Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಲಾವಣಿ ಒಂದು ನೋಟ

ಲಾವಣಿ ಒಂದು ನೋಟ

ಉದಂತ ಶಿವಕುಮಾರ್, ಬೆಂಗಳೂರುಉದಂತ ಶಿವಕುಮಾರ್, ಬೆಂಗಳೂರು24 Jun 2024 2:47 PM IST
share
ಲಾವಣಿ ಒಂದು ನೋಟ

‘‘ಬೇಷಕ್ ತಮಾಷಾ ಟೈಗರ್ ನಿಶಾನಾ

ಟೀಪು ಸುಲ್ತಾನನ ಬಿರುದಾಯ್ತು

ಮಸಲತ್ ಮಾಡಿದ ಮೀರ್ ಸಾಧಕನಿಗೆ

ದೇಶದ್ರೋಹಿ ಎಂಬ್ಹೆಸರಾಯ್ತು’’

-ಬ್ರಿಟಿಷರೊಡನೆ ಟಿಪ್ಪು ಸುಲ್ತಾನ ನಡೆಸಿದ ಕೊನೆಯ ಹೋರಾಟ ವಸ್ತುವಾಗಿರುವ ಶ್ರೀರಂಗಪಟ್ಟಣ ಲಾವಣಿ ಎಂದು ಪ್ರಸಿದ್ಧವಾದ ಲಾವಣಿಯ ಪಲ್ಲವಿ ಇದು.

ಜನಪದ ಸಾಹಿತ್ಯದಲ್ಲಿ ಗೀತ ಸಾಹಿತ್ಯ ಪ್ರಮುಖವಾದದ್ದು. ಗೀತ ಸಾಹಿತ್ಯದಲ್ಲಿ ಎರಡು ಬಗೆ: ಭಾವಗೀತಾತ್ಮಕ ಜನಪದ ಗೀತೆಗಳು; ಕಥನಾತ್ಮಕ ಲಾವಣಿಗಳು, ಹಾಡಿನ ರೂಪದ ಎಲ್ಲಾ ಕಥೆಗಳನ್ನು ಲಾವಣಿ ಎಂದು ಕರೆಯುತ್ತಾರೆ. ಇದು ಕಂಠಸ್ಥ ಸಂಪ್ರದಾಯದಲ್ಲಿ ಸಾಗಿ ಬಂದದ್ದು. ಕಥೆ ಹೇಳುವುದು ಲಾವಣಿಯ ಪ್ರಧಾನ ಉದ್ದೇಶ. ಸಂಗೀತ ಇದಕ್ಕೆ ಅಧೀನ. ಬಹುಮಟ್ಟಿಗೆ ವಾದ್ಯಗಳ ಹಿನ್ನೆಲೆಯಲ್ಲಿ ಲಾವಣಿಗಳನ್ನು ಹಾಡುತ್ತಾರೆ.

ಹೆಂಗಸರು ಹಾಡುವ ಇಂಥ ಪಾಡ್ಗತೆಗಳಿಗೆ ವಾದ್ಯಗಳನ್ನು ಬಳಸುವುದಿಲ್ಲ.

ಪಿರಿಯಾಪಟ್ಟಣದ ಜಗಳ, ಟಿಪ್ಪು ಸುಲ್ತಾನನ ಅಂತ್ಯವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸುವ ಶ್ರೀರಂಗಪಟ್ಟಣದ ಲಾವಣಿ, ಸಂಗ್ಯಾ ಎಂಬ ಬಡವನೊಬ್ಬ ಧನಿಕರ ಶೋಷಣೆಗೆ ತುತ್ತಾಗುವುದನ್ನು ಬಣ್ಣಿಸುವ ಸಂಗ್ಯಾನ ಲಾವಣಿ, ಮನಮಿಡಿಯುವ ಸಾಹಸ ವೃತ್ತಾಂತವಿರುವ ಸಂಗೊಳ್ಳಿ ರಾಯಣ್ಣನ ಲಾವಣಿ ಇವು ಇಂಥ ಕೆಲವು ಪ್ರಸಿದ್ಧ ಲಾವಣಿಗಳು. ನಡೆದ ಸಂಗತಿಗಳನ್ನು ಇವು ವಿವರಿಸುತ್ತವೆ. ಆದ್ದರಿಂದ ಇವನ್ನು ‘ಐತಿಹಾಸಿಕ ಲಾವಣಿಗಳು’ ಎಂದು ಕರೆಯುತ್ತಾರೆ. ವೀರರಸಪ್ರಧಾನವಾದ ಲಾವಣಿಗಳಲ್ಲದೆ ಇತರ ರೀತಿಯ ಲಾವಣಿಗಳೂ ಇವೆ. ಶೃಂಗಾರ ಪ್ರಧಾನವಾದ ಲಾವಣಿಗಳಿಗೆ ‘ರಂಗು ಲಾವಣಿ’ಗಳೆಂಬ ಹೆಸರಿದೆ. ತತ್ವ ಬೋಧನೆಗೆ ಮೀಸಲಾದ ಲಾವಣಿಯನ್ನು ‘ವೇದಾಂತ ಲಾವಣಿ’ ಎನ್ನುತ್ತಾರೆ. ಪ್ರಶ್ನೋತ್ತರ ರೂಪದ ಲಾವಣಿಗಳೂ ಉಂಟು. ಇವನ್ನು ‘ಸವಾಲ್ ಲಾವಣಿ’ಗಳು ಎಂದು ಕರೆಯುತ್ತಾರೆ.

ಲಾವಣಿಯನ್ನು ಒಬ್ಬರೇ ಹಾಡಬಹುದು. ದ್ವಂದ್ವವಾಗಿ ಅಥವಾ ಪರಸ್ಪರ ಪೂರಕವಾಗಿ ಹಾಡಬಹುದು. ಎರಡು ತಂಡಗಳು ಎದುರು ಬದುರಾಗಿ ಕುಳಿತು ಹಾಡುವುದು ಸವಾಲ್ ಲಾವಣಿಯ ಕ್ರಮ. ಎರಡು ಗುಂಪುಗಳು ಸೇರಿ ಸವಾಲ್-ಜವಾಬ್ ನಡೆಸುವ ಸಭೆಯನ್ನು ನಝಮ್ ಎನ್ನುತ್ತಾರೆ. ಲಾವಣಿಕಾರರಲ್ಲಿ ಎರಡು ಸಂಪ್ರದಾಯ ಗಳಿವೆ. ಒಂದು ‘ತುರಾ’ ಇನ್ನೊಂದು ಕಲ್ಗಿ ಅಥವಾ ಕಲ್ಕಿ. ತುರಾದವರಿಗೆ ಹರದಾಸರೂ ಎಂದೂ ಕಲ್ಗಿಯವರಿಗೆ ನಾಗೇಶರು ಎಂದು ಹೆಸರುಂಟು. ತಾತ್ವಿಕವಾಗಿ ತುರಾದವರು ಪುರುಷಪ್ರಾಧಾನ್ಯವನ್ನೂ, ಕಲ್ಗಿಯವರು ಶಕ್ತಿಪ್ರಾಧಾನ್ಯವನ್ನೂ ಅಂಗೀಕರಿಸುವಂತೆ ತೋರುತ್ತದೆ. ಇವರಿಬ್ಬರೂ ತಾವು ಉಪಯೋಗಿಸುವ ಕಡವನ್ನು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸುತ್ತಾರೆ. ಸ್ಪರ್ಧೆಯ ಕಾಲದಲ್ಲಿ ಕಲ್ಗಿಯವರು ಹೆಣ್ಣಿನ ಪಕ್ಷ; ತುರಾದವರು ಗಂಡಿನ ಪಕ್ಷ ಎನ್ನಬಹುದು. ತುರಾ ಲಾವಣಿಯನ್ನು ಹಾಡುವಾಗ ಹಾಡುಗಾರಿಕೆಯಲ್ಲಿ ಲಯಕ್ಕೆ ಪ್ರಾಧಾನ್ಯ.

ಲಾವಣಿಗಳಲ್ಲಿ ಸಾಮಾನ್ಯವಾಗಿ ಆದಿ, ಝಂಪ, ಚಾಪು, ತಾಳಗಳನ್ನು ಉಪಯೋಗಿಸುತ್ತಾರೆ. ಯಮನ್, ಪೀಲು, ಸಿಂಧು ಭೈರವಿ, ಶಂಕರಾಭರಣ, ಮಾಯಮಾಳವಗೌಡ, ಮಧ್ಯಮಾವತಿ, ಮೋಹನ ಮುಂತಾದ ಜನಪ್ರಿಯ ರಾಗಗಳನ್ನು ಬಳಸುತ್ತಾರೆ. ಈ ಲಾವಣಿಗೆ ವಿಶಿಷ್ಟ ರೂಪವಿದೆ. ದ್ವಿಪದಿ ಇದಕ್ಕೆ ತಳಹದಿ. ಮೊದಲು ಪಲ್ಲವಿ ಅನಂತರ ಚಾಲ್. ಚಾಲ್ ಪಲ್ಲವಿಯಂತಹ ನಾಲ್ಕು ತುಂಡುಗಳಿಂದ ಕೂಡಿದ್ದು, ಮುಂದಿನ ಉಡಾನ್ ಕೂಡ ದ್ವಿಪದಿಗಳನ್ನು ಸೇರಿಸಿ ಮಾಡಿದ್ದೇ ಆದರೂ, ಚಾಲ್‌ನಲ್ಲಿ ಇರುವುದಕ್ಕಿಂತ ಗಣಗಳಲ್ಲಿ ವ್ಯತ್ಯಾಸವಿರುವ ದ್ವಿಪದಿಗಳಿರುತ್ತವೆ. ಆಮೇಲೆ ಬರುವ ಗುಲ್ ಉಡಾನ್‌ನ ಛಂದಸ್ಸಿನಲ್ಲಿ ಸ್ವಾತಂತ್ರ್ಯವಿರುತ್ತದೆ. ಇದರ ಜೊತೆಗೆ ಕೊನೆಯಲ್ಲಿ ಶ್ಲೋಕ ಎಂಬ ಎರಡು ಸಾಲಿನ ರಚನೆಯನ್ನು ಇಲ್ಲವೇ ಸಖಿಯನ್ನು ಹಾಡುತ್ತಾರೆ. ಸಖಿಯಲ್ಲಿ ಷಟ್ಪದಿಯ ಛಾಯೆ ಕಾಣುತ್ತದೆ. ಈ ಅಚ್ಚು ಕಟ್ಟಿನ ಲಾವಣಿಯನ್ನು ಚಂಪೂ ಲಾವಣಿ ಎನ್ನುತ್ತಾರೆ.

ಪಲ್ಲವಿ, ಚಾಲ್, ಉಡಾನ್, ಗುಲ್‌ಉಡಾನ್, ಶ್ಲೋಕ ಅಥವಾ ಸಖಿ ಇವೆಲ್ಲಕ್ಕೂ ಸಂಬಂಧಿಸಿದಂತೆ ಹಾಡುವ ಕ್ರಮಗಳಿರುತ್ತವೆ. ಅವನ್ನು ಅನುಸರಿಸಿಯೇ ಲಾವಣಿಕಾರರು ಹಾಡುವುದು. ಒಂದೊಂದಕ್ಕೂ ಗತ್ತು, ಸ್ಥಾಯಿ ಬದಲಾಗುತ್ತವೆ. ಈ ಹಾಡುಗಾರಿಕೆಯಲ್ಲಿ ಪ್ರಾದೇಶಿಕ ಭೇದಗಳು ಇವೆ. ಇನ್ನೊಂದು ಬಗೆಯ ಸರಳ ರಚನೆಯಿಂದ ಆದದ್ದು ಕಾವ್ಯ ವರ್ಗದ ಲಾವಣಿ. ಕಾವ್ಯ ವರ್ಗದ ಲಾವಣಿಯು ಏಕನಾದ ಶ್ರುತಿ ಮತ್ತು ಏಕತಾಳದ ನಡೆ ಅನುಸರಿಸಿ, ಬೇಕೆಂದಾಗ ಮುಂದೆ ನಡೆದು, ಬೇಡವೆಂದಾಗ ನಿಲ್ಲುವ ಜಾತಿಪದಗಳಿಂದ ಆದದ್ದು. ಇದರ ಹಾಡುಗಾ ರಿಕೆಯಲ್ಲಿ ಪುನರಾವರ್ತನೆ ಉಂಟು. ಈ ಪದಗಳಲ್ಲಿ ನಾಲ್ಕು ಮತ್ತು ಐದು ಮಾತ್ರೆಯ ಗಣಗಳನ್ನು ಉಪಯೋಗಿಸುತ್ತಾರೆ.

ಆರು ಶಾಸ್ತ್ರವ ಸಿದ್ದಿಯ ಮಾಡು

‘‘ಹದಿನೆಂಟು ಪುರಾಣವ ಪಾಠವ ಮಾಡು

ಎಂಟೆಂಟು ದಿನಕೊಮ್ಮೆ ಸಂತೆಯ ಮಾಡು

ರೊಕ್ಕ ನೋಡಿ ನೀ ವ್ಯಾಪಾರ ಮಾಡಣ್ಣಾ

ಕೇಳೋ ಜಾಣಾ’’

ಇದು ಇಂತಹ ಒಂದು ಜಾತಿ ಪದ.

ಕನ್ನಡ ಕಾವ್ಯಗಳಲ್ಲಿ ಕಾಣುವ ಎರಡನೆಯ ಅಕ್ಷರದ ಪ್ರಾಸದ ಬದಲು ಲಾವಣಿಗಳಲ್ಲಿ ಅಂತ್ಯ ಪ್ರಾಸವಿರುತ್ತದೆ. ಒಮ್ಮೊಮ್ಮೆ ಅಂತ್ಯಪ್ರಾಸವನ್ನು ಬಿಡುವುದೂ ಒಂದು ಸಾಲನ್ನು ಬಿಟ್ಟು ಅದರ ಮುಂದಿನ ಸಾಲಿಗೆ ಅಂತ್ಯಪ್ರಾಸ ಕೊಡಿಸುವುದು ಉಂಟು. ಲಾವಣಿ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನಿಂದ ಪ್ರಚಲಿತವಾಗಿರುವುದೆಂಬ ನಂಬಿಕೆಯಿದೆ. ‘‘ಪುಟ್ಟಿ ಇಲಿಗೆ ತುರಾ ಕಲ್ಗಿ ಚರ್ಚೆ ತಿಳಿಯಲೋ ಜಾಹಿರ ಒಟ್ಟು ಸಾವಿರದೊಂಬೈನೂರ ವರ್ಷಗಳ ಮೇಲೆ ಚಿಲ್ಲರಾ’’ ಎಂಬ ಹೇಳಿಕೆಯಿದೆ. ಋಗ್ವೇದದಲ್ಲಿ ಮತ್ತು ಬೌದ್ಧ ಸಾಹಿತ್ಯದಲ್ಲಿ ಕಂಡು ಬರುವ ಸಂವಾದಗಳಲ್ಲಿ ಲಾವಣಿಯ ಮೂಲವನ್ನು ಕಾಣಬಹುದೆಂಬುದು ಕೆಲವರು ವಿದ್ವಾಂಸರ ಅಭಿಪ್ರಾಯ.

ನಮ್ಮ ದೇಶದ ಲಾವಣಿಗಳಂತಹ ವೀರರಸ ಪ್ರಧಾನವಾದ ಹಾಗೂ ಗೀತ ರೂಪದಲ್ಲಿರುವ ರಚನೆಗಳನ್ನು ಅನೇಕ ದೇಶಗಳಲ್ಲಿ ಕಾಣಬಹುದು. ನಮ್ಮಲ್ಲಿ ಲಾವಣಿ ರಚನೆ ಮತ್ತು ಹಾಡುಗಾರಿಕೆ ಇಂದಿಗೂ ಜೀವಂತವಾಗಿ ಉಳಿದಿರುವ ಕಲೆ. ಇಂದಿನ ಲಾವಣಿಕಾರರು ಹಿಂದಿನ ಅಚ್ಚನ್ನೇ ಅನುಸರಿಸುವರಾದರೂ ವಸ್ತುವಿನ ಆಯ್ಕೆಯಲ್ಲಿ ಸ್ವಾತಂತ್ರ್ಯ ವಹಿಸುತ್ತಾರೆ. ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು ಮತ್ತು ಅವುಗಳ ವಿಮರ್ಶೆ ಇಂದಿನ ಲಾವಣಿಕಾರರ ವಸ್ತು ಭಂಡಾರವನ್ನು ಸೇರಿವೆ. ಒಂದು ಕಾಲಕ್ಕೆ ವೀರಕಥನ, ಶೃಂಗಾರ, ತತ್ವ ಬೋಧೆಗಳಿಗೆ ಮೀಸಲಾಗಿದ್ದ ಲಾವಣಿ, ಪ್ರಚಾರ ಮಾಧ್ಯಮವಾಗಿಯೂ ಬಳಕೆಗೆ ಬಂದಿದೆ.

share
ಉದಂತ ಶಿವಕುಮಾರ್, ಬೆಂಗಳೂರು
ಉದಂತ ಶಿವಕುಮಾರ್, ಬೆಂಗಳೂರು
Next Story
X