Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. OBCಗೆ ಸಿದ್ದು ಆಪದ್ಬಾಂಧವರೋ...

OBCಗೆ ಸಿದ್ದು ಆಪದ್ಬಾಂಧವರೋ ಅಪಾಯಕಾರಿಯೋ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ30 Jun 2025 10:00 AM IST
share
OBCಗೆ ಸಿದ್ದು ಆಪದ್ಬಾಂಧವರೋ ಅಪಾಯಕಾರಿಯೋ?

ಸೂರಿಲ್ಲದಿದ್ದರೆ ಹೇಗೋ ಬದುಕಬಹುದು, ಊರೇ ಇಲ್ಲದಿದ್ದರೆ, ಆದರಿದು ಅಲೆಮಾರಿಗಳ ನಿತ್ಯ ಬದುಕು. ಇಂಥ ಅಲೆಮಾರಿಯಾಗಿ ಹುಟ್ಟಿ ಪವಾಡ ಎನ್ನುವಂತೆ ಒಬ್ಬ ಮಾತ್ರ ವಕೀಲರಾಗಿದ್ದರು. ಅದೇ ವೇಳೆ ಅವರ ಜನಕ್ಕೂ ನೆಲೆ ನಿಲ್ಲಬೇಕೆನಿಸಿತು. ವಾಸ ಮತ್ತು ಕೃಷಿಗೆ ಯೋಗ್ಯವಲ್ಲದ ಸರಕಾರಿ ಜಾಮೀನು ಹುಡುಕಿ ಗುಡಿಸಲು ಹಾಕಿಕೊಂಡು, ಸಮ ಮಾಡಿ, ಉತ್ತು, ಬಿತ್ತಿದರು. ಇನ್ನೇನು ಜೋಳದ ಬೆಳೆ ಬರಬೇಕೆನ್ನುವಷ್ಟರಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದನಗಳನ್ನು ನುಗ್ಗಿಸಿ ಬೆಳೆ ನಾಶ ಮಾಡಿದರು ಮತ್ತು ೨೯ ಗುಡಿಸಲುಗಳನ್ನು ಸುಟ್ಟುಹಾಕಿದರು. ಯುವ ವಕೀಲ ಕಂಗಾಲಾಗಿ ಬೇರೆ ದಾರಿಯಿಲ್ಲದೆ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ನೋಡಲೆಂದು ಬೆಂಗಳೂರಿಗೆ ಬಂದರು. ಮುಖ್ಯಮಂತ್ರಿಗಳ ಮನೆಯ ಕದ ಅಲೆಮಾರಿಗೆ ತೆರೆಯುವುದೇ? ಇಲ್ಲ. ಆದರೆ ಆ ವಕೀಲ ಬಿಡಲಿಲ್ಲ. ಮೂರ್ನಾಲ್ಕು ದಿನ ಅಲ್ಲೇ ಇದ್ದು, ಕಡೆಗೆ ಗೇಟ್ ಬಳಿ ಗಲಾಟೆ ಮಾಡಿದರು. ಇದನ್ನು ಗಮನಿಸಿದ ಅರಸು, ಅವರನ್ನು ಕರೆಸಿಕೊಂಡರು. ಅವರು ನೋವು ತೋಡಿಕೊಂಡರು. ಅರಸು ಸಮಸ್ಯೆಯನ್ನು ಬಗೆಹರಿಸಿ ಭೂಮಿ ಕೊಡಿಸಿದರು. ಅಷ್ಟು ಮಾತ್ರವಲ್ಲ ಮುಂದೆ ಅದೇ ಅಲೆಮಾರಿ ಸಮುದಾಯದ ಆ ಯುವ ವಕೀಲನನ್ನು ಕರೆದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸದಸ್ಯನನ್ನಾಗಿ ಮಾಡಿದರು. ಅವರೇ ಎಂ.ಎಸ್. ಹೆಳವರ್.

ಅದು ಅರಸು ಕಾಲ; ಅಬಲರನ್ನು, ಅನಾಥರನ್ನು, ಅಸ್ತಿತ್ವವೇ ಇಲ್ಲದವರನ್ನು ಗುರುತಿಸಲಾಗುತ್ತಿತ್ತು. ಸಿದ್ದರಾಮಯ್ಯ ಕಾಲ ಭಿನ್ನ; ಅದೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಮೊದಲ ಬಾರಿಗೆ ಒಕ್ಕಲಿಗರನ್ನು (ಕುಂಚಿಟಿಗ) ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ೧೯೯೭ರಲ್ಲಿ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಷ್ಟೊತ್ತಿಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಚೌಕಾಸಿ ಮಾಡಿದ್ದರಿಂದ ಅವರು ಪ್ರಭಾವಶಾಲಿಯೂ ಆಗಿದ್ದರು. ಮುಖ್ಯಮಂತ್ರಿ ಜೆ.ಎಚ್. ಪಟೇಲರು ಸಿದ್ದರಾಮಯ್ಯ ಅವರನ್ನು ಕೇಳದೆ ನೇಮಿಸಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವೇ ಇಲ್ಲ. ನಂತರ ಇದೇ ಪ್ರೊ. ರವಿವರ್ಮ ಕುಮಾರ್ ಅವರನ್ನು ೨೦೧೩ರಲ್ಲಿ ಅಡ್ವೊಕೇಟ್ ಜನರಲ್ ಮಾಡಿದರು. ಆದರೆ ಬಳಿಕ ಅವರು ಅರ್ಧದಲ್ಲೇ ಬಿಟ್ಟು ಹೋದರು.

ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಂತೆ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ) ಮಾಡಿಸುವುದಾಗಿ ಘೋಷಿಸಿದ್ದು ನಿಜಕ್ಕೂ ದಿಟ್ಟ ಕ್ರಮ. ಅಹಿಂದ ಜಾತಿಗಳ ದಶಕಗಳ ಕನಸು ನನಸಾಗುವ ದಿನ ಬರಲು ಶುರುವಾಯಿತೆಂದು ಅವರ ಬಗೆಗೆ ಇದ್ದ ನಿರೀಕ್ಷೆಗಳು ದ್ವಿಗುಣಗೊಂಡಿದ್ದವು. ಜೊತೆಯಲ್ಲಿಯೇ ಇಂಥದೊಂದು ಮಹತ್ವದ ಸಮೀಕ್ಷೆ ನಡೆಸುವ ಆಯೋಗಕ್ಕೆ ಸ್ವಜಾತಿಯ ಎಚ್. ಕಾಂತರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದಾಗ ಸಣ್ಣದನಿಯಲ್ಲಿ ಆಕ್ಷೇಪಗಳೂ ಹುಟ್ಟಿಕೊಂಡಿದ್ದವು. ಆದರೆ ಸಿದ್ದರಾಮಯ್ಯ ಮೇಲಿಟ್ಟಿದ್ದ ನಂಬಿಕೆಯ ಮುಂದೆ ಕಾಂತರಾಜು ನೇಮಕದ ಬಗೆಗಿನ ಅಸಹನೆ-ಆಕ್ಷೇಪಗಳು ಕೆಲವೇ ದಿನಗಳಲ್ಲಿ ಕರಗಿಹೋಗಿದ್ದವು. ಆಗ ಕೇಳಿಬರುತ್ತಿದ್ದ ಒಂದೇ ಮಾತೇನೆಂದರೆ ‘ಸಿದ್ದರಾಮಯ್ಯ ಬೇರೆಯವರನ್ನು ನೇಮಿಸಬಹುದಿತ್ತು’ ಎಂದು ಮಾತ್ರ. ಕೆಲವೊಮ್ಮೆ ಅರ್ಹರೇ ಆಗಿದ್ದರೂ ಅಧಿಕಾರಸ್ಥರು ಸ್ವಜಾತಿಯವರಿಂದ ಅಂತರ ಕಾಪಾಡಿಕೊಳ್ಳುವುದು ವಿಶ್ವಾಸಾರ್ಹತೆಯ ದೃಷ್ಟಿಯಿಂದ ಬಹಳ ಅಗತ್ಯವಾದುದು. ಮೊದಲಿಗೆ ಒಕ್ಕಲಿಗರನ್ನು, ನಂತರ ತಮ್ಮದೇ ಜಾತಿಯವರನ್ನು ಮತ್ತು ಇದೀಗ ಮುಂದುವರಿದ ಲಿಂಗಾಯತರಿಗೆ ಸಮಾನಾಂತರವಾದ ಪ್ರವರ್ಗ ೩Bನಲ್ಲೇ ಬರುವ ಬಂಟ ಜಾತಿಯ (ನಾಡವ ಯಾನೆ ಬಂಟ) ಮಧುಸೂದನ್ ಆರ್. ನಾಯ್ಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆೆ ಕೂಡ ಬಂಟ ಜಾತಿಗೆ ಸೇರಿದವರು. ಅದನ್ನಾದರೂ ಪರಿಗಣಿಸಿ ಬೇರೆಯವರಿಗೆ ಅವಕಾಶ ಕೊಡಬಹುದಿತ್ತು ಎಂದು ನಾಲ್ಕು ದಶಕ ರಾಜಕೀಯ ಮಾಡಿರುವ ಸಿದ್ದರಾಮಯ್ಯ ಅವರಿಗೆ ಹೊಳೆದಿಲ್ಲ ಎನ್ನುವುದೇ ಸೋಜಿಗ.

ಇಷ್ಟು ಸಾಲದೆಂಬಂತೆ ಐವರು ಸದಸ್ಯರ ನೇಮಕಾತಿಯಲ್ಲೂ ಅಸೂಕ್ಷ್ಮತೆ ಅಥವಾ ಅನ್ಯಾಯ ಮುಂದುವರಿದಿದೆ. ಒಕ್ಕಲಿಗ, ಲಿಂಗಾಯತ, ಕುರುಬ, ಈಡಿಗ ಮತ್ತು ಯಾದವರಿಗೆ ಮಣೆ ಹಾಕಲಾಗಿದೆ. ಹಿಂದೆ ಒಕ್ಕಲಿಗ, ಲಿಂಗಾಯತ ಜಾತಿಯ ಮುಖ್ಯಮಂತ್ರಿಗಳು ಕೂಡ ಅವರ ಸಮುದಾಯದವರನ್ನು ಆಯೋಗಕ್ಕೆ ಸದಸ್ಯರನ್ನಾಗಿ ನೇಮಿಸಿರಲಿಲ್ಲ. ಮುಂದೆ ಈ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಆಗ ಆಯೋಗಕ್ಕೆ ಮುಂದುವರಿದ ಒಕ್ಕಲಿಗರನ್ನು ನೇಮಿಸುವ ಪರಿಪಾಠಕ್ಕೆ ಮುನ್ನುಡಿ ಬರೆದಿದ್ದ ಸಿದ್ದರಾಮಯ್ಯ ಈಗ ಸದಸ್ಯ ಸ್ಥಾನಕ್ಕೆ ಒಕ್ಕಲಿಗರು ಮತ್ತು ಲಿಂಗಾಯತರನ್ನು ನೇಮಿಸುವ ಪರಂಪರೆಯನ್ನು ಹುಟ್ಟುಹಾಕಿದ್ದಾರೆ.

ಕುರುಬ ಮತ್ತು ಈಡಿಗರ ವಿಷಯಕ್ಕೆ ಬರುವುದಾದರೆ ಇವರೇ ಹಿಂದುಳಿದ ಜಾತಿಗಳ ಪೈಕಿ ಅತಿಹೆಚ್ಚು ಲಾಭ ಮಾಡಿಕೊಂಡವರು. ರಾಜಕೀಯ ಅಧಿಕಾರದಲ್ಲಿಯೂ ಅಗ್ರಪಾಲುಂಡವರು. ಪ್ರತೀ ಸರಕಾರದಲ್ಲೂ ಈ ಎರಡೂ ಸಮುದಾಯಗಳ ಸಚಿವರು ಇರುತ್ತಾರೆ. ಶಾಸಕರಿರುತ್ತಾರೆ. ಅಂಥ ಹಾಲುಂಡವರಿಗೆ ಆಯೋಗದಲ್ಲೂ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸಿದ್ದರಾಮಯ್ಯ ಮಾಡಿರುವ ನೇಮಕಾತಿ ಆದೇಶವನ್ನು ಪ್ರಬಲ ಸಮುದಾಯಗಳ ನಾಯಕರೇ ಕೈ ಹಿಡಿದು ಬರೆಸಿರಬಹುದೇನೋ ಎನ್ನುವಂತೆ ಭಾಸವಾಗುತ್ತಿದೆ. ಹಸಿದಸಿದು ಕುಸಿಯುತ್ತಿರುವ, ಮುಖ್ಯವಾಹಿನಿಯಿಂದ ಕಣ್ಮರೆಯಾಗುತ್ತಿರುವ, ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವ, ಅಲೆದಲೆದು ದಣಿಯುತ್ತಿರುವ ಸಮುದಾಯಗಳ ಒಳದನಿಗೆ ಕಿವಿಯಾಗಬೇಕು ಎಂಬ ಸೂಕ್ಷ್ಮತೆಯೇ ಇಲ್ಲದಂತಾಗಿದೆ.

ಕೆಲವರು ಒಕ್ಕಲಿಗ ಮತ್ತು ಲಿಂಗಾಯತ ಕೂಡ ಹಿಂದುಳಿದ ಸಮುದಾಯಗಳೇ ತಾನೇ ಎಂದು ಆಕ್ಷೇಪಿಸಬಹುದು. ತಾಂತ್ರಿಕವಾಗಿ ಅದು ನಿಜ. ಆದರೆ ಅವು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಮುಂದುವರಿದ ಸಮುದಾಯಗಳು ಎನ್ನುವುದನ್ನು ಎಲ್.ಜಿ. ಹಾವನೂರ್ ಆಯೋಗದಿಂದ ಹಿಡಿದು ಓ. ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಜಾತಿಗಳ ಹಿಂದುಳಿದಿರುವಿಕೆಯನ್ನು ಪರಿಗಣಿಸುವ ವಿಚಾರವಾಗಿ ನಡೆದ ವಿದ್ಯಮಾನಗಳು ಸಾರಿ ಸಾರಿ ಹೇಳಿವೆ. ಬಂಟ್ ಕೂಡ ಹಿಂದುಳಿದಿರುವುದರಲ್ಲಿ ಮುಂದುವರಿದ ಸಮುದಾಯ. ಇದೇ ತರ್ಕದ ಆಧಾರದಲ್ಲಿಯೇ ಕುರುಬ ಮತ್ತು ಈಡಿಗ ಸಮುದಾಯದವರನ್ನು ಬಿಟ್ಟು ಬೇರೆಯವರಿಗೂ ಅವಕಾಶದ ಬಾಗಿಲು ತೆಗೆಯಿರಿ ಎನ್ನುವ ತಕರಾರು ಎದ್ದಿರುವುದು. ಹೌದು, ಈ ದೂರಿಗೆ ಜೋರಾದ ದನಿಯಿಲ್ಲ. ಆದರೆ ನೋವುಣ್ಣುತ್ತಿರುವವರ ಮೌನದಲ್ಲಿ ಪಕ್ಕದಲ್ಲಿದ್ದುಕೊಂಡೇ ಪಾಯ ತೋಡುವವರ ವಿರುದ್ಧ ಅಸಾಧ್ಯ ಅಸಹನೆ ಬೆಳೆಯುತ್ತಾ ಹೋಗುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು.

ಹಿಂದುಳಿದವರು ಮಾತ್ರವೇ ಅಲ್ಲ, ಅಹಿಂದ ಸಮುದಾಯಗಳು ಸಿದ್ದರಾಮಯ್ಯ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟಿದ್ದವು. ಕೆಲ ಜಾತಿಗಳು ಮನಸಾರೆ ಮೆಚ್ಚಿಕೊಂಡಿದ್ದರೆ ಕೆಲವು ಅನಿವಾರ್ಯವಾಗಿ ಸಿದ್ದರಾಮಯ್ಯ ಅವರೇ ನಮ್ಮ ನಾಯಕ ಎಂದು ತಲೆ ಮೇಲೆ ಹೊತ್ತು ಮೆರೆಸಿದ್ದವು. ಅಲ್ಪಸಂಖ್ಯಾತರಲ್ಲಿ ಮುಸ್ಲಿಮರಿಗೆ ಈಗ ಅಝೀಝ್ ಸೇಠ್, ಜಾಫರ್ ಷರೀಫ್ ತರಹದ ನಾಯಕರಿಲ್ಲ. ನಿಜಕ್ಕೂ ಈಗ ಕರ್ನಾಟಕದ ಮುಸ್ಲಿಮ್ ನಾಯಕ ಸಿದ್ದರಾಮಯ್ಯ. ಅಷ್ಟರಮಟ್ಟಿಗೆ ಆ ಸಮುದಾಯ ಸಿದ್ದರಾಮಯ್ಯ ಅವರನ್ನು ನಂಬಿಕೊಂಡಿದೆ. ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಆಯೋಗ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು ಪರಿಶಿಷ್ಟ ಜಾತಿಯವರಿಗಿಂತಲೂ ದೈನೇಸಿಯಾಗಿದೆ ಎಂದು ಹೇಳಿದೆ. ೨೦೧೪ರ ನಂತರ ಮುಸ್ಲಿಮರ ಮೇಲೆ ದ್ವೇಷ ಬಿತ್ತುವ ಕೆಲಸ ಶರವೇಗದಲ್ಲಿ ಸಾಗುತ್ತಿದೆ. ಆದರೂ ಸಿದ್ದರಾಮಯ್ಯ ಅವರಿಗೆ ಆಯೋಗಕ್ಕೆ ಅಲ್ಪಸಂಖ್ಯಾತರೊಬ್ಬರನ್ನು ಸದಸ್ಯರನ್ನಾಗಿ ಮಾಡಬೇಕು ಅನಿಸಿಲ್ಲ.

ರಾಜ್ಯದ ಪರಿಶಿಷ್ಟ ಜಾತಿಯ ಜನ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಚ್. ಆಂಜನೇಯ ಅವರಿಗಿಂತ ಒಂದು ಗುಲಗಂಜಿ ತೂಕ ಜಾಸ್ತಿ ಸಿದ್ದರಾಮಯ್ಯ ಮೇಲೆ ವಿಶ್ವಾಸವಿಟ್ಟಿದ್ದಾರೆ. ಒಳ ಮೀಸಲಾತಿ ಜಾರಿ ವಿಷಯದಲ್ಲೂ ಮಾದಿಗರಿಗೆ ಭರವಸೆ ಇರುವುದು ಸಿದ್ದರಾಮಯ್ಯ ಅವರ ಮೇಲೆಯೇ. ಎಲ್ಲಾ ಸಮುದಾಯಗಳನ್ನು ಸೆಳೆದು ಕಟ್ಟಿಹಾಕಬಲ್ಲ ಯಾವುದೇ ತಂತು ಇಲ್ಲದಿರುವುದರಿಂದ ಹಿಂದುಳಿದ ಜಾತಿಗಳು ಅತಂತ್ರವಾಗಿವೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ಜಾತಿಗಳು ಬೇಡವಾದರೂ ಹಿಂದುಳಿದ ಜಾತಿಗಳಿಗೆ ಸಿದ್ದರಾಮಯ್ಯ ಬೇಕಾಗಿದ್ದಾರೆ. ಅತಂತ್ರ ಸ್ಥಿತಿ, ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಹಿಂದುಳಿದ ಜಾತಿಗಳು ಸಿದ್ದರಾಮಯ್ಯ ಅವರನ್ನು ಆಪದ್ಬಾಂಧವ ಎಂದೇ ಭಾವಿಸಿದ್ದವು. ಈಗಲೂ ಆ ಅನಿಸಿಕೆ ಸಂಪೂರ್ಣವಾಗಿ ಅಳಿಸಿಹೋಗಿಲ್ಲ. ಆದರೆ ಕೆಲ ನಿರ್ಣಾಯಕ ಸಂದರ್ಭಗಳಲ್ಲಿ ಅವರು ‘ಆಯ್ದ ಜಾತಿಗಳಿಗೆ’ ಮಾತ್ರವೇ ಮಣೆ ಹಾಕಿ ಅಪಾಯಕಾರಿ ಅನಿಸತೊಡಗಿದ್ದಾರೆ. ಇದಕ್ಕೂ ಮೊದಲು ಇದೇ ಆಯೋಗಕ್ಕೆ ಡಾ. ಸುಮನಾ ಬಲ್ಮಠ ಎಂಬವರನ್ನು ನೇಮಕ ಮಾಡಿದ್ದರು. ಸುಮನಾ ಅವರು ಬಿಜೆಪಿ ನಾಯಕರೊಬ್ಬರ ಆಪ್ತ ಸಹಾಯಕನ ಪತ್ನಿ ಎಂದು ಗೊತ್ತಾಗಿ ಅವರ ನೇಮಕಾತಿ ಆದೇಶವನ್ನು ಹಿಂಪಡೆಯಲಾಯಿತು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಂತಹ ಆಯಕಟ್ಟಿನ ಜಾಗಕ್ಕೆ ಪೂರ್ವಾಪರ ನೋಡದೆ ವಿರುದ್ಧ ವಿಚಾರಧಾರೆಯ ವ್ಯಕ್ತಿಯನ್ನು ನೇಮಿಸಿದ್ದು ಸರಕಾರಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎನ್ನುವುದನ್ನು ಬಿಡಿಸಿ ಹೇಳಿತ್ತು. ಈಗ ಮುಂದುವರಿದವರಿಗೆ ಮಣೆ ಹಾಕುವ ಮೂಲಕ ಹಿಂದುಳಿದವರ ಬಗ್ಗೆ ಬದ್ಧತೆಯೂ ಇಲ್ಲ ಎನ್ನುವುದನ್ನು ನಿರೂಪಿಸಿದೆ.

ಇತ್ತೀಚೆಗೆ ಕೆ.ಎನ್. ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ , ರಾಜಕಾರಣದಲ್ಲಿ ಎರಡು ವಿಧ. ಒಂದು ತತ್ವದ ರಾಜಕಾರಣ. ಇನ್ನೊಂದು ಅಧಿಕಾರದ ರಾಜಕಾರಣ. ಆದರೆ ರಾಜಣ್ಣ ಎರಡನ್ನೂ ಬಿಟ್ಟು ಸಮಯೋಚಿತ ರಾಜಕಾರಣ ಮಾಡಿದರು ಎಂದು ಹೇಳಿದರು. ಅವರ ಮಾತು ಉದ್ದೇಶಪೂರ್ವಕವೋ ಮೆಚ್ಚುಗೆ ಗಳಿಸುವ ತಂತ್ರವೋ ಗೊತ್ತಿಲ್ಲ. ಆದರೆ ಸಮಯಕ್ಕೆ ಉಚಿತವಾದ ರಾಜಕಾರಣ ಮಾಡುವುದು ಎಂದರೆ ಅವಕಾಶಕ್ಕೆ ತಕ್ಕಂಥ ಅಥವಾ ಅಧಿಕಾರ ಹಿಡಿಯಲು ಅಗತ್ಯ ಇರುವ ರಾಜಕಾರಣ ಮಾಡುವುದು ಎಂದೇ ಅರ್ಥ. ಈ ಮಾತು ಅದೇ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅನ್ವಯಿಸುವಂಥದ್ದು. ಅಧಿಕಾರಕ್ಕಾಗಿ ಮಾಡಿಕೊಂಡ ರಾಜಿಗಳು ಅವರ ಬಗ್ಗೆ ಇಂಥದೊಂದು ಅಭಿಪ್ರಾಯವನ್ನು ಹೊಮ್ಮಿಸುತ್ತಿವೆ. ಇತಿಹಾಸದ ಗೂಡಿಗೆ ಕೈಹಾಕಿದರೆ ಸಾಕಷ್ಟು ಸಾಕ್ಷ್ಯಗಳು ಸಿಗಬಹುದು. ಸದ್ಯಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಆಗಿರುವ ಸದಸ್ಯರ ನೇಮಕ ಸಿದ್ದರಾಮಯ್ಯ ಅವರ ಅಧಿಕಾರಸಿಂಧು ರಾಜಕಾರಣಕ್ಕೆ ಬಹಳ ಸ್ಪಷ್ಟ ಉದಾಹರಣೆ. ಅಹಿಂದ ಸಮುದಾಯಗಳ ಬಗ್ಗೆ ಅವರು ಹೊಂದಿರುವ ಹುಸಿ ಬದ್ಧತೆಗೆ ಹಿಡಿದ ಕನ್ನಡಿ. ಅಹಿಂದ ಮತ್ತು ಅಧಿಕಾರ ಎಂಬ ಎರಡು ಆಯ್ಕೆ ಎದುರಾದರೆ ಅಧಿಕಾರವನ್ನು ಬಿಗಿದಪ್ಪಿಕೊಳ್ಳುತ್ತಾರೆ ಎಂಬುದರ ನಿಚ್ಚಳವಾದ ನಿದರ್ಶನ.

ಆನ್ ರೆಕಾರ್ಡ್

ರಾಜ್ಯ ಕಾಂಗ್ರೆಸ್ನಲ್ಲಿ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಆಗುವುದು ಯಾವಾಗ? ಯಾರಿಗೆ ಅವಕಾಶ ಎನ್ನುವ ಚರ್ಚೆ ನಿಂತಿಲ್ಲ. ಸಿದ್ದರಾಮಯ್ಯ ಆದಷ್ಟು ಬೇಗ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರಿಗೆ ಹೇಳಿದ್ದಾರೆ. ಆದರೆ ದಿಲ್ಲಿ ಮೂಲಗಳ ಪ್ರಕಾರ ರಾಹುಲ್ ಗಾಂಧಿ ವಿದೇಶದಿಂದ ಬಾರದೆ ಸಮಸ್ಯೆ ಬಗೆಹರಿಯದು. ಅವರ ಜೊತೆ ಚರ್ಚಿಸಿದರೂ ಈಗಿರುವ ಪಟ್ಟಿ ಬದಲಾಗದು. ಏಕೆಂದರೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಹಳೆಯ ಪಟ್ಟಿಗೆ ಹೊಸ ಮುದ್ರೆ ಒತ್ತಿ ಎಂಬುದನ್ನು ಒತ್ತಿ ಹೇಳಿದ್ದಾರೆ.

ಸಿದ್ದರಾಮಯ್ಯಗಿಂತ ಜಾಸ್ತಿ ಮಲ್ಲಿಕಾರ್ಜುನ ಖರ್ಗೆ ಹಾಲಿ ಪಟ್ಟಿಯೇ ಅಂತಿಮಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಇತರರಂಥಲ್ಲ, ಯಾವುದೇ ಹೆಜ್ಜೆ ಇಡುವ ಮುನ್ನವೇ ನೂರು ಬಾರಿ ಯೋಚಿಸಿರುತ್ತಾರೆ. ಅಳೆದು-ತೂಗಿ ನಿರ್ಧರಿಸಿರುತ್ತಾರೆ. ಸುದೀರ್ಘ ರಾಜಕಾರಣ ಮತ್ತು ಆಡಳಿತ ಇತಿಹಾಸದಲ್ಲಿ ಸಹಿ ಹಾಕಿ ಹಿಂಪಡೆದ ಉದಾಹರಣೆಗಳು ಇಲ್ಲವೇ ಇಲ್ಲ ಎನ್ನಬಹುದು. ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ವಿಷಯದಲ್ಲೂ ಅವರೇ ಸಹಿ ಹಾಕಿ ಮುಖ್ಯಮಂತ್ರಿ ಕಚೇರಿಗೆ ಪಟ್ಟಿ ಕಳುಹಿಸಿದ್ದರು. ಈಗ ಮಾಡುವುದಿದ್ದರೆ ಮಾಡಿ ಅಥವಾ ಬಿಡಿ, ನಾನು ಮತ್ತೊಂದು ಪಟ್ಟಿಗೆ ಸಹಿ ಹಾಕುವುದಿಲ್ಲ ಎಂಬ ಸಂದೇಶವನ್ನು ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಅವರಿಗೆ ಕಳುಹಿಸಿದ್ದಾರೆ. ಖರ್ಗೆ ಮಾತು ಕೇಳಿ ವೇಣುಗೋಪಾಲ್ ಮತ್ತು ಸುರ್ಜೆವಾಲಾ ಕಂಗಾಲಾಗಿದ್ದಾರೆ. ಮೊದಲನೆಯದಾಗಿ ಖರ್ಗೆ ಹೈಕಮಾಂಡ್ ವಿಚಾರದಲ್ಲಿ ಹಠ ಮಾಡುವ ನಾಯಕರಲ್ಲ. ಅಂಥ ಖರ್ಗೆ ಪಟ್ಟು ಹಿಡಿಡಿದ್ದಾರೆಂದರೆ ಯಾವ ಬಂಡೆ ಅಡ್ಡಬಂದರೂ ಬಿಡಲ್ಲ ಎನ್ನಲಾಗುತ್ತಿದೆ. ಸದ್ಯಕ್ಕೆ ಪಟ್ಟಿಯಲ್ಲಿದ್ದವರಿಗೆ ವರದಾನವಾಗಿರುವುದು ಇದೇ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X