Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಹಲ್ಗಾಮ್ ದಾಳಿ: ಯಾರ ಬಂದೂಕಿಗೆ ಯಾರ...

ಪಹಲ್ಗಾಮ್ ದಾಳಿ: ಯಾರ ಬಂದೂಕಿಗೆ ಯಾರ ತೋಳು?

ಮುಹಮ್ಮದ್ ಶರೀಫ್ ಕಾಡುಮಠಮುಹಮ್ಮದ್ ಶರೀಫ್ ಕಾಡುಮಠ1 May 2025 10:17 AM IST
share
ಪಹಲ್ಗಾಮ್ ದಾಳಿ: ಯಾರ ಬಂದೂಕಿಗೆ ಯಾರ ತೋಳು?
ಜಾಗತಿಕ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಎರಡು ದೊಡ್ಡ ರಾಷ್ಟ್ರಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಭಾರತದ ಸ್ವರ್ಗದಂತಹ ನಾಡು ನೆತ್ತರ ಹೊಳೆಯಾಯಿತೇ? ಅಮಾಯಕ ಜೀವಗಳು ಬಲಿಯಾಗಬೇಕಾಯಿತೇ? ಹದ್ದು-ಚೇಳುಗಳ ನಡುವಿನ ಕಾದಾಟಕ್ಕೆ ಭಾರತ- ಪಾಕ್ ರಾಷ್ಟ್ರಗಳು, ಅವುಗಳ ನಡುವಿನ ಬಿಕ್ಕಟ್ಟು ಸುಲಭ ಆಯುಧವಾದಂತೆ ಕಾಣಿಸುತ್ತಿದೆ. ಈ ಎರಡೂ ರಾಷ್ಟ್ರಗಳ ಬಿಕ್ಕಟ್ಟಿನ ಪ್ರಮುಖ ಕೇಂದ್ರವಾಗಿರುವ ಕಾಶ್ಮೀರ ಗಡಿ ಸಮಸ್ಯೆಗೆ ಭಯೋತ್ಪಾದನೆ ಎಂಬ ದ್ವೇಷದ ಮದ್ದುಗುಂಡು ಬಳಸಿ ಚೀನಾ ಹೊಡೆದಿರಬಹುದೇ?

ಕೃತಕ ಬುದ್ಧಿಮತ್ತೆಯ ವಿಚಾರದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ನಿರಂತರ ಪೈಪೋಟಿ ನಡೆಯುತ್ತಿದೆ. ಅಮೆರಿಕದ ಚಾಟ್ ಜಿಪಿಟಿ ತಂತ್ರಜ್ಞಾನಕ್ಕೆ ಎದುರಾಗಿ ಚೀನಾ ‘ಡೀಪ್ ಸೀಕ್’ ಅನ್ನು ಪರಿಚಯಿಸಿ ಅಮೆರಿಕದ ಡಿಜಿಟಲ್ ಮಾರುಕಟ್ಟೆಯನ್ನೇ ಬುಡಮೇಲು ಮಾಡಿತು. ಇದು ಅಮೆರಿಕಕ್ಕೆ ಅನಿರೀಕ್ಷಿತ ಆಘಾತ ನೀಡಿದ್ದರಿಂದ ಹಾಗೂ ಎಐ ಗ್ಲೋಬಲ್‌ನಲ್ಲಿ ತನಗೆ ಪ್ರತಿಸ್ಪರ್ಧಿ ಇದ್ದಾರೆ ಎನ್ನುವುದನ್ನು ಚೀನಾ ಗೊತ್ತುಪಡಿಸಿದ್ದರಿಂದ ಇದನ್ನು ಅಮೆರಿಕ ‘ಸ್ಪುಟ್ನಿಕ್ ಕ್ಷಣ’ ಎಂದು ಕರೆಯಿತು. ಸೋವಿಯತ್ ರಶ್ಯ 1957ರಲ್ಲಿ ಮೊದಲ ಕೃತಕ ಉಪಗ್ರಹ ಸ್ಪುಟ್ನಿಕ್-1ಅನ್ನು ಪ್ರಾರಂಭಿಸಿದಾಗ ಅದು ಅಮೆರಿಕವನ್ನು ಇದೇ ಮಾದರಿಯಲ್ಲಿ ಬೆಚ್ಚಿ ಬೀಳಿಸಿತ್ತು. ವಿಜ್ಞಾನ ತಂತ್ರಜ್ಞಾನದಲ್ಲಿ ಸೋವಿಯತ್ ರಶ್ಯ ತನಗಿಂತ ಬಹಳ ಮುಂದಿದೆ ಎನ್ನುವುದನ್ನು ಮನದಟ್ಟು ಮಾಡಿಕೊಂಡ ಅಮೆರಿಕ, ಮುಂದಿನ ವರ್ಷವೇ ನಾಸಾ(ನ್ಯಾಷನಲ್ ಏರೋನಾಟಿಕ್ಸ್ ಸ್ಪೇಸ್ ಆ್ಯಕ್ಟ್) ಆರಂಭಿಸಿತು. ಸದ್ಯ ಕಡಿಮೆ ದರದಲ್ಲಿ ಚೀನಾ ಛೂಬಿಟ್ಟ ಡೀಪ್ ಸೀಕ್, ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿ, ನಂತರದಲ್ಲಿ ಅದು ಬೇರೆ ಬೇರೆ ಕ್ಷೇತ್ರಗಳಲ್ಲಿನ ಪೈಪೋಟಿಗಳಿಗೂ ಕಾರಣವಾಯಿತು. ಇದು ಸುಂಕ ಹೆಚ್ಚಳದಲ್ಲಿನ ಅತಿರೇಕದ ಪೈಪೋಟಿಗೂ ಎಡೆಮಾಡಿಕೊಟ್ಟಿತು. ಜಾಗತಿಕ ಮಾರುಕಟ್ಟೆಯಲ್ಲಿ ಚೀನಾಕ್ಕೆ ಹೊಡೆತ ನೀಡಲು ಅಮೆರಿಕ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದು ಸದ್ಯದ ಅಮೆರಿಕ- ಚೀನಾ ನಡುವಿನ ಜಾಗತಿಕ ಮಾರುಕಟ್ಟೆಯ ಸೆಣಸಾಟದ ಚಿತ್ರಣ.

ಈ ಎರಡೂ ರಾಷ್ಟ್ರಗಳು ಪಾಕಿಸ್ತಾನವನ್ನು ಒಂದು ಆಯುಧದ ರೀತಿಯಲ್ಲಿ ಬಳಸುತ್ತ ಬಂದಿದೆ. ವಿಶ್ವದ ಕಣ್ಣಿಗೆ ಇದು ಹೊಸತೇನಲ್ಲ. ಪಾಕಿಸ್ತಾನದ ಪರಿಸ್ಥಿತಿ ಹೇಗಿದೆಯೆಂದರೆ, ಅದು ಈ ಎರಡೂ ರಾಷ್ಟ್ರಗಳಲ್ಲಿ ಕೇವಲ ಚೀನಾದ ಪರವಾಗಿಯೋ ಅಥವಾ ಕೇವಲ ಅಮೆರಿಕದ ಪರವಾಗಿಯೋ ನಿಲ್ಲುವಂತೆಯೂ ಇಲ್ಲ. ಭಯೋತ್ಪಾದನೆ ನಿಗ್ರಹಿಸುವಂತೆ ಪಾಕ್‌ಗೆ ಅಮೆರಿಕ ಹಲವು ಬಾರಿ ಸೂಚಿಸಿದರೂ ಪಾಕಿಸ್ತಾನ ಒಳಗೊಳಗೆ ಉಗ್ರರ ಚಟುವಟಿಕೆಗಳನ್ನು ಸ್ವತಃ ಲಾಭಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಬಿನ್ ಲಾದೆನ್‌ಗೆ ಆಶ್ರಯ ನೀಡಿದ ವಿಚಾರವಾಗಿ, ಪಾಕಿಸ್ತಾನದ ಬಗೆಗಿದ್ದ ವಿಶ್ವಾಸವನ್ನು ಅಮೆರಿಕ ಕಳೆದುಕೊಂಡಿತು. ಈ ಕಾರಣಕ್ಕಾಗಿಯೇ ಪಾಕಿಸ್ತಾನ ಸರಕಾರಕ್ಕೆ, ಸೇನೆಗೆ ಯಾವುದೇ ಮುನ್ಸೂಚನೆ ನೀಡದೆ ಅಮೆರಿಕವು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಲಾದೆನ್ ಮೇಲೆ ದಾಳಿ ನಡೆಸಿತ್ತು. ಇದಾದ ನಂತರದಲ್ಲಿ ಅಮೆರಿಕ-ಪಾಕ್ ಬಾಂಧವ್ಯ ಹಳಸುತ್ತಲೇ ಬಂದರೂ ಆಗಾಗ ಸಣ್ಣಪುಟ್ಟ ಸಂಬಂಧ ಸಹಕಾರ ಮುಂದುವರಿದಿದೆ. ಚೀನಾದ ಜೊತೆಗೆ ಪಾಕಿಸ್ತಾನದ ಸಂಬಂಧ ಪ್ರಬಲವಾಗಿಯೇ ಇದೆ. ಮುಖ್ಯವಾಗಿ ಚೀನಾ-ಭಾರತ ನಡುವಿನ ಸಂಬಂಧಕ್ಕಿಂತ ಚೆನ್ನಾಗಿದೆ. ಆರ್ಥಿಕ ದಿವಾಳಿತನ ಎದುರಿಸುತ್ತಿರುವ ಪಾಕಿಸ್ತಾನ ಸದ್ಯ ಚೀನಾವನ್ನು ಅವಲಂಬಿಸುವುದು ಸಹಜ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಚೀನಾ, ಪಾಕಿಸ್ತಾನದ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಮೂಲಕ ಅತ್ತ ಅಮೆರಿಕ ಹಾಗೂ ಇತ್ತ ಭಾರತದ ಅಂತರ್‌ರಾಷ್ಟ್ರೀಯ ಬೆಳವಣಿಗೆಗಳ ಮೇಲೆ ಏಟು ಕೊಟ್ಟಿತೇನೋ ಎನ್ನುವ ಅನುಮಾನ ಮೂಡುತ್ತಿದೆ.

ಪಹಲ್ಗಾಮ್ ದಾಳಿ: ಯಾರ ಕೈವಾಡ?

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯ ಹಿಂದೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಕೈವಾಡ ಯಾವುದೋ ಪ್ರಭಾವಿ ರಾಷ್ಟ್ರದ್ದೇ ಇರಬಹುದು ಎಂದೆನಿಸಿದಾಗ ಮೊದಲಿಗೆ ಕಣ್ಮುಂದೆ ಬಂದದ್ದು ಚೀನಾ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರತೀ ಬೆಳವಣಿಗೆಗಳು ಕೂಡಾ ಚೀನಾಕ್ಕೆ ಮುಖ್ಯವೇ ಎನಿಸಿದೆ. ಚೀನಾಕ್ಕೆ ಎಷ್ಟು ಮುಖ್ಯವೋ, ಭಾರತ ಹಾಗೂ ಅಮೆರಿಕಕ್ಕೂ ಅಷ್ಟೇ ಮುಖ್ಯ. ಪಾಕಿಸ್ತಾನದೊಂದಿಗಿನ ಸಂಬಂಧದ ಮೂಲಕ ಚೀನಾ ಎಲ್ಲಿಯವರೆಗೆ ಲಾಭ ಪಡೆಯುತ್ತಿದೆ ಎಂಬುದನ್ನು ಅದು ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪಾಕ್ ಬೆಂಬಲಕ್ಕೆ ನಿಲ್ಲುವುದನ್ನು ಗಮನಿಸಿದಾಗಲೇ ಅರ್ಥವಾಗಬಹುದು. ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಿದರೆ ಆರ್ಥಿಕ ಪ್ರಾಬಲ್ಯದ ದೃಷ್ಟಿಯಿಂದ, ಗಲ್ಫ್ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಹಾದಿ ಸುಗಮಗೊಳಿಸಲು ಮತ್ತು ಹಲವು ರೀತಿಯ ಲಾಭಗಳು ಚೀನಾಕ್ಕೆ ಇವೆ. ಜೊತೆಗೆ ಪ್ರಬಲವಲ್ಲದ ಪಾಕಿಸ್ತಾನದ ಮುಂದೆ ಭಾರತ ಸೋತಿತು ಎನ್ನುವುದನ್ನು ಎತ್ತಿಹಿಡಿದು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಕುಗ್ಗಿಸುವ ಉದ್ದೇಶದಿಂದ, ಚೀನಾ, ಭಾರತ ಗಡಿ ವಿಚಾರವಾಗಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಸುಲಭವಾಗಿಸಲು ಈ ರೀತಿಯ ವಾಮಮಾರ್ಗ ಬಳಸುತ್ತಿರಬಹುದು. ಚೀನಾ ನಿಧಾನವಾಗಿ ತನ್ನ ಭೌಗೋಳಿಕ ಪ್ರದೇಶದ ವಿಸ್ತಾರವನ್ನು ಹಬ್ಬಿಸುತ್ತಿರುವ ರೀತಿ ಹೊರಗಿನ ಜಗತ್ತಿಗೆ ಗೊತ್ತಾಗದಂತೆ ನಡೆಯುತ್ತಿದೆ. ದ್ವೀಪರಾಷ್ಟ್ರಗಳನ್ನು ಕಬಳಿಸುವ ಚೀನಾದ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ. ಇದೇ ರೀತಿ ಭಾರತದ ಭೂಭಾಗವನ್ನು ತನ್ನದಾಗಿಸುವ ಪ್ರಯತ್ನಕ್ಕೆ ಪ್ರಬಲ ಶಕ್ತಿ ಬಳಸುತ್ತಿದೆ.

ಒಂದು ದಾಳಿ-ಹಲವು ಗುರಿ

ಒಂದು ವೇಳೆ ಪಹಲ್ಗಾಮ್ ಸ್ಫೋಟದ ಹಿಂದೆ ಚೀನಾದ ಕೈವಾಡ ಇದೆಯೆಂದಾದರೆ ಅದರ ಲೆಕ್ಕಾಚಾರ ಏನಿರಬಹುದು ಎನ್ನುವುದು ಗಮನಾರ್ಹ. ಅಮೆರಿಕ- ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ, ರಕ್ಷಣಾ ಮತ್ತು ಇಂಧನ ವಲಯದ ಸಹಕಾರದ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಎಪ್ರಿಲ್ 21ರಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ ಬರುತ್ತಾರೆ. ಮರುದಿನ ಪ್ರಧಾನಿ ಮೋದಿಯವರು ಸೌದಿ ಅರೇಬಿಯದ ಜಿದ್ದಾಗೆ ಭೇಟಿ ನೀಡುತ್ತಾರೆ. ನಾಲ್ಕು ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಜಿದ್ದಾ ಎನ್ನುವ ಪ್ರಮುಖ ಪ್ರದೇಶಕ್ಕೆ ಭೇಟಿ ನೀಡಿದ್ದು. ಈ ಭೇಟಿ ಭಾರತ ಹಾಗೂ ಸೌದಿ ನಡುವಿನ ಬಾಂಧವ್ಯ ವೃದ್ಧಿಸುವ ಉದ್ದೇಶ, ಪರಸ್ಪರ ಸಹಕಾರ, ಸಾಂಸ್ಕೃತಿಕ ಬೆಸುಗೆ ಗಟ್ಟಿಗೊಳಿಸುವ ಗುರಿ ಒಳಗೊಂಡಿತ್ತು. ಇದು ಭವಿಷ್ಯದಲ್ಲಿ ಭಾರತಕ್ಕೆ ಹೆಚ್ಚಿನ ಲಾಭ ಉಂಟು ಮಾಡಬಹುದಾದದ್ದು. ಸೌದಿ ಅರೇಬಿಯದೊಂದಿಗೆ ಚೀನಾ ಕೂಡ ವ್ಯಾಪಕವಾಗಿ ಸಂಬಂಧ ಬೆಳೆಸುತ್ತಿದೆ. ಅದರ ಜಾಗತಿಕ ಮಾರುಕಟ್ಟೆಯ ವಿಸ್ತರಣೆಯಲ್ಲಿ ಸೌದಿ ಕೂಡಾ ಪ್ರಮುಖ ಗುರಿ. ಸೌದಿ ಅರೇಬಿಯದಲ್ಲಿ ಚೀನಾದ ಕಂಪೆನಿಗಳು ಹೆಚ್ಚುತ್ತಿವೆ. ಹೀಗಿರುವಾಗ ಸೌದಿ ಜೊತೆಗಿನ ಭಾರತದ ಸಂಬಂಧವನ್ನು ಕೆಡವುವ ಉದ್ದೇಶ ಕೂಡ ಚೀನಾಕ್ಕೆ ಇದ್ದಿರಬಹುದು. ಈ ಮೂಲಕ ಒಂದು ಭಯೋತ್ಪಾದಕ ದಾಳಿಯ ಮೂಲಕ ಚೀನಾವು ಅಮೆರಿಕ-ಭಾರತ- ಸೌದಿ ಅರೇಬಿಯ ನಡುವಿನ ಅಂತರ್‌ರಾಷ್ಟ್ರೀಯ ಬೆಳವಣಿಗೆಗಳಿಗೆ ಚಪ್ಪಡಿಕಲ್ಲು ಹಾಕುವ ಕುತಂತ್ರ ನಡೆಸಿರಬಹುದು. ಜೆ.ಡಿ. ವ್ಯಾನ್ಸ್ ಭಾರತದಲ್ಲಿರುವಾಗ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದರೆ ಅದು ಅಮೆರಿಕಕ್ಕೆ ಕೊಟ್ಟ ಒಂದು ಸೂಚನೆಯೂ ಆಗಿರಬಹುದು. ಚರ್ಚೆಯ ದಿಕ್ಕುತಪ್ಪಿಸಿ ಭಾರತ-ಪಾಕ್ ಕಚ್ಚಾಟದಂತೆ ಬಿಂಬಿಸಿ, ಹಿಂದೂ-ಮುಸ್ಲಿಮ್ ನಡುವೆ ಬಿರುಕು ಉಂಟುಮಾಡಿ ಇತ್ತ ಅಂತರ್‌ರಾಷ್ಟ್ರೀಯ ವಿಚಾರಗಳ ಚರ್ಚೆ ಆಗದಂತೆ, ಸೌದಿ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯವರು ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಬರಬೇಕೆನ್ನುವ ಒತ್ತಡ ಸೃಷ್ಟಿ ಮಾಡುವುದು, ಜೆ.ಡಿ.ವ್ಯಾನ್ಸ್ ಭಾರತ ಪ್ರವಾಸ ಮೊಟಕುಗೊಳಿಸಿ ಅಮೆರಿಕಕ್ಕೆ ಮರಳಬಹುದು ಎನ್ನುವ ನಿರೀಕ್ಷೆಯೊಂದಿಗೆ ಈ ದಾಳಿ ನಡೆದಿರಬಹುದು. ಮೋದಿಯವರು ಹಿಂದಿರುಗಿದರು. ಒಬ್ಬ ಪ್ರಧಾನಿಯಾಗಿ ಅದನ್ನು ಮಾಡಲೇಬೇಕಿದ್ದರಿಂದ ಅವರು ಬಂದರು. ಆದರೆ ವ್ಯಾನ್ಸ್ ಅಮೆರಿಕಕ್ಕೆ ತಕ್ಷಣ ಹಿಂದಿರುಗಲಿಲ್ಲ. ಅಂದರೆ ಅಮೆರಿಕಕ್ಕೆ ದಾಳಿಯ ಹಿಂದಿನ ಉದ್ದೇಶ ಅರ್ಥವಾಗಿ, ವ್ಯಾನ್ಸ್ ಅವರನ್ನು ಭಾರತದಲ್ಲಿಯೇ ಇರುವಂತೆ ಸೂಚಿಸಿ ತಾನು ಇದಕ್ಕೆಲ್ಲ ಬಗ್ಗಲ್ಲ ಎನ್ನುವ ಸಂದೇಶವನ್ನು ಅಮೆರಿಕ ಚೀನಾಕ್ಕೆ ರವಾನಿಸಿರಬಹುದೇ?

ದಾಳಿಯ ಸುದ್ದಿಗೆ ಚೀನಾದ ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟಿಲ್ಲ ಎನ್ನಲಾಗುತ್ತಿದೆ. ಆದರೆ ಅಮೆರಿಕ ವಿವರವಾಗಿ ಸುದ್ದಿ, ಲೇಖನಗಳನ್ನು ಪ್ರಕಟಿಸಿದೆ. ತನ್ನದೇ ಕೃತ್ಯ ಎನ್ನುವುದು ಚೀನಾ ಈ ಸುದ್ದಿಗೆ ಒತ್ತು ಕೊಡದಿರಲು ಕಾರಣವಿರಬಹುದು.

ಜಾಗತಿಕ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಎರಡು ದೊಡ್ಡ ರಾಷ್ಟ್ರಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಭಾರತದ ಸ್ವರ್ಗದಂತಹ ನಾಡು ನೆತ್ತರ ಹೊಳೆಯಾಯಿತೇ? ಅಮಾಯಕ ಜೀವಗಳು ಬಲಿಯಾಗಬೇಕಾಯಿತೇ? ಹದ್ದು-ಚೇಳುಗಳ ನಡುವಿನ ಕಾದಾಟಕ್ಕೆ ಭಾರತ- ಪಾಕ್ ರಾಷ್ಟ್ರಗಳು, ಅವುಗಳ ನಡುವಿನ ಬಿಕ್ಕಟ್ಟು ಸುಲಭ ಆಯುಧವಾದಂತೆ ಕಾಣಿಸುತ್ತಿದೆ. ಈ ಎರಡೂ ರಾಷ್ಟ್ರಗಳ ಬಿಕ್ಕಟ್ಟಿನ ಪ್ರಮುಖ ಕೇಂದ್ರವಾಗಿರುವ ಕಾಶ್ಮೀರ ಗಡಿ ಸಮಸ್ಯೆಗೆ ಭಯೋತ್ಪಾದನೆ ಎಂಬ ದ್ವೇಷದ ಮದ್ದುಗುಂಡು ಬಳಸಿ ಚೀನಾ ಹೊಡೆದಿರಬಹುದೇ?

ಕಾಶ್ಮೀರ ಕೈವಶಕ್ಕೆ ಹೊಂಚು?

ಚೀನಾ ಪಾಕಿಸ್ತಾನ ವಿಶೇಷ ಆರ್ಥಿಕ ಕಾರಿಡಾರ್ ಯೋಜನೆಯಡಿ(ಸಿಪಿಇಸಿ) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆದ್ದಾರಿ ಅಭಿವೃದ್ಧಿ ಪಡಿಸಿ ರೈಲು ಮಾರ್ಗಗಳ ಯೋಜನೆಗೂ ಸಿದ್ಧವಾಗಿದೆ. ಅಲ್ಲದೆ ಗಲ್ಫ್ ರಾಷ್ಟ್ರಗಳೊಂದಿಗೆ ಇಂಧನ ವ್ಯಾಪಾರದ ಉದ್ದೇಶದಿಂದ ಪಾಕಿಸ್ತಾನದ ಗದಾರ್ ಬಂದರಿನಿಂದ ಚೀನಾ ಕಡೆಗೆ ಪೈಪ್‌ಲೈನ್ ವ್ಯವಸ್ಥೆ ನಿರ್ಮಿಸುವ ಚಿಂತನೆಯನ್ನೂ ಈ ಯೋಜನೆ ಒಳಗೊಂಡಿದೆ. ಒಂದು ವೇಳೆ ಕಾಶ್ಮೀರವನ್ನು ಪಾಕಿಸ್ತಾನ ಸಂಪೂರ್ಣವಾಗಿ ವಶಪಡಿಸಿಕೊಂಡರೆ ಅದರ ಸಂಪೂರ್ಣ ಲಾಭ ಚೀನಾಕ್ಕೆ ಸಿಗುತ್ತದೆಯೇ ಹೊರತು ಪಾಕಿಸ್ತಾನಕ್ಕೆ ಅಲ್ಲ. ’ಕಾಶ್ಮೀರ ಬೇಕು’ ಪಾಕಿಸ್ತಾನದ ಕೂಗು, ವಾಸ್ತವದಲ್ಲಿ ಚೀನಾದ ಬೇಡಿಕೆಯ ಪ್ರತಿಧ್ವನಿ ಅಷ್ಟೆ. ಆರ್ಥಿಕವಾಗಿ ಪಾಕಿಸ್ತಾನವನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡು ಆಟವಾಡಿಸುತ್ತಿದೆ. ಚೀನಾ ಹೇಳಿದಂತೆ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿ ಪಾಕ್ ಮುಂದಿದೆ. ಹೀಗಿರುವಾಗ ವ್ಯಾಪಾರ ವ್ಯವಹಾರಗಳಿಗೆ ಚೀನಾಕ್ಕೆ ಬಹುಮುಖ್ಯ ಎನಿಸಿರುವ ಕಾಶ್ಮೀರ, ಪಾಕಿಸ್ತಾನದ ಕೈವಶವಾದರೆ ಅದು ಚೀನಾದ ವಶವಾದಂತೆಯೇ ಅಲ್ಲವೇ? ಆ ನಿಟ್ಟಿನಲ್ಲಿ ಪಾಕಿನ ಹೆಗಲ ಮೇಲೆ ಚೀನಾ ಬಂದೂಕು ಇಟ್ಟು ಹೊಡೆದಿದೆ ಎಂಬ ಅನುಮಾನ ದಟ್ಟವಾಗಿಯೇ ಮೂಡುತ್ತದೆ. ಒಂದು ವೇಳೆ ಭಾರತ- ಪಾಕ್ ಯುದ್ಧವಾದರೂ ಕೂಡ ಚೀನಾವು ಪಾಕಿಸ್ತಾನದ ಬೆನ್ನಿಗೆ ನಿಲ್ಲಲಿದೆ. ಇಂತಹ ಸನ್ನಿವೇಶದಲ್ಲಿ ಪಾಕ್ ಜೊತೆಗೆ ಯುದ್ಧಕ್ಕೆ ಸಿದ್ಧವಾಗುವ ಬದಲು ಅಮೆರಿಕದ ಸಹಾಯ ಬಳಸಿ ನೇರವಾಗಿ ಬುಡಕ್ಕೆ(ಚೀನಾಕ್ಕೆ) ಹೊಡೆಯುವ ಪ್ರಯತ್ನಕ್ಕೆ ಭಾರತ ಕೈಹಾಕಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಸುಲಭ ಸಾಧ್ಯವಲ್ಲದೇ ಇದ್ದರೂ ಒಂದು ಎಚ್ಚರಿಕೆಯ ರೂಪದಲ್ಲಿಯಾದರೂ ಅದು ಕೆಲಸ ಮಾಡಬಹುದು ಅನಿಸುತ್ತದೆ.

ಇತ್ತೀಚಿನ ಬೆಳವಣಿಗೆ ಎಂದರೆ ಪಹಲ್ಗಾಮ್ ದಾಳಿಯ ಕುರಿತು, ನ್ಯಾಯಸಮ್ಮತ, ತ್ವರಿತ ತನಿಖೆ ಆಗಬೇಕು ಎಂದಿರುವ ಚೀನಾ, ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ರಕ್ಷಣಾ ಹಿತಾಸಕ್ತಿ ಕಾಪಾಡಿಕೊಳ್ಳಲು ಬೇಕಾದ ಬೆಂಬಲ ಒದಗಿಸುವುದಾಗಿ ಹೇಳಿಕೆ ನೀಡಿದೆ. ಜೊತೆಗೆ ಭಾರತ-ಪಾಕ್ ಬಿಕ್ಕಟ್ಟಿನ ಲಾಭ ನಷ್ಟದ ಕುರಿತೂ ವಿಷಯವೆತ್ತಿದೆ. ಚೀನಾಕ್ಕೆ ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವೇನಿದೆ ಎಂಬುದನ್ನು ಅವಲೋಕಿಸಬೇಕಿದೆ.

ಇಷ್ಟೆಲ್ಲ ಬೆಳವಣಿಗೆಗಳು ಈ ಘಟನೆಯ ಸುತ್ತ ಅಂತರ್‌ರಾಷ್ಟ್ರೀಯ ವಲಯದಲ್ಲಿ ನಡೆಯುತ್ತಿದ್ದರೆ ಇತ್ತ ಭಾರತದೊಳಗೆ ನಡೆಯುತ್ತಿರುವ ಬೆಳವಣಿಗೆಗಳೇ ಬೇರೆ. ಇದುವರೆಗಿನ ಉಗ್ರರ ದಾಳಿಯ ಸನ್ನಿವೇಶಕ್ಕಿಂತ ಭಿನ್ನವಾದ ಪರಿಣಾಮವನ್ನು ಭಾರತದ ಜನರ ಮನಸ್ಸಿನ ಮೇಲೆ ಪಹಲ್ಗಾಮ್ ಘಟನೆ ಬೀರಿದೆ. ಪುಲ್ವಾಮಾ ಘಟನೆ ಸರಕಾರದ ವೈಫಲ್ಯಗಳ ಸುತ್ತ, ಬಿಜೆಪಿ ಅದರ ರಾಜಕೀಯ ಲಾಭ ಪಡೆದದ್ದರ ಸುತ್ತ ಸುತ್ತಿದರೆ, ಪಹಲ್ಗಾಮ್ ದಾಳಿ ಕಾಶ್ಮೀರದ ಜನರ ಮಾನವೀಯ ನಡೆಯನ್ನು ಇಡೀ ಭಾರತಕ್ಕೆ ಮುಟ್ಟಿಸಿತು. ಕಾಶ್ಮೀರದ ಬಗ್ಗೆ ಇದ್ದ ಜನರ ತಪ್ಪುಕಲ್ಪನೆಯನ್ನು ಹೋಗಲಾಡಿಸಿತು. ದಾಳಿಯಲ್ಲಿ ತನ್ನವರನ್ನು ಕಳೆದುಕೊಂಡ ಹಲವರು, ನೋವಿನ ನಡುವೆಯೂ ಕಾಶ್ಮೀರಿಗಳ ನೆರವು ಸಹಕಾರ ಸ್ಮರಿಸಲು ಮರೆಯಲಿಲ್ಲ. ಇದು ದೊಡ್ಡಮಟ್ಟದ ಪ್ರಭಾವವನ್ನು ಜನರಲ್ಲಿ ಬೀರಿದೆ ಎಂದೇ ಅನಿಸುತ್ತದೆ. ಸಹಜವಾಗಿ ಬಿಜೆಪಿ ಹಾಗೂ ಅದರ ಬೆಂಬಲಿಗರು ಮುಸ್ಲಿಮ್ ದ್ವೇಷ ಹರಡುವುದರಲ್ಲಿ ನಿರತರಾದರೂ ಕೂಡ ಅದಕ್ಕಿಂತ ಹೆಚ್ಚಿನ ಪ್ರಭಾವ ಬೀರಿದ್ದು ಕಾಶ್ಮೀರಿಗಳ ನಡೆ, ಆ ಕುರಿತ ಹಲವಾರು ದೃಶ್ಯಾವಳಿಗಳು.

ಕಾಶ್ಮೀರ-ಮತ್ತೆ ಚಿಗುರುವ ಕನಸು

ದಾಳಿಯ ನಂತರವೂ ಪಹಲ್ಗಾಮ್‌ಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಖ್ಯಾತ ನಟ ಅತುಲ್ ಕುಲಕರ್ಣಿ ಕೂಡ ಪಹಲ್ಗಾಮ್‌ಗೆ ಭೇಟಿ ಕೊಟ್ಟಿದ್ದು, ಅವರ ಹೇಳಿಕೆ ಆಶಾದಾಯಕ ಮತ್ತು ಪ್ರೀತಿಯ ಸೆಳೆಯನ್ನು ಪರಿಚಯಿಸಿದೆ. ‘‘ದಾಳಿ ನಡೆಯಿತು ಎನ್ನುವ ಕಾರಣಕ್ಕೆ ಕಾಶ್ಮೀರಕ್ಕೆ ಪ್ರವಾಸ ಮಾಡದಿರುವುದು ಸರಿಯಾದ ನಡೆ ಅಲ್ಲ. ಸಂಕಟದ ಈ ಹೊತ್ತಿನಲ್ಲಿ ನಾವು ಕಾಶ್ಮೀರಿಗಳ ಜೊತೆ ನಿಲ್ಲಬೇಕು. ಅವರನ್ನು ಬೆಂಬಲಿಸಬೇಕು. ಇದು ನಮ್ಮದೇ ಕಾಶ್ಮೀರ, ನಾವಿಲ್ಲಿಗೆ ಬಾರದೇ ಇದ್ದರೆ ಹೇಗೆ? ಹೆಚ್ಚು ಹೆಚ್ಚು ಜನ ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ, ಕಾಶ್ಮೀರ ನಮ್ಮದು, ನಾವಿಲ್ಲಿಗೆ ಬಂದೇ ಬರುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಬೇಕು. ಬೇರೆ ಕಡೆಗಳಿಗೆ ಪ್ರವಾಸ ಹೊರಡಲು ಯೋಜನೆ ಹಾಕಿದವರು ಅದನ್ನು ಮೊಟಕುಗೊಳಿಸಿ ಕಾಶ್ಮೀರಕ್ಕೆ ಬನ್ನಿ’’. ಅವರ ಈ ಹೇಳಿಕೆ ನಿಜಕ್ಕೂ ಪ್ರತೀ ಭಾರತೀಯನ ಮನಸ್ಸನ್ನು ನಾಟಬೇಕು. ಪಾಕಿಸ್ತಾನ ತಗಾದೆ ತೆಗೆದಾಗ ಕಾಶ್ಮೀರ ನಮ್ಮದು ಎನ್ನುತ್ತೇವೆ ನಾವು, ಕಾಶ್ಮೀರ ಬೇಕು, ಕೊಡಲ್ಲ, ಅದು ಭೂಲೋಕದ ಸ್ವರ್ಗ ಇನ್ನೂ ಏನೇನೋ ಹೇಳುತ್ತಲೇ ಇರುತ್ತೇವೆ. ಆದರೆ ‘ಕಾಶ್ಮೀರಿಗಳು ನಮ್ಮವರು’ ಎಂದು ಯಾವಾಗ ಹೇಳಿದ್ದೇವೆ? ಅತುಲ್ ಕುಲಕರ್ಣಿಯವರ ಮಾತಿನಲ್ಲಿ ತೀವ್ರವಾದ ಸಂವೇದನೆ, ಕಾಶ್ಮೀರಿಗಳ ಮೇಲಿನ ಪ್ರೀತಿ ಎದ್ದು ಕಾಣುತ್ತದೆ. ನೆಲವಷ್ಟೇ ನಮ್ಮದಲ್ಲ, ಇಲ್ಲಿನ ಜನರೂ ನಮ್ಮದೇ ಸಹೋದರರು ಎಂಬ ಅವರ ಭಾವನೆ, ‘ದೇಶವೆಂದರೆ ಬರಿ ಮಣ್ಣಲ್ಲ, ಜನ’ ಎಂಬ ನುಡಿಯ ಕನ್ನಡಿಯಂತೆ ಕಾಣಿಸಿತು.

‘ಕಾಶ್ಮೀರ’ ಮತ್ತು ‘ಕಾಶ್ಮೀರಿ’ ಎನ್ನುವಾಗ ತದ್ವಿರುದ್ಧ ದೃಷ್ಟಿಯಿಂದ ಇದುವರೆಗೆ ಭಾರತದ ಇತರ ಭಾಗಗಳ ಜನ ನೋಡುತ್ತಿದ್ದದ್ದು. ಅಂದರೆ ಕಾಶ್ಮೀರ ನಮ್ಮದು, ಆದರೆ ಕಾಶ್ಮೀರಿ ನಮ್ಮವನಲ್ಲ, ಆತ ಕಾಶ್ಮೀರವನ್ನು ಕೆಡಿಸುವವನು ಎನ್ನುವ ಮನಸ್ಥಿತಿ. ಮುಸ್ಲಿಮರೇ ಹೆಚ್ಚಿರುವ ಕಾಶ್ಮೀರದಲ್ಲಿ ಉಗ್ರರ ದಾಳಿ, ಸಂಘರ್ಷ ಸೇರಿದಂತೆ ಹಲವು ಘಟನೆಗಳು ನಡೆಯುತ್ತಲೇ ಇರುವುದರಿಂದ ಕಾಶ್ಮೀರಿಗಳನ್ನೆಲ್ಲ ಅದೇ ದೃಷ್ಟಿಯಲ್ಲಿ, ಪರಕೀಯರಂತೆ ನೋಡಲಾಗುತ್ತಿತ್ತು. ಈ ನೋವನ್ನು ಇದುವರೆಗೆ ಸ್ವತಃ ಕಾಶ್ಮೀರಿಗಳು ನುಂಗಿಕೊಂಡದ್ದೂ ಹೌದು. ಹೀಗಿರುವಾಗ ನಾವು ಕಾಶ್ಮೀರಿಗಳಿಗಾಗಿ, ಕಾಶ್ಮೀರಕ್ಕಾಗಿ, ನಮಗಾಗಿ, ಭಾರತಕ್ಕಾಗಿ ಭೂಲೋಕದ ಸ್ವರ್ಗ ಕಾಶ್ಮೀರದತ್ತ ಹೆಜ್ಜೆ ಹಾಕಬೇಕಿದೆ. ಆ ಮೂಲಕ ಭವ್ಯ ಭಾರತದ ಮುಕುಟಮಣಿ ಉಳಿಸಿಕೊಳ್ಳಲು ಒಂದುಗೂಡಬೇಕಿದೆ. ಅಷ್ಟೇ ಅಲ್ಲ, ಜನರ ಸುರಕ್ಷತೆಯ ದೃಷ್ಟಿಯಿಂದ, ದೇಶದ ಭವಿಷ್ಯಕ್ಕಾಗಿ ಭಾರತವು ಗಡಿಯಲ್ಲಿ ಅತ್ಯಂತ ಬಿಗಿ ಭದ್ರತೆಗೆ ಕ್ರಮ ವಹಿಸಬೇಕು. ಬೆಟ್ಟ ಗುಡ್ಡಗಳ ನೆವ ಹೇಳಿಕೊಂಡು ನಿರ್ಲಕ್ಷ್ಯ ವಹಿಸಿದರೆ ಆಗದು. ಯಾವುದೇ ಕಾರಣಕ್ಕೂ ಪಾಕಿಸ್ತಾನದಿಂದ ಉಗ್ರರ ನುಸುಳುವಿಕೆಗೆ ಒಂದಿಂಚೂ ಆಸ್ಪದ ಕೊಡದಷ್ಟು ಭದ್ರತೆ ಕಾಶ್ಮೀರಕ್ಕೆ ಅತ್ಯಗತ್ಯವಾಗಿ ಬೇಕಿದೆ. ಸರಕಾರ ಇದನ್ನು ಈಗಲಾದರೂ ಮಾಡಲೇಬೇಕಿದೆ.

share
ಮುಹಮ್ಮದ್ ಶರೀಫ್ ಕಾಡುಮಠ
ಮುಹಮ್ಮದ್ ಶರೀಫ್ ಕಾಡುಮಠ
Next Story
X