Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ...

ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅತ್ಯಂತ ಅಪಾಯಕಾರಿ : ರೋಲೊ ರೋಮಿಗ್

ಕಾರ್ತಿಕ್ ವೆಂಕಟೇಶ್ಕಾರ್ತಿಕ್ ವೆಂಕಟೇಶ್7 Sept 2025 10:52 AM IST
share
ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅತ್ಯಂತ ಅಪಾಯಕಾರಿ : ರೋಲೊ ರೋಮಿಗ್
ಸಂದರ್ಶನ

ಸಂದರ್ಶನ: ಕಾರ್ತಿಕ್ ವೆಂಕಟೇಶ್

ರೋಲೊ ರೋಮಿಗ್: ಸನಾತನ ಸಂಸ್ಥೆಯು ಹೆಚ್ಚು ಉದ್ರೇಕಕಾರಿಯಾಗಿ ಜನರೊಂದಿಗೆ ಸಂವಹನ ನಡೆಸುತ್ತದೆ. ಇದು ಮಹತ್ವದ ಉದ್ದೇಶವೊಂದನ್ನು ಈಡೇರಿಸುತ್ತದೆ ಕೂಡ. ಪ್ರಧಾನ ಸಂಘಟನೆಯ ಭಾಗವಾಗಿರದ ನೇಪಥ್ಯದಲ್ಲಿರುವ ಈ ಗುಂಪುಗಳು ಆಕ್ರೋಶಭರಿತವಾಗಿ ಮತ್ತು ಉದ್ರೇಕಕಾರಿಯಾಗಿ ಮಾತನಾಡುವ ಮೂಲಕ, ಮಾತುಗಳ ಸ್ವೀಕಾರಾರ್ಹತೆಯ ಗಡಿಗಳನ್ನು ಹಿಗ್ಗಿಸುತ್ತಾ ಹೋಗುತ್ತವೆ. ಬಳಿಕ, ಈ ಗುಂಪುಗಳ ಹೇಳಿಕೆಗಳನ್ನು ಮುಖ್ಯವಾಹಿನಿಯಲ್ಲಿರುವ ಸಂಘಟನೆಗಳು ಸಂದರ್ಭಕ್ಕೆ ತಕ್ಕಂತೆ ಸ್ವೀಕರಿಸಬಹುದು ಅಥವಾ ಆ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳಬಹುದು.

ಸನಾತನ ಸಂಸ್ಥೆಯು ಈ ಹಿಂಸಾಚಾರದಿಂದ ತುಂಬಾ ಚಾಣಾಕ್ಷತನದಿಂದ ಅಂತರ ಕಾಯ್ದುಕೊಂಡಿದೆ. ಆರೆಸ್ಸೆಸ್ ಏನು ಮಾಡುತ್ತದೆಯೋ ಅದೇ ರೀತಿಯಲ್ಲಿ ಈ ಸಂಘಟನೆಯೂ ತನ್ನ ಹಿಂಸಾಕೃತ್ಯಗಳಿಂದ ಅಂತರ ಘೋಷಿಸುತ್ತದೆ. ಅದು ಈ ಕೆಲಸಕ್ಕಾಗಿ ಹಲವು ಸಂಘಟನೆಗಳನ್ನು ಹೊಂದಿದೆ ಹಾಗೂ ಅವುಗಳು ಒಂದೇ ಅಲ್ಲ ಎಂಬಂತೆ ನಟಿಸುತ್ತದೆ. ಅಲ್ಲಿ ಆಧ್ಯಾತ್ಮಿಕ ಗುಂಪಿದೆ, ರಾಜಕೀಯ ಘಟಕವಿದೆ ಮತ್ತು ಅಂತರ್‌ರಾಷ್ಟ್ರೀಯ ಮತಾಂತರ ಘಟಕವೊಂದನ್ನೂ ಹೊಂದಿದೆ. ಈ ಮತಾಂತರ ಘಟಕವು ಹಲವು ದೇಶಗಳ ಆಸಕ್ತರನ್ನು ಆಕರ್ಷಿಸುತ್ತದೆ. ಶ್ವೇತವರ್ಣೀಯರೇ ಹೆಚ್ಚಾಗಿರುವ ಈ ಆಸಕ್ತರನ್ನು ಆಕರ್ಷಿಸಲು ಅದು ತೀರಾ ವಿಭಿನ್ನ ಮುಖವನ್ನು ಧರಿಸುತ್ತದೆ. ಅವುಗಳೆಲ್ಲವೂ ಒಂದೇ ಸಂಘಟನೆ. ಆದರೆ ಪ್ರತಿಯೊಂದನ್ನೂ ಬೇರೆ ಬೇರೆ ಹೆಸರಿನಿಂದ ಕರೆದಾಗ ಮತ್ತು ಅವುಗಳು ಒಂದೇ ಗುಂಪಿಗೆ ಸೇರಿದವುಗಳಲ್ಲ ಎಂಬುದಾಗಿ ಅವರು ನಟಿಸುವಾಗ ಗೊಂದಲವಂತೂ ಸೃಷ್ಟಿಯಾಗುತ್ತದೆ. ಗೌರಿ ಲಂಕೇಶ್ ಹತ್ಯೆಯಿಂದ ಅಂತರ ಕಾಪಾಡಿಕೊಳ್ಳುವ ಕೆಲಸವನ್ನು ಸನಾತನ ಸಂಸ್ಥೆಯು ಯಶಸ್ವಿಯಾಗಿ ಮಾಡಿತು.

ಗೌರಿ ಹತ್ಯೆ ಅಥವಾ ಇತರ ಮೂವರು ಲೇಖಕರ ಹತ್ಯೆಗಳಲ್ಲಿ ಸನಾತನ ಸಂಸ್ಥೆಯ ಮೇಲೆ ನೇರವಾಗಿ ಆರೋಪ ಹೊರಿಸಲಾಗಲಿಲ್ಲ. ಆದರೆ, ಈ ಲೇಖಕರನ್ನು ಕೊಂದವರು ಸನಾತನ ಸಂಸ್ಥೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ನಂಟು ಹೊಂದಿದವರಾಗಿದ್ದರು. ಕೆಲವರು ಸನಾತನ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರು, ಕೆಲವರು ಸನಾತನ ಸಂಸ್ಥೆಯ ನಾಯಕತ್ವ ಹುದ್ದೆಗಳಲ್ಲಿದ್ದವರು.

ಪ್ರತಿಯೊಂದು ಪ್ರಕರಣದಲ್ಲೂ, ಹಂತಕರು ಜಾಗರೂಕತೆಯಿಂದ ತಂತ್ರಗಾರಿಕೆಗಳನ್ನು ರೂಪಿಸಿದ್ದರು. ಹತ್ಯೆಗಳನ್ನು ನಡೆಸುವ ಮೊದಲು ಅವರು ಸನಾತನ ಸಂಸ್ಥೆಯ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಪಿತೂರಿಯ ಅವಧಿಯಲ್ಲಿ ಅವರು ಸನಾತನ ಸಂಸ್ಥೆಯ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆದರೆ, ಈ ಕೊಲೆಗಳಿಂದ ಸನಾತನ ಸಂಸ್ಥೆಯು ಅಂತರ ಕಾಯ್ದುಕೊಂಡಿರುವುದು ಕೆಲಸ ಮಾಡಿತು. ಸನಾತನ ಸಂಸ್ಥೆಯ ವಿರುದ್ಧ ಮೊಕದ್ದಮೆ ದಾಖಲಾಗಲಿಲ್ಲ. ಇದರ ಫಲಿತಾಂಶವೆಂದರೆ, ಅದರ ಪ್ರಭಾವ ಹೆಚ್ಚುತ್ತಾ ಹೋಗುತ್ತಿದೆ.

ಸನಾತನ ಸಂಸ್ಥೆಯೊಂದಿಗೆ ಹಿಂಸಾಚಾರವು ತಳುಕು ಹಾಕಿಕೊಂಡಿರುವಂತೆ ಕಂಡುಬರುತ್ತಿದೆ. ಸನಾತನ ಸಂಸ್ಥೆಯ ಸದಸ್ಯರು ಶಾಮೀಲಾಗಿರುವ ಬಾಂಬ್ ಸ್ಫೋಟ ಪ್ರಕರಣಗಳು ದಾಖಲಾಗಿವೆ. ಸಿನೆಮಾ ಥಿಯೇಟರ್‌ಗಳು ಮತ್ತು ನಾಟಕ ಪ್ರದರ್ಶನಗಳನ್ನು ಗುರಿಯಾಗಿಸಿ ಬಾಂಬ್ ದಾಳಿಗಳು ನಡೆದಿವೆ. ಸಿನೆಮಾ ಮತ್ತು ನಾಟಕ ಪ್ರದರ್ಶನಗಳನ್ನು ಸನಾತನ ಸಂಸ್ಥೆಯು ಮಾನ್ಯ ಮಾಡುವುದಿಲ್ಲ. ಪ್ರತೀ ಬಾರಿ ಇಂಥ ಬಾಂಬ್ ಸ್ಫೋಟಗಳು ನಡೆದಾಗಲೆಲ್ಲ, ಅದು ಸಂಘಟನೆಯ ದಾರಿ ತಪ್ಪಿದ ಸದಸ್ಯನೊಬ್ಬನಿಂದ ಆದ ಕೃತ್ಯ ಎಂಬುದಾಗಿ ಹೇಳಿಕೊಳ್ಳುತ್ತದೆ. ಓರ್ವ ಸದಸ್ಯನು ಸಂಸ್ಥೆಯ ನಿಯಮಗಳನ್ನು ಧಿಕ್ಕರಿಸಿ ಮಾಡಿದ ಕೃತ್ಯಗಳು ಇವುಗಳಾಗಿವೆ ಮತ್ತು ಹಾಗೆ ಆಗಬಾರದಾಗಿತ್ತು ಎಂದು ಅದು ಹೇಳುತ್ತದೆ.

ಇದೇ ಪ್ರವೃತ್ತಿಯು ಮುಂದುವರಿದಾಗ, ಸನಾತನ ಸಂಸ್ಥೆಯ ಎಷ್ಟು ಸದಸ್ಯರು ದಾರಿ ತಪ್ಪಿದ್ದಾರೆ ಹಾಗೂ ಇದನ್ನು ಸಮಸ್ಯೆ ಎಂದು ಯಾವಾಗ ಗುರುತಿಸಲಾಗುತ್ತದೆ ಎಂದು ಮೊದಲು ಹತ್ಯೆಗೀಡಾದ ಲೇಖಕ ನರೇಂದ್ರ ದಾಭೋಲ್ಕರ್ ಪ್ರಶ್ನಿಸಿದ್ದರು.

ಈ ಸಂಘಟನೆಯೊಂದಿಗೆ ನಂಟು ಹೊಂದಿರುವ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ೧೮ ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಅವರ ಪೈಕಿ ೧೭ ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ವ್ಯಕ್ತಿ ಈಗಲೂ ತಲೆತಪ್ಪಿಸಿಕೊಂಡಿದ್ದಾನೆ.

ಈ ಸಂಸ್ಥೆಗೆ ರಾಜಕೀಯ ಆಶ್ರಯ ಇರುವಂತೆ ಕಾಣುತ್ತಿದೆ. ಈ ಸಂಘಟನೆಯ ಮೇಲೆ ಯಾವುದೇ ಕ್ರಮವಾಗದಂತೆ ರಾಜಕೀಯ ವ್ಯಕ್ತಿಗಳು ನೋಡಿಕೊಳ್ಳುತ್ತಿದ್ದಾರೆ.

ಭಾರತದ ಮತದಾನ ಪ್ರಕ್ರಿಯೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭೂಮಿಯೇ ಕಂಪಿಸುವಂಥ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಕೆಲವು ರೀತಿಗಳಲ್ಲಿ ಅಮೆರಿಕದ ‘ಎಪ್‌ಸ್ಟೀನ್ ಪಟ್ಟಿ’ಯನ್ನು ಹೋಲುತ್ತದೆ. ಈ ಆರೋಪಗಳು ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಈ ಆರೋಪಗಳನ್ನು ವಿರೋಧಿಸಿ ತೀವ್ರ ಪ್ರತಿಕ್ರಿಯೆಗಳನ್ನು ನೀಡಲಾಗುತ್ತಿದೆ. ಇದು ಭ್ರಷ್ಟಾಚಾರ ಮತ್ತು ನೈತಿಕ ಅಧಃಪತನದ ಸ್ಪಷ್ಟ ಪ್ರಕರಣವಾಗಿದೆ. ಆದರೆ, ಜನರ ಒಂದು ದೊಡ್ಡ ಗುಂಪು ಇದಕ್ಕೆ ಸಮ್ಮತಿ ನೀಡಿದಂತೆ ಕಂಡುಬರುತ್ತಿದೆ. ಒಂದು ವೇಳೆ ಇದು ನಡೆದಿದ್ದರೆ ಅದು ಸರಿಯಾಗಿಯೇ ಇದೆ ಎಂಬ ಭಾವನೆ ಜನರಲ್ಲಿದೆ. ಇಂಥ ಮನೋಭಾವ ಎಲ್ಲಿಂದ ಬರುತ್ತದೆ?

ರೋಲೊ ರೋಮಿಗ್: ಸತ್ಯಾಂಶಗಳನ್ನು ಪತ್ತೆಹಚ್ಚಿ ಮನವರಿಕೆಯಾಗುವ ರೀತಿಯಲ್ಲಿ ಜನರ ಮುಂದಿಟ್ಟರೂ, ಅದು ಜನರ ಮೇಲೆ ಯಾವುದೇ ಪರಿಣಾಮ ಬೀರದಿರುವುದನ್ನು ಕಂಡು ಪ್ರಾಮಾಣಿಕ ಪತ್ರಕರ್ತರು ಹತಾಶರಾಗಿದ್ದಾರೆ. ನಮ್ಮ ಪತ್ರಿಕಾ ಸಂಸ್ಥೆಗಳು ಯಾವ ರೀತಿಯಲ್ಲಿ ಹಿನ್ನಡೆ ಅನುಭವಿಸಿವೆ ಎಂದರೆ ಅವುಗಳ ಪರಿಣಾಮ ತೀರಾ ಸೀಮಿತವಾಗಿದೆ. ಸಮಾಜದಲ್ಲಿ ಪತ್ರಿಕೆಗಳು ಮೌಲಿಕ ಪಾತ್ರವನ್ನು ವಹಿಸುತ್ತವೆ ಎನ್ನುವ ಕಲ್ಪನೆಯೇ ದುರ್ಬಲಗೊಂಡಿದೆ. ಪತ್ರಕರ್ತರು ಮಾಡುವ ಕೆಲಸದ ಮೇಲೆ ಜನರು ಎಷ್ಟು ಅಪನಂಬಿಕೆ ಬೆಳೆಸಿಕೊಂಡಿದ್ದಾರೆಂದರೆ, ಪತ್ರಿಕೆಗಳ ದೇಶ ಮತ್ತು ಸಮಾಜದ ಮೇಲೆ ಬೀರಬಹುದಾಗಿರುವ ಪರಿಣಾಮವು ತೀವ್ರವಾಗಿ ಕುಸಿದಿದೆ. ತಮ್ಮನ್ನು ತಾವು ಪತ್ರಕರ್ತರು ಎಂದು ಕರೆದುಕೊಳ್ಳುವವರು ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿದ್ದಾರೆ ಹಾಗೂ ಇದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಇದು ಅಮೆರಿಕ ಮತ್ತು ಭಾರತ ಎರಡೂ ದೇಶಗಳಲ್ಲಿ ನಡೆಯುತ್ತಿದೆ. ಈ ವಿಷಯದಲ್ಲಿ ಒಬ್ಬರಿಂದ ಮತ್ತೊಬ್ಬರು ಕಲಿಯುತ್ತಿದ್ದಾರೆ. ಯಾವುದೇ ಅಧಿಕೃತ ಪುರಾವೆಗಳು ಹೊರಬಂದರೂ, ಕೆಲವು ಸುಳ್ಳುಗಳ ಮೂಲಕ ಅವುಗಳನ್ನು ತಳ್ಳಿಹಾಕುವುದು ಆಶ್ಚರ್ಯವೆನಿಸುವಷ್ಟು ಸುಲಭವಾಗಿದೆ. ಇದರ ಬಗ್ಗೆ ನಾನು ತೀವ್ರವಾಗಿ ಕಳವಳಗೊಂಡಿದ್ದೇನೆ. ಪತ್ರಿಕೋದ್ಯಮದಲ್ಲಿ ಜನರ ನಂಬಿಕೆಯನ್ನು ಮತ್ತೆ ಸೃಷ್ಟಿಸುವುದು ಹೇಗೆ ಎನ್ನುವುದಕ್ಕೆ ಉತ್ತರ ಸಿಕ್ಕಿದ್ದರೆ ಒಳ್ಳೆಯದಿತ್ತು.

ಪರಿಹಾರಗಳಿಗೆ ಒತ್ತು ನೀಡುವ ವಿಧಾನವು ಪತ್ರಿಕೆಗಳ ಮೇಲಿನ ಜನರ ನಂಬಿಕೆಯನ್ನು ಮತ್ತೆ ಬೆಳೆಸಬಹುದು ಎಂಬುದಾಗಿ ನಾನು ಭಾವಿಸಿದ್ದೇನೆ. ಸಮಸ್ಯೆಯನ್ನು ಎದುರಿಸಲು ಏನು ಮಾಡಲಾಗುತ್ತಿದೆ ಎನ್ನುವುದನ್ನು ತಿಳಿಯಲು ಓದುಗರು ಬಯಸುತ್ತಾರೆ, ಕೇವಲ ಸಮಸ್ಯೆಯ ಬಗ್ಗೆ ಹೇಳುವುದನ್ನಲ್ಲ. ಸಮಸ್ಯೆಗಳನ್ನು ಪರಿಹರಿಸಲು ಜನರು ಶ್ರಮಿಸುತ್ತಿದ್ದಾರೆ. ಅದನ್ನು ಅದೇ ಉತ್ಸಾಹದಿಂದ ವರದಿ ಮಾಡುವುದು ಪತ್ರಕರ್ತರ ಕೆಲಸವಾಗಿದೆ. ನಾವು ಸಮಸ್ಯೆಗಳನ್ನು ಪರಿಶೀಲಿಸುವಷ್ಟೇ ನಿಕಟವಾಗಿ ಪರಿಹಾರಗಳನ್ನೂ ಪರಿಶೀಲಿಸಬೇಕು. ಈ ರೀತಿಯಲ್ಲಿ ಪತ್ರಿಕೋದ್ಯಮದ ಚೌಕಟ್ಟನ್ನು ನಿರ್ಮಿಸಲು ನಮಗೆ ಸಾಧ್ಯವಾದರೆ, ಪತ್ರಿಕೆಗಳ ಮೇಲಿನ ಜನರ ವಿಶ್ವಾಸವನ್ನು ಮರಳಿ ಗಳಿಸಬಹುದಾಗಿದೆ.


share
ಕಾರ್ತಿಕ್ ವೆಂಕಟೇಶ್
ಕಾರ್ತಿಕ್ ವೆಂಕಟೇಶ್
Next Story
X