಬಲ್ಲ ಬೃಹತ್ ಯೋಜನೆಗಳನ್ನು ಆಕಾಶದಿಂದ ಉದುರಿಸಿ, ಅದರ ಅನುಷ್ಠಾನದಲ್ಲಿ ಯಾವುದೇ ಅಡ್ಡಿ-ಆತಂಕಗಳಿಲ್ಲದಂತೆ ನೋಡಿಕೊಂಡು ಆದ್ಯತೆಯ ಮೇಲೆ ಜಾರಿಗೆ ತರುವುದು ಹಾಲಿ ಭಾರತ ಸರಕಾರದ ಹಾಲ್‌ಮಾರ್ಕ್ ಆಗಿಬಿಟ್ಟಿದೆ. ಈ ರೀತಿಯ ಉದ್ದೇಶಪೂರ್ವಕ ಆಟಗಳ ಫಲವಾಗಿ, ಕರಾವಳಿಯ ನೆಲ-ಜಲ-ಪರಿಸರ ‘ಆನಿಪಾಲು’ ಆಗುತ್ತಿದ್ದು, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಕರಾವಳಿಯ ಸಮೃದ್ಧ ಬದುಕು ಹಂತಹಂತವಾಗಿ ನೆಲಕಚ್ಚುತ್ತಿದೆ. ಈ ನಿಟ್ಟಿನಲ್ಲಿ ಎಚ್ಚರ ಅಗತ್ಯವಿದೆ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X