Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಧಾನಸೌದ ಕಟ್ಟಿದ ‘ಪರಯ್ಯ’ ‘ಪರಿಯ್ಯರ್,...

ವಿಧಾನಸೌದ ಕಟ್ಟಿದ ‘ಪರಯ್ಯ’ ‘ಪರಿಯ್ಯರ್, ಪರಯ್ಯನ್’..!

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್20 Aug 2025 11:13 AM IST
share
ವಿಧಾನಸೌದ ಕಟ್ಟಿದ ‘ಪರಯ್ಯ’ ‘ಪರಿಯ್ಯರ್, ಪರಯ್ಯನ್’..!

ಪರಯ್ಯ ಸಮುದಾಯ ನೂರಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ನೆಲೆಸಿದ್ದು ‘ಪರಯ ಹೊಲೆಯ’ ಮತ್ತು ’ಆದಿದ್ರಾವಿಡ’ ಹೆಸರಲ್ಲಿ ಗುರುತಿಸಿಕೊಂಡಿದೆ. ಇದರೊಂದಿಗೆ ನಲವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ವಿಧಾನಸೌದ ಕಟ್ಟುವ ಸಂದರ್ಭದಲ್ಲಿ ಪರಯ್ಯ ಕೂಲಿ ಆಳುಗಳನ್ನು ವಿಧಾನಸೌಧ ಕಟ್ಟಲು ಉತ್ತರ ಆರ್ಕಾಟ್, ಆಂಬೂರ್ ಕಡೆಗಳಿಂದ ಕರೆತರಲಾಯಿತು. ಇದರ ನಂತರ ವಿವಿಧ ಸರಕಾರಿ ಕಟ್ಟಡಗಳನ್ನೂ ಇವರಿಂದಲೇ ಕಟ್ಟಿಸಿಕೊಳ್ಳಲಾಯಿತು.

ಈಚೆಗೆ ಸಲ್ಲಿಕೆಯಾದ ನ್ಯಾ.ನಾಗಮೋಹನದಾಸ್ ವರದಿಯಲ್ಲಿ ಪರಯ್ಯ ಸಮುದಾಯವನ್ನು ಹೊಲೆಯ ಸಂಬಂಧಿತ ಜಾತಿಗಳಿಗೆ ಸೇರಿಸಬೇಕೋ ಅಥವಾ ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರಿಸಬೇಕೋ ಎಂಬ ಗೊಂದಲ ಈಗ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದಲ್ಲಿ ಸುಮಾರು 95,487 ಇರುವ ಪರಯ್ಯ ಅಥವಾ ಪರಯ್ಯನ್ ಜಾತಿ ಜನರನ್ನು ಸದರಿ ವರದಿಯಲ್ಲಿ ಮಾದಿಗ ಸಂಬಂಧಿತ ಜಾತಿಗಳ ಜತೆ ಪ್ರವರ್ಗ ‘ಬಿ’ಯಲ್ಲಿ ಹಾಕಲಾಗಿದೆ. ಆದರೆ ಕುಲಶಾಸ್ತ್ರೀಯ ಅಧ್ಯಯನಗಳ ಪ್ರಕಾರ ಪರಯ್ಯ ಸಮುದಾಯ ವಾಸ್ತವವಾಗಿ ಹೊಲೆಯ ಸಂಬಂಧಿತ ಜಾತಿಯಾಗಿದೆ.

ಪರಯ್ಯರ್‌ಗಳು ‘ವಲಂಗೈ’ ಅಂದರೆ ಬಲಗೈ ಜಾತಿ ಬಣ ಸೇರಿದವರು. ಅವರಲ್ಲಿ ಕೆಲವರನ್ನು ‘ವಲಂಗೈಮಾನ್’ ಅಂದರೆ ಬಲಗೈ ವಿಭಾಗದ ಮುಖ್ಯಸ್ಥ ಎಂಬ ಬಿರುದನ್ನು ಹೊಂದಿದ್ದಾರೆ. ಇದರಲ್ಲಿ ವಲಂಗೈ ಕೃಷಿ ಆಧಾರಿತ ಜಾತಿಗಳನ್ನು ಹೊಂದಿದ್ದರೆ, ಇವರಲ್ಲಿ ಇಡಂಗೈ ಪಂಗಡವು ಉತ್ಪಾದನೆಯಲ್ಲಿ ತೊಡಗಿರುವ ಜಾತಿಗಳನ್ನು ಒಳಗೊಂಡಿತ್ತು. ತಮಿಳುನಾಡಿನಲ್ಲಿ ವಲಂಗೈ ವಿಭಾಗದವರು ಹಿಂದೆ ರಾಜಕೀಯವಾಗಿ ಉತ್ತಮವಾಗಿ ಸಂಘಟಿತರಾಗಿದ್ದರು ಎಂಬ ಅಭಿಪ್ರಾಯವಿದೆ.

ಪರಯ್ಯ ಸಮುದಾಯ ನೂರಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ನೆಲೆಸಿದ್ದು ‘ಪರಯ ಹೊಲೆಯ’ ಮತ್ತು ’ಆದಿದ್ರಾವಿಡ’ ಹೆಸರಲ್ಲಿ ಗುರುತಿಸಿಕೊಂಡಿದೆ. ಇದರೊಂದಿಗೆ ನಲವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ವಿಧಾನಸೌದ ಕಟ್ಟುವ ಸಂದರ್ಭದಲ್ಲಿ ಪರಯ್ಯ ಕೂಲಿ ಆಳುಗಳನ್ನು ವಿಧಾನಸೌಧ ಕಟ್ಟಲು ಉತ್ತರ ಆರ್ಕಾಟ್, ಆಂಬೂರ್ ಕಡೆಗಳಿಂದ ಕರೆತರಲಾಯಿತು. ಇದರ ನಂತರ ವಿವಿಧ ಸರಕಾರಿ ಕಟ್ಟಡಗಳನ್ನೂ ಇವರಿಂದಲೇ ಕಟ್ಟಿಸಿಕೊಳ್ಳಲಾಯಿತು. ಹೀಗೆ ಕೂಲಿಗೆ ಬಂದ ಪರಯ್ಯ ಜನ ಬೆಂಗಳೂರಿನ ಸಂಪಿಗೆಹಳ್ಳಿ(ಈಗಿನ ಸಂಪಂಗಿರಾಮನಗರ) ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ತಮ್ಮದೇ ಕೊಳೆಗೇರಿಗಳನ್ನು ನಿರ್ಮಿಸಿಕೊಂಡು ಜೀವಿಸತೊಡಗಿದರು. ಸರಕಾರಿ ಕಟ್ಟಡ ಕಟ್ಟುವ ಇವರ ಕೆಲಸದ ನಂತರ ಇವರನ್ನು ಏಕಾಏಕಿ ತೆರವುಗೊಳಿಸಿ, ಜಯನಗರದ ಬೈರಸಂದ್ರ ಮತ್ತು ಇತರೆಡೆ ಇರುವ ರಾಜಕಾಲುವೆಯ ಅಕ್ಕಪಕ್ಕ ಜಾಗಗಳಿಗೆ ಸ್ಥಳಾಂತರಿಸಿದರು. ಈ ಸಮುದಾಯ ಅಲ್ಲೇ ರಸ್ತೆಬದಿಗಳಲ್ಲಿ ಮತ್ತು ರಾಜಕಾಲುವೆ ಅಕ್ಕಪಕ್ಕ ಗುಡಿಸಲು ಹಾಕಿಕೊಂಡು ಜೀವಿಸತೊಡಗಿದರು. ಇಂದಿಗೂ ಈ ಕುಟುಂಬಗಳು ಸದರಿ ಕೊಳೆಗೇರಿಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಅತ್ಯಂತ ನಿಕೃಷ್ಟವಾಗಿ ಜೀವಿಸುತ್ತಿದ್ದಾರೆ.

ಪರಯ್ಯ ಸಮುದಾಯ ತಮಿಳುನಾಡಿನಲ್ಲಿ ಹೇರಳವಾಗಿದ್ದು, ಕೇರಳ ಮತ್ತು ಶ್ರೀಲಂಕಾದಲ್ಲೂ ಇದ್ದಾರೆಂದು ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಪರಯ್ಯ ಎಂಬ ಹೆಸರು ಮೂಲತಃ ತಮಿಳು ಪದವಾದ ‘ಪಾರೈ’ (ಡ್ರಮ್)ನಿಂದ ಬಂದಿದೆ ಎಂದು ಪರಿಗಣಿಸಲಾಗಿದೆ. ಈ ಮಾಹಿತಿಯ ಪ್ರಕಾರ, ಪರೈಯರ್‌ಗಳು ಮೂಲತಃ ಮದುವೆಗಳು ಮತ್ತು ಅಂತ್ಯಕ್ರಿಯೆಗಳಂತಹ ಶುಭ ಮತ್ತು ಅಶುಭ ಸಮಾರಂಭಗಳಲ್ಲಿ ಡ್ರಮ್ ವಾದನ ನುಡಿಸುವ ಸಮುದಾಯವಾಗಿತ್ತು. ಈ ಸಮುದಾಯದ ಎಲ್ಲರೂ ತಮಟೆ, ನಗಾರಿಗಳನ್ನು ಬಾರಿಸುವವರು ಆಗಿರದೆ ಇವರಲ್ಲಿ ಒಂದು ಪಂಗಡದವರು ಮಾತ್ರ ಡ್ರಮ್ ವಾದಕರಾಗಿದ್ದು ಮಿಕ್ಕವರು ಕೃಷಿ, ಕೂಲಿ ಕೆಲಸಗಳಲ್ಲಿ ತೊಡಗಿದ್ದರು.

ವಿಶೇಷವೆಂದರೆ ಪರಯ್ಯ ಜಾತಿ ಅಸ್ಪಶ್ಯರಾಗಿದ್ದು ಕೇವಲ ಮುಟ್ಟಿಸಿಕೊಳ್ಳದವರಾಗಿರ ಲಿಲ್ಲ, ಇವರ ಉಸಿರಿಗೂ ಅಸ್ಪಶ್ಯತೆ ಇತ್ತು. ಇವರು ಮೇಲ್ಜಾತಿಯವರ ಬಳಿ ಮಾತನಾಡಬೇಕಿದ್ದರೆ ತಮ್ಮ ಉಸಿರು ತಾಕದಂತೆ ದೂರ ನಿಂತು ಬಾಯಿಗೆ ಕೈ ಅಡ್ಡ ಇಟ್ಟುಕೊಂಡು ಮಾತನಾಡಬೇಕಿತ್ತು!

ಬ್ರಿಟಿಷ್ ಪೂರ್ವ ಅವಧಿಯಲ್ಲಿ ಪುಲೈಯರ್ ರಾಜನ ಪರವಾಗಿ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಮತ್ತು ಡ್ರಮ್‌ಗಳನ್ನು ಬಾರಿಸುವ ಮೂಲಕ, ಹಾಗೆಯೇ ರಾಜಮನೆತನದ ಆಜ್ಞೆಗಳನ್ನು ಘೋಷಿಸಲು ಹಳ್ಳಿ, ನಗರಗಳಲ್ಲಿ ಸಂಚರಿಸುವ ಮೂಲಕ ಧಾರ್ಮಿಕ ಕಾರ್ಯವನ್ನು ಈ ಪರಯ್ಯಗಳು ನಿರ್ವಹಿಸುತ್ತಿದ್ದರು ಎಂದು ‘ಹಾರ್ಟ್’ ಎನ್ನುವ ಮಾನವಶಾಸ್ತ್ರಜ್ಞ ಹೇಳುತ್ತಾರೆ. ಅವರು ನುಡಿಸುವ ವಾದ್ಯಗಳ ಆಧಾರದ ಮೇಲೆ ಅವರನ್ನು ಉಪಗುಂಪುಗಳಾಗಿ ವಿಂಗಡಿಸಲಾಗಿದೆ ಮತ್ತು ಈ ಗುಂಪುಗಳಲ್ಲಿ ಒಂದಾದ ಕಿನೈಯನ್ನ್‌ರನ್ನು ಮಾಂತ್ರಿಕ ಶಕ್ತಿ ಇದ್ದವರೆಂದು ನಂಬಲಾಗಿದೆ ಆದರೂ ಅಷ್ಟೇ ದೂರದಲ್ಲಿ ಅವರನ್ನು ಇರಿಸಲಾಗಿದ್ದರು, ಹಳ್ಳಿಗಳ ಹೊರಗೆ ಪ್ರತ್ಯೇಕ ಹಳ್ಳಿಗಳಲ್ಲಿ ವಾಸಿಸುವಂತೆ ಅವರನ್ನು ಓಲೈಸಲಾಗಿತ್ತು ಎಂದು ಹಾರ್ಟ್ ಹೇಳುತ್ತಾರೆ. ಆದರೂ, ಅವರ ಮಾಂತ್ರಿಕ ಶಕ್ತಿಯು ರಾಜನನ್ನು ಉಳಿಸಿಕೊಳ್ಳುತ್ತದೆ ಎಂದು ಬಲವಾಗಿ ನಂಬಲಾಗಿತ್ತು, ಅವರು ಅದನ್ನು ಶುಭ ಶಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದವರು ಎಂದೂ ನಂಬಲಾಗಿತ್ತು. ಅವರನ್ನು ದೂರ ಇಡಲು ಅವರಿಗಿದ್ದ ಮಾಂತ್ರಿಕ ಶಕ್ತಿಯ ಭಯವೂ ಕಾರಣವಾಗಿರಬಹುದಾಗಿದೆ.

ಇನ್ನೊಂದು ಆಸಕ್ತಿಕರ ವಿಷಯವೊಂದು ಪ್ರಚಲಿತದಲ್ಲಿದೆ. ಭಕ್ತಿ ಚಳವಳಿಯ ಸಮಯದಲ್ಲಿ (ಸುಮಾರು 7ನೇ-9ನೇ ಶತಮಾನಗಳು) ಸಂತರು, ಶೈವ ನಾಯನಾರ್‌ಗಳು ಮತ್ತು ವೈಷ್ಣವ ಆಳ್ವಾರರು, ಅಸ್ಪಶ್ಯ ಸಮುದಾಯಗಳಿಂದ ತಲಾ ಒಬ್ಬ ಸಂತರನ್ನು ಹೊಂದಿರುತ್ತ್ತಿದ್ದರು. ಪರೈಯ್ಯ ಪುರಾಣದ ಪ್ರಕಾರ, ನಾಯನಾರ್ ಸಂತ ನಂದನಾರ್ ಚರ್ಮದ ಪಟ್ಟಿಗಳಿಂದ ಆವೃತವಾದ ಗುಡಿಸಲುಗಳ ಹೊಸ್ತಿಲಿನಲ್ಲಿ ಜನಿಸಿದರೆಂಬ ದಂತಕತೆಗಳಿವೆ. ಆ ಸಂದರ್ಭದಲ್ಲಿ ಅಲ್ಲಿದ್ದ ಮಾವಿನ ಮರಗಳ ಕೊಂಬೆಗಳಿಗೆ ಡ್ರಮ್‌ಗಳನ್ನು ನೇತುಹಾಕುತಿದ್ದವಂತೆ. ಕೆಳ ಜಾತಿಯ ಕಡೈನಾರ್ ಜನರ ಈ ವಾಸಸ್ಥಾನದಲ್ಲಿ, ಶಿವನ ಪಾದಗಳಿಗೆ ಅರ್ಪಿತರಾದ ನಿಜವಾದ ಭಕ್ತಿಯ ಭಾವನೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಹುಟ್ಟಿಕೊಂಡರು. ನಂದನಾರ್ ಅವರನ್ನು ದೇವಾಲಯದ ಸೇವಕ ಮತ್ತು ಚರ್ಮದ ಕೆಲಸಗಾರ ಎಂದು ವಿವರಿಸಲಾಗಿತ್ತು. ಅವರ ಡ್ರಮ್‌ಗಳಿಗೆ ಪಟ್ಟಿಗಳನ್ನು ಮತ್ತು ಚಿದಂಬರಂ ದೇವಾಲಯದಲ್ಲಿ ಬಳಸುವ ತಂತಿ ವಾದ್ಯಗಳಿಗೆ ತಮ್ಮದೇ ಕರುಳಿನ ದಾರವನ್ನು ಬಳಸುತ್ತಿದ್ದರಂತೆ! ಆದರೂ ಅವರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ. ಈ ಸಮುದಾಯ ಪರೈಯರ್ ನಂದನಾರ್ ಅವರನ್ನು ತಮ್ಮದೇ ಜಾತಿಯವರೆಂದು ಪರಿಗಣಿಸುತ್ತಾರೆ.

ತಮಿಳುನಾಡಲ್ಲಿ ಅಸ್ಪಶ್ಯ ಸಮುದಾಯದ ಪರ ಹೋರಾಡಿದ ಅಯೋತಿ ದಾಸ್ ಅವರು ಪರೈಯರ್ ಜಾತಿಗೆ ಸೇರಿದವರಾಗಿದ್ದರು. 1892ರಲ್ಲಿ, ಅವರು ಪರೈಯರ್‌ಗಳಿಗೆ ಹಿಂದೂ ದೇವಾಲಯಗಳಿಗೆ ಪ್ರವೇಶವನ್ನು ಕೋರಿದರು. ಈ ಕಾರಣಕ್ಕೆ ಬ್ರಾಹ್ಮಣರು ಮತ್ತು ವೆಲ್ಲಲಾರರಿಂದ ತೀವ್ರ ಪ್ರತಿರೋಧವನ್ನು ಎದುರಿಸಿದರು. ಈ ಅನುಭವವು ಹಿಂದೂ ಸಮುದಾಯದೊಳಗೆ ಪರಯ್ಯ ಸಮುದಾಯವನ್ನು ವಿಮೋಚನೆಗೊಳಿಸುವುದು ಅಸಾಧ್ಯವೆಂದು ತಿಳಿದು ನಂತರ ಈ ಸಮುದಾಯವನ್ನು ಬುದ್ಧಿಸಂ ಕಡೆ ಹೊರಡಲು ಪ್ರೇರೇಪಿಸಿದರು. ಪರಯ್ಯ ಸಮುದಾಯ ತಮ್ಮ ಮೇಲೆ ವೈದಿಕ ಹಿಂದೂ ಧರ್ಮೀಯರು ಆಚರಿಸುತ್ತಿದ್ದ ಅಸ್ಪಶ್ಯತೆಯ ಕಾರಣ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಕ್ಕೂ ಮತಾಂತರವಾದ ನಿದರ್ಶನಗಳಿವೆ.

ಅನೇಕ ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಪರಯ್ಯ ಸಮುದಾಯದ ಕುರಿತು ಸಂಶೋಧನೆ ಮಾಡಿದ್ದಾರೆ. ಫ್ರಾನ್ಸಿಸ್ ಬುಕನನ್, ಎಡ್ಗರ್ ಥರ್ಸ್ಟನ್, ಎಲ್ವಿಸ್ ಮುಂತಾದ ಅನೇಕ ಮಾನವಶಾಸ್ತ್ರಜ್ಞರು ಈ ಸಮುದಾಯದ ಬಗ್ಗೆ ಕೆಲಸ ಮಾಡಿದ್ದಾರೆ. ಈ ಸಮುದಾಯ ಕುರಿತು ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕುಲಶಾಸ್ತ್ರೀಯ ಅಧ್ಯಯನಗಳಾಗಿವೆ.

ರಾಬರ್ಟ್ ಕಾಲ್ಡ್‌ವೆಲ್, ಜೆಎಚ್‌ಎ ಟ್ರೆಮೆನ್‌ಹೀರ್ ಮತ್ತು ಎಡ್ವರ್ಡ್ ಜೆವಿಟ್ ರಾಬಿನ್ಸನ್‌ರವರು ಪ್ರಾಚೀನ ಕವಿ, ತಮಿಳು ತತ್ವಜ್ಞಾನಿ ತಿರುವಳ್ಳುವರ್ ಕೂಡ ಒಬ್ಬ ಪರೈಯರ್ ಜಾತಿಗೆ ಸೇರಿದವರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪರಯ್ಯ ಸಮುದಾಯದ ಕುರಿತು ಬರೆಯಲು ಸಾಕಷ್ಟು ಸಮಾಜೋಶಾಸ್ತ್ರೀಯ ಅಧ್ಯಯನಗಳಿವೆ.

ಈಚೆಗೆ ಬೆಂಗಳೂರಿನ ಜಯನಗರದ ಬೈರಸಂದ್ರದ ಕಡೆಯ ಸ್ಲಂನಿಂದ ಬಂದ ಪರಯ್ಯ ಜಾತಿಗೆ ಸೇರಿದ ಕಕ್ಷಿದಾರರು ತಮ್ಮ ಜಾತಿಯ ದಾಖಲೆಗಳನ್ನು ಕೊಟ್ಟಾಗ ಆ ದಾಖಲೆಗಳಲ್ಲಿ ಹೊಲೆಯ ಪರಯ್ಯ ಎಂದು ದಾಖಲಿಸಲಾಗಿತ್ತು. ನಾನು ಈ ಬಗ್ಗೆ ಕುತೂಹಲದಿಂದ ವಿಚಾರಿಸಿದಾಗ ಪರಯ್ಯ, ಪರಯ್ಯರ್, ಪರಯ್ಯನ್‌ಗಳ ಲೋಕ ನನ್ನ ಮುಂದೆ ತೆರೆದುಕೊಳ್ಳತೊಡಗಿತು. ಇವರನ್ನು ವಿನಾಕಾರಣ ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾಗಳು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಕೊಳಚೆ ನಿರ್ಮೂಲನ ಮಂಡಳಿಗೂ ಇವರ ಪರವಾಗಿ ಮನವಿ ನೀಡಿದ್ದೇವೆ. ಇವರನ್ನು ಸ್ಥಳಾಂತರ ಮಾಡಬಾರದೆಂದು ಸಿವಿಲ್ ಕೋರ್ಟಿಗೂ ಹೋಗಿದ್ದೇವೆ.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X