Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಿಚ್ಚಗುಂಟ್ಲು, ಭಕ್ತೊಳ್ಳು, ಗೊಲ್ಲಕುಲಂ,...

ಪಿಚ್ಚಗುಂಟ್ಲು, ಭಕ್ತೊಳ್ಳು, ಗೊಲ್ಲಕುಲಂ, ಹೆಳವ: ಜಾತಿ ಒಂದೇ, ಹೆಸರು ಹಲವು...

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್23 July 2025 10:01 AM IST
share
ಪಿಚ್ಚಗುಂಟ್ಲು, ಭಕ್ತೊಳ್ಳು, ಗೊಲ್ಲಕುಲಂ, ಹೆಳವ: ಜಾತಿ ಒಂದೇ, ಹೆಸರು ಹಲವು...
ಕರ್ನಾಟಕದಲ್ಲಿ ಹೆಳವರು ಎಂದು ಕರೆಯುವ ಈ ಸಮುದಾಯವನ್ನು ಆಂಧ್ರಪ್ರದೇಶದಲ್ಲಿ ಪಿಚ್ಚಾಗುಂಟ್ಲರು, ಪಿಚ್ಚಗುಂಟ್ಲ, ಭಕ್ತೊಳ್ಳು, ಗೊಲ್ಲಕುಲಂ ಎಂದು ಕರೆಯುತ್ತಾರೆ. ಪಿಚ್ಚಾಗುಂಟ್ಲ ಎಂದರೆ ತೆಲುಗಿನಲ್ಲಿ ಭಿಕ್ಷುಕ, ಕುಂಟ, ಕಾಲಿಲ್ಲದವನು ಎಂಬ ಅರ್ಥ ಬರುತ್ತದೆ. ಕರ್ನಾಟಕದಲ್ಲಿರುವ ಹೆಳವರು ಕನ್ನಡ ಮಾತನಾಡಿದರೆ ಆಂಧ್ರದಲ್ಲಿರುವ ಪಿಚ್ಚಗುಂಟ್ಲು ತೆಲುಗು ಮಾತನಾಡುತ್ತಾರೆ, ಆದರೆ ಇಬ್ಬರ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯೂ ಒಂದೇ ಆಗಿದೆ. ಈ ಇಬ್ಬರಲ್ಲೂ ಕೊಡುಕೊಳ್ಳುವ ಸಂಬಂಧಗಳಿವೆ. ದುರಂತವೆಂದರೆ ಈ ಸಮುದಾಯ ಇಂದಿಗೂ ಕೂಡ ಅಲೆಮಾರಿ ಜೀವನ ಸಾಗಿಸುವ ಒಂದು ಸಮೂಹವಾಗಿದೆ.

ಪಿಚ್ಚಗುಂಟ್ಲು ಎನ್ನುವುದು ಆಂಧ್ರ- ಕರ್ನಾಟಕದ ಸೆರಗಿನಲ್ಲಿ ಪ್ರಚಲಿತವಿರುವ ಹೆಸರು, ಮೂಲತಃ ಆಂಧ್ರದಿಂದಲೇ ವಲಸೆ ಬಂದಿರಬಹುದಾದ ಈ ಸಮುದಾಯವನ್ನು ಕನ್ನಡದ ಪ್ರದೇಶಗಳಲ್ಲಿ ‘ಹೆಳವ’ ಎನ್ನುತ್ತಾರೆ. ಹೆಳವ ಸಮುದಾಯದ ಹೆಸರು ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದಲ್ಲೇ ಇದ್ದಂತೆ ಕಾಣುತ್ತದೆ.

ಇದಕ್ಕೆ ಪೂರಕವೆಂಬಂತೆ ಶರಣ ಚಳವಳಿಯ ಕಾಲದ ಕತೆಯೊಂದಿದೆ.

ಅಣ್ಣ ಬಸವಣ್ಣ, ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟುವಾಗ ಎಲ್ಲಾ ಶರಣರೂ ತಮ್ಮ ಕಾಯಕಕ್ಕಾಗಿ ಕಲ್ಯಾಣಕ್ಕೆ ಬಂದಿದ್ದರು. ಆಗ ಹೆಳವ(ಕುಂಟ)ನೊಬ್ಬ ಕಲ್ಯಾಣದಲ್ಲಿ ಕಾಯಕ ಮಾಡುವ ಆಸೆಯಿಂದ ಕಲ್ಯಾಣಕ್ಕೆ ಬಂದ. ಎಲ್ಲಾ ಕಾಯಕಜೀವಿಗಳೂ ಕಡ್ಡಾಯವಾಗಿ ಕಾಯಕ ಮಾಡಿದರೆ ಮಾತ್ರ ಪ್ರಸಾದ(ಊಟ) ಮಾಡಬೇಕಿತ್ತು. ಪಾಪ ಈ ಹೆಳವನಿಗೆ ತನ್ನ ಅಂಗವೈಕಲ್ಯತೆಯಿಂದ ಏನೂ ಕೆಲಸ ಮಾಡಲು ಆಗದೆ ಅಸಹಾಯಕನಾಗಿ ಕುಳಿತಿದ್ದ, ಈತ ಕಾಯಕ ಮಾಡದ ಕಾರಣಕ್ಕೆ ಪ್ರಸಾದವನ್ನೂ ಸೇವಿಸದೆ ಉಪವಾಸ ಇದ್ದ. ಈ ವಿಷಯವನ್ನು ಕೆಲವರು ಬಸವಣ್ಣನವರ ಗಮನಕ್ಕೆ ತಂದರು. ಬಸವಣ್ಣ ಈ ಹೆಳವನನ್ನು ಪ್ರೀತಿಯಿಂದ ಮಾತಾಡಿಸುತ್ತಾ ಈತನಿಗೆ ಕಲ್ಯಾಣದಲ್ಲಿ ವಂಶಾವಳಿ ಬರೆಯುವ ಕಾಯಕ ನೀಡಿ ಪ್ರಸಾದ ಸ್ವೀಕರಿಸುವಂತೆ ಹೇಳಿದರು, ಅಂತೆಯೇ ಕೇವಲ ಈ ಹೆಳವನಿಗೆ ಮಾತ್ರ ಒಂಟಿ ಎತ್ತಿನ ಮೇಲೆ ಸವಾರಿ ಮಾಡುವ ಅವಕಾಶ ಅಥವಾ ಹಕ್ಕನ್ನು ನೀಡಿದರು. ಅಲ್ಲಿಂದ ಆಚೆ ಈ ಹೆಳವನ ವಂಶಸ್ಥರು ಮಾತ್ರ ಗಂಟೆ ಬಾರಿಸುತ್ತಾ ಒಂಟಿ ಎತ್ತಿನ ಮೇಲೆ ಸವಾರಿ ಮಾಡುತ್ತಾ ವಂಶಾವಳಿ ಹೇಳಲು ಊರೂರು ಅಲೆಯಲು ಆರಂಭಿಸಿದರಂತೆ.

ನಮ್ಮ ಕಾಲದ ಇನ್ನೊಂದು ವೃತ್ತಾಂತವನ್ನು ಇಲ್ಲಿ ಹೇಳಲೇಬೇಕು.. ಒಮ್ಮೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಬಿಜಾಪುರದ ಪ್ರವಾಸಿ ಬಂಗಲೆಯಲ್ಲಿ ತಂಗಿದ್ದರು. ಒಂದು ದಿನ ಬೆಳಗ್ಗೆ ಅವರು ವಾಯುವಿಹಾರಕ್ಕೆ ಹೊರಟಿದ್ದಾಗ ವ್ಯಕ್ತಿಯೊಬ್ಬ ಒಂಟಿ ಎತ್ತಿನ ಮೇಲೆ ಕೂತು ಗಂಟೆ ಬಾರಿಸುತ್ತಾ ಹೊರಟಿದ್ದ. ಅರಸು ಅವರಿಗೆ ಆತನನ್ನು ನೋಡಿ ಆಶ್ಚರ್ಯವಾಯಿತು. ಆತನನ್ನು ತಡೆದು ಮಾತನಾಡಿಸಿದಾಗ ಆತ ತಮ್ಮ ಜಾತಿಯನ್ನು ‘ಹೆಳವರು’ ಎನ್ನುತ್ತಾರೆ, ವಂಶಾವಳಿ ಹೇಳುವುದು ನಮ್ಮ ಕಾಯಕ ಎಂದು ಹೇಳುತ್ತಾನೆ. ಅನೇಕ ಗ್ರಾಮಗಳಿಗೆ ಬರುವ ಇವರು ಕೆಲವಾರು ಕುಟುಂಬಗಳ ವಂಶಾವಳಿಗಳನ್ನು ಸಂಗ್ರಹಿಸಿ ಹೇಳುತ್ತಾರೆ ಎಂಬುದು ಅರಸರ ಗಮನಕ್ಕೆ ಬರುತ್ತದೆ. ಅಂತೆಯೇ ಇದೊಂದು ನಿರ್ಗತಿಕ ಸಮುದಾಯ ಎಂಬ ಸತ್ಯದ ಅರಿವೂ ಆಗುತ್ತದೆ.

ಅರಸು ಅವರು ಈ ಸಮುದಾಯದಲ್ಲಿದ್ದ ಒಬ್ಬ ವಿದ್ಯಾವಂತನನ್ನು ತಾವೇ ಕಾಳಜಿ ವಹಿಸಿ ಹುಡುಕಿಸಿ ಬೆಂಗಳೂರಿಗೆ ಕರೆಸಿಕೊಂಡು ಆತನಿಗೆ ಕಡೂರಿನಲ್ಲಿ ಹತ್ತಾರು ಎಕರೆ ವ್ಯವಸಾಯಯೋಗ್ಯ ಜಮೀನು ನೀಡಿದ್ದಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ನೀಡಿ ಗುರುತಿಸುತ್ತಾರೆ. ಈ ವ್ಯಕ್ತಿಯ ಹೆಸರು ಎಂ.ಎಸ್. ಹೆಳವರ್. ಇವರು ನನ್ನ ನೇತೃತ್ವದ ಆಯೋಗವೂ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಸದಸ್ಯರಾಗಿದ್ದರು. ಈ ಹೆಳವರ್ ಮೂಲಕ ಎಲ್ಲೋ ಅಡಗಿದ್ದ ಹೆಳವ ಸಮುದಾಯವನ್ನು ಮೊದಲು ಗುರುತಿಸಿ ಅವರಿಗೆ ಪ್ರಾತಿನಿಧ್ಯ ನೀಡಿದವರು ದೇವರಾಜ ಅರಸು.

ಕರ್ನಾಟಕದಲ್ಲಿ ಹೆಳವರು ಎಂದು ಕರೆಯುವ ಈ ಸಮುದಾಯವನ್ನು ಆಂಧ್ರಪ್ರದೇಶದಲ್ಲಿ ಪಿಚ್ಚಾಗುಂಟ್ಲರು, ಪಿಚ್ಚಗುಂಟ್ಲ, ಭಕ್ತೊಳ್ಳು, ಗೊಲ್ಲಕುಲಂ ಎಂದು ಕರೆಯುತ್ತಾರೆ. ಪಿಚ್ಚಾಗುಂಟ್ಲ ಎಂದರೆ ತೆಲುಗಿನಲ್ಲಿ ಭಿಕ್ಷುಕ, ಕುಂಟ, ಕಾಲಿಲ್ಲದವನು ಎಂಬ ಅರ್ಥ ಬರುತ್ತದೆ. ಕರ್ನಾಟಕದಲ್ಲಿರುವ ಹೆಳವರು ಕನ್ನಡ ಮಾತನಾಡಿದರೆ ಆಂಧ್ರದಲ್ಲಿರುವ ಪಿಚ್ಚಗುಂಟ್ಲು ತೆಲುಗು ಮಾತನಾಡುತ್ತಾರೆ, ಆದರೆ ಇಬ್ಬರ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯೂ ಒಂದೇ ಆಗಿದೆ. ಈ ಇಬ್ಬರಲ್ಲೂ ಕೊಡುಕೊಳ್ಳುವ ಸಂಬಂಧಗಳಿವೆ. ದುರಂತವೆಂದರೆ ಈ ಸಮುದಾಯ ಇಂದಿಗೂ ಕೂಡ ಅಲೆಮಾರಿ ಜೀವನ ಸಾಗಿಸುವ ಒಂದು ಸಮೂಹವಾಗಿದೆ.

ಹೆಳವ ಸಮುದಾಯದಲ್ಲಿ 3 ಉಪಪಂಗಡಗಳಿವೆ. ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು.

ಎತ್ತಿನ ಹೆಳವ ಸಮುದಾಯದವರು ಬೆಳಗಾವಿ, ಧಾರವಾಡ, ಹಾವೇರಿ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗದ ಕೆಲವು ಭಾಗಗಳಲ್ಲಿ ಕಂಡು ಬರುತ್ತಾರೆ. ಗಂಟೆ ಹೆಳವರು ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಮೈಸೂರು, ಮಡಿಕೇರಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ.

ಇನ್ನು ಚಾಪೆ ಹೆಳವರು ಯಾದಗಿರಿ ಜಿಲ್ಲೆಯ ಸುರಪುರ, ಸತ್ಯಂಪೇಟೆ, ದೇವಿಕೇರಿ, ವಚಲವಗ್ಗನೂರು, ಹೊಸೂರು, ಶಹಪುರ, ದೋರ್ನಹಳ್ಳಿ, ಸಗರ, ಹಳ್ಳಿಸಗರ, ಗೂಗಿ, ಯಾದಗಿರಿಯ ಶಾಂತಿನಗರ ಕಾಲನಿ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ, ಇಬ್ರಾಹೀಂಪುರ, ಸಿಂಧನೂರು, ಸಿರವಾರ, ಮಂಚಲಾಪುರ, ಪೋತಗಲ್ಲು, ಮರಸ್, ನಾಡದಗೆಡೆ, ದೇವದುರ್ಗ ಹಾಗೂ ಸಿರವರಗಳು ಈ ಊರುಗಳಲ್ಲಿ ಹೆಚ್ಚಾಗಿ ಚಾಪೆ ಹೆಳವರೇ ಕಂಡು ಬರುತ್ತಾರೆ.

ಹೆಳವ ಸಮುದಾಯದಲ್ಲಿ ಅನೇಕ ಬೆಡಗುಗಳಿವೆ, ಅಡಕಿಲವರು, ಔಡಲನವರು, ಅಂಧಕಲವರು, ಕಡಗದವರು, ಅರಳಿಲವರು, ಕಡ್ಡೆಲವರು, ಅಜ್ಜೆಲವರು, ಕಡೆಹಟ್ಟಿಲವರು, ಆನೆಲವರು, ಕಂಬಳಿಲವರು, ಅರೆಲವರು,ಕಸ್ತೂರಿಲವರು, ಆವಿನಲವರು, ಕುರಿಹಾಲಿನವರು, ಇಮ್ಮಡಿಲವರು, ಕುಂಚಿಲರು ಹೀಗೆ ಅನೇಕ ಬೆಡಗುಗಳನ್ನು ಕುಲಶಾಸ್ತ್ರೀಯ ಅಧ್ಯಯನಕಾರರು ಗುರುತಿಸಿದ್ದಾರೆ.

ಈಚಿನ ಕಾಂತರಾಜು/ಜಯಪ್ರಕಾಶ್ ಹೆಗ್ಡೆ ನೀಡಿರುವ ಅಂಕಿಅಂಶಗಳ ಮಾಹಿತಿಯಂತೆ ಹೆಳೋವ - 615, ಹೊಲೆವ - 2,836, ಪಿಚಗುಂಟ್ಲು - 259 ಎಂದಿದೆ. ಆದರೆ ‘ಹೆಳವ’ ಎಂಬ ನಿರ್ದಿಷ್ಟ ಹೆಸರಿನ ಜನಸಂಖ್ಯೆಯನ್ನು ನಮೂದಿಸಿಲ್ಲ! ಈ ಹಿಂದಿನ ದಾಖಲೆಗಳಲ್ಲಿ ಹೆಳವರ ಜನಸಂಖ್ಯೆ 7,439 ಇತ್ತು. ನನ್ನ ಅರಿವಿಗೆ ತಿಳಿದಂತೆ ಹೆಳವ, ಪಿಚಗುಂಟ್ಲು ಎಲ್ಲಾ ಸೇರಿ ಇವರ ಜನಸಂಖ್ಯೆ 15 ಸಾವಿರಕ್ಕಿಂತಲೂ ಹೆಚ್ಚಿದೆ. ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ ಒಂದರ ಅಡಿಯಲ್ಲಿ ಬರುವ ಹೆಳವರು ಅತೀ ಹಿಂದುಳಿದ ಸೂಕ್ಷ್ಮ ಸಮುದಾಯವಾಗಿದೆ. ಅವರ ಶೈಕ್ಷಣಿಕ ಪ್ರಮಾಣ ಗಮನಿಸುವುದಾದರೆ, ಅವರಲ್ಲಿ ಅಕ್ಷರಸ್ಥರು 2,963 ಇದ್ದರೆ, ಅನಕ್ಷರಸ್ಥರು 4,476 ಇದ್ದಾರೆ ಎಂದು ಮೈಸೂರಿನ ಟ್ರೈಬಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಮಾಡಿರುವ ಅಧ್ಯಯನ ದಾಖಲಿಸುತ್ತದೆ.

ಇವರ ಕುಲವೃತ್ತಿ ವಂಶಾವಳಿ ಹೇಳುವುದು, ಆದರೆ ಈ ಕುಲವೃತ್ತಿ ನಶಿಸಿಹೋದ ಕಾರಣ ಇದೀಗ ಕೌದಿ ಹೊಲಿಯುವುದು, ಕೃಷಿಕೂಲಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಾರೆ. ಇದರಲ್ಲಿ ಮೂಲವೃತ್ತಿ ಮಾಡುವವರು ಶೇ. 12, ಸಣ್ಣ ಬೇಸಾಯ ಮಾಡುವವರು ಶೇ. 4, ಕೃಷಿ ಕೂಲಿಗಳು ಶೇ. 18, ಇತರ ಕೂಲಿ ಕಾರ್ಮಿಕರು ಶೇ. 2, ದುಡಿಮೆಗಾಗಿ ವಲಸೆ ಹೋಗಿರುವವರು ಶೇ. 20, ದುಡಿಮೆಯೇ ಇಲ್ಲದವರು ಶೇ. 10, ಇತರರು ಶೇ. 6.

ಹೆಳವ ಸಮುದಾಯದ ಧಾರ್ಮಿಕ ಆಚರಣೆಗಳೆಂದರೆ ಆ ಸಮುದಾಯ ನಡೆದುಕೊಂಡು ಬಂದ ನಂಬಿಕೆಗೆ ಪೂರಕವಾಗಿ ತಮ್ಮ ಮನೆಯ ದೇವರು, ಕುಲದೇವರು, ಊರದೇವರು ಅಥವಾ ಗ್ರಾಮದೇವತೆಗಳು, ಕಾಡುದೇವತೆ, ಪಿತೃದೇವರು ಹಾಗೂ ನಾಡದೇವತೆಗಳಿದ್ದಾರೆ. ಈಚೆಗೆ ಈ ಸಮುದಾಯ ಹೆಚ್ಚಿಗೆ ವೈದಿಕೀಕರಣಕ್ಕೆ ಒಳಗಾಗಿ ಮುಖ್ಯವಾಹಿನಿಯಲ್ಲಿರುವ ದೊಡ್ಡ ಸಮುದಾಯಗಳನ್ನು ಅನುಸರಿಸಲು ಆರಂಭಿಸಿದೆೆ. ಇವರ ಧಾರ್ಮಿಕ ಆಚರಣೆಗಳಲ್ಲಿ ಪೂಜೆ, ನೈವೇದ್ಯ, ವ್ರತದೊಂದಿಗೆ ಬಲಿ ಮುಂತಾದವುಗಳನ್ನು ಈಚೆಗೆ ಬಹಳ ಶ್ರದ್ಧೆಯಿಂದ ಆಚರಿಸುವುದನ್ನು ಕಾಣಬಹುದಾಗಿದೆ. ಯುಗಾದಿ, ಗೌರಿ ಗಣೇಶ, ನವರಾತ್ರಿ ಅಥವಾ ಮಹಾನವಮಿ, ದೀಪಾವಳಿ, ಸಂಕ್ರಾಂತಿ, ಕಾರುಹುಣ್ಣಿಮೆ, ನಾಗರಪಂಚಮಿಗಳೊಂದಿಗೆ ಮಾರಮ್ಮ, ಗ್ರಾಮದೇವತೆ ಅಥವಾ ಊರದೇವತೆ ಹಬ್ಬಗಳನ್ನೂ ಆಚರಿಸುತ್ತಾರೆ.

ಹೆಳವರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯ ತೀರಾ ಕಡಿಮೆ ಎಂಬುದು ನಿರಾಶಾದಾಯಕ ಸಂಗತಿ, ಸರಕಾರಗಳು ಹೆಳವರಂತಹ ಸಮುದಾಯಗಳನ್ನು ಕಾಣಲು ಕಣ್ಣು ಪಡೆಯಬೇಕು.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X