Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ...

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯರ ಸಹಕಾರವನ್ನು ತನ್ನ ತನಿಖಾ ಸಂಸ್ಥೆಗಳೇ ಅಲ್ಲಗಳೆದಿರುವಾಗ ಬಿಜೆಪಿ ಸರಕಾರ ಈಗ ಏನು ಹೇಳುತ್ತದೆ?

ಎನ್. ಕೇಶವ್ಎನ್. ಕೇಶವ್4 July 2025 12:40 PM IST
share
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯರ ಸಹಕಾರವನ್ನು ತನ್ನ ತನಿಖಾ ಸಂಸ್ಥೆಗಳೇ ಅಲ್ಲಗಳೆದಿರುವಾಗ ಬಿಜೆಪಿ ಸರಕಾರ ಈಗ ಏನು ಹೇಳುತ್ತದೆ?

ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿಯಾಗುತ್ತಿದ್ದಂತೆ ಕಾಶ್ಮೀರಿಗಳು ಆತಂಕಗೊಂಡಿದ್ದರು.

ಕಾಶ್ಮೀರದಿಂದ ಹೊರಗಿದ್ದವರಿಗೆ ಕೂಡ ಅಲ್ಲಿನ ತಮ್ಮ ಕುಟುಂಬದವರದ್ದೇ ಚಿಂತೆಯಾಗಿತ್ತು. ಭಯೋತ್ಪಾದಕ ದಾಳಿಯ ಎರಡು ದಿನಗಳ ನಂತರ ಪಂಜಾಬ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ವರದಿಗಳು ಬಂದಾಗ ಆತಂಕ ಇನ್ನೂ ಹೆಚ್ಚಿತ್ತು.

ಪಹಲ್ಗಾಮ್ ದಾಳಿಯಲ್ಲಿ ಸ್ಥಳೀಯ ಕಾಶ್ಮೀರಿಗಳ ಪಾತ್ರವಿದೆ ಎಂಬ ಆರೋಪಗಳ ಕಾರಣದಿಂದಾಗಿ, ಕಾಶ್ಮೀರಿಗಳ ಬಗ್ಗೆ ಮಡಿಲ ಮೀಡಿಯಾಗಳಲ್ಲಿ ದ್ವೇಷದ ವರದಿಗಳು ಬರತೊಡಗಿದ್ದವು. ಅವು ಪರಿಸ್ಥಿತಿ ಉದ್ವಿಗ್ನಗೊಳ್ಳುವುದಕ್ಕೆ ಎಡೆ ಮಾಡಿಕೊಟ್ಟಿದ್ದವು. ಇದರ ಪರಿಣಾಮವಾಗಿ ಅವರ ವಿರುದ್ಧ ಪ್ರತೀಕಾರದ ದಾಳಿಗಳು ನಡೆದವು.

ಒಂದು ಅಂದಾಜಿನ ಪ್ರಕಾರ, ಎಪ್ರಿಲ್ 22ರಿಂದ ಮೇ 8 ರವರೆಗೆ ಭಾರತದ ವಿವಿಧ ಭಾಗಗಳಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳನ್ನು ಗುರಿಯಾಗಿಸಿಕೊಂಡು 184 ದ್ವೇಷಾಪರಾಧಗಳು ನಡೆದಿವೆ.

ಆದರೆ, ಈಗ ಪಹಲ್ಗಾಮ್ ದಾಳಿಯ ಎರಡು ತಿಂಗಳ ನಂತರ, ದಾಳಿಯಲ್ಲಿ ಸ್ಥಳೀಯರ ಪಾತ್ರವಿಲ್ಲ ಎಂದು ಎನ್‌ಐಎ ಹೇಳುತ್ತಿದೆ.

ಪಹಲ್ಗಾಮ್ ದಾಳಿಯ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ಪಹಲ್ಗಾಮ್ ನಿವಾಸಿಗಳನ್ನು ಕಳೆದ ವಾರ ಎನ್‌ಐಎ ಬಂಧಿಸಿತು. ಪರ್ವೇಝ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂಬಿಬ್ಬರನ್ನು ಬಂಧಿಸಿರುವುದಾಗಿ ಅದು ಹೇಳಿತು.

ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರು ಈ ಹಿಂದೆ ಅಂದುಕೊಂಡಂತೆ ಕಾಶ್ಮೀರಿಗಳಲ್ಲ, ಅವರು ಲಷ್ಕರೆ ತಯ್ಯಿಬಾ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಎಂದು ಎನ್‌ಐಎ ಹೇಳಿದೆ.

ದಾಳಿ ನಡೆಸುವ ಮೊದಲು ಪರ್ವೇಝ್ ಮತ್ತು ಬಶೀರ್ ಮೂವರು ಭಯೋತ್ಪಾದಕರಿಗೆ ವಿಷಯದ ಬಗ್ಗೆ ಗೊತ್ತಿದ್ದೇ ಹಿಲ್ ಪಾರ್ಕ್‌ನಲ್ಲಿ ಆಶ್ರಯ ನೀಡಿದ್ದರು, ಭಯೋತ್ಪಾದಕರಿಗೆ ಊಟ ಮತ್ತಿತರ ವ್ಯವಸ್ಥೆ ಒದಗಿಸಿದ್ದರು ಎಂದು ಬಂಧಿತರ ಬಗ್ಗೆ ಎನ್‌ಐಎ ಹೇಳಿದೆ.

ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಶಂಕಿತ ದಾಳಿಕೋರರ ರೇಖಾಚಿತ್ರ ಬಿಡುಗಡೆ ಮಾಡಿದ್ದರು.

ಅವರಲ್ಲಿ ಒಬ್ಬನನ್ನು ಆದಿಲ್ ಥೋಕರ್ ಎಂದು ಗುರುತಿಸಲಾಗಿತ್ತು. ಪೊಲೀಸರು ಆತನನ್ನು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಗುರಿ ಗ್ರಾಮದ ಸ್ಥಳೀಯ ಉಗ್ರ ಎಂದು ಗುರುತಿಸಿದ್ದರು.

ರೇಖಾಚಿತ್ರದಲ್ಲಿದ್ದ ಎರಡನೇ ವ್ಯಕ್ತಿಯನ್ನು ಪಾಕಿಸ್ತಾನಿ ಪ್ರಜೆ ಮೂಸಾ ಎಂದು ಗುರುತಿಸಲಾಗಿತ್ತು. ಮೂರನೆಯವನನ್ನು ಅವಂತಿಪೋರಾ ಗ್ರಾಮದ ಸ್ಥಳೀಯ ಉಗ್ರ ಆಸಿಫ್ ಶೇಕ್ ಎಂದು ಗುರುತಿಸಲಾಗಿತ್ತು.

ಈ ನಡುವೆ, ಬೈಸರನ್‌ನಲ್ಲಿರುವ ಜಿಪ್‌ಲೈನ್ ಆಪರೇಟರ್ ಮುಝಮ್ಮಿಲ್ ಕುಮ್ ಹಾರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನದ ಮೇಲೆ ಎನ್‌ಐಎ ಆತನ ವಿಚಾರಣೆ ನಡೆಸಿತು.

ಆದರೆ ನಂತರ ಆತನನ್ನು ಬಿಡುಗಡೆ ಮಾಡಲಾಯಿತು.

ದಾಳಿಯಲ್ಲಿ ಸ್ಥಳೀಯರು ಭಾಗಿಯಾಗಿದ್ದಾರೆ ಎಂಬ ನಿರೂಪಣೆ ನಡುವೆಯೇ, ಸ್ಥಳೀಯ ಉಗ್ರರೆನ್ನಲಾದ ಸುಮಾರು 9 ಮನೆಗಳನ್ನು ಕೆಡವಲಾಯಿತು.

ಅದಕ್ಕೆ ಸ್ವಲ್ಪ ಮೊದಲು ಎನ್‌ಐಎ 14 ಸ್ಥಳೀಯ ಭಯೋತ್ಪಾದಕರ ಪಟ್ಟಿ ಬಿಡುಗಡೆ ಮಾಡಿತ್ತು.

ಕೆಡವಲಾದ ಮನೆಗಳಲ್ಲಿ ಆಸಿಫ್ ಶೇಕ್ ಮತ್ತು ಆದಿಲ್ ಥೋಕರ್ ಅವರ ಮನೆಗಳೂ ಸೇರಿದ್ದವೆನ್ನಲಾಗಿದೆ.

ಅಲ್ಲದೆ, ಎನ್‌ಐಎ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉಲ್ಲೇಖಿಸಲಾದ ಉಗ್ರರ ಮನೆಗಳು ಕೂಡ ಸೇರಿದ್ದವು.

ಆದರೆ ಈಗ ಅದೇ ಎನ್‌ಐಎ, ದಾಳಿಯಲ್ಲಿ ಸ್ಥಳೀಯರ ಪಾತ್ರವಿತ್ತೆಂಬುದು ಮಾಧ್ಯಮಗಳ ಊಹಾಪೋಹ ಎಂದಿದೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯೊಂದು, ರೇಖಾಚಿತ್ರದಲ್ಲಿರುವ ಮೂವರು ವ್ಯಕ್ತಿಗಳು ಪಹಲ್ಗಾಮ್ ದಾಳಿಕೋರರಲ್ಲ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಹೇಳಿದೆ.

ಇದರ ಬಗ್ಗೆ ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಸ್ಥಳೀಯರ ಪಾತ್ರವಿತ್ತು ಎಂದದ್ದು ಪಹಲ್ಗಾಮ್ ದಾಳಿ ತನಿಖೆಯಲ್ಲಿನ ಪ್ರಮುಖ ಲೋಪ ಎಂದು ಕಾಂಗ್ರೆಸ್ ಆರೋಪಿಸಿದೆ.

ಮೀಡಿಯಾಗಳಲ್ಲಿನ ಅಂತಹ ವರದಿಗಳು ಕಾಲ್ಪನಿಕ ಮತ್ತು ದಾರಿ ತಪ್ಪಿಸುವಂಥದ್ದು ಎಂದು ಎನ್‌ಐಎ ತನ್ನ ಜೂನ್ 23ರ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.

ಆದರೆ ಅದು ಯಾವುದೇ ವರದಿಯನ್ನು ಉಲ್ಲೇಖಿಸಲಿಲ್ಲ.

ತಾನು ಸಂಗ್ರಹಿಸಿದ ಪುರಾವೆಗಳು ಇನ್ನೂ ವಿಶ್ಲೇಷಣೆಯ ಹಂತದಲ್ಲಿವೆ. ಇನ್ನೂ ಏನನ್ನೂ ತೀರ್ಮಾನಿಸಿಲ್ಲ ಎಂದು ಅದು ಹೇಳಿದೆ. ಹಾಗಾದರೆ, ಪಹಲ್ಗಾಮ್ ಪ್ರಕರಣದಲ್ಲಿ ಅಪರಾಧಿಗಳ ಗುರುತಿನ ಬಗ್ಗೆ ಯಾಕೆ ಪರಸ್ಪರ ವಿರುದ್ಧ ಹೇಳಿಕೆಗಳಿದ್ದವು?

ಪಹಲ್ಗಾಮ್ ಪ್ರಕರಣದಲ್ಲಿ ಮಾತ್ರವಲ್ಲದೆ, ಸೆಪ್ಟಂಬರ್ 2023ರಲ್ಲಿ ಕೊಕರ್ನಾಗ್‌ನ ಗಡೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆಸಲಾಗಿದ್ದ ದಾಳಿಗಳಲ್ಲಿಯೂ ಸ್ಥಳೀಯರ ಕೈವಾಡವಿದೆ ಎಂದು ಪೊಲೀಸರು ಭಾವಿಸಿದ್ದರೆಂಬುದು ಗೊತ್ತಾಗುತ್ತದೆ.

ಆದರೆ ಆನಂತರ, ಆ ಪ್ರಕರಣದಲ್ಲಿನ ದಾಳಿಕೋರರು ಕೂಡ ವಿದೇಶಿ ಭಯೋತ್ಪಾದಕರು ಎಂದು ತಿಳಿದುಬಂದಿತ್ತು ಎಂಬುದನ್ನು ಅಧಿಕಾರಿಗಳೇ ಹೇಳುತ್ತಾರೆಂದು ‘ದಿ ಕ್ವಿಂಟ್’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಹಿಂದೆಯೂ ಇಂಥವು ನಡೆದಿವೆ.

2018ರಲ್ಲಿ ಖ್ಯಾತ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯಾದಾಗಲೂ, ಸ್ಥಳೀಯರ ಪಾತ್ರವಿರುವ ಅನುಮಾನದ ಮೇಲೆ ದೊಡ್ಡ ಪ್ರಮಾಣದ ಬಂಧನಗಳು ನಡೆದಿದ್ದವು.

ಹಿರಿಯ ಭದ್ರತಾ ಮೂಲಗಳ ಪ್ರಕಾರ, ಘಟನೆಯ ನಂತರ ಕಾಶ್ಮೀರದ ವಿವಿಧ ಭಾಗಗಳಲ್ಲಿ ಸುಮಾರು 4,000 ವ್ಯಕ್ತಿಗಳನ್ನು ಬಂಧಿಸಲಾಯಿತು. ಆದರೆ, ಅವರಲ್ಲಿ ಶೇ. 95ರಷ್ಟು ಜನರನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.

2019ರಿಂದ, ಸ್ಥಳೀಯವಾಗಿ ಉಗ್ರಗಾಮಿಗಳಿಗೆ ಬೆಂಬಲ ನೀಡುವ ಪ್ರಮಾಣದಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, 2020ರಲ್ಲಿ ಭಯೋತ್ಪಾದನೆಗೆ 160 ಸ್ಥಳೀಯರನ್ನು ಸೇರಿಸಿಕೊಳ್ಳಲಾಗಿತ್ತು.

2021ರಲ್ಲಿ ಅದು 125ಕ್ಕೆ ಇಳಿಯಿತು. 2022ರಲ್ಲಿ 130 ಆಯಿತು. 2023ರಲ್ಲಿ ಕೇವಲ 23, 2024ರಲ್ಲಿ 20 ಮತ್ತು ಆನಂತರ ಅದು 14ಕ್ಕೆ ಇಳಿದಿದೆ.

ಎನ್‌ಐಎ ಪಟ್ಟಿ ಪ್ರಕಾರ ಈಗಿರುವ ಸ್ಥಳೀಯ ಉಗ್ರರು 14 ಮಂದಿ ಮಾತ್ರ.

ಇದಕ್ಕೆ ಹೋಲಿಸಿದರೆ, ಜಮ್ಮು-ಕಾಶ್ಮೀರದಲ್ಲಿ ಸದ್ಯ ಕನಿಷ್ಠ 59 ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎನ್ನಲಾಗುತ್ತದೆ. ಅಂದರೆ, ಸ್ಥಳೀಯ ಭಯೋತ್ಪಾದಕರಿಗಿಂತ ನಾಲ್ಕು ಪಟ್ಟು ಹೆಚ್ಚು ವಿದೇಶಿ ಭಯೋತ್ಪಾದಕರು ಆ ಪ್ರದೇಶದಲ್ಲಿದ್ದಾರೆ.

2021-2022ರಲ್ಲಿ ಸ್ಥಳೀಯ ಬೆಂಬಲ ಬಹಳ ದೊಡ್ಡ ಪ್ರಮಾಣದಲ್ಲಿ ರಹಸ್ಯವಾಗಿ ತೀವ್ರಗೊಂಡಿತ್ತು ಎಂದು ವರದಿಗಳು ಹೇಳುತ್ತವೆ.

ಆ ಸಮಯದಲ್ಲಿ ನಾಗರಿಕರು ಅಥವಾ ಪೊಲೀಸರ ಹತ್ಯೆ ನಡೆಸುತ್ತಿದ್ದ ಯುವಕರು, ಘಟನೆ ಬಳಿಕ ಅಲ್ಲಿಂದ ಹೊರಹೋಗಿಬಿಡುತ್ತಿದ್ದರು.

2022ರ ಆರಂಭದಲ್ಲಿ ಕಾಶ್ಮೀರದಲ್ಲಿ ಗ್ರಾಮ ಸಮಿತಿ ಮುಖ್ಯಸ್ಥರ ಸರಣಿ ಹತ್ಯೆಗಳು ನಡೆದಿದ್ದವು. ಅವುಗಳಲ್ಲಿ ಸ್ಥಳೀಯರ ಬೆಂಬಲ ಇದ್ದುದರ ಬಗ್ಗೆ ಅನುಮಾನಗಳಿದ್ದವು.

ಈ ವರ್ಷ ಎಪ್ರಿಲ್ 24ರಂದು ಕುಲ್ಗಾಮ್‌ನಲ್ಲಿ ಭಯೋತ್ಪಾದಕ ಅಡಗುತಾಣವೊಂದರ ಮೇಲೆ ದಾಳಿ ನಡೆದಾಗಲೂ, ಭಯೋತ್ಪಾದಕರಿಗೆ ಸ್ಥಳೀಯರ ನೆರವು ಸಿಗುತ್ತಿದ್ದ ಬಗ್ಗೆ ಪುರಾವೆಗಳು ಕಂಡಿದ್ದವು. ಅಡಗುತಾಣಕ್ಕೆ ಆಹಾರ ಪದಾರ್ಥಗಳು, ಬಟ್ಟೆಗಳು ಮತ್ತು ಅಡುಗೆ ಎಣ್ಣೆ ಒದಗಿಸಲಾಗಿತ್ತು ಎಂಬುದು ಅಲ್ಲಿ ದಾಳಿ ನಡೆಸಿದಾಗ ತಿಳಿದಿತ್ತು.

ಆದರೂ, ಅದೇ ಸಮಯದಲ್ಲಿ ನಡೆದ ಪಹಲ್ಗಾಮ್ ದಾಳಿಯಲ್ಲಿ ಸ್ಥಳೀಯರ ಒಳಗೊಳ್ಳುವಿಕೆ ಇರುವ ಬಗ್ಗೆ ಈತನಕವೂ ಯಾವುದೇ ನಿರ್ಣಾಯಕ ಪುರಾವೆಗಳು ದೊರೆತಿಲ್ಲ ಎಂಬುದನ್ನು ಭದ್ರತಾ ಮೂಲಗಳೇ ಹೇಳುತ್ತಿವೆ ಎನ್ನಲಾಗಿದೆ.

ಹಾಗಾದರೆ, ಅಂಥ ನಿರೂಪಣೆ ಹೇಗೆ ಮುನ್ನೆಲೆಗೆ ಬಂತು ಎಂಬ ಪ್ರಶ್ನೆ ಏಳುತ್ತದೆ.

ಸಾರ್ವಜನಿಕ ಒತ್ತಡದಿಂದಾಗಿ ಅಥವಾ ರಾಜಕೀಯ ಕಾರಣಗಳಿಂದಾಗಿ ತನಿಖೆಗಳ ಬಗ್ಗೆ ಮಾಹಿತಿಯನ್ನು ಹೊರಹಾಕುವುದು ಅದಕ್ಕೆ ಕಾರಣ ಎಂಬುದು ಭದ್ರತಾ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಯಾವಾಗಲೂ ಹಲವಾರು ರೀತಿಯ ತನಿಖೆಗಳು ನಡೆಯುತ್ತವೆ. ಅವುಗಳಲ್ಲಿ ಒಂದು ಮಾತ್ರ ಅಂತಿಮವಾಗಿ ಸರಿಯಾಗಿರುತ್ತದೆ. ಅದಕ್ಕಾಗಿಯೇ ಅಧಿಕಾರಿಗಳು ತನಿಖೆ ಇನ್ನೂ ಬಾಕಿಯಿರುವಾಗ ಹೇಳಿಕೆಗಳನ್ನು ನೀಡಬಾರದು ಎಂದು ಪರಿಣಿತರು ಹೇಳುತ್ತಾರೆ.

ತಜ್ಞರ ಪ್ರಕಾರ, ಪಹಲ್ಗಾಮ್ ದಾಳಿಯ ಬಗ್ಗೆ ದುಷ್ಕರ್ಮಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆತುರ ಮತ್ತು ಅಜಾಗರೂಕತೆಯಿಂದ ಬಹಿರಂಗಪಡಿಸಲಾಯಿತು. ಅವುಗಳ ಬಗ್ಗೆ ಮಾಧ್ಯಮ ವರದಿಗಳು ಬಂದವು.ಅದು ಕಾಶ್ಮೀರಿಗಳ ಮೇಲೆ ಪ್ರತೀಕಾರದ ದಾಳಿಗಳಿಗೆ ಕಾರಣವಾಯಿತು. ಯಾವುದು ಆಗಬಾರದಿತ್ತೋ ಅದು ನಡೆಯಿತು.

ಹಾಗೆಯೇ ಇಲ್ಲಿ ಮೀಡಿಯಾಗಳಿಗೂ ಹೊಣೆಗಾರಿಕೆ ಇರಬೇಕು ಎನ್ನುತ್ತಾರೆ ಪರಿಣಿತರು. ಕಾಶ್ಮೀರದಂತಹ ವಿಷಯದಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ವರದಿ ಮಾಡಬೇಕು.

ಕಾಶ್ಮೀರಿಗಳೇ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ. ಮಿರ್‌ವೈಝ್ ಉಮರ್ ಫಾರೂಕ್ ಜಾಮಿಯಾ ಮಸೀದಿಯಲ್ಲಿ ಪಹಲ್ಗಾಮ್ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು.

ಈಗ, ದಾಳಿಯಲ್ಲಿ ಸ್ಥಳೀಯರ ಪಾತ್ರವಿಲ್ಲ ಎಂದು ಎನ್‌ಐಎ ಹೇಳಿರುವುದು ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸ್ಥಳೀಯರ ಕೈವಾಡ ಇರುವುದಾಗಿ ಸತತವಾಗಿ ಹೇಳುತ್ತ, ವಿಪರೀತ ಪರಿಣಾಮಗಳಿಗೆ ಕಾರಣವಾದ ಬಳಿಕ, ಈಗ ಅದನ್ನು ತನಿಖಾ ಏಜೆನ್ಸಿಯೇ ಅಲ್ಲಗಳೆದಿರುವಾಗ ಬಿಜೆಪಿ ಸರಕಾರ ಏನು ಹೇಳುತ್ತದೆ?

share
ಎನ್. ಕೇಶವ್
ಎನ್. ಕೇಶವ್
Next Story
X