Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಚೀಂದ್ರನಾಥ್ ಸನ್ಯಾಲ್ : ಇವರಾರೂ ಕ್ಷಮೆ...

ಶಚೀಂದ್ರನಾಥ್ ಸನ್ಯಾಲ್ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ14 Dec 2025 10:54 AM IST
share
ಶಚೀಂದ್ರನಾಥ್ ಸನ್ಯಾಲ್ : ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ಭಾಗ - 8

ಶಚೀಂದ್ರನಾಥ್ ಸನ್ಯಾಲ್ ಒಂದು ತಲೆಮಾರಿನ ಕ್ರಾಂತಿಕಾರಿಗಳ ಪರಮ ಗುರು. 1893ರ ಜೂನ್‌ನಲ್ಲಿ ವಾರಣಾಸಿಯಲ್ಲಿ ಸನ್ಯಾಲ್ ಜನಿಸಿದರು. ಇವರ ತಂದೆ ಬ್ರಿಟಿಷ್ ಸರಕಾರದಲ್ಲಿ ಆಢ್ಯ ಸ್ಥಾನ ಹೊಂದಿದ್ದರು (ಚೀಫ್ ಅಕೌಂಟಂಟ್ ಹುದ್ದೆ) ಓದಿನ ಮಧ್ಯದಲ್ಲೇ ಹೋರಾಟದ ಅಖಾಡಕ್ಕೆ ಧುಮುಕಿದ ಸನ್ಯಾಲ್ 1913ರಲ್ಲಿ ಪಾಟ್ನಾದಲ್ಲಿ ಅನುಶೀಲನ್ ಸಮಿತಿಯ ಶಾಖೆಯನ್ನು ಸ್ಥಾಪಿಸಿದರು.

ಈ ಅನುಶೀಲನ್ ಸಮಿತಿ ವ್ಯಾಯಾಮಶಾಲೆಯ ನೆಪದಲ್ಲಿ ಕ್ರಾಂತಿಕಾರಿ ಚಿಂತನೆಗಳನ್ನು ಉದ್ದೀಪನಗೊಳಿಸಲು ಸ್ಥಾಪಿತವಾದ ಸಂಸ್ಥೆ. ವಿವೇಕಾನಂದರ ಆಶಯದಂತೆ ಭಗಿನಿ ನಿವೇದಿತಾ ಅವರ ಪ್ರೋತ್ಸಾಹದೊಂದಿಗೆ ಈ ಸಮಿತಿಗಳು ಸ್ಥಾಪಿತವಾದವು. ಸನ್ಯಾಲ್ ಇದರ ಪ್ರಭಾವಕ್ಕೆ ಬರುವ ವೇಳೆಗೆ ಬಂಗಾಳದಲ್ಲಿ ನೂರಾರು ಶಾಖೆಗಳು ಹರಡಿದ್ದವು. ಆರಂಭಿಕ ಕ್ರಾಂತಿಕಾರಿಗಳೆಲ್ಲಾ ಈ ಅಖಾಡದಿಂದಲೇ ಹೊಮ್ಮಿದ್ದು. ಇದಕ್ಕೂ ಮೊದಲು ಸುವಿಖ್ಯಾತ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಅವರೊಂದಿಗೆ ಕೈ ಜೋಡಿಸಿದ ಸನ್ಯಾಲ್ 1912ರಲ್ಲಿ ವೈಸರಾಯ್ ಹಾರ್ಡಿಂಜ್ ಅವರ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿಯಾಗಿದ್ದರು. ಬಾಂಬು ದಾಳಿ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲ್ಲಾಡಿಸಿತು. ಈ ಘಟನೆಯಲ್ಲಿ ಹಾರ್ಡಿಂಜ್ ಅವರಿಗೆ ಗಾಯವಾದರೂ ಬದುಕುಳಿದರು.

ಭಾರತದ ರಾಜಧಾನಿಯನ್ನು ದಿಲ್ಲಿಗೆ ವರ್ಗಾಯಿಸಲು ತೀರ್ಮಾನಿಸಿ ಆ ಸಂಬಂಧ ನಡೆದ ಜಂಬೂ ಸವಾರಿ ಇದು.

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಬಹುತೇಕ ಕ್ರಾಂತಿಕಾರಿಗಳನ್ನು ಸೆರೆ ಹಿಡಿದರು. ರಾಸ್ ಬಿಹಾರಿ ಬೋಸ್ ಜಪಾನಿಗೆ ಹೋಗಿ ತಪ್ಪಿಸಿಕೊಂಡರು. ಈ ಬಾಂಬು ಎಸೆದ ಬಸಂತ ಕುಮಾರ್ ಬಿಸ್ವಾಸ್ ಸಹಿತ ಕೆಲವರನ್ನು ಗಲ್ಲಿಗೇರಿಸಲಾಯಿತು.

ಇದಕ್ಕೂ ಮೊದಲು ಗದ್ದರ್ ಬಂಡಾಯದ ಸಂಚಿನಲ್ಲೂ ಸನ್ಯಾಲ್ ಸಕ್ರಿಯವಾಗಿದ್ದರು. ಅಮೆರಿಕ, ಕೆನಡಾ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ; ಅಲ್ಲಿ ದುಡಿಯುತ್ತಿದ್ದ ಭಾರತೀಯರು ಕಟ್ಟಿದ ಸಂಘಟನೆ ಇದು. ಇದರ ಭಾಗವಾಗಿ ಭಾರತದಲ್ಲಿ ಸಶಸ್ತ್ರ ಕ್ರಾಂತಿ ಮಾಡಲು ಶಸ್ತ್ರಾಸ್ತ್ರ ಸಹಿತ ನೂರಾರು ಗದ್ದರ್ ಸದಸ್ಯರು ಭಾರತಕ್ಕೆ ಬಂದಿಳಿದ್ದರು. ಆದರೆ ಈ ಬಂಡಾಯ ಕಾರ್ಯರೂಪಕ್ಕೆ ಬರುವ ಮೊದಲೇ ಬ್ರಿಟಿಷರು ಇದರ ಸುಳಿವು ಪಡೆದು ಇದನ್ನು ನಿಷ್ಫಲಗೊಳಿಸಿದ್ದಷ್ಟೇ ಅಲ್ಲ, ಬಹುತೇಕ ಕ್ರಾಂತಿಕಾರಿಗಳನ್ನು ಬಂಧಿಸಿದರು. ಪಿಂಗ್ಳೆ, ಸರಭ್ ಮುಂತಾದ ತರುಣ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲಾಯಿತು.

ಸನ್ಯಾಲ್ ಅವರನ್ನು ಈ ಒಳಸಂಚುಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಿ ಅಂಡಮಾನ್‌ಗೆ ರವಾನಿಸಲಾಯಿತು. ಅಲ್ಲಿಂದ 1922ರಲ್ಲಿ ಬಿಡುಗಡೆಯಾದ ಬಳಿಕವೂ ಸನ್ಯಾಲ್ ತಮ್ಮ ಕ್ರಾಂತಿಕಾರಿ ಚಟುವಟಿಕೆ ಮುಂದುವರಿಸಿದರು.

ಅಸಹಕಾರ ಚಳವಳಿ ಏಕಾಏಕಿ ನಿಂತ ಬಳಿಕ ಭ್ರಮನಿರಸನಗೊಂಡ ಹಲವಾರು ತರುಣರು ಸಶಸ್ತ್ರ ಕ್ರಾಂತಿಗಾಗಿ ಸಂಘಟಿತರಾದರು. ಈ ಪ್ರಯತ್ನಗಳ ಫಲವಾಗಿ ಸನ್ಯಾಲ್ 1924ರಲ್ಲಿ ರಾಮಪ್ರಸಾದ್ ಬಿಸ್ಮಿಲ್ ಮತ್ತಿತರ ಸಂಗಾತಿಗಳೊಂದಿಗೆ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನನ್ನು ಆರಂಭಿಸಿದರು. ಈ ಸಂಘಟನೆಯ ಪ್ರಣಾಳಿಕೆಯೊಂದನ್ನು ಸನ್ಯಾಲ್ ಸಿದ್ಧಪಡಿಸಿದ್ದರು. ಇದು ‘ಹಳದಿ ಪುಸ್ತಿಕೆ’ ಎಂದೇ ಖ್ಯಾತವಾಗಿದೆ. ಕ್ರಾಂತಿಕಾರಿಗಳು ಕನಸು ಕಂಡ ಭವಿಷ್ಯ ಭಾರತದ ಬಗ್ಗೆ ಅಪೂರ್ವ ಕಾಣ್ಕೆ ಹೊಂದಿರುವ ದಾಖಲೆ ಇದು.

ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ರಾಮಪ್ರಸಾದ್ ಬಿಸ್ಮಿಲ್, ಅಷ್ಫಾಕುಲ್ಲಾ ಮತ್ತಿತರರಿಗೆ ನೇಣು ಶಿಕ್ಷೆಯಾದರೆ ಸನ್ಯಾಲ್‌ರನ್ನು ಬ್ರಿಟಿಷ್ ಸರಕಾರ ಮತ್ತೆ ಅಂಡಮಾನ್‌ಗೆ ಕಳಿಸಿತು. ಎರಡು ಬಾರಿ ಅಂಡಮಾನ್ ಶಿಕ್ಷೆ ಅನುಭವಿಸಿದ ಏಕೈಕ ಕ್ರಾಂತಿಕಾರಿ ಸನ್ಯಾಲ್ ಒಬ್ಬರೇ ಇರಬೇಕು. ಟಾಗೋರ್, ಗಾಂಧಿ ಅವರ ಒಕ್ಕೊರಲಿನ ಒತ್ತಾಯದ ಮೇರೆಗೆ ಬ್ರಿಟಿಷ್ ಸರಕಾರ ಅಂಡಮಾನ್‌ನ ಕೈದಿಗಳನ್ನು ಬಿಡುಗಡೆ ಮಾಡಿ. ಕೆಲವರನ್ನು ದೇಶೀಯ ಜೈಲುಗಳಲ್ಲಿ ಇಟ್ಟಿತು. ಈ ವೇಳೆಗೆ ಕ್ಷಯ ರೋಗ ಅಂಟಿದ ಕಾರಣ ಸನ್ಯಾಲ್ ಆರೋಗ್ಯ ಹದಗೆಟ್ಟಿತು. ಗೋರಖ್‌ಪುರ್ ಜೈಲಿನಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾಗಲೇ ಅಂದರೆ 1942ರ ಫೆಬ್ರವರಿ 7ರಂದು ಸನ್ಯಾಲ್ ಕೊನೆ ಉಸಿರೆಳೆದರು.

ಶಚೀಂದ್ರನಾಥ್ ಸನ್ಯಾಲ್ ಅವರ ಸಹೋದರ ಭೂಪೇಂದ್ರನಾಥ ಸನ್ಯಾಲ್ ಕೂಡಾ ಕ್ರಾಂತಿಕಾರಿ. ಅಣ್ಣನೊಂದಿಗೆ ಹೆಗಲೆಣೆಯಾಗಿ ಕೆಲಸ ಮಾಡಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಿದವರು.

ಅಂಡಮಾನ್‌ನ ಭೀಕರ ಜೈಲು ಅನುಭವದ ಬಗ್ಗೆ ಸನ್ಯಾಲ್ ಬರೆದ ‘ಬಂದಿ ಜೀವನ್’ ಒಂದು ಅಪೂರ್ವ ದಾಖಲೆ. ಅದೀಗ ಇಂಗ್ಲಿಷ್‌ಗೂ ಅನುವಾದವಾಗಿ ಲಭ್ಯವಿದೆ.

ಹಳದಿ ಪುಸ್ತಿಕೆ-ಪ್ರಣಾಳಿಕೆಯ ಆಯ್ದ ಭಾಗ: (ಕುತೂಹಲದ ಅಂಶವೆಂದರೆ ಈ ಪ್ರಣಾಳಿಕೆಯಲ್ಲಿ ಸನ್ಯಾಲ್ Right to Recallನ್ನು ಮಂಡಿಸುತ್ತಾರೆ.)

‘‘ಹೊಸ ತಾರೆ ಹುಟ್ಟಲು ಅರಾಜಕತೆಯ ಅವಶ್ಯಕತೆ ಇದೆ. ಹೊಸ ಹುಟ್ಟಿನೊಂದಿಗೆ ನೋವು ಮತ್ತು ನರಳಾಟ ಇದ್ದೇ ಇರುತ್ತದೆ. ಭಾರತ ಅಂಥಾ ಒಂದು ಹೊಸ ಹುಟ್ಟು ಪಡೆಯುತ್ತಿದೆ. ಆ ಅನಿವಾರ್ಯ ಹಂತ ದಾಟುತ್ತಿದೆ. ಅರಾಜಕತೆ ಮತ್ತು ಸಂಕಷ್ಟ ಅವುಗಳ ಪಾತ್ರ ನಿರ್ವಹಿಸುವಾಗ, ಎಲ್ಲಾ ಲೆಕ್ಕಾಚಾರಗಳೂ ವ್ಯರ್ಥವಾಗುವಾಗ, ಸರಳ ಮತ್ತು ಅಶಕ್ತರನ್ನು ನೋಡಿ ಶಕ್ತ ಮತ್ತು ಮೇಧಾವಿಗಳು ದಿಗ್ಭ್ರಮೆ ವ್ಯಕ್ತಪಡಿಸುವಾಗ, ದೊಡ್ಡ ಸಾಮ್ರಾಜ್ಯಗಳು ಕುಸಿದು ಬೀಳುವಾಗ ಹೊಸ ದೇಶಗಳು ಉದಯಿಸಿ ಮನುಕುಲವನ್ನು ಚಕಿತಗೊಳಿಸಲಿವೆ. ಜಗತ್ತನ್ನೇ ನಡುಗಿಸುತ್ತಿರುವ ಈ ಹೊಸ ಶಕ್ತಿ ತೆರೆಮರೆಯ ಶಕ್ತಿ, ಭಾರತದ ಯುವ ಮನಸ್ಸುಗಳಲ್ಲೂ ಕಾಣಿಸುತ್ತಿದೆ. ಮೇಧಾವಿಗಳು ಉದಾಸೀನ ತೋರುತ್ತಿದ್ದರೂ ಇದೊಂದು ಚಳವಳಿಯ ರೂಪ ಪಡೆಯುತ್ತಿದೆ. ಇದನ್ನು ಕೆಲವು ಹುಚ್ಚು ಯುವಕರ ಹುಚ್ಚು ಕನಸೆಂದು ಅವರು ಹೇಳುತ್ತಿದ್ದಾರೆ. ಇದು ತರುಣ ಭಾರತದ ಕ್ರಾಂತಿಕಾರಿ ಚಳವಳಿ. ಈ ಕ್ರಾಂತಿಕಾರಿ ಚಳವಳಿ ಅಂಜುಬುರುಕರನ್ನು ಅಸ್ಥಿರಗೊಳಿಸಿದೆ. ಆರೋಗ್ಯವಂತರನ್ನು ಸ್ಫೂರ್ತಿಗೊಳಿಸಿದೆ. ಪಂಡಿತರನ್ನು ಚಕಿತಗೊಳಿಸಿದೆ. ವಸಂತ ಋತುವಿನ ಆಗಮನವನ್ನು ಹೇಗೆ ತಡೆಯುವುದು ಅಸಾಧ್ಯವೋ ಹಾಗೇ ಈ ಚಳವಳಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ತಾನು ಯಾವ ಉದ್ದೇಶಕ್ಕಾಗಿ ಜನ್ಮ ತಳೆಯಿತೋ ಆ ಉದ್ದೇಶ ಪೂರ್ತಿಯಾಗುವವರೆಗೆ ಇದು ಸಾಯುವುದಿಲ್ಲ ಸರ್ವಾಧಿಕಾರಿಗಳು ಇದನ್ನು ದಮನಿಸಬಹುದು. ಸಂದೇಹಿಗಳು ಇದನ್ನು ಗೇಲಿ ಮಾಡಬಹುದು. ಆದರೆ ಚಿಂತನೆಗಳನ್ನು ಕತ್ತಿಯ ಮೂಲಕ ನಾಶಪಡಿಸಲಾಗುವುದಿಲ್ಲ. ನಮ್ಮ ಕಣಕಣದಲ್ಲಿ ಹುಟ್ಟಿರುವ ಈ ಉದಾತ್ತ ಪ್ರವೃತ್ತಿಯನ್ನು ನಿರ್ಲಕ್ಷಿಸಲಾಗದು.

ಈ ಕ್ರಾಂತಿಕಾರಿ ಚಳವಳಿ ಈ ದೇಶದಲ್ಲಿ ಚಿಗುರಿರುವ ಹೊಸ ಬದುಕಿನ ಚಿಹ್ನೆ. ಇದನ್ನು ಧಿಕ್ಕರಿಸುವುದೆಂದರೆ ತನ್ನ ತಿಳುವಳಿಕೆಯನ್ನೇ ಧಿಕ್ಕರಿಸಿದಂತೆ. ಇಪ್ಪತ್ತು ವರ್ಷಗಳ ನಿರ್ದಯ ದಮನ ಇದನ್ನು ಪುಡಿ ಮಾಡಲಾಗಲಿಲ್ಲ. ದೊಡ್ಡ ನಾಯಕರು ಇದನ್ನು ಧಿಕ್ಕರಿಸಿದರೂ ಇದರ ಬೆಳವಣಿಗೆಯನ್ನು ನಿಲ್ಲಿಸಲಾಗಲಿಲ್ಲ. ಚಳವಳಿ ಹಿಂದೆಂದಿಗಿಂತಲೂ ಈಗ ಬಲಾಢ್ಯವಾಗಿದೆ. ಈ ಕ್ರಾಂತಿಕಾರಿ ಪಕ್ಷದ ಭವಿಷ್ಯ ಇಂದಿನಷ್ಟು ಉಜ್ವಲವಾಗಿ ಹಿಂದೆಂದೂ ಇರಲಿಲ್ಲ. ಭವಿಷ್ಯ ಸಾಬೀತಾಗಿದೆ. ವಿದೇಶೀಯರಿಗೆ ಇಂಡಿಯಾವನ್ನು ಆಳುವ ಹಕ್ಕಿಲ್ಲ. ಆದ್ದರಿಂದಲೇ ಅವರನ್ನು ಓಡಿಸಬೇಕಿದೆ ವಿದೇಶೀ ಆಡಳಿತದ ಸಹಜ ಪರಿಣಾಮಗಳು ಹಲವಿವೆ.ಖಡ್ಗದ ಸಮರ್ಥನೆ ಬಿಟ್ಟರೆ ಅದರ ಅಸ್ತಿತ್ವಕ್ಕೆ ಬೇರೆ ಕಾರಣಗಳಿಲ್ಲ. ಆದ್ದರಿಂದ ಕ್ರಾಂತಿಕಾರಿ ಪಕ್ಷ ಖಡ್ಗ ಬಳಸುತ್ತಿದೆ. ಆದರೆ ಈ ಖಡ್ಗದ ಅಲಗಿನ ತುದಿಯಲ್ಲಿ ಚಿಂತನೆಗಳಿವೆ ಕ್ರಾಂತಿಕಾರಿ ಪಕ್ಷದ ತಕ್ಷಣದ ರಾಜಕೀಯ ಕ್ಷೇತ್ರದ ಉದ್ದೇಶ: ಸಶಸ್ತ್ರ ಕ್ರಾಂತಿಯ ಮೂಲಕ ಭಾರತದಲ್ಲಿ ಸಂಯುಕ್ತ ಒಕ್ಕೂಟವನ್ನು ಸ್ಥಾಪಿಸುವುದು ಭಾರತದ ಪ್ರತಿನಿಧಿಗಳು ತಮ್ಮ ನಿರ್ಧಾರವನ್ನು ಚಲಾಯಿಸುವ ಅಧಿಕಾರ ಹೊಂದಿದ ತಕ್ಷಣ ಈ ಗಣರಾಜ್ಯದ ಸಂವಿಧಾನವನ್ನು ರೂಪಿಸಲಾಗುವುದು. ಆದರೆ ಈ ಗಣರಾಜ್ಯದ ಮೂಲ ತತ್ವಗಳೆಂದರೆ ಎಲ್ಲರಿಗೂ ಮತದಾನದ ಹಕ್ಕು ಹಾಗೂ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಶೋಷಿಸುವ ಯಾವುದೇ ವ್ಯವಸ್ಥೆಗಳಿದ್ದರೂ ಅವುಗಳ ನಿಷೇಧ. ರೈಲ್ವೆ, ಸಾಗಣೆ, ಸಂಪರ್ಕ, ಕೈಗಾರಿಕೆಗಳು, ಹಡಗು ಸಂಚಾರ ಇತ್ಯಾದಿಗಳ ರಾಷ್ಟ್ರೀಕರಣ ಮಾಡಲಾಗುವುದು. ಈ ಗಣರಾಜ್ಯದಲ್ಲಿ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸುವ ಹಕ್ಕು ಮತದಾರರಿಗೆ ಇರುತ್ತದೆ. ಇದಿಲ್ಲದಿದ್ದರೆ ಪ್ರಜಾಸತ್ತೆ ಎಂಬುದು ಅಣಕವಾಗುತ್ತದೆ ಈ ಪ್ರಜಾಸತ್ತೆಯಲ್ಲಿ ಶಾಸಕಾಂಗವು ಕಾರ್ಯಾಂಗವನ್ನು ನಿಯಂತ್ರಿಸುವ ಅಧಿಕಾರ ಹೊಂದಿರುತ್ತದೆ’’

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X