Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಲೋಪದೋಷಗಳು ಅಂಚೆ ವ್ಯವಸ್ಥೆಯ...

ಲೋಪದೋಷಗಳು ಅಂಚೆ ವ್ಯವಸ್ಥೆಯ ಭಾಗವಾಗದಿರಲಿ

ಗೌರಿ ಚಂದ್ರಕೇಸರಿಗೌರಿ ಚಂದ್ರಕೇಸರಿ14 Aug 2025 3:48 PM IST
share
ಲೋಪದೋಷಗಳು ಅಂಚೆ ವ್ಯವಸ್ಥೆಯ ಭಾಗವಾಗದಿರಲಿ

ಅಂಚೆ ಇಲಾಖೆ ಹಾಗೂ ಅದರ ಸೇವೆಗಳನ್ನು ಹಲವಾರು ವರ್ಷಗಳಿಂದ ನಾವೆಲ್ಲ ಪಡೆಯುತ್ತ ಬಂದಿದ್ದೇವೆ. ಇಲ್ಲಿ ವಿಧಿಸುವ ಸೇವಾ ಶುಲ್ಕವು ಹೊರೆ ಎನ್ನಿಸದೇ ಇರುವುದರಿಂದ ಹೆಚ್ಚಿನ ಜನರು ಕೊರಿಯರ್ ಸೇವೆಗಿಂತ ಅಂಚೆ ಸೇವೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಪತ್ರ ವ್ಯವಹಾರ ಹಾಗೂ ಪಾರ್ಸೆಲ್ ಸೇವೆಗಳನ್ನು ಪಡೆಯುತ್ತಾ ಬಂದಿದ್ದಾರೆ. ಅಂಚೆ ಇಲಾಖೆ ಸಿಬ್ಬಂದಿ ಅತ್ಯಂತ ಜತನದಿಂದ ನಾವು ಕಳಿಸುವ ವಸ್ತುಗಳನ್ನು ಸಂಬಂಧಪಟ್ಟ ವಿಳಾಸಕ್ಕೆ ತಲುಪಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ನನಗಾದ ಕೆಲ ಅನುಭವಗಳಿಂದ ಅಂಚೆ ಸೇವೆಯ ಬಗೆಗಿನ ನಂಬಿಕೆ, ಭರವಸೆ ಹುಸಿಯಾಗಿದೆ.

ಇತ್ತೀಚೆಗೆ ರಕ್ಷಾ ಬಂಧನದ ಪ್ರಯುಕ್ತ ಬೆಂಗಳೂರಿನಲ್ಲಿರುವ ಇಬ್ಬರು ಸಹೋದರರಿಗೆ ಅಂಚೆಯ ಮೂಲಕ ರಾಖಿಗಳನ್ನು ಕಳಿಸಿದ್ದೆ. ಸರಿಯಾದ ವಿಳಾಸ, ಪಿನ್‌ಕೋಡ್, ಮೊಬೈಲ್ ಸಂಖ್ಯೆ ಎಲ್ಲವನ್ನೂ ಸರಿಯಾಗಿ ಬರೆದಿದ್ದೆ. ಅಂಚೆ ಕಚೇರಿಯಲ್ಲಿನ ಸಿಬ್ಬಂದಿಯನ್ನು ವಿಚಾರಿಸಿ ಆ ಕವರುಗಳಿಗೆ ಎಷ್ಟು ಬೆಲೆಯ ಅಂಚೆ ಚೀಟಿಯನ್ನು ಲಗತ್ತಿಸಬೇಕೆಂದು ವಿಚಾರಿಸಿ ಅದರಂತೆಯೇ ಚೀಟಿಗಳನ್ನು ಅಂಟಿಸಿ ಕಳುಹಿಸಿದ್ದೆ. ರಕ್ಷಾಬಂಧನ ದಿನಕ್ಕೆ ಇನ್ನೂ ಹತ್ತು ದಿನವಿರುವಾಗಲೇ ರಾಖಿಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿದ್ದೆ. ಆದರೆ ರಕ್ಷಾ ಬಂಧನ ದಿನ ಕಳೆದು ವಾರವಾಗುತ್ತಾ ಬಂದರೂ ಆ ರಾಖಿಗಳು ತಲುಪಬೇಕಾದವರಿಗೆ ತಲುಪಲೇ ಇಲ್ಲ. ಇದರಿಂದ ಅತೀವ ಬೇಸರವಾಗಿತ್ತು. ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ರಕ್ಷಾಬಂಧನದ ಭಾವನಾತ್ಮಕ ಸಂಪ್ರದಾಯವನ್ನು ಈ ಬಾರಿ ಮುರಿದಂತಾಗಿ ನನ್ನ ಭಾವನೆಗಳಿಗೆ ಧಕ್ಕೆ ಬಂದಿತ್ತು. ಇಲ್ಲಿ ಯಾರನ್ನು ದೂರುವುದು? ಅಂಚೆ ಸಿಬ್ಬಂದಿಯನ್ನೋ ಇಲ್ಲವೇ ಅಂಚೆ ಪೇದೆಯನ್ನೋ? ಇತ್ತೀಚೆಗೆ ಇಂತಹ ವೈಫಲ್ಯಗಳು ಅಂಚೆ ಇಲಾಖೆಯಿಂದ ನಡೆಯುತ್ತಲೇ ಇವೆ.

ಎಷ್ಟೋ ಬಾರಿ ನಾವು ಕಳುಹಿಸುವ ಪುಸ್ತಕಗಳು ತಲುಪಬೇಕಾದವರಿಗೆ ತಲುಪುವುದಿಲ್ಲ. ಅದೇ ರೀತಿ ವಾರ ಪತ್ರಿಕೆ, ಮಾಸ ಪತ್ರಿಕೆಗಳನ್ನು ತರಿಸಿಕೊಳ್ಳುವಾಗ ಕೆಲವೊಮ್ಮೆ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿರುತ್ತವೆ. ಪತ್ರಿಕಾ ಕಚೇರಿಗಳಲ್ಲಿ ವಿಚಾರಿಸಿದಾಗ ಹತ್ತು ಹದಿನೈದು ದಿನಗಳ ಹಿಂದೆಯೇ ತಮಗೆ ರವಾನಿಸಲಾಗಿದೆ ಎಂಬ ಉತ್ತರ ಸಿಗುತ್ತದೆ. ಹಾಗಾದರೆ ಆಗಾಗ ಕಾಣೆಯಾಗುವ ಪತ್ರ, ಪುಸ್ತಕಗಳು ಹೋಗುವುದಾದರೂ ಎಲ್ಲಿ? ಅಕಸ್ಮಾತ್ತಾಗಿ ಅಂಚೆ ಪೇದೆಯು ವಿಳಾಸವನ್ನು ಹುಡುಕಲು ವಿಫಲನಾದಲ್ಲಿ ಪತ್ರದ ವಿಳಾಸದಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಲು ಅವಕಾಶವಿದೆ. ಆದರೆ ಅಂಚೆ ಪೇದೆಗಳು ಆ ಕೆಲಸವನ್ನು ಮಾಡಲಾರರು. ಅದನ್ನು ತಮ್ಮ ಕರ್ತವ್ಯದ ಒಂದು ಭಾಗ ಎಂದುಕೊಳ್ಳುವುದಿಲ್ಲ.

ಅಂಚೆ ಇಲಾಖೆಯ ಇಂತಹ ವೈಫಲ್ಯಗಳಿಂದ ಕೆಲವರು ಕೊರಿಯರ್ ಸೇವೆಯನ್ನೇ ನೆಚ್ಚಿಕೊಳ್ಳುತ್ತಾರೆ. ಕೊರಿಯರ್ ಸೇವೆ ಸ್ವಲ್ಪ ದುಬಾರಿ ಎನ್ನಿಸಿದರೂ ಅದು ತಲುಪಬೇಕಾದವರನ್ನು ತಲುಪಿಯೇ ತಲುಪುತ್ತದೆ ಎನ್ನುವ ಭರವಸೆ ಇರುತ್ತದೆ. ವಿಳಾಸ ಸಿಗದೇ ಹೋದರೆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಕೊರಿಯರ್ ಸಿಬ್ಬಂದಿ ಆ ವಿಳಾಸಕ್ಕೆ ತಲುಪಿಸುತ್ತಾರೆ.

ಅಂಚೆ ಸೇವೆಯ ಇಂತಹ ವೈಫಲ್ಯಗಳ ಬಗ್ಗೆ ಅಂಚೆ ಇಲಾಖೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ‘‘ಅಂತಹ ಮಹತ್ವದ್ದಾದಲ್ಲಿ ರಿಜಿಸ್ಟರ್ ಅಂಚೆ ಅಥವಾ ಪಾರ್ಸೆಲ್ ಮಾಡಬೇಕಿತ್ತು’’ ಎನ್ನುವ ಸಿದ್ಧ ಮಾದರಿಯ ಉತ್ತರ ದೊರಕುತ್ತದೆ. ಅಂದರೆ ಸಾಮಾನ್ಯ ಅಂಚೆಯ ಸೇವೆಗೆ ನಾವು ಜವಾಬ್ದಾರರಲ್ಲ, ಅದು ಬಟಾವಡೆಯಾಗಬಹುದು, ಆಗದೆಯೂ ಇರಬಹುದು ಎಂಬ ಅರ್ಥವನ್ನು ಕೊಡುತ್ತದೆ. ಹೆಚ್ಚಿನ ದರವನ್ನು ನೀಡಿ ರಿಜಿಸ್ಟರ್ ಪಾರ್ಸಲ್ ಮಾಡಿದಾಗ ಮಾತ್ರ ಅಂಚೆಯವರು ನಾವು ಕಳಿಸಿದ ಪತ್ರ ಅಥವಾ ವಸ್ತುವನ್ನು ನಿಯತ್ತಿನಿಂದ ತಲುಪಿಸುತ್ತಾರೆ ಎಂಬ ಅಭಿಪ್ರಾಯ ಮೂಡುತ್ತದೆ.

ಅಂಚೆ ಇಲಾಖೆಯ ಇಂತಹ ಬೇಜವಾಬ್ದಾರಿತನದಿಂದ ಅನೇಕರು ಈ ಇಲಾಖೆಯ ಸೇವೆಯನ್ನು ಪಡೆಯಲು ಹಿಂಜರಿಯುತ್ತಾರೆ. ಗುಣಮಟ್ಟದ ಸೇವಾ ಕೊರತೆಯಿಂದ ಅಂಚೆ ಇಲಾಖೆ ನಷ್ಟವನ್ನು ಅನುಭವಿಸುವಂತಾಗುತ್ತದೆ. ‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಭಾವನೆ ಈಗ ಗೋಡೆಯ ಮೇಲಿನ ಬರಹ ಮಾತ್ರ ಎಂಬಂತಾಗಿದೆ. ಕೆಲವು ಕುಂದು-ಕೊರತೆ, ವೈಫಲ್ಯಗಳನ್ನು ಸರಿಪಡಿಸಲು ಕೆಲವು ಪ್ರಾಯೋಗಿಕ ಸಮಸ್ಯೆಗಳಿರುತ್ತವೆ ಸರಿ. ಇನ್ನು ಕೆಲವನ್ನು ಸರಿಪಡಿಸಲು ಅವಕಾಶಗಳಿದ್ದರೂ ಅದರ ಬಗ್ಗೆ ಸಂಬಂಧಪಟ್ಟವರು ಆಸಕ್ತಿ ತೋರುವುದಿಲ್ಲ. ಕೆಲವೇ ಕೆಲವು ಬೇಜವಾಬ್ದಾರಿ ಸಿಬ್ಬಂದಿಯಿಂದ ಇಡೀ ಇಲಾಖೆಗೇ ಕೆಟ್ಟ ಹೆಸರು ಬರುವಂತಾಗುತ್ತದೆ. ಕೆಲವು ಸಮಸ್ಯೆಗಳು ನಿರಂತರವಾಗಿ ವ್ಯವಸ್ಥೆಯ ಒಂದು ಭಾಗವಾಗಿ ಮುಂದುವರಿಯುತ್ತಲೇ ಇರುವುದು ವಿಪರ್ಯಾಸವೇ ಸರಿ.

share
ಗೌರಿ ಚಂದ್ರಕೇಸರಿ
ಗೌರಿ ಚಂದ್ರಕೇಸರಿ
Next Story
X