Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾನವೀಯತೆಗೆ ಮಾದರಿ ‘ಜಿನೀವಾ ಒಪ್ಪಂದ’

ಮಾನವೀಯತೆಗೆ ಮಾದರಿ ‘ಜಿನೀವಾ ಒಪ್ಪಂದ’

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು12 Aug 2025 11:34 AM IST
share
ಮಾನವೀಯತೆಗೆ ಮಾದರಿ ‘ಜಿನೀವಾ ಒಪ್ಪಂದ’
ಇಂದು ಜಿನೀವಾ ಒಪ್ಪಂದ ದಿನ

ಅಂತರ್‌ರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದ ಒಂದು ಮಹತ್ತರ ಮೈಲಿಗಲ್ಲು. 1859ರ ಜೂನ್ 24ರಂದು ‘ಸಾಲ್ಫರಿನೋ’ ಕದನ, ಸತತ 15ಗಂಟೆಗಳವರೆಗೆ ನಡೆಯಿತು. ಒಂದೆಡೆ ಫ್ರಾನ್ಸ್ ಮತ್ತು ಇಟಲಿಯ ಸಂಯಕ್ತ ಸೈನ್ಯ ಇನ್ನೊಂದೆಡೆ ಆಸ್ಟ್ರಿಯಾದ ಸೈನ್ಯ ರಣರಂಗದಲ್ಲಿ ಭೀಕರವಾಗಿ ಕಾದಾಡಿದವು. ನೆಪೋಲಿಯನ್-3 ಸಾರಥ್ಯದಲ್ಲಿ ನಡೆದ ಈ ಕದನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸೈನಿಕರು ಕಾದಾಡಿದರು ಮತ್ತು ಲಕ್ಷಾಂತರ ಮಂದಿ ಮೃತ ಪಟ್ಟರು. ಯುದ್ಧ ಮುಗಿದಾಗ ರಣರಂಗದ ತುಂಬೆಲ್ಲಾ ಹೆಣಗಳ ರಾಶಿಯೇ ಬಿದ್ದಿತು. ಗಾಯಗೊಂಡವರಿಗೆ ಮತ್ತು ನೊಂದವರಿಗೆ ಸಾಂತ್ವನ ಹೇಳಲು, ಉಪಚರಿಸಲು, ಆಸ್ಪತ್ರೆಗಳು ಮತ್ತು ವೈದ್ಯರ ಸಂಖ್ಯೆ ಅತ್ಯಲ್ಪವಾಗಿತ್ತು. ನೊಂದವರ ಮತ್ತು ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟತ್ತು. ಹೆನ್ರಿ ಡ್ಯೂನಾಂಟ್ ಎಂಬ ಸ್ಪಿಸ್ ವ್ಯಾಪಾರಿ, ಈ ದೃಶ್ಯವನ್ನು ಕಂಡು ಮಮ್ಮಲ ಮರುಗಿ ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಗಾಯಗೊಂಡ ಎಲ್ಲ ಸೈನಿಕರನ್ನು ಯಾವುದೇ ದೇಶ, ಜಾತಿ, ಧರ್ಮಗಳ ಭೇದವಿಲ್ಲದೆ ಆಶ್ರಮಗಳಲ್ಲಿ, ಆರಾಧನಾಲಯಗಳಲ್ಲಿ ಮತ್ತು ಸೇನಾ ಪಾಳಯಗಳಲ್ಲಿ ಉಪಚರಿಸಿದರು. ದಿನ ಉರುಳಿ ಜನ ಯುದ್ಧವನ್ನು ಮರೆತರೂ ಹೆನ್ರಿ ಡ್ಯೂನಾಂಟ್ ಮರೆಯಲಿಲ್ಲ. ಯುದ್ಧದ ಬಗೆಗಿನ ವಿವರಗಳನ್ನು ‘ದಿ ಮೆಮೋರಿ ಆಪ್ ಸಾಲ್ಫರಿನೋ’ ಎಂಬ ಪುಸ್ತಕದಲ್ಲಿ ವಿವರಿಸಿ, ಜಗತ್ತಿನೆಲ್ಲೆಡೆ ಹಂಚಿದರು. ಅವರ ಪರಿಶ್ರಮದ ಫಲವಾಗಿಯೇ ರೆಡ್‌ಕ್ರಾಸ್ ಸಂಸ್ಥೆಯ ಉಗಮವಾಯಿತು. ಹೆನ್ರಿ ಡ್ಯೂನಾಂಟ್‌ನ ಇಚ್ಛೆಯಂತೆ ಅಂತರ್‌ರಾಷ್ಟ್ರೀಯ ಸ್ವಯಂ ಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲಿ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಇದರಲ್ಲಿನ ಸ್ವಯಂಸೇವಕರ ತಂಡವು ಯುದ್ಧ ಮುಗಿದ ಕೂಡಲೇ ಅಲ್ಲಿನ ಗಾಯಾಳುಗಳನ್ನು ಅವರ ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು. ಇದನ್ನು ಸಾಧ್ಯವಾಗಿಸಲು, ರಾಷ್ಟ್ರಗಳು, ಗಾಯಾಳು ಸೈನಿಕರನ್ನು ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು ಘೋಷಿಸಿ ಅಂತರ್‌ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ತೀರ್ಮಾನಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಮೂಲ ತತ್ವಗಳನ್ನು ಒಳಗೊಂಡ ಪ್ರಥಮ ಜಿನೀವಾ ಒಪ್ಪಂದವು 1864ರಲ್ಲಿ ಮಾಡಿಕೊಳ್ಳಲಾಗಿದ್ದು, ಅದಕ್ಕೆ ಡ್ಯೂನಾಂಟ್ ಸಹಿ ಮಾಡಿದರು. ಈ ಒಪ್ಪಂದಕ್ಕೆ 1864ರ ಆಗಸ್ಟ್ 12ರಂದು 12 ರಾಷ್ಟ್ರಗಳು ಸಹಿ ಮಾಡಿದವು. ಈ ಕಾರಣದಿಂದಲೇ ಆಗಸ್ಟ್ 12ನ್ನು ‘ಜಿನೀವಾ ಒಪ್ಪಂದ ದಿನ’ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಆನಂತರದ ದಿನಗಳಲ್ಲಿ ಯುದ್ಧ ಜರುಗುತ್ತಲೇ ಇದ್ದವು ಮತ್ತು ಅಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಾಗುತ್ತಿತ್ತು. ಒಟ್ಟಿನಲ್ಲಿ ಆಗಸ್ಟ್ 12ರ ಜಿನೀವಾ ಒಪ್ಪಂದ ವಿಶ್ವಶಾಂತಿಯನ್ನು ಭ್ರಾತೃತ್ವವನ್ನು ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವಲ್ಲಿಯ ಪ್ರಕ್ರಿಯೆಗೆ ಮುನ್ನುಡಿ ಬರೆಯಿತು. 1864ರ ವರೆಗೂ ರಾಷ್ಟ್ರಗಳನ್ನು ಖಾಯಂ ಆಗಿ ಬದ್ಧರಾಗಿಸಲು ಯಾವುದೇ ಒಪ್ಪಂದಗಳಿರಲಿಲ್ಲ. ಆದರೆ ಎರಡು ರಾಷ್ಟ್ರಗಳ ನಡುವೆ ಸೋತ ಸೈನ್ಯವನ್ನು ರಕ್ಷಿಸುವುದಕ್ಕಾಗಿ ಅಥವಾ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಒಡಂಬಡಿಕೆಗಳಾಗುತ್ತಿದ್ದವು. ಅಂತಹ ಒಡಂಬಡಿಕೆಗಳು ಖಾಯಂ ಒಪ್ಪಂದಗಳಾಗಿರಲಿಲ್ಲ. ಈ ಕಾರಣದಿಂದಲೇ ಜಿನೀವಾ ಒಪ್ಪಂದ ರೆಡ್‌ಕ್ರಾಸ್ ಮೂಲ ತತ್ವಗಳನ್ನು ಎತ್ತಿ ಹಿಡಿಯುವ ಮತ್ತು ಗೌರವಿಸುವ ದಿಶೆಯಲ್ಲಿ ಒಂದು ಮಹತ್ತರವಾದ ಹೆಜ್ಜೆ ಎಂದರೂ ತಪ್ಪಲ್ಲ.

ಜಿನೀವಾ ಒಪ್ಪಂದದ ಸಾರಾಂಶ ಈ ಕೆಳಗಿನಂತಿದೆ

ಮೊದಲ ಜಿನೀವಾ ಒಪ್ಪಂದಕ್ಕೆ 1864 ಆಗಸ್ಟ್ 12ರಂದು ಸಹಿ ಹಾಕಲಾಯಿತು. ಈ ಬಳಿಕ 2ನೇ ಒಪ್ಪಂದ 1906ರ ಜುಲೈ 6ರಂದು, 3ನೇ ಜಿನೀವಾ ಒಪ್ಪಂದ 1929ರ ಜುಲೈ 12ರಂದು ಹಾಗೂ ಅಂತಿಮವಾದ 4ನೇ ಜಿನೀವಾ ಒಪ್ಪಂದ 1946ರ ಆಗಸ್ಟ್ 12ರಂದು ಸಹಿ ಮಾಡಲ್ಪಟ್ಟಿತು. ಮೊದಲ 2 ಒಪ್ಪಂದಗಳು ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಸಂಬಂಧಿಸಿದ್ದರೆ, ಮೂರನೇ ಒಪ್ಪಂದ ಯುದ್ಧ ಕೈದಿಗಳಿಗೆ ಸಂಬಂಧಿಸಿದ ಒಪ್ಪಂದವಾಗಿದೆ. 4ನೇ ಒಪ್ಪಂದ ಯುದ್ಧ ಸಂದರ್ಭದಲ್ಲಿ ಯುದ್ಧೇತರ ನಾಗರಿಕ ವ್ಯಕ್ತಿಗಳ ಸಂರಕ್ಷಣೆಗೆ ಸಂಬಂಧಿಸಿದೆ. 4ನೇ ಒಪ್ಪಂದ ಯುದ್ಧ ಸಮಯದಲ್ಲಿ ಆಗುವ ದಂಗೆಯ ನಿಯಂತ್ರಣದ ಬಗ್ಗೆಯೂ ಒಳಗೊಂಡಿದೆ. * ಯುದ್ಧರಂಗದಲ್ಲಿ ಕಾಯಿಲೆ ಪೀಡಿತ ಹಾಗೂ ಗಾಯಾಳುಗಳನ್ನು ಗುರುತಿಸಬೇಕು, ರಕ್ಷಿಸಬೇಕು ಹಾಗೂ ವೈದ್ಯಕೀಯ ಉಪಚಾರ ಒದಗಿಸಬೇಕು. ಅಂಥವರ ರಾಷ್ಟ್ರೀಯತೆಯಲ್ಲಿ ಭೇದಭಾವ ತೋರಬಾರದು.

* ಯುದ್ಧದಲ್ಲಿ ಮೃತ ಪಟ್ಟವರನ್ನು ಪತ್ತೆಹಚ್ಚಬೇಕು ಹಾಗೂ ಅವರ ಮಾಹಿತಿ ವಿವರಗಳನ್ನು ರೆಡ್‌ಕ್ರಾಸ್ ಸಂಸ್ಥೆಗೆ ಒದಗಿಸಬೇಕು.

* ಗಾಯಗೊಂಡ ಸೈನಿಕರ ಹಾಗೂ ಶರಣಾಗತರಾದ ಸೇನಾ ತುಕಡಿಗಳ ಮೇಲೆ ಆಕ್ರಮಣ ಮಾಡಬಾರದು.

* ತುರ್ತು ಚಿಕಿತ್ಸಾ ಘಟಕ, ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇವರ ಮೇಲೆ ದಾಳಿ ಮಾಡುವಂತಿಲ್ಲ. ಇವರನ್ನು ಯುದ್ಧ ತಟಸ್ಥರೆಂದು ಪರಿಗಣಿಸಬೇಕು. ಅವರಿಗೆ ಸುರಕ್ಷತಾ ಭದ್ರತೆಯನ್ನು ಒದಗಿಸಬೇಕು.

* ಬಿಳಿ ಹಿನ್ನೆಲೆಯಲ್ಲಿನ ಕೆಂಪು ಕ್ರಾಸ್‌ನ್ನು ಸುರಕ್ಷಾ ಲಾಂಛನವಾಗಿ ಮಾನ್ಯತೆ ನೀಡಬೇಕು.

* ಒಪ್ಪಂದದಲ್ಲಿ ನಮೂದಿಸಲ್ಪಟ್ಟ ಆಸ್ಪತ್ರೆ ಹಾಗೂ ಇತರ ಸಂಘಟನೆಗಳನ್ನು ಯುದ್ಧದಲ್ಲಿ ನಿರತರಾದವರು ಯುದ್ಧಕ್ಕೆ ಬೆಂಬಲಿಸುವ ಯಾವುದೇ ಯುದ್ಧ ಕಾರ್ಯಗಳಿಗಾಗಿ ಬಳಸಬಾರದು.

* ಸೈನ್ಯಾಧಿಕಾರಿಗಳು, ಗಾಯಗೊಂಡ ಕಾಯಿಲೆಯಿಂದ ಮೃತರಾದ ಸೈನಿಕರ ಮಾಹಿತಿ ವಿವರಗಳನ್ನು ದಾಖಲಿಸಿಡುವ ಅಗತ್ಯವಿದೆ. ಈ ಮಾಹಿತಿಯನ್ನು ‘ಕೇಂದ್ರೀಯ ಯುದ್ಧ ಕೈದಿಗಳ ಏಜೆನ್ಸಿ’ ಎಂಬ ಮಧ್ಯವರ್ತಿ ಏಜೆನ್ಸಿಯ ಮೂಲಕ ವೈರಿ ಪಡೆಗೆ ತಿಳಿಸಬೇಕು.

* ಯುದ್ಧರಂಗದ ವ್ಯಾಪ್ತಿ ಪ್ರದೇಶದಲ್ಲಿರುವ ಇತರ ನಾಗರಿಕರು ಹಾಗೂ ಪರಿಹಾರಕಾರಕ ಸಂಘಟನೆಗಳ ಸಹಾಯವನ್ನು ಗಾಯಾಳುಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಅವರಿಗೆ ಚಿಕಿತ್ಸಾ ಉಪಚಾರವನ್ನು ಒದಗಿಸಲು ಪಡೆಯಬಹುದು. ಗಾಯಾಳುಗಳನ್ನು ಉಪಚರಿಸುವ ಇಂತಹ ವ್ಯಕ್ತಿಗಳಿಗೆ ತೊಂದರೆ ನೀಡಬಾರದು.

* ಯುದ್ಧಕೈದಿಗಳನ್ನು ಸುರಕ್ಷಿತ ಸ್ಥಳಗಳಲ್ಲಿಡಬೇಕು ಅವರಿಗೆ ಉತ್ತಮ ಆಹಾರ, ಬಟ್ಟೆ ಒದಗಿಸಬೇಕು, ಅಗತ್ಯವಾದಾಗ ವೈದ್ಯ ಕೀಯ ಉಪಚಾರವನ್ನು ನೀಡಬೇಕು. ತಮ್ಮ ಇಷ್ಟದಂತೆ ಆರಾಧನಾ ಸ್ವಾತಂತ್ರ್ಯ ಅವರಿಗಿರಬೇಕು.

* ನಿಗದಿಯ ಪತ್ರ ವ್ಯವಹಾರದ ಸೌಲಭ್ಯವನ್ನು ಅವರಿಗೆ ಒದಗಿಸಬೇಕು.

* ಯುದ್ಧ ಕೈದಿಗಳನ್ನು ಗೌರವಾದರಗಳಿಂದ ನೋಡಿಕೊಳ್ಳಬೇಕು.

* ಕೈದಿಗಳು ತಮ್ಮ ಹೆಸರು, ವಿಳಾಸ, ಗುರುತಿನ ಸಂಖ್ಯೆ ಮತ್ತು ಸೇನಾ ಪಡೆಯ ವಿವರ ಇತ್ಯಾದಿಗಳನ್ನು ಕೊಡಬೇಕಾಗುತ್ತದೆ.

* ರೆಡ್‌ಕ್ರಾಸ್ ಸಂಸ್ಥೆಯ ಅಂತರ್‌ರಾಷ್ಟ್ರೀಯ ಸಮಿತಿಗೆ ಪರಿಹಾರ ಸಾಮಾಗ್ರಿಯನ್ನು ವಿತರಿಸುವ ಸೌಲಭ್ಯ ಹೊಂದಿರಬೇಕು.

* ರೆಡ್‌ಕ್ರಾಸ್ ಸಂಸ್ಥೆಯ ಅಂತರ್‌ರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳಿಗೆ ಯುದ್ಧ ಕೈದಿಗಳನ್ನು ಅವರ ಶಿಬಿರಗಳನ್ನು ಭೇಟಿಯಾಗುವ ಸೌಲಭ್ಯಗಳಿರಬೇಕು. ಅವರ ಜೀವನ ಸ್ಥಿತಿ ಹಾಗೂ ಕುಂದು-ಕೊರತೆಗಳನ್ನು ತಿಳಿದುಕೊಳ್ಳಲು ಅವರೊಂದಿಗೆ ಖಾಸಗಿಯಾಗಿ ಸಮಾಲೋಚನೆ ಮಾಡಲು ಅವಕಾಶಗಳಿರಬೇಕು.

* ಯುದ್ಧ ಕೈದಿಗಳನ್ನು ಅಮಾನವೀಯ ಕೃತ್ಯಗಳಿಂದ ರಕ್ಷಿಸಬೇಕು ಅವರನ್ನು ಪ್ರಾಯೋಗಿಕ ಉದ್ದೇಶಗಳಿಗಾಗಿ ಬಳಸಬಾರದು. ಸಂರ್ಪಕ ನ್ಯಾಯ ವಿಚಾರಣೆ ನಡೆಸದೆ, ಅವರನ್ನು ಮರಣ ದಂಡನೆಗೆ ಗುರಿ ಪಡಿಸುವಂತಿಲ್ಲ.

* ಯುದ್ಧ ಕೈದಿಗಳನ್ನು ಪ್ರತೀ ಆರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.

* ಯುದ್ಧ ಕೈದಿಗಳನ್ನು ಅವರ ವಯಸ್ಸು ಹಾಗೂ ಲಿಂಗಕ್ಕನುಗುಣವಾಗಿ ಕಾರ್ಮಿಕರಾಗಿ ಉಪಯೋಗಿಸಬಹುದು.

* ಅಂಥ ಯುದ್ಧ ಕೈದಿ ಕಾರ್ಮಿಕರಿಗೆ ಅವರ ದರ್ಜೆಗನುಸಾರವಾಗಿ ಅವರು ಮಾಡಿದ ಕೆಲಸಕ್ಕೆ ಸಂಬಳ ಕೊಡಬೇಕು.

* ಯುದ್ಧ ಕೈದಿಗಳು ಗುಪ್ತ ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅನುಮತಿ ಇರಬೇಕು. ಈ ಪ್ರತಿನಿಧಿಗಳು ಸೈನ್ಯದ ಅಧಿಕಾರಿಗಳನ್ನು ಹಾಗೂ ರೆಡ್‌ಕ್ರಾಸ್‌ನ ಅಂತರ್‌ರಾಷ್ಟ್ರೀಯ ಸಮಿತಿಯ ಯುದ್ಧ ಕೈದಿಗಳ ಪರವಾಗಿ ಪ್ರಾತಿನಿಧ್ಯ ವಹಿಸಿ ಸಂಪರ್ಕಿಸುತ್ತಾರೆ.

* ಸುರಕ್ಷಿತ ವಲಯಗಳನ್ನು ನಿರ್ಮಿಸಬೇಕು. ಇವುಗಳೆಂದರೆ ಯುದ್ಧ ಗಾಯಾಳುಗಳನ್ನು ರಕ್ಷಿಸಲು ವ್ಯವಸ್ಥೆಮಾಡಿದ ಆಸ್ಪತ್ರೆಗಳು ಮತ್ತು ಪ್ರದೇಶಗಳಾಗಿವೆ. ಇಲ್ಲಿ ಗಾಯಾಳು ಸೈನಿಕರನ್ನು, ವೃದ್ಧ ವ್ಯಕ್ತಿಗಳನ್ನು 15 ವರ್ಷಕ್ಕಿಂತ ಕಿರಿಯ ಮಕ್ಕಳ ತಾಯಂದಿರನ್ನು ಯುದ್ಧ ಪರಿಣಾಮಗಳಿಂದ ರಕ್ಷಿಸುವ ಕಾರ್ಯವನ್ನು ಈ ಸುರಕ್ಷಿತ ವಲಯದಲ್ಲಿ ಕೈಗೊಳ್ಳಲಾಗುತ್ತದೆ. ಯುದ್ಧನಿರತ ಪಕ್ಷಗಳು ತಾವು ಆಕ್ರಮಿಸಿಕೊಂಡ ಅಥವಾ ಮುತ್ತಿಗೆ ಹಾಕಿದ ಸೈನ್ಯದಿಂದ ಗಾಯಾಳು ಸೈನಿಕರನ್ನು, ರೋಗಗ್ರಸ್ಥರನ್ನು, ವೃದ್ಧರನ್ನು, ಮಕ್ಕಳನ್ನು ಹಾಗೂ ಗರ್ಭಿಣಿಯಂದಿರನ್ನು ತಮ್ಮ ಆಕ್ರಮಣದಿಂದ ಹೊರತುಪಡಿಸಬೇಕು. ಪಾದ್ರಿಯರು, ವೈದ್ಯರು, ವೈದ್ಯಕೀಯ ಸಾಮಗ್ರಿ ಇತ್ಯಾದಿಗಳನ್ನು ಇಂಥ ಪ್ರದೇಶಗಳಿಗೆ ಮುಕ್ತವಾಗಿ ಚಲಿಸಲು ಅವಕಾಶವಿರಬೇಕು.

* ಯುದ್ಧದಲ್ಲಿನ ಗಾಯಾಳುಗಳನ್ನು, ಕಾಯಿಲೆಯಿಂದ ನರಳುತ್ತಿರುವವರನ್ನು ಮತ್ತು ಅವರನ್ನು ಉಪಚರಿಸುವ ವೈದ್ಯರನ್ನು ಹಾಗೂ ಆಸ್ಪತ್ರೆಗಳನ್ನು ಆಕ್ರಮಿಸಬಾರದು; ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸಬೇಕು.

* ವೈದ್ಯಕೀಯ ಹಾಗೂ ಆಸ್ಪತ್ರೆ ಸಾಮಗ್ರಿಗಳು ಹಾಗೂ ಧಾರ್ಮಿಕ ಪೂಜಾ ಸಾಮಗ್ರಿಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಾಗಿಸಲು ಅನುಮತಿಯಿರಬೇಕು.

* ಯುದ್ಧದಿಂದ ಅನಾಥರಾದ ಅಥವಾ ಕುಟುಂಬದಿಂದ ಬೇರ್ಪಟ್ಟ 15 ವಯಸ್ಸಿಗಿಂತ ಕಿರಿಯ ವಯಸ್ಸಿನ ಮಕ್ಕಳನ್ನು ಅವರ ಧಾರ್ಮಿಕ ಪದ್ಧತಿಯಂತೆ ಶಿಕ್ಷಣ ಹಾಗೂ ಇನ್ನಿತರ ವ್ಯವಸ್ಥೆ ಒದಗಿಸಿ ನೋಡಿಕೊಳ್ಳಬೇಕು.

* ಎಲ್ಲ ವ್ಯಕ್ತಿಗಳೂ, ದೂರ ಪ್ರದೇಶದಲ್ಲಿರುವ ತಮ್ಮ ಕುಟುಂಬದವರಿಗೆ ಕ್ಷೇಮ ಸಮಾಚಾರವನ್ನು ತಲುಪಿಸುವ, ಅವರಿಂದ ಪಡೆಯುವುದಕ್ಕಾಗಿ ಅನುಮತಿಯಿರಬೇಕು.

* ಆಕ್ರಮಿತ ಪ್ರದೇಶದ ಗಡಿಯಿಂದ ಆಕ್ರಮಿಸುವ ಅಧಿಕಾರಿಶಾಹಿಯ ಪ್ರದೇಶಕ್ಕೆ ಆಶ್ರಿತ ವ್ತಕ್ತಿಗಳನ್ನು ಸ್ಥಳಾಂತರಿಸುವುದನ್ನು ನಿಷೇಧಿಸುವುದು.

* ಆಕ್ರಮಿಸುವ ಅಧಿಕಾರಶಾಹಿಯ ಮಕ್ಕಳ ಪೋಷಣೆ ಮತ್ತು ಶಿಕ್ಷಣಕ್ಕಾಗಿ ನಿಯೋಜಿತವಾಗಿರುವ ಸಂಸ್ಥೆಗಳೊಂದಿಗೆ ಸೌಹಾರ್ದದಿಂದ ವರ್ತಿಸಬೇಕು.

* ಆಕ್ರಮಿಸಿರುವ ಪ್ರದೇಶದ ನಾಗರಿಕರಿಗೆ ಆಹಾರದ ಹಾಗೂ ಇತರ ಸಾಮಗ್ರಿಗಳ ಸಮರ್ಪಕ ಪೂರೈಕೆಗಾಗಿ ಆಕ್ರಮಿಸುವ ಅಧಿಕಾರ ಶಾಹಿಯು ವ್ಯವಸ್ಥೆಮಾಡಬೇಕು.

* ಖಾಸಗಿ ಆಸ್ತಿಗಳನ್ನು ಹಾಳುಮಾಡುವುದನ್ನು ನಿಷೇಧಿಸಲಾಗಿದೆ.

* ಜನರಿಗೆ ಪರಿಹಾರ ಸಾಮಗ್ರಿ ಒದಗಿಸಲು ಮತ್ತು ತನ್ನ ಮಾನವೀಯ ಕಾರ್ಯಗಳನ್ನು ನಿರ್ವಹಿಸಲು ರಾಷ್ಟ್ರೀಯ ರೆಡ್‌ಕ್ರಾಸ್ ಸೊಸೈಟಿಗೆ ಅನುಮತಿಯಿರಬೇಕು.

* ಬಂಧಿತ ನಾಗರಿಕರನ್ನು ಕೆಲಸ ಮಾಡಲು ಒತ್ತಾಯ ಪಡಿಸಬಾರದು.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X