ವೈದ್ಯಕೀಯ ಲೋಕದ ಮಹತ್ತರ ಬೆಳವಣಿಗೆ ಬರಲಿದೆ ಹಲ್ಲುಗಳನ್ನು ಬೆಳೆಸುವ ಹೊಸ ಔಷಧಿ

ಇಂತಹದ್ದೊಂದು ಸುದ್ದಿ ಜಾಗತಿಕವಾಗಿ ಚರ್ಚೆಯಲ್ಲಿದೆ. ಜಪಾನ್‌ನ ಸಂಶೋಧಕರು ಜನರಿಗೆ ಹೊಸ ಹಲ್ಲುಗಳನ್ನು ಬೆಳೆಸಲು ಅನುವು ಮಾಡಿಕೊಡುವ ಔಷಧಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು 2030ರ ವೇಳೆಗೆ ಇದನ್ನು ಸಾಮಾನ್ಯ ಬಳಕೆಗೆ ಸಿದ್ಧಪಡಿಸುವ ಭರವಸೆ ಹೊಂದಿದ್ದಾರೆ. ಈ ಚಿಕಿತ್ಸೆಯು ಹಲ್ಲಿನ ಬೆಳವಣಿಗೆಗೆ ಕಾರಣವಾದ ಜೀನ್‌ನ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಕ್ಲಿನಿಕಲ್ ಪ್ರಯೋಗಗಳು ಪ್ರಾರಂಭವಾಗಿದೆ.
ಕ್ಯೋಟೋ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಮಾನವ ಹಲ್ಲುಗಳನ್ನು ಮತ್ತೆ ಬೆಳೆಸಲು ವಿನ್ಯಾಸಗೊಳಿಸಲಾದ ಹೊಸ ಔಷಧಿಯ ಮಾನವ ಪ್ರಯೋಗಗಳನ್ನು ಜಪಾನ್‌ನ ವಿಜ್ಞಾನಿಗಳು ಪ್ರಾರಂಭಿಸಿದ್ದಾರೆ, ಇದು ದಂತ ಚಿಕಿತ್ಸೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಹಂತ 1 ಮಾನವ ಪ್ರಯೋಗಗಳು 30ರಿಂದ 64 ವರ್ಷ ವಯಸ್ಸಿನ 30 ಆರೋಗ್ಯವಂತ ವಯಸ್ಕರನ್ನು ಒಳಗೊಂಡಿವೆ.
TRG-035 ಎಂಬುದು ಹಲ್ಲುಗಳನ್ನು ಬೆಳೆಸುವ ಒಂದು ವಿಶೇಷವಾದ ಔಷಧಿ ಇದರ ನಾವೀನ್ಯತೆಯು USAG-1 ಜೀನ್‌ಗಳ ಕೆಲಸಗಳನ್ನು ನಿರ್ಬಂಧಿಸುವ ಮುಖಾಂತರ ಕೆಲಸ ನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
TRG-035 ಹೇಗೆ ಕೆಲಸ ನಿರ್ವಹಿಸುತ್ತದೆ?
1. USAG-1 ಪ್ರೊಟೀನ್ ಅನ್ನು ಗುರಿಯಾಗಿಸುವುದು:
TRG-035 ಇದು USAG-1 ಪ್ರೊಟೀನ್‌ನ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ. ಹಾಗೆ ಮಾಡುವುದರಿಂದ, ಶಾಶ್ವತ ಹಲ್ಲುಗಳು ಬೆಳೆದ ನಂತರ ಅದಕ್ಕೆ ಕಾರಣವಾದ ಹಲ್ಲಿನ ಮೊಗ್ಗುಗಳನ್ನು ಮತ್ತೆ ಬೆಳೆಯದೆ ಇಡುವ ನಿರ್ಣಾಯಕ ತಡೆಗೋಡೆಯನ್ನು ಇದು ತೆಗೆದುಹಾಕುತ್ತದೆ.
2. ಹಲ್ಲಿನ ಮೊಗ್ಗುಗಳ ಬೆಳೆಯುವಿಕೆ USಂಉ-1 ಜೀನ್ ಅನ್ನು ನಿರ್ಬಂಧಿಸಿದ ನಂತರ, ಹಲ್ಲು ಮೊಗ್ಗುಗಳನ್ನು ಪುನಃ ಬೆಳೆಯುವ ಹಾಗೆ ಮಾಡುತ್ತದೆ. ಇದರಿಂದ ಹೊಸ ಹಲ್ಲುಗಳು ಬೆಳೆಯುತ್ತವೆ.
3. ಇಂಟ್ರಾವೀನಸ್ ಇಂಜೆಕ್ಷನ್ ಚಿಕಿತ್ಸೆ ಸ್ಥಳೀಯ ಜೆಲ್‌ಗಳು ಅಥವಾ ದಂತ ಇಂಪ್ಲಾಂಟ್‌ಗಳಿಗಿಂತ ಭಿನ್ನವಾಗಿ, TRG-035 ಔಷಧಿವನ್ನು ಇಂಟ್ರಾವೇನಸ್ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಈ ವಿಧಾನದಲ್ಲಿ ಔಷಧಿವು ರಕ್ತಪರಿಚಲನೆಯನ್ನು ವೇಗವಾಗಿ ತಲುಪುತ್ತದೆ ಮತ್ತು ಉದ್ದೇಶಿತ ಗುರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.
USAG-1 ಜೀನ್‌ಗಳೆಂದರೇನು?
USAG-1 ಜೀನ್ ಒಂದು ಮಾನವ ದೇಹದಲ್ಲಿ ನೈಸರ್ಗಿಕ ಪ್ರತಿಬಂಧಕ( ಇನ್ಹಿಬಿಟರ್), ಇದು ಸಾಮಾನ್ಯವಾಗಿ ಗರ್ಭಕೋಶ ಮತ್ತು ಕಿಡ್ನಿಯಲ್ಲಿ ಮತ್ತು ಇನ್ನಿತರ ಅಂಗಗಳಲ್ಲಿ ಕಂಡು ಬರುವಂತಹ ಜೀನ್‌ಗಳಾಗಿವೆ. ಇದು ಶಾಶ್ವತ ಹಲ್ಲುಗಳು ಬೆಳೆದ ನಂತರ ಅದಕ್ಕೆ ಕಾರಣವಾದ ಹಲ್ಲಿನ ಮೊಗ್ಗುಗಳನ್ನು ಮತ್ತೆ ಬೆಳೆಯದೆ ಇಡುವ ಸ್ಥಿತಿಯಲ್ಲಿಡಲು ಕಾರಣವಾಗಿವೆ.
ಪ್ರಾಣಿಗಳ ಮೇಲಿನ ಪ್ರಯೋಗಗಳಲ್ಲಿ ಯಶಸ್ಸು: ಭರವಸೆಯ ಒಂದು ನೋಟ
ಮಾನವ ಪ್ರಯೋಗಗಳಿಗೆ ತೆರಳುವ ಮೊದಲು, ಸಂಶೋಧಕರು ಖಿಖಉ-035ನ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು ವ್ಯಾಪಕವಾದ ಪ್ರಾಣಿಗಳ ಪ್ರಯೋಗಗಳನ್ನು ನಡೆಸಿದರು. ಈ ಪ್ರಯೋಗಗಳು ಇಲಿಗಳು, ಫೆರೆಟ್‌ಗಳು ಮತ್ತು ನಾಯಿಗಳನ್ನು ಒಳಗೊಂಡಿವೆ.
1. ಇಲಿಗಳ ಪ್ರಯೋಗಗಳು
ಆರಂಭಿಕ ಪ್ರಯೋಗಗಳು ಇಲಿಗಳ ಮೇಲೆ ಕೇಂದ್ರೀಕರಿಸಿದವು. ಸಂಶೋಧಕರು ಯಾವುದೇ ಗಮನಾರ್ಹ ಪ್ರತಿಕೂಲ ಪರಿಣಾಮಗಳಿಲ್ಲದೆ ಯಶಸ್ವಿ ಹಲ್ಲಿನ ಬೆಳವಣಿಗೆಯನ್ನು ಗಮನಿಸಿದರು.
2. ಫೆರೆಟ್ (ಇಲಿಯನ್ನು ಹೋಲುವ ಒಂದು ಜಾತಿಯ ಪ್ರಾಣಿ) ಪ್ರಯೋಗಗಳು
ಇಲಿಗಳಲ್ಲಿ ಭರವಸೆಯ ಫಲಿತಾಂಶಗಳನ್ನು ಪಡೆದ ನಂತರ, ಈ ಔಷಧಿವನ್ನು ಫೆರೆಟ್‌ಗಳ ಮೇಲೆ ಪರೀಕ್ಷಿಸಲಾಯಿತು. ಫೆರೆಟ್‌ಗಳ ಹಲ್ಲಿನ ರಚನೆಯು ಮಾನವರ ಹಲ್ಲಿನ ರಚನೆಯನ್ನು ಹೋಲುವುದರಿಂದ ಅವುಗಳನ್ನು ಆಯ್ಕೆ ಮಾಡಲಾಯಿತು. ಫಲಿತಾಂಶಗಳು ಹೊಸ ಹಲ್ಲುಗಳು ಪರಿಣಾಮಕಾರಿಯಾಗಿ ಬೆಳೆಯುವುದನ್ನು ತೋರಿಸಿದವು.
3. ನಾಯಿಗಳ ಮೇಲೆ ಪ್ರಯೋಗಗಳು
ಕೊನೆಯದಾಗಿ, ವಿವಿಧ ಸಸ್ತನಿ ಜಾತಿಗಳಲ್ಲಿ ಔಷಧಿಯ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯೋಗಗಳನ್ನು ನಾಯಿಗಳಿಗೂ ವಿಸ್ತರಿಸಲಾಯಿತು. ನಾಯಿಗಳಲ್ಲಿ ಪ್ರಯೋಗ ಯಶಸ್ವಿಯಾಗಿ ಹಲ್ಲುಗಳು ಬೆಳೆದವು, ಇವುಗಳ ಪ್ರಯೋಗಗಳಿಂದ ಔಷಧಿ ಹೆಚ್ಚು ಪರಿಣಾಮಕಾರಿ ಎಂದು ತಿಳಿಯಿತು.
ವಿವಿಧ ಪ್ರಾಣಿಗಳಲ್ಲಿನ ಈ ಸಕಾರಾತ್ಮಕ ಫಲಿತಾಂಶಗಳು ಖಿಖಉ-035 ಮಾನವರಲ್ಲಿ ಪರಿಣಾಮಕಾರಿಯಾಗಬಹುದು ಎಂದು ಸೂಚಿಸುತ್ತವೆ. ಮುಂದಿನ ಹಂತವು ಕಠಿಣ ಮಾನವ ಪ್ರಯೋಗಗಳ ಮೂಲಕ ಈ ಸಾಮರ್ಥ್ಯವನ್ನು ಮೌಲ್ಯೀಕರಿಸುವುದು, ವಿಶಾಲ ಜನಸಂಖ್ಯೆಯಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಎರಡನ್ನೂ ಖಚಿತಪಡಿಸಿಕೊಳ್ಳುವುದು.
ನೈಸರ್ಗಿಕವಾಗಿ ಹಲ್ಲುಗಳನ್ನು ಬೆಳೆಸುವ ಆವಿಷ್ಕಾರದ ಪ್ರಯೋಜನಗಳು:
ನೈಸರ್ಗಿಕ ನೋಟ ಮತ್ತು ಕಾರ್ಯ: ಇಂಪ್ಲಾಂಟ್‌ಗಳು ಮತ್ತು ದಂತಪಂಕ್ತಿಗಳಿಗಿಂತ ಭಿನ್ನವಾಗಿ, ಪುನರುತ್ಪಾದಿತ ಹಲ್ಲುಗಳು ಮೂಲ ಹಲ್ಲುಗಳ ನೈಸರ್ಗಿಕ ರಚನೆ ಮತ್ತು ಕಾರ್ಯವನ್ನು ಮಾಡುತ್ತವೆ.
ಸೋಂಕು ಮತ್ತು ತೊಡಕುಗಳ ಅಪಾಯ ಕಡಿಮೆಯಾಗಿದೆ: ಇಂಪ್ಲಾಂಟ್‌ಗಳು ಕೆಲವೊಮ್ಮೆ ಸೋಂಕುಗಳು ಅಥವಾ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದ ಸ್ವಂತ ಜೀವಕೋಶಗಳಿಂದ ಬೆಳೆದ ಪುನರುತ್ಪಾದಿತ ಹಲ್ಲುಗಳು ಈ ಅಪಾಯಗಳನ್ನು ಕಡಿಮೆ ಮಾಡುತ್ತವೆ.
ದೀರ್ಘಕಾಲದ ಬಾಳಿಕೆ: ದಂತ ಪಂಕ್ತಿಗಳನ್ನು ಆಗಾಗ ಬದಲಿಸಬೇಕಾಗುತ್ತದೆ ಮತ್ತು ಹೊಂದಾಣಿಕೆಗಳ ಸಮಸ್ಯೆ ಇರುತ್ತದೆ. ಆದರೆ ಪುನರುತ್ಪಾದಿತ ಹಲ್ಲುಗಳು ಜೀವಿತಾವಧಿಯಲ್ಲಿ ಉಳಿಯಬಹುದು.
ಭವಿಷ್ಯದ ಸವಾಲುಗಳು
ವ್ಯಾಪಕ ಪ್ರಯೋಗಗಳ ಮೂಲಕ ದೀರ್ಘಕಾಲೀನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು.
ಚಿಕಿತ್ಸಾ ವಿಧಾನದಲ್ಲಿ ನೈತಿಕ ಪರಿಗಣನೆಗಳನ್ನು
ಪರಿಣಾಮಕಾರಿತ್ವ ಮತ್ತು ಗುಣಮಟ್ಟದ ನಿಯಂತ್ರಣವನ್ನು ಖಾತರಿಪಡಿಸಿಕೊಳ್ಳವುದು.