Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದು ಏನನ್ನು ಸಾಧಿಸಲು ಹೊರಟಿದ್ದಾರೆ ?

ಸಿದ್ದು ಏನನ್ನು ಸಾಧಿಸಲು ಹೊರಟಿದ್ದಾರೆ ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ1 Sept 2025 10:36 AM IST
share
ಸಿದ್ದು ಏನನ್ನು ಸಾಧಿಸಲು ಹೊರಟಿದ್ದಾರೆ ?

ಸಿದ್ದರಾಮಯ್ಯ ಅಹಿಂದ ಸಂಘಟನೆಯ ಆರಂಭದ ದಿನಗಳಲ್ಲೇ ಜಾತಿಗಣತಿ ಆಗಬೇಕು ಎಂದು ಪ್ರತಿಪಾದಿಸಿದವರು. ಉಪ ಮುಖ್ಯಮಂತ್ರಿಯಾಗಿದ್ದಾಗ ಉತ್ಸಾಹ ತೋರಿ ಅದಕ್ಕಾಗಿ ಹಣ ಕೊಟ್ಟರು. ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜಾತಿಗಣತಿ ಘೋಷಣೆ ಮಾಡಿದರು. ಎರಡನೇ ಅವಧಿಯಲ್ಲಿ ಜಾರಿಗೆ ಮುಂದಾದರು. ಕಡೆಗೆ ಏನಾಯಿತು? ಕಾಂಗ್ರೆಸ್ ಹೈಕಮಾಂಡ್ ಜಾತಿಗಣತಿ ವರದಿಯನ್ನು ಜಾರಿ ಮಾಡದಂತೆ ಫರ್ಮಾನು ಹೊರಡಿಸಿತು. ಇದು ಹಳತು ಎಂಬ ನೆಪ ನೀಡಿತು. ಸಿದ್ದರಾಮಯ್ಯ ತಲೆ ತಗ್ಗಿಸಿ ಒಪ್ಪಿದರು. ಅಷ್ಟು ಮಾತ್ರವಲ್ಲ, ಅವರ ಬಾಯಿಯಿಂದಲೇ ‘ಹಳತು’ ಎಂಬ ವಿರೋಧಿಗಳ ಮಾತುಗಳೂ ಹೊರಬಂದವು. ಕಾಂಗ್ರೆಸ್ ಹೈಕಮಾಂಡ್ ನಡೆ ಸಿದ್ದರಾಮಯ್ಯ ಅವರಿಗೆ ಆಘಾತ ನೀಡಿದೆಯೋ ಇಲ್ಲವೋ, ಆದರೆ ಜಾತಿಗಣತಿ ಜಾರಿಯಾಗುತ್ತದೆ ಎಂದು ನಂಬಿದ್ದ ಕೋಟ್ಯಂತರ ಜನರ ಕನಸಿಗೆ ಕೊಳ್ಳಿ ಇಟ್ಟಿರುವುದು ಮಾತ್ರ ಸುಳ್ಳಲ್ಲ.

► ಘಟನೆ 2: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ಕಿತ್ತು ಹಾಕಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರನ್ನು ಅಮಾನತು ಮಾಡಿದರು. ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಯಿಂದ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗ ಮಾಡಿದರು. ಗೋವಿಂದರಾಜು ಮಾಡಿದ ಎಲ್ಲಾ ಕೆಲಸಗಳು ಅವರ ವೈಯಕ್ತಿಕ ಹಿತಾಸಕ್ತಿಗಾಗಿಯೇ ಮಾಡಿದವಲ್ಲ. ಪಕ್ಷದ, ಪಕ್ಷದ ನಾಯಕರ ಬೇಕು-ಬೇಡಗಳಿಗೆ ಪೂರಕವಾಗಿ ಮಾಡಿದವು. ಬೇಕಾದಾಗ ಬಳಸಿ ಬೇಡವಾದಾಗ ಬಿಸಾಡಿದರೆ ನಾಯಕನ ಮೇಲೆ ನಂಬಿಕೆ ಮೂಡುವುದು ಹೇಗೆ? ದಯಾನಂದ್ ಮತ್ತು ಹೇಮಂತ್ ನಿಂಬಾಳ್ಕರ್ ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿದ್ದವರು. ಇವರಿಂದ ಕರ್ತವ್ಯ ಲೋಪ ಆಗಿದೆ. ದುಪ್ಪಟ್ಟು ಪ್ರಮಾಣದ ಕರ್ತವ್ಯ ಲೋಪ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಂದಲೂ ಆಗಿದೆ. ಕರ್ತವ್ಯ ಲೋಪವನ್ನೇ ಪರಿಗಣಿಸುವುದಾದರೆ ಅವರಿಗೂ ಶಿಕ್ಷೆ ನೀಡಬೇಕಿತ್ತು. ಹೈಕಮಾಂಡ್ ದೊರೆಗಳ ಕೃಪೆ ಹೊಂದಿರುವ ಮುಖ್ಯ ಆರೋಪಿಯನ್ನು ಬಿಟ್ಟು ಆಪ್ತರನ್ನೇ ಬಲಿ ಕೊಡುವುದು ನಿಜವಾದ ನಾಯಕನ ಲಕ್ಷಣವಲ್ಲ.

► ಘಟನೆ 3: ಕೆ.ಎನ್. ರಾಜಣ್ಣ ಇತರ ಸಂದರ್ಭದಲ್ಲಿ ಆಡಿದ ಮಾತುಗಳು ಬೇರೆ. ಮತಗಳ್ಳತನದ ಬಗ್ಗೆ ಆಡಿದ ಮಾತುಗಳಲ್ಲಿ ಪ್ರಮಾದ ಎನ್ನುವ ಅಂಶಗಳಿರಲಿಲ್ಲ. ಅವರ ಮಾತುಗಳನ್ನು ತಿರುಚಿ ಸಂಪುಟದಿಂದ ವಜಾ ಮಾಡುವಂತೆ ಷಡ್ಯಂತ್ರ ನಡೆಸಲಾಯಿತು. ಸಿದ್ದರಾಮಯ್ಯ ಕಡೆಪಕ್ಷ ರಾಜಣ್ಣ ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು. ಏಕೆಂದರೆ ರಾಜಣ್ಣ ವಿಶ್ವಾಸ ಇಟ್ಟಿರುವುದು ಕಾಂಗ್ರೆಸ್ ಹೈಕಮಾಂಡ್ ಮೇಲಲ್ಲ, ಸಿದ್ದರಾಮಯ್ಯ ಮೇಲೆ. ರಾಜಣ್ಣ ಇಷ್ಟಾದ ನಂತರವೂ ಸಿದ್ದರಾಮಯ್ಯ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎನ್ನುವುದರಲ್ಲೇ ಅವರ ನಿಷ್ಠೆ ಎಂಥದ್ದು ಎನ್ನುವುದು ಗೊತ್ತಾಗುತ್ತದೆ. ನಿರ್ಣಾಯಕ ಸಂದರ್ಭಗಳಲ್ಲಿ ನಂಬಿದವರ ತಲೆ ಕಾಯುವುದು ನಿಜವಾದ ನಾಯಕನ ಕರ್ತವ್ಯ.

► ಘಟನೆ 4: ಒಳ ಮೀಸಲಾತಿ ಜಾರಿ ವಿಷಯದಲ್ಲಿ ಕಡೆಗೂ ಸರಿಯಾದ ರೀತಿಯ ವರ್ಗೀಕರಣ ಆಗಿಲ್ಲ. ಕೊರಮ, ಕೊರಚ, ಲಂಬಾಣಿ, ಭೋವಿ(ಕೊಲಂಬೋ)ಗಳ ಜೊತೆ ಸ್ಪರ್ಧೆ ಮಾಡಲು ನಮಗೆ ಸಾಮರ್ಥ್ಯ ಇಲ್ಲ ಎನ್ನುವ ಕಾರಣಕ್ಕಾಗಿಯೇ ಹೊಲೆಯ, ಮಾದಿಗರು ಒಳಮೀಸಲಾತಿಯ ಬೇಡಿಕೆ ಇಟ್ಟಿದ್ದರು. ಈಗ ಅಂಥ ಬಲಾಢ್ಯ ಕೊಲಂಬೋ ಜಾತಿಗಳ ಜೊತೆ ಅಬಲರಾದ ಅಲೆಮಾರಿಗಳನ್ನು ಸೇರಿಸಲಾಗಿದೆ. ಒಳ ಮೀಸಲಾತಿ ಜಾರಿ ಬಯಸುತ್ತಿದ್ದ ಇಡೀ ದಲಿತ ಸಮುದಾಯಕ್ಕೆ ನಿರೀಕ್ಷೆ ಇದ್ದದ್ದು ತಮ್ಮದೇ ಸಮುದಾಯದ ಅತಿರಥ-ಮಹಾರಥ ನಾಯಕರ ಮೇಲಲ್ಲ. ಸಿದ್ದರಾಮಯ್ಯ ಮೇಲೆ. ವಿಶೇಷವಾಗಿ ಅಲೆಮಾರಿಗಳು ತಲೆತಲಾಂತರದಿಂದ ಕಾದು ಕಡೆಗೆ ಸಿದ್ದರಾಮಯ್ಯ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ ಅದೇ ಸಿದ್ದರಾಮಯ್ಯ ಸರಕಾರ ಅಲೆಮಾರಿಗಳು ಇನ್ನೆಂದೂ ಮೇಲೇಳದಂತೆ ವರ್ಗೀಕರಣ ಮಾಡಿದೆ. ‘ಈ ವರ್ಗೀಕರಣ ಆಗಿರುವುದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಂಪುಟ ಸಭಾಂಗಣದಲ್ಲಿ ಅಲ್ಲ. ಡಾ. ಜಿ. ಪರಮೇಶ್ವರ್ ಮನೆಯಲ್ಲಿ. ಅಲ್ಲಿ 6-6-5 ನಿರ್ಣಯ ಮಾಡಿದವರು ಶೇ. 1ರಷ್ಟಿರುವ ಅಲೆಮಾರಿಗಳಿಗಾಗಿ ಶೇ. 4ರಷ್ಟಿರುವ ಕೊಲಂಬೋಗಳನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಒಪ್ಪಿದ್ದಾರೆ’ ಎನ್ನುವ ಮಾಹಿತಿಗಳಿವೆ. ಒಳ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಕಳೆದುಕೊಳ್ಳುವುದು ಅಥವಾ ಗಳಿಸಿಕೊಳ್ಳುವುದು (ಜಾತಿಗಣತಿ ಅಥವಾ ಹಿಂದುಳಿದವರ ವಿಷಯಕ್ಕೆ ಸಂಬಂಧಿಸಿದ ರೀತಿ) ಏನೂ ಇರಲಿಲ್ಲ. ಆದುದರಿಂದ ಅವರು ‘ಯಾರು ಏನುಬೇಕಾದರೂ ಅಂದುಕೊಳ್ಳಲಿ’ ಎಂದು ನ್ಯಾಯಬದ್ಧ ತೀರ್ಮಾನ ಮಾಡಬಹುದಿತ್ತು. ಇನ್ನೊಂದು ಮಾತಿದೆ. ಸರಕಾರದ ತೀರ್ಮಾನದ ಬಳಿಕ ಅಲೆಮಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಆ ನಿಯೋಗಕ್ಕೆ ‘ನೀವು ಶೇ. 1ರಷ್ಟು ಮೀಸಲಾತಿ ಕೇಳುತ್ತಿದ್ದೀರಿ. ನಾವು ಶೇ. 5ರಷ್ಟು ಮೀಸಲಾತಿ ಕೊಟ್ಟಿದ್ದೇವೆ’ ಎಂದು ಹೇಳಿ ಅಲೆಮಾರಿಗಳಿಗೆ ಮರು ಮಾತನಾಡಲು ಅವಕಾಶವನ್ನೂ ನೀಡದೆ ಕಳುಹಿಸಿಬಿಟ್ಟರಂತೆ. ಅವರು ಹಾಗೆ ಮಾಡಿದ್ದೇಯಾದರೆ ಅದನ್ನು ವಿವೇಕ ಎಂದು ಹೇಳಲು ಸಾಧ್ಯವಿಲ್ಲ.

► ಘಟನೆ 5: ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೆಸರು ಅಂತಿಮವಾಗಿತ್ತು. 2013ರಿಂದೀಚೆಗೆ ಸಿದ್ದರಾಮಯ್ಯ ಮಾಡಿದ ಪ್ರತಿ ಭಾಷಣ, ಟ್ವೀಟ್(x), ಫೇಸ್ ಬುಕ್ ಬರಹಗಳಲ್ಲಿ ದಿನೇಶ್ ಅಮಿನ್ ಮಟ್ಟು ಶ್ರಮ ಇದೆ. ಕೇಂದ್ರ ಸರಕಾರದ ತೆರಿಗೆ ತಾರತಮ್ಯದಿಂದ ಹಿಡಿದು ನೀರು, ನೆಲ, ನೀತಿ, ನಿರೂಪಣೆ ಸೇರಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಭಾಷಣಗಳಿಗಿಂತಲೂ ಅವರ ಟ್ವೀಟ್(x)ಗಳು ಪ್ರಖರವಾಗಿರುತ್ತಿದ್ದವು. ನಿಖರವಾಗಿರುತ್ತಿದ್ದವು. ಅದಕ್ಕೆ ದಿನೇಶ್ ಅಮಿನ್ ಮಟ್ಟು ಕಾರಣ. ಸೈದ್ಧಾಂತಿಕವಾಗಿಯಂತೂ ದಿನೇಶ್ ಅಮಿನ್ ಮಟ್ಟು ಕಾಂಗ್ರೆಸ್ ಪಕ್ಷಕ್ಕೆ ಆಸ್ತಿ ಆಗಬಲ್ಲವರಾಗಿದ್ದರು. ಇವರ ಸಾಮರ್ಥ್ಯ ಅರಿಯದ ಕಾಂಗ್ರೆಸ್ ನಾಯಕರು ‘ಕಾರ್ಯಕರ್ತರಿಗೆ ಕೊಡಿ, ಕಾಂಗ್ರೆಸಿಗಾಗಿ ಕೆಲಸ ಮಾಡಿದವರಿಗೆ ಕೊಡಿ, ತಮ್ಮ ಚೇಲಾಗಳಿಗೆ ಅವಕಾಶ ಮಾಡಿಕೊಡಿ’ ಎಂಬ ಚಿಲ್ಲರೆ ವಾದ ಮಂಡಿಸಿದರು. ಮಟ್ಟು ಕಾಂಗ್ರೆಸ್ ವಿರುದ್ಧ ಬರೆದಿದ್ದಾರೆ ಎನ್ನುವ ಕ್ಷುಲ್ಲಕ ಕಾರಣ (ನಿಜವಾದ ಕಾರಣ ಅದಾಗಿರುವ ಸಾಧ್ಯತೆ ತುಂಬಾ ಕಮ್ಮಿ) ನೀಡಿದರು. ಕಾಂಗ್ರೆಸ್ ನಾಯಕರಿಂದ ಇದಕ್ಕಿಂತ ಬೇರೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯ ಮಾಡಬಹುದಿತ್ತು. ದಿನೇಶ್ ಅಮಿನ್ ಮಟ್ಟು ಅವರನ್ನು ಸಮರ್ಥಿಸಿಕೊಳ್ಳಬಹುದಿತ್ತು. ಏಕೆಂದರೆ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಿದ್ದರೆ ದಿನೇಶ್ ಅಮಿನ್ ಮಟ್ಟು ಅವರಿಗಿಂತಲೂ ಹೆಚ್ಚು ಲಾಭ ಆಗುತ್ತಿದ್ದುದು ಸಿದ್ದರಾಮಯ್ಯ ಅವರಿಗೆ. ಅದಕ್ಕೂ ಮಿಗಿಲಾಗಿ ಹೆಚ್ಚು ಲಾಭ ಆಗುತ್ತಿದ್ದುದು ಬೌದ್ಧಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ. ಇದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ ಸಿದ್ದರಾಮಯ್ಯ ಅವರ ಜೊತೆ ಯಾರಾದರೂ ಇದ್ದಾರೆ ಎಂದರೆ ಅದು ದಿನೇಶ್ ಅಮಿನ್ ಮಟ್ಟು. ದಿನೇಶ್ ವಿಶ್ವಾಸಾರ್ಹತೆಯ ಮಟ್ಟ ಬಹಳ ಎತ್ತರದ್ದು. ದೇವರಾಜ ಅರಸು ಅವರಂಥ ನಾಯಕರಿದ್ದರೆ ದಿನೇಶ್ ಅಮಿನ್ ಮಟ್ಟು ಥರದ ವಿಶ್ವಾಸಾರ್ಹ, ಸಮರ್ಥ, ನಂಬಿಕಸ್ಥ ಜನರಿಗೆ ನ್ಯಾಯ ಸಿಗುತ್ತಿತ್ತು.

ಈ ಐದು ಪ್ರಮುಖ ಘಟನೆಗಳ ಮೂಲಕ ಸಿದ್ದರಾಮಯ್ಯ ದುರ್ಬಲರಾಗುತ್ತಿದ್ದಾರಾ ಅಥವಾ ಇಲ್ಲವಾ ಎಂಬ ಅಂದಾಜು ಮಾಡಬಹುದು. ಆದರೂ ಸಿದ್ದರಾಮಯ್ಯ ಅವರಂಥ ನುರಿತ ರಾಜಕಾರಣಿಗಳ ನಡೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಹೈಕಮಾಂಡ್ ಮಟ್ಟದಲ್ಲಿ ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ ಸಿದ್ದರಾಮಯ್ಯ ಪರ ನಿಲ್ಲುವ ಮತ್ತೊಬ್ಬ ನಾಯಕನಿಲ್ಲ. ಅಹಮದ್ ಪಟೇಲ್ ಅವರಂಥ ನಾಯಕರಂತೂ ಇಲ್ಲವೇ ಇಲ್ಲ. ದಿಲ್ಲಿ ಮೂಲಗಳ ಪ್ರಕಾರ ಬಿ.ಕೆ. ಹರಿಪ್ರಸಾದ್ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಆದರದು ಸಾಲುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಇಲ್ಲ.

ಇದರಿಂದಾಗಿ ಸಿದ್ದರಾಮಯ್ಯ ಹೈಕಮಾಂಡ್ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ತಾನು ಹೈಕಮಾಂಡ್ ಆಜ್ಞಾ ಪರಿಪಾಲಕ ಎಂಬುದನ್ನು ನಿರೂಪಿಸಬೇಕಾಗಿದೆ. ಇದೇ ಹಿನ್ನೆಲೆಯಲ್ಲಿ ಹೈಕಮಾಂಡ್ ಎಳೆಯುತ್ತಿರುವ ಗೆರೆಗಳನ್ನು ದಾಟುವ ಧೈರ್ಯ ತೋರದೆ ಇರಬಹುದು. ಹೀಗೆ ಹೈಕಮಾಂಡ್ ಮಟ್ಟದಲ್ಲಿ ಆಗುತ್ತಿರುವ ಒಂದೊಂದು ಸಣ್ಣಸಣ್ಣ ಸೋಲುಗಳು ಕೂಡ ಮುಂದೆ ಅಧಿಕಾರ ಉಳಿಸಿಕೊಳ್ಳುವ ಆಟದಲ್ಲಿ ದೊಡ್ಡ ಗೆಲುವನ್ನು ತಂದುಕೊಡಬಹುದು. ಖಂಡಿತಾ ಆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ಆ ರೀತಿ ಉಳಿಸಿಕೊಂಡ ಅಧಿಕಾರದಿಂದ ಸಿದ್ದರಾಮಯ್ಯ ಸಾಧಿಸುವುದಾದರೂ ಏನನ್ನು?

ಆಫ್ ದಿ ರೆಕಾರ್ಡ್!

ವಿಧಾನಸಭೆಯಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿದ್ದಕ್ಕೆ ಡಿ.ಕೆ. ಶಿವಕುಮಾರ್ ಭಾರೀ ಬೆಲೆ ತೆರಬೇಕಾಗಿದೆ. ಅವರು ಹೈಕಮಾಂಡ್ ಸೂಚನೆ ಇಲ್ಲದೆ ಕ್ಷಮೆ ಕೇಳುವಂಥ ದುರ್ಬಲ ನಾಯಕ ಅಂತೂ ಅಲ್ಲವೇ ಅಲ್ಲ. ಆದರೂ ಡಿ.ಕೆ. ಶಿವಕುಮಾರ್ ಅವರಿಂದ ಕ್ಷಮೆ ಕೇಳಿಸಿದೆ ಎಂದರೆ ಹೈಕಮಾಂಡ್ ಕೂಡ ಹಿಂದಿನಂತಿಲ್ಲ. ಡಿ.ಕೆ. ಶಿವಕುಮಾರ್ ನಡೆ ಸಿದ್ದರಾಮಯ್ಯ ಪಾಲಿಗೆ ವರದಾನವಾಗಿದೆ. ಸತತ ಹಿನ್ನಡೆಗಳಿಂದ ಜರ್ಜರಿತರಾಗಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರೆಸ್ಸೆಸ್ ಗೀತೆ ಹಾಡುತ್ತಿದ್ದಂತೆ ಪುಟಿದೆದ್ದಿದ್ದಾರೆ. ದಂಡಿನ ಜೊತೆ ಬಿಹಾರ ಚುನಾವಣಾ ಕಣಕ್ಕೂ ಹೋಗಿ ಬಂದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ‘ನಿಜವಾದ ನಿಮ್ಮ ಸೈದ್ಧಾಂತಿಕ ಹೋರಾಟದ ಸೈನಿಕ ನಾನೇ ಹೊರತು ಡಿ.ಕೆ. ಶಿವಕುಮಾರ್ ಅಲ್ಲ’ ಎಂಬ ಸಂದೇಶ ಕಳುಹಿಸಿದ್ದಾರೆ. ಈ ನಡುವೆ ನವೆಂಬರ್-

ಡಿಸೆಂಬರ್ ತಿಂಗಳಲ್ಲೂ ಯಾವ ಕ್ರಾಂತಿ ಆಗುವುದಿಲ್ಲ ಎಂಬ ಸುದ್ದಿಗಳು ದಿಲ್ಲಿಯಿಂದ ಕೇಳಿಬರುತ್ತಿವೆ. ಒಟ್ಟಿನಲ್ಲಿ, ಹಿಂದೊಮ್ಮೆ ಇದೇ ಅಂಕಣದಲ್ಲಿ ‘ಸಿದ್ದರಾಮಯ್ಯ ಅವರಂಥ ಅದೃಷ್ಟವಂತ ರಾಜಕಾರಣಿ ಇನ್ನೊಬ್ಬನಿಲ್ಲ’ ಎಂದು ಬರೆದಿದ್ದ ಮಾತುಗಳು ಮತ್ತೆ ನಿಜವಾಗತೊಡಗಿವೆ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X