Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಯಸಿದ್ದು ಉಪನ್ಯಾಸಕ ಹುದ್ದೆ: ಕೈ...

ಬಯಸಿದ್ದು ಉಪನ್ಯಾಸಕ ಹುದ್ದೆ: ಕೈ ಹಿಡಿದಿದ್ದು ಕೃಷಿ

ಸತೀಶ್‌ಗೆ ಬದುಕು ಕಟ್ಟಿಕೊಟ್ಟ ನಾಟಿ ಕೋಳಿ ಸಾಕಣೆ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ26 May 2025 12:02 PM IST
share
ಬಯಸಿದ್ದು ಉಪನ್ಯಾಸಕ ಹುದ್ದೆ: ಕೈ ಹಿಡಿದಿದ್ದು ಕೃಷಿ

ಮಂಡ್ಯ: ಮದ್ದೂರು ತಾಲೂಕಿನ ಪುಟ್ಟ ಊರು ಗೊಲ್ಲರದೊಡ್ಡಿ ಗ್ರಾಮದ ತಿಮ್ಮೇಗೌಡರ ಪುತ್ರ ಜಿ.ಟಿ.ಸತೀಶ್, ಉಪನ್ಯಾಸಕನಾಗಬೇಕೆಂಬ ಛಲತೊಟ್ಟು ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ(ಎಂ.ಎ.) ಪದವಿಯನ್ನು ಪಡೆದರು. ಆದರೆ, ಅವರ ಕೈ ಹಿಡಿದಿದ್ದು ತನ್ನ ಕುಟುಂಬ ಅನುಸರಿಸಿಕೊಂಡು ಬಂದಿದ್ದ ಕೃಷಿಯೇ. ನಾಲ್ಕಾರು ಖಾಸಗಿ ಕಾಲೇಜುಗಳಲ್ಲಿ ಕನಿಷ್ಠ ಕೂಲಿಯೂ ಸಿಗದ ಅರೆಕಾಲಿಕ ಉಪನ್ಯಾಸಕನಾಗಿ ಹಲವಾರು ವರ್ಷ ಕಳೆದರೂ ಸರಕಾರಿ ಕಾಲೇಜಿನ ಕೆಲಸವಂತೂ ಸಿಗಲಿಲ್ಲ. ಕೊನೆಗೆ ಉಪನ್ಯಾಸಕನಾಗುವ ಕನಸನ್ನು ಬಿಟ್ಟು ಕೃಷಿಯಲ್ಲೇ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಕೇವಲ ಎಂಟು ಗುಂಟೆ (ಒಂದು ಎಕರೆಗೆ 40 ಗುಂಟೆ) ಭೂಮಿಯಲ್ಲಿ ನಾನಾ ಬಗೆಯ ಕೆಲವೇ ಸಂಖ್ಯೆಯಲ್ಲಿನ ತೋಟಗಾರಿಕೆ ಬೆಳೆಗಳ ಜೊತೆಗೆ ಉಪಕಸುಬುಗಳಾದ ಹಸು, ಮೇಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಇತ್ತೀಚೆಗೆ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಕೃಷಿಯಲ್ಲಿ ನಾಟಿ ಕೋಳಿ ಸಾಕಣೆಗೆ ಒತ್ತು ನೀಡಿರುವ ಸತೀಶ್‌ಗೆ ಇದು ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ.

8 ಗುಂಟೆ ಜಮೀನಿನಲ್ಲಿ 12 ತೆಂಗು, 15 ಕರಿಬೇವಿನ ಸೊಪ್ಪು, 10 ಅಡಿಕೆ, 2 ಮಾವು, 5 ನಿಂಬೆ, 5 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ. 8 ಮೇಕೆಗಳು, 2 ನಾಟಿ ಹಸುಗಳನ್ನು ಸಾಕುತ್ತಿದ್ದಾರೆ. ಇದರ ಜೊತೆಗೆ ಸುಮಾರು 50 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಒಂದು ಕೆಜಿ ನಾಟಿ ಕೋಳಿಗೆ ಮಾರುಕಟ್ಟೆಯಲ್ಲಿ 500 ರೂ.ಗಳಿಂದ 600 ರೂಗಳ ದರವಿದೆ. ಒಂದು ನಾಟಿ ಕೋಳಿ ಮೊಟ್ಟೆಯ ದರ 12 ರೂ.ನಿಂದ 15 ರೂಪಾಯಿ.

‘ರೈತನೇ ರಾಜ. ನನ್ನ ಬೆಳೆ ನನ್ನ ಬೆಲೆ’ ಎಂಬ ಘೋಷವಾಕ್ಯದಡಿ ಅಂಗಡಿಯೊಂದನ್ನು ತೆರೆದು ಕೋಳಿ ಮತ್ತು ಕೋಳಿ ಮೊಟ್ಟೆಗಳನ್ನು ಸತೀಶ್ ತಾವೇ ಮಾರಾಟ ಮಾಡುತ್ತಿದ್ದಾರೆ. ತಾವೇ ರೈತರಿಗೆ ಕೋಳಿ ಮರಿಗಳನ್ನು ಕೊಟ್ಟು, ಬೆಳೆಸಿದ ನಂತರ ಅವರಿಂದ ಕೋಳಿ ಮತ್ತು ಮೊಟ್ಟೆಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ಸುತ್ತಮುತ್ತಲ ಗ್ರಾಮಗಳ ರೈತರಿಗೆ, ಅದರಲ್ಲೂ ಯುವಕರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಿ ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬುದು ಸತೀಶ್ ಅವರ ಆಶಯವಾಗಿದೆ.

ಸತೀಶ್ ಅವರು ನಾಟಿ ಕೋಳಿ ಸಾಕಣೆಯಿಂದ ಹಲವರಿಗೆ ಪ್ರೇರಣೆಯಾಗಿದ್ದಾರೆ. ಎಲ್ಲರಿಗೂ ಅವರನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆದು ತಾವು ನಾಟಿ ಕೋಳಿ ಸಾಕಣೆಗೆ ಮುಂದಾಗಿದ್ದಾರೆ. ಕೃಷಿ ಮತ್ತು ಪಶು ಸಂಗೋಪನಾ ಇಲಾಖೆಯವರು ಕೂಡ ಇವರು ಮಾಡುತ್ತಿರುವ ನಾಟಿಕೋಳಿ ಸಾಕಣೆ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.

ಗ್ರಾಮಾಂತರ ಪ್ರದೇಶದ ರೈತರಿಗೆ ಏನಾದರೂ ಅನುಕೂಲ ಮಾಡಬೇಕು ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕೆಂಬ ಉದ್ದೇಶದಿಂದ ಸಣ್ಣದಾಗಿ ಸಣ್ಣ ಪ್ರಮಾಣದಲ್ಲಿ ನಾಟಿ ಕೋಳಿ ಮತ್ತು ಮೊಟ್ಟೆ ಮಾರಾಟ ಮಾಡುವುದನ್ನು ಆರಂಭಿಸಿದೆ. ಇದರಿಂದ ಹೆಚ್ಚಿನ ಲಾಭ ಬರುವ ಜತೆಗೆ ಒಳ್ಳೆಯ ಪ್ರತಿಕ್ರಿಯೆ ಕಂಡು ಬಂದ ಹಿನ್ನೆಲೆಯಲ್ಲಿ ಅರೆಕಾಲಿಕ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಕೋಳಿ ಸಾಕಣೆ ಮಾಡುವುದನ್ನೇ ಮುಂದುವರಿಸಿಕೊಂಡು ಬರುತ್ತಿದ್ದೇನೆ. ಇದರಿಂದ ಉತ್ತಮ ಲಾಭದ ಜತೆಗೆ ನೆಮ್ಮದಿ ಇದೆ. ನನ್ನ ಕಾಯಕಕ್ಕೆ ಪತ್ನಿ ತೇಜಸ್ವಿನಿ, ಸಹೋದರರಾದ ಜಿ.ಟಿ.ಸುರೇಶ್, ಜಿ.ಟಿ.ಲೋಕೇಶ್ ಬೆಂಬಲವಾಗಿ ನಿಂತಿದ್ದಾರೆ.

-ಜಿ.ಟಿ.ಸತೀಶ್, ಗೊಲ್ಲರದೊಡ್ಡಿ

ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ, ದೊಡ್ಡ ಪ್ರಮಾಣದಲ್ಲಿ ಕುಕ್ಕುಟೋದ್ಯಮವನ್ನು ಆರಂಭಿಸಲು ಅಗತ್ಯ ಇರುವ ತಾಂತ್ರಿಕ ಸಲಹೆ, ಮಾಹಿತಿ ಹಾಗೂ ಇಲಾಖೆಯ ಅನುದಾನಗಳನ್ನು ಸತೀಶ್ ಅವರಿಗೆ ಕೊಡಿಸಲಾಗುವುದು.

-ಡಾ.ಗೋವಿಂದ, ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮದ್ದೂರು

ಜಿ.ಟಿ.ಸತೀಶ್ ಉತ್ತಮ ರೀತಿಯಲ್ಲಿ ನಾಟಿ ಕೋಳಿ ಸಾಕಣೆ ಮತ್ತು ಮೊಟ್ಟೆ ಉದ್ದಿಮೆಯನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ಇವರಿಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡಲಾಗುವುದು.

-ಡಿ.ಸಿ.ಕುಸುಮ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, ಕೃಷಿ ಇಲಾಖೆ, ಮದ್ದೂರು.

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X