Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೇಘಸ್ಫೋಟದಿಂದಲೇ ಉದಯಿಸಿದ ‘ಮೇಘವಾಲ್’

ಮೇಘಸ್ಫೋಟದಿಂದಲೇ ಉದಯಿಸಿದ ‘ಮೇಘವಾಲ್’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್16 July 2025 11:54 AM IST
share
ಮೇಘಸ್ಫೋಟದಿಂದಲೇ ಉದಯಿಸಿದ ‘ಮೇಘವಾಲ್’
ಕರ್ನಾಟಕದ ಎಸ್‌ಸಿ ಪಟ್ಟಿಯಲ್ಲಿ ಮೇಘವಾಲ್ ಹೆಸರು ಕ್ರಮಸಂಖ್ಯೆ 077ರಲ್ಲಿದೆ. ದುರಂತವೆಂದರೆ ಅತ್ಯಂತ ಸಣ್ಣ ಮತ್ತು ಅತಿಸೂಕ್ಷ್ಮ ಸಮುದಾಯವಾದ ಮೇಘವಾಲರ ಜನಸಂಖ್ಯೆ ಎಷ್ಟಿದೆಯೆಂದು ಕಾಂತರಾಜು/ಜಯಪ್ರಕಾಶ್ ಹೆಗ್ಡೆಯವರ ಆಯೋಗದ ಸಮೀಕ್ಷೆಯಲ್ಲಿ ಪ್ರಸ್ತಾಪವೇ ಇಲ್ಲ..! ಮೇಘವಾಲರ ಕುರಿತು ಎಸ್.ಬಾಬು ಅವರು ಒಂದಷ್ಟು ವಿಸ್ತೃತವಾಗಿ ಬರೆದಿರುವುದನ್ನು ಬಿಟ್ಟರೆ ನಮಗೆ ಬೇರೆ ದಾಖಲೆಗಳು ಲಭ್ಯವಿಲ್ಲ.

ಮೇಘವಾಲ್ ಜಾತಿಯ ಹುಟ್ಟಿನ ಹಿಂದೆ ಒಂದು ಅಲಿಖಿತ ರೋಚಕ ಕತೆಯಿದೆ... ಬಹಳ ವರ್ಷಗಳ ಹಿಂದೆ ಜುನಾಗಡದಲ್ಲಿ ಹಿಂದೂ ರಾಜನೊಬ್ಬ ಇದ್ದ. ಬಹುಶಃ ಆತನ ಹೆಸರು ರಾನಾಗವಾನ ಇರಬೇಕು. ಅದೇ ಪ್ರದೇಶದಲ್ಲಿ ಅಸ್ಪಶ್ಯ ಸಮುದಾಯದ ಮಾತಂಗಮುನಿಯೂ ವಾಸವಾಗಿದ್ದರು. ಒಮ್ಮೆ ಮಾತಂಗಮುನಿ ರಾಜಧಾನಿಯ ಕೊಳದ ಬಳಿಬಂದು ನೀರು ಕುಡಿಯಲು ಹೋದಾಗ ಕೊಳವನ್ನು ಕಾಯುತ್ತಿದ್ದ ಇಬ್ಬರು ಕಾವಲುಗಾರರು ಮಾತಂಗಮುನಿಯನ್ನು ತಡೆದರು. ‘‘ಯಾಕೆ ಕೊಳವನ್ನು ಇಷ್ಟೊಂದು ಎಚ್ಚರಿಕೆಯಿಂದ ಕಾವಲು ಕಾಯುತ್ತಿದ್ದೀರ?’’ ಎಂದು ಮಾತಂಗಮುನಿ ಕೇಳಿದಾಗ ‘‘ಮುಂದಿನ ಹನ್ನೆರಡು ವರ್ಷಗಳ ಕಾಲ ಇಲ್ಲಿ ಬರಗಾಲ ಬರುತ್ತದೆಂದು ಬ್ರಾಹ್ಮಣ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ’’ ಎಂದು ಕಾವಲುಗಾರರು ಉತ್ತರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ‘‘ಈ ವರ್ಷ ಬಹಳಷ್ಟು ಮಳೆ ಬಂದೇ ಬರುತ್ತದೆ.. ಆದ್ದರಿಂದ ರಾಜ ನೀರನ್ನು ಬಳಸಲು ಯಾರಿಗೂ ತಡೆಯೊಡ್ಡಬಾರದು’’ ಎಂದರು ಮಾತಂಗಮುನಿ ಮುಗ್ಧವಾಗಿ. ಅಸ್ಪಶ್ಯರು ಕೊಳದ ನೀರನ್ನು ಮುಟ್ಟಿದರೆ ಮಳೆ ಬರುವುದಿಲ್ಲವೆಂದು ಬ್ರಾಹ್ಮಣ ಜ್ಯೋತಿಷಿಗಳು ಹೇಳಿದ್ದಾರೆ ಎಂದು ಕಾವಲುಗಾರರು ನಿಜ ಕಾರಣವನ್ನು ಹೇಳಿಬಿಟ್ಟರು. ಈ ಮಾತುಗಳನ್ನು ಕೇಳಿ ಕೋಪ ಮತ್ತು ಅವಮಾನದಿಂದ ಉರಿದುಹೋದ ಮಾತಂಗಮುನಿ ‘‘ನಾನು ಬೆಟ್ಟ ಹತ್ತಿ ಕೂರುತ್ತೇನೆ.. ಮಳೆ ಹೇಗೆ ಬರುತ್ತೆ ನೀವೇ ನೋಡಿ, ಆ ಮಾಯದಂತಹ ಮಳೆ ನಿಮ್ಮ ಊರನ್ನು ಮುಳುಗಿಸಿ, ಬೆಟ್ಟವನ್ನೂ ಮುಳುಗಿಸಿ ನನ್ನ ಗಡ್ಡ ತುಯ್ಯುವವರೆಗೂ ನಾನು ಬೆಟ್ಟ ಇಳಿಯುವುದಿಲ್ಲ’’ ಎಂದು ಶಾಪ ಕೊಟ್ಟು ಬೆಟ್ಟ ಏರಿ ಬೆಟ್ಟದ ತುದಿಯಲ್ಲಿ ಕುಳಿತುಬಿಟ್ಟರು!

ಮಾತಂಗಮುನಿ ಹೇಳಿದಂತೆಯೇ ಭೀಕರ ಮಳೆ ಆರಂಭವಾಯಿತು, ದಿನಗಟ್ಟಲೇ ಮಳೆ ನಿಲ್ಲಲೇ ಇಲ್ಲ. ಮೇಘವೇ ಸ್ಫೋಟಿಸಿ ಇಡೀ ಊರಿಗೆ ಊರೇ ಮುಳುಗಲು ಆರಂಭವಾಯಿತು. ಪ್ರಜೆಗಳು ದಿಕ್ಕೆಟ್ಟು ಅಸಹಾಯಕರಾಗಿ ರಾಜನ ಬಳಿ ಓಡಿ ಹೋಗಿ, ಮಾತಂಗಮುನಿಯ ಶಾಪದ ಕುರಿತು ಹೇಳಿ ತನ್ನ ಗಡ್ಡಕ್ಕೆ ನೀರು ಮುಟ್ಟುವ ತನಕ ಮಳೆನಿಲ್ಲುವುದಿಲ್ಲ ಎಂದು ಅವರು ಬೆಟ್ಟ ಏರಿ ಕುಳಿತು ಬಿಟ್ಟಿರುವ ವಿಷಯ ಹೇಳಿದರು. ರಾಜನಿಗೂ ಆತಂಕ ಆರಂಭವಾಯಿತು. ಮಾತಂಗಮುನಿ ಗಿರ್‌ನಾರ್ ಬೆಟ್ಟದ ಮೇಲೆ ಕುಳಿತಿರುವುದನ್ನು ವಿವರವಾಗಿ ತಿಳಿದುಕೊಂಡ ರಾಜ, ನಂತರ ಮುನಿಯ ಬಳಿಗೆ ಬಂದು ಸಾಷ್ಟಾಂಗ ನಮಸ್ಕರಿಸಿ, ಬ್ರಾಹ್ಮಣರ ಮಾತು ಕೇಳಿ ತಾನು ತಪ್ಪು ಮಾಡಿದೆನೆಂದು, ಈಗ ತನ್ನ ತಪ್ಪಿನ ಅರಿವಾಯಿತೆಂದು, ಮಳೆ ನಿಲ್ಲಿಸುವಂತೆ ಪರಿಪರಿಯಾಗಿ ಕೇಳಿಕೊಂಡ. ಇದಕ್ಕೆ ಪ್ರತಿಕ್ರಿಯಿಸಿದ ಮಾತಂಗಮುನಿ ತನ್ನ ಗಡ್ಡ ಮಳೆನೀರಿನಲ್ಲಿ ತೊಯ್ದರಷ್ಟೇ ಮಳೆ ನಿಲ್ಲುತ್ತದೆಂದು ಹೇಳಿಬಿಟ್ಟರು. ರಾಜ ಬಹಳಷ್ಟು ಯೋಚಿಸಿ, ಅವನಲ್ಲಿ ಅರಿವು ಮೂಡಿ ಬಂಗಾರದ ತಟ್ಟೆಯಲ್ಲಿ ಮಳೆನೀರನ್ನು ತಂದು ಮುನಿಯ ಗಡ್ಡವನ್ನು ನೆನೆಸಿ, ಮುನಿಯ ಕಾಲಿಗೆ ಬಿದ್ದು ಅಂಗಲಾಚಿದ. ಮಳೆ ನಿಲ್ಲಲಾರಂಭಿಸಿತು. ಹೀಗೆ ಮೇಘವನ್ನೇ ಸ್ಫೋಟಿಸುವ ಶಕ್ತಿಯಿರುವ ಮಾತಂಗಮುನಿ ತನ್ನ ಜನರಿಗಾಗಿ ಶಾಪ ವಾಪಸ್ ಪಡೆದು ಮಳೆ ನಿಲ್ಲಿಸಿದ ಕಾರಣಕ್ಕಾಗಿ, ಆತನ ಜಾತಿಯ ಜನರನ್ನು ಮೇಘವಾಲ ಎಂದು ಕರೆಯಲಾಯಿತಂತೆ. ಮೇಘ ಎಂದರೆ ಮಳೆ, ವಾಲ ಎಂದರೆ ರಕ್ಷಿಸುವವರು ಅಂದರೆ ಮೇಘವಾಲರು ಮಳೆಹಾನಿಯಿಂದ ಮನುಷ್ಯರನ್ನು ರಕ್ಷಿಸುವವರು ಎಂದರ್ಥ.

ಮತ್ತೊಂದು ಐತಿಹ್ಯದ ಪ್ರಕಾರ ಮೇಘವಾಲರು ರಾಜಪೂತರ ಖೋಡ್ ಸಮುದಾಯವರು. ಒಮ್ಮೆ ಈ ಸಮುದಾಯದ ಹಿರಿಯರೊಬ್ಬರು ತಮ್ಮ ಹಳ್ಳಿಯಲ್ಲಿ ಸತ್ತ ಪ್ರಾಣಿಯ ದೇಹವನ್ನು ತೆಗೆದು ಹಾಕಿದರಂತೆ. ಜನ ಈ ಹಿರಿಯನನ್ನು ಹಿಯಾಳಿಸಿ. ನೀನು ಮೈಲಿಗೆಯಾದೆ ಎಂದು ಅಂದಿನಿಂದ ದೂರವಿಟ್ಟರಂತೆ.

ಮೇಘವಾಲರ ಬಗ್ಗೆ ಮಾತನಾಡುವಾಗ ಮೇಲ್ಕಂಡ ಎರಡು ವಿಭಿನ್ನ ಐತಿಹ್ಯಗಳನ್ನು ಹೊರತುಪಡಿಸಿ ಏನು ಮಾತಾಡಿದರೂ ಅದು ಪೂರ್ಣವಾಗುವುದಿಲ್ಲ. ಈ ಎರಡೂ ಐತಿಹ್ಯಗಳು ಮೇಘವಾಲರ ಅಸ್ಮಿತೆ ಮತ್ತು ಅಸ್ಪಶ್ಯತೆಯ ಬಗ್ಗೆ ಕೆಲವು ಒಳನೋಟಗಳನ್ನು ನೀಡುತ್ತವೆ. ಮೊದಲನೆಯದಾಗಿ, ದಲಿತರು ಕೊಳದಲ್ಲಿ ಸ್ನಾನ ಮಾಡಲು ಹೋದರೆ, ವಾಸ್ತವವಾಗಿ ನೀರನ್ನು ಮುಟ್ಟುವುದಿರಲಿ, ಅವರ ನೆರಳು ಬಿದ್ದರೂ ಹನ್ನೆರಡು ವರ್ಷ ಬರಗಾಲ ಬರುತ್ತದೆಂಬ ನಂಬಿಕೆಯನ್ನು ಬಿತ್ತಿ ಪ್ರಾಕೃತಿಕ ಮತ್ತು ಸಾರ್ವಜನಿಕ ಸಂಪನ್ಮೂಲಗಳಿಂದ ಚಾರಿತ್ರಿಕವಾಗಿ ದೂರವಿಟ್ಟಿರುವುದು, ಎರಡನೆಯದು ಸತ್ತ ಪ್ರಾಣಿಯ ದೇಹವನ್ನು ಕೆಳಜಾತಿಯವರು ಮಾತ್ರ ತೆಗೆಯಬೇಕು ಎಂಬ ತಥಾಕಥಿತ ವಾದ. ವಿಶೇಷವೆಂದರೆ, ಮೊದಲನೆಯ ಐತಿಹ್ಯದಲ್ಲಿ ಕೊನೆಗೂ ಜುನಾಗಡದ ರಾಜ ಪ್ರವಾಹಕ್ಕೆ ಅಂಜಿ ಗಡ್ಡ ಮುಳುಗಿಸಲು ನೀರನ್ನು ಕೊಡುವುದು, ಪ್ರಭುತ್ವ ದಲಿತರಾದ ಮೇಘವಾಲರ ಜತೆ ಗೌರವಯುತವಾಗಿ ನಡೆದುಕೊಳ್ಳದಿದ್ದರೆ ಯಾವುದೇ ಸಮಾಜ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂಬ ಸೂಚನೆಯನ್ನು ನೀಡುತ್ತದೆ. ದಲಿತ ಸಮುದಾಯ ಮತ್ತು ಪಂಚಭೂತಗಳ ನಡುವಿನ ಅನುಸಂಧಾನವೂ ಇಲ್ಲಿ ಎದ್ದು ಕಾಣುತ್ತಿದ್ದು, ಪ್ರಕೃತಿ ನಿಯಮಗಳ ಪ್ರಕಾರ ದಲಿತರು ಮತ್ತು ಪ್ರಕೃತಿಯ ವಿರೋಧಿಗಳಾದ ಮೇಲ್ಜಾತಿಗಳ ನಡುವಿನ ಮುಖಾಮುಖಿಯನ್ನು ಈ ಐತಿಹ್ಯ ಸೂಚ್ಯವಾಗಿ ಹೇಳುತ್ತಿದೆ ಎಂದೆನಿಸುತ್ತದೆ.

ಮೇಘವಾಲರನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ: ಮೇಘವಾರ, ಮೇಂಘಾರ, ಆರ್ಯ ಮೇಘ, ಭಗತ್, ಗಣೇಶಿಯ, ಮೇಘಭನ್ನಿ, ಮಿಪಾ, ರಾಖೇಸರ, ರಖಿಯಾ, ರಿಖಿಯಾ, ರಿಷಿಯಾ ಎಂದು ಹೆಸರಿಸುತ್ತಾರೆ. ಉತ್ತರದ ರಾಜ್ಯಗಳಾದ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಘವಾಲರು ವಾಸಿಸುತ್ತಿದ್ದಾರೆ.

ಮೇಘವಾಲರಿಗೆ ಸಮಾನಾಂತರ ಪದವಾದ ಗಣೇಶಿಯಾದ ಮೂಲ ಗಣೇಶನಲ್ಲಿದೆ. ಈ ಜಾತಿಯ ಅತ್ಯಂತ ಪ್ರೀತಿಯ ದೇವರು ಗಣೇಶನಾಗಿದ್ದಾನೆ. ರಿಷಿಯಾ ಅಥವಾ ರಿಖಿಯಾ ಎನ್ನುವುದು ಕೂಡ ಇವರು ಋಷಿಯ ಮೂಲದವರೆನ್ನುವುದರ ಅರ್ಥ ಸೂಚಕವಾಗಿದೆ. ಸತ್ತ ಪ್ರಾಣಿಗಳನ್ನು ಊರಹೊರಗೆ ಸಾಗಿಸುವುದರ ಕಾರಣಕ್ಕಾಗಿ ಇವರನ್ನು ಭೇಡ ಅಥವಾ ದೇಧಾ ಎಂತಲೂ ಕರೆಯಲಾಗುತ್ತದೆ.

ಮೇಘವಾಲ ಜಾತಿಯ ಗಂಡಸರನ್ನು ಮೇತರ್, ಮಾತಂಗ್, ಮಾಟಿಯಾ ಮುಂತಾದ ಬಿರುದಾಂಕಿತ ನಾಮಗಳಿಂದ ಕರೆಯುತ್ತಾರೆ. ಇವುಗಳಲ್ಲಿ ‘ಮೇತರ’ ಎಂಬ ಬಿರುದು ಅಧಿಕೃತವಾಗಿದ್ದು, ಯಾವುದೇ ವ್ಯಾಜ್ಯದಲ್ಲಿ ಮಧ್ಯಸ್ಥಿಕೆಯನ್ನು ಮಾಡುವ ದೊಡ್ಡಮನುಷ್ಯನಿಗೆ ಮೇತರ ಎಂದು ಗೌರವಿಸುತ್ತಾರೆ. ಹಲವಾರು ಕುಟುಂಬಗಳು ಮುನಿಗಳ ವಂಶದವರೇ ಆಗಿರುವುದರಿಂದ ಅವರನ್ನು ಮಾತಂಗ ಮತ್ತು ಮಾಟಿಯಾರವರು ಎಂದು ಮುನಿಗುರುಗಳ ಹೆಸರಿನಿಂದಲೇ ಕರೆಯಲಾಗುತ್ತದೆ.

ಬಹುಪಾಲು ಮೇಘವಾಲರು ಕಛ್ ಪ್ರಾಂತದಲ್ಲಿ ನೆಲೆಗೊಂಡಿದ್ದು ಈ ಪ್ರಾಂತದಲ್ಲಿ ಪ್ರಾಚೀನ ಕಾಲದಲ್ಲಿ ಮೂಲತಃ ಪಶುಪಾಲಕ ಸಮುದಾಯಗಳಾದ ರಾಬರಿ, ಚರಣ, ಕಾಫಿ, ಅಹಿರ ಮತ್ತು ಇತರ ಬುಡಕಟ್ಟುಗಳವರು ಅಪಾರ ಸಂಖ್ಯೆಯ ಜಾನುವಾರುಗಳ, ಒಂಟೆಗಳ, ಕುರಿ ಮತ್ತು ಮೇಕೆಗಳ ಮಂದೆಗಳನ್ನು ಹೊಂದಿದ್ದರು. ಈ ಬುಡಕಟ್ಟುಗಳಿಗೆ ಮೇಘವಾಲರ ಅನಿವಾರ್ಯತೆ ಸಹಜವಾಗಿ ಇದ್ದು, ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವ ಮತ್ತು ಅವುಗಳ ಚರ್ಮಗಳನ್ನು ಹದಮಾಡುವ, ಉಣ್ಣೆ ಸಂಗ್ರಹಿಸಿ, ಕಂಬಳಿ ಮತ್ತು ಇತರ ಬಟ್ಟೆಗಳನ್ನು ನೇಯ್ಗೆ ಮಾಡುವ ಮೂಲಕ ಮೃತ ದೇಹಗಳನ್ನು ವಿಲೇವಾರಿ ಮಾಡುತ್ತಿದ್ದರು. ಕೃಷಿಯಾಧಾರಿತ ಗುಂಪುಗಳು ಮತ್ತು ಪಶುಪಾಲಕ ಅಲೆಮಾರಿ ಗುಂಪುಗಳ ಸೌಭಾಗ್ಯವೆಂಬಂತೆ ಮೇಘವಾಲರ ವಿವಿಧ ಸಗೋತ್ರ ಗುಂಪುಗಳು ಇವರೊಂದಿಗೆ ಸೇರಿಕೊಂಡಿದ್ದವು. ಉದಾಹರಣೆಗೆ ಸಿಂಧ್ ಪ್ರಾಂತದಿಂದ ಬಂದ ಮಾಹೇಶ್ರೀ ಮೇಘವಾಲರು ಜಡೇಜ ಮತ್ತು ಚರಣ್ ರನ್ನು ಅನುಸರಿಸುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯಾಂಶವಿದೆ. ಯಾಕೆಂದರೆ, ತುಂಬಲ ಚರಣ್ ಮಹಿಳೆ ಧರಿಸುವ ಉಡುಪಿಗೂ ಮತ್ತು ಮಾಹೇಶ್ರೀ ಮೇಘವಾಲ ಮಹಿಳೆ ಧರಿಸುವ ಉಡುಪಿಗೂ ಅಲ್ಪ ವ್ಯತ್ಯಾಸವಿದೆ. ಮಾರವಾಡ ಮೇಘವಾಲರು ತಾವು ಕಾಥಿ ಮತ್ತು ಅಹಿರ ಜೊತೆಯಲ್ಲಿ ಬಂದವರೆಂದು ನಂಬುತ್ತಾರೆ. ಗುಜರಾತ್‌ನಿಂದ ಬಂದ ಕೃಷಿ ಸಮುದಾಯವಾದ ಕಣಜಿಗಳ ಜೊತೆಗೆ ಗೋಜರಾ ಮೇಘವಾಲರು ಬಂದಂತೆ ಕಾಣಿಸುತ್ತದೆ. ಚರಣಿಯ ಮೇಘವಾಲರು ವಾಸ್ತವವಾಗಿ ಕಚ್ಚೇಲ ಚರಣರ ಸೇವಕರು. ಇವರು ಸೇವಕರಾಗಿ ಹಲವಾರು ಕೆಲಸ ಕಾರ್ಯಗಳಲ್ಲಿ ತೊಡಗಿರುವುದು ಕಂಡುಬಂದಿದ್ದು, ನೇಕಾರರಾಗಿ, ಚಪ್ಪಲಿ ತಯಾರಕರಾಗಿ, ಚರ್ಮದ ಕೆಲಸಗಾರರಾಗಿ, ಬಾವಿಯಿಂದ ನೀರು ಸೇದುವ ಕಪಿಲೆಬಾನಿಗಳನ್ನು, ಜೇನು ಬುಟ್ಟಿಗಳನ್ನು, ಚಾಟಿಗಳನ್ನು ಮತ್ತು ಕೃಷಿಕರಿಗೆ, ಗಾಡಿ ಚಾಲಕರಿಗೆ ಅಗತ್ಯವಾದ ಇತರ ಸಣ್ಣಪುಟ್ಟ ಕೆಲಸಗಳ ಜೊತೆಗೆ ಎಲ್ಲಾ ಕೆಲಸಗಳನ್ನು ಮಾಡುವ ಸೇವಕರಾಗಿದ್ದರು. ಕಟ್ಟಿಗೆ ಕಡೆಯುವ ಮತ್ತು ಹುಲ್ಲು ಕೊಯ್ಯುವ ಕೆಲಸಗಳನ್ನೂ ಮಾಡುತ್ತಿದ್ದರು. ಹಾಗೆ ನೋಡಿದರೆ ಇವರು ಮಾಡದ ಕೆಲಸಗಳೇ ಇಲ್ಲ.

ಮೇಘವಾಲರ ಸಾಮಾಜಿಕ ಸ್ಥಾನಮಾನ ಹೇಗಿದೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಮೇಲೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳೇ ಸಾಬೀತು ಪಡಿಸುತ್ತವೆ, ಅಂದರೆ ಅವರ ಬಗೆಗಿನ ಮೂಲ ಗ್ರಹಿಕೆಯೇ ಸಮಸ್ಯಾತ್ಮಕವಾಗಿದೆ ಮತ್ತು ಅಸ್ಪಶ್ಯತೆಯೇ ಅವರಿಗೆ ಶಾಪ. ಕುಲಶಾಸ್ತ್ರೀಯ ಅಧ್ಯಯನಗಳ ಆಧಾರದ ಮೇಲೆ ಹೇಳುವುದಾದರೆ ಮೇಘವಾಲರು ಚಾರಿತ್ರಿಕವಾಗಿ ಅನುಭವಿಸುತ್ತಿರುವ ಅಸ್ಪಶ್ಯತೆಯ ವಿವಿಧ ಆಯಾಮಗಳ ಬಗ್ಗೆ ‘ಕಾಸ್ಟ್ ಆಂಡ್ ಟ್ರೈಬ್ಸ್ ಆಫ್ ಬಾಂಬೆ’ ಸಂಪುಟ ಮೂರರಲ್ಲಿ ಎಂತೋವನ್‌ರವರು ದಾಖಲಿಸಿರುವ ವಿವರ ಹೀಗಿದೆ..

‘ಮೇಘವಾಲರದು ಅಶುದ್ಧ ಜಾತಿ, ಅವರನ್ನು ಸ್ಪರ್ಶಿಸಿದರೆ ಮಲಿನವಾಗುತ್ತದೆ. ಅವರಿಗೆ ಊರಿನ ಬಾವಿಯಿಂದ ನೀರನ್ನು ಸೇದಲು ಬಿಡುತ್ತಿರಲಿಲ್ಲ. ಅವರು ಊರ ಹೊರವಲಯದಿಂದ ದೂರಕ್ಕೆ ಇರಬೇಕೆಂಬ ನಿಯಮವಿದೆ. ಊರಿನ ಕ್ಷೌರಿಕ ಅವರಿಗೆ ಕ್ಷೌರ ಮಾಡುವಂತಿಲ್ಲ ಮತ್ತು ಮಡಿವಾಳರು ಬಟ್ಟೆ ಒಗೆದುಕೊಡುವಂತಿಲ್ಲ. ಹಿಂದೂ ದೇವಸ್ಥಾನಗಳಿಗೆ ಪ್ರವೇಶವಿಲ್ಲ ಮತ್ತು ಹಿಂದೂ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ. ಹಿಂದಿನ ಕಾಲದಲ್ಲಿ ಅವರು ತಲೆಗೆ ಪೇಟವನ್ನು ಸಹ ಕಟ್ಟುವಂತಿರಲಿಲ್ಲ. ಆದರೆ ಇದರ ಬದಲಿಗೆ ನೂಲಿನ ಸುರುಳಿಯನ್ನು ತಲೆಗೆ ಸುತ್ತಿಕೊಳ್ಳುತ್ತಿದ್ದರು. ನೆಲದ ಮೇಲೆ ಉಗುಳುವಂತಿರಲಿಲ್ಲ ಬದಲಿಗೆ ಕೊಂಬು ಅಥವಾ ಪುಟ್ಟ ಕುಡಿಕೆಯಲ್ಲಿ ಉಗಿಯಬೇಕಿತ್ತು. ಇದನ್ನು ಕೊರಳಿಗೆ ನೇತು ಹಾಕಿಕೊಂಡು ಓಡಾಡಬೇಕಿತ್ತು. ಇವರ ಹೆಜ್ಜೆಗುರುತುಗಳನ್ನು ಎಷ್ಟೊಂದು ಅಪವಿತ್ರವೆಂದು ಪರಿಗಣಿಸಲಾಗಿತ್ತೆಂದರೆ, ಆ ಹೆಜ್ಜೆಗುರುತುಗಳ ಮೇಲೆ ಮತ್ತೊಬ್ಬರು ನಡೆದರೆ ತೀವ್ರ ಅಪಾಯ ಮತ್ತು ಕುಷ್ಠರೋಗ ಅಂಟುತ್ತದೆಂಬ ನಂಬಿಕೆ ಮನೆಮಾಡಿತ್ತು. ಮತ್ತು ಇದನ್ನು ಅವರು ಅನಿವಾರ್ಯವಾಗಿ ತಡೆಯಬೇಕಿತ್ತು. ಅದಕ್ಕಾಗಿ ಸೊಂಟದ ಹಿಂದೆ, ಕಾಲಿನವರೆಗೆ ಪೊರಕೆಯನ್ನು ಕಟ್ಟಿಕೊಂಡು ನಡೆಯುತ್ತಾ ಹೋದಂತೆ ಹೆಜ್ಜೆಗುರುತುಗಳು ಅಳಿಸುತ್ತಾ ಹೋಗುತ್ತಿದ್ದವು. ಇದೇ ರೀತಿಯ ಕತೆ ಮಹಾರರದಾಗಿದೆ. ಇದನ್ನು ಪೇಶ್ವೆಗಳ ಕಾಲದಲ್ಲಿ ಜಾರಿ ಮಾಡಲಾಗಿತ್ತು.’

1901ರ ಜನಗಣತಿಯ ಪ್ರಕಾರ ಕಛ್ ರಾಜ್ಯದಲ್ಲಿ ಮೇಘವಾಲರ ಜನಸಂಖ್ಯೆ 33, 697 ಆಗಿತ್ತು. ಇದರಲ್ಲಿ ಗಂಡಸರ ಸಂಖ್ಯೆ 17,035 ಮತ್ತು ಹೆಂಗಸರ ಸಂಖ್ಯೆ 16,662 ಆಗಿತ್ತು. ಕರ್ನಾಟಕದಲ್ಲಿ ಇವರ ಜನಸಂಖ್ಯೆ ಅತಿ ಕಡಿಮೆ. ಶಿವಮೊಗ್ಗ, ಕಾರವಾರ, ಬೆಳಗಾವಿ ಪ್ರದೇಶಗಳಲ್ಲಿ ವಿರಳವಾಗಿ ಇದ್ದಾರೆ. ಸಮಾಜ ಕಲ್ಯಾಣ ಅಧಿಕಾರಿಗಳು ಅಥವಾ ರೆವಿನ್ಯೂ ಅಧಿಕಾರಿಗಳಿಗೆ ಮೇಘವಾಲ ಜಾತಿಯ ಹೆಸರು ಪರಿಶಿಷ್ಟ ಜಾತಿಪಟ್ಟಿಯಲ್ಲಿ ಇರುವುದರ ಬಗ್ಗೆ ಅರಿವು ಇಲ್ಲದ ಕಾರಣಕ್ಕೆ ಇವರಿಗೆ ಜಾತಿ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಾರೆ. ಆದ್ದರಿಂದ ಮೇಘವಾಲರು ಪರಿಶಿಷ್ಟ ಪಟ್ಟಿಯಲ್ಲಿರುವ ಪ್ರಮುಖ ಜಾತಿಗಳ ಹೆಸರಲ್ಲಿ ಜಾತಿ ಸರ್ಟಿಫಿಕೇಟ್ ಪಡೆದು ತಮ್ಮ ಜಾತಿ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಎಸ್‌ಸಿ ಪಟ್ಟಿಯಲ್ಲಿ ಮೇಘವಾಲ್ ಹೆಸರು ಕ್ರಮಸಂಖ್ಯೆ 077ರಲ್ಲಿದೆ. ದುರಂತವೆಂದರೆ ಅತ್ಯಂತ ಸಣ್ಣ ಮತ್ತು ಅತಿಸೂಕ್ಷ್ಮ ಸಮುದಾಯವಾದ ಮೇಘವಾಲರ ಜನಸಂಖ್ಯೆ ಎಷ್ಟಿದೆಯೆಂದು ಕಾಂತರಾಜು/ಜಯಪ್ರಕಾಶ್ ಹೆಗ್ಡೆಯವರ ಆಯೋಗದ ಸಮೀಕ್ಷೆಯಲ್ಲಿ ಪ್ರಸ್ತಾಪವೇ ಇಲ್ಲ..!

ಮೇಘವಾಲರ ಕುರಿತು ಎಸ್.ಬಾಬು ಅವರು ಒಂದಷ್ಟು ವಿಸ್ತೃತವಾಗಿ ಬರೆದಿರುವುದನ್ನು ಬಿಟ್ಟರೆ ನಮಗೆ ಬೇರೆ ದಾಖಲೆಗಳು ಲಭ್ಯವಿಲ್ಲ.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X