Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾಂತಾರ ಸಿನೆಮಾ ಜತೆ ತಳಕುಹಾಕಿಕೊಂಡ...

ಕಾಂತಾರ ಸಿನೆಮಾ ಜತೆ ತಳಕುಹಾಕಿಕೊಂಡ ‘ಪಂಬದ’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್3 Sept 2025 10:24 AM IST
share
ಕಾಂತಾರ ಸಿನೆಮಾ ಜತೆ ತಳಕುಹಾಕಿಕೊಂಡ ‘ಪಂಬದ’

ಪಂಬದರು ಕಲಾಕಾರರು, ಕರಕುಶಲಕರ್ಮಿಗಳು ಎನ್ನುವುದಕ್ಕೆ ಭೂತಾರಾಧನೆ ಮತ್ತು ಅವರ ಪ್ರವೃತ್ತಿಗಳೇ ಸಾಕ್ಷಿ. ಭೂತಾರಾಧನೆಯಲ್ಲಿ ಬಳಸುವ ಅನೇಕ ಆಲಂಕಾರಿಕ ವಸ್ತುಗಳು ಅವರಲ್ಲಿರುವ ಕರಕುಶಲಗಾರಿಕೆಯನ್ನು ಸಾಬೀತುಪಡಿಸಿದರೆ, ಪಂಬದರ ಪ್ರವೃತ್ತಿಯಾಗಿರುವ ಚಾಪೆ, ಬುಟ್ಟಿಗಳನ್ನು ಹೆಣೆಯುವುದು ಕೂಡ ಅವರ ಕುಶಲತೆಯನ್ನು ತೋರುತ್ತದೆ. ಸೂಲಗಿತ್ತಿಗಳಾಗಿಯೂ ಪಂಬದ ಹೆಂಗಸರು ಖ್ಯಾತರಾಗಿ ಜನಪ್ರಿಯರಾಗಿದ್ದಾರೆ.

‘ಕಾಂತಾರ’ ಎಂಬ ಸಿನೆಮಾ ಬಂದ ನಂತರ ‘ಪಂಬದ’ ಎಂಬ ಜಾತಿಯಿದೆಯೆಂದು ದಕ್ಷಿಣ ಕನ್ನಡ, ಉಡುಪಿಯವರಿಗೆ ಹೊರತುಪಡಿಸಿ ಇತರ ಕರ್ನಾಟಕದ ಕೆಲಜನಕ್ಕೆ ಗೊತ್ತಾಯಿತು ಎನಿಸುತ್ತೆ. ‘ಕಾಂತಾರ’ದಲ್ಲಿ ಪಂಬದ ಸಮುದಾಯದ ಆಚರಣೆಗಳಾದ ಭೂತಾರಾಧನೆ ಮತ್ತದರ ಮುಖವರ್ಣಿಕೆಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ಈ ಸಿನೆಮಾ ಬರಲಿಕ್ಕೂ ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ‘ಪಂಬದ’ ಎಂಬ ಜಾತಿಯೊಂದಿದೆ ಎಂದು ನನ್ನ ಗಮನಕ್ಕೆ ಬಂದ ಸಂದರ್ಭ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ಮಂಗಳೂರಿನ ಸಭೆಯೊಂದರಲ್ಲಿ, ಸಜನಿ ಎಂಬ ಹೆಣ್ಣುಮಗಳೊಬ್ಬರು ತಮ್ಮ ಜಾತಿ ‘ಪಂಬದ’ ಎಂದು ಹೇಳಿಕೊಂಡ ಮಸುಕಾದ ನೆನಪಿದೆ. ನಂತರ ಆ ಸಮುದಾಯದ ಹೆಸರನ್ನು ಮರೆತೇಬಿಟ್ಟಿದ್ದೆ. ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯವರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಕೆಲ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕುರಿತು ಅಧ್ಯಯನ ಮಾಡಬೇಕೆಂದು ಆಯೋಜಿಸಿ ನನ್ನನ್ನು ಮಾರ್ಗದರ್ಶಕನನ್ನಾಗಿ ನೇಮಕ ಮಾಡಿ, ನನಗೆ ಇಂತಹ ಜಾತಿಗಳ ಪಟ್ಟಿ ನೀಡಿದಾಗ ಮತ್ತೊಮ್ಮೆ ‘ಪಂಬದ’ ಎಂಬ ಹೆಸರು ಕಣ್ಣಿಗೆ ಬಿತ್ತು.

ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯವರು, ಪತ್ರಕರ್ತೆ ಮತ್ತು ಬರಹಗಾರ್ತಿಯಾಗಿದ್ದ ಪದ್ಮಾ ಶಿವಮೊಗ್ಗ ಅವರಿಗೆ ಆಹ್ವಾನ ನೀಡಿ ಪಂಬದರ ಕುರಿತು ಸಂಶೋಧನೆ ಮಾಡಿಸಿ ಪುಸ್ತಕ ಪ್ರಕಟಿಸಿದ್ದರು. ಇದರೊಂದಿಗೆ ಆ ಸಮುದಾಯಕ್ಕೇ ಸೇರಿದ ವಾಸುದೇವ ಬೆಳ್ಳೆಯವರು ಕೂಡ ಈ ಸಮುದಾಯದ ಕುರಿತು ಸಾಕಷ್ಟು ಕೆಲಸ ಮಾಡಿದ್ದರು. ಈಚೆಗೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಸಮೀಕ್ಷೆಯಲ್ಲಿ ತುಳುನಾಡಿನ ಮೂಲ ನಿವಾಸಿಗಳಲ್ಲಿ ಒಂದಾದ ಪಂಬದ ಜನಾಂಗದ ಜನಸಂಖ್ಯೆ ಕೆಲವು ನೂರುಗಳಷ್ಟೇ ಇದೆ. ಪಂಬದರು ನೂರಾರು ವರ್ಷಗಳ ನಂತರವೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ವರ್ಷದಿಂದ ವರ್ಷಕ್ಕೆ ಪಂಬದ ಜನಾಂಗದ ಜನಸಂಖ್ಯೆ ಕ್ಷೀಣಿಸುತ್ತಾ ಬಂದಿದೆ! ತುಳುನಾಡಿನ ಸಮಾಜದ ಅವಿಭಾಜ್ಯ ಅಂಗವಾಗಿರುವ ಭೂತಾರಾಧನೆಯಲ್ಲಿ ಭೂತ ಮತ್ತು ಮನುಷ್ಯರ ನಡುವೆ ಸಂಪರ್ಕವನ್ನು ಕಲ್ಪಿಸುವ, ಅಂದರೆ ಭೂತಕ್ಕೆ ನೇಮಕಟ್ಟುವವರು ಪಂಬದ ಜನಾಂಗದವರು. ಭೂತಾರಾಧನೆ ಸಮಯದಲ್ಲಿ ಪಂಬದ ಜಾತಿಗೆ ಸೇರಿದ ವ್ಯಕ್ತಿ ದೈವ ಸ್ವರೂಪವನ್ನು ಪಡೆಯುತ್ತಾನೆ, ಲೌಕಿಕ ಮತ್ತು ಅಲೌಕಿಕದ ನಡುವೆ ಸಂಪರ್ಕ ಕಲ್ಪಿಸುವವನಾಗಿ, ಜನ ನಂಬಿಕೆ ಇಟ್ಟಿರುವ ಅಗೋಚರ ಶಕ್ತಿಯಾಗಿ, ಭೂತದ ಪ್ರತೀಕವಾಗಿ ನಡೆದುಕೊಳ್ಳುತ್ತಾನೆ. ತುಳುನಾಡಿನಲ್ಲಿ ಭೂತಾರಾಧನೆಯಲ್ಲಿ ನಿಯಮ, ಕೋಲ ಕಟ್ಟುವ ಮೂರು ಜನಾಂಗಗಳಿವೆ, ಪಂಬದ, ನಲ್ಕೆ ಮತ್ತು ಪರವ. ಈ ಮೂರೂ ಜಾತಿಗಳವರು ಪರಿಶಿಷ್ಟ ಅಸ್ಪಶ್ಯ ಜಾತಿಗೆ ಸೇರಿದವರಾಗಿದ್ದು ಈ ಜನಾಂಗದವರಿಗೆ ನೇಮಕಟ್ಟುವುದೇ ಕುಲವೃತ್ತಿಯಾಗಿದೆ. ಪಂಬದರ ಕುಲವೃತ್ತಿಯಾದ ಭೂತಾರಾಧನೆ ಧಾರ್ಮಿಕ ರಂಗಕಲೆಯಾಗಿ ವಿಕಾಸ ಹೊಂದಿರುವುದನ್ನು ಗಮನಿಸಬಹುದು. ಪ್ರಾಚೀನ ಕಾಲದಲ್ಲಿ ಮನರಂಜನೆಯ ಪ್ರಕಾರವಾಗಿರಬಹುದಾಗಿದ್ದ ವೇಷಗಾರಿಕೆ, ನೃತ್ಯ, ಕ್ರಮೇಣ ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡು ಇಂದು ಆಚರಣೆಯಾಗಿ ತುಳುನಾಡ ಸಂಸ್ಕೃತಿಯಲ್ಲಿ ಬೆರೆತು ಹೋಗಿದೆ.

ಪಂಬದರು ಕಲಾಕಾರರು, ಕರಕುಶಲಕರ್ಮಿಗಳು ಎನ್ನುವುದಕ್ಕೆ ಭೂತಾರಾಧನೆ ಮತ್ತು ಅವರ ಪ್ರವೃತ್ತಿಗಳೇ ಸಾಕ್ಷಿ. ಭೂತಾರಾಧನೆಯಲ್ಲಿ ಬಳಸುವ ಅನೇಕ ಆಲಂಕಾರಿಕ ವಸ್ತುಗಳು ಅವರಲ್ಲಿರುವ ಕರಕುಶಲಗಾರಿಕೆಯನ್ನು ಸಾಬೀತುಪಡಿಸಿದರೆ, ಪಂಬದರ ಪ್ರವೃತ್ತಿಯಾಗಿರುವ ಚಾಪೆ, ಬುಟ್ಟಿಗಳನ್ನು ಹೆಣೆಯುವುದು ಕೂಡ ಅವರ ಕುಶಲತೆಯನ್ನು ತೋರುತ್ತದೆ. ಸೂಲಗಿತ್ತಿಗಳಾಗಿಯೂ ಪಂಬದ ಹೆಂಗಸರು ಖ್ಯಾತರಾಗಿ ಜನಪ್ರಿಯರಾಗಿದ್ದಾರೆ. ಇವರು ಪ್ರಾಚೀನ ಕಾಲದಿಂದಲೂ ಹೆರಿಗೆ ಮಾಡಿಸುವುದರಲ್ಲಿ ಪರಿಣಿತರಾಗಿದ್ದಾರೆ. ಹಿಂದೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಆಸ್ಪತ್ರೆಯ ಸೌಲಭ್ಯವಿರುವುದು ದುರ್ಲಭವಾಗಿತ್ತು. ಅಂತಹ ಸಮಯದಲ್ಲಿ ಕಷ್ಟಕರವಾದ ಹೆರಿಗೆಗಳನ್ನು ಇವರು ಲೀಲಾಜಾಲವಾಗಿ ಮಾಡಿಸಿದ ಉದಾಹರಣೆಗಳಿವೆ.

ಅನೇಕ ಬುಡಕಟ್ಟುಗಳಲ್ಲಿ ಇರುವಂತೆ ಪಂಬದರಲ್ಲಿಯೂ ಕೂಡ ಅವರದೇ ಆದ ಒಂದು ಭಾಷೆ ಚಾಲ್ತಿಯಲ್ಲಿತ್ತು. ಅದನ್ನು ಮರಗು ಭಾಷೆ ಅನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಷೆಯನ್ನು ಹೆಚ್ಚಾಗಿ ಬಳಸದ ಪರಿಣಾಮ ಇದು ಕೂಡ ಈಗ ನಶಿಸಿ ಹೋಗುತ್ತಿದೆ.

ಪರಿಶಿಷ್ಟ ಜಾತಿಗೆ ಸೇರಿದ ಪಂಬದರು ಕೃಷಿ ಮತ್ತು ಧಾರ್ಮಿಕ ಆಚರಣೆಗಳನ್ನು ಜೀವನೋಪಾಯಕ್ಕೆ ಆಧರಿಸಿಕೊಂಡು ಬಂದವರು. ಪ್ರಾಚೀನ ಕಾಲದಲ್ಲಿ ಅಲೆಮಾರಿಗಳಾಗಿ ಊರಿಂದ ಊರಿಗೆ ಅಲೆಯುತ್ತಾ ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದ ಇವರು ಭೂತಕ್ಕೆ ಕೋಲಕಟ್ಟುತ್ತಿದ್ದರು. ಊರಿನ ಮುಖ್ಯಸ್ಥ ಈ ಕಾರಣಕ್ಕೆ ಪಂಬದರನ್ನು ತನ್ನ ಊರಿನಲ್ಲೇ ಉಳಿಸಿಕೊಳ್ಳುವ ಸಲುವಾಗಿ ಸಣ್ಣ ಅಳತೆಯ ಜಮೀನನ್ನು ನೀಡುತ್ತಿದ್ದನೆಂದು ಕಾಣುತ್ತದೆ. ಹೀಗೆ ಊರಿನ ಒಡೆಯ ಅಥವಾ ಅರಸ ಉಂಬಳಿಯಾಗಿ ಕೊಟ್ಟ ಕುಂಟೆಯಷ್ಟು ಜಮೀನನ್ನು ನಂಬಿಕೊಂಡು ಪಂಬದರು ಅಲ್ಲೇ ನೆಲೆಸಿ ಜೀವನ ನಡೆಸುತ್ತಿದ್ದರು.

ದಲಿತ ಸಮುದಾಯವಾದ ಪಂಬದರು, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ನೆಲೆಯೂರಿದ್ದಾರೆ. ಹಿಂದಿನ ಸರಕಾರಿ ಸಮೀಕ್ಷೆಗೆ ಹೋಲಿಸಿದಾಗ ಕರ್ನಾಟಕದಲ್ಲಿ ಪಂಬದ ಜನಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಪರ ರಾಜ್ಯಗಳಲ್ಲೂ ಪರಿಸ್ಥಿತಿ ಅದೇ ರೀತಿ ಇದೆ. ಪಂಬದ ಸಮುದಾಯ ಕೂಡ ಕೊರಗ ಸಮುದಾಯದಂತೆಯೇ ನಶಿಸಿ ಹೋಗುತ್ತಿದೆ ಎಂಬ ಅನುಮಾನ ಬರುತ್ತದೆ. ಪಂಬದರು ತಮ್ಮ ಜಾತಿಯ ಅಸ್ಮಿತೆ ನಶಿಸಿಹೋಗುತ್ತಿರುವ ಪರಿಣಾಮ ಇತರ ಜಾತಿಗಳ ಹೆಸರಲ್ಲಿ ಜಾತಿ ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಈಚೆಗೆ ಬದುಕನ್ನು ಅರಸಿಕೊಂಡು ಮುಂಬೈಗೂ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ. ಮಹಾರಾಷ್ಟ್ರದ ಜಾತಿ ಪಟ್ಟಿಯಲ್ಲಿ ಪಂಬದ ಜನಾಂಗದ ಹೆಸರು ಇಲ್ಲ, ಹಾಗಾಗಿ ಪಂಬದರು ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ಯಾವುದಾದರೂ ಒಂದು ಜಾತಿಯ ಹೆಸರಿನಲ್ಲಿ ಜಾತಿ ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ, ಹಾಗಾಗಿ ಜನಗಣತಿಯಲ್ಲಿ ಪಂಬದರು ಲೆಕ್ಕಕ್ಕೆ ಸಿಗದೇ ಹೋಗುವಂತಾಗಿದೆ.

ಪದ್ಮಾ ಶಿವಮೊಗ್ಗ ಅವರು ತಮ್ಮ ಸಂಶೋಧನೆಗಾಗಿ ಪಂಬದರ ಸಮೀಕ್ಷೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿದಾಗ 156 ಕುಟುಂಬಗಳು ಇರುವುದು ಅವರ ಗಮನಕ್ಕೆ ಬಂದಿದೆ. ಇವುಗಳಲ್ಲಿ 146 ಮನೆಗಳ ಸಮೀಕ್ಷೆ ಮಾಡಲಾಯಿತು. ಈ ಕುಟುಂಬಗಳ ಒಟ್ಟು ಜನಸಂಖ್ಯೆ 614. ಪದವಿನಂಗಡಿಯಲ್ಲಿ ಹೆಚ್ಚಿನ ಜನ ವಾಸವಾಗಿದ್ದಾರೆ. ಇದು ಪಂಬದರ ಕಾಲನಿ ಎಂದೇ ಜನರಿಂದ ಗುರುತಿಸಲ್ಪಟ್ಟಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಂಬದರು ಹೆಚ್ಚಾಗಿ ವಾಸವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮತ್ತು ಉಡುಪಿಯಲ್ಲಿ ಪಂಬದರ ಜನ ಒಂದಷ್ಟು ಭಾಗ ಇದ್ದಾರೆ.

ಒಟ್ಟಾರೆಯಾಗಿ ಕುಶಲಕಲೆ, ಕುಲವೃತ್ತಿಗಳನ್ನೇ ನಂಬಿರುವ, ಅತಿಕಡಿಮೆ ಜನಸಂಖ್ಯೆಯಿರುವ ಪಂಬದ ಸಮುದಾಯದ ಅಸ್ಮಿತೆಯನ್ನು ಉಳಿಸಿಕೊಳ್ಳುವುದರೊಂದಿಗೆ, ಸರಕಾರ ಇಂತಹ ಸಮುದಾಯಗಳ ಏಳಿಗೆಯ ದೃಷ್ಟಿಯಿಂದ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಬೇಕಿದೆ. ಈಚಿನ ಒಳಮೀಸಲಾತಿ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಸರಕಾರ ಕೈಗೊಂಡ ಸಚಿವ ಸಂಪುಟದ ಅಮಾನವೀಯ ನಿರ್ಣಯದ ಅಲೆಮಾರಿಗಳ ಪಟ್ಟಿಯಲ್ಲಿ ಪಂಬದರೂ ಇದ್ದಾರೆ ಎಂಬುದು ಗಮನಾರ್ಹ!

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X